ಜ್ಞಾನವಿಜ್ಞಾನಯೋಗಃ
ಅಧ್ಯಾಯಗಳು
|
ಶ್ರೀಭಗವಾನುವಾಚ: ಮಯ್ಯಾಸಕ್ತಮನಾಃ ಪಾರ್ಥ ಯೋಗಂ ಯುಂಜನ್ಮದಾಶ್ರಯಃ । ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೃಣು ।।೧।।
ಶ್ರೀ ಭಗವಂತನು ಹೀಗೆಂದನು: ಅರ್ಜುನ! ನನ್ನಲ್ಲಿಯೇ ಆಸಕ್ತಚಿತ್ತನಾಗಿ ನನ್ನನ್ನೇ ಆಶ್ರಯವೆಂದು ತಿಳಿದು ಯೋಗಾಭ್ಯಾಸ ಮಾಡುತ್ತಿದ್ದರೆ, ನೀನು ನನ್ನ ಸಮಗ್ರ ಸ್ವರೂಪವನ್ನು (ಸಗುಣ ಮತ್ತು ನಿರ್ಗುಣ ರೂಪಗಳೆರಡೂ)ನಿಃಸಂಶಯವಾಗಿ ಹೇಗೆ ತಿಳಿದುಕೊಳ್ಳಬಹುದೋ ಅದನ್ನು ಹೇಳುತ್ತೇನೆ ಕೇಳು.
ಜ್ಞಾನಂ ತೇಹಂ ಸವಿಜ್ಞಾನಮಿದಂ ವಕ್ಷ್ಯಾಮ್ಯಶೇಷತಃ । ಯಜ್ಞಾತ್ವಾ ನೇಹ ಭೂಯೋನ್ಯಜ್ಞ್ಜಾತವ್ಯಮವಶಿಷ್ಯತೇ ।।೨।।
ನಾನು ನಿನಗೆ ವಿಜ್ಞಾನ ಸಹಿತವಾದ ಜ್ಞಾನವನ್ನು ಪೂರ್ತಿಯಾಗಿ ತಿಳಿಸಿಕೊಡುವೆನು. ಅದನ್ನು ತಿಳಿದಮೇಲೆ ಈ ಲೋಕದಲ್ಲಿ ಮತ್ತೆ ತಿಳಿಯಬೇಕಾದದ್ದು ಏನೂ ಉಳಿಯುವುದಿಲ್ಲ.
ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ಯತತಿ ಸಿದ್ಧಯೇ । ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ ।।೩।।
ಎಷ್ಟೋ ಸಾವಿರಜನರಲ್ಲಿ ಯಾವನೋ ಒಬ್ಬನು ಸಿದ್ಧಿಯನ್ನು ಪಡೆಯುವುದಕ್ಕಾಗಿ ಪ್ರಯತ್ನಿಸುತ್ತಾನೆ. ಹಾಗೆ ಪ್ರಯತ್ನಿಸುತ್ತಿರುವ ಸಿದ್ಧರಲ್ಲಿ ಯಾವನೋ ಒಬ್ಬನು ನನ್ನನ್ನು ಸರಿಯಾಗಿ ಅರಿತುಕೊಳ್ಳುತ್ತಾನೆ.
ಭೂಮಿರಾಪೋನಲೋ ವಾಯುಃ ಖಂ ಮನೋ ಬುದ್ಧಿರೇವ ಚ । ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ ।।೪।।
ಪೃಥ್ವಿ, ಆಪ್, ಅಗ್ನಿ, ವಾಯು, ಆಕಾಶ - ಈ ಪಂಚಭೂತಗಳ ಸೂಕ್ಷ್ಮತನ್ಮಾತ್ರೆಗಳು ಐದು, ಮನಃಕಾರಣವಾದ ಅಹಂಕಾರ, ಅಹಂಕಾರಕ್ಕೆ ಕಾರಣವಾದ ಬುದ್ಧಿಯೆಂಬ ಮಕತ್ತತ್ತ್ವ, ಅಹಂಕಾರವೆಂಬ ಅವಿದ್ಯೆಯಿಂದ ಕೂಡಿದ ಅವ್ಯಕ್ತ ಹೀಗೆ ನನ್ನ ಪ್ರಕೃತಿಯು ಎಂದರೆ ಮಾಯಾಶಕ್ತಿಯು ಎಂಟು ವಿಧವಾಗಿದೆ.
ಅಪರೇಯಮಿತಸ್ತ್ವನ್ಯಾಂ ಪ್ರಕೃತಿಂ ವಿದ್ಧಿಮೇ ಪರಾಮ್ । ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್ ।।೫।।
ಮಹಾಬಾಹು, ಈ ಎಂಟು ವಿಧವಾದದ್ದು ಅಪರಾ(ಕೀಳು) ಪ್ರಕೃತಿ. ಇದಿಲ್ಲದೇ ನನ್ನ ಪರಾ(ಉತ್ತಮ) ಪ್ರಕೃತಿಯೊಂದಿದೆ. ಅದನ್ನು ತಿಳಿದುಕೊ. ಅದು ಜೀವ ಎನಿಸಿಕೊಂಡು ಈ ಜಗತ್ತನ್ನೇ ಧರಿಸಿದೆ.
ಏತದ್ಯೋನೀನಿ ಭೂತಾನಿ ಸರ್ವಾಣೀತ್ಯುಪಧಾರಯ । ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಲಯಸ್ತಥಾ ।।೬।।
ನನ್ನ ಈ ಎರಡು ಪ್ರಕೃತಿಗಳಿಂದ ಸಕಲಭೂತಗಳೂ ಆಗಿವೆಯೆಂದು ನಿಶ್ಚಯಿಸು. ಆದ್ದರಿಂದ ನಾನು ಸಮಸ್ತ ಜಗತ್ತಿನ ಉತ್ಪತ್ತಿ ಪ್ರಳಯಗಳಿಗೆ ಕಾರಣನಾಗಿದ್ದೇನೆ.
ಮತ್ತಃ ಪರತರಂ ನಾನ್ಯತ್ಕಿಂಚಿದಸ್ತಿ ಧನಂಜಯ । ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ ।।೭।।
ಅರ್ಜುನ, ನನಗಿಂತಲೂ ಬೇರೆಯಾದ ಇನ್ನೊಂದು ಹೆಚ್ಚಿನ ಕಾರಣವು ಈ ಜಗತ್ತಿಗೆ ಯಾವುದೂ ಇಲ್ಲ. ದಾರದಲ್ಲಿ ಮಣಿಗಳ ಗುಂಪು ಅನುಸ್ಯೂತವಾಗಿರುವಂತೆ ಸಮಗ್ರವೂ ನನ್ನಲ್ಲಿ ಪೂಣಿಸಲ್ಪಟ್ಟಿದೆ.
ರಸೋಹಮಪ್ಸು ಕೌಂತೇಯ ಪ್ರಭಾಸ್ಮಿ ಶಶಿಸೂರ್ಯಯೋಃ । ಪ್ರಣವಃ ಸರ್ವವೇದೇಷು ಶಬ್ದಃ ಖೇ ಪೌರುಷಂ ನೃಷು ।।೮।।
ಕೌಂತೇಯ, ಜಲದಲ್ಲಿ ರಸವು ನಾನು, ಅಂತೆಯೇ ಚಂದ್ರಸೂರ್ಯರಲ್ಲಿ ಪ್ರಭೆಯಾಗಿದ್ದೇನೆ. ವೇದಗಳಲ್ಲಿ ಪ್ರಣವ ನಾನು. ಆಕಾಶದಲ್ಲಿ ಶಬ್ದವೂ ಪುರುಷರಲ್ಲಿ ಪೌರುಷವೂ ನಾನೇ.
ಪುಣ್ಯೋ ಗಂಧಃ ಪೃಥಿವ್ಯಾಂ ಚ ತೆಜಶ್ಚಾಸ್ಮಿ ವಿಭಾವಸೌ । ಜೀವನಂ ಸರ್ವಭೂತೇಷು ತಪಶ್ಚಾಸ್ಮಿ ತಪಸ್ವಿಷು ।।೯।।
ಪೃಥಿವಿಯಲ್ಲಿ ಪುಣ್ಯಗಂಧವೂ ಅಗ್ನಿಯಲ್ಲಿ ತೇಜಸ್ಸೂ ಆಗಿದ್ದೇನೆ. ಸರ್ವಪ್ರಾಣಿಗಳಲ್ಲಿ ಜೀವಶಕ್ತಿಯು ನಾನೇ. ತಪಸ್ವಿಗಳಲ್ಲಿ ತಪಸ್ಸು ನಾನೇ.
ಬೀಜಂ ಮಾಂ ಸರ್ವಭೂತಾನಾಂ ವಿದ್ಧಿ ಪಾರ್ಥ ಸನಾತನಮ್ । ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ।।೧೦।।
ಪಾರ್ಥ, ಸರ್ವಭೂತಗಳಿಗೂ ನಾನು ಸನಾತನವಾದ ಬೀಜವೆಂದು ತಿಳಿ. ಬುದ್ದಿವಂತರಲ್ಲಿ ಬುದ್ಧಿಯೂ ತೇಜಸ್ವಿಗಳಲ್ಲಿ ತೇಜಸ್ಸೂ ಆಗಿದ್ದೇನೆ.
ಬಲಂ ಬಲವತಾಂ ಚಾಹಂ ಕಾಮರಾಗವಿವರ್ಜಿತಮ್ । ಧರ್ಮಾವಿರುದ್ಧೋ ಭೂತೇಷು ಕಾಮೋಸ್ಮಿ ಭರತರ್ಷಭ ।।೧೧।।
ಬಲವಂತರಲ್ಲಿ ನಾನು ಕಾಮರಾಗವರ್ಜಿತವಾದ(ದೇಹಧಾರಣಕ್ಕೆ ಬೇಕಾದ) ಶಕ್ತಿಯಾಗಿದ್ದೇನೆ. ಪ್ರಾಣಿಗಳಲ್ಲಿ ಧರ್ಮಕ್ಕೆ ವಿರುದ್ದವಲ್ಲದ ಕಾಮವಾಗಿದ್ದೇನೆ.
ಯೇ ಚೈವ ಸಾತ್ವಿಕಾ ಭಾವಾ ರಾಜಸಾಸ್ತಾಮಸಾಶ್ಚ ಯೇ । ಮತ್ತ ಏವೇತಿ ತಾನ್ವಿದ್ಧಿ ನ ತ್ವಹಂ ತೇಷು ತೇ ಮಯಿ ।।೧೨।।
ಅಲ್ಲದೆ ವಿವೇಕಾದಿಸಾತ್ವಿಕಾಭಾವಗಳೂ ಲೋಭಾದಿರಾಜಸಭಾವಗಳೂ ಪ್ರಮಾದಾದಿ ತಾಮಸಭಾವಗಳೂ ನನ್ನಿಂದಲೇ ಹುಟ್ಟುತ್ತವೆಯೆಂದು ತಿಳಿ. ಆದರೆ ನಾನು ಅವುಗಳ ವಶದಲ್ಲಿಲ್ಲ. ಅವು ನನ್ನ ವಶದಲ್ಲಿವೆ. ಸಂಸಾರಿಗಳು ಮಾತ್ರ ಆ ಭಾವಗಳಿಗೆ ವಶರಾಗಿರುತ್ತಾರೆ.
ತ್ರಿಭಿರ್ಗುಣಮಯೈರ್ಭಾವೈರೇಭಿಃ ಸರ್ವಮಿದಂ ಜಗತ್ । ಮೋಹಿತಂ ನಾಭಿಜಾನಾತಿ ಮಾಮೇಭ್ಯಃ ಪರಮವ್ಯಯಮ್ ।।೧೩।।
ಗುಣಮಯವಾದ ಈ ಸಾತ್ವಿಕಾದಿಭಾವಗಳಿಂದ ಜಗತ್ತೆಲ್ಲವೂ ಮೋಹಗೊಂಡಿದೆ. ಈ ಭಾವಗಳಿಗೆ ವ್ಯತಿರಿಕ್ತನೂ ವ್ಯಯಗಳೆಂಬ ವಿಕಾರಗಳಿಂದ ರಹಿತನೂ ಆದ ನನ್ನನ್ನು ಈ ಜಗತ್ತು ಗುರುತಿಸದೆ ಹೋಗಿದೆ.
ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ । ಮಾಮೇವ ಯೇ ಪ್ರೆಪದ್ಯಂತೇ ಮಾಯಾಮೇತಾಂ ತರಂತಿ ತೇ ।।೧೪।।
ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೇ ನರಾಧಮಾಃ । ಮಾಯಯಾಪಹೃತಜ್ಞಾನಾ ಆಸುರಂ ಭಾವಮಾಶ್ರಿತಾಃ ।।೧೫।।
ಚತುರ್ವಿಧಾ ಭಜಂತೇ ಮಾಂ ಜನಾಃ ಸುಕೃತಿನೋರ್ಜುನ । ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ ।।೧೬।।
ತೇಷಾಂ ಜ್ಞಾನೀ ನಿತ್ಯಯುಕ್ತ ಏಕಭಕ್ತಿರ್ವಿಶಿಷ್ಯತೇ । ಪ್ರಿಯೋ ಹಿ ಜ್ಞಾನಿನೋತ್ಯರ್ಥಮಹಂ ಸ ಚ ಮಮ ಪ್ರಿಯಃ ।।೧೭।।
ಉದಾರಾಃ ಸರ್ವ ಏವೈತೇ ಜ್ಞಾನೀ ತ್ವಾತ್ಮೈವ ಮೇ ಮತಮ್ । ಅಸ್ಥಿತಃ ಸ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಮ್ ।।೧೮।।
ಬಹೂನಾಂ ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದ್ಯತೇ । ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸದುರ್ಲಭಃ ।।೧೯।।
ಕಾಮೈಸ್ತೈಸ್ತೈರ್ಹೃತಜ್ಞಾನಾಃ ಪ್ರಪದ್ಯಂತೇನ್ಯದೇವತಾಃ । ತಂ ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ ।।೨೦।।