ವಿಷಯಕ್ಕೆ ಹೋಗು

ಭಕ್ತಿಯೋಗಃ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಗವದ್ಗೀತೆ

Aum
ಅಧ್ಯಾಯಗಳು
 1. ಅರ್ಜುನ ವಿಷಾದ ಯೋಗ
 2. ಸಾಂಖ್ಯಯೋಗಃ
 3. ಕರ್ಮಯೋಗಃ
 4. ಜ್ಞಾನಯೋಗಃ
 5. ಸಂನ್ಯಾಸಯೋಗಃ
 6. ಧ್ಯಾನಯೋಗಃ
 7. ಜ್ಞಾನವಿಜ್ಞಾನಯೋಗಃ
 8. ಅಕ್ಷರಬ್ರಹ್ಮಯೋಗಃ
 9. ರಾಜವಿದ್ಯಾರಾಜಗುಹ್ಯಯೋಗಃ
 10. ವಿಭೂತಿಯೋಗಃ
 11. ವಿಶ್ವರೂಪದರ್ಶನಯೋಗಃ
 12. ಭಕ್ತಿಯೋಗಃ
 13. ಕ್ಷೇತ್ರಕ್ಷೇತ್ರಜ್ಞಯೋಗಃ
 14. ಗುಣತ್ರಯವಿಭಾಗಯೋಗಃ
 15. ಪುರುಷೋತ್ತಮಯೋಗಃ
 16. ದೈವಾಸುರಸಂಪದ್ವಿಭಾಗಯೋಗಃ
 17. ಶ್ರದ್ಧಾತ್ರಯವಿಭಾಗಯೋಗಃ
 18. ಮೋಕ್ಷಸಂನ್ಯಾಸಯೋಗಃ

ಅರ್ಜುನ ಉವಾಚ:
ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ ।
ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ ।।೧।।

ಅರ್ಜುನನು ಹೀಗೆಂದನು: ಹೀಗೆ ಪೂಜಾದಿ ಕರ್ಮಗಳಲ್ಲಿ ತೊಡಗಿ ಯಾವ ಭಕ್ತರು ನಿನ್ನನ್ನು ಉಪಾಸನೆ ಮಾಡುತ್ತಾರೋ ಮತ್ತೆ ಯಾರು ಅವ್ಯಕ್ತವೂ ಅಕ್ಷರವೂ ಆದ ನಿರ್ಗುಣಬ್ರಹ್ಮದ ಉಪಾಸನೆಯನ್ನು ಮಾಡುತ್ತಾರೋ ಅವರಲ್ಲಿ ಉತ್ತಮರಾದ ಯೋಗವಿದರು ಯಾರು?

ಶ್ರೀಭಗವಾನುವಾಚ:
ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ ।
ಶ್ರದ್ಧಯಾ ಪರಯೋಪೇತಾಸ್ತೇ ಮೇ ಯುಕ್ತತಮಾ ಮತಾಃ ।।೨।।
ಯೇ ತ್ವಕ್ಷರಮನಿರ್ದೇಶ್ಯಮವ್ಯಕ್ತಂ ಪರ್ಯುಪಾಸತೇ ।
ಸರ್ವತ್ರಗಮಚಿಂತ್ಯಂ ಚ ಕೂಟಸ್ಥಮಚಲಂ ಧ್ರುವಮ್ ।।೩।।
ಸಂನಿಯಮ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ ।
ತೇ ಪ್ರಾಪ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ ।।೪।।
ಕ್ಲೇಶೋsಧಿಕತರಸ್ತೇಷಾಮವ್ಯಕ್ತಾಸಕ್ತಚೇತಸಾಮ್ ।
ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ ।।೫।।

ಆದರೆ ಅಂಥ ಅವ್ಯಕ್ತದಲ್ಲಿ ಆಸಕ್ತಚಿತ್ತ್ತರಾದವರಿಗೆ ಕ್ಲೇಶವು ಅಧಿಕಾರವಾಗಿರುತ್ತದೆ. ಏಕೆಂದರೆ, ದೇಹಾಭಿಮಾನ ಉಳ್ಳ ಜನರಿಗೆ ಅವ್ಯಕ್ತವಾದ - ನಿರ್ಗುಣಸ್ವರೂಪದ ಬ್ರಹ್ಮ ಎಂಬ ಪರಾಗತಿಯು ಕ್ಲೇಶದಿಂದ ದೊರೆಯುತ್ತದೆ.

ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾಃ ।
ಅನನ್ಯೇನೈವ ಯೋಗೇನ ಮಾಂ ಧ್ಯಾಯಂತ ಉಪಾಸತೇ ।।೬।।
ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್ ।
ಭವಾಮಿ ನಚಿರಾತ್ ಪಾರ್ಥ ಮಯ್ಯಾವೇಶಿತಚೇತಸಾಮ್ ।।೭।।

ಆದರೆ ಯಾರು ಸರ್ವಕರ್ಮಗಳನ್ನೂ ನನಗೆ ಒಪ್ಪಿಸಿ ನನ್ನಲ್ಲಿಯೇ ಆಸಕ್ತರಾಗಿ ಅನನ್ಯವಾದ ಯೋಗದಿಂದ ನನ್ನನ್ನು ಧ್ಯಾನಿಸುತ್ತ ಉಪಾಸನೆ ಮಾಡುತ್ತಾರೋ, ವಿಶ್ವರೂಪನಾದ ನನ್ನಲ್ಲಿಯೇ ಚಿತ್ತವನ್ನಿಟ್ಟಿರುತ್ತಾರೋ ಅವರನ್ನು ಮೃತ್ಯುಸಹಿತವಾದ ಸಂಸಾರಸಾಗರದಿಂದ ಶೀಘ್ರವಾಗಿಯೇ ಮೇಲಕ್ಕೆ ಎತ್ತುತ್ತೇನೆ.

ಮಯ್ಯೇವ ಮನ ಆಧತ್ಸ್ವ ಮಯಿ ಬುದ್ಧಿಂ ನಿವೇಶಯ ।
ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ ।।೮।।

ಆದ್ದರಿಂದ ವಿಶ್ವರುಪನಾದ ನನ್ನಲ್ಲಿಯೇ ಮನಸ್ಸಿಡು. ನನ್ನಲ್ಲಿ ಬುದ್ಧಿಯನ್ನು ಹೊಗಿಸು. ಹೀಗಾದರೆ ನನ್ನಲ್ಲಿಯೇ ನಿವಾಸ ಮಾಡುವೆ. ಇದರಲ್ಲಿ ಸಂಶಯವಿಲ್ಲ.

ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಮ್ ।
ಅಭ್ಯಾಸಯೋಗೇನ ತತೋ ಮಾಮಿಚ್ಛಾಪ್ತುಂ ಧನಂಜಯ ।।೯।।

ಒಂದು ವೇಳೆ ಚಿತ್ತವನ್ನು ನನ್ನಲ್ಲಿ ಸ್ಥಿರವಾಗಿ ನೆಲೆಹೊಳಿಸಲು ನೀನು ಶಕ್ತನಾಗದೆ ಹೋದರೆ, ಧನಂಜಯ, ಚಿತ್ತವನ್ನು ಮತ್ತೆ ಮತ್ತೆ ಎಳೆದು ನನ್ನಲ್ಲಿ ಸ್ಥಾಪಿಸುವ ಅಭ್ಯಾಸಯೋಗದಿಂದ ನನ್ನನ್ನು ಪಡೆಯಲು ಪ್ರಯತ್ನಿಸು.

ಅಭ್ಯಾಸೇsಪ್ಯಸಮರ್ಥೋsಸಿ ಮತ್ಕರ್ಮಪರಮೋ ಭವ ।
ಮದರ್ಥಮಪಿ ಕರ್ಮಾಣಿ ಕುರ್ವನ್ ಸಿದ್ಧಿಮವಾಪ್ಸ್ಯಸಿ ।।೧೦।।

ಅಭ್ಯಾಸವನ್ನು ಮಾಡಲೂ ಅಸಮರ್ಥನಾದರೆ, ನನಗೋಸ್ಕರ ಕರ್ಮವನ್ನು ಮಾಡುವುದೇ ಪ್ರಧಾನವೆಂದು ತಿಳಿದಿರು. ಈಶ್ವರನಾದ ನನಗೋಸ್ಕರ ಕರ್ಮ್ವವನ್ನು ಆಚರಿಸುತ್ತಿದ್ದರೂ ಸಿದ್ಧಿಯನ್ನೈದುವೆ.