ಸಾಂಖ್ಯಯೋಗಃ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಭಗವದ್ಗೀತೆ

Aum
ಅಧ್ಯಾಯಗಳು
 1. ಅರ್ಜುನ ವಿಷಾದ ಯೋಗ
 2. ಸಾಂಖ್ಯಯೋಗಃ
 3. ಕರ್ಮಯೋಗಃ
 4. ಜ್ಞಾನಯೋಗಃ
 5. ಸಂನ್ಯಾಸಯೋಗಃ
 6. ಧ್ಯಾನಯೋಗಃ
 7. ಜ್ಞಾನವಿಜ್ಞಾನಯೋಗಃ
 8. ಅಕ್ಷರಬ್ರಹ್ಮಯೋಗಃ
 9. ರಾಜವಿದ್ಯಾರಾಜಗುಹ್ಯಯೋಗಃ
 10. ವಿಭೂತಿಯೋಗಃ
 11. ವಿಶ್ವರೂಪದರ್ಶನಯೋಗಃ
 12. ಭಕ್ತಿಯೋಗಃ
 13. ಕ್ಷೇತ್ರಕ್ಷೇತ್ರಜ್ಞಯೋಗಃ
 14. ಗುಣತ್ರಯವಿಭಾಗಯೋಗಃ
 15. ಪುರುಷೋತ್ತಮಯೋಗಃ
 16. ದೈವಾಸುರಸಂಪದ್ವಿಭಾಗಯೋಗಃ
 17. ಶ್ರದ್ಧಾತ್ರಯವಿಭಾಗಯೋಗಃ
 18. ಮೋಕ್ಷಸಂನ್ಯಾಸಯೋಗಃ

ಸಂಜಯ ಉವಾಚ
ತಂ ತಥಾ ಕೃಪಯಾವಿಷ್ಟಮಶ್ರುಪೂರ್ಣಾಕುಲೇಕ್ಷಣಮ್ ।
ವಿಷೀದಂತಮಿದಂ ವಾಕ್ಯಮುವಾಚ ಮಧುಸೂದನಃ ।।೧।।

ಈ ಪ್ರಕಾರದಲ್ಲಿ ಕರುಣೆಯಿಂದ ವ್ಯಾಪ್ತನಾಗಿ ವಿಷಾದಗೊಂಡು ಕಣ್ಣೀರು ಸುರಿಸುತ್ತಾ ಚಿಂತಾಕುಲನಾದ ಅರ್ಜುನನನ್ನು ಕುರಿತು ಶ್ರೀಕೃಷ್ಣನು ಹೀಗೆಂದನು.

ಶ್ರೀಭಗವಾನುವಾಚ
ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ ।
ಅನಾರ್ಯಜುಷ್ಟಮಸ್ವರ್ಗ್ಯಮಕೀರ್ತಿಕರಮರ್ಜುನ ।।೨।।

ಅರ್ಜುನ, ಯುದ್ಧದ ಈ ಸಂಕಟಸಮಯದಲ್ಲಿ ನಿನಗೇಕೆ ಈ ಕಶ್ಮಲಭಾವನೆ ಬಂದು ಸೇರಿತಯ್ಯ? ಸತ್ಪುರುಷರಿಗೆ ಸಲ್ಲದ ಮನೋಭಾವವಿದು. ಸ್ವರ್ಗದ ದಾರಿಯಲ್ಲ. ಇದು ಕೀರ್ತಿಯನ್ನು ಕೆಡಿಸುವಂತಹದ್ದು.

ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ ।
ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ ।।೩।।

ಪಾರ್ಥ! ಹೇಡಿತನಕ್ಕೆ ಈಡಾಗಬೇಡ. ಇದು ನಿನಗೆ ಸಮುಚಿತವಲ್ಲ. ಇದೊಂದು ಮನಸ್ಸಿನ ದೌರ್ಬಲ್ಯ. ಹೇ ಪರಂತಪ, ಕ್ಷುದ್ರವಾದ ಈ ದೌರ್ಬಲ್ಯವನ್ನು ಕಿತ್ತೆಸೆದು ಯುದ್ಧಕ್ಕಾಗಿ ಎದ್ದು ನಿಲ್ಲು.

"ಕಥಂ ಭೀ‍ಷ್ಮಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ |
 ಇಷುಭಿಃ ಪ್ರತಿಯೋತ್ಸ್ತಾಮಿ ಪೂಜಾರ್ಹಾವರಿಸೂದನ || ೪ || "