ಚಿರತಗುಂಡು
ಚಿರತಗುಂಡು
Chirathagundu | |
|---|---|
Village | |
| ದೇಶ | |
| ರಾಜ್ಯ | |
| ಜಿಲ್ಲೆ | ವಿಜಯನಗರ ಜಿಲ್ಲೆ |
| ತಾಲೂಕು | ಕೂಡ್ಲಿಗಿ |
| ಸರ್ಕಾರ | |
| • MLA | ಎನ್.ಯಲ್ಲಪ್ಪ ಗೋಪಾಲಕೃಷ್ಣ |
| ವಿಸ್ತಾರ | |
| • ಒಟ್ಟು | ೧೨.೫ km2 (೪.೮ sq mi) |
| ಜನಸಂಖ್ಯೆ (2020) | |
| • ಒಟ್ಟು | ೩,೬೩೫ |
| • ಸಾಂದ್ರತೆ | ೨೯೦/km2 (೭೫೦/sq mi) |
| ಭಾಷೆ | |
| • ಅಧಿಕೃತ | ಕನ್ನಡ |
| ಸಮಯದ ವಲಯ | |
| ಸಮಯ ವಲಯ | ಯುಟಿಸಿ+5:30 (IST) |
| ಪಿನ್ ಕೋಡ್ | 583126 |
| ವಾಹನ ನೋಂದಣಿ | KA 35 |
| ಮಾತನಾಡುವ ಭಾಷೆಗಳು | ಕನ್ನಡ, ತೆಲುಗು |
ಚಿರತಗುಂಡು - ಕರ್ನಾಟಕ ರಾಜ್ಯದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಒಂದು ಗ್ರಾಮ ಚಿರತಗುಂಡು. ಇದರ ಮೊದಲಿನ ಹೆಸರು "ಚಿರತೆಗುಂಡು" ಅದು ಕಾಲ ಕ್ರಮೇಣ ಚಿರತಗುಂಡು ಆಯಿತು. ಇಲ್ಲಿಯ 'ಶ್ರೀ ಮಾರಿಕಾಂಬ ದೇವಸ್ಥಾನ'ವು ಪ್ರಸಿದ್ದವಾಗಿದೆ. 2020 ರ ಅಂಕಿಅಂಶಗಳ ಪ್ರಕಾರ 3,635 ಒಟ್ಟು ಜನಸಂಖ್ಯೆಯನ್ನು ಹೊಂದಿದ್ದು. ಪುರುಷ ಮತ್ತು ಸ್ತ್ರೀಯರ ಜನಸಂಖ್ಯೆ ಕ್ರಮವಾಗಿ 1845 ಮತ್ತು 1790.
ಇಲ್ಲಿ ಶೇಂಗಾ, ಹತ್ತಿ, ಮೆಕ್ಕೆಜೋಳ, ಸೂರ್ಯಕಾಂತಿ, ಜೋಳ, ಮತ್ತು ಇತರ ಪ್ರಮುಖ ಬೆಳೆಗಳನ್ನು ಬೆಳೆಯುತ್ತಾರೆ.
ಭೂಗೋಳ
[ಬದಲಾಯಿಸಿ]ಚಿರತಗುಂಡು ಗ್ರಾಮವು ಉಪ-ಜಿಲ್ಲಾ ಕೇಂದ್ರ ಕಚೇರಿ ಕೂಡ್ಲಿಗಿಯಿಂದ 42 ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಕಚೇರಿ ಹೊಸಪೇಟೆಯಿಂದ 86.9 ಕಿ.ಮೀ ದೂರದಲ್ಲಿದೆ. 2020 ರ ಅಂಕಿಅಂಶಗಳ ಪ್ರಕಾರ, ಗ್ರಾಮದ ಒಟ್ಟು ಭೌಗೋಳಿಕ ವಿಸ್ತೀರ್ಣ 12.5 ಚದರ ಕಿಲೋಮೀಟರ್. 14°43 ರೇಖಾಂಶ ಮತ್ತು 76°36’ ಅಕ್ಷಾಂಶದಲ್ಲಿದ್ದು ಸಮುದ್ರ ಮಟ್ಟದಿಂದ 533 ಮೀ ಎತ್ತರದಲ್ಲಿದೆ. ಚಿರತಗುಂಡುವಿಗೆ ಸುಮಾರು 15 ಕಿ.ಮೀ ದೂರದಲ್ಲಿರುವ ಮೊಳಕಾಲ್ಮೂರು ಹತ್ತಿರದ ಪಟ್ಟಣವಾಗಿದೆ.

- ಚಿರತಗುಂಡು ಗ್ರಾಮಪಂಚಾಯಿತಿಯ ಇತರೆ ಗ್ರಾಮಗಳು
- ಜಿ ಬಿ ಹಟ್ಟಿ
- ಕೊಂಬಿಹಳ್ಳಿ
ಈ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿವೆ.
ಹತ್ತಿರದಲ್ಲಿ -
ಆಹಾರ ವೈಶಿಷ್ಟ್ಯ
[ಬದಲಾಯಿಸಿ]ರಾಗಿ ಮುದ್ದೆ, ಜೋಳದ ಮುದ್ದೆ ಮತ್ತು ಅನ್ನ ಇಲ್ಲಿನ ಆಹಾರ ಪದಾರ್ಥಗಳಾಗಿವೆ. ಜೋಳದ ರೊಟ್ಟಿ, ಶೇಂಗಾ ಚಟ್ನಿ ಪುಡಿ, ಹೊಂದಿರುವ ಆಹಾರ ತಿನಿಸುಗಳನ್ನು ಬಳಸಲಾಗುತ್ತದೆ.
ಇತರೆ
[ಬದಲಾಯಿಸಿ]ಈ ಗ್ರಾಮದಲ್ಲಿ ಕುಡಿಯುವ-ನೀರು ವರ್ಷಪೂರ್ತಿ ಮತ್ತು ಬೇಸಿಗೆಯಲ್ಲಿ ಲಭ್ಯವಿದೆ. ಈ ಗ್ರಾಮದಲ್ಲಿ ತೆರೆದ ಒಳಚರಂಡಿ ವ್ಯವಸ್ಥೆ ಲಭ್ಯವಿದೆ. ಬೀದಿಯಲ್ಲಿ ಕಸ ಸಂಗ್ರಹಿಸಲು ವ್ಯವಸ್ಥೆ ಇಲ್ಲ. 10 ಕಿ.ಮೀ ಗಿಂತ ಕಡಿಮೆ ರಾಜ್ಯ ಹೆದ್ದಾರಿ ಇಲ್ಲ. 10 ಕಿ.ಮೀ ಗಿಂತ ಕಡಿಮೆ ಇರುವ ಜಿಲ್ಲಾ ರಸ್ತೆ ಇಲ್ಲ. ಈ ಗ್ರಾಮದಲ್ಲಿ ಕಮರ್ಷಿಯಲ್ ಬ್ಯಾಂಕ್ ಇದೆ. ಅಂಗನವಾಡಿ ಕೇಂದ್ರ, ಆಶಾ, ಜನನ ಮತ್ತು ಮರಣ ನೋಂದಣಿ ಕಚೇರಿ, ಸಾರ್ವಜನಿಕ ಗ್ರಂಥಾಲಯ ಮತ್ತು ಮತದಾನದ ಕೇಂದ್ರವಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Chiratagundu Village". OneFiveNine. Retrieved 2024-10-27.
- ↑ "Chitrathagundu Village Information". VillageInfo.in. Retrieved 2024-10-27.
- ↑ "Chiratagundu Pincode". India TV News. Retrieved 2024-10-27.
- ↑ "Chiratagundu Pincode Information". Pincode.net.in. Retrieved 2024-10-27.
- ↑ "Chiratagundu Pincode Details". ABP Live. Retrieved 2024-10-27.
- ↑ "Gram Panchayat Chiratagundu Data". Local Body Data. Archived from the original on 2024-11-27. Retrieved 2024-10-27.
- ↑ "Chiratagundu Pincode Map". Maps of India. Retrieved 2024-10-27.