ವಿಷಯಕ್ಕೆ ಹೋಗು

ಜೋಳದ ರೊಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೋಳದ ರೊಟ್ಟಿ
Origin
ಪರ್ಯಾಯ ಹೆಸರು(ಗಳು)ಜೋಳದ ರೊಟ್ಟಿ
Region or stateಉತ್ತರ ಕರ್ನಾಟಕ
Dish details
Main ingredient(s)ಜೋಳ/ಸೆಜ್ಜೆ

ಜೋಳದ ರೊಟ್ಟಿ ಅಥವಾ ಭಾಕ್ರಿ ಉತ್ತರ ಕರ್ನಾಟಕದ ಊಟದ ಮುಖ್ಯ ಸಾಮಗ್ರಿ ಹಾಗೂ ಅಲ್ಲಿಯ ಸಂಪ್ರದಾಯದ ಒಂದು ಅವಿಭಾಜ್ಯ ಅಂಗ. ಇದನ್ನು ಅಲ್ಲಿಯ ಮುಖ್ಯವಾದ ಬೆಳೆಯಾದ ಜೋಳದಿಂದ ತಯಾರಿಸಲಾಗುತ್ತದೆ ಹಾಗೂ ಬಿಳಿ ಬಣ್ಣದ್ದಾಗಿರುತ್ತದೆ. ಸಜ್ಜೆಯಿಂದ ತಯಾರಾಗುವ ರೊಟ್ಟಿಯ ಬಣ್ಣ ಸ್ವಲ್ಪ ಹಳದಿ.[]

ಮಹತ್ವ

[ಬದಲಾಯಿಸಿ]

ಇದನ್ನು ತಯಾರಿಸಲು ಯಾವುದೇ ತೈಲ ಪದಾರ್ಥವನ್ನು ಉಪಯೋಗಿಸುವುದಿಲ್ಲ. ಇದು ಬರೀ ಶರ್ಕರದ ಕಂತೆ. ಇದು ಎಲ್ಲ ವಯಸ್ಸಿನವರಿಗೂ ಕೊಡಬಹುದಾದ ಖಾದ್ಯ. ಇದನ್ನು ತಯಾರಿಸುವುದು ಒಂದು ಕಲೆ. ಇದನ್ನು ರೊಟ್ಟಿ ಬಡಿಯುವುದು ಎನ್ನುತ್ತಾರೆ. ಇದನ್ನು ಮಾಡುವುದು ಸುಲಭವಲ್ಲ. ಸಾಮಾನ್ಯವಾಗಿ ಬೆಳಿಗ್ಗೆ ರೊಟ್ಟಿ ಬಡಿಯುವುದರ ಟಪ್-ಟಪ್ ಶಬ್ದವನ್ನು ದೂರದಿಂದಲೆ ಕೇಳಿಯೇ ಉತ್ತರ ಕನ್ನಡಿಗರ ಮನೆಯನ್ನು ಗುರ್ತಿಸಬಹುದು.[]

ವೈವಿಧ್ಯ

[ಬದಲಾಯಿಸಿ]

ಇದನ್ನು ೨ ರೀತಿಯಾಗಿ ಉಣ್ಣಬಹುದು:

  • ಬಿಸಿ ರೊಟ್ಟಿ
  • ಖಟಿ/ಖಡಕ್ ರೊಟ್ಟಿ
ಬಿಳಿ ಜೋಳದ ರೊಟ್ಟಿ



ಶರಣಬಸವೇಶ್ವರ ದೇವಸ್ಥಾನ ಕಲಬುರಗಿ ಯ ಮಹಾ ದಾಸೋಹದಲ್ಲಿ ಮತ್ತು ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ದಾಸೋಹದಲ್ಲಿ ಸುಮಾರು ೩೦ ದಿನಗಳು ಸುತ್ತಮುತ್ತಲಿನ ಗ್ರಾಮಸ್ತರಿಂದ ರೊಟ್ಟಿಗಳು ಸ್ವೀಕೃತಿಗೊಳ್ಳುತ್ತವೆ. ಇದು ಪ್ರಖ್ಯಾತಿಯನ್ನು ಪಡೆದಿದೆ.

ಸಾಮಾನ್ಯವಾಗಿ ಬಿಸಿ ರೊಟ್ಟಿ (ಬುಟ್ಟಿಯಿಂದ ಗಂಗಾಳದ ಬದಲು ತೆವೆಯಿಂದ ಗಂಗಾಳಕ್ಕೆ) ಅಡಿಗೆ ಮನೆಯಲ್ಲೇ ಒಲೆ ಮುಂದೆ ಕೂತು ತಿನ್ನುತ್ತಾರೆ. ಇದು ತುಂಬಾ ಮೃದುವಾಗಿದ್ದು ಜೀರ್ಣಿಸಲು ಅತಿ ಸುಲಭ.

ಖಟಿ ಅಥವಾ ಖಡಕ್ ರೊಟ್ಟಿಯನ್ನು ಸುಡುವಾಗ ತೆವೆಯ ಮೇಲೆ ಸ್ವಲ್ಪ ಜಾಸ್ತಿ ಹೊತ್ತು ಸುಡುತ್ತಾರೆ. ಹಾಗಾಗಿ ಅದು ಹಪ್ಪಳದ ಹಾಗೆ ಖಡಕ್ ಇರುತ್ತದೆ. ಇದನ್ನು ತುಂಬಾ ದಿನಗಳವರೆಗೆ ಕೆಡದಂತೆ ಇಡಲು ಕೆಲವು ಕಡೆ ಬಿಸಿಲಲ್ಲೂ ಇಡುತ್ತಾರೆ. ಇದನ್ನು ಒಂದು ತಿಂಗಳವರೆಗೆ ಸಂಗ್ರಹಿಸಿ ಇಡಬಹುದು.

೨೦೦೫ರ ಅಗಸ್ಟ್ ಜಲ ಪ್ರಳಯದ ಕಾಲದಲ್ಲಿ ನೆರೆ ಪ್ರಭಾವಿತ ಹಳ್ಳಿಗಳಲ್ಲಿ ಖಟಿ ರೊಟ್ಟಿಗಳನ್ನು ಹಂಚಲಾಗಿತ್ತು.

ಉಲ್ಲೇಖಗಳು

[ಬದಲಾಯಿಸಿ]