ಚಿಟ್ಟು ಮಡಿವಾಳ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಚಿಟ್ಟು ಮಡಿವಾಳ
Indian Robin (Saxicoloides fulicata)- cambaiensis race at Hodal I IMG 5835.jpg
Male of race cambaiensis
Indian Robin (F) I-Haryana IMG 8045.jpg
Female of race cambaiensis (ಹರಿಯಾಣ)
Conservation status
Egg fossil classification
Kingdom:
Phylum:
Class:
Order:
Family:
Genus:
Lesson, 1831
Species:
S. fulicatus
Binomial nomenclature
Saxicoloides fulicatus
(Linnaeus, 1766)
SaxicoloidesFulicatusMap.svg
Synonym (taxonomy)

Motacilla fulicata
Saxicoloides fulicata
Thamnobia cambaiensis
Thamnobia fulicata
Sylvia ptymatura

ಚಿಟ್ಟು ಮಡಿವಾಳ (Indian Robin). ಮಡಿವಾಳ ಹಕ್ಕಿಯ ಸಂಕ್ಷಿಪ್ತ ರೂಪವೆಂದು ಹೇಳಬಹುದಾದ ಈ ಹಕ್ಕಿಯು Muscicapidae ಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು Saxicolodes fulicatus.

ವಿವರಣೆ[ಬದಲಾಯಿಸಿ]

Indian Robin (Saxicoloides fulicatus) in Tirunelveli, India.jpg

ಚಿಟ್ಟು ಮಡಿವಾಳದ ಗಂಡು ಹಕ್ಕಿಯು ಸಂಪೂರ್ಣ ಕಪ್ಪು ಬಣ್ಣ ಹೊಂದಿದ್ದು, ರೆಕ್ಕೆಗಳ ಮೇಲೆ ಬಿಳಿ ಪಟ್ಟಿ ಇರುತ್ತದೆ. ಕಿಬ್ಬೊಟ್ಟೆ ಮತ್ತು ಬಾಲದ ಬುಡದಲ್ಲಿ ಅಚ್ಚ ಕೆಂಗಂದು ಬಣ್ಣವಿರುತ್ತದೆ. ಉತ್ತರ ಭಾಗದಲ್ಲಿ ಕಂಡುಬರುವ ಗಂಡು ಚಿಟ್ಟು ಮಡಿವಾಳಗಳು ಬೆನ್ನಿನಲ್ಲಿ ಬೂದುಬಣ್ಣವನ್ನು ಹೊಂದಿರುತ್ತವೆ. ಹೆಣ್ಣು ಹಕ್ಕಿಗಳು ಸಂಪೂರ್ಣವಾಗಿ ಬೂದುಗಂದು ಬಣ್ಣವನ್ನು ಹೊಂದಿದ್ದು, ಕಿಬ್ಬೊಟ್ಟೆ ಮತ್ತು ಬಾಲದ ಬುಡದಲ್ಲಿ ಕೆಂಗಂದು ಬಣ್ಣವನ್ನು ಹೊಂದಿರುತ್ತವೆ. ಬಾಲವನ್ನು ಎತ್ತಿಕೊಂಡು ಓಡಾಡುವುದು ಈ ಹಕ್ಕಿಗಳ ವಿಶೇಷ.

ಆಹಾರ[ಬದಲಾಯಿಸಿ]

Indian Robin (Saxicoloides fulicata) in Kawal, AP W IMG 2031.jpg

ಕಾಡು ವಿರಳವಾಗಿರುವೆಡೆ ಅಥವಾ ಕುರುಚಲು ಕಾಡುಗಳಲ್ಲಿ ವಾಸಿಸುವ ಈ ಹಕ್ಕಿಗಳು ಜೇಡ, ನೊಣ ಮುಂತಾದ ಕೀಟಗಳನ್ನು ತಿನ್ನುತ್ತವೆ. ಮರಿಗಳಿಗೆ ಆಹಾರ ನೀಡುವ ಸಂದರ್ಭದಲ್ಲಿ ಕಪ್ಪೆ, ಹಲ್ಲಿ, ಓತಿಕ್ಯಾತಗಳನ್ನು ಸಹ ಬೇಟೆಯಾಡುತ್ತವೆ. ಹೆಚ್ಚಿನದಾಗಿ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಇವು ಆಹಾರಾನ್ವೇಷಣೆ ನಡೆಸುತ್ತವೆ.

ಸಂತಾನೋತ್ಪತ್ತಿ[ಬದಲಾಯಿಸಿ]

ಇವುಗಳ ಸಂತಾನೋತ್ಪತ್ತಿ ಸಮಯವು ಸ್ಥಳ ಬದಲಾವಣೆಯಾದಂತೆ ಬದಲಾಗುತ್ತದೆ. ಉತ್ತರ ಭಾರತದಲ್ಲಿ ಇವು ಜೂನ್ ನಲ್ಲಿ ಅಂದರೆ ಮುಂಗಾರಿನ ಸಮಯದಲ್ಲಿ ಸಂತಾನಾಭಿವೃದ್ಧಿ ನಡೆಸಿದರೆ, ದಕ್ಷಿಣ ಭಾರತದಲ್ಲಿ ಸೆಪ್ಟೆಂಬರ್ ದಿಂದ ಡಿಸೆಂಬರ್ ವರೆಗೆ ಸಂತಾನೋತ್ಪತ್ತಿ ನಡೆಸುತ್ತವೆ. ಶ್ರೀಲಂಕಾದಲ್ಲಿ ಮಾರ್ಚ್ ದಿಂದ ಜೂನ್ ವರೆಗೆ ಮತ್ತು ಅಗಸ್ಟ್ ದಿಂದ ಸೆಪ್ಟೆಂಬರ್ ವರೆಗೆ ಸಂತಾನೋತ್ಪತ್ತಿ ನಡೆಸುತ್ತವೆ. ಸಂತಾನ ಋತುವಿನಲ್ಲಿ ಗಂಡು ಪಕ್ಷಿಯು ಮಧುರವಾಗಿ ಸಿಳ್ಳೆ ಹಾಕಿ ಹೆಣ್ಣು ಹಕ್ಕಿಯನ್ನು ಆಕರ್ಷಿಸುತ್ತದೆ.

ಗೂಡು ಮತ್ತು ಮರಿ ಮಾಡುವಿಕೆ[ಬದಲಾಯಿಸಿ]

ಚಿಟ್ಟು ಮಡಿವಾಳಗಳು ಹುಲ್ಲು, ಹತ್ತಿ, ಬಟ್ಟೆ ಚೂರು, ಪುಕ್ಕ, ಕೂದಲು, ಹಾವಿನ ಪೊರೆ ಮುಂತಾದವುಗಳನ್ನು ಉಪಯೋಗಿಸಿ ಕಲ್ಲುಗಳ ಬಿರುಕುಗಳಲ್ಲಿ ಅಥವಾ ಗೋಡೆಗಳ ಮೇಲೆ ಅಥವಾ ಭೂಮಿಗೆ ಸಮಾನಾಂತರವಾಗಿ ಟೊಳ್ಳು ರಚಿಸಿ ಗೂಡುಕಟ್ಟಿ ನೀಲಿ ಚುಕ್ಕೆಗಳಿರುವ 3 ರಿಂದ 5 ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳಿಗೆ 10 ರಿಂದ 12 ದಿನಗಳವರೆಗೆ ಹೆಣ್ಣು ಹಕ್ಕಿಯು ಮಾತ್ರ ಕಾವು ಕೊಡುತ್ತದೆ. ಮರಿಗಳಿಗೆ ಹೆಣ್ಣು ಮತ್ತು ಗಂಡು ಹಕ್ಕಿಗಳೆರಡೂ ಆಹಾರ ನೀಡುತ್ತವೆ. ಕೆಲವೊಮ್ಮೆ ಗಂಡು ಹಕ್ಕಿಯು ಆಹಾರವನ್ನು ಹೆಣ್ಣಿಗೆ ವರ್ಗಾಯಿಸಿ ನಂತರ ಹೆಣ್ಣು, ಮರಿಗಳಿಗೆ ಆಹಾರ ನೀಡುತ್ತದೆ.

ಹರಡುವಿಕೆ ಮತ್ತು ಆವಾಸಸ್ಥಾನ[ಬದಲಾಯಿಸಿ]

ಅರೆ ಮಲೆನಾಡು ಮತ್ತು ಬಯಲು ಸೀಮೆಗಳಲ್ಲಿ ವಾಸಿಸುವ ಈ ಹಕ್ಕಿಗಳು ಭಾರತ, ಬಾಂಗ್ಲಾದೇಶ, ಭೂತಾನ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾಗಳ ಕುರುಚಲು ಕಾಡುಗಳಲ್ಲಿ ಕಾಣಸಿಗುತ್ತವೆ.

Indian Robin (Saxicoloides fulicata)- Male with feed for Immature W IMG 8064.jpg
Indian-Robin.JPG
Indian Robin (Saxicoloides fulicata) in Kawal, AP W IMG 2175.jpg

ಬಾಹ್ಯ ಕೊಂಡಿಗಳು[ಬದಲಾಯಿಸಿ]