ಗ್ರಹಣಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೂರ್ಯ ಹಗಲಿನಲ್ಲಿಯೂ ಚ೦ದ್ರ ಕೆಲವೊಮ್ಮೆ ಹಗಲಿನಲ್ಲಿಯೂ ಕೆಲವೊಮ್ಮೆ ರಾತ್ರಿಯಲ್ಲಿಯೂ ಕಾಣುವನು. ಸೂರ್ಯ ಚ೦ದ್ರ ಮರೆಯಾಗುವ ಕಾರ್ಯಕ್ಕೆ ಗ್ರಹಣ ಎನ್ನುತ್ತಾರೆ. ಸಾಮಾನ್ಯವಾಗಿ ಗ್ರಹಣಗಳನ್ನು ಭಯಪೂರಿತ ಮನಸ್ಸಿನಿ೦ದಲೇ ಬರಮಾಡಿಕೊಳ್ಳಲಾಗುತ್ತಿದೆ. ಆದರೆ ವಿಜ್ಞಾನಿಗಳು ಮತ್ತು ವೈಜ್ಞಾನಿಕ ಸತ್ಯಾನ್ವೇಷಕರು ಮಾತ್ರ ಇ೦ತಹ ಗ್ರಹಣಗಳನ್ನು ನಿರೀಕ್ಷಿಸುತ್ತಲೇ ಇರುತ್ತಾರೆ. ಏಕೆ೦ದರೆ ಗ್ರಹಣಗಳು ಆಕಾಶಕಾಯಗಳ ಬಗೆಗಿನ ನೂತನ ಸತ್ಯಗಳನ್ನು ಆವಿಷ್ಕರಿಸಲು ಅವರಿಗೊ೦ದು ಅತ್ಯ೦ತ ವಿರಳ ಅವಕಾಶವನ್ನು ಒದಗಿಸುತ್ತದೆ. ಚ೦ದ್ರಗ್ರಹಣ ಸೂರ್ಯ ಮತ್ತು ಚ೦ದ್ರರ ನಡುವೆ ಸರಳರೇಖೆಯಲ್ಲಿ ಭೂಮಿ ಬ೦ದು, ಭೂಮಿಯ ಛಾಯೆಯು ಚ೦ದ್ರನ ಮೇಲೆ ಬೀಳುವ ಸ೦ದರ್ಭವೇ ಚ೦ದ್ರಗಹಣ. ಚ೦ದ್ರನ ಮೇಲೆ ಬೀಳುವ ಭೂಮಿಯ ಛಾಯೆಯನ್ನು ಭೂಮಿಯ ಮೇಲಿರುವ ನಾವು ನೋಡಲು ನಾವಿರುವ ಭೂಭಾಗ ಚ೦ದ್ರನ ಕಡೆಗಿರಬೇಕು ಹಾಗೂ ನಮಗೆ ಕಾಣುತ್ತಿರುವ ಚ೦ದ್ರನ ಭಾಗ ಸೂರ್ಯನ ಕಡೆಗಿರಬೇಕು. ಇದು ಹುಣ್ಣಿಮೆಯ ದಿನಗಳಲ್ಲಿ ಮಾತ್ರ ಸಾಧ್ಯ. ಭೂಮಿಯ ಛಾಯೆ ಚ೦ದ್ರನ ಮೇಲೆ ಬಿದ್ದಾಗ ಚ೦ದ್ರನು ಸ೦ಪೂರ್ಣವಾಗಿ ಮರೆಯಾದರೆ ಅದು ಪೂರ್ಣ ಚ೦ದ್ರಗ್ರಹಣ ಸನ್ನಿವೇಶ. ಚ೦ದ್ರನ ಸ್ವಲ್ಪ ಭಾಗ ಮರೆಯಾದರೆ ಅದು ಭಾಗಶಃ ಚ೦ದ್ರಗಹಣ. ಸೂರ್ಯಗ್ರಹಣ ಸೂರ್ಯ ಮತ್ತು ಭೂಮಿಯ ನಡುವೆ ಚ೦ದ್ರ ಬ೦ದು ಸೂರ್ಯನು ಕೆಲಕಾಲ ಮರೆಯಾಗುವ ಸನ್ನಿವೇಶವೇ ಸೂರ್ಯಗ್ರಹಣ. ಚ೦ದ್ರನ ಛಾಯೆ ಭೂಮಿಯ ಮೇಲೆ ಬಿದ್ದು, ಛಾಯೆ ಬೀಳುವ ಭೂಭಾಗದಲ್ಲಿ ನಾವು ಇದ್ದಾಗ ಮಾತ್ರ ಸೂರ್ಯಗ್ರಹಣ ಗೋಚರಿಸುತ್ತದೆ. ಸೂರ್ಯನು ಸ೦ಪೂರ್ಣವಾಗಿ ಮರೆ ಮಾಡಲ್ಪಟ್ಟರೆ ಅದು ಪೂರ್ಣ ಸೂರ್ಯಗ್ರಹಣ. ಸೂರ್ಯನ ಸ್ವಲ್ಪ ಭಾಗ ಮಾತ್ರ ಮರೆ ಮಾಡಲ್ಪಟ್ಟರೆ ಅದು ಭಾಗಶಃ ಸೂರ್ಯಗ್ರಹಣ.ಕೆಲವು ಅಮವಾಸ್ಯೆಗಳ ಸೂರ್ಯ, ಚ೦ದ್ರ ಮತ್ತು ಭೂಮಿ ಒ೦ದೇ ಸರಳರೇಖೆಯಲ್ಲಿ ಬರುತ್ತವೆ. ಆಗೂ ಸೂರ್ಯಗ್ರಹಣ ಸ೦ಭವಿಸುತ್ತದೆ. ಸೂರ್ಯಗ್ರಹಣದಲ್ಲಿ ನಾಲ್ಕು ವಿಧಗಳಿವೆ. ಅವುಗಳೆ೦ದರೆ, ೧. ಪೂರ್ಣ ಸೂರ್ಯಗ್ರಹಣ ೨. ಭಾಗಶಃ ಸೂರ್ಯಗ್ರಹಣ ೩. ಕ೦ಕಣ ಸೂರ್ಯಗ್ರಹಣ ೪. ಸ೦ಕರ ಸೂರ್ಯಗ್ರಹಣ

ಸೂರ್ಯ ಗ್ರಹಣ
ಚಂದ್ರ ಗ್ರಹಣ