ನೆರಳು
ಗೋಚರ
ನೆರಳು (ಛಾಯೆ) ಎಂದರೆ ಯಾವುದೇ ವಸ್ತುವು ಸೂರ್ಯನ ಬೆಳಕನ್ನು (ವಿಶೇಷವಾಗಿ ನೇರ ಬಿಸಿಲನ್ನು) ತಡೆಗಟ್ಟುವುದು, ಮತ್ತು ಆ ವಸ್ತುವಿನಿಂದ ಸೃಷ್ಟಿಯಾದ ಛಾಯೆ ಕೂಡ ಆಗಿದೆ. ನೆರಳು ಕೂಡ ಬೂದು, ಕಪ್ಪು, ಬಿಳಿ, ಇತ್ಯಾದಿ ಬಣ್ಣಗಳನ್ನು ಹೊಂದಿರುತ್ತದೆ. ಇದು ಛಾವಣಿ, ಮರ, ಕೊಡೆ, ಕಿಟಕಿ ತೆರೆ ಅಥವಾ ತಡಿಕೆ, ಪರದೆಗಳು, ಅಥವಾ ಇತರ ವಸ್ತುಗಳಿಂದಾಗುವ ಸೂರ್ಯನ ಬೆಳಕಿನ ತಡೆಗಟ್ಟುವಿಕೆಯನ್ನು ಸೂಚಿಸಬಹುದು.
ಸಂಪನ್ಮೂಲವಾಗಿ
[ಬದಲಾಯಿಸಿ]ಸಮಶೀತೋಷ್ಣ ಮತ್ತು ಉಷ್ಣ ವಲಯಗಳಲ್ಲಿ (ಭೂಮಿಯ ಮೇಲಿನ ಬಹುತೇಕ ಸ್ಥಳಗಳು), ಸೂರ್ಯನು ಹೊರಸೂಸಿದ ಹಾನಿಕಾರಕ ಶಾಖ ಮತ್ತು ಅತಿನೇರಳೆ ವಿಕಿರಣದಿಂದ ತಂಪು ಮತ್ತು ಆಶ್ರಯ ಒದಗಿಸುವಲ್ಲಿ ನೆರಳು ಮುಖ್ಯ ವಿಷಯವಾಗಿದೆ.
ಸಸ್ಯಗಳು
[ಬದಲಾಯಿಸಿ]ಸಕ್ಕರೆಯನ್ನು ಉತ್ಪಾದಿಸಲು ದ್ಯುತಿಸಂಶ್ಲೇಷಣೆಯಲ್ಲಿ ಶಕ್ತಿಯಾಗಿ ಹೂಡಲು ಸೂರ್ಯನ ಬೆಳಕನ್ನು ಹೀರಿಕೊಳ್ಳುವ ಮೂಲಕ ಹಸಿರು ಸಸ್ಯಗಳು ನೆರಳನ್ನು ಸೃಷ್ಟಿಸುತ್ತವೆ. ಅವು ಸಕ್ರೀಯವಾಗಿ ಬಾಷ್ಪವನ್ನು ವಿಸರ್ಜಿಸಿ ಕೂಡ, ಹೆಚ್ಚುವರಿ ತಂಪು ಪರಿಣಾಮವನ್ನು ಉಂಟುಮಾಡುತ್ತವೆ.