ಬೂದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಟ್ಟಿಗೆಯ ಬೂದಿ

ಬೂದಿ ಎಂದರೆ ಬೆಂಕಿಯ ಘನ ಶೇಷಗಳು.[೧] ನಿರ್ದಿಷ್ಟವಾಗಿ, ಇದು ಏನನ್ನಾದರೂ ದಹಿಸಿದ ನಂತರ ಉಳಿದುಕೊಳ್ಳುವ ಜಲೀಯವಲ್ಲದ, ಅನಿಲರೂಪದ್ದಲ್ಲದ ಶೇಷಗಳನ್ನು ಸೂಚಿಸುತ್ತದೆ. ವಿಶ್ಲೇಷಕ ರಸಾಯನಶಾಸ್ತ್ರದಲ್ಲಿ, ರಾಸಾಯನಿಕ ಮಾದರಿಗಳ ಖನಿಜ ಹಾಗೂ ಲೋಹಾಂಶದ ವಿಶ್ಲೇಷಣೆಯ ವಿಷಯದಲ್ಲಿ, ಬೂದಿಯು ಸಂಪೂರ್ಣ ದಹನದ ನಂತರ ಉಳಿದುಕೊಳ್ಳುವ ಅನಿಲರೂಪದ್ದಲ್ಲದ, ದ್ರವರೂಪದ್ದಲ್ಲದ ಶೇಷ.

ಅಪೂರ್ಣ ದಹನದ ಅಂತಿಮ ಉತ್ಪನ್ನವಾಗಿ ಬೂದಿಯು ಬಹುತೇಕವಾಗಿ ಖನಿಜವಾಗಿರುತ್ತದೆ, ಆದರೆ ಸಾಮಾನ್ಯವಾಗಿ ಆಗಲೂ ಸ್ವಲ್ಪ ಪ್ರಮಾಣದ ದಹನಶೀಲ ಕಾರ್ಬನಿಕ ಅಥವಾ ಇತರ ಉತ್ಕರ್ಷಣೀಯ ಶೇಷಗಳನ್ನು ಹೊಂದಿರುತ್ತದೆ. ಬೂದಿಯ ಅತ್ಯಂತ ಪರಿಚಿತವಾದ ಪ್ರಕಾರವೆಂದರೆ ಕಟ್ಟಿಗೆಯ ಬೂದಿ. ಇದು ಕ್ಯಾಂಪ್‍ಫ಼ಾಯರ್, ಅಗ್ನಿ ಸ್ಥಳಗಳು, ಇತ್ಯಾದಿಗಳಲ್ಲಿ ಕಟ್ಟಿಗೆಯ ದಹನದ ಉತ್ಪನ್ನವಾಗಿರುತ್ತದೆ.

ಸಾಬೂನಿನಂತೆ, ಬೂದಿ ಕೂಡ ಒಂದು ಸೋಂಕು ನಿವಾರಕ ಪದಾರ್ಥವಾಗಿದೆ (ಕ್ಷಾರೀಯ).[೨] ಸಾಬೂನು ಲಭ್ಯವಿರದಿದ್ದಾಗ, ವಿಶ್ವ ಆರೋಗ್ಯ ಸಂಘಟನೆಯು ಬೂದಿ ಅಥವಾ ಮರಳನ್ನು ಶಿಫಾರಸು ಮಾಡುತ್ತದೆ.[೩]

ಉಲ್ಲೇಖಗಳು[ಬದಲಾಯಿಸಿ]

  1. "the definition of ash". www.dictionary.com (in ಇಂಗ್ಲಿಷ್). Retrieved 2018-06-18.
  2. Howard et al. 2002: Healthy Villages A guide for communities and community health workers. CHAPTER 8 Personal, domestic and community hygiene. WHO. Accessed Oct. 2014. http://www.who.int/water_sanitation_health/hygiene/settings/hvchap8.pdf
  3. WHO 2014: Water Sanitation Health. How can personal hygiene be maintained in difficult circumstances? Accessed Oct. 2014 http://www.who.int/water_sanitation_health/emergencies/qa/emergencies_qa17/en/
"https://kn.wikipedia.org/w/index.php?title=ಬೂದಿ&oldid=915849" ಇಂದ ಪಡೆಯಲ್ಪಟ್ಟಿದೆ