ವಿಷಯಕ್ಕೆ ಹೋಗು

ಖಾಸಗೀಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಖಾಸಗೀಕರಣ ಎಂದರೆ ವ್ಯಾಪಾರ, ಉದ್ದಿಮೆ, ಏಜನ್ಸಿ, ಸಾರ್ವಜನಿಕ ವಲಯಗಳಿಂದ ಸಾರ್ವಜನಿಕ ಸೇವೆಗಳನ್ನು ಖಾಸಗಿ ವಲಯ ಅಥವಾ ಖಾಸಗಿ ಲಾಭಾಪೇಕ್ಷೆ ರಹಿತ ಸಂಸ್ಥೆಗೆ ವಹಿಸಿಕೊಡುವ ಕಾರ್ಯ ಅಥವಾ ಪ್ರಕ್ರಿಯೆಯಾಗಿದೆ. ವಿಶಾಲ ವ್ಯಾಪ್ತಿಯಲ್ಲಿ ಖಾಸಗೀಕರಣವೆಂದರೆ ಸರ್ಕಾರದ ಕೆಲಸಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುವುದು. ಉದಾಹರಣೆಗೆ ಸರ್ಕಾರಿ ಕೆಲಸಗಳಾದ ಕಂದಾಯ ಸಂಗ್ರಹಣೆ ಮತ್ತು ಕಾನೂನು ನಿರ್ವಹಣೆ ಕಾರ್ಯಗಳು ಕೂಡ ಇದರಲ್ಲಿ ಸೇರಿದೆ.[]

"ಖಾಸಗೀಕರಣ" ಎಂಬ ಶಬ್ಧವನ್ನು ಎರಡು ವಿಭಿನ್ನ ಕಾರ್ಯವನ್ನು ವಿವರಿಸಲು ಬಳಸಲಾಗುತ್ತದೆ. ಮೊದಲನೆಯದಾಗಿ ಹೆಚ್ಚು ಪ್ರಮಾಣದಲ್ಲಿ ಸಾರ್ವಜನಿಕ ನಿಗಮದ ಎಲ್ಲಾ ಶೇರುಗಳನ್ನು ಕೊಂಡುಕೊಳ್ಳುವುದು ಅಥವಾ ಸಾರ್ವಜನಿಕವಾಗಿ ಬಹಿರಂಗವಾಗಿ ಮಾರಾಟವಾಗುವ ಕಂಪನಿಯ ಶೇರುಗಳನ್ನು ಖಾಸಗಿಯವರು ತಮ್ಮ ಒಡೆತನಕ್ಕೆ ತೆಗೆದುಕೊಳ್ಳುವುದನ್ನು ಖಾಸಗಿ ಇಕ್ವಿಟಿ ಎಂದು ಪರಿಗಣಿಸಲಾಗುತ್ತದೆ. ಎರಡನೆಯದಾಗಿ ಮ್ಯೂಚುವಲ್ ಆರ್ಗನೈಸೇಶನ್ ಅಥವಾ ಸಹಕಾರಿ ಸಂಸ್ಥೆಯನ್ನು ಡಿಆರ್ಗನೈಸೇಶನ್ ಮಾಡಿ ಜಾಯಿಂಟ್ ಸ್ಟಾಕ್ ಕಂಪನಿಯಾಗಿ ರಚಿಸುವುದು.[]

ಖಾಸಗೀಕರಣ ಎಂಬ ಶಬ್ದವು 1930ರಲ್ಲಿ ನಾಜಿ ಜರ್ಮನ್ ಆರ್ಥಿಕ ನಿಯಮದಲ್ಲಿ ಸೃಷ್ಟಿಯಾಗಿದೆ ಎಂದು [] ಎಡ್ವರ್ಡ್ ದಿ ಇಕಾನಾಮಿಸ್ಟ್ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.[]

ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿಯು ಈ ಶಬ್ದವನ್ನು 1942ರಲ್ಲಿ ಎಕಾನ್ ಜರ್ನಲ್ ಬಳಸಿದೆ ಎಂದು ಉಲ್ಲೇಖಿಸಿದೆ.ಜರ್ನಲ್ , 52, 398.

ಇತಿಹಾಸ

[ಬದಲಾಯಿಸಿ]

ಖಾಸಗೀಕರಣಕ್ಕೆ ದೀರ್ಘಕಾಲದ ಇತಿಹಾಸವಿದ್ದು ಪ್ರಾಚೀನ ಗ್ರೀಸ್ ಕಾಲದಿಂದಲೂ ಬಳಕೆಯಲ್ಲಿದೆ. ಇಲ್ಲಿನ ಸರ್ಕಾರಗಳು ಎಲ್ಲವನ್ನೂ ಖಾಸಗಿ ವಲಯಕ್ಕೆ ಹೊರಗುತ್ತಿಗೆ ನೀಡುತ್ತಿದ್ದರು[]. ರೋಮನ್ ಗಣರಾಜ್ಯದಲ್ಲಿ ಖಾಸಗಿ ವ್ಯಕ್ತಿಗಳು ಅಥವಾ ಕಂಪನಿಗಳು ತೆರಿಗೆ ಸಂಗ್ರಹ (ಟ್ಯಾಕ್ಸ್ ಫಾರ್ಮಿಂಗ್), ಸೈನಾ ಪೂರೈಕೆ (ಮಿಲಿಟರಿ ಗುತ್ತಿಗೆದಾರರು), ಧಾರ್ಮಿಕ ಬಲಿಗಳು ಮತ್ತು ನಿರ್ಮಾಣದಂತಹ ಹಲವಾರು ಸೇವೆಗಳನ್ನು ನಿರ್ವಹಿಸುತ್ತಿದ್ದರು. ಹೀಗಿದ್ದರೂ ರೋಮನ್ ಸಾಮ್ರಾಜ್ಯವು ರಾಜ್ಯ ಒಡೆತನದ ಉದ್ದಿಮೆಗಳನ್ನು ರಚನೆ ಮಾಡಿತ್ತು—ಉದಾಹರಣೆಗೆ, ಸಾಮ್ರಾಜ್ಯದ ಒಡೆತನದಲ್ಲಿದ್ದ ಎಸ್ಟೇಟಿನಲ್ಲಿ ಹೆಚ್ಚಾಗಿ ಧ್ಯಾನ್ಯಗಳನ್ನು ಬೆಳೆಯಲಾಗುತ್ತಿತ್ತು. ಅಧಿಕಾರಶಾಹಿಗಳು ಮಾಡುತ್ತಿದ್ದ ವೆಚ್ಚಗಳು ಕೂಡ ರೋಮನ್ ಸಾಮ್ರಾಜ್ಯ ಪತನವಾಗಲು ಒಂದು ಕಾರಣವಾಗಿದೆ ಎಂದು ಕೆಲವು ಬುದ್ದಿಜೀವಿಗಳು ಗುರುತಿಸಿದ್ದಾರೆ.[]

ಬ್ರಿಟನ್‌ನಲ್ಲಿ, ಸಾಮಾನ್ಯವಾಗಿ ಖಾಸಗೀಕರಣಗೊಂಡ ಭೂಮಿಯನ್ನು ಬೇಲಿಹಾಕಿದ ಪ್ರದೇಶವೆಂದು(ಎನ್‌ಕ್ಲೋಜರ್) ಕರೆಯುತ್ತಿದ್ದರು (ಸ್ಕಾಟ್ಲ್ಯಾಂಡ್‌ನಲ್ಲಿ ಲೋಲ್ಯಾಂಡ್ ಕ್ಲಿಯರೆನ್ಸಸ್ ಮತ್ತು ಹೈಲ್ಯಾಂಡ್ ಕ್ಲಿಯರೆನ್ಸಸ್ ಎಂದು ಕರೆಯುತ್ತಿದ್ದರು). ದೇಶದೊಳಗಿನ ಕೈಗಾರಿಕಾ ಕ್ರಾಂತಿಯ ಜೊತೆಯಲ್ಲಿಯೆ 1760 ರಿಂದ 1820ವರೆಗೆ ಈ ಪ್ರಕಾರಗಳನ್ನೊಳಗೊಂಡ ಪ್ರಮುಖವಾದ ಖಾಸಗೀಕರಣಗಳು ಕಂಡುಬರುತ್ತಿದ್ದವು.

ಇತ್ತಿಚೀನ ದಿನಗಳಲ್ಲಿ, 1950ರಲ್ಲಿ ವಿನ್ಸ್ಟಂಟ್ ಚರ್ಚಿಲ್‌'ರ ಸರ್ಕಾರವು ಬ್ರಿಟೀಷ್‌ನ ಉಕ್ಕು ಉಧ್ಯಮವನ್ನು ಖಾಸಗೀಕರಣಗೊಳಿಸಿತು ಮತ್ತು 1961ರಲ್ಲಿ ಪಶ್ಚಿಮ ಜರ್ಮನಿಯ ಸರ್ಕಾರವು ವೋಲ್ಕ್ಸ್ವೇ‌ಗನ್‌ನಲ್ಲಿನ ತನ್ನ ಬಹುಪಾಲನ್ನು ಸಣ್ಣಪ್ರಮಾಣದ ಹೂಡಿಕೆದಾರರಿಗೆ ಮಾರುವುದರ ಮೂಲಕ ದೊಡ್ಡ ಪ್ರಮಾಣದಲ್ಲಿ ಖಾಸಗೀಕರಣ ಪ್ರಕ್ರಿಯೆಯಲ್ಲಿ ತೊಡಗಿತು[]. ಚಿಲಿಯಲ್ಲಿ ಜನರಲ್ ಪಿನೊಶೆಟ್ 1970ರಲ್ಲಿ ಪ್ರಮುಖವಾದ ಖಾಸಗೀಕರಣ ಯೋಜನೆಯನ್ನು ರೂಪಿಸಿದನು. ಆದರೆ 1980ರಲ್ಲಿ ಯುಕೆಯಲ್ಲಿ ಮಾರ್ಗರೇಟ್ ಥ್ಯಾಚರ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ರೋನಾಲ್ಡ್ ರೇಗನ್‌ರ ನಾಯಕತ್ವದಡಿಯಲ್ಲಿ ಖಾಸಗೀಕರಣ ವಿಶ್ವದಾದ್ಯಂತ ವೇಗವಾಗಿ ಹರಡಿತು. 1993ರಲ್ಲಿ ಯುಕೆಯಲ್ಲಿ ಥ್ಯಾಚರ್‌ರ ಉತ್ತರಾಧಿಕಾರಿ ಜಾನ್ ಮೇಜರ್ ನಾಯಕತ್ವದಲ್ಲಿ ಬ್ರಿಟೀಷ್ ರೇಲ್ವೆಯ ಖಾಸಗೀಕರಣ ಪ್ರಕ್ರಿಯೆಯ ಮೂಲಕ ಖಾಸಗೀಕರಣ ಉಚ್ಛ್ರಾಯ ಸ್ಥಿತಿಗೆ ತಲುಪಿತು. ಇದರಿಂದ ಬ್ರಿಟೀಷ್ ರೇಲ್ವೆಯು ಮೊದಲಿನ ರಾಷ್ಟ್ರೀಕರಣದಿಂದ ಖಾಸಗಿ ರೇಲ್ವೆ ಕಂಪನಿಯಾಗಿ ರಚನೆಯಾಯಿತು.

1990ರಲ್ಲಿ ಪೂರ್ವ ಮತ್ತು ಮಧ್ಯ ಯೂರೋಪ್ ಮತ್ತು ಪೂರ್ವದ ಸೋವಿಯತ್ ಯುನಿಯನ್ ವಿಶ್ವ ಬ್ಯಾಂಕ್, ಅಂತರಾಷ್ಟ್ರೀಯ ಅಭಿವೃದ್ಧಿಗಾಗಿ ಯು.ಎಸ್ ಎಜೆನ್ಸಿ, ಮತ್ತು ಜರ್ಮನಿಯ ಟ್ರ್ಯೂಹ್ಯಾಂಡ್ ಮತ್ತು ಸರ್ಕಾರೀ ಮತ್ತು ಸರ್ಕಾರೇತರ ಸಂಸ್ಥಗಳ ನೆರವಿನ ಮೂಲಕ ರಾಜ್ಯ ಒಡೆತನದ ಉದ್ದಿಮೆಯ ಖಾಸಗೀಕರಣ ಕೈಗೊಂಡವು.

ಜಪಾನ್ ಪೋಸ್ಟ್, ಜಪಾನಿನ ಅಂಚೆ ವ್ಯವಸ್ಥೆ ಮತ್ತು ಜಗತ್ತಿನ ಅತಿ ದೊಡ್ಡ ಬ್ಯಾಂಕ್ ಆಗಿದ್ದು ಇದರ ಖಾಸಗೀಕರಣ ಪ್ರಕ್ರಿಯೆ ನಡೆಯುತ್ತಿದೆ. ಈ ಖಾಸಗೀಕರಣಕ್ಕೆ, ಜುನಿಚಿರೊ ಕೊಯಿಜುಮಿ ಮುಖ್ಯಸ್ಥರಾಗಿದ್ದಾರೆ, 2007 ಕ್ಕಿಂತ ಹಲವಾರು ಚರ್ಚೆಗಳ ನಂತರ ಈ ಪ್ರಕ್ರಿಯೆ ಪ್ರಾರಂಭವಾಗಿದೆ. ಖಾಸಗೀಕರಣ ಪ್ರಕ್ರಿಯೆಯು [by whom?] ರಿಂದ ಪ್ರಾರಂಭವಾಗಿ 2017ರಲ್ಲಿ ಕೊನೆಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ.

ವಿಧಗಳು

[ಬದಲಾಯಿಸಿ]

ಖಾಸಗೀಕರಣ ಪ್ರಕ್ರಿಯೆಗೆ ನಾಲ್ಕು ಪ್ರಮುಖ ವಿಧಾನಗಳಿವೆ[ಸೂಕ್ತ ಉಲ್ಲೇಖನ ಬೇಕು]:

  1. ಶೇರ್ ಇಶ್ಯೂ ಖಾಸಗೀಕರಣ (ಎಸ್‌ಐಪಿ) - ಸ್ಟಾಕ್ ಮಾರುಕಟ್ಟೆಯಲ್ಲಿ ಶೇರುಗಳನ್ನು ಮಾರಾಟಮಾಡುವುದು.
  2. ಸ್ವತ್ತು ಮಾರಾಟ ಖಾಸಗೀಕರಣ - ಸಂಪೂರ್ಣವಾಗಿ ಸಂಸ್ಥೆಯನ್ನು (ಅಥವಾ ಒಂದು ಭಾಗವನ್ನು) ಸಾಮಾನ್ಯವಾಗಿ ಹರಾಜು ಅಥವಾ ಟ್ರ್ಯೂಹ್ಯಾಂಡ್ ಮಾದರಿಯ ಮೂಲಕ ಕುಶಲ ಹೂಡಿಕೆದಾರನಿಗೆ ಮಾರಾಟಮಾಡುವುದು.
  3. ರಶೀದಿ ಖಾಸಗೀಕರಣ- ಎಲ್ಲಾ ನಾಗರಿಕರಿಗೂ ಉಚಿತವಾಗಿ ಅಥವಾ ತುಂಬಾ ಕಡಿಮೆ ಬೆಲೆಯಲ್ಲಿ ಶೇರು ಒಡೆತನವನ್ನು ಹಂಚುವುದು ಆಗಿದೆ.
  4. ಪ್ರಾರಂಭದಿಂದ ಖಾಸಗೀಕರಣ - ಪೂರ್ವದ ಸಮಾಜವಾದಿ ದೇಶಗಳಲ್ಲಿ ಹೊಸದಾದ ಖಾಸಗಿ ಉದ್ದಿಮೆಯನ್ನು ಪ್ರಾರಂಬಿಸುವಾಗ.

ಬಂಡವಾಳಶಾಹಿ ಮಾರುಕಟ್ಟೆ, ರಾಜಕೀಯ ಮತ್ತು ವ್ಯವಹಾರ ಸಂಸ್ಥೆಯ ನಿರ್ದಿಷ್ಟವಾದ ಅಂಶಗಳಿಂದ ಮಾರಾಟ ಮಾಡುವ ವಿಧಾನವು ಪ್ರಭಾವಿತವಾಗಿದೆ. ಬಂಡವಾಳ ಮಾರುಕಟ್ಟೆಗಳು ಚೇತರಿಸಿಕೊಳ್ಳದಿದ್ದಾಗ ಮತ್ತು ಆದಾಯ ದೊರೆಯದಿದ್ದಾಗ ಎಸ್‌ಐಪಿ ವಿಧಾನವನ್ನು ಆರಿಸಿಕೊಳ್ಳಲಾಗುತ್ತದೆ. ಶೇರು ಹಂಚಿಕೆಗಳು ವಿಶಾಲವಾಗಿಯೂ ಆಳವಾಗಿಯೂ ಇರಬಹುದು, ಸ್ಥಳೀಯ ಬಂಡವಾಳ ಮಾರುಕಟ್ಟೆಯು ಹಣದ ಹರಿವನ್ನು ಮತ್ತು (ಭಾಗಶಃ ) ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವುದು,ಆದರೆ ಬಂಡವಾಳ ಮಾರುಕಟ್ಟೆಗಳು ಹೆಚ್ಚು ಬೆಳವಣಿಗೆಹೊಂದದಿದ್ದರೇ ಕೊಂಡುಕೊಳ್ಳುವರು ಸಾಕಷ್ಟು ಪ್ರಮಾಣದಲ್ಲಿ ಸಿಗುವುದಿಲ್ಲ ಮತ್ತು ನಿರ್ವಹಣೆಯ ವೆಚ್ಚ (ಉದಾಹರಣೆಗೆ ಕಡಿಮೆ ಬೆಲೆ ಅವಶ್ಯಕತೆ ಇದ್ದಾಗ) ಹೆಚ್ಚಾಗಬಹುದು. ಇದೇ ಕಾರಣಕ್ಕಾಗಿಯೇ ಹಲವಾರು ಸರ್ಕಾರಗಳು ಹೆಚ್ಚು ಅಭಿವೃದ್ಧಿಯಾದ ಮತ್ತು ಹೆಚ್ಚು ಹಣದ ಹರಿವುಳ್ಳ ಮಾರುಕಟ್ಟೆಯಲ್ಲಿ ತಮ್ಮನ್ನು ಲಿಸ್ಟ್ ಮಾಡಿಕೊಳ್ಳ ಬಯಸುತ್ತಾರೆ, ಉದಾಹರಣೆಗೆ ಯೂರೊನೆಕ್ಟ್,ಮತ್ತು ಲಂಡನ್,ನ್ಯೂಯಾರ್ಕ್ ಮತ್ತು ಹಾಂಗ್‌ಕಾಂಗ್ ಸ್ಟಾಕ್ ಎಕ್ಸ್‌ಛೇಂಜ್.

ರಾಜಕೀಯ ಮತ್ತು ಕರೆನ್ಸಿ ರಿಸ್ಕ್‌ನ ಪರಿಣಾಮವಾಗಿ ವಿದೇಶಿ ಹೂಡಿಕೆದಾರರು ಹೂಡಿಕೆ ಮಾಡಲು ಹಿಂಜರಿಯುತ್ತಾರೆ, ಅಭಿವೃದ್ದಿಶೀಲ ದೇಶಗಳಲ್ಲಿ ಆಸ್ತಿ ಮಾರಾಟ ಹೆಚ್ಚು ಸಾಮಾನ್ಯ.

ಮಧ್ಯ ಮತ್ತು ಪೂರ್ವ ಯೂರೋಪ್, ರಷಿಯಾ,ಪೋಲಂಡ್, ಜೆಕ್ ಗಣರಾಜ್ಯ, ಮತ್ತು ಸ್ಲೋವಾಕಿಯಾದಂತಹ ಬದಲಾಗುತ್ತಿರುವ ಆರ್ಥಿಕತೆಯಲ್ಲಿ ರಶೀದಿ ಖಾಸಗೀಕರಣವು ಕಂಡುಬರುತ್ತದೆ. ಇದಲ್ಲದೇ, ಬದಲಾಗುತ್ತಿರುವ ಆರ್ಥಿಕತೆಯಲ್ಲಿ ಕೂಡ ಪ್ರಾರಂಭದಿಂದ ಖಾಸಗೀಕರಣವು ಪ್ರಮುಖ ವಿಧವಾದ ಆರ್ಥಿಕ ಬೆಳವಣಿಗೆಗೆ ಮಾದರಿಯಾಗಿದೆ.

ಶೇರು ಅಥವಾ ಸ್ವತ್ತು ಮಾರಾಟ ಖಾಸಗೀಕರಣ ಮಾಡುವುದರಿಂದಾಗುವ ಹೆಚ್ಚಿನ ಲಾಭವೆಂದರೆ ಹರಾಜು ಕೂಗುವವರು ಅತಿ ಹೆಚ್ಚು ಬೆಲೆ ಕೂಗಿ ಸ್ಪರ್ಧಿಸುತ್ತಾರೆ. ಇದರಿಂದಾಗಿ ಆದಾಯ ಹೆಚ್ಚಾಗಿ ಕಂದಾಯದ ವರವಾನವು ಹೆಚ್ಚಾಗುತ್ತದೆ. ರಶೀದಿ ಖಾಸಗೀಕರಣ ಇನ್ನೊಂದು ಲಾಭವೆಂದರೆ, ಸಾಮಾನ್ಯ ಜನರಿಗೆ ಪ್ರಾಮಾಣಿಕವಾಗಿ ಸ್ವತ್ತು ಹಸ್ತಾಂತರವಾಗುತ್ತದೆ, ಈ ಮೂಲಕ ಜನರು ನಿಜವಾದ ಅರ್ಥದಲ್ಲಿ ಭಾಗವಹಿಸಿದಂತೆ ಮತ್ತು ಒಳಗೊಂಡಂತಾಗುತ್ತದೆ. ರಶೀದಿ ಬದಲಾವಣೆಗೆ ಅವಕಾಶ ನೀಡಿದಲ್ಲಿ. ಮಾರುಕಟ್ಟೆಯಲ್ಲಿ ರಶೀದಿಯನ್ನು ಕಂಪನಿಗಳ ಅವರಿಗೆ ಹಣವನ್ನು ಕೊಡುವ ಮೂಲಕ ಇದನ್ನು ರಚನೆಮಾಡಬಹುದಾಗಿದೆ.

ವಿಭಿನ್ನ ದೃಷ್ಟಿಕೋನಗಳು

[ಬದಲಾಯಿಸಿ]

ಬೆಂಬಲಿಸುವಿಕೆ

[ಬದಲಾಯಿಸಿ]

ಖಾಸಗೀಕರಣದ ಪ್ರತಿಪಾದಕರ [who?] ಪ್ರಕಾರ ಖಾಸಗೀ ಮಾರುಕಟ್ಟೆಯು ಸರ್ಕಾರಿ ಮಾರುಕಟ್ಟೆಗಿಂತ ಉತ್ತಮವಾಗಿದ್ದು ಸ್ಪರ್ಧೆಯಿರುತ್ತದೆ ಮತ್ತು ಅನೇಕ ವಸ್ತು ಮತ್ತು ಸೇವೆಯನ್ನು ಸಮರ್ಪಕವಾಗಿ ಪೂರೈಸಬಹುದಾಗಿದೆ. ಹೆಚ್ಚಿನ ಸಂದರ್ಭದಲ್ಲಿ ಇದು ಕಡಿಮೆ ಬೆಲೆ, ಉತ್ತಮ ಗುಣಮಟ್ಟ, ಹೆಚ್ಚಿನ ಆಯ್ಕೆ, ಕಡಿಮೆ ಲಂಚಗುಳಿತನ, ಕಡಿಮೆ ಕೆಂಪು ಪಟ್ಟಿ (ಆಡಳಿತ ವಿಳಂಬ ಪದ್ಧತಿ) ಮತ್ತು ತಕ್ಷಣದ ವಿತರಣಾ ಸೌಲಭ್ಯವನ್ನೊದಗಿಸುತ್ತದೆ. ಅನೇಕ ಪ್ರತಿಪಾದಕರು ಎಲ್ಲವೂ ಖಾಸಗೀಕರಣಗೊಳ್ಳಬೇಕೆಂದು ವಾದಿಸುವುದಿಲ್ಲ. ಅವರ ಪ್ರಕಾರ ಮಾರುಕಟ್ಟೆಯ ವಿಫಲತೆಗಳು ಮತ್ತು ಸ್ವಾಮ್ಯತೆಯು ತೊಂದರೆದಾಯಕವಾಗಿದೆ. ಕೆಲವು ಆಸ್ಟ್ರಿಯಾದ ಶಾಲೆಯ ಆರ್ಥಿಕ ತಜ್ಞರು[who?] ಮತ್ತು anarcho-capitalists [who?] ರಕ್ಷಣಾ ವ್ಯವಸ್ಥೆ ಮತ್ತು ವಿವಾದಗಳ ಪರಿಹಾರವನ್ನೂ ಸಹ ಖಾಸಗೀಕರಣಗೊಳಿಸಬೇಕೆಂದು ಬಯಸುತ್ತಾರೆ.

ಆರ್ಥಿಕ ಮೂಲಭೂತವಾದದಲ್ಲಿ ಸರ್ಕಾರವು ಉದ್ಯಮಗಳಿಂದ ಸ್ವಲ್ಪ ಪ್ರಮಾಣದ ಉತ್ತೇಜಕ ಧನವನ್ನು ಪಡೆದು ಖಾಸಗೀಕರಣಕ್ಕೆ ಅನುಮತಿಸುವುದಾಗಿದೆ. ರಾಜ್ಯದ ಸ್ವಾಮ್ಯದಲ್ಲಿನ ಹೋಲಿಕೆಯ ಕೊರತೆಯು ತೊಂದರೆದಾಯಕವಾಗಿದೆ. ಪ್ರತಿಸ್ಪರ್ಧಿಗಳಿಲ್ಲದ ಒಂದು ಸಂಸ್ಥೆಯನ್ನು ಸಮರ್ಥವೊ ಅಲ್ಲವೊ ಎಂದು ಪರೀಕ್ಷಿಸುವುದು ಕಷ್ಟದಾಯಕವಾಗಿದೆ. ಕೇಂದ್ರ ಸರ್ಕಾರದ ಆಡಳಿತ ಮತ್ತು ಅವರನ್ನು ಆಯ್ಕೆ ಮಾಡುವ ಮತದಾರರು ಅಸಂಖ್ಯಾತ ಮತ್ತು ವಿವಿಧ ಸಂಸ್ಥೆಗಳ ಸಾಮರ್ಥ್ಯವನ್ನು ಅಳೆಯುವುದು ಕಷ್ಟದಾಯಕವಾಗಿದೆ. ಉದ್ದಿಮೆದಾರನು ಕೆಲವೊಮ್ಮೆ ನಿರ್ದಿಷ್ಟ ಕೈಗಾರಿಕಾ ಕ್ಷೇತ್ರದೆಡೆಗೆ ವಿಶೇಷವಾದ ಜ್ಞಾನವನ್ನು ಹೊಂದಿರಬೇಕಾಗುತ್ತದೆ, ಮೌಲ್ಯ ಮಾಡಬೇಕಾಗುತ್ತದೆ ನಂತರ ಪುರಸ್ಕಾರ ಅಥವಾ ಶಿಕ್ಷೆ ನೀಡಬೇಕಾಗುತ್ತದೆ, ಕೆಲವು ಸಂಸ್ಥೆಯಲ್ಲಿನ ಆಡಳಿತ ಮಂಡಳಿಯು ಇದನ್ನು ಬಹಳ ಸಮರ್ಥವಾಗಿ ನಡೆಸಿಕೊಂಡುಹೋಗುತ್ತದೆ. ಖಾಸಗೀ ಉದ್ಯಮದಾರನಿಂದಲ್ಲದೆ, ಸರ್ಕಾರವು ತೆರಿಗೆಯ ಮೂಲಕ ಅಥವಾ ಹಣವನ್ನು ಮುದ್ರಿಸುವ ಮೂಲಕ ಪಡೆಯುವ ಹಣವು ಸಾಕಾಗುವುದಿಲ್ಲ.

ಖಾಸಗಿ ಮತ್ತು ರಾಜ್ಯ ಸ್ವಾಮ್ಯದ ಸಂಸ್ಥೆಗಳು ಪರಸ್ಪರ ಸ್ಪರ್ಧೆಗೆ ಬಿದ್ದರೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸುಲಭವಾಗಿ ಸಾಲ ನೀಡುವ ಮಾರುಕಟ್ಟೆ ಸಂಸ್ಥೆಗಳಿಂದ ಹಣ ಪಡೆಯಬಹುದಾಗಿದೆ. ಆದರೆ ಖಾಸಗಿ ಸ್ವಾಮ್ಯದ ಸಂಸ್ಥೆಗಳಿಗೆ ಇದು ಕಷ್ಟ ಸಾಧ್ಯ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ತೆರಿಗೆ, ಮುದ್ರಣ ಮಾದ್ಯಮ ಮುಂತಾದವುಗಳ ಸಹಕಾರ ಇರುವುದರಿಂದ, ಇವುಗಳಿಂದ ಅವು ಸಾಧುವಲ್ಲದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ರಾಜ್ಯ ಸ್ವಾಮ್ಯದ ಲಾಭಾಪೇಕ್ಷೆಯಿಲ್ಲದ ಕಂಪನಿಯನ್ನು ಖಾಸಗೀಕರಣಗೊಳಿಸಿದರೆ ಕಂಪನಿಯು ಲಾಭ ಹೊಂದಲು ಹಣವನ್ನು ಸಂಗ್ರಹಿಸಲಾರಂಭಿಸಬಹುದು. ಇದು ರಾಜ್ಯವು ಈ ನಷ್ಟವನ್ನು ಭರಿಸಲು ತೆರಿಗೆಯನ್ನು ಬಳಸುವ ಅಗತ್ಯವನ್ನು ತೊಡೆದುಹಾಕುತ್ತದೆ.

ಖಾಸಗೀಕರಣದ ಪ್ರತಿಪಾದಕರು [who?] ಈ ಕೆಳಗಿನ ವಾದಗಳನ್ನು ಮಂಡಿಸುತ್ತಾರೆ:

  • ಕಾರ್ಯ ನಿರ್ವಹಣೆ ರಾಜ್ಯಸ್ವಾಮ್ಯದ ಸಂಸ್ಥೆಗಳು ಅಧಿಕಾರ ಶಾಹಿಯಾಗಿರುತ್ತದೆ. ರಾಜಕೀಯ ಪೂರಿತವಾದ ಸರ್ಕಾರವು ಇದರ ಕಾರ್ಯಾಚರಣೆಯು ರಾಜಕೀಯವಾಗಿ ಸೂಕ್ಷ್ಮವಾದಾಗ ಮಾತ್ರ ಉತ್ತಮಗೊಳಿಸಲು ಪ್ರಯತ್ನಿಸುತ್ತದೆ, ಮತ್ತು ಆ ಅಭಿವೃದ್ಧಿಯನ್ನು ಇನ್ನೊಂದು ಸರ್ಕಾರವು ನಾಶಗೊಳಿಸಬಹುದು.[ಸೂಕ್ತ ಉಲ್ಲೇಖನ ಬೇಕು]
  • ಹೆಚ್ಚಿದ ಸಾಮರ್ಥ್ಯ. ಖಾಸಗೀ ಕಂಪನಿಗಳು ಮತ್ತು ಸಂಸ್ಥೆಗಳು ಹೆಚ್ಚಿನ ವಸ್ತು ಮತ್ತು ಸೇವೆಗಳನ್ನೊದಗಿಸಲು ಮತ್ತು ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಇದರಿಂದ ಲಾಭವನ್ನು ಹೆಚ್ಚಿಸಿಕೊಳ್ಳಲು ಉತ್ತೇಜನಾ ಹಣವನ್ನು ನೀಡುತ್ತವೆ. ಸರ್ಕಾರವು ಸಂಪೂರ್ಣ ಆಯವ್ಯಯವನ್ನು ನಿರ್ವಹಿಸಬೇಕಾದುದರಿಂದಸಾರ್ವಜನಿಕ ಸಂಸ್ಥೆಗೆ ಒದಗಿಸಿದ ಅಲ್ಪ ಹಣದಿಂದ ಹೆಚ್ಚು ಉತ್ಪಾದಕವಾಗಲಾರದು. (ಸೂಚನೆ: ಸ್ಯಾಮೊಯೋಸನ್ ಕರಾರಿನ ಪ್ರಕಾರ , ಸಾರ್ವಜನಿಕ ಸಂಸ್ಥೆಯು ಹೆಚ್ಚಾಗಿ ಸಾರ್ವಜನಿಕ ವಸ್ತು ಅಥವಾ ಸೇವೆಯನ್ನೊದಗಿಸಲು ಬಯಸುತ್ತದೆ. ಸಾರ್ವಜನಿಕ ಸಂಸ್ಥೆಗಳು ವಸ್ತು ಮತ್ತು ಸೇವೆಯನ್ನು ಕಡಿಮೆ ಲಾಭವನ್ನಿಟ್ಟುಕೊಂಡು ಮಾರುತ್ತದೆ ಮತ್ತು ಉತ್ಪಾದನಾ ಉತ್ತೇಜಕ ಧನವು ಕಡಿಮೆಯಿರುತ್ತದೆ.)
  • ವಿಶೇಷತೆ. ಖಾಸಗೀ ವ್ಯವಹಾರವು ಎಲ್ಲಾ ಸಂಬಂಧಿತ ಮಾನವ ಮತ್ತು ಹಣಕಾಸಿನ ಮೂಲಗಳನ್ನು ನಿರ್ಧಿಷ್ಟ ಕಾರ್ಯಾಚರಣೆಯ ಮೂಲಕ ಕೆಂದ್ರೀಕರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಸಾಮಾನ್ಯ ವಸ್ತುಗಳನ್ನು ಬಯಸುವ ಅನೇಕ ಗ್ರಾಹಕರಿರುವುದರಿಂದ ರಾಜ್ಯ ಸ್ವಾಮ್ಯದ ಸಂಸ್ಥೆಯು ತನ್ನ ವಸ್ತುವನ್ನು ಮತ್ತು ಸೇವೆಯನ್ನು ವಿಶೇಷವಾಗಿಸಲು ಅಗತ್ಯ ಮೂಲಗಳನ್ನು ಹೊಂದಿರುವುದಿಲ್ಲ.
  • ಅಭಿವೃದ್ಧಿಗಳು. ಕಂಪನಿಯು ಉತ್ತಮವಾಗಿ ನಡೆಯುತ್ತಿದ್ದು ತನ್ನ ಗ್ರಾಹಕರ ಅಗತ್ಯವನ್ನು ಸಮರ್ಪಕವಾಗಿ ಪೂರೈಸುತ್ತಿದ್ದರೂ ಸರ್ಕಾರವು ತನ್ನ ರಾಜಕೀಯ ಸೂಕ್ಷ್ಮತೆಯಿಂದಾಗಿ ಮತ್ತು ತನ್ನ ಹಿತೋದ್ಧೇಶಗಳಿಗಾಗಿ ಕಂಪನಿಯ ಅಭಿವೃದ್ಧಿಯನ್ನು ತಡೆಹಿಡಿಯಬಹುದು.
  • ಭ್ರಷ್ಟಾಚಾರ. ರಾಜ್ಯ ಸ್ವಾಮ್ಯದ ಸಂಸ್ಥೆಯು ಭ್ರಷ್ಟಾಚಾರಕ್ಕೊಳಗಾಗುವ ಸಾದ್ಯತೆಯಿರುತ್ತದೆ; ಆರ್ಥಿಕ ಕಾರಣಗಳ ಬದಲಾಗಿ ಸ್ವ ಹಿತಾಸಕ್ತಿ (ಅಕ್ರಮ ಸಂಪಾದನೆ), ರಾಜಕೀಯ ಕಾರಣಗಳಿಂದಾಗಿ ನಿರ್ಧಾರಗಳು ಬದಲಾಗುತ್ತವೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಭ್ರಷ್ಟಾಚಾರವು (ಅಥವಾ ಇತರ ಮುಖ್ಯ ಕಾರ್ಯನಿರ್ವಾಹಕ ಕಾರಣಗಳು) ಕಂಪೆನಿಯೊಂದರ ಒಟ್ಟಾರೆ ಪ್ರಗತಿಗೆ ಮಾರಕವಾಗುತ್ತದೆ. ಆದರೆ ಖಾಸಗೀಕರಣ ಪ್ರಕ್ರಿಯೆಯ ಸಮಯದಲ್ಲಿ ಭ್ರಷ್ಟಾಚಾರ ನಡೆದಲ್ಲಿ ಅದು ಕಂಪೆನಿಗೆ ಒಮ್ಮೆ ಮಾತ್ರ ಸಂಭವಿಸುವ ನಷ್ಟವಾಗಿದ್ದು. ಭವಿಷ್ಯದಲ್ಲಿ ಕಂಪೆನಿಯ ಹಣಕಾಸು ವ್ಯವಸ್ಥೆಗೆ ಯಾವುದೇ ಗಂಭೀರ ಪರಿಣಾಮ ಬೀರುವುದಿಲ್ಲ.


  • ಲೆಕ್ಕಾಚಾರಸಾಮರ್ಥ್ಯ. ಖಾಸಗಿ ಸ್ವಾಮ್ಯದ ಕಂಪನಿಗಳಲ್ಲಿನ ನಿರ್ವಾಹಕರು ತಮ್ಮ ಯಜಮಾನರಿಗೆ/ಪಾಲುದಾರರಿಗೆ ಮತ್ತು ಗ್ರಾಹಕರಿಗೆ ಲೆಕ್ಕಾಚಾರವನ್ನೊದಗಿಸುತ್ತಾರೆ, ಅಗತ್ಯಗಳು ಪೂರೈಸಿದಾಗ ಮಾತ್ರ ಉಳಿಯಲು ಮತ್ತು ಬೆಳೆಯಲು ಸಾಧ್ಯವಾಗುತ್ತದೆ. ಸಾರ್ವಜನಿಕ ಕಂಪನಿಯ ನಿರ್ವಾಹಕರು ದೊಡ್ಡ ಸಮುದಾಯಕ್ಕೆ ಮತ್ತು ರಾಜಕೀಯ "ಪಾಲುದಾರರಿಗೆ" ಲೆಕ್ಕಾಚಾರವನ್ನೊದಗಿಸಬೇಕಾಗುತ್ತದೆ. ಇದು ಅವರ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಮತ್ತು ಗ್ರಾಹಕರ ಅಗತ್ಯವನ್ನು ಪೂರೈಸುವಲ್ಲಿ ಮತ್ತು ಬಂಡವಾಳ ಹೂಡಿಕೆ ಮತ್ತು ಲಾಭದ ಮೇಲೂ ಪರಿಣಾಮ ಬೀರುತ್ತದೆ.
  • ನಾಗರೀಕ ಸ್ವಾತಂತ್ರದ ಆಸ್ಥೆ. ರಾಜ್ಯಸ್ವಾಮ್ಯದ ಕಂಪನಿಯು ಅದರ ಆಸ್ತಿ ಮತ್ತಿತರ ಮಾಹಿತಿಗಳನ್ನು ಭಿನ್ನಮತೀಯರು ಅದರ ವಿರುದ್ಧವಾಗಿ ಬಳಸುವ ಸಾಧ್ಯತೆಗಳಿರುತ್ತದೆ.
  • ಗುರಿಗಳು. ರಾಜಕೀಯ ಪೂರಿತವಾದ ಸರ್ಕಾರ ಕಂಪನಿಯನ್ನು ಅಥವಾ ಕೈಗಾರಿಕೆಯನ್ನು ಆರ್ಥಿಕವಾಗಲ್ಲದೆ ತನ್ನ ರಾಜಕೀಯ ಉದ್ದೇಶಗಳಿಗಾಗಿ ನಡೆಸುತ್ತದೆ.
  • ಬಂಡವಾಳ. ಶ್ಥಳೀಯ ಮಾರುಕಟ್ಟೆಯಲ್ಲಿ ವಸ್ತುವು ಮಾರಾಟವಾಗುತ್ತಿರುವಾಗ ಮತ್ತು ಹಣದ ಹರಿವಿರುವಾಗ, ಖಾಸಗಿ ಕಂಪನಿಗಳು ಸುಲಭವಾಗಿ ಆರ್ಥಿಕ ಮಾರುಕಟ್ಟೆಯಲ್ಲಿ ಸುಲಭವಾಗಿ ಹಣವನ್ನು ಸಂಗ್ರಹಿಸುತ್ತವೆ. ಕೆಲವೊಮ್ಮೆ ಸರ್ಕಾರೀ ಸ್ವಾಮ್ಯದ ಕಂಪನಿಗಿಂತ ಖಾಸಗಿ ಕಂಪನಿಯ ಸಾಲದ ಬಡ್ದಿಯು ಹೆಚ್ಚಿರುತ್ತದೆ, ಹಣವನ್ನು ಮರುಪಾವತಿಸಲು ಇದು ಸರಕುಗಳ ಬೆಲೆ ಏರಿಸುವ ಬದಲಾಗಿ ಇದು ಖಾಸಗಿ ಕಂಪನಿಗೆ ಪ್ರಚಾರಮಾಡಲು ಸಹಾಯಕವಾಗಿದೆ. ಬಂಡವಾಳದ ನಿರ್ಧಾರಗಳನ್ನು ಮಾರುಕಟ್ಟೆಯ ಬಡ್ದಿಯ ದರವನ್ನವಲಂಬಿಸಿ ನಿರ್ವಹಿಸಲಾಗುತ್ತದೆ. ರಾಜಸ್ವಾಮ್ಯದ ಕೈಗಾರಿಕೆಗಳು ಇತರ ಸರ್ಕಾರೀ ಸ್ವಾಮ್ಯದ ವಿಭಾಗಗಳ ಮತ್ತು ವಿಶೇಷ ಆಸಕ್ತಿಗಳ ಬೇಡಿಕೆಯೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ಎರಡೂ ಸಂದರ್ಭದಲ್ಲಿ ಸಣ್ಣ ಮಾರುಕಟ್ಟೆಯಲ್ಲಿ ಬಂಡವಾಳದೊಂದಿಗೆ ರಾಜಕೀಯ ಅಪಾಯಗಳನ್ನೂ ಎದುರಿಸಬೇಕಾಗುತ್ತದೆ.
  • ಭದ್ರತೆ ಸರ್ಕಾರವು ಚೆನ್ನಾಗಿ ನಡೆಯದ ವ್ಯವಹಾರಗಳನ್ನು ದಿವಾಳಿಯಾಗಿಸುವ ಪ್ರವೃತ್ತಿಯನ್ನು ಹೊಂದಿದೆ, ಕೆಲವೊಮ್ಮೆ ಜನರು ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ, ಆರ್ಥಿಕವಾಗಿ ಸಂಕಷ್ಟದಲ್ಲಿರುವಾಗ ವ್ಯವಹಾರವನ್ನು ನಿಲ್ಲಿಸುವುದು ಉತ್ತಮ ವಿಧಾನವಾಗಿದೆ.
  • ಮಾರುಕಟ್ಟೆಯ ಶಿಸ್ತಿನ ಕೊರತೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಾಜ್ಯಸ್ವಾಮ್ಯದ ಕಂಪನಿಗಳು ದಿವಾಳಿಯಾದಾಗ, ಅದರ ನಿರ್ವಹಣಾ ಮಂಡಳಿಯನ್ನು ವಿಸರ್ಜಿಸಿದಾಗ ಅಥವಾ ಪ್ರತಿಸ್ಪರ್ಧಿಗಳಿಂದ ಆಕ್ರಮಿಸಲ್ಪಟ್ಟಾಗ ಖಾಸಗಿ ಕಂಪನಿಗಳಂತೆ ವರ್ತಿಸುತ್ತದೆ. ಖಾಸಗೀ ಕಂಪನಿಗಳೂ ಸಹ ಹೆಚ್ಚಿನ ಅಪಾಯಗಳನ್ನೆದರಿಸುತ್ತವೆ ಮತ್ತು ನಂತರ ಸಾಲಗಾರರಿಂದ ತಪ್ಪಿಸಿಕೊಳ್ಳಲು ದಿವಾಳಿ ಎಂದು ಘೋಷಿಸುತ್ತವೆ.
  • ಸಹಜ ಸ್ವಾಮ್ಯತೆ. ಸಹಜ ಸ್ವಾಮ್ಯತೆಯ ಅಸ್ಥಿತ್ವವೆಂದರೆ ಈ ವಲಯಗಳು ರಾಜ್ಯಸ್ವಾಮ್ಯದಲ್ಲಿದೆ ಎಂದು ಅರ್ಥವಲ್ಲ. ಸರ್ಕಾರಗಳು ಶಾಸನ ಮಾಡಬಹುದು ಅಥವಾ ಆ‍ಯ್೦ಟಿ ಟ್ರಸ್ಟ್‌ ಶಾಸನವನ್ನು ಜಾರಿಗೊಳಿಸಬಹುದು ಮತ್ತು ಅದರಿಂದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಸ್ಪರ್ಧೆಗೆ ವಿರುದ್ಧವಾದ ಗುಣವನ್ನು ನಿಯಂತ್ರಿಸಬಹುದು.
  • ಸ್ವತ್ತಿನ ಸಂಗ್ರಹ ಯಜಮಾನಿಕೆ ಮತ್ತು ಯಶಸ್ವೀ ಸಂಸ್ಥೆಗಳ ಲಾಭವನ್ನು ಖಾಸಗೀಕರಣದಿಂದ ಚದರಿಸಬಹುದು ಮತ್ತು ವರ್ಗಾಯಿಸಬಹುದು. ಹೆಚ್ಚಿನ ಬಂಡವಾಳ ಮಾಧ್ಯಮದ ಲಭ್ಯತೆಯು ಬಂಡವಾಳ ಮಾರುಕಟ್ಟೆಯನ್ನು ಪ್ರೆರೇಪಿಸುತ್ತದೆ ಮತ್ತು ಹಣದ ಕೆಲಸವನ್ನು ಮತ್ತು ಒಳಹರಿವನ್ನು ನಿರ್ಮಾಣನ್ನುಂಟುಮಾಡುತ್ತದೆ.
  • ರಾಜಕೀಯ ಪ್ರಭಾವ. ರಾಜಕೀಯ ಮತ್ತು ಅನೇಕ ಸ್ವಹಿತಾಸಕ್ತಿಯ ಕಾರಣಗಳಿಗಾಗಿ ರಾಜಕೀಯ ನಾಯಕರು ರಾಷ್ಟ್ರೀಕೃತ ಕೈಗಾರಿಕೆಗಳಲ್ಲಿ ಮಧ್ಯಪ್ರವೇಶಿಸುತ್ತಾರೆ. ಉದಾಹರಣೆಗೆ: ಕೈಗಾರಿಕೆಯು ಸ್ಥಳೀಯ ಉತ್ಪಾದಕರಿಂದ (ವಿದೇಶಿ ವಸ್ತುಗಳಿಗಿಂತ ಹೆಚ್ಚಿನ ಬೆಲೆಗೆ) ಕೊಂಡುಕೊಳ್ಳುವಂತೆ ಮಾಡುವುದು, ಹಣದುಬ್ಬರವನ್ನು ನಿಯಂತ್ರಿಸಲು ಕೈಗಾರಿಕೆಗೆ ತನ್ನ ಉತ್ಪನ್ನದ ದರವನ್ನು ಕಡಿಮೆ ಮಾಡುವಂತೆ ಒತ್ತಡ ಹೇರುವುದು, ನಿರುದ್ಯೋಗವನ್ನು ಕಡಿಮೆ ಮಾಡಲು ಹೆಚ್ಚಿನ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುವುದು, ಅಥವಾ ಇದನ್ನು ಹಿಂದುಳಿದ ಪ್ರದೇಶಗಳಿಗೆ ಇದನ್ನು ಸ್ಥಳಾಂತರಿಸುವುದು.
  • ಲಾಭಗಳು. ನಿಗಮಗಳು ತನ್ನ ಪಾಲುದಾರರಿಗೆ ಲಾಭವನ್ನುಂಟುಮಾಡಲಿಕ್ಕಾಗಿ ಇರುತ್ತವೆ. ಖಾಸಗಿ ಕಂಪನಿಗಳು ತನ್ನ ಪ್ರತಿಸ್ಪರ್ಧಿಗಿಂತ ಹೆಚ್ಚಾಗಿ ಗ್ರಾಹಕರನ್ನು ಆಕರ್ಷಿಸಿ ತನ್ನ ವಸ್ತುವನ್ನು ಕೊಳ್ಳುವಂತೆ ಮಾಡುವುದು (ಪ್ರಾಥಮಿಕ ಬೇಡಿಕೆಯನ್ನು ಹೆಚ್ಚುವಂತೆ ಮಾಡಿ ಅಥವಾ ಬೆಲೆಯನ್ನು ಕಡಿಮೆ ಮಾಡಿ). ಖಾಸಗಿ ನಿಗಮಗಳು ತನ್ನ ಗ್ರಾಹಕರ ಬೇಡಿಕೆಯನ್ನು ಸರಿಯಾಗಿ ಪೂರೈಸುತಿದ್ದರೆ ಹೆಚ್ಚಾಗಿ ಲಾಭವನ್ನೂ ಪಡೆಯುತ್ತವೆ. ವಿವಿಧ ಗಾತ್ರದ ನಿಗಮಗಳು ವಿವಿಧ ಮಾರುಕಟ್ಟೆಯನ್ನು ಗುರಿಯಾಗಿಸಿಕೊಳ್ಳುತ್ತದೆ ಮತ್ತು ನಿರ್ಧಿಷ್ಟ ಗ್ರಾಹಕರನ್ನು ಕೇಂದ್ರೀಕರಿಸಿ ಅವರ ಬೇಡಿಕೆಗಳನ್ನು ಪೂರೈಸುತ್ತದೆ. ಒಳ್ಳೆಯ ನಿಗಮದ ಆಡಳಿತವನ್ನು ಹೊಂದಿರುವ ಕಂಪನಿಯು ತನ್ನ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಸಮರ್ಥವಾಗಿರುತ್ತದೆ.
  • ಕೆಲಸ ದೊರೆಯುವಿಕೆ. ಆರ್ಥಿಕತೆಯು ಹೆಚ್ಚು ಸಮರ್ಥವಾದಂತೆ ಹೆಚ್ಚು ಲಾಭವಾಗುತ್ತಾ ಸಾಗುತ್ತದೆ, ಮತ್ತು ಸರ್ಕಾರವು ಅನುದಾನವನ್ನು ಬಯಸುವುದಿಲ್ಲ ಮತ್ತು ಹೆಚ್ಚಿನ ತೆರಿಗೆಯ ಅವಶ್ಯಕತೆಯಿರುವುದಿಲ್ಲ, ಹೆಚ್ಚಿನ ನಿಯಂತ್ರಿತ ಆರ್ಥಿಕತೆಯ ಸಂದರ್ಭದಲ್ಲಿ ಹೆಚ್ಚಿನ ಖಾಸಗಿ ಹಣವು ಬಂಡವಾಳಕ್ಕೆ ಮತ್ತು ಬಳಕೆಗೆ ಲಭ್ಯವಾಗುತ್ತದೆ ಮತ್ತು ಹೆಚ್ಚು ಲಾಭದಾಯಕವಾಗುತ್ತದೆ ಮತ್ತು ಹೆಚ್ಚು ಸಂಬಳದ ಕೆಲಸಗಳು ಸೃಷ್ಟಿಯಾಗುತ್ತವೆ.[][unreliable source?]

ವಿರೋಧತೆ

[ಬದಲಾಯಿಸಿ]

ಖಾಸಗೀಕರಣದ ವಿರೋಧಿಗಳು ಹೇಳುವಂತೆ ಖಾಸಗೀಕರಣದಲ್ಲಿ ಸರ್ಕಾರಕ್ಕೆ ದೊರಕುವ ಲಾಭಾಂಶ ಕಡಿಮೆ ಪ್ರಮಾಣದ್ದಾಗಿದ್ದು, ಸರ್ಕಾರ ಈ ಮೂಲಕ ಜನರಿಗೆ ತಾವು ಉತ್ತಮವಾದ ಸೇವೆ ನೀಡುತ್ತಿದ್ದೇವೆ ಎಂದು ತೋರಿಸಿಕೊಳ್ಳುವಂತಾಗುತ್ತದೆ. ಅಲ್ಲದೆ ಇಲ್ಲಿ ಸರ್ಕಾರವು ಅಧಿಕೃತ ಮಾಲಿಕನಾಗಿದ್ದು ಜನರಿಗೆ ಇವರೇ ಉತ್ತರ ನೀಡಬೇಕಾಗಿರುತ್ತದೆ.[who?] ಇದರ ವಾದದ ಪ್ರಕಾರ ಸರ್ಕಾರ ನಡೆಸುತ್ತಿರುವ ರಾಷ್ಟ್ರೀಕೃತ ಕೈಗಾರಿಕೆಗಳು ಚೆನ್ನಾಗಿ ನಿರ್ವಹಿಸಲ್ಪಟ್ಟರೆ ಸರ್ಕಾರವು ಜನರ ಬೆಂಬಲವನ್ನು ಮತ್ತು ಮತವನ್ನು ಪಡೆದುಕೊಳ್ಳುತ್ತದೆ ಇಲ್ಲವಾದಲ್ಲಿ ಕಳೆದುಕೊಳ್ಳುತ್ತವೆ. ಆದ್ದರಿಂದ ತನ್ನ ಭವಿಷ್ಯದ ಚುನಾವಣೆಗಳಿಗಾಗಿ ಪ್ರಜಾಪ್ರಭುತ್ವ ಸರ್ಕಾರವು ರಾಷ್ಟ್ರೀಕೃತ ಕಂಪನಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಉತ್ತೇಜಕವಾಗಿರಬೇಕಾಗುತ್ತದೆ.

ಕೆಲವು ಖಾಸಗೀಕರಣದ ವಿರೋಧಿಗಳ ನಂಬಿಕೆಯ ಪ್ರಕಾರ ಸಾರ್ವಜನಿಕ ವಸ್ತು ಮತ್ತು ಸೇವೆಗಳು ಸರ್ಕಾರದ ಹಿಡಿತದಲ್ಲಿರಬೇಕು, ಇದರಿಂದ ಎಲ್ಲಾ ವರ್ಗದ ಜನರೂ ಪಡೆಯುವಂತಾಗುತ್ತದೆ (ಅವೆಂದರೆ ಕಾನೂನು, ಮೂಲಭೂತ ಆರೋಗ್ಯ ರಕ್ಷಣೆ, ಮತ್ತು ಮೂಲಭೂತ ಶಿಕ್ಷಣ). ಹಾಗೆಯೇ ಖಾಸಗೀ ಸರಕುಗಳು ಮತ್ತು ಸೇವೆಗಳು ಖಾಸಗೀ ವಲಯದಲ್ಲಿಯೇ ಉಳಿಯಬೇಕು. ಸರ್ಕಾರವು ಸಾರ್ವಜನಿಕ ಸರಕು ಮತ್ತು ಸೇವೆಗಳನ್ನು ಸಾಮಾಜದ ದೊಡ್ಡ ಸಮುದಾಯಕ್ಕೆ ಒದಗಿಸಬಲ್ಲುದಾಗಿದೆ ಅವೆಂದರೆ ರಕ್ಷಣೆ ಮತ್ತು ರೋಗ ನಿಯಂತ್ರಣದಿಂದ ಧನಾತ್ಮಕ ಪರಿಣಾಮಗಳುಂಟಾಗುತ್ತದೆ. ಅದರಂತೆ ಸಹಜ ಸ್ವಾಮ್ಯತೆಯಿಂದಾಗಿ ರಾಜ್ಯ ಸ್ವಾಮ್ಯದ ಆಡಳಿತವು ಉತ್ತಮ ಸ್ಪರ್ಧೆಯನ್ನು ನೀಡಲು ಸಾಧ್ಯವಾಗುವುದಿಲ್ಲ.

ಖಾಸಗೀಕರಣದ ವಿರುದ್ಧದ ನೈತಿಕ ವಿಷಯಗಳನ್ನು ನಿಯಂತ್ರಿಸುವ ದೃಷ್ಟಿಕೋನವು ಸಾಮಾಜಿಕ ನಿಯೋಗಗಳ ಜವಬ್ಧಾರಿಯುತ ನಿರ್ವಹಣೆಗೆ ಅಗತ್ಯವಾಗಿದೆ. ಮಾರುಕಟ್ಟೆಯ ನಿರ್ಣಯಗಳು ಸ್ವಹಿತಾಸಕ್ತಿಯಿಂದ ಕೂಡಿರುತ್ತದೆ, ಮತ್ತು ಆರೋಗ್ಯಕರ ಮಾರುಕಟ್ಟೆಯಲ್ಲಿ ಗಣ್ಯರು ಮರುಕಟ್ಟೆಯು ತಾಳಿಕೊಳ್ಳುವಂತಹ ಗರಿಷ್ಠ ಬೆಲೆಗೆ ಬದ್ಧರಾಗಿರಬೇಕಾಗುತ್ತದೆ. ಖಾಸಗೀಕರಣದ ವಿರೋಧಿಗಳ ಪ್ರಕಾರ ಈ ಮಾದರಿಯು ಸರ್ಕಾರದ ಕಾರ್ಯಾಚರಣೆಯ ಪ್ರಮುಖ ಉದ್ಧೇಶಗಳಾದ ಸಮಾಜಕ್ಕೆ ನಿಗದಿತ ಬೆಲೆಯ ಸರಕು ಮತ್ತು ಗುಣಮಟ್ಟದ ಸೇವೆಯೊಂದಿಗೆ ಸ್ಪರ್ಧಿಸುವುದಿಲ್ಲ.

ಅನೇಕ ಖಾಸಗೀಕರಣದ ವಿರೋಧಿಗಳು [who?] ಭ್ರಷ್ಟಾಚಾರದ ವಿರುದ್ಧವಾಗಿಯೂ ಎಚ್ಚರಿಸಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ಸರ್ಕಾರವು ಲಾಭರಹಿತವಾಗಿ ಸೇವೆ ಸಲ್ಲಿಸಬೇಕಾಗುತ್ತದೆ, ಮತ್ತು ಖಾಸಗಿ ಕಂಪನಿಗಳಿಗೆ ಇದನ್ನು ಗುತ್ತಿಗೆಯ ಮೂಲಕ ನೀಡಿ ಅಥವಾ ಪಾವತಿಸಬೇಕಾದ ಹಣವನ್ನು ತಡೆಹಿಡಿಯುವ ಮೂಲಕ ಸಾಧಿಸಬೇಕಾಗುತ್ತದೆ. ಈ ಸಂದರ್ಭಗಳಲ್ಲಿ ಖಾಸಗಿ ಸಂಸ್ಥೆಗಳ ಕಾರ್ಯದಕ್ಷತೆಗೆ ಅನುಗುಣವಾಗಿ ಯೋಜನೆಗಳನ್ನು ನೀಡಬೇಕಾಗುತ್ತದೆ, ಮತ್ತು ಹೆಚ್ಚಿನ ಲಾಭಗಳಿಸಲು ಹಣ ನುಂಗಿಹಾಕುವಿಕೆ ಮತ್ತು ಹೆಚ್ಚುವರಿ ಬೆಲೆಯನ್ನು ಕಡಿತಗೊಳಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಅದಲ್ಲದೆ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಿಗೆ ದೊಡ್ಡ ನಿಗಮಗಳು ಖಾಸಗೀಕರಣ ಉತ್ತಮವಾದುದೆಂದು ನಿರ್ಣಯ ತೆಗೆದುಕೊಳ್ಳುವವರಿಗೆ ಮನವೊಲಿಸಲು ಹಣ ಪಾವತಿಸುತ್ತಾರೆ. ನಿಗಮಗಳು ಪ್ರಮಾಣೀಕರಿಸಲು, ಜಾಹಿರಾತುಗಳಿಗೆ, ಸಮ್ಮೇಳನಗಳಿಗೆ, ಮತ್ತು ಇತರ ಪ್ರಸಾರಣಾ ಕಾರ್ಯಗಳಿಗೆ ಖಾಸಗೀಕರಣದ ವಿರೋಧಿಗಳಿಗಿಂತ ಹೆಚ್ಚಿನ ಮೂಲಸೌಕರ್ಯಗಳನ್ನು ಹೊಂದಿರುತ್ತಾರೆ.

ಕೆಲವರ ಪ್ರಕಾರ [who?] ಕೆಲವು ಸರ್ಕಾರೀ ಕಾರ್ಯಗಳನ್ನು ಖಾಸಗೀಕರಣಗೊಳಿಸುವುದು ಸಹಭಾಗಿತ್ವಕ್ಕೆ ಧಕ್ಕೆಯನ್ನುಂಟುಮಾಡುತ್ತದೆ, ಮತ್ತು ಸೀಮಿತವಾದ ಸಾಮರ್ಥ್ಯವನ್ನುಳ್ಳ ಸಂಸ್ಥೆಗಳು ಕೈಗೊಂಡ ಕಾರ್ಯುಗಳು ಸೂಕ್ತವಾಗಿರುವುದಿಲ್ಲ. ಯುದ್ಧದಿಂದ ಹಾನಿಗೊಳಗಾದ ದೇಶವನ್ನು ಪುನರ್ನಿರ್ಮಿಸುವಾಗ, ಉದಾಹರಣೆಗೆ ಖಾಸಗೀ ಕಂಪನಿಗಳು ರಕ್ಷಣೆಯನ್ನೊದಗಿಸಲು ಒಂದೋ ಕಡಿಮೆ ಕಾವಲುಗಾರರನ್ನು ನೇಮಕ ಮಾಡಿಕೊಳ್ಳಬೇಕು, ಇದರಿಂದಾಗಿ ಅವರ ಕಾರ್ಯಗಳು ಹೆಚ್ಚಾಗುತ್ತವೆ, ಅಥವಾ ಆಧಿಪತ್ಯವನ್ನು ಹಂಚಿಕೊಂಡು ಸರ್ಕಾರದೊಂದಿಗೆ ಸಹಕರಿಸಬೇಕು, ಇದು ಕಷ್ಟಕರವಾಗಿರುತ್ತದೆ. ಇನ್ನೊಂದೆಡೆ ಸರ್ಕಾರದ ಎಜೆನ್ಸಿಗಳು ದೇಶದ ಸಂಪೂರ್ಣ ಸೈನ್ಯವನ್ನು ರಕ್ಷಣೆಗಾಗಿ ಬಳಸಬಹುದು, ಇದರ ಆಧಿಪತ್ಯವನ್ನು ವಿವರವಾಗಿ ವ್ಯಾಖ್ಯಾನಿಸಲಾಗಿದೆ. ವಿರೋಧಿಗಳು ಇದು ತಪ್ಪಾದ ಸಮರ್ಥನೆಯೆಂದು ಹೇಳುತ್ತಾರೆ: ಸರ್ಕಾರದ ಕಳಪೆಯಾದ ನಿರ್ವಹಣೆಯನ್ನು ಅನೇಕ ಪುಸ್ತಕಗಳು ಉಲ್ಲೇಖಿಸಿವೆ (ಕತ್ರಿನಾ ಬಿರುಗಾಳಿಯನ್ನು ಉದಾಹರಿಸಬಹುದು).

ಸರ್ಕಾರದ ಜೊತೆಜೊತೆಗೆ ಖಾಸಗೀ ಕಂಪನಿಗಳು ಉತ್ತಮ ಸರಕು ಮತ್ತು ಸೇವೆಗಳನ್ನೊದಗಿಸಿದರೂ ಖಾಸಗೀಕರಣದ ವಿರೋಧಿಗಳು ಸಾರ್ವಜನಿಕ ಸರಕು, ಸೇವೆಗಳು ಮತ್ತು ಆಸ್ತಿಗಳನ್ನು ಖಾಸಗೀ ವ್ಯಕ್ತಿಗಳಿಗೆ ಸಂಪೂರ್ಣವಾಗಿ ಹಸ್ತಾಂತರಿಸಲು ಈ ಕೆಳಗಿನ ಕಾರಣಗಳಿಗಾಗಿ ಎಚ್ಚರಿಕೆಯಿಂದಿರಿತ್ತಾರೆ.

  • ಸಾಧನೆ ಪ್ರಜಾಸತ್ತೀಯವಾಗಿ ಆರಿಸಲ್ಪಟ್ಟ ಸರ್ಕಾರವು ಕಾಂಗ್ರೆಸ್ ಅಥವಾ ಸಂಸತ್ತಿನ ಶಾಸಕಾಂಗದ ಮೂಲಕ ರಾಷ್ಟ್ರದ ಸ್ವತ್ತಿನ ರಕ್ಷಣೆ ಮಾಡುವ ಜವಾಬ್ದಾರಿ ಹೊಂದಿರುತ್ತದೆ. ಲಾಭವು ಸಾಮಾಜಿಕ ಉದ್ದೇಶಕ್ಕೆ ಪ್ರಚೋದನೆ ನೀಡಬಹುದು.
  • ಸಾರ್ವಜನಿಕ ಸರಕು ಮತ್ತು ಸೇವೆಗಳಿಗೆ ಮಾರುಕಟ್ಟೆ ದಕ್ಷತೆ ಹೆಚ್ಚಾಗುತ್ತದೆ. ಸ್ಯಾಮ್ಯುಲ್ಸನ್ ಸ್ಥಿತಿ ಸಿದ್ಧಾಂತ ಮತ್ತು ಅಂಚಿನ ಸಾಮಾಜಿಕ ಕಲ್ಯಾಣ ರೇಖೆ (Marginal Social Benefit Curve) ಸಿದ್ಧಾಂತದ ಪ್ರಕಾರ ಸಾರ್ವಜನಿಕ ಸರಕು ಮತ್ತು ಸೇವೆಗಳನ್ನು ಹೆಚ್ಚಿಸಲು ಸಾರ್ವಜನಿಕ ಸಂಸ್ಥೆಗಳು ಬಯಸುತ್ತವೆ. ಇದು ಹೆಚ್ಚಿನ ಉತ್ತಮ ಧನಾತ್ಮಕವಾದ ಬೆಳವಣಿಗೆಯನ್ನು ಸಮಾಜದಲ್ಲಿ ತರಲು ಸಹಾಯಕವಾಗುತ್ತದೆ. ಇನ್ನೊಂದು ಪ್ರಕಾರವಾಗಿ ಖಾಸಗಿ ಸಂಸ್ಥೆಗಳು ದಕ್ಷತೆಯಿಂದ ಸಾರ್ವಜನಿಕ ಸರಕು ಮತ್ತು ಸೇವೆಗಳನ್ನು ಒದಗಿಸುವುದಿಲ್ಲ ಏಕೆಂದರೆ ಇವುಗಳು ಮಾರ್ಜಿನಲ್ ಪ್ರೈವೇಟ್ ಬೆನೆಫಿಟ್ ಕರ್ವ್ ಅಥವಾ ಪ್ರೈವೇಟ್ ಡಿಮಾಂಡ್ ಕರ್ವ್ ಆಧಾರದ ಮೇಲೆ ಒದಗಿಸುತ್ತವೆ. ಖಾಸಗಿ ಸಂಸ್ಥೆಗಳು ಹೆಚ್ಚು ಲಾಭಗಳಿಸಲು ಕಡಿಮೆ ಸರಕುಗಳ ಪೂರೈಕೆ ಮಾಡುತ್ತವೆ. ಆದ್ದರಿಂದ ಸಮಾಜಕ್ಕೆ ಸಾರ್ವಜನಿಕ ಸಂಸ್ಥೆಗಳು ಸಾರ್ವಜನಿಕ ಸರಕುಗಳು ಮತ್ತು ಸೇವೆಗಳನು ಹೆಚ್ಚು ದಕ್ಷತೆಯಿಂದ ಒದಗಿಸುತ್ತವೆ. (ಮಾರ್ಜಿನಲ್ ಸೋಷಿಯಲ್ ಬೆನೆಫಿಟ್ಸ್, ಮಾರ್ಜಿನಲ್ ಸೋಷಿಯಲ್ ವೆಚ್ಚಕ್ಕೆ ಸಮನಾಗಿದ್ದಾಗ ಯಾವುದೇ ಮಾರುಕಟ್ಟೆಯು ಸಮಾಜಕ್ಕೆ ಹೆಚ್ಚು ದಕ್ಷತೆಯಿಂದ ಕೆಲಸ ನಿರ್ವಹಿಸುತ್ತವೆ, MSB=MSC.)
  • ಸುಧಾರಣೆಗಳು.ಸರ್ಕಾರವು ರಾಜ್ಯದ ಆದಾಯಕ್ಕೆ ಕೊಡುಗೆ ನೀಡಲು ಉದ್ಯಮವನ್ನು ಅಭಿವೃದ್ಧಿ ಪಡಿಸಲು ಪ್ರಚೋದನೆ ನೀಡುತ್ತದೆ.
  • ಭ್ರಷ್ಟಾಚಾರ. ಸರ್ಕಾರ ಮತ್ತು ಸಾರ್ವಜನಿಕ ನೌಕರರು, ಉನ್ನತವಾದ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಾರೆ. ಅಲ್ಲದೆ ಕೆಲವು ನಡಾವಳಿ ನಿಯಮಗಳ ಪ್ರಕಾರ ಪ್ರಾಮಾಣಿಕವಾದ ಸೇವೆಯನ್ನು ಕೊಡಬೇಕಾಗುತ್ತದೆ. ಅದೇನೆ ಇದ್ದರೂ ಮಾರಾಟದ ಪ್ರಕ್ರಿಯೆಯು ಕಡಿಮೆ ಪಾರದರ್ಶಕತೆಯನ್ನು ಹೊಂದಿರುತ್ತದೆ. ಇದರಲ್ಲಿ ಸರ್ಕಾರಿ ನೌಕರರು ಹೆಚ್ಚಾಗಿ ಮಾರಾಟದ ಪ್ರಕ್ರಿಯೆಯನ್ನು ತಮ್ಮ ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುವ ಅವಕಾಶ ಹೆಚ್ಚು.
  • ಹೊಣೆಗಾರಿಕೆ. ಸಾರ್ವಜನಿಕರು ಖಾಸಗಿ ಕಂಪನಿಗಳ ಮೇಲೆ ಯಾವುದೇ ನಿಯಂತ್ರಣ ಅಥವಾ ಮೇಲ್ವಿಚಾರಣೆ ಹೊಂದಿರುವುದಿಲ್ಲ.

.

  • ಸಾರ್ವಜನಿಕ ಸ್ವಾತಂತ್ರ ಆಸಕ್ತಿ. ಪ್ರಜಾಸತ್ತೀಯವಾಗಿ ಆರಿಸಲ್ಪಟ್ಟ ಸರ್ಕಾರವು ಸಂಸತ್ತಿನ ಮೂಲಕ ಸಾರ್ವಜನಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾದಾಗ ಮಧ್ಯ ಪ್ರವೇಶಿಸಬೇಕಾಗುತ್ತದೆ.
  • ಗುರಿಗಳು. ದೇಶದ ಮುಂದುವರಿಕೆಗಾಗಿ ಸರ್ಕಾರವು ಕಂಪನಿಗಳನ್ನು ಸಾಧನವಾಗಿ ಬಳಸಿಕೊಂಡು ಹೆಚ್ಚಿನ ಸಾಮಾಜಿಕ ಗುರಿಗಳನ್ನು ಸಾಧಿಸಲು ಬಳಸಿಕೊಳ್ಳಬೇಕು.
  • ಬಂಡವಾಳ. ರಾಜ್ಯ ಒಡೆತನದ ಉದ್ದಿಮೆಗೆ ಸರ್ಕಾರವು ಹಣಕಾಸು ಮಾರುಕಟ್ಟೆಯಲ್ಲಿ ಹಣದ ಹರಿವನ್ನು ಹೆಚ್ಚು ಮಾಡಿ ಕಡಿಮೆ ಬಡ್ಡಿದರದಲ್ಲಿ ಪುನಃ ಸಾಲವನ್ನು ನೀಡಬೇಕು.
  • ತಂತ್ರಗಳು ಮತ್ತು ಸೂಕ್ಷ್ಮ ಪ್ರದೇಶಗಳು. ತಾಂತ್ರಿಕ ಮಹತ್ವವುಳ್ಳ ಮತ್ತು ಸೂಕ್ಷ್ಮ ಸ್ವರೂಪದ ಆಯ್ದ ಕೆಲವು ಕಂಪನಿಗಳನ್ನು ಅಥವಾ ಉದ್ದಿಮೆಗಳನ್ನು ಸರ್ಕಾರಗಳು ಹಿಡಿತದಲ್ಲಿಟ್ಟುಕೊಳ್ಳಬೇಕು.
  • ಆವಶ್ಯಕವಾದ ಸೇವೆಗಳಲ್ಲಿ ಕಡಿತ. ಅವಶ್ಯಕವಾದ ಸೇವೆಗಳನ್ನು ಪೂರೈಸುತ್ತಿರುವ ಸರ್ಕಾರಿ ಸ್ವಾಮ್ಯದ ಕಂಪನಿಯನ್ನು ಖಾಸಗೀಕರಣ ಗೊಳಿಸಿದರೆ (ನೀರು ಪೂರೈಕೆಯಂತಹ) ಆದರ ಮಾಲೀಕ(ರು)ನು ಹಣವನ್ನು ನೀಡಲು ಸಾಧ್ಯವಲ್ಲದವರಿಗೆ ಮತ್ತು ಸೇವೆಯನ್ನು ನೀಡುತ್ತಿರುವ ಪ್ರದೇಶದಿಂದ ಲಾಭವಾಗದಿದ್ದಲ್ಲಿ ಸಾಮಾಜಿಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಾನೆ.
  • ಸ್ವಾಭಾವಿಕವಾದ ಏಕಸ್ವಾಮ್ಯಗಳು. ಸ್ವಾಭಾವಿಕವಾದ ಏಕಸ್ವಾಮ್ಯವು ಕೊನೆಗೊಂಡರೆ ಖಾಸಗೀಕರಣವು ನಿಜವಾಗಿಯೂ ಸ್ಪರ್ಧೆಯಾಗಿರುವುದಿಲ್ಲ.
  • ಸಂಪತ್ತಿನ ಮೇಲೆ ಕೇಂದ್ರಿಕರಣ. ಒಂದು ಯಶಸ್ವಿ ಉದ್ದಿಮೆಯಿಂದ ಲಾಭ ಬಂದರೆ ಅದು ಸಮಾಜದ ಒಳಿತಿಗಾಗಿ ಬಳಕೆಯಾಗದೆ ಒಬ್ಬ ವ್ಯಕ್ತಿಗೆ ಅಥವಾ ವಿದೇಶಗಳಿಗೆ ಹೋಗುತ್ತದೆ.
  • ರಾಜಕೀಯ ಪ್ರಭಾವ. ಸರ್ಕಾರಗಳು ಸರ್ಕಾರೀ ಸ್ವಾಮ್ಯದ ಸಂಸ್ಥೆಗಳಲ್ಲಿ ಸರ್ಕಾರೀ ನಿಯಮಗಳನ್ನು ಅಳವಡಿಸುವಾಗ ಅತ್ಯಂತ ಸುಲಭವಾಗಿ ಒತ್ತಡವನ್ನುಂಟುಮಾಡಬಹುದು.
  • ಕಡಿತಗೊಳಿಸುವಿಕೆ. ಖಾಸಗೀ ಕಂಪನಿಗಳು ಹಲವಾರು ಬಾರಿ ಲಾಭ ಮತ್ತು ಸೇವಾ ಹಂತಗಳ ನಡುವೆ ಘರ್ಷಣೆಯನ್ನೆದರಿಸುತ್ತದೆ, ಮತ್ತು ಅಲ್ಪಾವಧಿಯ ಘಟನೆಗಳಲ್ಲಿ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ. ರಾಜ್ಯಸ್ವಾಮ್ಯದ ಕಂಪನಿಗಳು ದೂರದೃಷ್ಟಿಯನ್ನು ಹೊಂದಿರಬಹುದು,ಮತ್ತು ನಷ್ಟದಲ್ಲಿರುವ ಕೆಲವು ಸಂದರ್ಭಗಳಲ್ಲಿ ಸಂರಕ್ಷಣೆ, ಸುಬ್ಬಂದಿ ವೆಚ್ಚ ಮತ್ತು ತರಬೇತಿಗಳಂತಹುದನ್ನು ಕಡಿತಗೊಳಿಸಬಹುದು. ಅನೇಕ ಕಂಪನಿಗಳು ಲಾಭಗಳಿಸುತ್ತಿರುವಾಗ ಹೆಚ್ಚಿನದನ್ನು ಕಡಿತಗೊಳಿಸುತ್ತಾರೆ.
  • ಲಾಭ ಖಾಸಗಿ ಸಂಸ್ಥೆಗಳು ಲಾಭವನ್ನು ಗರಿಷ್ಠಗೊಳಿಸುವುದನ್ನು ಬಿಟ್ಟು ಬೆರೆ ಯಾವುದೇ ಗುರಿಯನ್ನು ಹೊಂದಿರುವುದಿಲ್ಲ. ಖಾಸಗೀ ಕಂಪನಿಯು ಹಣ ಪಾವತಿಸಲು ಸಮರ್ಥವಾದವರಿಗೆ ಮಾತ್ರ ಸೇವೆಯನ್ನೊದಗಿಸುತ್ತದೆ, ಹೀಗಾಗಿ ಇದು ಪ್ರಜಾಪ್ರಭುತ್ವದ ವಿರೋಧಿಯಾಗಿರುತ್ತದೆ. ಹೆಚ್ಚು ಅಗತ್ಯವಾದ ಸರಕುಗಳಿಗೆ ಬೇಡಿಕೆಗೆ ತಕ್ಕಂತೆ ಬೆಲೆಯನ್ನು ನಿಗದಿಪಡಿಸುತ್ತಾರೆ, ಜನರು ಹಣವನ್ನು ಗಮನದಲ್ಲಿರಿಸಿಕೊಳ್ಳದೆ ಖರೀದಿಸಬೇಕಾಗುತ್ತದೆ. ಬೇಡಿಕೆಗೆ ತಕ್ಕಂತೆ ಹಣವನ್ನು ನಿಗದಿ ಪಡಿಸುವ ಸಂದರ್ಭದಲ್ಲಿ ಬೇಡಿಕೆಯಿಲ್ಲವಾದರೆ (ಬೇಡಿಕೆ ಸೊನ್ನೆಯಾದಾಗ) ಬೇಡಿಕೆಯ ಸಿದ್ದಾಂತಗಳು ಕೆಲಸಕ್ಕೆ ಬರುವುದಿಲ್ಲ.
  • ಖಾಸಗೀಕರಣ ಮತ್ತು ಬಡತನ. ಖಾಸಗೀಕರಣದ ಬಳಕೆದಾರರು ಮತ್ತು ಅಪಾಯಕ್ಕೊಳಗಾಗುವವರ ಬಗೆಗೆ ಅನೇಕ ಅಧ್ಯಯನಗಳು ನಡೆದಿವೆ. ನಷ್ಟಕ್ಕೊಳಗಾಗಿರುವವರ ಸಂಖ್ಯೆಯು —ಬಡತನದ ಗಾತ್ರ ಮತ್ತು ಉಗ್ರತೆಯನ್ನು ಹೆಚ್ಚಿಸುತ್ತದೆ—ಖಾಸಗೀಕರಣದ ವಿಧಾನಗಳು ನಿರೀಕ್ಷಿಸುವುದಕ್ಕಿಂತ ಹೆಚ್ಚಾಗಿರಬಹುದು ಮತ್ತು ಇದನ್ನು ಅಳವಡಿಸುವುದರಿಂದ ಕಂದಕವನ್ನು ಇನ್ನೂ ಹೆಚ್ಚಾಗಿಸುತ್ತದೆ (ಉದಾ: ರಾಜ್ಯ ಸ್ವಾಮ್ಯದ ಆಸ್ತಿಗಳಲ್ಲಿ ಪಾರದರ್ಶಕತೆಯ ಕೊರತೆಯು ರಾಜಕೀಯದವರಿಂದ ಅತ್ಯಂತ ಕಡಿಮೆ ಶ್ಲಾಘನೆಗೊಳಗಾಗುತ್ತದೆ, ನಿಯಂತ್ರಣದ ಕೊರತೆಯು ಸರ್ಕಾರೀ ಸ್ವಾಮ್ಯದಿಂದ ಖಾಸಗೀ ವಲಯಕ್ಕೆ ಪರಿವರ್ತಿಸಲು ದಾರಿಮಾಡಿಕೊಡುತ್ತದೆ, ಸರಿಯಲ್ಲದ ವಿನ್ಯಾಸ ಮತ್ತು ನಿಯಂತ್ರಣದ ಕೊರತೆಯು ಖಾಸಗೀಕರಣದ ಆಸ್ತಿಯನ್ನು ಕಡಿಮೆಯಾಗುವಂತೆ ಮಾಡುತ್ತದೆ.[]
  • ಕೆಲಸ ಕಳೆದುಕೊಳ್ಳುವಿಕೆ. ಹೆಚ್ಚಿದ ಹಣಕಾಸಿನ ಒತ್ತಡದಿಂದಾಗಿ ಅನೇಕ ಖಾಸಗೀ ಕಂಪನಿಗಳು ಹಣವನ್ನು ಕಂಪನಿಯಲ್ಲುಳಿಸಿಕೊಳ್ಳಲು ಅನೇಕ ಕಾರ್ಮಿಕರನ್ನು ತೆಗೆದುಹಾಕುತ್ತಾರೆ ಆದರೆ ಸರ್ಕಾರೀ ಕಂಪನಿಗಳಲ್ಲಿ ಇದು ಆಗುವುದಿಲ್ಲ.

ಮಧ್ಯವರ್ತಿ ಅವಲೋಕನಗಳು

[ಬದಲಾಯಿಸಿ]

ಉತ್ತಮ ಲಾಭಕ್ಕಾಗಿ ದೃಢವಾಗಿ, ಕಾರ್ಪೋರೇಟ್ ಸಂಸ್ಥೆಯ ಆಡಳಿತವು ಅನರ್ಹ ಸರ್ಕಾರಿ ಕಚೇರಿ ಅಥವಾ ಸ್ವಯಂ ಸೇಸಾ ಸಂಘಟನೆಗಳಿಗಿಂತ ಹೆಚ್ಚು ಯೋಗ್ಯ ಎಂಬುದರ ಕುರಿತು ಇತರರು ಭಿನ್ನಾಭಿಪ್ರಾಯ ಹೊಂದಿಲ್ಲ. ಏನೇ ಆದರೂ ಅನೇಕ ಖಾಸಗೀಕರಣದ ಕಾರ್ಯಗೊಳಿಸುವಿಕೆ ಯಿಂದ ಆಡಳಿತ ಮಂಡಳಿಯ ಲಾಭಕ್ಕಾಗಿ ಸಾರ್ವಜನಿಕ ಆಸ್ತಿಯು ಕಡಿಮೆ ಮೊತ್ತದಲ್ಲಿ ಮಾರಾಟವಾಗುತ್ತದೆ ಮತ್ತು/ ಅಥವಾ ಅನರ್ಹತೆ ಅಥವಾ ಭೃಷ್ಟಾಚಾರಕ್ಕೆ ಕಾರಣವಾಗುತ್ತದೆ.

ಅಭಿವೃದ್ಧಿ ಹೊಂದಿದ ಅಥವಾ ಅಲ್ಪ ಭೃಷ್ಟಾಚಾರದ ಆರ್ಥಿಕತೆ

[ಬದಲಾಯಿಸಿ]

ಒಂದು ಮೇಲ್ಮಟ್ಟದ ಕಾರ್ಯಾಂಗವು ಆಸ್ತಿಯ ಗ್ರಹಿಸಿದ ಬೆಲೆಯನ್ನು ಬೇರೆ ಬೇರೆ ರೀತಿಯ ಮಾಹಿತಿಯ ಕಾರಣದಿಂದ ಮನಃಪೂರ್ವಕವಾಗಿ ಕಡಿಮೆ ಮಾಡಬಹುದು. ಕಾರ್ಯಾಂಗವು ನಿರೀಕ್ಷಿತ ವೆಚ್ಚo ವೇಗವನ್ನು ಹೆಚ್ಚಿಸಬಹುದು, ನಿರೀಕ್ಷಿತ ಆದಾಯ ಲೆಕ್ಕ ಮಾಡುವುದನ್ನು ನಿಧಾನಿಸಬಹುದು. ಸಂಸ್ಥೆಯ ಲೆಕ್ಕಪತ್ರದ ವ್ಯವಹಾರವನ್ನು ಹಿಡಿತದಲ್ಲಿಟ್ಟು ಸಂಸ್ಥೆಯನ್ನು ಲಾಭವನ್ನು ಕಡಿಮೆ ಮಾಡಿ ತೋರಿಸಬಹುದು ಅಥವಾ ಸುಮ್ಮನೆ ಉತ್ತೇಜನ ನೀಡಬಹುದು ಮತ್ತು ಭವಿಷ್ಯದ ಗಳಿಕೆಯ ಅಂದಾಜು ತಯಾರಿಸಿ ನಿರ್ದಾಕ್ಷಿಣ್ಯವಾಗಿ ರಕ್ಷಣಾತ್ಮಕ ಕ್ರಮ ಕೈಗೊಳ್ಳಬಹುದು (ಉದಾ. ನಿರಾಶಾವಾದ). ಇಂತಹ ತೋರಿಕೆಯು ಪ್ರತಿಕೂಲ ಗಳಿಕೆಯ ಸುದ್ದಿಗಳು ಮಾರಾಟದ ಬೆಲೆಯನ್ನು (ತಾತ್ಕಾಲಿಕವಾಗಿಯಾದರೂ) ಕಡಿಮೆ ಮಾಡುತ್ತದೆ. (ಇದು ಪುನಃ ಬೇರೆ ಬೇರೆ ರೀತಿಯ ಮಾಹಿತಿಯ ಕಾರಣದಿಂದ ಉನ್ನತ ಮಟ್ಟದ ಕಾರ್ಯನಿರ್ವಾಹಕರು ತಮ್ಮ ಗಳಿಕೆಯನ್ನು ಹೆಚ್ಚಿಸಿಕೊಳ್ಳಲು ಏನನ್ನೂ ಮಾಡಲು ತಯಾರಾಗಿರುತ್ತಾರೆ.) ಅಲ್ಲಿ ಮೂಲವಾಗಿ ಒಬ್ಬರ ಲೆಕ್ಕ ಮತ್ತು ಗಳಿಸುವ ಅಂದಾಜಿನಲ್ಲಿ ತೀವ್ರ ಸಂರಕ್ಷಿತವಾಗಿ ಕೇವಲ ಸ್ವಲ್ಪ ಮಟ್ಟಿಗಿನ ಕಾನೂನಿನ ತೊಂದರೆ ಇದೆ.

ಯಾವಾಗ ಆಸ್ತಿಯು ಖಾಸಗಿಗೆ ನಾಟಕೀಯವಾಗಿ ಕಡಿಮೆ ಬೆಲೆಗೆ ತೆಗೆದುಕೊಳ್ಳಲ್ಪಡುತ್ತದೆಯೋ ಆಗ ಮಾಜಿ ಉನ್ನತ ಕಾರ್ಯ ನಿರ್ವಹಣಾಧಿಕಾರಿಗಳಿಂದ (ರಹಸ್ಯವಾಗಿ) ಮಾರಾಟದ ಬೆಲೆ ಕಡಿಮೆ ಮಾಡಿಸುವ ಮೂಲಕ ಹೊಸ ಖಾಸಗಿ ಮಾಲಿಕ ಅನಿರೀಕ್ಷಿತ ಆಸ್ತಿಯನ್ನು ಪಡೆಯುತ್ತಾನೆ. ಇದು 10ರಷ್ಟು ಶತಕೋಟಿ ಡಾಲರ್ (ಪ್ರಶ್ನಾರ್ಹವಾಗಿ) ಹಣವು ಮೊದಲಿನ ಮಾಲಿಕರಿಂದ (ಸಾರ್ವಜನಿಕರು) ಪಡೆದ ವ್ಯಕ್ತಿಗೆ ಸಿಗಲು ಕಾರಣವಾಗುತ್ತದೆ. ಹಿಂದಿನ ಉನ್ನತ ಕಾರ್ಯನಿರ್ವಾಹಕನು ಮಾಡಿದ ಒಂದು ಅಥವಾ ಎರಡು ವರ್ಷಗಳ ಕೆಲಸದಲ್ಲಿ ಕಡಿಮೆ ಬೆಲೆಯಲ್ಲಿ ಮಾರಾಟವಾಗಿ ಕೆಲವು ಬಾರಿ 10ರಷ್ಟು ಅಥವಾ 100ರಷ್ಟು ಮಿಲಿಯನ್ ಡಾಲರ್ ಹಣದ ಲಾಭಕ್ಕೆ ಕಾರಣಕರ್ತನಾಗಿದ್ದರಿಂದ ಆತನಿಗೆ ಉತ್ತಮ ಹಣವನ್ನು ನೀಡಲಾಗುತ್ತದೆ. (ಇದು ಏನೇ ಆದರೂ ಖರೀದಿಸಿದ ವ್ಯಕ್ತಿಗೆ ಒಂದು ಅತ್ಯುನ್ನತ ವ್ಯಾಪಾರ ಒಪ್ಪಂದವಾಗಿದ್ದು, ಇಲ್ಲಿ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಖರೀದಿದಾರ ಹೇಗೆ ಸಂಬಂಧ ಹೊಂದಿದ್ದಾನೆ ಎಂಬುದರ ಮೇಲೆ ಅವನ ಖರೀದಿಯ ನೆಲೆ ನಿರ್ಧರಿತವಾಗುತ್ತದೆ.

ಯಾವಾಗ ಸಾರ್ವಜನಿಕವಾಗಿ ಪಡೆದುಕೊಂಡ ಆಸ್ತಿ, ಪರಸ್ಪರ ಅಥವಾ ಲಾಭವಿಲ್ಲದ ಸಂಸ್ಥೆಯು ಖಾಸಗೀಕರಣವಾಗುತ್ತದೆಯೋ, ಆಗ ಉನ್ನತ ಕಾರ್ಯನಿರ್ವಹಣಾಧಿಕಾರಿಗಳು ಪದೇ ಪದೇ ಭಾರೀ ಪ್ರಮಾಣದಲ್ಲಿ ಪರಿಶೀಲನಾ ಲಾಭವನ್ನು ಸಂಗ್ರಹಿಸುತ್ತಾರೆ. ಕಾರ್ಯನಿರ್ವಾಹಕರು ಆಸ್ತಿಯನ್ನು ಆರ್ಥಿಕ ವಿಷಮಸ್ಥಿತಿ ಸೃಷ್ಟಿಸಿ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತಾರೆ. ಇದು ಮಾರಾಟದ ಬೆಲೆಯನ್ನು ಕಡಿಮೆಗೊಳಿಸುತ್ತದೆ (ಖರೀದಿದಾರನಿಗೆ ಲಾಭವಾಗುತ್ತದೆ), ಮತ್ತು ಲಾಭಕ್ಕಲ್ಲದ ಸಂಸ್ಥೆಯಾಗಿ ಮತ್ತು ಸರ್ಕಾರಗಳು ಮಾರಾಟ ಮಾಡುವಂತೆ ಮಾಡುತ್ತಾನೆ.

ವ್ಯಂಗ್ಯವೆಂದರೆ, ಇದು ಕೂಡ ಸಾರ್ವಜನಿಕರು ಖಾಸಗಿ ಆಸ್ತಿಗಳು ಹೆಚ್ಚು ದಕ್ಷತೆಯಿಂದ ನಿರ್ವಹಿಸಬಲ್ಲವು ಎಂಬಂತೆ ಆಧಾರ ಒದಗಿಸಿ ಸಾರ್ವಜನಿಕವಾಗಿ ತಿಳಿವಳಿಕೆ ಮೂಡಿಸಿ ರಾಜಕೀಯವಾಗಿ ಸಾರ್ವಜನಿಕ ಆಸ್ತಿಯನ್ನು ಮಾರಲು ಬೆಂಬಲ ನೀಡುತ್ತದೆ. ಮತ್ತೊಮ್ಮೆ ಬೇರೆ ಬೇರೆ ರೀತಿಯ ಮಾಹಿತಿಯ ಕಾರಣದಿಂದ ರಾಜನೀತಿ ರಚನಾಕಾರರು ಹಾಗೂ ಸಾಮಾನ್ಯ ನಾಗರಿಕರು ಸರ್ಕಾರಿ ಸ್ವಾಮ್ಯದ ವಾಣಿಜ್ಯ ಸಂಸ್ಥೆಯಲ್ಲಿ ಆರ್ಥಿಕ ಆಪತ್ತನ್ನು ನೋಡುತ್ತಾರೆ. ಕೆಲವೇ ವರ್ಷಗಳಲ್ಲಿ ಪವಾಡ ಸದೃಷದಂತೆ ಖಾಸಗಿ ಸಂಸ್ಥೆಗಳಾಗಿ (ಮೂಲದಲ್ಲಿ ಪುನರ್ ಮಾರಾಟವಾದಂತೆ) ಬದಲಾಗುವುದನ್ನು ನೋಡುತ್ತಾರೆ.

ಹಿಂದುಳಿದ ಅಥವಾ ಭಾರಿ ಭಷ್ಟ ಆರ್ಥಿಕತೆ

[ಬದಲಾಯಿಸಿ]

ಭಾರೀ ಪ್ರಮಾಣದ ಭೃಷ್ಟಾಚಾರ ಹೊಂದಿರುವ ಸಮಾಜದಲ್ಲಿ ಖಾಸಗೀಕರಣವು ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರ ಹಾಗೂ ಅದರ ಬೆಂಬಲಿಗರಿಗೆ ವ್ಯವಸ್ಥೆಯ ದೊಡ್ಡ ಭಾಗದಲ್ಲಿ ಬೆಳೆಯಲು ಅವಕಾಶ ನೀಡುವ ಮೂಲಕ ರಾಜ್ಯದ ಆಸ್ತಿಯನ್ನು ಸಾರ್ವಜನಿಕರಿಂದ ದೂರ ಸರಿಸುತ್ತದೆ ಮತ್ತು ಶಕ್ತಿಯುತ ದಲ್ಲಾಳಿಗಳ ಲೆಕ್ಕಕ್ಕೆ ಸೇರಲು ಅವಕಾಶ ನೀಡುತ್ತದೆ. ಖಾಸಗೀಕರಣ ಇಲ್ಲದಿದ್ದರೆ ಭೃಷ್ಟ ರಾಜಕಾರಣಿಗಳು ನಿಧಾನವಾಗಿ ತಮ್ಮ ಅಕ್ರಮ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಆಡಳಿತ ನಡೆಸುತ್ತಿರುವ ಸರ್ಕಾರದ ಅಧಿಕಾರಿಗಳಲ್ಲಿನ ಪ್ರಮಾಣದ ಭೃಷ್ಟಾಚಾರದ ಮೇಲೆ ಅವಲಂಬಿತವಾಗಿದ್ದ ಅವರು ಪ್ರಸ್ತುತ ಅಕ್ರಮವಾಗಿ ಹಣ ವಸೂಲಿ ಮಾಡುವುದರಿಂದ ದೂರವಿರುವವರೆಗೆ ದಕ್ಷ ಖಾಸಗೀಕರಣದಂತಹ ವ್ಯವಸ್ಥೆಯು ಇರುತ್ತದೆ.

ಸಾಧಾರಣವಾಗಿಯೇ ಅದಕ್ಷ ಸರ್ಕಾರ ಕೂಡ ಅಕ್ರಮ ಹಣವನ್ನು ಇತರ ದಾರಿಗಳಿಂದ ಹೆಚ್ಚಿನ ರೀತಿಯಲ್ಲಿ ಇತರ ದಾರಿಗಳಲ್ಲಿ ಸೆಳೆಯಬಬಹುದು–ಹೆಚ್ಚಿನದಾಗಿ ವಿಸ್ತಾರವಾದ ಜಮೀನುಗಳನ್ನು ಮಾತಿನ ಮೇಲಿನ ಒಪ್ಪಂದಗಳಿಂದ ತಮ್ಮ ಬೆಂಬಲಿಗರಿಗೆ ನೀಡಿ ಖರ್ಚು ಮಾಡುವುದರಲ್ಲಿ ಮಗ್ನರಾಗುವುದರಿಂದ (ಅಥವಾ ತೆರಿಗೆಯಡಿ, ಧನ ಸಹಾಯಗಳು ಅಥವಾ ಇತರ ರೀತಿಗಳಿಂದ ನೀಡುವುದರಿಂದ). ತರುವಾಯದ ತೆರಿಗೆ ಪಾವತಿದಾರರು ಹಿಂದೆ ನಡೆದ ಭೃಷ್ಟಾಚಾರದಿಂದ ಉಂಟಾದ ಸಾಲಕ್ಕಾಗಿ ಹಣ ತುಂಬುವ ಸಂದರ್ಭ ಉಂಟಾಗುತ್ತದೆ. ಇದು ಸಾಮಾನ್ಯವಾಗಿಯೇ ಸಾರ್ವಜನಿಕ ಆಸ್ತಿಗಳ ಮಾರಾಟಕ್ಕೆ ಕಾರಣವಾಗುತ್ತದೆ.

ಕೊನೆಯಲ್ಲಿ ಸಾರ್ವಜನಿಕರಿಗೆ ಸರ್ಕಾರವು ಭಾರೀ ಪ್ರಮಾಣದ ತೆರಿಗೆ ಹಾಕುತ್ತದೆ ಮತ್ತು ತಿರುಗಿ ಏನನ್ನೂ ನೀಡುವುದಿಲ್ಲ. ಸಾಲ ಮರುಪಾವತಿಯು ಅಂತಾರಾಷ್ಟ್ರೀಯ ಒಪ್ಪಂದಗಳು ಹಾಗೂ ಐಎಂಎಫ್ ನಂತಹ ಮಧ್ಯವರ್ತಿ ಸಂಸ್ಥೆಗಳಿಂದ ಪ್ರಕಾರ ಬಲವಂತವಾಗಿ ವಿಧಿಸಲ್ಪಡುತ್ತದೆ. ಮೂಲಭೂತ ವ್ಯವಸ್ಥೆ ಹಾಗೂ ಸಂರಕ್ಷಣೆಯು ನಿರ್ಲಕ್ಷಿಸಲ್ಪಡುತ್ತದೆ- ಹೆಚ್ಚಿನ ಸಂದರ್ಭಗಳಲ್ಲಿ ದೇಶದ ಆರ್ಥಿಕ ದಕ್ಷತೆಯು ಮುಂದೆ ತಗ್ಗುತ್ತದೆ.

ಫಲಿತಾಂಶಗಳು

[ಬದಲಾಯಿಸಿ]

ಸಾಹಿತ್ಯಿಕ ಪುನರ್‌ ವಿಮರ್ಶೆ[][] ಹೇಳಿದಂತೆ ಉತ್ತಮ ಮಾಹಿತಿ ಪಡೆದ ಗ್ರಾಹಕರನ್ನು ಹೊಂದಿದ ಸ್ಪರ್ಧಾತ್ಮಕ ಕೈಗಾರಿಕೆಗಳಲ್ಲಿ ಖಾಸಗೀಕರಣದಿಂದ ದೃಢವಾಗಿಯೂ ದಕ್ಷತೆ ಹೆಚ್ಚುತ್ತದೆ. ಇಂತಹ ದಕ್ಷತೆಯು ಜಿಡಿಪಿ ದರದಲ್ಲಿ ಒಂದು ಪ್ರಮಾಣದ ಹೆಚ್ಚಳವನ್ನು ಪಡೆಯುತ್ತದೆ. ಆದರೆ ಸುಧಾರಿಸಲ್ಪಟ್ಟ ಪ್ರೋತ್ಸಾಹಕಗಳ ಮೂಲಕ ನವೀನತೆಯನ್ನು ತರಲು ಮತ್ತು ಬೆಲೆಯನ್ನು ಕಡಿಮೆ ಮಾಡಲು ಅಲ್ಲದೆ, ಆರ್ಥಿಕತೆ ಪ್ರಗತಿಯ ದರ ಹೆಚ್ಚಿಸುತ್ತಾರೆ. ಕೈಗಾರಿಕೆಗಳ ವಿಧವು ಯಾವುದಕ್ಕೆ ಇದು ಸಾಮಾನ್ಯವಾಗಿ ತಯಾರಿಸುವುದು ಮತ್ತು ಬಿಡಿ ಮಾರಾಟ ಮಾಡುವುದು ಸೇರಿಸಿ ಅನ್ವಯಿಸುತ್ತದೆ. ಆದಾಗ್ಯೂ ಕೂಡ ಮಾದರಿಯಾಗಿ ಅಲ್ಲಿ ಸಾಮಾಜಿಕ ವೆಚ್ಚಗಳು ದಕ್ಷತೆ ಗಳಿಸುವುದರ ಜೊತೆಗೆ ಸಂಯೋಗ ಹೊಂದಿರುತ್ತದೆ. ಅನೇಕ ಅರ್ಥಶಾಸ್ತ್ರಜ್ಞರು ವಾದಿಸುವ ಪ್ರಕಾರ ಇವು ಸೂಕ್ತ ಸರ್ಕಾರದ ಬೆಂಬಲದಿಂದ ಪುನರ್ವಿತರಣೆ ಹಾಗೂ ಪ್ರಾಶಯಃ ಪುನರ್ ತರಬೇತಿ ನೀಡುತ್ತವೆ.

ಪ್ರದೇಶಗಳಲ್ಲಿ ಅವು ಸಹಜವಾಗಿ ಏಕಸ್ವಾಮ್ಯ ಅಥವಾ ಸಾರ್ವಜನಿಕ ಸೇವೆಯಲ್ಲಿರುತ್ತವೆ. (ಹೇಳುವುದು, ಅಮೇರಿಕಾದ ಸಾರ್ವಜನಿಕ ರೈಲುಗಳಂತೆ) ಖಾಸಗೀಕರಣದ ಪರಿಣಾಮಗಳು ತುಂಬಾ ಮಿಶ್ರಣಕ್ಕೊಳಗಾಗಿವೆ, ಖಾಸಗಿ ಏಕಸ್ವಾಮ್ಯವು ಸಾರ್ವಜನಿಕರು ಉದಾರ ಆರ್ಥಿಕ ನೀತಿ ಪದ್ಧತಿಯಲ್ಲಿರುವಂತೆಯೇ ಆಗಿರುತ್ತದೆ. ಸರ್ಕಾರವು ನಿಜವಾಗಿಯೂ ಇದರಲ್ಲಿ ಸಾರ್ವಜನಿಕ ವಸ್ತು ಹಾಗೂ ಸೇವೆಗಳನ್ನು ಸಹಜವಾಗಿಯೇ ಒದಗಿಸುತ್ತದೆ. ಏನೇ ಆದರೂ, ಈಗಾಗಲೇ ಇರುವ ಸಾರ್ವಜನಿಕ ಪ್ರದೇಶದ ಕಾರ್ಯವಿಧಾನವು ಬದಲಾವಣೆ ಅಗತ್ಯ ಎಂಬ ಪ್ರಶ್ನೆಯಲ್ಲಿ ಇಡಬಹುದಾಗಿದೆ. ಬದಲಾವಣೆಯು ಇಂಟರ್ ಅಲಿಯಾ, ಖಾಸಗೀಕರಣಕ್ಕಿಂತ ಹೆಚ್ಚಾಗಿ ಅತ್ಯುತ್ತಮ ಪಾರದರ್ಶಕತೆ ಮತ್ತು ಆಡಳಿತದ ಹೊಣೆಗಾರಿಕೆ, ಸುಧಾರಿಸಲ್ಪಟ್ಟ ಧನ-ಲಾಭದ ವಿಮರ್ಶೆ, ಸುಧಾರಿಸಲ್ಪಟ್ಟ ಆಂತರಿಕ ಹಿಡಿತಗಳು, ರೆಗ್ಯುಲೇಟರಿ ಪದ್ಧತಿ ಮತ್ತು ಉತ್ತಮ ಹಣಕಾಸು ಒದಗಿಸುವಿಕೆಗಳ ಸುಧಾರಣೆಗಳ ಹೇರಲ್ಪಡುವಿಕೆಯನ್ನು ಒಳಗೊಂಡಿರಬಹುದು.

ರಾಜಕೀಯ ಭೃಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಕ್ಷೇತ್ರದ ಗಾತ್ರವು ಭೃಷ್ಟಾಚಾರದ ಪರಿಣಾಮ ಹೊಂದಿದ್ದರೆ ಇದೊಂದು ಚರ್ಚಾಸ್ಪದ ವಿವಾದವಾಗಿದೆ. ಸ್ಕ್ಯಾಂಡಿನೇವಿಯಾ ದೇಶಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಭೃಷ್ಟಾಚಾರವಿದೆ ಆದರೆ, ದೊಡ್ಡ ಪ್ರಮಾಣದ ಸಾರ್ವಜನಿಕ ಕ್ಷೇತ್ರಗಳಿವೆ. ಏನೇ ಆದರೂ ಉತ್ತಮವಾದ ಹಾಗೂ ಸರಳ ವಿಧಾಯಕಗಳಿಂದ ಮತ್ತು ರಾಜಕೀಯ ಹಕ್ಕುಗಳು ಹಾಗೂ ಸಾರ್ವಜನಿಕ ಸ್ವಾತಂತ್ರ್ಯಗಳು, ಸರ್ಕಾರದ ಉನ್ನತ ಜವಾಬ್ದಾರಿ ತೋರಿಕೆ ಹಾಗೂ ಪಾರದರ್ಶಕತೆಯಲ್ಲಿ ಈ ದೇಶಗಳು ಈಸ್ ಆಫ್ ಡುಯಿಂಗ್ ಬಿಸಿನೆಸ್ ಇಂಡೆಕ್ಸ್‌‍ನಲ್ಲಿ ಅತಿಹೆಚ್ಚು ಅಂಕ ಗಳಿಸುತ್ತವೆ. ಒಬ್ಬ ವ್ಯಕ್ತಿ ಸಫಲ, ಭೃಷ್ಟಾಚಾರ ರಹಿತ ಖಾಸಗೀಕರಣ ಮತ್ತು ಸ್ಕ್ಯಾಂಡಿನೇವಿಯಾದಲ್ಲಿನ ಸರ್ಕಾರದ ಉದ್ಯಮಗಳ ಪುನರ್ ನಿರ್ಮಾಣಗಳನ್ನು ಕೂಡ ಅರಿಯಬೇಕು. ಉದಾಹರಣೆಗೆ, ದೂರಸಂಪರ್ಕ ವ್ಯವಸ್ಥೆಯ ಏಕಸ್ವಾಮ್ಯಗಳ ಹಿಡಿತ ಕಳಚಿದ ಕಾರಣ ಮಾರುಕಟ್ಟೆಗೆ ಅನೇಕ ಹೊಸ ಆಟಗಾರರು ಪ್ರವೇಶಿಸಿದರು ಮತ್ತು ದರ ಹಾಗೂ ಸೇವೆಯಲ್ಲಿ ಸ್ಪರ್ಧೆ ನೀಡುವ ಹಂಬಲ ವ್ಯಕ್ತಪಡಿಸಿದರು.

ಭೃಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಕೂಡ ಮಾರಾಟವು ತನ್ನಿಂದ ತಾನೆಯೇ ದೊಡ್ಡ ಪ್ರಮಾಣದ ಭೃಷ್ಟಾಚಾರಕ್ಕೆ ಹೆಚ್ಚಿನ ಅವಕಾಶ ನೀಡುತ್ತದೆ. ರಷ್ಯಾ ಹಾಗೂ ಲ್ಯಾಟಿನ್ ಅಮೇರಿಕಾದಲ್ಲಿನ ಖಾಸಗೀಕರಣವು ರಾಜ್ಯಗಳ ಸ್ವಾಮ್ಯದ ಸಂಸ್ಥೆಗಳ ಮಾರಾಟದ ಸಂದರ್ಭದಲ್ಲಿ ಬೃಹತ್ ಪ್ರಮಾಣದ ಭೃಷ್ಟಾಚಾರವು ಕಂಡುಬಂದಿತು. ಅವು ರಾಜಕೀಯದ ಸಂಪರ್ಕ ಹೊಂದಿದ್ದ ಕಾರಣ ಅನ್ಯಾಯದಿಂದ ದೊಡ್ಡ ಪ್ರಮಾಣದ ಸಂಪತ್ತನ್ನು ಗಳಿಸಿದವು. ಇವು ಈ ಪ್ರದೇಶಗಳಲ್ಲಿ ಖಾಸಗೀಕರಣಕ್ಕೆ ತೀವ್ರ ಕೆಟ್ಟ ಹೆಸರು ತಂದವು. ಮಾಧ್ಯಮವು ಮಾರಾಟಗಳಲ್ಲಿ ಆದ ದೊಡ್ಡ ಪ್ರಮಾಣದ ಭೃಷ್ಟಾಚಾರವನ್ನು ಬಯಲು ಮಾಡಿದಾಗ, ಕೆಲವು ಅಧ್ಯಯನಗಳು ಕಾರ್ಯದ ದಕ್ಷತೆಯು ಹೆಚ್ಚಿಸಲ್ಪಟ್ಟಿದೆ. ಎಂದು ವಾದಿಸಿದವು, ಪ್ರತಿದಿನ ನಡೆಯುವ ಅಥವಾ ಮುಂದೆ ನಡೆಯಬಲ್ಲ ಸಣ್ಣ ಭೃಷ್ಟಾಚಾರಗಳು ಖಾಸಗೀಕರಣವಿಲ್ಲದಿದ್ದರೆ ಇನ್ನೂ ಹೆಚ್ಚುತ್ತವೆ, ಮತ್ತು ಅಂತಹ ಭೃಷ್ಟಾಚಾರಗಳು ಖಾಸಗೀಕರಣಗೊಳ್ಳದ ಕ್ಷೇತ್ರಗಳಲ್ಲಿ ಹೆಚ್ಚು ವ್ಯಾಪಿಸಿವೆ ಎಂದು ವಾದಿಸಿದವು. ಇಷ್ಟೇ ಅಲ್ಲದೆ, ಕಾನೂನಿಗಿಂತ ಹೊರಗಿನ ಹಾಗೂ ಅನಧಿಕೃತ ಚಟುವಟಿಕೆಗಳು ಖಾಸಗೀಕರಣ ಕಡಿಮೆ ಇರುವ ದೇಶಗಳಲ್ಲಿ ಹೆಚ್ಚು ವ್ಯಾಪಿಸಿಕೊಂಡಿದೆ ಎಂಬುದಕ್ಕೆ ಸಾಕ್ಷ್ಯವಿದೆ.[೧೦]

ಪರ್ಯಾಯ

[ಬದಲಾಯಿಸಿ]

ಸಾರ್ವಜನಿಕ ಹಿತ

[ಬದಲಾಯಿಸಿ]

ಉದ್ಯಮವು ಸಾರ್ವಜನಿಕ ಪ್ರಯೋಜನವಾಗಿಯೂ ಇರಬಹುದು.

ಲಾಭಾಪೇಕ್ಷೆಯಿಲ್ಲದ

[ಬದಲಾಯಿಸಿ]

ಖಾಸಗಿಯಾದ ಲಾಭಾಪೇಕ್ಷೆಯಿಲ್ಲದ ಸಂಸ್ಥೆಯು ಉದ್ಯಮದ ಆಡಳಿತ ನಿರ್ವಹಿಸುತ್ತದೆ.

ನಗರ ಸಭೆಗೆ ಅಧಿಕಾರ ವಹಿಸುವಿಕೆ

[ಬದಲಾಯಿಸಿ]

ನಗರಸಭೆ ಆಡಳಿತಕ್ಕೆ ನಿಯಂತ್ರಣವನ್ನು ಹಸ್ತಾಂತರಿಸುವುದು.

ಹೊರಗುತ್ತಿಗೆ ಅಥವಾ ಒಳ-ಒಪ್ಪಂದ

[ಬದಲಾಯಿಸಿ]

ಖಾಸಗಿ ಉದ್ಯಮಗಳಿಗೆ ರಾಷ್ಟ್ರೀಯ ಸೇವೆಗಳನ್ನು ಒಳ ಒಪ್ಪಂದ ಅಥವಾ ಹೊರಗುತ್ತಿಗೆ ಮೇರೆಗೆ ನೀಡಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಯುಕೆ‌ಯಲ್ಲಿ ಸಿಗುತ್ತದೆ, ಇಲ್ಲಿನ ಹಲವಾರು ನಗರಸಭೆಗಳು ಕಸ ಸಂಗ್ರಹಿಸಿ ವಿಲೇವಾರಿ ಮಾಡಲು ಮತ್ತು ಪಾರ್ಕಿಂಗ್ ದಂಡವನ್ನು ವಸೂಲಿ ಮಾಡಲು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿದೆ. ಇದಲ್ಲದೇ, ಬ್ರಿಟೀಷ್ ಸರ್ಕಾರವು ಪ್ರಮುಖವಾಗಿ ರಾಷ್ಟ್ರೀಯ ಆರೋಗ್ಯ ಸೇವೆಗಳನ್ನು ನೀಡಲು ಮತ್ತು ಹೊಸ ಆಸ್ಪತ್ರೆಗಳನ್ನು ನಿರ್ಮಿಸಲು ಖಾಸಗಿ ಕಂಪನಿಗಳಿಗೆ ಹೊರಗುತ್ತಿಗೆ ನೀಡಿದೆ. ಇದಲ್ಲದೇ ರಾಷ್ಟ್ರೀಯ ಆರೋಗ್ಯ ಸೇವೆಗಳಲ್ಲಿ ಮಾನವ ಸಂಪನ್ಮೂಲ ಕಡಿಮೆ ಇರುವುದರಿಂದ ಅಲ್ಲಿನ ಹೊರೆಯನ್ನು ಕಡಿಮೆ ಮಾಡಲು ರೋಗಿಗಳಿಗೆ ಶಸ್ತ್ರಚಿಕಿತ್ಸೆಗಳನ್ನು ಮಾಡಿಸುಕೊಳ್ಳಲು ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತೆ ಸಲಹೆ ನೀಡಲಾಗುತ್ತದೆ ಮತ್ತು ಇದರ ವೆಚ್ಚವನ್ನು ಸರ್ಕಾರವೆ ವಹಿಸಿಕೊಳ್ಳುತ್ತದೆ.

ಭಾಗಶಃ ಒಡೆತನ

[ಬದಲಾಯಿಸಿ]

ಒಂದು ಉದ್ಯಮ ಖಾಸಗೀಕರಣಗೊಂಡಿರಬಹುದು, ಆದರೆ ಸಂಘಟಿತ ಕಂಪನಿಯಲ್ಲಿ ಷೇರುಗಳನ್ನು ಉಳಿಸಿಕೊಂಡಿರುವುದು.

ಈ ವಿದ್ಯಮಾನವನ್ನು ಫ್ರಾನ್ಸ್‌ನಲ್ಲಿ ಹೆಚ್ಚಾಗಿ ಕಾಣಬಹುದು, ಅಲ್ಲಿ ಖಾಸಗಿ ಕೈಗಾರಿಕೆಗಳಲ್ಲಿ ಕೆಲವೊಮ್ಮೆ "ಬ್ಲಾಕಿಂಗ್ ಸ್ಟೇಕ್" ನ್ನು ಉಳಿಸಿಕೊಂಡಿರಲಾಗುತ್ತದೆ.

ಜರ್ಮನಿಯಲ್ಲಿ, ಡಚ್ ಟೆಲಿಕಾಮ್ ಚಿಕ್ಕ ಹಣಕಾಸಿನ ಭಾಗಗಳಲ್ಲಿ ಖಾಸಗೀಕರಣಗೊಂಡಿದೆ, ಮತ್ತು ಕಂಪನಿಯ ಮೂರನೇ ಒಂದು ಭಾಗವನ್ನು ಉಳಿಸಿಕೊಂಡಿದೆ.

2005ರಂತೆ, ಹೆಚ್ಚುತ್ತಿರುವ ವೆಚ್ಚಗಳನ್ನು ನಿಯಂತ್ರಿಸುವ ಪ್ರಯತ್ನವಾಗಿ ಉಳಿಸಿದ್ದರಲ್ಲಿ ನಾರ್ಥ್ ರಿನ್-ವೆಸ್ಟ್‌ಫಲಿಯ ಸಹ ಇ.ಆನ್ ಕಂಪನಿಯಲ್ಲಿನ ಷೇರುಗಳನ್ನು ಕೊಳ್ಳಲು ಯೋಜಿಸುತ್ತಿದೆ.


ಆ ಸಮಯದಲ್ಲಿ ಭಾಗಶಃ ಖಾಸಗೀಕರಣ ಒಂದು ಪರ್ಯಾಯವಾಗಿದೆ, ಇದು ಹೆಚ್ಚಿನ ಸಂದರ್ಭಗಳಲ್ಲಿ ಪೂರ್ಣ ಖಾಸಗೀಕರಣದ ಮೈಲಿಗಲ್ಲಾಗಿರುತ್ತದೆ.

ಇದು ತೊಂದರೆಯಿಲ್ಲದ ಸಂಕ್ರಮಣದ ಅವಧಿಯ ಬಿಸಿನೆಸ್‌ನ್ನು ನಿರ್ವಹಿಸಬಹುದು ಆ ಸಮಯದಲ್ಲಿ ಕ್ರಮೇಣವಾಗಿ ಇದು ಮಾರುಕಟ್ಟೆಯ ಸ್ಪರ್ಧೆಗೆ ಹೊಂದಿಕೊಳ್ಳುತ್ತದೆ. ಕೆಲವು ಪಬ್ಲಿಕ್ ಕಂಪನಿಗಳು ತುಂಬಾ ವಿಸ್ತಾರವಾಗಿವೆ ಅಲ್ಲಿ ಉಳಿದ ಮಾರುಕಟ್ಟೆಗಳಿಂದ ಹಣವನ್ನು ನುಂಗಿಹಾಕುವ ಅಪಾಯವಿದೆ, ಹೆಚ್ಚಿನ ಹರಿವು ಇರುವ ಮಾರುಕಟ್ಟೆ ಸ್ಥಳಗಳಲ್ಲೂ ಸಹ: ಇದು ಕ್ರಮೇಣ ಖಾಸಗೀಕರಣಕ್ಕೆ ಕಾರಣವಾಗುತ್ತದೆ. ಬಹುವಿಧ ಖಾಸಗೀಕರಣದ ಮೊದಲ ಹಂತ ವೆಂದರೆ ಮಾರಾಟಕ್ಕಿರುವ ಕಡಿಮೆ ಮೌಲ್ಯವುಳ್ಳ ಕಂಪೆನಿಗಳಿಗೆ ಮೌಲ್ಯವನ್ನು ಕಟ್ಟುವ ಕೆಲಸ ನಡೆಯುತ್ತದೆ. ಕಡಿಮೆ-ಬೆಲೆಯ ದೂರುಗಳನ್ನು ಮಿತಗೊಳಿಸಲು ಉದ್ಯಮಕ್ಕೆ ಒಂದು ಮೌಲ್ಯಮಾಪನವನ್ನು ಕಟ್ಟುವುದಾಗಿದೆ.

ಒಪ್ಪಂದ ಮಾಡಿಕೊಂಡ ಭಾಗಶಃ ಖಾಸಗೀಕರಣದ ಕೆಲವು ಸಂದರ್ಭಗಳಲ್ಲಿ, ಪಬ್ಲಿಕ್ ಸೇವೆಗಳ ಕೆಲವು ಭಾಗವನ್ನು(ಗಳನ್ನು) ಖಾಸಗೀ-ಕ್ಷೇತ್ರದವರು ಒದಗಿಸುತ್ತಾರೆ, ಆದರೆ ಸರ್ಕಾರ ಹೀಗೆ ಆಯ್ಕೆ ಮಾಡಿಕೊಂಡರೆ ಒಪ್ಪಂದದ ಕಾಲಾವಧಿಯಲ್ಲಿ ಸ್ವಯಂ-ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಉಳಿಸಿಕೊಂಡಿರುತ್ತದೆ. ಶಾಲಾ ಬಸ್ ಸೇವಾ ಒಪ್ಪಂದದ ಕೆಲವು ರೀತಿಗಳು ಭಾಗಶಃ ಖಾಸಗೀಕರಣಕ್ಕೆ ಒಂದು ಉದಾಹರಣೆಯಾಗಿದೆ, ಇಂತಹ ಏರ್ಪಾಡುಗಳಲ್ಲಿ, ಸರ್ಕಾರಿ ಬಂಡವಾಳದ ಹಣದಿಂದ ಖರೀದಿಸಿದ ಮತ್ತು/ಅಥವಾ ಈಗಾಗಲೇ ಸರ್ಕಾರೀ ಘಟಕದ ಒಡೆತನದಲ್ಲಿರುವಂತಹ ಉಪಕರಣ ಮತ್ತು ಇತರ ಮೂಲಗಳನ್ನು ಒಪ್ಪಂದಗಾರ ಸೇವೆಗಳನ್ನು ಒದಗಿಸುತ್ತಿರುವ ಸಮಯದಲ್ಲಿ ಉಪಯೋಗಿಸುತ್ತಾನೆ, ಆದರೆ ಒಡೆತನವನ್ನು ಸರ್ಕಾರೀ ಘಟಕ ಉಳಿಸಿಕೊಂಡಿರುತ್ತದೆ. ಈ ರೀತಿಯ ಭಾಗಶಃ ಖಾಸಗೀಕರಣ ಒಂದು ಸಲ ಕಾರ್ಯಾಚರಣೆ ಒಪ್ಪಂದವಾದ ಮೇಲೆ, ಸರ್ಕಾರ ಸಾಕಷ್ಟು ಸ್ಪರ್ಧಾತ್ಮಕ ಸವಾಲುಗಳನ್ನು ತೆಗೆದುಕೊಳ್ಳಲು ಅಸಮರ್ಥವಾಗುತ್ತದೆ, ಮತ್ತು ಸಾರ್ವಜನಿಕ ಒಡೆತನದ ಅಡಿಯಲ್ಲಿನ ಷರತ್ತುಗಳಿಗಿಂತ ಹೊರತಾದ ನಿಯಮಗಳನ್ನು ಇದು ಹೊಂದುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ, ಸರ್ಕಾರಕ್ಕೆ ವ್ಯತಿರಿಕ್ತ ಖಾಸಗೀಕರಣ ಹೆಚ್ಚು ಅನುಕೂಲವಾಗಿದೆ.(ಕೆಳಗಿನ ಭಾಗವನ್ನು ನೋಡಿ)

ಸಾರ್ವಜನಿಕ–ಖಾಸಗಿ ಪಾಲುದಾರಿಕೆ

[ಬದಲಾಯಿಸಿ]

ಗಮನಾರ್ಹ ಉದಾಹರಣೆಗಳು

[ಬದಲಾಯಿಸಿ]

ಇತಿಹಾಸದಲ್ಲಿ ಜಪಾನ್ ಪೋಸ್ಟ್ ಹೆಚ್ಚು ವಿಸ್ತ್ರತವಾದ ಖಾಸಗೀಕರಣವನ್ನು ಒಳಗೊಂಡಿದೆ. ಇದು ದೇಶದ ಬಹು ದೊಡ್ಡ ಒಡೆಯನಾಗಿತ್ತು ಮತ್ತು ಜಪಾನಿನ ಎಲ್ಲ ಸರ್ಕಾರಿ ನೌಕರರ ಮೂರನೇ ಒಂದು ಭಾಗದಷ್ಟು ಜನ ಜಪಾನ್ ಪೋಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಜಪಾನ್ ಪೋಸ್ಟ್ ಪ್ರಪಂಚದಲ್ಲಿ ವೈಯಕ್ತಿಕ ಉಳಿತಾಯಗಳ ಬಹು ದೊಡ್ಡ ಮಾಲೀಕತ್ವವನ್ನು ಹೊಂದಿತ್ತು ಎಂದು ಹೇಳಿದೆ.

ಪ್ರಧಾನ ಮಂತ್ರಿಗಳಾದ ಜುನಿಚಿರೋ ಕೊಇಝುಮಿ ಇದನ್ನು ಖಾಸಗೀಕರಣಗೊಳಿಸಲು ಬಯಸಿದರು ಏಕೆಂದರೆ ಇದು[by whom?] ಅಸಮರ್ಥವಾಗಿದೆ ಮತ್ತು ಭ್ರಷ್ಟಾಚಾರಕ್ಕೆ ಒಂದು ಮೂಲವಾಗುತ್ತದೆ ಎಂದು ಯೋಚಿಸಲಾಗಿತ್ತು.

2003 ಸಪ್ಟೆಂಬರಿನಲ್ಲಿ, ಜಪಾನ್ ಪೋಸ್ಟ್‌ನ್ನು ನಾಲ್ಕು ಬೇರೆ ಬೇರೆ ಕಂಪನಿಗಳಾಗಿ ಪ್ರತ್ಯೇಕಿಸಲು ಕೊಇಝುಮಿಯವರ ಸಚಿವ ಸಂಪುಟ ಸೂಚಿಸಿತು: ಬ್ಯಾಂಕ್, ವಿಮಾ ಕಂಪನಿ, ಅಂಚೆ ಸೇವೆಯ ಕಂಪನಿ, ಮತ್ತು ಪೋಸ್ಟ್ ಆಫೀಸುಗಳನ್ನು ನೋಡಿಕೊಳ್ಳಲು ಇತರ ಮೂರರ ವ್ಯಾಪಾರೀ ಅಂಗಡಿಯದ್ವಾರಗಳಂತೆ ನಾಲ್ಕನೇ ಕಂಪನಿ.

ಖಾಸಗೀಕರಣವನ್ನು ಮೇಲ್ಮನೆ ತಿರಸ್ಕರಿಸಿದ ನಂತರ, ಕೊಇಝುಮಿ ದೇಶದ ತುಂಬಾ ಚುನಾವಣೆಗಳನ್ನು 2005, ಸಪ್ಟೆಂಬರ್ 11ರಂದು ನಿಶ್ಚಿತಗೊಳಿಸಿದರು.

ಚುನಾವಣೆ ಪೋಸ್ಟಲ್ ಖಾಸಗೀಕರಣದ ಮೇಲೆ ಜನಮತಸಂಗ್ರಹವಾಗಿದೆ ಎಂದು ಅವರು ಘೋಷಿಸಿದರು.

ನಂತರ ಕೊಇಝುಮಿ ಚುನಾವಣೆಯಲ್ಲಿ ಗೆದ್ದರು, ಸುಧಾರಣೆಗೆ ಆದೇಶ ಹೊರಡಿಸಲು ಬೇಕಾಗಿದ್ದ ಹೆಚ್ಚಿನ ಬಹುಮತವನ್ನು ಗಳಿಸಿತು, ಮತ್ತು 2007ರಲ್ಲಿ ಜಪಾನ್ ಪೋಸ್ಟ್‌ನ್ನು ಖಾಸಗೀಕರಣಗೊಳಿಸಲು ಮಸೂದೆಯನ್ನು 2005, ಅಕ್ಟೋಬರಿನಲ್ಲಿ ಅಂಗೀಕರಿಸಿತು.[೧೧]

1987ರ ನಿಪ್ಪನ್ ಟೆಲಿಗ್ರಾಫ್ ಮತ್ತು ದೂರವಾಣಿಗಳ ಖಾಸಗೀಕರಣ ಆ ಕಾಲದ ಆರ್ಥಿಕ ಇತಿಹಾಸದಲ್ಲಿ ಬೃಹತ್ ಷೇರು-ನೀಡಿಕೆಗಳಿದ್ದವು.[೧೨] ದೂರವಾಣಿಗಳ ಖಾಸಗೀಕರಣದಲ್ಲಿ ಪ್ರಪಂಚದ 20 ದೊಡ್ಡ ಸಾರ್ವಜನಿಕ ಷೇರು-ನೀಡಿಕೆಗಳಲ್ಲಿ 15 ಷೇರು-ನೀಡಿಕೆಗಳು ಪಾಲ್ಗೊಂಡವು.[೧೨]

ಯು.ಕೆ.ಯ ದೊಡ್ಡ ಸಾರ್ವಜನಿಕ ಷೇರು ನೀಡಿಕೆಗಳು ಬ್ರಿಟಿಷ್ ಟೆಲಿಕಾಂ ಮತ್ತು ಬ್ರಿಟಿಷ್ ಗ್ಯಾಸ್‌ನ್ನು ಖಾಸಗೀಕರಣ ಮಾಡಿದವು. ಫ್ರಾನ್ಸ್‌ನಲ್ಲಿ ದೊಡ್ಡ ಸಾರ್ವಜನಿಕ ಷೇರು ನೀಡಿಕೆ ಫ್ರಾನ್ಸ್ ಟೆಲಿಕಾಮ್ ಆಗಿತ್ತು.


ಋಣಾತ್ಮಕ ಪ್ರತಿಕ್ರಿಯೆಗಳು

[ಬದಲಾಯಿಸಿ]

ನೀರು ಮತ್ತು ವಿದ್ಯುತ್‌ಶಕ್ತಿಯಂತಹ ಮುಖ್ಯ ಸಾರ್ವಜನಿಕ ಸೇವಾ ಘಟಕಗಳಲ್ಲಿ ಖಾಸಗೀಕರಣದ ಪ್ರಸ್ತಾಪಗಳು ಬಹಳ ಸಂದರ್ಭಗಳಲ್ಲಿ ವಿರೋಧ ಪಕ್ಷದವರು ಮತ್ತು ಮಾನವ ಸಮಾಜದವರ ಬಲವಾದ ವಿರೋಧಕ್ಕೆ ಒಳಗಾಗಿವೆ, ಇದರಲ್ಲಿ ಹೆಚ್ಚು ಜನರು ಅವುಗಳು ಸಹಜ ಏಕಸ್ವಾಮ್ಯಗಳಂತೆ ಪರಿಗಣಿಸಿದ್ದಾರೆ.

ಪ್ರಚಾರಗಳು ವಿಶಿಷ್ಟವಾಗಿ ಪ್ರದರ್ಶನಗಳು ಮತ್ತು ಪ್ರಜಾಪ್ರಭುತ್ವೀಯ ರಾಜಕೀಯ ಚಟುವಟಿಕೆಗಳನ್ನು ಒಳಗೊಂಡಿರುತ್ತವೆ; ಕೆಲವೊಮ್ಮೆ ಪ್ರಾಧಿಕಾರಗಳು ಹಿಂಸಾಚಾರವನ್ನು ಉಪಯೋಗಿಸಿ ವಿರೋಧವನ್ನು ನಿಗ್ರಹಿಸಲು ಪ್ರಯತ್ನಿಸುತ್ತವೆ (ಉದಾಹರಣೆಗೆ ಬೊಲಿವಿಯದಲ್ಲಿನ 2000ರ ಕೊಚಂಬ ಪ್ರತಿಭಟನೆಗಳು ಮತ್ತು 2002, ಜೂನ್‌ನಲ್ಲಿ ಪೆರುವಿನ ಅರೆಕ್ವಿಪದಲ್ಲಿ ನಡೆದ ಪ್ರತಿಭಟನೆಗಳು). ಕೆಲವೊಮ್ಮೆ ವೃತ್ತಿ ಸಂಘಗಳು ವಿರೋಧವನ್ನು ಬಲವಾಗಿ ಬೆಂಬಲಿಸುತ್ತವೆ.

ಸಾಮಾನ್ಯವಾಗಿ ವಿರೋಧ ಹೆಚ್ಚಾಗಿರುವುದು ನೀರಿನ ಖಾಸಗೀಕರಣ - ಕೋಚಂಬಕ್ಕೆ ಸಹ, ಹೈತಿ, ಘಾನ ಮತ್ತು ಉರುಗ್ವೆಗಳು (2004)ಇತ್ತೀಚಿನ ಉದಾಹರಣೆಗಳಾಗಿವೆ.

ನಂತರದ ಸಂದರ್ಭದಲ್ಲಿ ಮಾನವ-ಸಮಾಜ-ಪ್ರಾರಂಭಿಸಿದ ಜನಮತ ಸಂಗ್ರಹ ರದ್ದುಗೊಳಿಸುತ್ತಿರುವ ನೀರಿನ ಖಾಸಗೀಕರಣ 2004, ಅಕ್ಟೋಬರಿನಲ್ಲಿ ಅಂಗೀಕೃತವಾಯಿತು.


ಹಿಮ್ಮರಳಿಕೆ

[ಬದಲಾಯಿಸಿ]

ಒಪ್ಪಂದ ಮಾಡಿಕೊಂಡ ಒಂದು ಉದ್ಯಮ ಅಥವಾ ಸೇವೆಗಳ ಒಡೆತನದಿಂದ ಸರ್ಕಾರಿ ಒಡೆತನ ಅಥವಾ ಸ್ವಾಮ್ಯ ಹಿಮ್ಮರಳುವುದನ್ನು ಖಾಸಗೀಕರಣದ ಹಿಮ್ಮರಳಿಕೆ ಅಥವಾ ರಾಷ್ಟ್ರೀಕರಣ ಎನ್ನುವರು. ಖಾಸಗೀಕರಣ ಕಾಂಟ್ರ್ಯಾಕ್ಟರು ಆರ್ಥಿಕವಾಗಿ ವಿಫಲವಾದಾಗ ಮತ್ತು/ಅಥವಾ ಸಾರ್ವಜನಿಕ ಒಡೆತನ ಅಥವಾ ಸ್ವಯಂ-ಕಾರ್ಯಾಚರಣೆಯ ಸೇವೆಗಳಲ್ಲಿ ಇದು ತಿಳಿದದ್ದಕ್ಕಿಂತ ಕಡಿಮೆ ಬೆಲೆಯಲ್ಲಿ ತೃಪ್ತಿಕರ ಸೇವೆಯನ್ನು ಕೊಳ್ಳಲು ಸರಕಾರೀ ಶಾಖೆ ವಿಫಲವಾದಾಗ ಇಂತಹ ಪರಿಸ್ಥಿತಿ ಹೆಚ್ಚಾಗಿ ಸಂಭವಿಸುವುದು.

ಖಾಸಗೀಕರಣದ ಅಡಿಯಲ್ಲಿ ಮಾಡಬಹುದಾದ್ದಕ್ಕಿಂತ ಹೆಚ್ಚಿನ ನಿಯಂತ್ರಣ ಸರಕಾರೀ ಶಾಖೆಯ ಉತ್ತಮ ಆಸಕ್ತಿಯಲ್ಲಿ ಕಂಡುಹಿಡಿಯುವ ಮತ್ತೊಂದು ಪರಿಸ್ಥಿತಿ ಉಂಟಾಗಬಹುದು.

ದೇಶೀಯವಲ್ಲದ ಅಥವಾ ಅಂತರಾಷ್ಟ್ರೀಯ ಕಾರ್ಪೋರೇಷನ್‌ಗಳು ಅಥವಾ ಘಟಕಗಳು ಹೆಚ್ಚಾಗಿ ಸೇವೆಗಳನ್ನು ಒದಗಿಸುವವರಾದಾಗ ರಾಷ್ಟ್ರೀಯ-ಸುರಕ್ಷಾ ಹಿತಾಸಕ್ತಿಗಳು ಖಾಸಗೀಕರಣ ಹಿಂತೆಗೆದುಕೊಳ್ಳುವ ಪ್ರಕ್ರಿಯೆಗಳ ಮೂಲವಾಗಬಹುದು.

ಉದಾಹರಣೆಗೆ, 2001ರಲ್ಲಿ, ಸಪ್ಟೆಂಬರ್ 11 ರ ಧಾಳಿಯ ಪರಿಣಾಮವಾಗಿ, ಸಂಯುಕ್ತ ಸಂಸ್ಥಾನಗಳಲ್ಲಿ ಖಾಸಗಿ ವಿಮಾನ ನಿಲ್ದಾಣ ಭದ್ರತಾ ಕೈಗಾರಿಕೆ ರಾಷ್ಟ್ರೀಕರಣಗೊಂಡಿತು[ಸೂಕ್ತ ಉಲ್ಲೇಖನ ಬೇಕು] ಮತ್ತು ಸಾರಿಗೆ ಸುರಕ್ಷತಾ ಕಾರ್ಯನಿರ್ವಹಣದ ಪ್ರಾಧಿಕಾರದಲ್ಲಿ ಇಡಲಾಯಿತು.

ಇವನ್ನೂ ನೋಡಿ

[ಬದಲಾಯಿಸಿ]
  • ಸಹಕಾರಿ
  • ನಿಗಮೀಕರಣ
  • ನಿಯಂತ್ರಣ ತೆಗೆಯುವುದು
  • ತೆರೆದ ಮಾರುಕಟ್ಟೆ ನಿಯಮಗಳಿಗನುಗುಣವಾಗಿ ಅಧಿಕಾರ ವಹಿಸುವಿಕೆ
  • ರಾಷ್ಟ್ರೀಕರಣ - ವ್ಯತಿರಿಕ್ತ ಪ್ರಕ್ರಿಯೆ
  • ಸಾರ್ವಜನಿಕ ಒಡೆತನ
  • ಭದ್ರತೆಗೊಳಿಸುವಿಕೆ
  • ಸೋಲುವುದು ಸಾಧ್ಯವಿಲ್ಲದ್ದು
  • ಪ್ರಜಾಕಲ್ಯಾಣ ರಾಜ್ಯ

ಪ್ರಕರಣಗಳ ಅಧ್ಯಯನ:

  • ರಷ್ಯಾದಲ್ಲಿ ಖಾಸಗೀಕರಣ
  • ಬ್ರಿಟೀಷ್ ರೈಲ್ವೇಯ ಖಾಸಗೀಕರಣ
  • ಸಾರ್ವಜನಿಕ ಶೌಚಾಲಯಗಳ ಖಾಸಗೀಕರಣ
  • ರಶೀದಿ ಖಾಸಗೀಕರಣ

ವಿಸ್ತರಣೆಯ ತಂತ್ರಗಾರಿಕೆಗಳು:

  • ಖಾಸಗಿ ವಲಯ ವಿಸ್ತರಣೆ
  • ವಿಶೇಷ ಆರ್ಥಿಕ ವಲಯ
  • ನಗರ ಉದ್ಯಮ ವಲಯ

ಟಿಪ್ಪಣಿಗಳು

[ಬದಲಾಯಿಸಿ]
  1. ಚೌಧರಿ,ಎಫ್.ಎಲ್. ‘’ಕರಪ್ಟ್ ಬ್ಯುರೋಕ್ರಸಿ ಆ‍ಯ್‌೦ಡ್ ಪ್ರೈವೇಟೈಸೆಶನ್ ಆಫ್ ಟ್ಯಾಕ್ಸ್ ಎನ್‌ಫೋರ್ಸ್‌ಮೆಂಟ್’’, 2006: ಪಾಠಕ್ ಸಮಾಬೇಶ್,ಢಕಾ.
  2. "Musselburgh Co-op in crisis as privatisation bid fails". Co-operative News. 2005-11-01. Retrieved 2008-05-21.
  3. ಕಂಪ್ಯಾರ್ Bel, Germà (2006). "Retrospectives: The Coining of 'Privatisation' and Germany's National Socialist Party". Journal of Economic Perspectives. 20 (3): 187–194. doi:10.1257/jep.20.3.187.
  4. Edwards, Ruth Dudley (1995). The Pursuit of Reason: The Economist 1843-1993. Harvard Business School Press. p. 946. ISBN 0-87584-608-4.
  5. ೫.೦ ೫.೧ ೫.೨ ಡೇವಿಡ್ ಪಾರ್ಕರ್, ಡೇವಿಡ್ ಎಸ್.ಸಾಲ್‌ರಿಂದ ಇಂಟರ್ನ್ಯಾಷನಲ್ ಹ್ಯಾಂಡ್‌ಬುಕ್ ಆನ್ ಪ್ರೈವೇಟೈಸೆಶನ್
  6. ಸೆಂಟ್ರಲ್ ಯೂರೋಪ್ಸ್ ಮಾಸ್-ಪ್ರೊಡಕ್ಷನ್ ಪ್ರೈವೇಟೈಸೆಶನ್ Archived 2009-10-18 ವೇಬ್ಯಾಕ್ ಮೆಷಿನ್ ನಲ್ಲಿ., ಹೆರಿಟೇಜ್ ಲೆಕ್ಚರ್ #352
  7. ಡ್ಯಾಗ್ಡೇವಿರೆನ್ (2006) "ರಿವಿಜಿಟಿಂಗ್ ಪ್ರೈವೇಟೈಸೆಶನ್ ಇನ್ ದ ಕಾಂಟೆಕ್ಸ್ಟ್ ಆಫ್ ಪಾವರ್ಟಿ ಅಲೆವಿಯೇಶನ್, ಸಂಪುಟ. 18, 469–488
  8. "Privatisation in Competitive Sectors: The Record to Date, World Bank Policy Research Working Paper No. 2860". John Nellis and Sunita Kikeri. World Bank. June 2002.
  9. "From State To Market: A Survey Of Empirical Studies On Privatisation" (PDF). William L. Megginson and Jeffry M. Netter. Journal of Economic Literature. June 2001. Archived from the original (PDF) on 2005-10-02. Retrieved 2010-11-09. {{cite news}}: Italic or bold markup not allowed in: |publisher= (help)
  10. ಪ್ರೈವೇಟೈಸೆಶನ್ ಇನ್ ಕಾಂಪಿಟಿಟಿವ್ ಸೆಕ್ಟರ್ಸ್: ದ ರೆಕಾರ್ಡ್ ಟು ಡೇಟ್ ಸುನೀತಾ ಕಿಕೆರಿ ಮತ್ತು ಜಾನ್ ನೆಲ್ಲಿಸ್. ವರ್ಲ್ಡ್ ಬ್ಯಾಂಕ್ ಪಾಲಿಸಿ ರಿಸರ್ಚ್ ವರ್ಕಿಂಗ್ ಪೇಪರ್ 2860, ಜೂನ್ 2002. ಪ್ರೈವೇಟೈಸೆಶನ್ ಆ‍ಯ್‌೦ಡ್ ಕರರ್ಪ್ಶನ್. ಡೇವಿಡ್ ಮಾರ್ಟಿಮೊರ್ಟ್ ಮತ್ತು ಸ್ಟೀಪನ್ ಸ್ಟ್ರಾಬ್. ರೋಜರ್ ಎಲ್.ಕೆಂಪ್ ಗ್ರಂಥಾಲಯ ಉಲ್ಲೇಖಕ್ಕಾಗಿ ಪ್ರೈವೇಟೈಸೆಶನ್: ದ ಪ್ರೊವಿಜನ್ ಆಫ್ ಪಬ್ಲಿಕ್ ಸರ್ವೀಸಸ್ ಬೈ ದ ಪ್ರೈವೇಟ್ ಸೆಕ್ಟರ್, ಎಂಬ ಹೆಸರಿನ ಸಂಪುಟ ಬರೆದಿದ್ದಾನೆ. ಮೊದಲಿಗೆ 1991ರಲ್ಲಿ ಪ್ರಕಟಗೊಂಡಿತು ಮತ್ತು 2007ರಲ್ಲಿ ಮರುಪ್ರಕಟಣೆಗೊಂಡಿತು . ಈ ಸಂಪುಟದಲ್ಲಿ, ಈ ಕ್ಷೇತ್ರದಲ್ಲಿ ಒಂದು ಒಳ್ಳೆಯ ಆಡಳಿತ ನಡೆಸುತ್ತಿರುವ ನಗರಸಭೆ ಆಡಳಿತವನ್ನು ರಾಷ್ಟ್ರೀಯ ಕೃತಿಗಳ ಆಧಾರದ ಮೇಲೆ ಹುಡುಕಲಾಗಿದೆ, ಆಡಳಿತಗಾರರು ತೆರಿಗೆದಾರರಿಗೆ ಮತ್ತು ನಾಗರಿಕರಿಗೆ ಆಯ್ದ ಸಾರ್ವಜನಿಕ ಸೇವೆಗಳಿಗೆ ಪರ್ಯಾಯ ಖಾಸಗಿ ವ್ಯವಸ್ಥೆಗಳನ್ನು ಹುಡುಕದಂತೆ ಕರ್ತವ್ಯ ಬದ್ಧನಾಗಿರಬೇಕು ಎಂದು ಡಾ.ಕೆಂಪ್ ಸಲಹೆ ನೀಡಿತ್ತಾರೆ. ಆಯ್ದ ಸಾರ್ವಜನಿಕ ಸೇವೆಗಳಿಗೆ ಒಪ್ಪಂದದ ವೆಚ್ಚಕ್ಕೆ,ಮತ್ತು ಇದೇ ಸೇವೆಯನ್ನು ನಗರಸಭೆಯು ನೀಡಿದರೆ ಎಷ್ಟು ವೆಚ್ಚವಾಗುತ್ತದೆ ಎಂದು ನಗರ ನಿರ್ವಾಹಕರು ನಿರ್ಧರಿಸಲು ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಲೆ ಬೇಕು ಎಂದು ಹೇಳುತ್ತಾರೆ. ಕೆಲವೊಮ್ಮೆ ಖಾಸಗಿಯವರು ನೀಡುವ ಸೇವೆಗಿಂತ ಸಾರ್ವಜನಿಕ ವಲಯದವರು ನೀಡುವ ಸೇವೆಯ ವೆಚ್ಚವೆ ಪರಿಣಾಮಕಾರಿಯಾಗಿರುತ್ತದೆ ಎಂದು ಕೆಂಪ್ ಟಿಪ್ಪಣಿ ನೀಡುತ್ತಾರೆ. ಕೆಲವೊಮ್ಮೆ ಖಾಸಗಿಯವರು ಸಾರ್ವಜನಿಕ ಸೇವೆಗಳನ್ನು ನೀಡುವ ವೆಚ್ಚವು ತುಂಬಾ ಕಡಿಮೆ ಇರುತ್ತದೆ. ಆದರೆ but the benefit to society may actually turn out to be less as well.
  11. ತಕಹರಾ, "ಆಲ್ ಐಸ್ ಆನ್ ಜಪಾನ್ ಪೋಸ್ಟ್"Faiola, Anthony (2005-10-15). "Japan Approves Postal Privatisation". Washington Post. The Washington Post Company. p. A10. Retrieved 2007-02-09.
  12. ೧೨.೦ ೧೨.೧ ವಿಲಿಯಂ ಎಲ್. ಮೆಗ್ಗಿನ್ಸನ್‌ರಿಂದ ದ ಫೈನಾನ್ಶಿಯಲ್ ಇಕನಾಮಿಕ್ಸ್ ಆಫ್ ಪ್ರೈವೇಟೈಸೆಶನ್.ಪು 205 - 206

ಉಲ್ಲೇಖಗಳು

[ಬದಲಾಯಿಸಿ]
  • ಅಲೆಕ್ಸಾಂಡರ್,ಜಾಸನ್. 2009. ಕಾಂಟ್ರಾಕ್ಟಿಂಗ್ ಥ್ರೂ ದ ಲೆನ್ಸ್ ಆಫ್ ಕ್ಲಾಸಿಕಲ್ ಪ್ರಾಗ್ಮಾಟಿಸಂ: ಆ‍ಯ್‌ನ್ ಎಕ್ಸ್‌ಪ್ಲೋರೆಶನ್ ಆಫ್ ಲೋಕಲ್ ಗವರ್ನಮೆಂಟ್ ಕಾಂಟ್ರ್ಯಾಕ್ಟಿಂಗ್. ಅಪ್ಲೈಡ್ ರಿಸರ್ಚ್ ಪ್ರೊಜೆಕ್ಟ್ಸ್. ಟೆಕ್ಸಾಸ್ ರಾಜ್ಯ ಯುನಿವರ್ಸಿಟಿ. http://ecommons.txstate.edu/arp/288/ Archived 2010-06-21 ವೇಬ್ಯಾಕ್ ಮೆಷಿನ್ ನಲ್ಲಿ..
  • ಡೊವಾಲಿನಾ, ಜೆಸ್ಸಿಕಾ. 2006. ಅಸೆಸ್ಸಿಂಗ್ ದ ಎಥಿಕಲ್ ಇಶ್ಯೂಸ್ ಫೌಂಡ್ ಇನ್ ದ ಕಾಂಟ್ರಾಕ್ಟಿಂಗ್ ಔಟ್ ಪ್ರೊಸೆಸ್. ಅಪ್ಲೈಡ್ ರಿಸರ್ಚ್ ಪ್ರೊಜೆಕ್ಟ್ಸ್. ಟೆಕ್ಸಾಸ್ ರಾಜ್ಯ ಯುನಿವರ್ಸಿಟಿ. http://ecommons.txstate.edu/arp/108/ Archived 2010-06-25 ವೇಬ್ಯಾಕ್ ಮೆಷಿನ್ ನಲ್ಲಿ..
  • ಸೆಗೆರ್‌ಪೆಲ್ಟ್, ಫ್ರೆಡ್ರಿಕ್. 2006. ವಾಟರ್ ಫಾರ್ ಸೇಲ್: ಹೌ ಬಿಜಿನೆಸ್ ಆ‍ಯ್‌೦ಡ್ ದ ಮಾರ್ಕೆಟ್ ಕ್ಯಾನ್ ರಿಸಾಲ್ವ ದ ವರ್ಲ್ಡ್ಸ್ ವಾಟರ್ ಕ್ರೈಸಿಸ್. ಸ್ಟಾಕ್‌ಹೋಮ್ ನೆಟ್‌ವರ್ಕ್. http://www.stockholm-network.org/downloads/events/d41d8cd9-Amigo%20Segerfeldt.pdf Archived 2011-07-16 ವೇಬ್ಯಾಕ್ ಮೆಷಿನ್ ನಲ್ಲಿ.
  • ಬೆರ್ನಾರ್ಟ್ ಬ್ಲ್ಯಾಕ್ ಮುಂತಾದವರು., 'ರಷಿಯನ್ ಪ್ರೈವೇಟೈಸೇಶನ್ ಆ‍ಯ್‌೦ಡ್ ಕಾರ್ಪೊರೇಟ್ ಗವರ್ನನ್ಸ್: ವಾಟ್ ವೆಂಟ್ ರಾಂಗ್? (2000) 52 ಸ್ಟ್ಯಾನ್‌ಫೋರ್ಡ್ ಲಾ ರಿವ್ಯೂ 1731
ಸೂಚಿಯಿಲ್ಲದ

ಜರ್ನಲ್ ಆಫ್ ಇಕಾನಾಮಿಕ್ ಲಿಟ್ರೆಚರ್ 39(2), ಜೂನ್ 2001, 321-89.

ಬಾಹ್ಯ ಕೊಂಡಿಗಳು

[ಬದಲಾಯಿಸಿ]