ವಿಷಯಕ್ಕೆ ಹೋಗು

ಕೋಹಿನೂರ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕೋಹಿನೂರ್ ವಜ್ರ ಇಂದ ಪುನರ್ನಿರ್ದೇಶಿತ)
Koh-i-Noor
Glass replica of the Koh-i-Noor Diamond after its first cut. From the Reich der Kristalle museum in Munich.
ತೂಕ105.602 carats (21.1204 g)
Colourfinest white
ಮೂಲದ ದೇಶIndia
ಮೂಲದ ಗಣಿKollur Mine, Guntur District, ಆಂಧ್ರ ಪ್ರದೇಶ[]
ಕಡಿತ ಮಾದಿದವರುHortenso Borgia
ಮೂಲ ಮಾಲೀಕರುKakatiya dynasty
ಮಾಲೀಕರುPart of the British Crown Jewels
ಕೋಹಿನೂರ್‌ನ ಹೊಸ ರೂಪದ ನಕಲು
Queen Alexandra wearing the Koh-i-Noor in her coronation crown
The Koh-i-Noor in its original setting (1851)
ವಿವಿಧ ಕೋನಗಳಲ್ಲಿ ಕೋಹಿನೂರ್‌ನ ಬಗ್ಗೆ ಟ್ಯಾವರ್ನೀರ್‌ನ ಉದಾಹರಣೆ
ಎಮಿಲಿ ಎಡೆನ್‌ನ ಶಿಲಾಮುದ್ರಣವು ಮಹಾರಾಜ ರಣಜಿತ್ ಸಿಂಗ್‌ನ ಅಚ್ಚುಮೆಚ್ಚಿನ ಕುದುರೆಗಳಲ್ಲಿ ಒಂದನ್ನು ಆತನ ಕುದುರೆ ಲಾಯದ ಮುಖ್ಯಸ್ಥನೊಂದಿಗೆ ಹಾಗೂ ಕೋಹಿನೂರ್‌ಅನ್ನೂ ಒಳಗೊಂಡಂತೆ ಆಭರಣಗಳ ಸಂಗ್ರಹವನ್ನು ತೋರಿಸುತ್ತಿರುವುದು.

ಕೋಹಿನೂರ್‌ (ಹಿಂದಿ:कोहिनूर, ಪರ್ಷಿಯನ್/ಉರ್ದು: کوہ نور, ತೆಲುಗು:కోహినూరు) ಒಂದು ಕಾಲದಲ್ಲಿ ಪ್ರಪಂಚದಲ್ಲೇ ಅತಿ ದೊಡ್ಡ ವಜ್ರವಾಗಿದ್ದ 105 ಕ್ಯಾರಟ್ (21.6 ಗ್ರಾಂ) ವಜ್ರವಾಗಿದೆ. ಇದಕ್ಕೆ ಪರ್ಷಿ ಯನ್‌ನಲ್ಲಿ "ಬೆಟ್ಟದಷ್ಟು ಬೆಳಕು" ಎಂಬರ್ಥವಿದೆ. ಇದನ್ನು Kohinoor , Koh-e Noor ಅಥವಾ Koh-i-Nur ಎಂದೂ ಬರೆಯಲಾಗುತ್ತದೆ. ಕೋಹಿನೂರ್‌ ಭಾರತಆಂಧ್ರಪ್ರದೇಶಗುಂಟೂರು ಜಿಲ್ಲೆಯ ಕೊಲ್ಲೂರಿನಲ್ಲಿ ಮೊದಲು ಕಂಡು ಬಂದಿತು. ಈ ವಜ್ರಕ್ಕಾಗಿ ಇತಿಹಾಸದಲ್ಲಿ ಅನೇಕ ಹಿಂದು, ಮೊಘಲ್, ಪರ್ಷಿಯನ್, ಅಫ್ಘನ್, ಸಿಖ್ ಮತ್ತು ಬ್ರಿಟಿಷ್ ಆಡಳಿತಗಾರರು ತೀವ್ರವಾಗಿ ಕಾದಾಡಿದ್ದಾರೆ. ಅಲ್ಲದೇ ಯುದ್ಧದ ಸಂದರ್ಭದಲ್ಲಿ ಲೂಟಿ ಮಾಡಿದ್ದಾರೆ. ಇದು ಅಂತಿಮವಾಗಿ ಈಸ್ಟ್ ಇಂಡಿಯಾ ಕಂಪೆನಿಯಿಂದ ಸೂರೆಮಾಡಲ್ಪಟ್ಟಿತು. ಅದಲ್ಲದೇ ರಾಣಿ ವಿಕ್ಟೋರಿಯಾಳು 1877ರಲ್ಲಿ ಭಾರತದ ಸರ್ವಾಧಿಕಾರಿಣಿ ಎಂಬುದಾಗಿ ಘೋಷಿಸಲ್ಪಟ್ಟಾಗ ಬ್ರಿಟಿಷ್ ರಾಜಪ್ರಭುತ್ವದ ಆಭರಣಗಳ ಭಾಗವಾಯಿತು.

ಮ‌ೂಲ ಮತ್ತು ಆರಂಭಿಕ ಇತಿಹಾಸ

[ಬದಲಾಯಿಸಿ]

ಪುರಾಣ ಕಥೆಗಳು

[ಬದಲಾಯಿಸಿ]
  • ಈ ವಜ್ರದ ಮ‌ೂಲವು ಅಸ್ಪಷ್ಟವಾಗಿದೆ. ಆದರೂ ಅನೇಕ ವದಂತಿಗಳು ಚಾಲ್ತಿಯಲ್ಲಿವೆ. ಕೆಲವು ಮ‌ೂಲಗಳ ಪ್ರಕಾರ, ಕೋಹಿನೂರ್‌ ಮ‌ೂಲತಃ 5000 ವರ್ಷಗಳ ಹಿಂದೆ ಕಂಡುಬಂದಿತ್ತು. ಅಲ್ಲದೇ ಇದನ್ನು ಪುರಾತನ ಸಂಸ್ಕೃತದ ಗ್ರಂಥಗಳಲ್ಲಿ ಶಮಂತಕ ಎಂಬ ಹೆಸರಿನಲ್ಲಿ ಸೂಚಿಸಲಾಗಿದೆ. ಕೆಲವು ಹಿಂದು ಪುರಾಣ ದಾಖಲೆಗಳ ಪ್ರಕಾರ,[] ಕೃಷ್ಣನು ಕೋಹಿನೂರ್‌ ವಜ್ರವನ್ನು ಜಾಂಬವಂತನಿಂದ ಪಡೆದುಕೊಂಡಿದ್ದನು. ಆತನ ಪುತ್ರಿ ಜಾಂಬವತಿಯು ನಂತರ, ಕೃಷ್ಣನನ್ನು ಮದುವೆಯಾಗುತ್ತಾಳೆ. ಕೃಷ್ಣನು ಸಿಂಹದಿಂದ (ನಂತರ ಅದನ್ನು ಜಾಂಬವಂತನು ಕೊಂದನು) ಕೊಲ್ಲಲ್ಪಟ್ಟ ಸತ್ರಾರ್ಜಿತ ನ ಸಹೋದರನಿಂದ ವಜ್ರವನ್ನು ಕಳವು ಮಾಡಿದ ಆಪಾದನೆಗೊಳಗೊದನು.[]
  • ಸತ್ರಾರ್ಜಿತ ತನ್ನ ಸಹೋದರನನ್ನು ಕೊಂದಿದುದಕ್ಕೆ ಕೃಷ್ಣನನ್ನು ದೂಷಿಸಿದನು. ಕೃಷ್ಣನು ಅವನ ಹೆಸರನ್ನು ಉಳಿಸಿಕೊಳ್ಳಲು ಮತ್ತು ವಜ್ರವನ್ನು ಸತ್ರಾಜಿತ್‌ನಿಗೆ ಹಿಂದಕ್ಕೆ ಕೊಡಲು ಜಾಂಬವನನೊಂದಿಗೆ ತೀವ್ರ ಹೋರಾಟ ನಡೆಸಿದನು. ತಪ್ಪಿನ ಅರಿವಾಗಿ ಸತ್ರಾರ್ಜಿತ ಕೃಷ್ಣನಿಗೆ ತನ್ನ ಪುತ್ರಿ ಮತ್ತು ಕೋಹಿನೂರ್‌ ವಜ್ರವನ್ನೂ ಕೊಟ್ಟನು. ಕೃಷ್ಣನು, ಆತನ ಪುತ್ರಿ ಸತ್ಯಭಾಮಳನ್ನು ಒಪ್ಪಿದನು, ಆದರೆ ಶಮಂತಕವನ್ನು ತೆಗೆದುಕೊಳ್ಳಲು ನಿರಾಕರಿಸಿದನು.[]

ಇತಿಹಾಸ

[ಬದಲಾಯಿಸಿ]
  • ಕೋಹಿನೂರ್‌ ಪ್ರಪಂಚದಲ್ಲೇ ಬಹು ಹಿಂದಿನ ವಜ್ರ ಉತ್ಪಾದಿಸುವ ಪ್ರದೇಶಗಳಲ್ಲಿ ಒಂದಾದ ಭಾರತಆಂಧ್ರಪ್ರದೇಶಕಾಕತೀಯ ಸಾಮ್ರಾಜ್ಯದ ಗುಂಟೂರು ಪ್ರದೇಶದಲ್ಲಿ ಮೊದಲು ಹುಟ್ಟಿಕೊಂಡಿದೆ; ಎಂದು ಐತಿಹಾಸಿಕ ಸಾಕ್ಷ್ಯವು ಸೂಚಿಸುತ್ತದೆ. ಬ್ರೆಜಿಲ್‌ನಲ್ಲಿ ವಜ್ರಗಳು ಕಂಡುಹಿಡಿಯಲ್ಪಡುವವರೆಗೆ 1730ರವರೆಗೆ ಈ ಪ್ರದೇಶವೊಂದೇ ವಜ್ರಗಳ ಮ‌ೂಲವಾಗಿತ್ತು.[]
  • "ಗೋಲ್ಕೊಂಡ" ವಜ್ರ ಎಂಬ ಪದವು ಅಪ್ಪಟ ಬಿಳಿ ಬಣ್ಣದ, ಶುಭ್ರ ಮತ್ತು ಪಾರದರ್ಶಕ ವಜ್ರಗಳನ್ನು ನಿರೂಪಿಸಲು ಹುಟ್ಟಿಕೊಂಡಿತು. ಅವು ಅತಿ ವಿರಳ ಮತ್ತು ಹೆಚ್ಚಿನ ಬೇಡಿಕೆಯಲ್ಲಿವೆ. ಈ ವಜ್ರವನ್ನು ಆಂಧ್ರಪ್ರದೇಶದ ಇಂದಿನ ಗುಂಟೂರು ಜಿಲ್ಲೆಯಲ್ಲಿ ಪರಿತಲ ಎಂಬ ಹಳ್ಳಿಯ ಹತ್ತಿರ ಕೊಲ್ಲೂರು ಗಣಿಯಲ್ಲಿ ನೆಲದಿಂದ ಅಗೆದು ತೆಗೆಯಲಾಯಿತು.[][] ಆ ವಜ್ರವು ಕಾಕತಿಯ ರಾಜನ ಸ್ವತ್ತಾಯಿತು.
  • ದೆಹಲಿಯಲ್ಲಿ ಖಿಲ್ಜಿ ರಾಜಸಂತತಿಯು ಕ್ರಿ.ಶ. 1320ರಲ್ಲಿ ಕೊನೆಗೊಂಡ ನಂತರ, ಘಿಯಾಸ್ ಉದ್ ದಿನ್ ತುಘ್ಲಕ್ ಶಾಹ್ I ದೆಹಲಿಯ ಗದ್ದುಗೆಯನ್ನು ಏರಿದನು. ತುಘ್ಲಕ್ ಅವನ ಕಮಾಂಡರ್ ಉದ್ಗಲ್ ಖಾನ್‌ನನ್ನು 1323ರಲ್ಲಿ ಕಾಕತಿಯ ರಾಜ ಪ್ರತಾಪರುದ್ರನನ್ನು ಸೋಲಿಸಲು ಕಳುಹಿಸಿದನು. ಉದ್ಗಲ್ ಖಾನ್‌ನ ಆ ದಾಳಿಯು ವಿಫಲಗೊಂಡಿತು. ಆದರೆ ಅವನು ಒಂದು ತಿಂಗಳೊಳಗಾಗಿ ಭಾರಿ ಮತ್ತು ಸನ್ನದ್ದ ಸೇನೆಯೊಂದಿಗೆ ಮತ್ತೊಮ್ಮೆ ಆಕ್ರಮಣ ಮಾಡಿದನು. ಸಜ್ಜುಗೊಂಡಿರದ ಕಾಕತಿಯ ಸೇನೆಯು ಸೋತಿತು.
  • ಕಾಕತಿಯ ಸಾಮ್ರಾಜ್ಯದ ರಾಜಧಾನಿ ಒರುಗಲ್ಲಿನ (ಈಗಿನ ವರಾಂಗಲ್) ಲೂಟಿ, ಸುಲಿಗೆ ಮತ್ತು ನಾಶವು ತಿಂಗಳಗಳ ಕಾಲ ಮುಂದುವರಿಯಿತು. ಭಾರಿ ಪ್ರಮಾಣದಲ್ಲಿ ಮುತ್ತು, ಚಿನ್ನ, ವಜ್ರ ಮತ್ತು ಆನೆಯ ದಂತಗಳನ್ನು, ಕುದುರೆ ಮತ್ತು ಒಂಟೆಗಳ ಮೇಲೆ ದೆಹಲಿಗೆ ಸಾಗಿಸಿದರು. ಕೋಹಿನೂರ್‌ ವಜ್ರವು ಭಾರಿ ಸಂಪತ್ತಿನ ಭಾಗವಾಗಿತ್ತು.[][]
  • ಆ ನಂತರ, ಈ ವಜ್ರವು ದೆಹಲಿ ಸುಲ್ತಾನ ಸಾಮ್ರಾಜ್ಯದ ಅನುಕ್ರಮ ಆಡಳಿತಗಾರರಲ್ಲಿ ಮುಂದಕ್ಕೆ ಸಾಗಿ, ಅಂತಿಮವಾಗಿ 1526ರಲ್ಲಿ ಮೊದಲ ಮೊಘಲ್ ಚಕ್ರವರ್ತಿ ಬಾಬರ್‌ನ ಕೈ ಸೇರಿತು. ಕೋಹಿನೂರ್‌ಅನ್ನು ಒಂದು ಗುರುತಿಸಲಾಗುವ ಹೆಸರಿನಿಂದ 1526ರಲ್ಲಿ ಮೊದಲು ಸೂಚಿಸಲಾಯಿತು. ಬಾಬರ್‌ ತನ್ನ ಆತ್ಮ ಚರಿತ್ರೆ ಬಾಬರ್ನಾಮಾ ದಲ್ಲಿ, ಈ ವಜ್ರವು 1294ಮಾಳ್ವದ ಅನಾಮಿಕ ರಾಜನಿಗೆ ಸೇರಿದೆ ಎಂದು ಸೂಚಿಸಿದ್ದಾನೆ.
  • ಬಾಬರ್‌ ಆ ವಜ್ರಕ್ಕೆ ಇಡೀ ಪ್ರಪಂಚಕ್ಕೆ ಎರಡು ದಿನಗಳ ಕಾಲ ಆಹಾರ ಒದಗಿಸಲು ಬೇಕಾಗುವಷ್ಟು ಬೆಲೆಯನ್ನು ನೀಡಿದನು. ಮಾಳ್ವದ ರಾಜನ ಈ ಉತ್ಕೃಷ್ಟ ಆಸ್ತಿಯನ್ನು ಅಲ್ಲಾವುದ್ದಿನ್ ಖಿಲ್ಜಿಗೆ ನೀಡಲು ಅವನ ಮೇಲೆ ಎಷ್ಟೊಂದು ಬಲಪ್ರಯೋಗ ಮಾಡಲಾಗಿತ್ತು ಎಂಬುದನ್ನು ಬಾಬರ್ನಾಮಾವು ಸವಿವರವಾಗಿ ನಿರೂಪಿಸುತ್ತದೆ; ನಂತರ ಅದನ್ನು ದೆಹಲಿ ಸುಲ್ತಾನ ಸಾಮ್ರಾಜ್ಯವನ್ನು ಆಳಿದ ರಾಜಸಂತತಿಯವರು ಅನುಕ್ರಮವಾಗಿ ಪಡೆದರು.
  • ಅಂತಿಮವಾಗಿ 1526ರಲ್ಲಿ ಆ ಸಾಮ್ರಾಜ್ಯದ ಕೊನೆಯ ಆಡಳಿತಗಾರನನ್ನು ಸೋಲಿಸಿದ ನಂತರ ಬಾಬರ್‌ನ ವಶಕ್ಕೆ ಬಂದಿತು. ಬಾಬರ್ನಾಮಾವು ಸುಮಾರು 1526-30ರಲ್ಲಿ ಬರೆಯಲ್ಪಟ್ಟಿತ್ತು; ಬಾಬರ್‌ನ ಈ ಮಾಹಿತಿಗೆ ದೊರೆತ ಮ‌ೂಲದ ಬಗ್ಗೆ ತಿಳಿದಿಲ್ಲ. ಅವನು ಬಾಬ ರ್ನಾಮಾದಲ್ಲಿ ತನ್ನ ಅಸ್ತಿತ್ವದ ಬಗ್ಗೆ ವದಂತಿಯನ್ನು ಅಲ್ಲಿಲ್ಲಿ ಕೇಳಿಕೊಂಡು; ವರಾಂಗಲ್‌ನ ಚಕ್ರವರ್ತಿಯನ್ನು ಮಾಳ್ವ ರಾಜನೊಂದಿಗೆ ಒಂದಾಗಿಸಿರಬಹುದು. ಆತ ಆ ವಜ್ರವನ್ನು ಈಗಿರುವ ಹೆಸರಿನಲ್ಲಿ ಕರೆದಿರಲಿಲ್ಲ.
  • ಆದರೆ 'ಬಾಬರನ ವಜ್ರ'ದ ಬಗೆಗಿನ ಕೆಲವು ವಾದವು[], ಅದು ನಂತರ ಕೋಹಿನೂರ್‌ ಎಂದಾದ ವಜ್ರವಾಗಿರಬಹುದೆಂದು ತಿಳಿಯಲಾಗಿದೆ. ಬಾಬರ್‌ ಮತ್ತು ಹ್ಯುಮಾಯ‌ೂನ್ ಇಬ್ಬರೂ ಅವರ ಆತ್ಮ ಚರಿತ್ರೆಗಳಲ್ಲಿ 'ಬಾಬರನ ವಜ್ರ' ದ ಮ‌ೂಲದ ಬಗ್ಗೆ ಸ್ಪಷ್ಟವಾಗಿ ಸೂಚಿಸಿದ್ದಾರೆ. ಈ ವಜ್ರವು ಗ್ವಾಲಿಯರ್‌ನ ಕಚ್ವಾಹ ಆಡಳಿತಗಾರರಲ್ಲಿತ್ತು. ನಂತರ ತೋಮರ ರಾಜಸಂತತಿಯವರ ಕೈಗೆ ಬಂದಿತು.
  • ತೋಮರ ಸಂತತಿಯ ಕೊನೆಯವನಾದ ವಿಕ್ರಮಾದಿತ್ಯನು ದೆಹಲಿಯ ಸುಲ್ತಾನ ಸಿಕಂದರ್ ಲೋದಿಯಿಂದ ಸೋಲಲ್ಪಟ್ಟು, ದೆಹಲಿ ಸುಲ್ತಾನ ಸಾಮ್ರಾಜ್ಯದ ಪಿಂಚಣಿದಾರನಾಗಿ ಅಲ್ಲೇ ಜೀವನ ಕಳೆಯಲು ಉಳಿದುಕೊಂಡನು. ಲೋದಿಯರನ್ನು ಸೋಲಿಸಿ, ಆಡಳಿತಕ್ಕೆ ಬಂದ ಮೊಘಲರು ಅವನ ಮನೆಯನ್ನು ಲೂಟಿ ಮಾಡಿದರು. ರಾಜ ಹ್ಯೂಮಾಯ‌ೂನ್ ಮಧ್ಯಪ್ರವೇಶಿಸಿ, ಅವನ ಆಸ್ತಿಯನ್ನು ಹಿಂದಕ್ಕೆ ಒಪ್ಪಿಸಿ, ಆತನಿಗೆ ದೆಹಲಿಯನ್ನು ಬಿಟ್ಟು ಹೋಗಲು ಅನುವು ಮಾಡಿಕೊಟ್ಟನು.
  • ಅಲ್ಲದೇ ಚಿತ್ತಾವರ್‌ನ ಮೇವರ್ನಲ್ಲಿ ಆಶ್ರಯ ಪಡೆಯುವಂತೆ ಹೇಳಿದನು. ಹ್ಯೂಮಾಯ‌ೂನ್‌ನ ಉಪಕಾರಕ್ಕೆ ಪ್ರತಿಯಾಗಿ ರಾಜ ವಿಕ್ರಮಾದಿತ್ಯನು ಕೋಹಿನೂರ್‌ ಆಗಿರಬಹುದೆಂದು ಊಹಿಸಲಾಗಿರುವ ಒಂದು ವಜ್ರವನ್ನು ಅವನಿಗೆ ನೀಡಿದನು. ಹ್ಯೂಮಾಯ‌ೂನ್‌ ತನ್ನ ಜೀವನ ದುದ್ದಕ್ಕೂ ಹೆಚ್ಚಿನ ದುರದೃಷ್ಟಶಾಲಿಯಾಗಿದ್ದನು. ಹ್ಯೂಮಾಯ‌ೂನ್‌ನನ್ನು ಸೋಲಿಸಿದ ಶೇರ್ ಶಾಹ್ ಸುರಿಯು ಬಾಂಬುತೋಪು ಸಿಡಿದ ಬೆಂಕಿಯಿಂದ ಸಾವನ್ನಪ್ಪಿದನು.
  • ಆತನ ಪುತ್ರ ಜಲಲ್ ಖಾನ್ ಮಂತ್ರಿ ಪದವಿಯಿಂದ ಪದಚ್ಯುತಿಗೊಂಡ ಅವನ ಸೋದರಳಿಯನಿಂದ ಕೊಲ್ಲ ಲ್ಪಟ್ಟನು. ಆತ ನಂತರ ಇನ್ನಷ್ಟು ಗೆಲುವು ಗಳಿಸಬೇಕೆಂಬ ದುರಾಸೆಯಿಂದಾಗಿ ಅಖಂಡ ಭಾರತ ಸಾಮ್ರಾಜ್ಯವನ್ನು ಕಳೆದುಕೊಂಡನು. ಹ್ಯೂಮಾಯ‌ೂನ್‌ನ ಮಗ ಅಕ್ಬರ್ ಆ ವಜ್ರವನ್ನು ತನ್ನೊಂದಿಗೆ ಇರಿಸಿಕೊಳ್ಳಲೇ ಇಲ್ಲ. ನಂತರ ಅದನ್ನು ಶಾ ಜಹಾನ್ ತನ್ನ ಖಜಾನೆಯಿಂದ ಹೊರಗೆ ತೆಗೆದನು. ಅಕ್ಬರನ ಮೊಮ್ಮಗ ಶಾ ಜಹಾನ್ ಆತನ ಪುತ್ರ, ಮ‌ೂವರು ಸಹೋದರರ ಕೊಲೆಗೆ ಏರ್ಪಾಡು ಮಾಡಿದ ಔರಂಗಜೇಬ್‌ನಿಂದ ಪದಚ್ಯುತಿಗೊಂಡನು.

ಚಕ್ರವರ್ತಿಗಳ ಹರಳುಗಳು

[ಬದಲಾಯಿಸಿ]
  • ತಾಜ್ ಮಹಲ್‌ನ ನಿರ್ಮಾಣಕ್ಕೆ ಪ್ರಸಿದ್ಧನಾದ ಮೊಘಲ್ ಚಕ್ರವರ್ತಿ ಶಾ ಜಹಾನ್ ಈ ಹರಳನ್ನು ತನ್ನ ಅಲಂಕೃತ ನವಿಲಿನ ಸಿಂಹಾಸನದಲ್ಲಿ ಇರಿಸಿಕೊಂಡಿದ್ದನು. ಆತನ ಪುತ್ರ,ಔರಂಗಜೇಬ್‌ ಕಾಯಿಲೆಯ ತಂದೆಯನ್ನು ಆಗ್ರ ಕೋಟೆಯ ಹತ್ತಿರದ ಜೈಲಿನಲ್ಲಿ ಇರಿಸಿದನು. ಅವನು ಕೋಹಿನೂರ್‌ ವಜ್ರವನ್ನು ಕಿಟಕಿಯ ಹತ್ತಿರ ಇರಿಸಿದ್ದನು. ಅದರಿಂದ ಶಾ ಜಹಾನ್ ತಾಜ್ ಮಹಲ್‌ಅನ್ನು ಆ ವಜ್ರದಲ್ಲಿ ಬೀಳುತ್ತಿದ್ದ ಅದರ ಪ್ರತಿಬಿಂಬದ ಮ‌ೂಲಕ ನೋಡಬೇಕಾಗಿತ್ತು; ಎಂದು ಐತಿಹಾಸಿಕ ಕಥೆಯಲ್ಲಿ ಹೇಳಲಾಗಿದೆ.
  • ನಂತರ ಔರಂಗಜೇಬ್‌ ಅದನ್ನು ತನ್ನ ರಾಜಧಾನಿ ಲಾಹೋರ್‌ಗೆ ತಂದು, ವೈಯಕ್ತಿಕ ಬಾದ್‌ಶಾಹಿ ಮಸೀದಿಯಲ್ಲಿರಿಸಿದನು. ಅಲ್ಲಿ ಅದು ನಾದರ್ ಶಾ 1739ರಲ್ಲಿ ದಾಳಿ ಮಾಡಿ, ಆಗ್ರಾ ಮತ್ತು ದೆಹಲಿಯನ್ನು ಲೂಟಿ ಮಾಡುವವರೆಗೂ ಇತ್ತು. ನವಿಲಿನ ಸಿಂಹಾಸನದೊಂದಿಗೆ ಕೋಹಿನೂರ್‌ ವಜ್ರವನ್ನೂ 1739ರಲ್ಲಿ ಆತ ಪರ್ಷಿಯಾಕ್ಕೆ ತೆಗೆದುಕೊಂಡುಹೋದನು. ಪ್ರಸಿದ್ಧ ವಜ್ರವನ್ನು ಪಡೆಯಬೇಕೆಂಬ ಆಸೆಯು ಅಂತಿಮವಾಗಿ ಪೂರೈಸಲ್ಪಟ್ಟಾಗ ನಾದರ್ ಶಾ ಅದನ್ನು ಕೋಹಿನೂರ್‌! ಎಂದು ಉದ್ಗರಿಸಿದನು.
  • ಆ ‌ಮ‌ೂಲಕ ವಜ್ರವು ಈಗಿರುವ ಹೆಸರನ್ನು ಪಡೆಯಿತು. ಈ ಹೆಸರಿಗೆ 1739ಕ್ಕಿಂತ ಮೊದಲಿನ ಯಾವುದೇ ಉಲ್ಲೇಖಗಳಿಲ್ಲ. ಪುರಾಣ ಕಥೆಯಲ್ಲಿ ಕೋಹಿನೂರ್‌ಗೆ ನೀಡಿದ ಬೆಲೆಯ ಬಗೆಗಿನ ದಾಖಲೆಯಲ್ಲಿ, ನಾದರ್ ಶಾನ ಜತೆಗಾರರಲ್ಲಿ ಒಬ್ಬನು ಹೀಗೆಂದು ಹೇಳಿದ್ದಾನೆ - "ಒಬ್ಬ ಬಲಿಷ್ಠ ವ್ಯಕ್ತಿಯು ಐದು ಕಲ್ಲುಗಳನ್ನು ತೆಗೆದುಕೊಂಡು, ಒಂದನ್ನು ಉತ್ತರಕ್ಕೆ, ಒಂದನ್ನು ದಕ್ಷಿಣಕ್ಕೆ, ಒಂದನ್ನು ಪೂರ್ವಕ್ಕೆ, ಒಂದನ್ನು ಪಶ್ಚಿಮಕ್ಕೆ ಮತ್ತು ಕೊನೆಯದನ್ನು ನೇರವಾಗಿ ಮೇಲಕ್ಕೆ ಎಸೆದಾಗ ಉಂಟಾಗುವ ಜಾಗದಲ್ಲಿ ಚಿನ್ನ ಮತ್ತು ರತ್ನಮಣಿಗಳಿಂದ ತುಂಬಿದಾಗ ಸಿಗುವ ಬೆಲೆಯು ಕೋಹಿ ನೂರ್‌ಗೆ ಸಮನಾಗಿದೆ‌". ಆಗ 1747ರಲ್ಲಿ ಅಹ್ಮದ್ ಶಾ ಅಬ್ದಾಲಿಯ ಕೊಲೆಯ ನಂತರ, ಆ ವಜ್ರವು ಅಫ್ಘಾನಿಸ್ತಾನದ ಅಹ್ಮದ್ ಶಾ ಅಬ್ದಾಲಿಯ ಕೈಗೆ ಬಂದಿತು.
  • ಸುಮಾರು 1830ರಲ್ಲಿ ಅಫ್ಘಾನಿಸ್ತಾನದ ಪದಚ್ಯುತಗೊಂಡ ಆಡಳಿತಗಾರ ಶಾ ಶುಜನು ಕೋಹಿನೂರ್‌ ವಜ್ರದೊಂದಿಗೆ ಊರು ಬಿಟ್ಟು ಓಡಿಹೋದನು. ಆತ ನಂತರ ಲಾಹೋರ್‌ಗೆ ಬಂದು, ಅದನ್ನು ಪಂಜಾಬ್‌ನ ಸಿಖ್ ಮಹಾರಾಜ ರಣಜಿತ್ ಸಿಂಗ್‌ಗೆ ನೀಡಿದನು; ಇದಕ್ಕೆ ಪ್ರತಿಯಾಗಿ ಮಹಾರಾಜ ರಣಜಿತ್ ಸಿಂಗ್ ಅಫ್ಘನ್ ಸಿಂಹಾಸನವನ್ನು ಗೆದ್ದು, ಶಾಜಹಾನ್ ಗೆ ಹಿಂದಿರುಗಿಸಿದನು.

ಭಾರತದಿಂದ ಸಾಗಣೆ

[ಬದಲಾಯಿಸಿ]
  • ರಣಜಿತ್ ಸಿಂಗ್ ತನ್ನನ್ನು ತಾನು ಪಂಜಾಬ್‌‌ನ ಆಡಳಿತಗಾರನಾಗಿ ಪಟ್ಟಾಭಿಷೇಕ ಮಾಡಿಕೊಂಡನು. ಅಲ್ಲದೇ ಆತನ ಅಂತ್ಯಕಾಲದ 1839ರಲ್ಲಿ ಕೋಹಿನೂರ್‌ಅನ್ನು ಒರಿಸ್ಸಾಜಗನ್ನಾಥ ದೇವಸ್ಥಾನಕ್ಕೆ ಒಪ್ಪಿಸಿದನು. ಆದರೆ ಈ ಕೊನೆಯ-ಗಳಿಗೆಯ ಉಯಿಲಿನ ಬಗ್ಗೆ ವಿವಾದವಿತ್ತು, ಅಲ್ಲದೇ ಅದು ಕಾರ್ಯರೂಪಕ್ಕೆ ಬರಲಿಲ್ಲ. ಇಸವಿ 1849ರ ಮಾರ್ಚ್ 29ರಂದು ಬ್ರಿಟಿಷರು ಲಾಹೋರ್‌‌ನ ಕೋಟೆಯಲ್ಲಿ ತಮ್ಮ ಧ್ವಜ ಹಾರಿಸಿ; ಪಂಜಾಬ್‌ಅನ್ನು ಭಾರತದಲ್ಲಿನ ಬ್ರಿಟಿಷ್ ಸಾಮ್ರಾಜ್ಯದ ಭಾಗವೆಂದು ಘೋಷಿಸಿದರು.
  • ಇದರ ಸ್ವಾಧೀನಕ್ಕೆ ಕಾನೂನು ಬದ್ಧ ರೂಪವನ್ನು ನೀಡುವ ಲಾಹೋರ್ ಒಪ್ಪಂದ‌ದ ನಿಯಮಗಳಲ್ಲಿ ಇದೂ ಒಂದು ಹೀಗಿದೆ:
ಮಹಾರಾಜ ರಣಜಿತ್ ಸಿಂಗ್‌ನಿಂದ ಶಾ ಶುಜ-ಉಲ್-ಮುಲ್ಕ್‌ ಪಡೆದ ಕೋಹಿನೂರ್‌ ಎಂಬ ಹರಳನ್ನು ಲಾಹೋರ್‌ನ ಮಹಾರಾಜನು ಇಂಗ್ಲೆಂಡ್‌ನ ರಾಣಿಗೆ ಒಪ್ಪಿಸಬೇಕು. ಈ ಒಪ್ಪಂದದ ಮೇಲ್ವಿಚಾರಣೆ ವಹಿಸಿದ್ದ ಗವರ್ನರ್-ಜನರಲ್ ಎಂದರೆ ಲಾರ್ಡ್ ಡಾಲ್‌ಹೌಸಿ. ಎಲ್ಲರಿಗಿಂತ ಹೆಚ್ಚಾಗಿ ಡಾಲ್‌ಹೌಸಿಯು ತನ್ನ ಜೀವನದಲ್ಲಿ ಅಧಿಕ ಆಸಕ್ತಿ ವಹಿಸಿ, ಕೋಹಿನೂರ್‌ಅನ್ನು ಬ್ರಿಟಿಷರು ಪಡೆಯುವುದಕ್ಕೆ ಹೆಚ್ಚು ಕಾರಣನಾಗಿದ್ದಾನೆ. ಡಾಲ್‌ಹೌಸಿಯ ಭಾರತದಲ್ಲಿನ ಚಟುವಟಿಕೆಗಳು ಕೆಲವೊಮ್ಮೆ ವಿವಾದಾತ್ಮಕವಾಗಿದ್ದವು.
  • ಅಲ್ಲದೇ ಇತರ ಅನೇಕ ವಿಷಯಗಳಲ್ಲಿ ಆತನ ವಜ್ರದ ಗಳಿಕೆಯು ಕೆಲವು ಸಮಕಾಲೀನ ಬ್ರಿಟಿಷ್ ಟೀಕಾಗಾರರಿಂದ ದೂಷಿಸಲ್ಪಟ್ಟಿತು. ಕೆಲವರು ಆ ವಜ್ರವನ್ನು ರಾಣಿಗೆ ಉಡುಗೊರೆಯಾಗಿ ನೀಡಬಹುದಿತ್ತು, ಎಂದು ಸೂಚಿಸಿದರೂ, ಡಾಲ್‌ಹೌಸಿಯು ವಜ್ರವು ಯುದ್ಧರಹಿತವಾಗಿ ಬಂದ ಅಮೂಲ್ಯ ವಸ್ತು ಎಂದು ಭಾವಿಸಿ, ಅದನ್ನು ಆ ರೀತಿಯೇ ಪರಿಭಾವಿಸಿದನು. ಆತನ ಸ್ನೇಹಿತ ಸರ್ ಜಾರ್ಜ್ ಕೂಪರ್‌‌ಗೆ 1849ರ ಆಗಸ್ಟ್‌ನಲ್ಲಿ ಪತ್ರ ಬರೆಯುತ್ತಾ ಹೀಗೆಂದು ಹೇಳಿದ್ದಾನೆ:
ನಾನು ಮಹಾರಾಜನಿಗೆ ಕೋಹಿನೂರ್ಅನ್ನು ರಾಣಿಗೆ ಒಪ್ಪಿಸುವಂತೆ ಹೇಳಿದುದರಿಂದ ಈಸ್ಟ್ ಇಂಡಿಯಾ ಕಂಪೆನಿಯ ಆಸ್ಥಾನವು ಸಂಪೂರ್ಣವಾಗಿ ಕದಡಿಹೋಗಿದೆ; ನಾನು ಎಲ್ಲವನ್ನು ರಾಣಿಗೆ ಒಪ್ಪಿಸದಿದ್ದುದರಿಂದ 'ಡೈಲಿ ನ್ಯೂಸ್' ಮತ್ತು ಲಾರ್ಡ್ ಎಲ್ಲೆನ್‌ಬರಫ್ (ಭಾರತದ ಗವರ್ನರ್-ಜನರಲ್, 1841-44) ಕೋಪಗೊಂಡಿದ್ದಾರೆ. ನನ್ನ ಉದ್ದೇಶ ಕೇವಲ ಇದಾಗಿತ್ತು: ಕೋಹಿನೂರ್‌ಅನ್ನು ಅಧೀನ ರಾಜನಿಂದ ನೇರವಾಗಿ ರಾಣಿಗೆ ನೀಡುವುದು, ಹೆಚ್ಚಾಗಿ ನಡೆಯುವಂತೆ ಆಕೆಯ ಪ್ರಜೆಗಳಲ್ಲಿ ಯಾವುದೇ ಕೂಡು-ಬಂಡವಾಳದ ಸಂಸ್ಥೆಯು ಅದನ್ನು ಉಡುಗೊರೆಯಾಗಿ ನೀಡುವುದಕ್ಕಿಂತ ಅಧಿಕ ಗೌರವಯುತವಾದುದೆಂದು ನಾನು ಭಾವಿಸಿದೆ. ಆದ್ದರಿಂದ ಆಸ್ಥಾನವು ಇದನ್ನು ಪರಿಗಣಿಸಬೇಕು. [೧೦]
  • ಡಾಲ್‌ಹೌಸಿಯು ವಜ್ರವನ್ನು ಮಹಾರಾಜ ರಣಜಿತ್ ಸಿಂಗ್‌ನ ಕಿರಿಯ ಉತ್ತರಾಧಿಕಾರಿ ದುಲೀಪ್ ಸಿಂಗ್ ರಾಣಿ ವಿಕ್ಟೋರಿಯಾಳಿಗೆ 1850ರಲ್ಲಿ ಒಪ್ಪಿಸುವಂತೆ ವ್ಯವಸ್ಥೆಗೊಳಿಸಿದನು[೧೧]. ಮಹಾರಾಜ ದುಲೀಪ್ ಸಿಂಗ್ ಮಹಾರಾಜ ರಣಜಿತ್ ಸಿಂಗ್‌ನ ಮತ್ತು ಆತನ ಐದನೇ ಪತ್ನಿ ಮಹಾರಾಣಿ ಜಿಂದ್ ಕಾರ್ ದಂಪತಿಗಳ ಕಿರಿಯ ಮಗನಾಗಿದ್ದನು. 13 ವರ್ಷದ ದುಲೀಪ್ ಈ ವಜ್ರವನ್ನು ಒಪ್ಪಿಸಲು ಯುನೈಟೆಡ್ ಕಿಂಗ್ಡಮ್‌ಗೆ ಹೋದನು.
  • ಕೋಹಿನೂರ್‌ ಅನ್ನು ರಾಣಿ ವಿಕ್ಟೋರಿಯಾಳಿಗೆ ಒಪ್ಪಿಸಿದುದು, ಯುದ್ಧ ಮಾಡದಿರುವುದಕ್ಕೆ ಹರಳುಗಳನ್ನು ಕಪ್ಪವಾಗಿ ನೀಡುವ ಈ ಸಂಪ್ರದಾಯವು ದೀರ್ಘ ಕಾಲದ ಇತಿಹಾಸದಲ್ಲೇ ಹೊಸದಾಗಿತ್ತು. ದುಲೀಪ್ ಸಿಂಗ್‌ ಡಾ. ಜಾನ್ ಸ್ಪೆನ್ಸ್ ಲಾಗಿನ್‌ನ ರಕ್ಷಣೆಯಲ್ಲಿ ಬೆಳೆಯುತ್ತಿದ್ದನು. ಸ್ಕಾಟ್‌ಲ್ಯಾಂಡ್‌ನ ಆರ್ಕ್ನಿ ದ್ವೀಪದ ಸ್ಟ್ರೋಮ್ನೆಸ್‌ನ ಸೌತೆಂಡ್‌ನ ಮ‌ೂಲನಿವಾಸಿಯಾದ ಲಾಗಿನ್ ಬ್ರಿಟಿಷ್ ಸೈನ್ಯದ ವೈದ್ಯನಾಗಿ ಈಸ್ಟ್ ಇಂಡಿಯಾದ ಪಶ್ಚಿಮ ಬಂಗಾಳದಲ್ಲಿ ಕೆಲವು ವರ್ಷಗಳವರೆಗೆ ಸೇವೆ ಸಲ್ಲಿಸಿದ್ದನು.
  • ಆತನ ಕುಟುಂಬವು ಸ್ಟ್ರೋಮ್ನೆಸ್‌ನಲ್ಲಿ 1800ರಿಂದ ಲಾಗಿನ್ಸ್ ಇನ್ಅನ್ನು ನಡೆಸುತ್ತಿತ್ತು. ಡಾ. ಲಾಗಿನ್, ಆತನ ಪತ್ನಿ ಲೀನ ಮತ್ತು ಯುವ ದುಲೀಪ್ ಕೋಹಿನೂರ್‌ ವಜ್ರವನ್ನು ರಾಣಿ ವಿಕ್ಟೋರಿಯಾಳಿಗೆ ನೀಡವುದಕ್ಕಾಗಿ ಇಂಗ್ಲೆಂಡ್‌ಗೆ ಪ್ರಯಾಣಿಸಿದರು. ಸಕಾಲದಲ್ಲಿ ಲಾಹೋರ್‌ನ ಭಾರಿ ಕೋಟೆ ಸಿಟಾಡೆಲ್‌‌‌ನ ಗವರ್ನರ್ ಆಗಿ ನೇಮಕಗೊಂಡಿದ್ದ ಗವರ್ನರ್-ಜನರಲ್ 1848ರ ಏಪ್ರಿಲ್ 6ರಂದು ಸ್ಥಳೀಯ ನಿವಾಸಿ H.M ಲಾರೆನ್ಸ್, C.C. ಮ್ಯಾನ್ಸೆಲ್, ಜಾನ್ ಲಾರೆನ್ಸ್, H.M ಲಾರೆನ್ಸ್‌ನ ತಮ್ಮ ಮೊದಲಾದ ಬೋರ್ಡ್ ಆಫ್ ಅಡ್ಮಿನಿಸ್ಟ್ರೇಷನ್‌ನ ಸದಸ್ಯರ ಮತ್ತು ಭಾರತ ಸರಕಾರದ ಕಾರ್ಯದರ್ಶಿ ಸರ್ ಹೆನ್ರಿ ಎಲಿಯಾಟ್‌ನ ಅಸ್ತಿತ್ವದಲ್ಲಿ ಲಾಗಿನ್‌ನಿಂದ, ಕೋಹಿನೂರ್‌ಅನ್ನು ಹೊರತುಪಡಿಸಿ ಲಾಗಿನ್‌ ಸುಮಾರು £1,000,000 (೨೦೨೫ರ ಪ್ರಕಾರ £NaN)[೧೨] ಬೆಲೆಕಟ್ಟಿದ್ದ ತೋಶ್ಖಾನ ಅಥವಾ ಭಾರಿ ಖಜಾನೆಯೊಂದಿಗೆ ಆ ಕೋಹಿನೂರ್‌ಅನ್ನು ಪಡೆದುಕೊಂಡನು.
  • ಆತ ಅದಕ್ಕೆ 1849ರ ಡಿಸೆಂಬರ್ 7ರ ದಿನಾಂಕ ನಮೂದಿಸಿದ ಒಂದು ರಶೀದಿಯನ್ನು ಪಡೆದನು. ನಂತರ ಆ ವಜ್ರವನ್ನು ರಾಣಿ ವಿಕ್ಟೋರಿಯಾಳಿಗೆ ಒಪ್ಪಿಸಲು ಜಾನ್ ಲಾರೆನ್ಸ್‌ ಮತ್ತು C.C. ಮ್ಯಾನ್ಸೆಲ್‌ರ ಮೇಲ್ವಿಚಾರಣೆಯಲ್ಲಿ ಬಾಂಬೆಯಿಂದ H.M.S. ಮೀಡಿಯಾದಲ್ಲಿ ಭದ್ರ ರಕ್ಷಣೆ ವ್ಯವಸ್ಥೆಗಳೊಂದಿಗೆ ಹಡಗಿನಲ್ಲಿ ಇಂಗ್ಲೆಂಡ್‌ಗೆ ಕಳುಹಿಸಲಾಯಿತು. ಈ ಹಡಗು ಮುಂದೆ ಸಾಗುತ್ತಾ ತೊಂದರೆಗೆ ಸಿಲುಕಿತು. ಹಡಗಿನ ಪ್ರಯಾಣಿಕರಲ್ಲಿ ಭೀಕರ ಕಾಲರಾ ರೋಗವು ಹಬ್ಬಿಕೊಂಡಿತು. ಅದು ಮಾರಿಶಿಯಸ್‌ನಲ್ಲಿದ್ದಾಗ ಅಲ್ಲಿನ ಸ್ಥಳೀಯರು ಹೊರಡುವಂತೆ ಆದೇಶಿಸಿದರು.
  • ಇಲ್ಲದಿದ್ದರೆ ಹಡಗಿಗೆ ಬೆಂಕಿ ಹಾಕಿ ನಾಶಮಾಡುವಂತೆ ತಮ್ಮ ಗವರ್ನರ್‌ನಲ್ಲಿ ಹೇಳಿದರು. ಆನಂತರ ಸ್ವಲ್ಪವೇಳೆಯಲ್ಲಿಯೇ ಹಡಗು ಹನ್ನೆರಡು ಗಂಟೆಗಳ ಕಾಲ ಬೀಸಿದ ಭಾರಿ ಬಿರುಗಾಳಿಗೆ ತುತ್ತಾಯಿತು. ಬ್ರಿಟನ್‌ಗೆ ಬಂದು ತಲುಪಿದಾಗ ಪ್ರಯಾಣಿಕರನ್ನು ಮತ್ತು ಅಂಚೆಚೀಲಗಳನ್ನು ಪ್ಲೈ ಮೌತ್‌ನಲ್ಲಿ ಕೆಳಗಿಳಿಸಲಾಯಿತು. ಆದರೆ ಕೋಹಿನೂರ್‌ ಹಡಗು ಪೋರ್ಟ್ಸ್‌ಮೌತ್‌ಗೆ ತಲುಪುವವರೆಗೆ ಅದರಲ್ಲಿಯೇ ಇತ್ತು.
  • ಅಲ್ಲಿಂದ ಆ ವಜ್ರವನ್ನು ಲಾರೆನ್ಸ್ ಮತ್ತು ಮ್ಯಾನ್ಸೆಲ್ ಲಂಡನ್ ನಗರದ ಈಸ್ಟ್ ಇಂಡಿಯಾ ಹೌಸ್‌ಗೆ ತೆಗೆದುಕೊಂಡು ಹೋಗಿ, HEICಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಶಕ್ಕೆ ಒಪ್ಪಿಸಿದರು. 1850ರ ಜುಲೈ 3ರಂದು ಸಿಖ್ ಯುದ್ಧದ ನಿರ್ಣಯದ ಭಾಗವಾಗಿ ರಾಣಿಗೆ ಕೋಹಿನೂರ್‌ ವಜ್ರದ ಒಪ್ಪಿಸುವಿಕೆ ಮತ್ತು HEICಯ 250ನೇ ವಾರ್ಷಿಕೋತ್ಸವನ್ನು ಏಕಕಾಲದಲ್ಲಿ ನೆರವೇರಿಸಲಾಯಿತು. ಡಾ. ಲಾಗಿನ್ 1854ರಲ್ಲಿ ರಾಣಿ ವಿಕ್ಟೋರಿಯಾಳಿಂದ ನೈಟ್‌ಹುಡ್ ಬಿರುದನ್ನು ಪಡೆದು, ಸರ್ ಜಾನ್ ಸ್ಪೆನ್ಸರ್ ಲಾಗಿನ್ ಎಂದಾದನು. (ಅವನ ಮಧ್ಯ ಹೆಸರು ಸೆನ್ಸ್ಅನ್ನು ಸ್ಪೆನ್ಸರ್ ಆಗಿ ಬದಲಾಯಿಸಲು ಅದಕ್ಕೆ 'r'ಅನ್ನು ಸೇರಿಸಿದನು).
  • ಈಗ ಆ ವಜ್ರವು ಯುನೈಟೆಡ್ ಕಿಂಗ್ಡಮ್‌ನ ರಾಜನ ಪತ್ನಿ ಧರಿಸುವ ಕಿರೀಟದಲ್ಲಿ ಸ್ಥಾನ ಪಡೆದುಕೊಂಡಿದೆ. ಪ್ರಸ್ತುತ ಅದು ರಾಣಿ ಎಲಿಜಬೆತ್‌ಳ ಕಿರೀಟದಲ್ಲಿದೆ (ದಿವಂಗತ ರಾಣಿಯ ತಾಯಿ).1853ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಆದರೆ 1888ರಲ್ಲಿ ಮತ್ತೆ ಸಿಖ್ ಧರ್ಮಕ್ಕೆ ಪರಿರ್ತನೆಯಾದ ದುಲೀಪ್ ಸಿಂಗ್ 1854ರಲ್ಲಿ ಲಾಗಿನ್ ಮತ್ತು ಅವನ ಪತ್ನಿಯೊಂದಿಗೆ ಬ್ರಿಟನ್‌ಗೆ ಪ್ರಯಾಣಿಸಿದನು. ಬ್ರಿಟಿಷ್ ಸರಕಾರದ ರಿಯಾಯಿತಿಯಿಂದ ಸುಖಜೀವನ ನಡೆಸುತ್ತಿದ್ದ ಆತ ಹೆಚ್ಚಾಗಿ ವಿಂಡ್ಸರ್ ಮತ್ತು ಆಸ್ಬರ್ನ್‌ಗೆ ರಾಜಮನೆತನದವರೊಂದಿಗೆ ಭೇಟಿನೀಡುತ್ತಿದ್ದನು. *ಅವನು ರಾಣಿ ಮತ್ತು ರಾಜರೊಂದಿಗೆ ಸ್ನೇಹಿತನಾಗಿ. ರಾಜಮನೆತನದ ನಂತರದ ಅಗ್ರಸ್ಥಾನ ಪಡೆದನು. ರಾಜ ಆಲ್ಬರ್ಟ್ ಅವನಿಗೆ ರಾಜಘೋಷಕ ಮೇಲುಡುಪನ್ನು ವಿನ್ಯಾಸಗೊಳಿಸಿದನು. ಆದರೆ ಅದು ಕಾಲೇಜ್ ಆಫ್ ಆರ್ಮ್ಸ್‍‌ನಲ್ಲಿ ದಾಖಲಾಗಿಲ್ಲ. ಆತನಿಗೆ 1861ರಲ್ಲಿ ಬ್ರಿಟಿಷ್ ಪೌರತ್ವ ನೀಡಲಾಯಿತು. ಅಲ್ಲದೇ ರಾಣಿಯು ಈ ಕೆಳಗಿನ ಘೋಷಣೆಯನ್ನು ಪ್ರಕಟಿಸಿದಾಗ 1861ರ ಜೂನ್ 25ರಂದು ಹೊಸದಾಗಿ ರಚಿತ ದ ಮೋಸ್ಟ್ ಎಕ್ಸಾಲ್ಟೆಡ್ ಆರ್ಡರ್ ಆಫ್ ದ ಸ್ಟಾರ್ ಆಫ್ ಇಂಡಿಯಾದ ಮೊದಲ ನೈಟ್ ಕಮಾಂಡರ್ ಆಗಿ ನೇಮಕಗೊಂಡನು:
“ರಾಣಿಯು ಭಾರತ ಸಾಮ್ರಾಜ್ಯದ ರಾಜ, ಮುಖ್ಯಸ್ಥರು ಮತ್ತು ಜನರಿಗೆ ಅನುಕೂಲ ಒದಗಿಸಲು ಬಯಸುತ್ತಿದ್ದು, ಆಕೆಯ ಗೌರವದ ಪ್ರತೀಕ ಮತ್ತು ವಿಶೇಷ ಸಾಕ್ಷ್ಯವಾಗಿ, ಆರ್ಡರ್ ಆಫ್ ನೈಟ್‌ಹುಡ್‌ನ ಸಂಸ್ಥೆಯ ಮ‌ೂಲಕ, ಭಾರತದ ರಾಜ್ಯಗಳಲ್ಲಿ ಆಕೆಯ ಆಡಳಿತ ನಡೆಸುವ ನಿರ್ಣಯವು ಜಾರಿಯಾಗಬಹುದು. ಇದರಿಂದ ರಾಣಿಯು ಪ್ರಮುಖ ಘನತೆ ಮತ್ತು ನಿಷ್ಠಾವಂತಿಕೆ ಪಡೆಯಬಹುದು.
  • ಇದು ಲೆಟರ್ಸ್ ಪೇಟೆಂಟ್‌ನಿಂದ ಗ್ರೇಟ್ ಬ್ರಿಟನ್‌ ಮತ್ತು ಐರ್ಲ್ಯಾಂಡ್‌ನ ಯುನೈಟೆಡ್ ಕಿಂಗ್ಡಮ್‌ನ ಮಹಾ-ಮುದ್ರೆಯಡಿಯಲ್ಲಿ ‘ದ ಮೋಸ್ಟ್ ಎಕ್ಸಾಲ್ಟೆಡ್ ಆರ್ಡರ್ ಆಫ್ ದ ಸ್ಟಾರ್ ಆಫ್ ಇಂಡಿಯಾ’ದ ಹೆಸರು, ಶೈಲಿ ಮತ್ತು ಸ್ಥಾನದಿಂದ ಹೆಸರುವಾಸಿಯಾದ ಆರ್ಡರ್ ಆಫ್ ನೈಟ್‌ ಹುಡ್ ಅನ್ನು ಸ್ಥಾಪಿಸಲು, ನಿಯೋಜಿಸಲು ಮತ್ತು ರಚಿಸಲು ಒಪ್ಪಿಗೆಯನ್ನು ಪಡೆಯಿತು.” ಆತ 1866ರಲ್ಲಿ ನೈಟ್ ಗ್ರ್ಯಾಂಡ್ ಕಮಾಂಡರ್ ಆಫ್ ದ ಆರ್ಡರ್‌ಅನ್ನು ರಚಿಸಿದನು.
  • ಸರ್ ಜಾನ್ ಸ್ಪೆನ್ಸರ್ ಲಾಗಿನ್ 1863ರ ಎಪ್ರಿಲ್ 18ರಂದು ಸಾವನ್ನಪ್ಪಿದಾಗ ರಾಜನು ಅತಿ ಹೆಚ್ಚಿನ ದುಃಖ ವ್ಯಕ್ತಪಡಿಸಿದನು. ಆತನನ್ನು ಇಂಗ್ಲೆಂಡ್‌ನ ಸಫಾಕ್‌ನ ಫೆಲಿಕ್ಸ್‌ಸ್ಟೋವೆಯಲ್ಲಿ ಸಮಾಧಿ ಮಾಡಲಾಯಿತು.
"ಕಿರಿಯ ಸಿಖ್ ರಾಜನ ಕಾರ್ಯದಿಂದ ಪ್ರತಿಯೊಬ್ಬರೂ ಆಶ್ಚರ್ಯಚಕಿತರಾದರು; ಆತನ ಸ್ನೇಹಪರತೆ, ಸತ್ಯಾಸತ್ಯತೆ ಮತ್ತು ಪ್ರಾಮಾಣಿಕತೆ ಪೂರ್ವದೇಶದಲ್ಲಿ ಅಸಾಮಾನ್ಯವಾದದ್ದು ಎನಿಸಿತ್ತು. ಬಾಲ್ಯದಿಂದಲೇ ವಿಧೇಯ ಗುಲಾಮತನವನ್ನು ಅನುಭವಿಸಿದ ಆ ಹುಡುಗನಿಗೆ ಅನುಕಂಪ ತೋರಿಸಿ ಇದನ್ನು ಮಾಡಲಾಗಿಲ್ಲ; ಆತನ ಪ್ರಯತ್ನವೇ ಅವನಿಗೆ ಶಿಸ್ತು, ಶಿಕ್ಷಣವನ್ನು ನೀಡುವಂತೆ ಮಾಡಿತು. ನನ್ನ ಪತಿ ನಿಜವಾಗಿಯೂ ಆತನನ್ನು ಇಷ್ಟಪಡುತ್ತಿದ್ದರು. ಇಬ್ಬರೂ ಒಟ್ಟಿಗೇ ಖ್ಯಾತಿ ಪಡೆದರು. ಆದರೂ ಅವರ ಮಧ್ಯೆ ಕೆಲವು ಪೈಪೋಟಿಗಳಿದ್ದವು.
  • ಆತನ ಪೋಷಕರ ಕಡೆಯಿಂದ ಶಿಸ್ತಿನ ಮೊದಲ ಪಾಠವು ಬಂದಿದ್ದರೂ ಒಂದು ಸಣ್ಣ ಕಾರಣಕ್ಕೆ ಅಸಮಾನತೆಯು ಹುಟ್ಟಿಕೊಂಡಿತು. ಒಂದು ಬಾರಿ ಭಾರಿ ಮಳೆ ಬರುತ್ತಿದ್ದಾಗ ದುಲೀಪ್ ಸಿಂಗ್ ಹೊರಗೆ ಓಡಿ, ಚೆನ್ನಾಗಿ ನೆನೆದನು. ಈ ಸ್ಥಿತಿಯಲ್ಲಿ ನೋಡಿದ ಲಾಗಿನ ಆತನಿಗೆ ಬಟ್ಟೆ ಬದಲಾಯಿಸಲು ಹೇಳಿದ. ಆದರೆ ಆಟದಲ್ಲಿ ಮುಳುಗಿದ್ದ ಹುಡುಗನು ಅದನ್ನು ತಾನು ಮಾಮ‌ೂಲಾಗಿ ಮಾಡುತ್ತೇನೆ ಎಂದನು. ಬದಲಾಯಿಸುವಂತೆ ಒತ್ತಾಯಪಡಿಸಿದಾಗ ಅದಕ್ಕೆ ಅವನು ಹಠತೋರಿದನು.
  • ನನ್ನ ಪತಿ ಆತನಲ್ಲಿರುವ ಆಡಳಿತಗಾರನ, ಗವರ್ನರ್‌ನ ಸಹಜ ಗುಣದಿಂದಾಗಿ ಹುಡುಗನಿಗೆ ಇನ್ನೂ ಅರ್ಧ ಗಂಟೆ ಸಮಯಾವಕಾಶ ನೀಡಿದ. ಆತ ಮತ್ತೂ ಮುಂದುವರಿಸಿದಾಗ, ಅವನನ್ನು ಒತ್ತಾಯಪಡಿಸಲು ತಾನೆಷ್ಟು ಕೊರಗುತ್ತೇನೆ ಎಂಬುದನ್ನು ಹೇಳಿದನು. ಅಲ್ಲದೇ ಒತ್ತಾಯ ಪಡಿಸುವಂತೆ ಪ್ರಚೋದಿಸುವ ವರ್ತನೆ ಮಾಡಬಾರದೆಂದು ಸ್ನೇಹಿತನಂತೆ ಬುದ್ಧಿಮಾತು ಹೇಳಿದನು. ಪಾಪದ ಹುಡುಗ ! ಕೆಲವು ನಿಮಿಷಗಳಲ್ಲಿ ಆತ ಅಳುತ್ತಾ ಪೋಷಕರ ಕೊಠಡಿಗೆ ಬಂದು, ‘ಆತ ಬಯಸಿದಂತೆ ತನಗೆ ಅವಕಾಶ ನೀಡಬೇಕೆಂದು ವಿಧಿಸಿದ.
  • ಲಾಹೋರ್‌ನ ಒಪ್ಪಂದದ ಕಾರಣ ಹೇಳಿದನು!" - ಲೇಡಿ ಲಾಗಿನ್ಸ್ ರಿಕಲೆಕ್ಷನ್ಸ್, ಎಡಿತ್ ಡಾಲ್‌ಹೌಸಿ ಲಾಗಿನ್.[೧೩]

ಕೋಹಿನೂರ್‌ಅನ್ನು ಬ್ರಿಟಿಷರು ಪಡೆಯುವಲ್ಲಿನ ನ್ಯಾಯಬದ್ಧತೆ

[ಬದಲಾಯಿಸಿ]
  • ನಂತರ ಕೋಹಿನೂರ್‌ ವಜ್ರವನ್ನು ಮಹಾರಾಜ ರಣಜಿತ್ ಸಿಂಗ್‌ನ ಉತ್ತಾರಾಧಿಕಾರಿ ದುಲಿಪ್ ಸಿಂಗ್ (ಇದು ಆತನ ಸುಪರ್ದಿಯಲ್ಲಿತ್ತು)ಅದನ್ನು ರಾಣಿ ವಿಕ್ಟೋರಿಯಾಳಿಗೆ ನೀಡಿದಾಗ ರಾಜ ದಿಲಿಪ್ ಅಪ್ರಾಪ್ತವಯಸ್ಕನಾಗಿದ್ದನು. ಅಲ್ಲದೇ ಬ್ರಿಟಿಷ್ ಸಲಹೆಗಾರರ ಒತ್ತಾಯವಿಲ್ಲದಿದ್ದರೆ ಆತ ಆ ವಜ್ರವನ್ನು ನೀಡುತ್ತಿರಲಿಲ್ಲವೆಂದು ಭಾರತೀಯ ಇತಿಹಾಸಕಾರರು ವಾದಿಸಿದ್ದಾರೆ.[೧೪]
  • ವಶಪಡಿಸಿಕೊಳ್ಳಲಾದ ವಜ್ರವನ್ನು ರಾಣಿಗೆ ಲಾರ್ಡ್ ಡಾಲ್‌ಹೌಸಿಯು 1850ರಲ್ಲಿ ತಾಯ್ನಾಡಿನಿಂದ ಹೊರಬಂದ ಕಿರಿಯ ರಾಜನ ಮ‌ೂಲಕ ನೀಡಿದನು; ಎಂದು ದಾಖಲೆಗಳೂ ಹೇಳುತ್ತವೆ.[೧೧]

ಕೋಹಿನೂರ್‌ನ ಶಾಪ

[ಬದಲಾಯಿಸಿ]
  • ಕೋಹಿನೂರ್‌ ತನ್ನೊಂದಿಗೆ ಶಾಪವನ್ನೂ ಹೊತ್ತೊಯ್ಯುತ್ತದೆ; ಹಾಗೂ ಅದನ್ನು ಮಹಿಳೆಯು ಹೊಂದಿದ್ದರೆ ಮಾತ್ರ ಆ ಶಾಪ ತಾಗುವುದಿಲ್ಲವೆಂದು ನಂಬಲಾಗಿದೆ. ಅದನ್ನು ಹೊಂದಿದ ಎಲ್ಲಾ ಪುರುಷರು ತಮ್ಮ ಅಧಿಕಾರವನ್ನು ಕಳೆದುಕೊಂಡರು ಅಥವಾ ಇತರ ದುರಾದೃಷ್ಟಕರ ಘಟನೆಗಳನ್ನು ಎದುರಿಸಿದರು. ಆಗಿನ ಕಾಲದಲ್ಲಿ ಬ್ರಿಟಿಷರು ಈ ಶಾಪದ ಬಗ್ಗೆ ಹೆಚ್ಚು ಜಾಗೃತೆ ವಹಿಸಿದರು. ಇಂದಿನವರೆಗೆ ಆ ವಜ್ರವನ್ನು ರಾಣಿ ವಿಕ್ಟೋರಿಯಾ ಮತ್ತು ರಾಣಿ ಎಲಿಜಬೆತ್ II ಮಾತ್ರ ಧರಿಸಿದ್ದಾರೆ.
  • ರಾಜನು ಆಡಳಿತ-ಅಧಿಕಾರದಲ್ಲಿದ್ದರೆ, ಆ ವಜ್ರವನ್ನು ಆತನ ಪತ್ನಿಗೆ ವರ್ಗಾಯಿಸಲಾಗು ತ್ತದೆ. ಈ ವಜ್ರವನ್ನು ಹೊಂದುವುದಕ್ಕೆ ಸಂಬಂಧಿಸಿದಂತೆ ಶಾಪದ ಸಂಭಾವ್ಯತೆಯೂ ಇದೆ. 1306ರಲ್ಲಿನ ಈ ವಜ್ರದ ಮೊದಲ ನಿಖರವಾದ ಕಾಣಿಸಿಕೊಳ್ಳುವಿಕೆ ಬಗ್ಗೆ ಹಿಂದು ಪುರಾತನ ಕಾಲದ ಮ‌ೂಲಗ್ರಂಥವೊಂದರಲ್ಲಿ ನಮೂದಿಸಲಾಗಿದೆ: "ಈ ವಜ್ರವನ್ನು ಧರಿಸುವಾತ ಇಡೀ ಪ್ರಪಂಚವನ್ನೇ ಪಡೆಯುತ್ತಾನೆ, ಆದರೆ ಜೊತೆಗೆ ದುರದೃಷ್ಟಗಳನ್ನೂ ಪಡೆಯುತ್ತಾನೆ. ಕೇವಲ ದೇವರು ಅಥವಾ ಮಹಿಳೆಯು ಮಾತ್ರ ಇದನ್ನು ನಿರ್ಭಯದಿಂದ ಧರಿಸಬಹುದು."[೧೫]

ಬೃಹತ್ ಸಾರ್ವಜನಿಕ ಪ್ರದರ್ಶನ

[ಬದಲಾಯಿಸಿ]
ಕೋಹಿನೂರ್‌ ಪ್ರಸ್ತುತ ಈ ಸಾರ್ವಜನಿಕ ಪ್ರದರ್ಶನದ ಒಂದು ಅತ್ಯಂತ ಪ್ರಮುಖ ಅಂಶವಾಗಿದೆ. ಇದರ ಬಗ್ಗೆ ರಹಸ್ಯಪೂರ್ಣ ಆಸಕ್ತಿಯೊಂದು ಕಂಡುಬಂದಂತೆ ಗೋಚರಿಸುತ್ತಿದೆ. ಅದಕ್ಕಾಗಿ ಈಗ ಹೆಚ್ಚಿನ ಎಚ್ಚರಿಕೆಗಳನ್ನು ವಹಿಸಲಾಗಿದೆ.
  • ಇದರ ವೀಕ್ಷಣೆಯಲ್ಲಿ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ, ಜನಸಮ‌ೂಹವು ಅಗಾಧ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಪ್ರವೇಶ ದ್ವಾರದಲ್ಲಿ ಕಾವಲಿರುವ ಪೋಲೀಸರು; ಪ್ರಯಾಸಪಡುತ್ತಿರುವ ಮತ್ತು ಆತುರಪಡುತ್ತಿರುವ ಜನಸ್ತೋಮವನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದಾರೆ. ನಿನ್ನೆ ನೂರಕ್ಕಿಂತ ಕಡಿಮೆ ಇಲ್ಲದಷ್ಟು ಮಂದಿ ಕೆಲವು ಗಂಟೆಗಳ ಕಾಲ ವಜ್ರದ ವೀಕ್ಷಣೆಗಾಗಿ ಕಾದಿದ್ದರು. ಆದರೆ ಕೊನೆಗೂ ಅವರ ಆಸೆ ಪೂರ್ಣವಾಗಲಿಲ್ಲ. ಅಪೂರ್ಣ ಕತ್ತರಿಸುವಿಕೆ ಅಥವಾ ಅನುಕೂಲಕರವಾಗಿ ಬೆಳಕನ್ನು ಇರಿಸುವಲ್ಲಿನ ತೊಂದರೆ ಅಥವಾ ಹರಳಿನ ನಿಶ್ಚಲತೆ ಯಿಂದಾಗಿ, ಒಂದು ನಿರ್ದಿಷ್ಟ ಕೋನದಲ್ಲಿ ನೋಡಿದಾಗ ಅದು ಪ್ರತಿಬಿಂಬಿಸುವ ಕೆಲವು ಕಿರಣಗಳನ್ನು ಮಾತ್ರ ಕೆಲವರು ವೀಕ್ಷಿಸಲು ಸಾಧ್ಯವಾಗುತ್ತದೆ.

ರಾಣಿಯ ಆಭರಣಗಳು

[ಬದಲಾಯಿಸಿ]

ಈ ವಜ್ರದ ಗೋಚರಿಸುವಿಕೆಯ ನಂತರದ ಆಶ್ಚರ್ಯದಾಯಕ ನಿರಾಶೆಯು ಸಹಜವಾದುದಾಗಿದೆ.(ಅಂದುಕೊಂಡಷ್ಟು ಅಗಾಧತೆ ಕಾಣದು) 1852ರಲ್ಲಿ ಆಂಸ್ಟರ್ಡ್ಯಾಮ್‌[೧೬] ನಲ್ಲಿ, ವಿಕ್ಟೋರಿಯಾಳ ಸಂಗಾತಿ ರಾಜ ಆಲ್ಬರ್ಟ್‌ನ ವೈಯಕ್ತಿಕ ಮೇಲ್ವಿಚಾರಣೆ ಮತ್ತು ಜೇಮ್ಸ್ ಟೆನ್ನಾಂಟ್‌ನ ತಾಂತ್ರಿಕ ನಿರ್ದೇಶನದಡಿಯಲ್ಲಿ, ವಜ್ರದ ಪ್ರಭೆಯನ್ನು ಹೆಚ್ಚಿಸಲು ಅದನ್ನು 186 1/16 ಕ್ಯಾರಟ್‌ಗಳಿಂದ (37.21 ಗ್ರಾಂ) ಈಗಿನ 105.602 ಕ್ಯಾರಟ್‌ಗಳಿಗೆ (21.61 ಗ್ರಾಂ) ಕತ್ತರಿಸಲಾಯಿತು.

  • ಆಲ್ಬರ್ಟ್ ಆ ಕಾರ್ಯಕ್ಕಾಗಿ ಅನೇಕರೊಂದಿಗೆ ಸಮಾಲೋಚಿಸಿ,ಅಗಾಧ ಶ್ರಮವಹಿಸಿದನು; ಅಲ್ಲದೇ ಅದಕ್ಕಾಗಿ £8,000ರಷ್ಟು ಹಣ ಖರ್ಚುಮಾಡಿದನು. ಅದು ವಜ್ರದ ಭಾರವನ್ನು 42%ನಷ್ಟು ಕಡಿಮೆ ಮಾಡಿತು. ಆದರೂ ಆರ್ಬರ್ಟ್ ಅದರ ಪರಿಣಾಮದಿಂದ ಸಂತುಷ್ಟನಾಗಲಿಲ್ಲ. ನಂತರ ಆ ವಜ್ರವನ್ನು ರಾಣಿ ವಿಕ್ಟೋರಿಯಾಳು ಧರಿಸುವ ಬ್ರೂಚಿನಲ್ಲಿ ಜೋಡಿಸಲಾಯಿತು. ಅದನ್ನು ಟವರ್ ಆಫ್ ಲಂಡನ್‌ನಲ್ಲಿ ರಾಣಿಯ ಆಭರಣದೊಂದಿಗೆ ಇರಿಸುವ ಬದಲಿಗೆ ವಿಂಡ್ಸರ್ ಕ್ಯಾಸಲ್‌‌ನಲ್ಲಿರಿಸಲಾಯಿತು.[೧೭]

ರಾಣಿ ವಿಕ್ಟೋರಿಯಾಳ ಮರಣದ ನಂತರ ಅದನ್ನು, ರಾಣಿ ಅಲೆಕ್ಸಾಂಡ್ರಾಳ ಪತಿ ರಾಜ ಎಡ್ವರ್ಡ್ VIIನ ಪಟ್ಟಾಭಿಷೇಕದ ಸಂದರ್ಭದಲ್ಲಿ, ಆ ಹೊಸ ವಜ್ರದ ಕಿರೀಟದಲ್ಲಿ ಜೋಡಿಸಲಾಯಿತು. ರಾಣಿ ಅಲೆಕ್ಸಾಂಡ್ರಾಳು ತನ್ನ ಕಿರೀಟದಲ್ಲಿ ವಜ್ರವನ್ನು ಧರಿಸಿದ ಮೊದಲ ರಾಣಿಯಾಗಿ ದ್ದಾಳೆ. ಆ ನಂತರ ರಾಣಿ ಮೇರಿ ಮತ್ತು ರಾಣಿಯ ತಾಯಿ, ರಾಣಿ ಎಲಿಜಬೆತ್ ಅದನ್ನು ಧರಿಸಿದರು. 2002ರಲ್ಲಿ ಆಕೆಯ ಶವವನ್ನು ಗೌರವ ಮರ್ಯಾದೆಗಳಿಂದ ಪ್ರದರ್ಶಿಸಿದಾಗ ಆಕೆಯ ಶವದ ಪೆಟ್ಟಿಗೆಯ ಮೇಲೆ ಆ ಕಿರೀಟವನ್ನು ಇರಿಸಲಾಗಿತ್ತು.

ಕೋಹಿನೂರ್‌ನ ವಾರಸುದಾರಿಕೆಯಲ್ಲಿನ ರಾಜಕಾರಣ

[ಬದಲಾಯಿಸಿ]

ಈ ವಜ್ರದ ದೀರ್ಘಕಾಲದ ಇತಿಹಾಸದಲ್ಲಿ, ಅನೇಕ ರಾಷ್ಟ್ರಗಳು ಇದನ್ನು ತನ್ನದೆಂದು ವಾದಿಸುತ್ತವೆ. ಈ ವಾದಗಳಿಗೆ ಮಿಗಿಲಾಗಿ ಭಾರತವು ತನ್ನ ವಾರಸುದಾರಿಕೆಯನ್ನು ಸಮರ್ಥಿಸುತ್ತದೆ.[೧೮] ಈಗ ಆ ವಜ್ರವು ಟವರ್ ಆಫ್ ಲಂಡನ್‌‌ನಲ್ಲಿದೆ.

ಜನಪ್ರಿಯ ಮಾಧ್ಯಮದಲ್ಲಿ ಕೋಹಿನೂರ್‌

[ಬದಲಾಯಿಸಿ]
  • 1879ರಲ್ಲಿ ರಚಿಸಲಾದ ಡಾಕ್ಟರ್ ಹು2006ರ ಸರಣಿ "ಟೂತ್ ಆಂಡ್ ಕ್ಲಾ"ದಲ್ಲಿ ಕೋಹಿನೂರ್‌ ವಜ್ರವನ್ನು, ರಾಣಿ ವಿಕ್ಟೋರಿಯಾಳನ್ನು ವೃಕಮಾನವನಿಂದ ರಕ್ಷಿಸಲು ಡಾಕ್ಟರ್‌(ಸೂಕ್ತ ಸಲಕರಣೆ) ಬಳಸುತ್ತಾನೆ. ಈ ಕಥೆಯಲ್ಲಿ, ವೃಕಮಾನವ ನನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾದ ಬೆಳಕಿನ ಕೊಠಡಿಗೆ ಸರಿಹೊಂದುವ ಪ್ರಿಸಮ್ ಆಗಿ ತಯಾರಿಸುವುದಕ್ಕಾಗಿ ರಾಜ ಆಲ್ಬರ್ಟ್ ಆ ವಜ್ರವನ್ನು ಕತ್ತರಿಸುತ್ತಾನೆ. ಈ ಎಪಿಸೋಡ್ ಮೊದಲು UKಯಲ್ಲಿ 2006ರ ಏಪ್ರಿಲ್ 22ರಂದು ಪ್ರಸಾರವಾಯಿತು.
  • ಟರ್ಕಿ ಚಲನಚಿತ್ರ "ಹ್ಯಾಕಿವ್ಯಾಟ್ ಕ್ಯಾರಗೋಜ್ ನೀಡನ್ ಆಲ್ಡುರುಲ್ಡು?"ನಲ್ಲಿ (2006) ಕೋಹಿನೂರ್‌ಅನ್ನು ಮಂಗೋಲಿಯಾದವರಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಆದರೆ ದುರಾಶೆಯಿಂದಾಗಿ, ಅದು ಅದರ ಉದ್ದೇಶಿತ ತಾಣವನ್ನು ತಲುಪುವುದಿಲ್ಲ.
  • ಕೋಹಿನೂರ್‌ ಅನ್ನು ಲಿಂಡ ಲಾ ಪ್ಲಾಂಟೆಳ "ರಾಯಲ್ ಫ್ಲಶ್"‌ನಲ್ಲಿ (2002) ದರೋಡೆಯ ಒಂದು ಕೇಂದ್ರ ವಸ್ತುವಾಗಿ ಚಿತ್ರಿಸಲಾಗಿದೆ.
  • ಜಾರ್ಜ್ ಮ್ಯಾಕ್‌ಡೊನಾಲ್ಡ್ ಫ್ರೇಸರ್‌ನ "ಫ್ಲ್ಯಾಶ್‌ಮ್ಯಾನ್" ಕಾದಂಬರಿಗಳಲ್ಲಿ ಒಂದಾದ ಫ್ಲ್ಯಾಶ್‌ಮ್ಯಾನ್ ಆಂಡ್ ದ ಮೌಂಟೇನ್ ಆಫ್ ಲೈಟ್ ‌ನಲ್ಲಿ (1990ರಲ್ಲಿ ಪ್ರಕಟಗೊಂಡ), ಕೋಹಿನೂರ್‌ ವಜ್ರವನ್ನು 1845ರಿಂದ 1846ರವರೆಗಿನ ಮೊದಲ ಆಂಗ್ಲೊ-ಸಿಖ್ ಕದನದ ಸಂದರ್ಭದಲ್ಲಿ ನಡೆದ ಕಥೆಯ ಹಿನ್ನೆಲೆಯ ಒಂದು ಭಾಗವಾಗಿ ನಿರೂಪಿಸಲಾಗಿದೆ.
  • ಹೆನ್ರಿ ಡೇವಿಡ್ ತೋರಿಯಾನ ಪುಸ್ತಕ ವಾಲ್ಡನ್ ‌ನಲ್ಲಿ, ವಸ್ತುಗಳ ಬಗೆಗಿನ ಮಾನವನ ಅನ್ವೇಷಣೆಗೆ ಸಂಬಂಧಿಸಿದಂತೆ ತಿಳಿಸಲು 137ನೇ ಪುಟದಲ್ಲಿ ಕೋಹಿನೂರ್‌ ವಜ್ರದ ಬಗ್ಗೆ ಸೂಚಿಲಾಗಿದೆ.
  • ಹಫ್ ಆಂಟೋಯ್ನಿ ಡಿಆರ್ಕಿಯ 1887ರ ಪದ್ಯ "ದ ಫೇಸ್ ಆನ್ ದ ಬರೂಮ್ ಫ್ಲೋರ್"ನಲ್ಲಿ, ಅಲೆಮಾರಿಯು ತನ್ನ ನಾಶಕ್ಕೆ ಕಾರಣವಾದ ಮಹಿಳೆಯ ಬಗ್ಗೆ ಹೀಗೆಂದು ವಿವರಿಸುತ್ತಾನೆ - "...ಕೋಹಿನೂರ್ಅನ್ನೂ ಮೀರಿಸಿದ ಕಣ್ಣು ಮತ್ತು ಕಡು ಕೆಂಗಂದು ಬಣ್ಣದ ಕೂದಲ ರಾಶಿ..."
  • ಜೇಮ್ಸ್ ಜಾಯ್ಸೆನ "ಉಲಿಸ್ಸೆಸ್"ನಲ್ಲಿ, "ಅವನು ಬಲ ಕೈಯಲ್ಲಿ ಹಿಡಿದುಕೊಂಡಿರುವ ಹೂವಿನಲ್ಲಿ ಕೋಹಿನೂರ್‌ ವಜ್ರವು ಹೊಳೆಯುತ್ತಿದೆ" ಎಂದು ವರ್ಣಿಸಲಾಗಿದೆ.
  • ಅಗತಾ ಕ್ರೈಸ್ಟಿದ ಸೀಕ್ರೆಟ್ ಆಫ್ ಚಿಮ್ನೀಸ್ ‌ನ ಕಥಾವಸ್ತುವು ಕೋಹಿನೂರ್‌ ವಜ್ರವನ್ನು ಪತ್ತೆ ಹಚ್ಚುವುದರ ಸುತ್ತ ಸುತ್ತುತ್ತದೆ. ಈ ಕಾಬಂಬರಿಯಲ್ಲಿ ಅದನ್ನು ಕದ್ದು, ಅಡಗಿಸಿಟ್ಟು, ಅದರ ಬದಲಿಗೆ ಬೇರೆಯದನ್ನು ಇರಿಸಲಾಗುತ್ತದೆ.
  • ಪಾಲ್ ಸ್ಕಾಟ್ ಬರೆದ ನಾಲ್ಕು-ಸಂಪುಟದ ಕಾದಂಬರಿ ,ದ ರಾಜ್ ಕ್ವಾರ್ಟೆಟ್ ಆಧಾರಿತ ಒಂದು ದೂರದರ್ಶನ ಕಿರು-ಸರಣಿ ;ದ ಜ್ಯುವೆಲ್ ಇನ್ ದ ಕ್ರೌನ್ ‌ನಲ್ಲಿ, ಒಂದು ಹಂತದಲ್ಲಿ ಶೀರ್ಷಿಕೆಯು, ದುಲೀಪ್ ಸಿಂಗ್ ಕೋಹಿನೂರ್‌ಅನ್ನು ರಾಣಿ ವಿಕ್ಟೋರಿಯಾಳಿಗೆ ಉಡುಗೊರೆಯಾಗಿ ನೀಡುವುದನ್ನು ಚಿತ್ರಿಸುವ ಶಿಲಾಮುದ್ರಣವನ್ನು ಹಾಗೂ ಬ್ರಿಟಿಷ್ ಸಾಮ್ರಾಜ್ಯದಲ್ಲಿನ ನೈಜ ಆಭರಣವಾಗಿ ಭಾರತವನ್ನು (ಭಾರತ್-ವರ್ಷ್) ಸೂಚಿಸುತ್ತದೆ.
  • ಗುರಿಂದರ್ ಚಾಢಾ ನ ಚಲನಚಿತ್ರ ಬ್ರೈಡ್ ಆಂಡ್ ಪ್ರೆಜುಡಿಸ್‌ನಲ್ಲಿ "ಮ್ಯಾರೇಜ್ ಇಂಟು ಟೌವ್ನ್" ಎಂಬ ಒಂದು ಹಾಡು, ಲಲಿತಾಳ (ಐಶ್ವರ್ಯ ರೈ) ಸ್ನೇಹಿತೆ ಮತ್ತು ಅವಳ ಮದುವೆಗಾಗಿ ಅನೇಕ ಇತರ ಅಂಗಡಿ ಮಾಲೀಕರು ಅವರ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನಿಸುವುದರ ಬಗ್ಗೆ ಹೇಳುತ್ತದೆ. ಆಭರಣದ ಅಂಗಡಿ ಮಾಲೀಕನೊಬ್ಬನು ಹೀಗೆಂದು ಹಾಡುತ್ತಾನೆ - "ಕಟ್, ಕಲರ್, ಕ್ಲಾರಿಟಿ

! ದ ಬೆಸ್ಟ್ ಯು ವಿಲ್ ಎವರ್ ಸೀ (ನೀನು ಇದುವರೆಗೆ ನೋಡಿದುದರಲ್ಲಿ ಅತ್ಯುತ್ತಮವಾದುದು)!" ಅತ್ಯಾಕರ್ಷಕ ಒಡವೆಗಳನ್ನು ನೋಡಿದ ನಂತರ ಅದಕ್ಕೆ ಪ್ರತಿಯಾಗಿ ಐಶ್ವರ್ಯ ರೈ ಹೀಗೆಂದು ಹಾಡುತ್ತಾಳೆ - "ಓನ್ಲಿ ದ ಕೋಹಿನೂರ್‌ ಈಸ್ ಬೆಟ್ಟರ್ (ಕೇವಲ ಕೋಹಿನೂರ್‌ ಮಾತ್ರ ಅತ್ಯುತ್ತಮವಾದುದು)!"

  • ದ ಲೆಜೆಂಡ್ ಆಫ್ ಭಗತ್ ಸಿಂಗ್ ಎಂಬ ಚಲನಚಿತ್ರದಲ್ಲಿ ರಾಜ್‌ಗುರುವಿನ ಏಕಾಲಾಪವು, ಕೋಹಿನೂರ್‌ ವಜ್ರವು ಹೇಗೆ ಈಸ್ಟ್ ಇಂಡಿಯಾ ಕಂಪೆನಿಯಿಂದ ದರೋಡೆ ಆಯಿತು; ಈಗ ಅದು ರಾಣಿ ಕಿರೀಟವನ್ನು ಹೇಗೆ ತೇಜೋಮಯಗೊಳಿಸುತ್ತಿದೆ ಎಂಬುದನ್ನು ವಿವರಿಸುತ್ತದೆ.
  • ಗ್ಯಾಸ್‌ಲೈಟ್‌ನಲ್ಲಿ (1944), ಚಾರ್ಲ್ಸ್ ಬಾಯರ್ ಮತ್ತು ಇಂಗ್ರಿಡ್ ಬರ್ಗ್‌ಮ್ಯಾನ್‌ ದಂಪತಿಗಳು ಆಭರಣದಂಗಡಿಯಲ್ಲಿ ಒಡವೆಗಳನ್ನು ನೋಡುತ್ತಿರುವಾಗ, ಚಾರ್ಲ್ಸ್ ಅವಳಿಗೆ ಕೋಹಿನೂರ್‌ ವಜ್ರವನ್ನು ತೋರಿಸುತ್ತಾನೆ. ಆ ದೃಶ್ಯವು ಒಂದು ಪ್ರಮುಖ ಕಥಾವಿಷಯವಾಗಿದೆ.

ಇದನ್ನೂ ಗಮನಿಸಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. http://www.minelinks.com/alluvial/diamonds_1.html
  2. ೨.೦ ೨.೧ "Koh-i-noor, a Mountain of Light". Dancewithshadows.com. Archived from the original on 2007-10-13. Retrieved 2009-08-10.
  3. ಕೋಹಿನೂರ್‌ ಪುರಾಣಕಥೆಗಳು: http://www.bbc.co.uk/dna/h2g2/A730801 ಕೋಹಿನೂರ್‌ ವಜ್ರ
  4. "Srimad Bhagavatam Canto 10 Chapter 56". Srimadbhagavatam.com. Archived from the original on 2011-09-28. Retrieved 2009-08-10.
  5. "ಆರ್ಕೈವ್ ನಕಲು". Archived from the original on 2010-04-04. Retrieved 2010-07-21.
  6. "Large And Famous Diamonds". Minelinks.com. Retrieved 2009-08-10.
  7. ಡೆಕ್ಕನ್ ಹೆರಿಟೇಜ್, H. K. ಗುಪ್ತ, A. ಪರಾಶರ್ ಮತ್ತು D. ಬಾಲಸುಬ್ರಮಣ್ಯನ್, ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ, 2000, ಪುಟ 144, ಓರಿಯಂಟ್ ಬ್ಲ್ಯಾಕ್ಸ್‌ವ್ಯಾನ್, ISBN 8173712859
  8. ಪಾಕಿಸ್ತಾನ್ ಬಿಫೋರ್ ಯುರೋಪ್, C.E.B. ಆಶರ್ ಮತ್ತು C. ಟ್ಯಾಲ್ಬಟ್, ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, 2006, ISBN 0521809045, ಪುಟ 40
  9. ಎ ಹಿಸ್ಟರಿ ಆಪ್ ಪಾಕಿಸ್ತಾನ್, ಹರ್ಮ್ಯಾನ್ ಕುಲ್ಕೆ ಮತ್ತು ಡಯಟ್ಮರ್ ರೊದರ್ಮಂಡ್, ಆವೃತ್ತಿ: 3, ರೂಟ್ಲೆಡ್ಜ್, 1998, ಪುಟ 160; ISBN 0415154820
  10. ಬ್ಯಾಲ್ಫರ್, ಅಯನ್. ಫೇಮಸ್ ಡೈಮಂಡ್ಸ್ . 1987, ಪುಟ 24.
  11. ೧೧.೦ ೧೧.೧ ದ ಕೋಹಿನೂರ್‌ ಡೈಮಂಡ್; ರಚಿಸಲಾಗಿರುವುದು: 6ನೇ ಜೂನ್ 2002; BBC
  12. UK CPI inflation numbers based on data available from Gregory Clark (2013), "What Were the British Earnings and Prices Then? (New Series)" MeasuringWorth.
  13. ಲೇಡಿ ಲಾಗಿನ್ಸ್ ರಿಕಲೆಕ್ಷನ್ಸ್ - ಸರ್ ಜಾನ್ ಸ್ಪೆನ್ಸರ್ ಲಾಗಿನ್ ಮತ್ತು ಲೇಡಿ ಲೀನ ಲಾಗಿನ್‌ರ ಪುತ್ರಿ ಎಡಿತ್ ಡಾಲ್‌ಹೌಸಿ ಲಾಗಿನ್ ಬರೆದದ್ದು. ರಾಣಿ ವಿಕ್ಟೋರಿಯಾಸ್ ಮಹಾರಾಜ್, ದುಲೀಪ್ ಸಿಂಗ್ - 1838-93, ಮೈಕೆಲ್ ಅಲೆಕ್ಸಾಂಡರ್ ಮತ್ತು ಸುಶಿಲಾ ಆನಂದ್ ಬರೆದದ್ದು. 1980. ISBN 1842122320, ISBN 9781842122327
  14. ಇಂಡಿಯನ್ MPಸ್ ಡಿಮ್ಯಾಂಡ್ ಕೋಹಿನೂರ್ಸ್ ರಿಟರ್ನ್; ದೆಹಲಿಯಲ್ಲಿ ಸತಿಶ್ ಜ್ಯಾಕಬ್; 26 ಏಪ್ರಿಲ್ 2000; BBC ನ್ಯೂಸ್
  15. "The Curse of the Kohinoor Diamond". Diamonds-are-forever.org.uk. 2007-01-19. Retrieved 2009-08-10.
  16. Dunton, Larkin (1896). The World and Its People. Silver, Burdett. p. 144.
  17. Dunton, Larkin (1896). The World and Its People. Silver, Burdett. p. 27.
  18. hi/south_asia/727231.stm "Indian MPs demand Kohinoor's return". BBC News. 2000-04-26. Retrieved 2009-08-10. {{cite web}}: Check |url= value (help)


ಮ‌ೂಲಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]