ಕೊಂಕಣ ಕಪಿಲಾ (ಗೋವಿನ ತಳಿ)

ವಿಕಿಪೀಡಿಯ ಇಂದ
Jump to navigation Jump to search
ಕೊಂಕಣ ಕಪಿಲಾ
ತಳಿಯ ಹೆಸರುಕೊಂಕಣ ಕಪಿಲಾ
ಮೂಲಕೊಂಕಣ ಪ್ರಾಂತ್ಯ
ವಿಭಾಗಕೆಲಸಗಾರ, ಸಣ್ಣ-ಮಧ್ಯಮ ಗಾತ್ರ
ಬಣ್ಣವಿವಿಧ
ಮುಖನೇರ ಉದ್ದ ಮುಖ
ಕೊಂಬುಸಣ್ಣ, ಮೇಲ್ಮುಖ

ಕೊಂಕಣ ಕಪಿಲಾ ಭಾರತದ ಕೊಂಕಣ ಪ್ರಾಂತ್ಯದ ಹಸುವಿನ ತಳಿ.[೧] ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಕೊಂಕಣದ ಪ್ರದೇಶವು ಇವುಗಳ ಮೂಲಸ್ಥಾನವಾಗಿದೆ.

ದೇಹಲಕ್ಷಣಗಳು[ಬದಲಾಯಿಸಿ]

ಇವುಗಳು ಬೇರೆ ಬೇರೆ ಬಣ್ಣಗಳನ್ನ ಹೊಂದಿದ್ದು ಮುಖ್ಯವಾಗಿ ಕೆಂಪುಕಂದು ಅಥವಾ ಕೆಂಪುಕಪ್ಪು, ಬಿಳಿ/ಬೂದು ಹಾಗೂ ಮಿಶ್ರಬಣ್ಣಗಳಲ್ಲಿರುತ್ತವೆ ಮತ್ತು ಕೆಲವು ಕಂದು ಬಣ್ಣ ಅಥವಾ ನಸುಗೆಂಪುಮಿಶ್ರಿತ ಕಂದುಬಣ್ಣದಲ್ಲಿರುತ್ತವೆ. ಈ ಹಸುಗಳು ಸಣ್ಣಗಾತ್ರದಿಂದ ಮಧ್ಯಮಗಾತ್ರದ ದೇಹದ್ದಾಗಿರುತ್ತವೆ. ಮುಖವು ನೇರವಾಗಿರುತ್ತದೆ. ಸಣ್ಣಗಾತ್ರದಿಂದ ಮಧ್ಯಮಗಾತ್ರದ ಡುಬ್ಬ ಮತ್ತು ಗೋಮಾಳೆ ಹೊಂದಿರುತ್ತವೆ. ಸಾಮಾನ್ಯವಾಗಿ ನೇರವಾದ ಮತ್ತು ಸಣ್ಣ ಗಾತ್ರದ ಕೊಂಬುಗಳಿದ್ದು ಮೇಲ್ಮುಖವಾಗಿ ಮತ್ತು ಕೊಂಚ ಹಿಂಭಾಗಕ್ಕೆ ಬಾಗಿಕೊಂಡಿದ್ದು ಚೂಪಾಗಿರುತ್ತದೆ.

ಬಳಕೆಗಳು[ಬದಲಾಯಿಸಿ]

ಇವುಗಳ ಮುಖ್ಯವಾಗಿ ಕೆಲಸಗಾರ ತಳಿಯಾಗಿದ್ದು ಪರ್ವತ ಪ್ರದೇಶ ಹಾಗೂ ಉಷ್ಟತೇವಾಂಶವುಳ್ಳ ವಾತಾವರಣಕ್ಕೆ ಹೊಂದಿಕೊಂಡಿರುವಂತದ್ದಾಗಿವೆ. ಹಾಲಿನ ಉತ್ಪಾದನೆ ಹೆಚ್ಚು ಇರುವುದಿಲ್ಲ. (ದಿನಕ್ಕೆ ಸುಮಾರು ೨.೨೫ ಕೆ.ಜಿ)

ಉಲ್ಲೇಖಗಳು[ಬದಲಾಯಿಸಿ]

ಹೊರಸಂಪರ್ಕ ಕೊಂಡಿಗಳು[ಬದಲಾಯಿಸಿ]