ಕೃಷ್ಣಾನಂದ ಸರಸ್ವತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Krishnananda 1975.jpg

ಸ್ವಾಮಿ ಕೃಷ್ಣಾನಂದ (ಎಪ್ರಿಲ್ ೨೫, ೧೯೨೨ - ನವಂಬರ್ ೨೩, ೨೦೦೧) ಒಬ್ಬ ಹಿಂದೂ ಸಂತರಾಗಿದ್ದರು. ಅವರು ಸ್ವಾಮಿ ಶಿವಾನಂದರ ಶಿಷ್ಯರಾಗಿದ್ದರು ಮತ್ತು ಋಷಿಕೇಶದಲ್ಲಿ ೧೯೫೮ರಿಂದ ೨೦೦೧ರ ವರೆಗೆ ದಿವ್ಯ ಜೀವನ ಸಮಾಜದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ೨೦೦ಕ್ಕೂ ಹೆಚ್ಚು ಪಠ್ಯಗಳ ಲೇಖಕರಾಗಿದ್ದ, ಯೋಗ, ಧರ್ಮ ಹಾಗು ತತ್ವ ಮೀಮಾಂಸೆಯ ಮೇಲೆ ವ್ಯಾಪಕವಾಗಿ ಉಪನ್ಯಾಸ ನೀಡುತ್ತಿದ್ದ ಕೃಷ್ಣಾನಂದರು ಸಮೃದ್ಧ ದೇವತಾಶಾಸ್ತ್ರಜ್ಞ ಹಾಗು ತತ್ವಶಾಸ್ತ್ರಜ್ಞರಾಗಿದ್ದರು.