ಶಿವಾನಂದ ಸರಸ್ವತಿ
Jump to navigation
Jump to search
ಶಿವಾನಂದ ಸರಸ್ವತಿ (ಸಪ್ಟಂಬರ್ ೮, ೧೮೮೭ - ಜುಲೈ ೧೪, ೧೯೬೩) ಒಬ್ಬ ಹಿಂದೂ ಆಧ್ಯಾತ್ಮಿಕ ಶಿಕ್ಷಕ ಮತ್ತು ಯೋಗ ಹಾಗು ವೇದಾಂತದ ಪ್ರತಿಪಾದಕರಾಗಿದ್ದರು. ಶಿವಾನಂದರು ಕುಪ್ಪುಸ್ವಾಮಿಯಾಗಿ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪಟ್ಟಮಡೈನಲ್ಲಿ ಜನಿಸಿದರು. ಅವರು ವೈದ್ಯಶಾಸ್ತ್ರವನ್ನು ಅಧ್ಯಯನಮಾಡಿದರು ಮತ್ತು ಬ್ರಿಟಿಷ್ ಮಲಯದಲ್ಲಿ ಹಲವಾರು ವರ್ಷಗಳವರೆಗೆ ವೈದ್ಯರಾಗಿ ಕಾರ್ಯನಿರ್ವಹಿಸಿ ಸಂನ್ಯಾಸತ್ವ ತೆಗೆದುಕೊಂಡರು.