ಕು. ರಾ. ಸೀತಾರಾಮ ಶಾಸ್ತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕು. ರಾ. ಸೀತಾರಾಮ ಶಾಸ್ತ್ರಿ ಅಥವಾ ಸರಳವಾಗಿ ಕು. ರಾ. ಸೀ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ನಟ, ಬರಹಗಾರ, ಗೀತರಚನೆಕಾರ ಮತ್ತು ನಿರ್ದೇಶಕರಾಗಿದ್ದರು. ರಂಗಭೂಮಿಯಲ್ಲಿ ವೃತ್ತಿಜೀವನದ ನಂತರ, ಚಲನಚಿತ್ರಗಳಲ್ಲಿನ ಶಾಸ್ತ್ರಿ ಅವರ ವೃತ್ತಿಜೀವನವು ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಗೀತರಚನೆಕಾರ ಮತ್ತು ಆಗಾಗ ಸಂಗೀತಸಂಯೋಜಕನದ್ದಾಗಿತ್ತು. ಅವರು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

ರಾಜಸೂಯ ಯಾಗ (1937) ಎಂಬ ಪೌರಾಣಿಕ ಚಲನಚಿತ್ರದಲ್ಲಿ ನಟನಾಗಿ ಶಾಸ್ತ್ರಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಟನಾಗಿ ಸಂಕ್ಷಿಪ್ತ ಅವಧಿಯ ನಂತರ, ಅವರು ಮಹಾಕವಿ ಕಾಳಿದಾಸ (1955) ಚಲನಚಿತ್ರಕ್ಕಾಗಿ ನಿರ್ದೇಶಕ, ಗೀತರಚನೆಕಾರ, ಬರಹಗಾರ ಮತ್ತು ಸಂಗೀತ ಸಂಯೋಜಕರಾಗಿ ಮಾರ್ಪಟ್ಟರು, ಇದು ವರ್ಷದ ದೊಡ್ಡ ವಾಣಿಜ್ಯಯಶಸ್ಸಾಗಿ ಹೊರಹೊಮ್ಮಿತು ಮತ್ತು ವಿಮರ್ಶಕರಿಂದ ಪ್ರಶಂಸೆ ಪಡೆಯಿತು . ಈ ಚಿತ್ರವು ವರ್ಷದ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರಪತಿಗಳ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು.

ಕು.ರಾ. ಸೀ. ಅವರಿಗೆ ಗುಬ್ಬಿ ವೀರಣ್ಣನವರ 1954 ರ ಬೇಡರ ಕಣ್ಣಪ್ಪ ಚಿತ್ರದ ಪ್ರಮುಖ ಪಾತ್ರವನ್ನು ನೀಡಲಾಯಿತು. ಆದಾಗ್ಯೂ, ಹಾಂಗ್ ಕಾಂಗ್‌ನ ಶಾ ಬ್ರದರ್ಸ್ ಸ್ಟುಡಿಯೊದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶದಿಂದಾಗಿ ಅವರು ಅದನ್ನು ತಿರಸ್ಕರಿಸಿದರು. ಈ ಪಾತ್ರವನ್ನು ನಂತರ ರಾಜ್‌ಕುಮಾರ್ ನಿರ್ವಹಿಸಿ ನಂತರ ಕನ್ನಡ ಚಿತ್ರರಂಗದ ಆರಾಧ್ಯ ದೈವವಾಗಿ ಹೊರಹೊಮ್ಮಿದರು.

ಕನ್ನಡ ಭಾಷೆಯ ಹೊರತಾಗಿ, ಶಾಸ್ತ್ರಿ ಅವರು ಮಲಯ ಭಾಷೆಯಲ್ಲಿ 2 ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ: ಕುರಾನಾ ಕಾವ್ ಮತ್ತು ಇಮಾನ್ (1954) - ಇವೆರಡೂ ಜಪಾನ್‌ನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದವು - ಆ ಮೂಲಕ ಅವರ ಚಲನಚಿತ್ರಗಳನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸಿದ ಕರ್ನಾಟಕದ ಮೊದಲ ನಿರ್ದೇಶಕರಾದರು. . ಅವರ ನಿರ್ದೇಶನಕ್ಕಾಗಿ ಅವರು ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಪಡೆದರು.

ಸೀತಾರಾಮ ಶಾಸ್ತ್ರಿಗಳು ಮೈಸೂರು ರಾಜ್ಯದಿಂದ ಬಂದವರು ಮತ್ತು ತಮ್ಮ ಚಿಕ್ಕ ವಯಸ್ಸಿನಲ್ಲಿ ರಂಗಭೂಮಿಯಲ್ಲಿ ತುಂಬಾ ಸಕ್ರಿಯರಾಗಿದ್ದರು. ಅವರು ಕನ್ನಡ ಚಿತ್ರರಂಗದ ಪ್ರವರ್ತಕ ಎಂದು ಪರಿಗಣಿಸಲ್ಪಟ್ಟ ಗುಬ್ಬಿ ವೀರಣ್ಣ ಅವರ ಮಾರ್ಗದರ್ಶನವನ್ನು ಪಡೆದರು. ನಟನಾಗಿ ಅವರ ಎಲ್ಲಾ ಆರಂಭಿಕ ಚಲನಚಿತ್ರಗಳನ್ನು ಗುಬ್ಬಿ ವೀರಣ್ಣ ಅವರೇ ನಿರ್ದೇಶಿಸಿದ್ದಾರೆ.

ಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಚಿತ್ರ ಭಾಷೆ ಕಾರ್ಯ ನಿರ್ವಹಣೆ ಟಿಪ್ಪಣಿ
ಚಲನಚಿತ್ರ ನಿರ್ದೇಶಕ ಸಂಗೀತ ಸಂಯೋಜನೆ ಸಂಭಾಷಣೆ,ಚಿತ್ರಗೀತೆಗಳ ಸಾಹಿತ್ಯ ನಟ
1937 ರಾಜಸೂಯ ಯಾಗ ಕನ್ನಡ Yes
1945 ಹೇಮರೆಡ್ಡಿ ಮಲ್ಲಮ್ಮ ಕನ್ನಡ Yes
1953 ಗುಣಸಾಗರ ಕನ್ನಡ Yes ಸಹ ಸಹಾಯಕ ನಿರ್ದೇಶಕ
1954 ಇಮಾನ್ ಮಲಯ Yes
1955 ಮಹಾಕವಿ ಕಾಳಿದಾಸ ಕನ್ನಡ Yes Yes Yes Yes ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
1956 ಸದಾರಮೆ ಕನ್ನಡ Yes
1956 ಓಹಿಲೇಶ್ವರ ಕನ್ನಡ Yes
1956 ಹರಿ ಭಕ್ತ ಕನ್ನಡ Yes
1958 ಅಣ್ಣ ತಂಗಿ ಕನ್ನಡ Yes Yes
1958 ಭೂಕೈಲಾಸ ಕನ್ನಡ Yes
1960 ರಾಣಿ ಹೊನ್ನಮ್ಮ ಕನ್ನಡ Yes Yes
1962 ತೇಜಸ್ವಿನಿ ಕನ್ನಡ Yes
1963 ವೀರ ಕೇಸರಿ ಕನ್ನಡ Yes
1963 ಮನ ಮೆಚ್ಚಿದ ಮಡದಿ ಕನ್ನಡ Yes Yes
1963 ಜೇನು ಗೂಡು ಕನ್ನಡ Yes
1963 ಕನ್ಯಾರತ್ನ ಕನ್ನಡ Yes
1963 ಗೌರಿ ಕನ್ನಡ Yes
1964 ತುಂಬಿದ ಕೊಡ ಕನ್ನಡ Yes
1964 ಶಿವರಾತ್ರಿ ಮಹಾತ್ಮೆ ಕನ್ನಡ Yes
1964 ಮುರಿಯದ ಮನೆ ಕನ್ನಡ Yes
1965 ಮಾವನ ಮಗಳು ಕನ್ನಡ Yes
1965 ಬೆರತ ಜೀವ ಕನ್ನಡ Yes Yes Yes ನಿರ್ಮಾಪಕ ಕೂಡ
1966 ಮಧು ಮಾಲತಿ ಕನ್ನಡ Yes
1968 ಮನಸ್ಸಾಕ್ಷಿ ಕನ್ನಡ Yes
1969 ಸುವರ್ಣ ಭೂಮಿ ಕನ್ನಡ Yes
1969 ಮಲ್ಲಮ್ಮನ ಪವಾಡ ಕನ್ನಡ Yes
1969 ಮಧುರ ಮಿಲನ ಕನ್ನಡ Yes
1969 ಕಲ್ಪವೃಕ್ಷ ಕನ್ನಡ Yes
1970 ಠಕ್ಕ ಬಿಟ್ರೆ ಸಿಕ್ಕ ಕನ್ನಡ Yes
1970 ನಾಡಿನ ಭಾಗ್ಯ ಕನ್ನಡ Yes Yes
1971 ಸೋತು ಗೆದ್ದವಳು ಕನ್ನಡ Yes
1971 ಸಂಶಯ ಫಲ ಕನ್ನಡ Yes Yes
1971 ಬಾಳ ಬಂಧನ ಕನ್ನಡ Yes
1972 ತ್ರಿವೇಣಿ ಕನ್ನಡ Yes
1973 ದೇವರು ಕೊಟ್ಟ ತಂಗಿ ಕನ್ನಡ Yes
1974 ಪ್ರೊಫೆಸರ್ ಹುಚ್ಚುರಾಯ ಕನ್ನಡ Yes
1974 ಅಣ್ಣ ಅತ್ತಿಗೆ ಕನ್ನಡ Yes
1975 ಒಂದೇ ರೂಪ ಎರಡು ಗುಣ ಕನ್ನಡ Yes
1975 ನಿರೀಕ್ಷೆ ಕನ್ನಡ Yes
1978 ದೇವದಾಸಿ ಕನ್ನಡ Yes

ಪ್ರಶಸ್ತಿಗಳು[ಬದಲಾಯಿಸಿ]

  • 1955 - 3 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು - ಅರ್ಹತೆಯ ಪ್ರಮಾಣಪತ್ರ - ಮಹಾಕವಿ ಕಾಳಿದಾಸ

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]