ವಿಷಯಕ್ಕೆ ಹೋಗು

ರಾಜಸೂಯ ಯಾಗ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಜಸೂಯ ಎಂಬ ಆಚರಣೆಯೊಂದಿಗೆ ಗೊಂದಲಕ್ಕೀಡಾಗಬಾರದು.
ರಾಜಸೂಯ ಯಾಗ
ನಿರ್ದೇಶನಟಿ. ದ್ವಾರಕಾನಾಥ್‌
ನಿರ್ಮಾಪಕತಿಮ್ಮಯ್ಯ
ಲೇಖಕನಂಜನಗೂಡು ಶ್ರೀಕಂಠ ಶಾಸ್ತ್ರಿ
ಪಾತ್ರವರ್ಗಕೆ.ಆರ್.‌ ಸೀತಾರಾಮ್,ಕೆ.ವಿ ಅಚ್ಯುತ ರಾವ್, ಟಿ.ಚಂದ್ರಶೇಖರ್‌, ಟಿ.ದ್ವಾರಕಾನಾಥ್‌, ಟಿ ಜಯಮ್ಮ, ಸರೋಜ
ಸಂಗೀತಎಚ್‌ ಆರ್‌ ಪದ್ಮನಾಭ ಶಾಸ್ತ್ರಿ
ಛಾಯಾಗ್ರಹಣಬೊಮ್ಮನ್‌ ಡಿ ಇರಾನಿ
ಸಂಕಲನಎಮ್.ವಿ. ರಾಮನ್ ‌
ಸ್ಟುಡಿಯೋಮೈಸೂರ್‌ ಸೌಂಡ್‌ ಸ್ಟೂಡಿಯೋಸ್‌
ಬಿಡುಗಡೆಯಾಗಿದ್ದು
  • Error: All values must be integers (help)
ದೇಶಭಾರತ
ಭಾಷೆಕನ್ನಡ

ರಾಜಸೂಯ ಯಾಗ (ಕನ್ನಡ: ರಾಜಸೂಯ ಯಾಗ) ೧೯೩೭ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ಇದನ್ನು ಟಿ. ದ್ವಾರಕಾನಾಥ್ ನಿರ್ದೇಶಿಸಿದ್ದಾರೆ, ತಿಮ್ಮಯ್ಯ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಎಸ್‌ ಆರ್ ವಾಸುದೇವರಾವ್, ಟಿ ಕೆ ರಾಮಮೂರ್ತಿ, ಕು. ರಾ. ಸೀತಾರಾಮ ಶಾಸ್ತ್ರಿ ಮತ್ತು ಟಿ.ಜಯಮ್ಮ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ಎಚ್ ಆರ್ ಪದ್ಮನಾಭ ಶಾಸ್ತ್ರಿ ಅವರ ಸಂಗೀತವಿದೆ. [] [] []

ಕಥಾ ಸಾರಾಂಶ

[ಬದಲಾಯಿಸಿ]

ಖಾಂಡವ ವನವನ್ನು ದಹಿಸಿ ಪಾಂಡವರು ಇಂದ್ರಪ್ರಸ್ಥ ನಗರವನ್ನು ನಿರ್ಮಿಸುವರು. ಅಲ್ಲಿ ವೈಭವಯುತ ಅರಮನೆ ನಿರ್ಮಿಸಿ ರಾಜಸೂಯ ಯಾಗವನ್ನು ಮಾಡುತ್ತಾರೆ. ಅತಿಥಿಯಾಗಿ ಆಗಮಿಸಿದ ದುರ್ಯೋಧನ ಪಾಂಡವರ ವೈಭವವನ್ನು ಕಂಡು ಹೊಟ್ಟೆ ಉರಿ ಪಡುತ್ತಾನೆ. ಆ ಅರಮನೆಯಲ್ಲಿ ದ್ರೌಪದಿಯ ಮುಂದೆ ಅಪಮಾಕ್ಕೆ ಈಡಾಗುವ ಪ್ರಸಂಗವೂ ಬರುತ್ತದೆ. ಅವನಲ್ಲಿ ರೋಷದ ಬೀಜ ಬಿತ್ತಿಕೊಂಡು ಹೆಮ್ಮರವಾಗುತ್ತದೆ. ಇದು ರಾಜಸೂಯ ಯಾಗ ಚಿತ್ರದ ಕತೆಯಾಗಿದೆ.

ನಿರ್ಮಾಣ ಮತ್ತು ಬಿಡುಗಡೆ

[ಬದಲಾಯಿಸಿ]

ಬೆಂಗಳೂರಿನ ಮೈಸೂರ್‌ ಸೌಂಡ್‌ ಸ್ಟೂಡಿಯೋಸ್‌ನಲ್ಲಿ ತಯಾರಾದ ಈ ಚಿತ್ರ,ಸಂಪೂರ್ಣವಾಗಿ ಕರ್ನಾಟಕದಲ್ಲಿಯೇ ನಿರ್ಮಾಣವಾದ ಮೊದಲ ಚಿತ್ರವಾಗಿದೆ. ಫೆಬ್ರವರಿ ೪, ೧೯೩೭ರಂದು ಸೆನ್ಸಾರ್‌ ಪ್ರಮಾಣ ಪತ್ರ ಪಡೆದ "ರಾಜಸೂಯ ಯಾಗ" ಚಿತ್ರವು ಬೆಂಗಳೂರಿನ ಪ್ಯಾರಾಮೌಂಟ್‌ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. ೧೪,೨೦೦ ಅಡಿಯ ಈ ಚಲನಚಿತ್ರ ೧೭೮ ನಿಮಿಷಗಳ ಅವಧಿಯದಾಗಿತ್ತು.

೧೯೪೭ರಲ್ಲಿ "ಮಸ್ಕಾಟ್"‌ ಲಾಂಛನದಲ್ಲಿ ಚಿತ್ರವು ಮರುಬಿಡುಗಡೆಯಾಯಿತು.

ಪಾತ್ರವರ್ಗ

[ಬದಲಾಯಿಸಿ]
  • ಎಸ್ ಆರ್ ವಾಸುದೇವರಾವ್
  • ಟಿ ಕೆ ರಾಮಮೂರ್ತಿ
  • ಕೆ ಆರ್ ಸೀತಾರಾಮ ಶಾಸ್ತ್ರಿ
  • ಟಿ.ಜಯಮ್ಮ
  • ಟಿ. ಚಂದ್ರಶೇಖರ್
  • ಇವಿ ಸರೋಜಾ
  • ಕೆ ವಿ ಅಚ್ಯುತ ರಾವ್

ಉಲ್ಲೇಖಗಳು

[ಬದಲಾಯಿಸಿ]
  1. "Rajasuya Yaaga". chiloka.com. Retrieved 2015-02-09.
  2. "Rajasuya Yaaga". nthwall.com. Archived from the original on 2015-02-09. Retrieved 2015-02-09.
  3. "Rajasuya Yaaga". bharatmovies.rave-staging.com. Archived from the original on 2015-02-09. Retrieved 2015-02-09.



ಬಾಹ್ಯ ಕೊಂಡಿಗಳು

[ಬದಲಾಯಿಸಿ]