ಕಾಂಟ್ಯಾಕ್ಟ್ ಲೆನ್ಸ್(ಸಂಪರ್ಕ ಮಸೂರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಂಟ್ಯಾಕ್ಟ್ಸ್ ಇಲ್ಲಿಗೆ ಪುನರ್ನಿರ್ದೆಶಿಸುತ್ತದೆ. ಕಾಂಟ್ಯಾಕ್ಟ್ ಗಳ ಸಂಗ್ರಹಣಾ ವಿಧಾನಕ್ಕೆ ವಿಳಾಸ ಪುಸ್ತಿಕೆಯನ್ನು ನೋಡಿ.
ಜೋಡಿ ಕಾಂಟ್ಯಾಕ್ಟ್ ಲೆನ್ಸ್ ಗಳು, ಊರ್ಧ್ವಮುಖಿಯಾಗಿ ಒಳಭಾಗದ ಭಂಗಿಯಲ್ಲಿದೆ.
ಪ್ಯಾಕೆಜಿಂಗ್ ಆಗಿರುವ ಒಂದು ದಿನದ ಮಟ್ಟಿಗೆ ಉಪಯೋಗಿಸಿ ಬಿಸಾಡಬಹುದಾದಂತಹ ನೀಲಿ ಬಣ್ಣದ ಕಾಂಟ್ಯಾಕ್ಟ್ ಲೆನ್ಸ್

ಕಾಂಟ್ಯಾಕ್ಟ್ ಲೆನ್ಸ್ (ಇದನ್ನು ಸರಳವಾಗಿ ಕಾಂಟ್ಯಾಕ್ಟ್ ಎಂದೂ ಸಹ ಕರೆಯಲಾಗುತ್ತದೆ) ಎಂಬುದು ಕಣ್ಣಿನ ದೋಷ ಸರಿಪಡಿಸುವ, ಕಾಸ್ಮೆಟಿಕ್(ಕಣ್ಣನ್ನು ಸಹಜ ಸ್ಥಿತಿಗೆ ತರುವ), ಅಥವಾ ಚಿಕಿತ್ಸೆಯ ಮೂಲಕ ಸರಿಪಡಿಸುವ ಮಸೂರವಾಗಿದೆ. ಇದನ್ನು ಸಾಮಾನ್ಯವಾಗಿ ಕಣ್ಣಿನ ಪಾರದರ್ಶಕ ಪಟಲ(ಕಾರ್ನಿಯ) ಮೇಲೆ ಅಳವಡಿಸಲಾಗುತ್ತದೆ. 1508ರಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಗಳ ಬಗ್ಗೆ ಕಲ್ಪನೆಯನ್ನು ಮೊದಲ ಬಾರಿಗೆ ವರ್ಣಿಸಿದ ಹಾಗು ಅವುಗಳ ರೇಖಾಚಿತ್ರಗಳನ್ನು ರಚಿಸಿದ ಕೀರ್ತಿ ಲಿಯೋನಾರ್ಡೊ ಡಾ ವಿಂಚಿಗೆ ಸಲ್ಲುತ್ತದೆ[ಸೂಕ್ತ ಉಲ್ಲೇಖನ ಬೇಕು], ಆದರೆ ಇದು 300 ವರ್ಷಗಳಿಗಿಂತ ಹೆಚ್ಚಿನ ನಂತರದ ಕಾಲವಾಗಿತ್ತು. ಅದಕ್ಕಿಂತ ಮುಂಚೆ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ವಾಸ್ತವವಾಗಿ ರಚಿಸಿ, ಅದನ್ನು ಕಣ್ಣಿನ ಮೇಲೆ ಧರಿಸಲಾಗುತ್ತಿತ್ತು. ಆಧುನಿಕ ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಜೆಕ್ ನ ರಸಾಯನವಿಜ್ಞಾನಿ ಒಟ್ಟೋ ವಿಚ್ಟೆರ್ಲೇ ಹಾಗು ಅವರ ಸಹಾಯಕ ಡ್ರಹೋಸ್ಲಾವ್ ಲಿಮ್ ಸಂಶೋಧಿಸಿದರು. ಜೊತೆಗೆ ಇವರು ಅದರ ತಯಾರಿಕೆಯಲ್ಲಿ ಬಳಸಲಾಗುವ ಜೆಲ್ ನ್ನೂ ಸಹ ಮೊದಲ ಬಾರಿಗೆ ಕಂಡುಹಿಡಿದರು.

ಕೆಲವು ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ ಗಳಿಗೆ ಮಸುಕಾದ ನೀಲಿ ಬಣ್ಣದ ಛಾಯೆಯನ್ನು ಬೆರಸಲಾಗುತ್ತದೆ. ಇವುಗಳನ್ನು ಶುದ್ಧಗೊಳಿಸುವ ಹಾಗು ಸಂಗ್ರಹಣಾ ದ್ರಾವಣದಲ್ಲಿ ಮುಳುಗಿಸಿದಾಗ ಹೆಚ್ಚು ಚೆನ್ನಾಗಿ ಕಾಣುತ್ತದೆ. ಕೆಲವು ಮಸೂರಗಳಿಗೆ, ಕಣ್ಣಿನ ದೃಷ್ಟಿಯನ್ನು ಬದಲಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಬಣ್ಣವನ್ನು ನೀಡಲಾಗುತ್ತದೆ. ಕಣ್ಣಿನ ಸ್ವಾಭಾವಿಕ ಮಸೂರಕ್ಕೆ UV(ನೇರಳಾತೀತ ವಿಕಿರಣ)ಯಿಂದ ಉಂಟಾಗುವ ಹಾನಿಯನ್ನು ತಗ್ಗಿಸಲು ಕೆಲವು ಮಸೂರಗಳು ಇದೀಗ UV ರಕ್ಷಿತ ಮೇಲ್ಮೈ ಸಂಸ್ಕರಣೆಯನ್ನು ಒಳಗೊಂಡಿರುತ್ತದೆ.[೧]

ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ವಿಶ್ವವ್ಯಾಪಿಯಾಗಿ 125 ದಶಲಕ್ಷ ಜನರು ಬಳಸುತ್ತಾರೆಂದು ಅಂದಾಜಿಸಲಾಗಿದೆ (2%),[೨] ಇದರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 28ರಿಂದ 38 ದಶಲಕ್ಷ ಜನರು[೨] ಹಾಗು ಜಪಾನಿನಲ್ಲಿ 13 ದಶಲಕ್ಷ ಜನರು ಬಳಸುತ್ತಾರೆ.[೩] ವಿವಿಧ ಮಸೂರಗಳ ಬಳಕೆ ಹಾಗು ಅವುಗಳ ಬಳಕೆಗೆ ನೀಡಲಾಗುವ ಲಿಖಿತ ಸೂಚಿಯು ದೇಶದಿಂದ ದೇಶಕ್ಕೆ ಗಮನಾರ್ಹವಾಗಿ ಬದಲಾಗುತ್ತದೆ. ಜೊತೆಗೆ ಪ್ರಸಕ್ತದಲ್ಲಿ ಸೂಚಿಸಲಾಗುವ ರಿಜಿಡ್(ಗಡುಸು,ಅನಿಲ ಪ್ರವೇಶಸಾಧ್ಯ) ಮಸೂರಗಳ ಬಳಕೆಯೂ ಜಪಾನ್, ದಿ ನೆದರ್ಲೆಂಡ್ಸ್ ಹಾಗು ಜರ್ಮನಿಯಲ್ಲಿ 20%ಗೂ ಹೆಚ್ಚಾಗಿದೆ. ಆದರೆ ಸ್ಕ್ಯಾಂಡಿನೇವಿಯಾದಲ್ಲಿ ಇದರ ಬಳಕೆಯು 5%ನಷ್ಟು ಕಡಿಮೆಯಿದೆ.[೨]

ಹಲವಾರು ಕಾರಣಗಳಿಗಾಗಿ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸಲು ಜನರು ಆಯ್ಕೆ ಮಾಡಿಕೊಳ್ಳುತ್ತಾರೆ, ಸಾಮಾನ್ಯವಾಗಿ ಅವುಗಳ ಗೋಚರತೆ ಹಾಗು ಕಾರ್ಯಸಾಧ್ಯತೆಗೆ ಇದರ ಬಳಕೆಯಾಗುತ್ತದೆ.[೪] ಕನ್ನಡಕಕ್ಕೆ ಹೋಲಿಸಿದರೆ, ಕಾಂಟ್ಯಾಕ್ಟ್ ಲೆನ್ಸ್‌ಗಳಿಗೆ ತೇವದ ವಾತಾವರಣದಿಂದ ಕಡಿಮೆ ಪರಿಣಾಮ ಉಂಟಾಗುತ್ತದೆ. ಅವುಗಳು ಆವಿಯಿಂದ ಆವೃತವಾಗುವುದಿಲ್ಲ ಹಾಗು ದೃಷ್ಟಿಯ ಒಂದು ವಿಶಾಲ ಕ್ಷೇತ್ರವನ್ನು ಒದಗಿಸುತ್ತದೆ. ಹಲವಾರು ಕ್ರೀಡಾ ಚಟುವಟಿಕೆಗಳಿಗೆ ಇದು ಅತ್ಯಂತ ಸೂಕ್ತವೆನಿಸಿದೆ. ಇದರ ಜೊತೆಯಲ್ಲಿ, ಕೆರಟೋಕೋನಸ್ ಹಾಗು ಅನಿಸೇಯಿಕೊನಿಯ ದಂತಹ ದೋಷಪೂರಿತ ಕಣ್ಣಿನ ಪರಿಸ್ಥಿತಿಗಳನ್ನು ಕನ್ನಡಕದ ಮೂಲಕ ನಿಖರವಾಗಿ ಸರಿಪಡಿಸಲು ಸಾಧ್ಯವಿಲ್ಲ.

ಇತಿಹಾಸ[ಬದಲಾಯಿಸಿ]

1888ರಲ್ಲಿ, ಅಡಾಲ್ಫ್ ಫಿಕ್ಕ್ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಯಶಸ್ವಿಯಾಗಿ ಅಳವಡಿಸಿದ ಮೊದಲ ವ್ಯಕ್ತಿ, ಈ ಮಸೂರಗಳನ್ನು ಊದಿದ ಗಾಜುಗಳಿಂದ ತಯಾರಿಸಲಾಗಿತ್ತು

ಲಿಯೋನಾರ್ಡೊ ಡಾ ವಿಂಚಿ, ಕಾಂಟ್ಯಾಕ್ಟ್ ಲೆನ್ಸ್ ಗಳ ಕಲ್ಪನೆಯನ್ನು ತಮ್ಮ 1508ರ ಕೊಡೆಕ್ಸ್ ಆಫ್ ದಿ ಐ, ಮ್ಯಾನ್ಯುಅಲ್ D ನಲ್ಲಿ ಪರಿಚಯಿಸಿದರೆಂದು ಸಾಮಾನ್ಯವಾಗಿ ಮನ್ನಣೆ ನೀಡಲಾಗಿದೆ. ಇದರಲ್ಲಿ ಅವರು, ಒಂದು ಬಟ್ಟಲು ನೀರಿನಲ್ಲಿ ಕಣ್ಣನ್ನು ಮುಳುಗಿಸುವ ಮೂಲಕ ಪಾರದರ್ಶಕ ಪಟಲದ ಶಕ್ತಿಯನ್ನು ಪೂರ್ತಿಯಾಗಿ ಬದಲಾಯಿಸುವ ವಿಧಾನವನ್ನು ವಿವರಿಸುತ್ತಾರೆ. ಆದಾಗ್ಯೂ, ಲಿಯೋನಾರ್ಡೊ, ತಮ್ಮ ಕಲ್ಪನೆಯನ್ನು ದೃಷ್ಟಿಯನ್ನು ಸರಿಪಡಿಸುವಿಕೆಗೆ ಬಳಸಬಹುದೆಂದು ಸೂಚಿಸಲಿಲ್ಲ-ಅವರು ಕಣ್ಣಿನ ಸ್ಪಷ್ಟತೆಯನ್ನು ಸರಿಹೊಂದಿಸುವ ವಿಧಾನಗಳನ್ನು ಅರಿಯುವ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು.[೫]

1636ರಲ್ಲಿ, ರೆನೆ ಡೆಸ್ಕಾರ್ಟೆಸ್‌ ಮತ್ತೊಂದು ಕಲ್ಪನೆಯನ್ನು ಪ್ರಸ್ತಾಪಿಸಿದರು. ಇದು ಪಾರದರ್ಶಕ ಪಟಲಕ್ಕೆ ನೇರವಾಗಿ ಸಂಪರ್ಕಿಸುವಂತೆ ದ್ರಾವಣ ತುಂಬಿದ ಗಾಜಿನ ನಳಿಕೆಯನ್ನು ಅಳವಡಿಸುವುದಾಗಿತ್ತು. ಮುಂಚಾಚಿಕೊಂಡ ಕೊನೆಯನ್ನು ಶುದ್ಧವಾದ ಗಾಜಿನಿಂದ ರಚಿಸಿರಬೇಕು. ಇದನ್ನು ದೃಷ್ಟಿಯ ದೋಷವನ್ನು ಸರಿಪಡಿಸುವಂತೆ ರೂಪಿಸಲಾಗಿರುತ್ತದೆ. ಆದರೆ ಈ ಕಲ್ಪನೆ ಅವಾಸ್ತವಿಕವಾಗಿತ್ತು. ಏಕೆಂದರೆ ಇದರಿಂದಾಗಿ ಕಣ್ಣನ್ನು ಮಿಟುಕಿಸುವುದು ಅಸಾಧ್ಯವಾಗಿತ್ತು.

1801ರಲ್ಲಿ, ಕಣ್ಣಿನ ಸ್ಪಷ್ಟತೆಯನ್ನು ಸರಿಹೊಂದಿಸುವ ವಿಧಾನಗಳಿಗೆ ಸಂಬಂಧಿಸಿದಂತೆ ಪ್ರಯೋಗಗಳನ್ನು ನಡೆಸುವಾಗ, ವಿಜ್ಞಾನಿ ಥಾಮಸ್ ಯಂಗ್, ದ್ರಾವಣ ತುಂಬಿದ "ಐಕಪ್" ನ್ನು ರಚಿಸಿದರು. ಇದನ್ನು ಕಾಂಟ್ಯಾಕ್ಟ್ ಲೆನ್ಸ್ ನ ಪೂರ್ವ ರಚನೆಯೆಂದು ಪರಿಗಣಿಸಬಹುದು. ಐಕಪ್‌‌ನ ಕೆಳಭಾಗದಲ್ಲಿ, ಯಂಗ್ ಒಂದು ಸೂಕ್ಷ್ಮದರ್ಶಕ ನೇತ್ರಕವನ್ನು ಅಳವಡಿಸಿದರು. ಆದಾಗ್ಯೂ, ಲಿಯೋನಾರ್ಡೊರ ಮಾದರಿಯಂತೆ, ಯಂಗ್ ರ ಸಾಧನವೂ ಸಹ ಕಣ್ಣಿನ ವಕ್ರೀಕಾರಕ ದೋಷಗಳನ್ನು ಸರಿಪಡಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಸರ್ ಜಾನ್ ಹರ್ಸ್ಚೆಲ್, ಎನ್ಸೈಕ್ಲೋಪೀಡಿಯ ಮೆಟ್ರೋಪಾಲಿಟನ ದ 1845ರ ಆವೃತ್ತಿಯ ಅಡಿಟಿಪ್ಪಣಿಯಲ್ಲಿ ಕಣ್ಣಿನ ದೋಷ ಸರಿಪಡಿಸುವಿಕೆಗೆ ಎರಡು ವಿಧಾನಗಳನ್ನು ಸೂಚಿಸಿದರು: ಮೊದಲನೆಯದು "ಪ್ರಾಣಿಯ ಲೋಳೆಯೊಂದಿಗೆ ತುಂಬಿಸಿದ ಗಾಜಿನ ಒಂದು ಗೋಳಾಕಾರದ ಕೋಶ" ಹಾಗು "ಪಾರದರ್ಶಕ ಪಟಲದ ಒಂದು ಅಚ್ಚು, ಇದನ್ನು "ಕೆಲವು ವಿಧವಾದ ಪಾರದರ್ಶಕ ಸಾಧನದ" ಮೇಲೆ ಮುದ್ರಿಯೊತ್ತಬಹುದಾಗಿದೆ.[೬] ಆದಾಗ್ಯೂ ಹರ್ಸ್ಚೆಲ್ ಈ ವಿಧಾನಗಳನ್ನು ಎಂದಿಗೂ ಪರೀಕ್ಷಿಸಿರಲಿಲ್ಲವೆಂದು ವರದಿಯಾಗಿದೆ, ಇವುಗಳನ್ನು ನಂತರದಲ್ಲಿ ಹಲವಾರು ಸ್ವತಂತ್ರ ಸಂಶೋಧಕರು ಉದಾಹರಣೆಗೆ ಹಂಗೇರಿಯ Dr. ಡಲ್ಲಾಸ್ (1929) ಅಭಿವೃದ್ಧಿಪಡಿಸಿದರು, ಇವರು ಸಜೀವ ಕಣ್ಣುಗಳಿಂದ ಅಚ್ಚುಗಳನ್ನು ನಿರ್ಮಿಸುವ ವಿಧಾನವನ್ನು ಪರಿಪೂರ್ಣಗೊಳಿಸಿದರು. ಮೊದಲ ಬಾರಿಗೆ ಇದು ಮಸೂರಗಳ ತಯಾರಿಕೆಗೆ ಅನುಕೂಲ ಮಾಡಿಕೊಟ್ಟಿತು. ಇದು ಕಣ್ಣಿನ ನಿಖರವಾದ ಆಕಾರಕ್ಕೆ ಅನುಗುಣವಾಗಿ ಸರಿಹೊಂದಿಸಲಾಗಿತ್ತು.

1887ರಲ್ಲಿ ಜರ್ಮನಿಯ ಗಾಜೂದುಗ, F.E. ಮುಲ್ಲರ್, ಪಾರದರ್ಶಕವಾದ ಹಾಗು ಸಹ್ಯವಾದ ಕಣ್ಣಿನ ಮೊದಲ ರಕ್ಷಕವನ್ನು ತಯಾರಿಸಿದರು.[೭] 1887ರಲ್ಲಿ, ಜರ್ಮನಿಯ ನೇತ್ರತಜ್ಞ ಅಡಾಲ್ಫ್ ಗ್ಯಾಸ್ಟನ್ ಯುಗೆನ್ ಫಿಕ್ಕ್ ಯಶಸ್ವಿಯಾಗಿ ಮೊದಲ ಬಾರಿಗೆ ಕಾಂಟ್ಯಾಕ್ಟ್ ಲೆನ್ಸ್ ನ್ನು ರಚಿಸಿ ಅದನ್ನು ಅಳವಡಿಸಿದರು. ಜುರಿಚ್ ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ, ಅವರು ನಾಭೀಕರಿಸಿಲ್ಲದ ಸ್ಕ್ಲೆರಲ್(ಕಣ್ಣಿನ ಬಿಳಿ ಪೊರೆ) ಸಂಪರ್ಕ ಚಿಪ್ಪುಗಳನ್ನು ರಚಿಸುವ ಬಗ್ಗೆ ವಿವರಣೆ ನೀಡಿದರು, ಇದು ಪಾರದರ್ಶಕ ಪಟಲದ ಸುತ್ತಲಿರುವ ಹೆಚ್ಚೇನೂ ಸೂಕ್ಷ್ಮವಲ್ಲದ ಜೀವಕೋಶದ ಅಂಚುಕಟ್ಟಿನಲ್ಲಿ ಇರಿಸಲಾಗಿತ್ತು. ಹಾಗು ಆರಂಭದಲ್ಲಿ ಮೊಲಗಳ ಮೇಲೆ, ನಂತರದಲ್ಲಿ ಸ್ವತಃ ಅವರಿಗೆ, ಹಾಗು ಕಡೆಯದಾಗಿ ಸ್ವಯಂಸೇವಕರ ಒಂದು ಸಣ್ಣ ಗುಂಪಿನ ಮೇಲೆ ಪ್ರಾಯೋಗಿಕವಾಗಿ ಜೋಡಿಸಲಾಯಿತು. ಈ ಮಸೂರಗಳನ್ನು ಬಲವಾಗಿ ಊದಿದ ಗಾಜಿನಿಂದ ತಯಾರಿಸಲಾಗಿತ್ತು ಹಾಗು ಇವುಗಳ ವ್ಯಾಸ 18-21 ಮಿಲಿಮೀಟರ್ (mm )ನಷ್ಟಿರುತ್ತಿದ್ದವು. ಪಾರದರ್ಶಕ ಪಟಲ/ಜಡ್ಡುಗಂಟು ಹಾಗು ಗಾಜಿನ ನಡುವಿನ ಖಾಲಿ ಜಾಗವನ್ನು ಫಿಕ್ ಡೆಕ್ಸ್‌ಟ್ರೋಸ್ ದ್ರಾವಣದ ಮೂಲಕ ಭರ್ತಿಮಾಡಿದರು. ಅವರು ಮಾರ್ಚ್ 1888ರಲ್ಲಿ, ಆರ್ಚಿವ್ ಫುರ್ ಆಗೆನ್ಹೆಯಿಲ್ಕುಂಡೆ ಎಂಬ ನಿಯತಕಾಲಿಕದಲ್ಲಿ ತಮ್ಮ ಲೇಖನ "ಕಾಂಟ್ಯಾಕ್ಟ್ ಬ್ರಿಲ್ಲೇ"ಯನ್ನು ಪ್ರಕಟಿಸಿದರು.

ಫಿಕ್ಕ್ ರ ಮಸೂರವು ನಿರ್ವಹಿಸಲು ಅನುಕೂಲವಲ್ಲದಷ್ಟು ದೊಡ್ಡದಾಗಿತ್ತು, ಜೊತೆಗೆ ಏಕಕಾಲಕ್ಕೆ ಕೆಲವಾರು ಗಂಟೆಗಳ ಕಾಲ ಮಾತ್ರ ಧರಿಸಲು ಸಾಧ್ಯವಾಗಿತ್ತು. ಕೈಲ್, ಜರ್ಮನಿಯಲ್ಲಿ ಅಗಸ್ಟ್ ಮುಲ್ಲರ್, ತೀವ್ರತರವಾದ ತಮ್ಮ ಸಮೀಪದೃಷ್ಟಿಯನ್ನು ತಾವೇ ತಯಾರಿಸಿದಂತಹ ಹೆಚ್ಚು ಅನುಕೂಲವಾದ ಗಾಜಿನಿಂದ ಊದಲಾದ ಸ್ಕ್ಲೆರಲ್ ಕಾಂಟ್ಯಾಕ್ಟ್ ಲೆನ್ಸ್ ನ ಮೂಲಕ 1888ರಲ್ಲಿ ಸರಿಪಡಿಸಿಕೊಂಡರು.[೮]

1887ರಲ್ಲಿ, ಲೂಯಿಸ್ J. ಗಿರಾರ್ಡ್ ಸಹ ಇದೆ ರೀತಿಯಾದ ಸ್ಕ್ಲೆರಲ್ ರೂಪದ ಕಾಂಟ್ಯಾಕ್ಟ್ ಲೆನ್ಸ್‌ನ ಸಂಶೋಧನೆ ಮಾಡಿದರು.[೯] 1930ರಲ್ಲಿ ಪಾಲಿಮೀಥೈಲ್ ಮೆಥಕ್ರಿಲೇಟ್(PMMA ಅಥವಾ ಪರ್ಸ್ಪೆಕ್ಸ್(ಹಗುರ ಪಾರದರ್ಶಕ ಥರ್ಮೋಪ್ಲ್ಯಾಸ್ಟಿಕ್)/ಪ್ಲೆಕ್ಸಿಗ್ಲ್ಯಾಸ್ ನ ಅಭಿವೃದ್ಧಿಗೆ ಮುಂಚೆ ಗಾಜಿನಿಂದ ಊದಲ್ಪಟ್ಟ ಸ್ಕ್ಲೆರಲ್ ಮಸೂರಗಳು ಕಾಂಟ್ಯಾಕ್ಟ್ ಲೆನ್ಸ್ ನ ಏಕೈಕ ಮಾದರಿಯಾಗಿತ್ತು, ಇದು ಮೊದಲ ಬಾರಿಗೆ ಪ್ಲ್ಯಾಸ್ಟಿಕ್ ಸ್ಕ್ಲೆರಲ್ ಲೆನ್ಸ್ ಗಳ ತಯಾರಿಕೆಗೆ ಅವಕಾಶ ಮಾಡಿಕೊಟ್ಟಿತು. 1936ರಲ್ಲಿ, ದೃಷ್ಟಿಮಾಪನಕಾರ ವಿಲಿಯಂ ಫೆಯಿನ್ ಬ್ಲೂಮ್ ಪ್ಲ್ಯಾಸ್ಟಿಕ್ ಮಸೂರಗಳನ್ನು ಪರಿಚಯಿಸಿದರು, ಇದು ಬಹಳ ಹಗುರವಾಗಿಯೂ ಹಾಗು ಹೆಚ್ಚು ಅನುಕೂಲಕರವಾಗಿಯೂ ಇತ್ತು.[೧೦] ಈ ಮಸೂರಗಳು ಗಾಜು ಹಾಗು ಪ್ಲ್ಯಾಸ್ಟಿಕ್ ನ ಸಂಯೋಜನೆಯನ್ನು ಹೊಂದಿದ್ದವು.

1949ರಲ್ಲಿ, "ಪಾರದರ್ಶಕ ಪಟಲದ" ಮಸೂರಗಳನ್ನು ಮೊದಲ ಬಾರಿಗೆ ಅಭಿವೃದ್ಧಿಪಡಿಸಲಾಯಿತು.[೧೧][೧೨][೧೩][೧೪] ಈ ಮಸೂರಗಳು ಮೂಲ ಸ್ಕ್ಲೆರಲ್ ಮಸೂರಗಳಿಗಿಂತ ಬಹಳ ಸಣ್ಣದಾಗಿದ್ದವು, ಏಕೆಂದರೆ ಇವುಗಳು ದೃಷ್ಟಿಯ ಎಲ್ಲ ನೇತ್ರಕ ಮೇಲ್ಮೈಗಿಂತ ಹೆಚ್ಚಾಗಿ ಪಾರದರ್ಶಕ ಪಟಲದ ಮೇಲೆ ಮಾತ್ರ ಕೂರುತ್ತಿತ್ತು, ಜೊತೆಗೆ ಇದನ್ನು ದಿನದಲ್ಲಿ ಹದಿನಾರು ಗಂಟೆಗಳ ಕಾಲ ಧರಿಸಬಹುದಾಗಿತ್ತು. PMMA ಪಾರದರ್ಶಕ ಪಟಲದ ಮಸೂರಗಳು 1960ರ ದಶಕದಲ್ಲಿ ಒಟ್ಟಾರೆಯಾಗಿ ಗಮನವನ್ನು ಸೆಳೆದ ಮೊದಲ ಕಾಂಟ್ಯಾಕ್ಟ್ ಮಸೂರಗಳೆನಿಸಿದವು. ಏಕೆಂದರೆ ಮಸೂರಗಳ ವಿನ್ಯಾಸವು ಸುಧಾರಿತ ತಯಾರಿಕೆ(ಲೇಥ್)ತಂತ್ರಜ್ಞಾನದೊಂದಿಗೆ ಹೆಚ್ಚು ಆಧುನಿಕವಾಗಿತ್ತು.

1950 ಹಾಗು 1960ರ ದಶಕದ ಆರಂಭದಲ್ಲಿದ್ದ ಪಾರದರ್ಶಕ ಪಟಲದ ಮಸೂರಗಳು ತುಲನಾತ್ಮಕವಾಗಿ ದುಬಾರಿ ಹಾಗು ಸೂಕ್ಷ್ಮವಾಗಿದ್ದವು, ಇದು ಕಾಂಟ್ಯಾಕ್ಟ್ ಲೆನ್ಸ್ ವಿಮೆಯ ಮಾರುಕಟ್ಟೆ ಅಭಿವೃದ್ಧಿಯ ಹುಟ್ಟಿಗೆ ಕಾರಣವಾಯಿತು. ರಿಪ್ಲೇಸ್ಮೆಂಟ್ ಲೆನ್ಸ್ ಇನ್ಶೂರೆನ್ಸ್, Inc.(ಈಗ ಇದು RLI Corp. ಎಂದು ಪರಿಚಿತವಾಗಿದೆ) ಕಾಂಟ್ಯಾಕ್ಟ್ ಗಳು ಹೆಚ್ಚು ಲಭ್ಯವಾಗತೊಡಗಿದಾಗ ಹಾಗು ಬದಲಾಯಿಸಲು ಸುಲಭವೆನಿಸಿದಾಗ 1994ರಲ್ಲಿ ಸಂಸ್ಥೆಯು ತನ್ನ ಮೂಲ ಉತ್ಪನ್ನದ ಕ್ರಮಬಳಕೆಯನ್ನು ತಪ್ಪಿಸಿತು.

PMMA ಮಸೂರಗಳ ಒಂದು ಪ್ರಮುಖ ಅನನುಕೂಲವೆಂದರೆ, ಮಸೂರದ ಮೂಲಕ ಕಣ್ಣಿನ ಆರ್ದ್ರಚರ್ಮಕ್ಕೆ ಹಾಗು ಪಾರದರ್ಶಕ ಪಟಲಕ್ಕೆ ಆಮ್ಲಜನಕವು ತಲುಪುವುದಿಲ್ಲ. ಇದು ಹಲವಾರು ವೈದ್ಯಕೀಯ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. 1970ರ ದಶಕದ ಕೊನೆಯಲ್ಲಿ, ಹಾಗು 1980 ಹಾಗು 1990ರ ದಶಕಗಳಲ್ಲಿ, ಈ ಸಮಸ್ಯೆಯ ಪರಿಹಾರಕ್ಕಾಗಿ ಆಮ್ಲಜನಕದ-ಪ್ರವೇಶಕ್ಕೆ ಸಾಧ್ಯವಾಗುವ ಆದರೆ ಗಡುಸು ಉಪಕರಣಗಳನ್ನು ಅಭಿವೃದ್ಧಿಪಡಿಸಲಾಯಿತು. ರಸಾಯನವಿಜ್ಞಾನಿ ನಾರ್ಮನ್ ಗೇಲಾರ್ಡ್, ಈ ನವೀನ, ಪ್ರವೇಶಸಾಧ್ಯವಾದ ಕಾಂಟ್ಯಾಕ್ಟ್ ಲೆನ್ಸ್‌ಗಳ ಅಭಿವೃದ್ಧಿಯಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಿದರು.[೧೫] ಒಟ್ಟಾರೆಯಾಗಿ, ಈ ಪಾಲಿಮರ್‌ ಗಳನ್ನು "ಗಡುಸು ಅನಿಲಪ್ರವೇಶ ಸಾಧ್ಯ ಅಥವಾ "RGP" ಪದಾರ್ಥಗಳು ಅಥವಾ ಮಸೂರಗಳೆಂದು ಸೂಚಿಸಲಾಗುತ್ತದೆ. ಆದಾಗ್ಯೂ ಮೇಲೆ ಹೇಳಲಾಗಿರುವ ಎಲ್ಲ ಲೆನ್ಸ್ ಗಳ ಮಾದರಿಗಳು-ಸ್ಕ್ಲೆರಲ್ ಗಳು, PMMA ಮಸೂರಗಳು ಹಾಗು RGPಗಳನ್ನು-ನಿರ್ದಿಷ್ಟವಾಗಿ "ಕಠಿಣವಾದ" ಅಥವಾ "ರಿಜಿಡ್" ಮಸೂರಗಳೆಂದು ಸೂಚಿಸಬಹುದು, ಕಠಿಣ ಎಂಬ ಪದವನ್ನು ಇಂದು ಸಾಂದರ್ಭಿಕವಾಗಿ ಅಳವಡಿಸಿ ಧರಿಸಲಾಗುವ PMMA ಮಸೂರಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಆದರೆ "ರಿಜಿಡ್" ಮಸೂರವೆಂಬ ಪದವನ್ನು ಈ ಎಲ್ಲ ಮಸೂರಗಳ ವಿಧಗಳಿಗೆ ಬಳಸಬಹುದಾದ ಸಾರ್ವತ್ರಿಕ ಪದವಾಗಿದೆ. ಅದೆಂದರೆ, ಕಠಿಣ ಮಸೂರಗಳು (PMMA ಮಸೂರಗಳು) ರಿಜಿಡ್ ಮಸೂರಗಳ ಒಂದು ಉಪ-ವರ್ಗವಾಗಿದೆ. ಸಾಂಧರ್ಬಿಕವಾಗಿ, "ಗ್ಯಾಸ್ ಪರ್ಮಿಯಬಲ್" ಎಂಬ ಪದವನ್ನು RGP ಮಸೂರಗಳನ್ನು ವಿವರಿಸಲು ಬಳಸಲಾಗುತ್ತಿತ್ತು, ಆದರೆ ಇದು ತಪ್ಪು ಗ್ರಹಿಕೆಗೆ ಕಾರಣವಾಗಬಹುದು, ಏಕೆಂದರೆ ಸಾಫ್ಟ್ ಮಸೂರಗಳೂ ಸಹ ಅನಿಲ ಪ್ರವೇಶಸಾಧ್ಯ ಆಗಿರುತ್ತವೆ. ಏಕೆಂದರೆ ಅವುಗಳು ಮಸೂರಗಳ ಮೂಲಕ ನೇತ್ರಕ ಮೇಲ್ಮೈಗೆ ಆಮ್ಲಜನಕದ ಪೂರೈಕೆಗೆ ಅವಕಾಶ ಮಾಡಿಕೊಡುತ್ತದೆ.

ಸಾಫ್ಟ್ ಮಸೂರಗಳ ಪ್ರಮುಖ ಅಭಿವೃದ್ಧಿಯನ್ನು ಜೆಕ್ ನ ರಸಾಯನವಿಜ್ಞಾನಿಗಳಾದ ಒಟ್ಟೋ ವಿಚ್ಟೆರ್ಲೇ ಹಾಗು ಡ್ರಹೋಸ್ಲಾವ್ ಲಿಮ್ ಮಾಡಿದರು. ಇವರು 1959ರಲ್ಲಿ ನೇಚರ್ ಎಂಬ ನಿಯತಕಾಲಿಕದಲ್ಲಿ "ಜೈವಿಕ ಬಳಕೆಗಾಗಿ ಹೈಡ್ರೋಫಿಲಿಕ್ ಜೆಲ್ ಗಳು" ಎಂಬ ತಮ್ಮ ಲೇಖನವನ್ನು ಪ್ರಕಟಿಸಿದರು.[೧೬] ಇದು ಕೆಲವು ರಾಷ್ಟ್ರಗಳಲ್ಲಿ ಮೊದಲ ಸಾಫ್ಟ್(ಹೈಡ್ರೋಜೆಲ್) ಮಸೂರಗಳ ಬಿಡುಗಡೆಗೆ ದಾರಿ ಮಾಡಿಕೊಟ್ಟಿತು ಜೊತೆಗೆ ಮೊದಲ "ಸಾಫ್ಲೆನ್ಸ್" ಪದಾರ್ಥವನ್ನು ಅಮೆರಿಕ ಸಂಯುಕ್ತ ಸಂಸ್ಥಾನದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೆಶನ್(FDA) 1971ರಲ್ಲಿ ಅಂಗೀಕರಿಸಿತು. ಶೀಘ್ರದಲ್ಲೇ ರಿಜಿಡ್ ಲೆನ್ಸ್ ಗಳಿಗಿಂತ ಹೆಚ್ಚಾಗಿ ಈ ಮಸೂರಗಳನ್ನು ಬಳಸುವಂತೆ ಸೂಚಿಸಲಾಯಿತು. ಇದಕ್ಕೆ ಕಾರಣ ಸಾಫ್ಟ್ ಲೆನ್ಸ್ ಗಳು ಉಂಟುಮಾಡುವ ತಕ್ಷಣದ ಹಿತಕರ ಸ್ಥಿತಿ. ಇದಕ್ಕೆ ಹೋಲಿಸಿದರೆ, ರಿಜಿಡ್ ಮಸೂರಗಳಲ್ಲಿ ಅದನ್ನು ಧರಿಸಿದ ನಂತರ ಪೂರ್ಣ ಹಿತಕರ ಸ್ಥಿತಿ ಸಾಧಿಸುವ ಮುಂಚೆ, ಅದಕ್ಕೆ ಹೊಂದಿಕೊಳ್ಳಲು ಬಹಳ ಸಮಯದ ಅಗತ್ಯವಿತ್ತು. ಪಾಲಿಮರ್‌ಗಳಿಂದ ತಯಾರಾದ ಸಾಫ್ಟ್ ಲೆನ್ಸ್‌ಗಳು ಮುಂದಿನ 25 ವರ್ಷಗಳಲ್ಲಿ ಸುಧಾರಣೆಯಾದವು. ಅದರಲ್ಲೂ ಮುಖ್ಯವಾಗಿ ಪಾಲಿಮರ್ ಗಳನ್ನು ಒಳಗೊಳ್ಳುವ ಪದಾರ್ಥಗಳ ಬದಲಾವಣೆಯಿಂದ ಆಮ್ಲಜನಕದ ಪ್ರವೇಶಸಾಧ್ಯತೆಯನ್ನು ಹೆಚ್ಚಿಸಲಾಯಿತು. 1972ರಲ್ಲಿ ಬ್ರಿಟಿಶ್ ದೃಷ್ಟಿಮಾಪನಕಾರ ರಿಷಿ ಅಗರವಾಲ್ ಮೊದಲ ಬಾರಿಗೆ ಬಳಸಿ ಬಿಸಾಡಬಹುದಾದಂತಹ ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ ಗಳ ಬಗ್ಗೆ ಸೂಚಿಸಿದರು.[೧೭][೧೮]

1999ರಲ್ಲಿ ಆದ ಒಂದು ಪ್ರಮುಖ ಬೆಳವಣಿಗೆಯೆಂದರೆ ಮಾರುಕಟ್ಟೆಗೆ ಮೊದಲ ಬಾರಿಗೆ ಸಿಲಿಕೋನ್ ಹೈಡ್ರೋಜೆಲ್‌ಗಳ ಬಿಡುಗಡೆ. ಈ ಹೊಸ ಪದಾರ್ಥಗಳು ಸಿಲಿಕೋನ್ ನ ಪ್ರಯೋಜನವನ್ನು ನಿರೂಪಿಸಿದವು-ಇದು ಆಮ್ಲಜನಕದ ಪ್ರವೇಶಸಾಧ್ಯತೆಯನ್ನು ಅಧಿಕವಾಗಿ ಹೊಂದಿದ್ದವು-ಜೊತೆಗೆ 30 ವರ್ಷಗಳ ಹಿಂದೆ ಬಳಸಲಾಗುತ್ತಿದ್ದ ಸಾಂಪ್ರದಾಯಿಕ ಹೈಡ್ರೋಜೆಲ್ ಗಳ ಅನುಕೂಲ ಹಾಗು ಪ್ರಾಯೋಗಿಕ ನಿರ್ವಹ ಣೆಯನ್ನು ಹೊಂದಿದ್ದವು. ಆದಾಗ್ಯೂ ಇತ್ತೀಚಿನವರೆಗೆ ಈ ಮಸೂರಗಳನ್ನು ಆರಂಭದಲ್ಲಿ ಪ್ರಾಥಮಿಕವಾಗಿ ವಿಸ್ತೃತ(ಇಡೀ ರಾತ್ರಿ ಬಳಕೆ) ಬಳಕೆಗೆ ಸೂಚಿಸಲಾಯಿತು. ಆದರೂ ಇತ್ತೀಚೆಗೆ ನಿತ್ಯವೂ(ರಾತ್ರಿಯ ಬಳಕೆಯಿಲ್ಲದ) ಧರಿಸಲಾಗುವ ಸಿಲಿಕೋನ್ ಹೈಡ್ರೋಜೆಲ್ ಗಳನ್ನು ಬಿಡುಗಡೆ ಮಾಡಲಾಯಿತು.

ಸ್ವಲ್ಪಮಟ್ಟಿಗೆ ಪರಿವರ್ತನೆಯಾದ ಅಣುವಿನಲ್ಲಿ, ಸಿಲಿಕೋನ್ ಹೈಡ್ರೋಜೆಲ್ ನ ರಚನೆಯನ್ನು ಬದಲಾವಣೆ ಮಾಡದೇ ಒಂದು ವಿರುದ್ಧ ಗುಂಪನ್ನು ಸೇರಿಸಲಾಗುತ್ತದೆ. ಇದನ್ನು ತನಕಾ ಮನೋಮಾರ್ ಎಂದು ಕರೆಯಲಾಗುತ್ತದೆ ಏಕೆಂದರೆ ಇದರ ಸಂಶೋಧನೆ ಹಾಗು ಸ್ವಾಮ್ಯಹಕ್ಕನ್ನು ಜಪಾನಿನ ಮೆನಿಕಾನ್ Co. ನ ಕ್ಯೋಇಚಿ ತನಕಾ 1979ರಲ್ಲಿ ಹೊಂದಿದ್ದರು. ಎರಡನೇ ಪೀಳಿಗೆಯ ಸಿಲಿಕೋನ್ ಹೈಡ್ರೋಜೆಲ್ ಗಳಾದ, ಗಾಲಿಫಿಲ್ಕಾನ್ A (ಆಕ್ಯುವುಯೇ ಅಡ್ವಾನ್ಸ್, ವಿಸ್ಟಕೊನ್) ಹಾಗು ಸೆನೋಫಿಲ್ಕಾನ್ A (ಆಕ್ಯೂವುಯೇ ಓಯಸಿಸ್, ವಿಸ್ಟಕೊನ್) ತನಕಾ ಮಾನೋಮಾರ್ ನ್ನು ಬಳಕೆ ಮಾಡುತ್ತವೆ. ವಿಸ್ಟಕೊನ್ ತನಕಾ ಮಾನೋಮಾರ್ ನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿದರು ಜೊತೆಗೆ ಇತರ ಅಣುಗಳನ್ನು ಸೇರ್ಪಡೆಗೊಳಿಸಿದರು, ಇದು ಆಂತರಿಕ ಆರ್ದ್ರಕ ಕಾರಕವಾಗಿ ಕಾರ್ಯನಿರ್ವಹಿಸುತ್ತದೆ.[೧೯]

ಕಾಂಫಿಲ್ಕಾನ್ ಅ (ಬಯೋಫಿನಿಟಿ, CooperVision) ಮೂರನೇ ಪೀಳಿಗೆಯ ಪಾಲಿಮರ್ ಎನಿಸಿದೆ. ಮಸೂರದ ತಯಾರಿಕೆಯಲ್ಲಿ ಬಳಸಲಾಗುವ ಪದಾರ್ಥವು ವಿವಿಧ ಗಾತ್ರಗಳ ಎರಡು ಸಿಲೋಕ್ಸಿ ಮ್ಯಾಕ್ರೋಮಾರ್ ಗಳನ್ನು ಬಳಸಿಕೊಳ್ಳುತ್ತವೆ, ಇವುಗಳನ್ನು ಜಂಟಿಯಾಗಿ ಬಳಸಿದಾಗ, ಇವುಗಳು ಆಮ್ಲಜನಕದ ಪ್ರವೇಶಸಾಧ್ಯತೆಯ ಅಧಿಕತೆಯನ್ನು ಉಂಟುಮಾಡುತ್ತವೆ(ಲಭ್ಯವಿರುವ ನೀರಿನ ಪರಿಮಾಣದಿಂದ) ಎಂದು ಸ್ವಾಮ್ಯಹಕ್ಕು ಪ್ರತಿಪಾದಿಸಿತು. ಎನ್ಫಿಲ್ಕಾನ್ A (ಅವೈರ, ಕೂಪರ್‌ವಿಷನ್) ಸ್ವಾಭಾವಿಕವಾಗಿ ಆರ್ದ್ರವಾಗುವ ಮತ್ತೊಂದು ಮೂರನೇ-ಪೀಳಿಗೆಯ ಪದಾರ್ಥವಾಗಿದೆ. ಎನ್ಫಿಲ್ಕಾನ್ A ಪದಾರ್ಥವು 46% ನೀರನ್ನು ಹೊಂದಿದೆ.[೧೯]

ಕಾಂಟ್ಯಾಕ್ಟ್ ಲೆನ್ಸ್‌‌ಗಳ ವಿಧಗಳು[ಬದಲಾಯಿಸಿ]

ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಹಲವು ವಿವಿಧ ರೀತಿಗಳಲ್ಲಿ ವರ್ಗೀಕರಿಸಲಾಗುತ್ತದೆ.[೨೦][೨೧]

ಕಾರ್ಯಚಟುವಟಿಕೆಗಳು[ಬದಲಾಯಿಸಿ]

ಕಣ್ಣಿನ ದೋಷ ಸರಿಪಡಿಸುವ ಕಾಂಟ್ಯಾಕ್ಟ್ ಲೆನ್ಸ್ ಗಳು[ಬದಲಾಯಿಸಿ]

ಕಣ್ಣಿನ ದೋಷ ಸರಿಪಡಿಸುವ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ದೃಷ್ಟಿ ಸುಧಾರಣೆಗೆ ವಿನ್ಯಾಸಗೊಳಿಸಲಾಗುತ್ತದೆ. ಹಲವರಲ್ಲಿ, ಕಣ್ಣಿನ ವಕ್ರೀಕಾರಕ ಸಾಮರ್ಥ್ಯ ಹಾಗು ಕಣ್ಣಿನ ಅಂತರದ ನಡುವೆ ಪರಸ್ಪರ ಹೊಂದಾಣಿಕೆಯಿರುವುದಿಲ್ಲ, ಇದು ವಕ್ರೀಕಾರಕ ದೋಷಕ್ಕೆ ಎಡೆ ಮಾಡಿಕೊಡುತ್ತದೆ. ಕಾಂಟ್ಯಾಕ್ಟ್ ಲೆನ್ಸ್ ಈ ಪರಸ್ಪರ ಅಸಂಬದ್ಧತೆಯನ್ನು ನಿಷ್ಪರಿಣಾಮಗೊಳಿಸುತ್ತದೆ ಜೊತೆಗೆ ಅಕ್ಷಿಪಟದ ಮೇಲೆ ಬೆಳಕು ಸ್ಪಷ್ಟವಾಗಿ ಕೇಂದ್ರೀಕರಿಸಲು ಅವಕಾಶ ನೀಡುತ್ತದೆ. ಕಾಂಟ್ಯಾಕ್ಟ್ ಲೆನ್ಸ್ ನಿಂದ ಸರಿಪಡಿಸಬಹುದಾದ ಕಣ್ಣಿನ ದೋಷಗಳಲ್ಲಿ ಮೈಓಪಿಯ(ಸಮೀಪದೃಷ್ಟಿ), ಹೈಪರ್ಮೆಟ್ರೋಪಿಯ(ದೂರದೃಷ್ಟಿ), ಅಸ್ಟಿಗ್ಮ್ಯಾಟಿಸಂ(ಅಸಮದೃಷ್ಟಿ) ಹಾಗು ಪ್ರಿಸ್ಬಓಪಿಯ(ದೂರ ದೃಷ್ಟಿ)ಗಳು ಸೇರಿವೆ. ಕಾಂಟ್ಯಾಕ್ಟ್ ಗಳನ್ನು ಧರಿಸುವವರು ಸಾಮಾನ್ಯವಾಗಿ ಪ್ರತಿ ರಾತ್ರಿ ಅಥವಾ ಕೆಲವು ದಿನಗಳಿಗೊಮ್ಮೆ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಬಿಚ್ಚಿಡಬೇಕು, ಇದು ಕಾಂಟ್ಯಾಕ್ಟ್ ನ ಬ್ರ್ಯಾಂಡ್ ಹಾಗು ಶೈಲಿಯನ್ನು ಅವಲಂಬಿಸಿರುತ್ತದೆ. ಇತ್ತೀಚಿನ ದಿನಗಳಲ್ಲಿ, ಆರ್ತೋಕೆರಟಾಲಜಿಯ ಬಗ್ಗೆ ಆಸಕ್ತಿಯು ಮತ್ತೆ ಉಂಟಾಗುತ್ತಿದೆ. ಪಾರದರ್ಶಕ ಪಟಲದ ಮೇಲೆ ಒತ್ತಡ ಹಾಕಿ ಅಕ್ಷಿಪಟದ ಮೇಲೆ ನೇರ ಬೆಳಕು ಬೀಳುವಂತೆ ಮಾಡಿ ಸಮೀಪದೃಷ್ಟಿಯನ್ನು ಸರಿಪಡಿಸುತ್ತದೆ ಹಾಗು ಕಣ್ಣಿಗೆ ಕಾಂಟ್ಯಾಕ್ಟ್ ಲೆನ್ಸ್ ಅಥವಾ ಕನ್ನಡಕಗಳ ಸಹಾಯವನ್ನು ಹಗಲು ಹೊತ್ತಿನಲ್ಲಿ ಇಲ್ಲದಂತಾಗಿಸುತ್ತದೆ.

ಬಣ್ಣವನ್ನು ಪತ್ತೆಹಚ್ಚುವ ನ್ಯೂನತೆಯನ್ನು ಹೊಂದಿರುವವರು, ಕೆಂಪು ಬಣ್ಣದ ಛಾಯೆಯನ್ನು ಹೊಂದಿರುವ "X-ಕ್ರೋಮ್" ಕಾಂಟ್ಯಾಕ್ಟ್ ಲೆನ್ಸ್ ನ್ನು ಬಳಸಬಹುದು. ಮಸೂರಗಳು ಸ್ವಾಭಾವಿಕವಾದ ಬಣ್ಣ ದೃಷ್ಟಿಯನ್ನು ಮರುಸ್ಥಾಪಿಸದಿದ್ದರೂ ಸಹ, ಬಣ್ಣ ಪತ್ತೆಹಚ್ಚುವಿಕೆಯಲ್ಲಿ ನ್ಯೂನತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಬಣ್ಣಗಳ ಭೇದ ಗುರುತಿಸುವಲ್ಲಿ ಸಹಾಯಮಾಡುತ್ತದೆ.[೨೨][೨೩]

ಕ್ರೋಮಾಜೆನ್ ಲೆನ್ಸ್ ಗಳನ್ನು ಬಳಸಲಾಗುತ್ತದೆ.ಜೊತೆಗೆ ಇವುಗಳು ಇರುಳಿನಲ್ಲಿ ದೃಷ್ಟಿಗೆ ಸಂಬಂಧಿಸಿದಂತೆ ಸ್ವಲ್ಪಮಟ್ಟಿಗಿನ ಇತಿಮಿತಿಗಳನ್ನು ಪ್ರದರ್ಶಿಸಿದೆ, ಆದಾಗ್ಯೂ ಉಳಿದಂತೆ ಇದು ಬಣ್ಣದ ದೃಷ್ಟಿಯಲ್ಲಿ ಮಹತ್ವದ ಸುಧಾರಣೆಗಳನ್ನು ಉಂಟುಮಾಡಿದೆ.[೨೪] ಆರಂಭದ ಒಂದು ಅಧ್ಯಯನವು ಬಣ್ಣವನ್ನು ಗುರುತಿಸುವಲ್ಲಿ ಮಹತ್ವದ ಸುಧಾರಣೆಯನ್ನು ತೋರಿದೆ ಹಾಗು ರೋಗಿಗಳು ಇದರಿಂದ ತೃಪ್ತಿಯನ್ನು ಹೊಂದಿದ್ದಾರೆ[೨೫]

ಮಾತುಗುರುಡು ಹೊಂದಿರುವವರ ಜತೆ ಈ ಕ್ರೊಮಾಜೆನ್ ಮಸೂರಗಳನ್ನು ಬಳಸಿದ ಯಾದೃಚ್ಛಿಕ, ಗುರುತನ್ನು ಬಹಿರಂಗಮಾಡದ ವಿಧಾನ, ಪ್ಲಸೀಬೊ ನಿಯಂತ್ರಿತ ಪರೀಕ್ಷೆಯಿಂದ ಮಸೂರವಿಲ್ಲದೇ ಓದುವುದಕ್ಕಿಂತ ಅವರ ಓದುವ ಸಾಮರ್ಥ್ಯದಲ್ಲಿ ಗಮನಾರ್ಹ ಸುಧಾರಣೆಗಳು ಉಂಟಾಗಿದ್ದು ಕಂಡುಬಂತು. ಈ ವ್ಯವಸ್ಥೆಗೆ USAನಲ್ಲಿ FDA ಅನುಮೋದನೆ ನೀಡಲಾಗಿದೆ.[೨೬]

ಕಾಸ್ಮೆಟಿಕ್ ಕಾಂಟ್ಯಾಕ್ಟ್ ಲೆನ್ಸ್ ಗಳು (ಕಣ್ಣನ್ನು ಸಹಜ ಸ್ಥಿತಿಗೆ ತರುವ ಮಸೂರಗಳು)[ಬದಲಾಯಿಸಿ]

ಕಣ್ಣನ್ನು ಸಹಜ ಸ್ಥಿತಿಗೆ ತರುವ ಕಾಂಟ್ಯಾಕ್ಟ್ ಲೆನ್ಸ್‌ನ ಕಾಸ್ಮೆಟಿಕ್ ಮಾದರಿಯನ್ನು ಧರಿಸಿರುವ ಮಹಿಳೆ, ಚಿತ್ರದ ವರ್ಧಿತ ಭಾಗವು ತಯಾರಿಕಾ ಪ್ರಕ್ರಿಯೆಯಲ್ಲಿ ಉಂಟಾದ ಮೇಲ್ಮೈ ಒರಟನ್ನು ತೋರುತ್ತದೆ.ಮುದ್ರಿತವಾಗಿರುವ ಚುಕ್ಕೆಗಳಲ್ಲಿನ ಗೆರೆಗಳು ವಕ್ರವಾಗಿರುವ ಕಾರಣ, ಈ ಮಸೂರಗಳನ್ನು ಒಂದು ಸಮತಟ್ಟಾದ ಪದರದ ಮೇಲೆ ಮೊದಲು ಮುದ್ರಿಸಲಾಗುತ್ತದೆ ಹಾಗು ನಂತರದಲ್ಲಿ ಪದರಕ್ಕೆ ಆಕಾರವನ್ನು ನೀಡಲಾಗುತ್ತದೆ.

ಕಾಸ್ಮೆಟಿಕ್ ಕಾಂಟ್ಯಾಕ್ಟ್ ಲೆನ್ಸ್ ನ್ನು ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ತರುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಈ ಮಸೂರಗಳು ದೃಷ್ಟಿಯ ದೋಷವನ್ನೂ ಸಹ ಸರಿಪಡಿಸಬಹುದು, ಇದರ ಬಣ್ಣ ಅಥವಾ ವಿನ್ಯಾಸದ ಪರಿಣಾಮವಾಗಿ ದೃಷ್ಟಿಯಲ್ಲಿ ಅಸ್ಪಷ್ಟತೆ ಅಥವಾ ತೊಡಕು ಉಂಟಾಗುತ್ತದೆ. USAನಲ್ಲಿ, ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೆಶನ್ ದೃಷ್ಟಿ ದೋಷ ಸರಿಪಡಿಸದ ಕಾಸ್ಮೆಟಿಕ್ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಡೆಕೋರೇಟಿವ್ ಕಾಂಟ್ಯಾಕ್ಟ್ ಲೆನ್ಸಸ್ (ಅಲಂಕಾರಿಕ ಕಾಂಟ್ಯಾಕ್ಟ್ ಲೆನ್ಸ್)ಗಳೆಂದು ಹೆಸರಿಸುತ್ತದೆ. ಈ ವಿಧಗಳ ಮಸೂರಗಳು ಅದರ ಅಳವಡಿಕೆಯ ನಂತರ ಸ್ವಲ್ಪಮಟ್ಟಿಗಿನ ಕಿರಿಕಿರಿಯನ್ನು ಉಂಟುಮಾಡುತ್ತವೆ. ಆದರೆ ಕಣ್ಣುಗಳು ಇದಕ್ಕೆ ಹೊಂದಿಕೊಂಡ ನಂತರ, ಇವುಗಳು ಸಾಮಾನ್ಯವಾಗಿ ಕಣ್ಣಿಗೆ ಒಗ್ಗಿಕೊಳ್ಳುತ್ತವೆ. ಯಾವುದೇ ಇತರ ಕಾಂಟ್ಯಾಕ್ಟ್ ಲೆನ್ಸ್ ಗಳ ಮಾದರಿಯಲ್ಲಿ, ಕಾಸ್ಮೆಟಿಕ್ ಲೆನ್ಸ್ ಗಳು ಸ್ವಲ್ಪಮಟ್ಟಿಗಿನ ಹಾಗು ತೀವ್ರತರವಾದ ತೊಡಕುಗಳನ್ನು ಒಳಗೊಂಡಿರುತ್ತವೆ, ಇದರಲ್ಲಿ ಕಣ್ಣುಗಳು ಕೆಂಪಾಗುವುದು, ಕಿರಿಕಿರಿಯಾಗುವುದು, ಹಾಗು ಸೋಂಕು ತಗಲುವುದು ಸೇರಿದೆ. ಮೊದಲ ಬಾರಿಗೆ ಕಾಸ್ಮೆಟಿಕ್ ಲೆನ್ಸ್ ಗಳನ್ನು ಧರಿಸಲು ಇಚ್ಚಿಸುವವರು, ನೇತ್ರತಜ್ಞರನ್ನು ಸಂಪರ್ಕಿಸಬೇಕು. ಜೊತೆಗೆ ದೀರ್ಘಕಾಲಿಕವಾಗಿ ಇದನ್ನು ಧರಿಸಲು ಇಚ್ಛಿಸುವವರು ಭವಿಷ್ಯದಲ್ಲಿ ಉಂಟಾಗುವ ಅಂಧತ್ವದಂತಹ ಅಪಾಯಗಳನ್ನು ತಡೆಗಟ್ಟಲು ಕಾಲಾನುಕಾಲಕ್ಕೆ ಕಣ್ಣನ್ನು ತಪಾಸಣೆ ಮಾಡಿಸಿಕೊಳ್ಳಬೇಕು.

ಕೃತಕ ಕಾಂಟ್ಯಾಕ್ಟ್ ಲೆನ್ಸ್ ಗಳು, ಕಾಸ್ಮೆಟಿಕ್ ಲೆನ್ಸ್ ಗಳ ಒಂದು ಮಾದರಿಯಾಗಿದೆ, ಇದು ಪ್ರಾಥಮಿಕವಾಗಿ ಮನೋರಂಜನಾ ಕ್ಷೇತ್ರದಲ್ಲಿ ಬಳಕೆಯಾಗುತ್ತದೆ. ಕಣ್ಣನ್ನು ನೋಟದಲ್ಲಿ ಗೊಂದಲದ ಮತ್ತು ಹಾಗು ಪ್ರಚೋದಿಸುವಂತೆ ಮಾಡಲು ಬಳಸಲಾಗುತ್ತದೆ,[ಸೂಕ್ತ ಉಲ್ಲೇಖನ ಬೇಕು] ಇದನ್ನು ಸಾಮಾನ್ಯವಾಗಿ ಹಾರರ್(ಭೀತಿ ಹುಟ್ಟಿಸುವ) ಚಿತ್ರ ಹಾಗು ಜಾಂಬೀ(ಜೀವಂತಗೊಳಿಸಲಾದ ಹೆಣ) ಚಲನಚಿತ್ರಗಳಲ್ಲಿ ಬಳಸಲಾಗುತ್ತದೆ. ಈ ಮೂಲಕ ಮಸೂರಗಳು ಒಬ್ಬನ ದೃಷ್ಟಿಯನ್ನು ಅತಿಮಾನುಷವಾಗಿ, ನಿಸ್ತೇಜವಾಗಿ ಹಾಗು ನಿರ್ಜೀವವಾಗಿ ಮಾಡುತ್ತದೆ ಅಥವಾ ಹಲವಾರು ನಿಷಿದ್ಧ ಮಾದಕವಸ್ತುಗಳ ಪ್ರಭಾವದಡಿಯಲ್ಲಿ ಒಬ್ಬನ ಕಣ್ಣುಗುಡ್ಡೆಯ ಸ್ವಾಭಾವಿಕ ನೋಟವನ್ನು ಅನುಕರಿಸಲು ಊದಿಕೊಂಡಿರುವಂತೆ ಕಾಣುತ್ತದೆ.

ಸ್ಕ್ಲೆರಲ್ ಲೆನ್ಸ್ ಗಳು ಕಣ್ಣಿನ ಬಿಳಿಯ ಭಾಗವನ್ನು ಮುಚ್ಚಿ ಹಾಕುತ್ತವೆ(ಅದೆಂದರೆ ಸ್ಕ್ಲೆರಾ) ಹಾಗು ಇದನ್ನು ಹಲವು ಕೃತಕ ಲೆನ್ಸ್ ಗಳಲ್ಲಿ ಬಳಸಲಾಗುತ್ತದೆ. ಅವುಗಳ ಗಾತ್ರದಿಂದಾಗಿ, ಈ ಲೆನ್ಸ್ ಗಳ ಅಳವಡಿಕೆಯು ಬಹಳ ಕಷ್ಟಕರವಾಗಿರುತ್ತದೆ ಜೊತೆಗೆ ಇವುಗಳು ಕಣ್ಣಿನ ಚಲನೆಗೆ ಉತ್ತಮ ರೀತಿಯಲ್ಲಿ ಸಹಕರಿಸುವುದಿಲ್ಲ. ಇದನ್ನು ಬಳಸುವವರು ಲೆನ್ಸ್ ಮೂಲಕ ಒಂದು ಸಣ್ಣ ಭಾಗದಿಂದ ವೀಕ್ಷಿಸಬಹುದಾದ ಕಾರಣದಿಂದಾಗಿ ಇವುಗಳು ದೃಷ್ಟಿಗೆ ಹಾನಿಯನ್ನೂ ಸಹ ಉಂಟುಮಾಡಬಹುದು. ಇದರ ಪರಿಣಾಮವಾಗಿ ಸಾಧಾರಣವಾಗಿ ಇದನ್ನು 3 ಗಂಟೆಗಳಿಗೂ ಅಧಿಕ ಕಾಲ ಧರಿಸಲು ಸಾಧ್ಯವಿಲ್ಲ ಏಕೆಂದರೆ ಇವುಗಳು ತಾತ್ಕಾಲಿಕವಾಗಿ ದೃಷ್ಟಿಗೆ ಅಡಚಣೆಗಳನ್ನು ಉಂಟುಮಾಡಬಹುದು.[೨೭]

ಇದೆ ರೀತಿಯಾದ ಮಸೂರಗಳು ಹೆಚ್ಚಾಗಿ ನೇರವಾದ ವೈದ್ಯಕೀಯ ಬಳಕೆಗಳನ್ನು ಹೊಂದಿವೆ. ಉದಾಹರಣೆಗೆ, ಕೆಲವು ಮಸೂರಗಳು ಕಣ್ಣಿನ ಪಾಪೆಗೆ ಒಂದು ವರ್ಧಿಸಿದ ನೋಟವನ್ನು ಒದಗಿಸಬಹುದು, ಅಥವಾ ಇವುಗಳ ಅಳವಡಿಕೆಯ ನಂತರ (ಅನಿರಿಡಿಯ)ದ ಅಭಾವ ಅಥವಾ ಕಣ್ಣಿನ ಪಾಪೆಗೆ ಹಾನಿ(ಡಿಸ್ಕೊರಿಯಾ)ದೋಷಗಳು ಉಂಟಾಗುತ್ತದೆ.

ಜಪಾನ್ ಹಾಗು ದಕ್ಷಿಣ ಕೊರಿಯಾದಲ್ಲಿರುವ ಒಂದು ಹೊಸ ಪ್ರವೃತ್ತಿಯೆಂದರೆ ವರ್ತುಲ ಕಾಂಟ್ಯಾಕ್ಟ್ ಲೆನ್ಸ್. ವರ್ತುಲವಾದ ಮಸೂರಗಳು ದೊಡ್ಡದಾಗಿ ಗೋಚರಿಸುತ್ತವೆ ಏಕೆಂದರೆ ಕಣ್ಣಿನ ಪಾಪೆಯನ್ನು ಆವರಿಸುವ ಪ್ರದೇಶಗಳಲ್ಲಿ ಮಾತ್ರ ಕೇವಲ ಬಣ್ಣದ ಛಾಯೆಯನ್ನು ಹೊಂದಿರುವುದಿಲ್ಲ, ಆದರೆ ಮಸೂರದ ಹೊರ ವರ್ತುಲದಲ್ಲಿ ಅಧಿಕವಾಗಿ ಗಮನಸೆಳೆಯುವಂತೆ ಬಣ್ಣದ ಛಾಯೆಯನ್ನು ಹೊಂದಿರುತ್ತದೆ. ಇದರ ಪರಿಣಾಮವಾಗಿ ಕಣ್ಣಿನ ಪಾಪೆಯು ದೊಡ್ಡದಾಗಿಯೂ, ಅಗಲವಾಗಿಯೂ ಕಂಡುಬರುತ್ತದೆ.

ಆದಾಗ್ಯೂ ಕಾಂಟ್ಯಾಕ್ಟ್ ಲೆನ್ಸ್ ಗಳ ಹಲವು ಬ್ರ್ಯಾಂಡ್ ಗಳು, ಅದರ ನಿರ್ವಹಣೆ ಸುಲಭವಾಗುವಂತೆ ಮಂದವಾಗಿ ಬಣ್ಣದ ಛಾಯೆಯನ್ನು ಹೊಂದಿರುತ್ತದೆ, ಕಣ್ಣಿನ ಬಣ್ಣದ ಮಾರ್ಪಾಡಿಗಾಗಿ ಕಾಸ್ಮೆಟಿಕ್ ಲೆನ್ಸ್ ಗಳನ್ನೂ ಧರಿಸುವವರು ಬಹಳ ವಿರಳ. ಇದರಂತೆ 2004ರ ಒಂದು ಅಂದಾಜಿನ ಪ್ರಕಾರ ಕೇವಲ 3%ನಷ್ಟು ಜನರು ಕಣ್ಣಿನ ಬಣ್ಣದ ಮಾರ್ಪಾಡಿಗಾಗಿ ಇದನ್ನು ಧರಿಸುತ್ತಾರೆ.[೨೮]

ಕಾಸ್ಮೆಟಿಕ್ ಕಾಂಟ್ಯಾಕ್ಟ್ ಲೆನ್ಸ್ ಗಳು ಕಣ್ಣಿಗೆ ಅಪಾಯವನ್ನು ಉಂಟುಮಾಡಬಹುದು.[೨೯]

ಚಿಕಿತ್ಸಕ ಕಾಂಟ್ಯಾಕ್ಟ್ ಮಸೂರಗಳು[ಬದಲಾಯಿಸಿ]

ಸಾಫ್ಟ್ ಲೆನ್ಸ್ ಗಳನ್ನು ಸಾಮಾನ್ಯವಾಗಿ ವಕ್ರಿಕಾರಕವಲ್ಲದ ಕಣ್ಣಿನ ದೋಷಗಳ ಚಿಕಿತ್ಸೆ ಹಾಗು ಅವುಗಳ ನಿರ್ವಹಣೆಗೆ ಬಳಸಲಾಗುತ್ತದೆ. ಕಣ್ಣುಪಟ್ಟಿಯ ಕಾಂಟ್ಯಾಕ್ಟ್ ಲೆನ್ಸ್ ಗಳು ಗಾಯಗೊಂಡ ಅಥವಾ ಸೋಂಕು ತಗುಲಿದ ಪಾರದರ್ಶಕ ಪಟಲವನ್ನು, ಮಿಟುಕಿಸುವ ಕಣ್ರೆಪ್ಪೆಗಳನ್ನು ಪದೇ ಪದೇ ಉಜ್ಜುವಿಕೆಯಿಂದ ರಕ್ಷಿಸುತ್ತದೆ. ಪರಿಣಾಮವಾಗಿ ಕಣ್ಣು ಬೇಗನೆ ಗುಣವಾಗಲು ಅವಕಾಶ ಮಾಡಿಕೊಡುತ್ತದೆ.[೩೦] ಇವುಗಳನ್ನು ಬುಲ್ಲಸ್ ಕೆರಟೋಪಥಿ, ಕಣ್ಣಿನ ಶುಷ್ಕತೆ, ಪಾರದರ್ಶಕ ಪಟಲದ ಹುಣ್ಣುಗಳು ಹಾಗು ಸವೆತ, ಕೆರಟೈಟಿಸ್, ಪಾರದರ್ಶಕ ಪಟಲದ ದ್ರವಶೋಥ, ಡೆಸ್ಸೆಮೆಟೋಸೆಲೆ, ಪಾರದರ್ಶಕ ಪಟಲದ ಎಕ್ಟಾಸಿಸ್, ಮೂರೆನ್ ಹುಣ್ಣು, ಪಾರದರ್ಶಕ ಪಟಲದ ಹಿಂಭಾಗದ ದೋಷ, ಹಾಗು ನ್ಯೂರೋಟ್ರೋಫಿಕ್ ಕೆರಟೋಕಾಂಜಂಕ್ಟಿವಿಟಿಸ್ ನಂತಹ ಕಣ್ಣಿನ ದೋಷಗಳನ್ನು ಸರಿಪಡಿಸಲು ಬಳಸಲಾಗುತ್ತದೆ.[೩೧] ಕಣ್ಣಿಗೆ ಔಷಧವನ್ನು ತಲುಪಿಸುವ ಕಾಂಟ್ಯಾಕ್ಟ್ ಲೆನ್ಸ್ ಗಳನ್ನೂ ಸಹ ಅಭಿವೃದ್ಧಿಪಡಿಸಲಾಗಿದೆ.[೩೨]

ತಯಾರಿಕೆಗೆ ಬೇಕಾಗುವ ಪರಿಕರಗಳು[ಬದಲಾಯಿಸಿ]

ಕಾಸ್ಮೆಟಿಕ್ ಮಾದರಿಯ ಮಸೂರಗಳನ್ನು ಹೊರತುಪಡಿಸಿ ಇತರ ಕಾಂಟ್ಯಾಕ್ ಲೆನ್ಸ್ ಗಳನ್ನು ಕಣ್ಣಿಗೆ ಅಳವಡಿಸಿದ ನಂತರ ಕಣ್ಣು ಬಹುತೇಕವಾಗಿ ಸ್ಪಷ್ಟವಾಗಿ ಗೋಚರವಾಗುತ್ತದೆ.ದೋಷ ಸರಿಪಡಿಸುವ ಹೆಚ್ಚಿನ ಕಾಂಟ್ಯಾಕ್ಟ್ ಲೆನ್ಸ್‌ಗಳು ಹಗುರ "ನಿರ್ವಹಣಾ ಛಾಯೆಯೊಂದಿಗೆ" ತಯಾರಾಗುತ್ತವೆ, ಇವುಗಳನ್ನು ಕಣ್ಣಿಗೆ ಅಳವಡಿಸಿದಾಗ ಸ್ವಲ್ಪಮಟ್ಟಿಗೆ ಅಧಿಕವಾದ ಸ್ಪಷ್ಟತೆಯೊಂದಿಗೆ ಗೋಚರವಾಗುತ್ತದೆ

ಮೊದಲಿಗೆ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಗಾಜಿನಿಂದತಯಾರಿಸಲಾಗುತ್ತಿತ್ತು, ಇದು ಕಣ್ಣಿಗೆ ಕಿರಿಕಿರಿಯನ್ನು ಉಂಟುಮಾಡುತ್ತಿತ್ತು ಜೊತೆಗೆ ಇದನ್ನು ಹೆಚ್ಚಿನ ಸಮಯ ಧರಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ವಿಲ್ಲಿಯಮ್ ಫೆಯಿನ್ ಬ್ಲೂಮ್ ಪಾಲಿಮೀಥೈಲ್ ಮೆಥಕ್ರಿಲೆಟ್ (PMMA ಅಥವಾ ಪರ್ಸ್ಪೆಕ್ಸ್/ಪ್ಲೆಕ್ಸಿಗ್ಲಾಸ್) ನಿಂದ ತಯಾರಿಸಿದ ಮಸೂರಗಳನ್ನು ಪರಿಚಯಿಸಿದಾಗ, ಕಾಂಟ್ಯಾಕ್ಟ್ ಗಳನ್ನು ಧರಿಸುವುದು ಬಹಳ ಸುಲಭವಾಯಿತು. ಈ PMMA ಲೆನ್ಸ್ ಗಳನ್ನು ಸಾಮಾನ್ಯವಾಗಿ "ಕಠಿಣ" ಮಸೂರಗಳೆಂದು ಕರೆಯಲಾಗುತ್ತಿತ್ತು(ಈ ಪದವನ್ನು ಕಾಂಟ್ಯಾಕ್ಟ್ ಲೆನ್ಸ್ ಗಳ ಇತರ ವಿಧಗಳಿಗೆ ಸೂಚಿಸಲಾಗುತ್ತಿರಲಿಲ್ಲ).

ಆದಾಗ್ಯೂ, PMMA ಲೆನ್ಸ್ ಗಳು ತಮ್ಮದೇ ಆದ ಅಡ್ಡ ಪರಿಣಾಮಗಳನ್ನು ಹೊಂದಿದೆ: ಲೆನ್ಸ್ ಮೂಲಕ ಪಾರದರ್ಶಕ ಪಟಲಕ್ಕೆ ಆಮ್ಲಜನಕವನ್ನು ಒಯ್ಯುವುದಿಲ್ಲ. ಇದು ಹಲವಾರು ವೈದ್ಯಕೀಯ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡಬಹುದು. 1970ರ ಕೊನೆಯ ಭಾಗದಲ್ಲಿ, ಹಾಗು 1980 ಹಾಗು 1990ರ ಉದ್ದಕ್ಕೂ, ಆಮ್ಲಜನಕದ-ಪ್ರವೇಶಸಾಧ್ಯವಾಗುವಂತಹ ಸುಧಾರಿತ ರಿಜಿಡ್ ಪರಿಕರಗಳನ್ನು ಅಭಿವೃದ್ಧಿಪಡಿಸಲಾಯಿತು. ಒಟ್ಟಾರೆಯಾಗಿ, ಈ ಪಾಲಿಮರ್ ಗಳನ್ನು ರಿಜಿಡ್ ಗ್ಯಾಸ್ ಪರ್ಮೀಯಬಲ್ ಅಥವಾ 'RGP' ಸಾಮಗ್ರಿಗಳು ಅಥವಾ ಮಸೂರಗಳೆಂದು ಕರೆಯಲಾಗುತ್ತದೆ. ಕಠಿಣ ಮಸೂರಗಳ ಒಂದು ಪ್ರಯೋಜನವೆಂದರೆ, ತಮ್ಮ ಅರಂಧ್ರಗಳ ಸ್ವಭಾವದಿಂದಾಗಿ, ಇವುಗಳು ರಾಸಾಯನಿಕಗಳನ್ನಾಗಲಿ ಅಥವಾ ಹೊಗೆಯನ್ನಾಗಲಿ ಹೀರಿಕೊಳ್ಳುವುದಿಲ್ಲ. ಇತರ ಕಾಂಟ್ಯಾಕ್ಟ್ ಮಾದರಿಗಳು ಇಂತಹ ಸಂಯುಕ್ತಗಳನ್ನು ಹೀರಿಕೊಂಡರೆ, ಇದನ್ನು ಧರಿಸಿ ನಿಯಮಿತವಾಗಿ ವರ್ಣಚಿತ್ರಣ ಅಥವಾ ಇತರ ರಾಸಾಯನಿಕ ಪ್ರಕ್ರಿಯೆಗೆ ಒಳಪಡುವವರಿಗೆ ಇದು ಸಮಸ್ಯೆಯಾಗಿ ಪರಿಣಮಿಸಬಹುದು.

ರಿಜಿಡ್ ಲೆನ್ಸ್ ಗಳು ಹಲವಾರು ವಿಶಿಷ್ಟ ಗುಣಗಳನ್ನು ಹೊಂದಿದೆ. ವಾಸ್ತವವಾಗಿ, ಮಸೂರವು ಹೊಸತಾದ ವಕ್ರೀಕಾರಕ ಮೇಲ್ಮೈಯೊಂದಿಗೆ ಪಾರದರ್ಶಕ ಪಟಲದ ಸ್ವಾಭಾವಿಕ ಆಕಾರವನ್ನು ಮಾರ್ಪಡಿಸುವಲ್ಲಿ ಸಮರ್ಥವಾಗಿದೆ. ಇದರರ್ಥ ಒಂದು ಸಾಮಾನ್ಯವಾದ(ಗೋಲಾಕಾರದ) ರಿಜಿಡ್ ಕಾಂಟ್ಯಾಕ್ಟ್ ಲೆನ್ಸ್ ಅಸಮದೃಷ್ಟಿ ಅಥವಾ ಕೆರಟೋಕೊನಸ್ ನಂತಹ ಪಾರದರ್ಶಕ ಪಟಲದ ವಕ್ರಾಕೃತಿಯನ್ನು ಉಳ್ಳ ಜನರಿಗೆ ಒಂದು ಉತ್ತಮ ಮಟ್ಟದ ದೃಷ್ಟಿಯನ್ನು ಒದಗಿಸುತ್ತದೆ.

ರಿಜಿಡ್ ಮಸೂರಗಳು ಸುಮಾರು 120 ವರ್ಷಗಳಷ್ಟು ಹಳೆಯದೆನಿಸಿದರೆ, ಸಾಫ್ಟ್ ಲೆನ್ಸ್‌ಗಳು ಇತ್ತೀಚಿನ ಪರಿಶೋಧವಾಗಿದೆ. ಒಟ್ಟೋ ವಿಚ್ಟೆರ್ಲೇ ಅಭಿವೃದ್ಧಿಪಡಿಸಿದ ಸಾಫ್ಟ್ ಲೆನ್ಸ್ ಗಳು, 1960ರಲ್ಲಿ ಕೆಲವು ದೇಶಗಳಲ್ಲಿ ಮೊದಲ ಸಾಫ್ಟ್(ಹೈಡ್ರೋಜೆಲ್)ಮಸೂರಗಳ ಬಿಡುಗಡೆಗೆ ದಾರಿ ಮಾಡಿಕೊಟ್ಟಿತು ಜೊತೆಗೆ 'ಸಾಫ್ಲೆನ್ಸ್' ನ ವಸ್ತುವಿಗೆ (ಪಾಲಿಮಕೊನ್) ಅಮೆರಿಕ ಸಂಯುಕ್ತ ಸಂಸ್ಥಾನದ FDA 1971ರಲ್ಲಿ ಅಂಗೀಕಾರ ನೀಡಿತು. ಸಾಫ್ಟ್ ಲೆನ್ಸ್ ಗಳು ತಕ್ಷಣವೇ ಹಿತಕರ ಸ್ಥಿತಿಯನ್ನು ಒದಗಿಸುತ್ತವೆ, ಆದರೆ ರಿಜಿಡ್ ಮಸೂರಕ್ಕೆ ಸಂಬಂಧಿಸಿದಂತೆ ಪೂರ್ಣ ಹಿತಕರ ಸ್ಥಿತಿ ಸಾಧಿಸಲು ಹೊಂದಾಣಿಕೆಯ ಅವಧಿ ಅಗತ್ಯವಿರುತ್ತದೆ. ಪಾಲಿಮರ್ ನಿಂದ ತಯಾರಾಗುವ ಸಾಫ್ಟ್ ಲೆನ್ಸ್ ಗಳು ಮುಂದಿನ 25 ವರ್ಷಗಳಲ್ಲಿ ಸುಧಾರಣೆಯನ್ನು ಕಂಡವು, ಪ್ರಾಥಮಿಕವಾಗಿ, ಪಾಲಿಮರ್‌ಗಳನ್ನು ಒಳಗೊಳ್ಳುವ ಪದಾರ್ಥಗಳ ಬದಲಾವಣೆಯಿಂದ ಆಮ್ಲಜನಕದ ಪ್ರವೇಶಸಾಧ್ಯತೆಯನ್ನು ಹೆಚ್ಚಿಸಲಾಯಿತು.

ಒಂದು ಸಣ್ಣ ಸಂಖ್ಯೆಯಲ್ಲಿ ರಿಜಿಡ್/ಸಾಫ್ಟ್ ಲೆನ್ಸ್ ಗಳ ಮಿಶ್ರಣವು ಅಸ್ತಿತ್ವದಲ್ಲಿದೆ. ಒಂದು ಪರ್ಯಾಯ ಮಾರ್ಗವೆಂದರೆ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಒಂದರ ಮೇಲೊಂದು ಜೋಡಣೆ ಮಾಡುವುದು, ಒಂದು ಸಣ್ಣ, ರಿಜಿಡ್ ಮಸೂರವನ್ನು ದೊಡ್ಡದಾದ ಸಾಫ್ಟ್ ಲೆನ್ಸ್ ಮೇಲೆ ಜೋಡಣೆ ಮಾಡಲಾಗುತ್ತದೆ. ಈ ಮಾರ್ಗವನ್ನು ಹಲವಾರು ವೈದ್ಯಕೀಯ ಪರಿಸ್ಥಿತಿಗಳಲ್ಲಿ ಅನುಸರಿಸಲಾಗುತ್ತದೆ, ಇಂತಹ ಪರಿಸ್ಥಿತಿಗಳಲ್ಲಿ ಒಂದೇ ಒಂದು ಮಸೂರವು ದೃಷ್ಟಿ ಸಾಮರ್ಥ್ಯ, ಕಣ್ಣಿಗೆ ಸರಿಯಾಗಿ ಹೊಂದಿಕೊಳ್ಳುವ ಲಕ್ಷಣವನ್ನಾಗಲಿ, ಅಥವಾ ಹಿತಕರ ಸ್ಥಿತಿಯನ್ನು ಒದಗಿಸುವುದಿಲ್ಲ.

1999ರಲ್ಲಿ, 'ಸಿಲಿಕೋನ್ ಹೈಡ್ರೋಜೆಲ್' ಗಳು ಲಭ್ಯವಾಗತೊಡಗಿದವು. ಸಿಲಿಕೋನ್ ಹೈಡ್ರೋಜೆಲ್ ಗಳು ಸಿಲಿಕೋನ್ ನ ಅಧಿಕ ಆಮ್ಲಜನಕದ ಪ್ರವೇಶಸಾಧ್ಯತೆಯನ್ನು ಹಾಗು ಸಾಂಪ್ರದಾಯಿಕ ಹೈಡ್ರೋಜೆಲ್ ಗಳ ಹಿತಕರ ಸ್ಥಿತಿ ಹಾಗು ವೈದ್ಯಕೀಯ ನಿರ್ವಹಣೆಯನ್ನು ಒಳಗೊಂಡಿರುತ್ತದೆ. ಈ ಮಸೂರಗಳನ್ನು ಆರಂಭದಲ್ಲಿ ಪ್ರಾಥಮಿಕವಾಗಿ ವಿಸ್ತೃತ(ಇಡಿ ರಾತ್ರಿ ಬಳಕೆ) ಬಳಕೆಗೆ ಸೂಚಿಸಲಾಯಿತು. ನಿತ್ಯವೂ(ರಾತ್ರಿಯ ಬಳಕೆಯಿಲ್ಲದ) ಬಳಸಲಾಗುವ ಸಿಲಿಕೋನ್ ಹೈಡ್ರೋಜೆಲ್ ಗಳನ್ನು ಅಂಗೀಕರಿಸಿ[೩೩] ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.

ಆಮ್ಲಜನಕದ ಪ್ರವೇಶಸಾಧ್ಯತೆಯನ್ನು ಒದಗಿಸುವುದರ ಜೊತೆಗೆ, ಸಿಲಿಕೋನ್, ಮಸೂರದ ಮೇಲ್ಮೈಯನ್ನು ಅಧಿಕವಾಗಿ ದುರಾರ್ದ್ರಿಯಗೊಳಿಸುತ್ತದೆ ಹಾಗು "ತೇವವಾಗುವುದನ್ನು" ಕಡಿಮೆ ಮಾಡುತ್ತದೆ. ಇದು ಸತತವಾಗಿ ಲೆನ್ಸ್ ನ ಧಾರಣೆಯ ಸಮಯದಲ್ಲಿ ಕಿರಿಕಿರಿಯನ್ನು ಹಾಗು ಶುಷ್ಕತೆಯನ್ನು ಉಂಟುಮಾಡುತ್ತದೆ. ದುರಾರ್ದ್ರೀಯತೆಯನ್ನು ಸರಿದೂಗಿಸಿ ಮಸೂರಗಳನ್ನು ಹೆಚ್ಚು ಜಲಾರ್ದ್ರೀಯಗೊಳಿಸುವ ಸಲವಾಗಿ ಹೈಡ್ರೋಜೆಲ್ ಗಳನ್ನು ಸೇರಿಸಲಾಗುತ್ತದೆ(ಈ ಪ್ರಕಾರವಾಗಿ ಇದಕ್ಕೆ "ಸಿಲಿಕೋನ್ ಹೈಡ್ರೋಜೆಲ್"ಗಳೆಂಬ ಹೆಸರು ಬಂದಿದೆ). ಆದಾಗ್ಯೂ ಮಸೂರದ ಮೇಲ್ಮೈ ದುರಾರ್ದ್ರೀಯವಾಗಿಯೇ ಉಳಿಯುತ್ತದೆ. ಈ ಕಾರಣದಿಂದಾಗಿ ಕೆಲವು ಮಸೂರಗಳು ಪ್ಲಾಸ್ಮ ಸಂಸ್ಕರಣೆಗಳ ಮೂಲಕ ಮೇಲ್ಮೈನ ಪರಿವರ್ತನಾ ಪ್ರಕ್ರಿಯೆಗೆ ಒಳಗಾಗುತ್ತದೆ. ಇದು ಮಸೂರದ ಮೇಲ್ಮೈನ ದುರಾರ್ದ್ರೀಯ ಸ್ವರೂಪವನ್ನು ಮಾರ್ಪಡಿಸುತ್ತದೆ. ಇತರ ಲೆನ್ಸ್ ಮಾದರಿಗಳು, ಮಸೂರದ ಮೇಲ್ಮೈಯನ್ನು ಜಲಾರ್ದ್ರೀಯಗೊಳಿಸುವ ಸಲುವಾಗಿ ಆಂತರಿಕ ಮರುಆರ್ದ್ರನ ಕಾರಕಗಳನ್ನು ಒಟ್ಟುಗೂಡಿಸಿಕೊಳ್ಳುತ್ತವೆ. ಮೂರನೇ ಪ್ರಕ್ರಿಯೆಯು ದೀರ್ಘಕಾಲಿಕ ಮೂಲಾಧಾರದ ಪಾಲಿಮರ್ ಸರಪಣಿಯನ್ನು ಬಳಕೆ ಮಾಡುತ್ತದೆ.ಇದರ ಪರಿಣಾಮವಾಗಿ ಅಡ್ಡ ಸಂಪರ್ಕವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಮೇಲ್ಮೈಯನ್ನು ಮಾರ್ಪಡಿಸದೆ ಅಥವಾ ಸಂಯೋಜನೀಯ ಕಾರಕಗಳಿಲ್ಲದೆ ಆರ್ದ್ರತೆಯನ್ನು ಹೆಚ್ಚಿಸುತ್ತದೆ.

ಧರಿಸುವ ಕಾಲಾವಧಿ[ಬದಲಾಯಿಸಿ]

ನಿತ್ಯ ಬಳಕೆ ಯ ಕಾಂಟ್ಯಾಕ್ಟ್ ಲೆನ್ಸ್ ನ್ನು ಮಲಗುವ ಮುಂಚೆ ಕಳಚಿಡುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಒಂದು ಎಕ್ಸ್ಟೆನ್ಡೆಡ್ ವೇರ್ (EW)(ದೀರ್ಘಕಾಲಿಕೆ ಬಳಕೆಯ)ಕಾಂಟ್ಯಾಕ್ಟ್ ಲೆನ್ಸ್ ನ್ನು ಸತತವಾಗಿ ಹಗಲು ರಾತ್ರಿ ಧರಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ, ಮಾದರಿಯಾಗಿ 6 ಅಥವಾ ಅದಕ್ಕೂ ಹೆಚ್ಚಿನ ಕ್ರಮಾನುಗತ ರಾತ್ರಿಗಳು. ಹೊಸ ಪರಿಕರಗಳು, ಉದಾಹರಣೆಗೆ ಸಿಲಿಕಾನ್ ಹೈಡ್ರೋಜೆಲ್ ಗಳನ್ನು, ಇನ್ನೂ ಅಧಿಕ ಅಂದರೆ ಕ್ರಮಾನುಗತವಾಗಿ 30 ಸತತ ರಾತ್ರಿಗಳಷ್ಟು ದೀರ್ಘಕಾಲಿಕವಾಗಿ ಧರಿಸಲು ಅವಕಾಶವಿರುತ್ತದೆ; ಇಂತಹ ದೀರ್ಘಕಾಲಿಕ-ಧಾರಣೆಯ ಮಸೂರಗಳನ್ನು ಸಾಮಾನ್ಯವಾಗಿ ಕಂಟಿನಿಯಸ್ ವೇರ್ (CW)(ಸತತ ಬಳಕೆಯ)ಎಂದು ಕರೆಯಲಾಗುತ್ತದೆ. ಸಾಧಾರಣವಾಗಿ, ದೀರ್ಘಕಾಲಿಕ ಬಳಕೆಯ ಮಸೂರಗಳನ್ನು ನಿರ್ದಿಷ್ಟ ಅವಧಿಯ ನಂತರ ಎಸೆದುಬಿಡಲಾಗುತ್ತದೆ. ಇವುಗಳ ಅನುಕೂಲಗಳಿಂದಾಗಿ ಇವುಗಳ ಜನಪ್ರಿಯತೆಯು ಅಧಿಕವಾಗಿದೆ.[ಸೂಕ್ತ ಉಲ್ಲೇಖನ ಬೇಕು] ದೀರ್ಘಕಾಲಿಕ ಹಾಗು ಸತತ ಧಾರಣೆಯ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಅವುಗಳ ಅಧಿಕ ಆಮ್ಲಜನಕ ಪ್ರವೇಶಸಾಧ್ಯತೆಯ ಕಾರಣದಿಂದಾಗಿ ದೀರ್ಘಕಾಲಿಕವಾಗಿ ಬಳಕೆ ಮಾಡಬಹುದಾಗಿದೆ(ಒಂದು ಮಾದರಿಯಾಗಿ ಸಾಂಪ್ರದಾಯಿಕ ಸಾಫ್ಟ್ ಲೆನ್ಸ್ ಗಳಿಗಿಂತ 5-6 ಬಾರಿ ಅಧಿಕವಾಗಿ ಬಳಕೆಮಾಡಬಹುದು), ಇದು ಕಣ್ಣನ್ನು ಆರೋಗ್ಯಕರವಾಗಿ ಕಾಪಾಡಲು ಸಹಾಯಕವಾಗಿದೆ.

ದೀರ್ಘಕಾಲಿಕ ಮಸೂರವನ್ನು ಬಳಸುವವರು ಪಾರದರ್ಶಕ ಪಟಲದ ಸೋಂಕುಗಳು ಹಾಗು ಪಾರದರ್ಶಕ ಪಟಲದ ಹುಣ್ಣುಗಳಿಗೆ ಈಡಾಗುವ ಸಂಭವವಿದೆ, ಇದಕ್ಕೆ ಮುಖ್ಯ ಕಾರಣ ಮಸೂರಗಳ ಬಗ್ಗೆ ಕಡಿಮೆ ಗಮನ ಹರಿಸುವುದು ಹಾಗು ಅದನ್ನು ಶುಚಿಯಾಗಿ ಇಟ್ಟುಕೊಳ್ಳದಿರುವುದು, ಕಣ್ಣೀರು ಪೊರೆಯ ಅಸ್ಥಿರತೆ, ಹಾಗು ಬ್ಯಾಕ್ಟೀರಿಯಾದ ನಿಶ್ಚಲತೆ. ದೀರ್ಘಕಾಲಿಕ ಲೆನ್ಸ್ ಧಾರಣೆಯಿಂದ ಐತಿಹಾಸಿಕವಾಗಿ ಪಾರದರ್ಶಕ ಪಟಲದ ನಿಯೋವ್ಯಾಸ್ಕ್ಯುಲರೈಜೇಶನ್(ಆಮ್ಲಜನಕದ ಕೊರತೆ) ಒಂದು ಸಾಮಾನ್ಯವಾದ ತೊಡಕು ಉಂಟಾಗುತ್ತದೆ. ಆದಾಗ್ಯೂ ಸಿಲಿಕೋನ್ ಹೈಡ್ರೋಜೆಲ್‌ನ ದೀರ್ಘಕಾಲಿಕ ಧಾರಣೆಯಲ್ಲಿ ಈ ಸಮಸ್ಯೆಯು ಕಂಡುಬರುವುದಿಲ್ಲ. ದೀರ್ಘಕಾಲಿಕ ಮಸೂರದ ಬಳಕೆಯಿಂದಾಗಿ ಉಂಟಾಗುವ ಸಾಮಾನ್ಯವಾದ ತೊಡಕೆಂದರೆ ಸಾಮಾನ್ಯವಾಗಿ ಅಲರ್ಜಿ ಉಂಟುಮಾಡುವ ಕೆಂಗಣ್ಣು ಬೇನೆ ಅಥವಾ ಜೈಂಟ್ ಪ್ಯಾಪಿಲ್ಲರಿ ಕಾಂಜಂಕ್ಟಿವಿಟಿಸ್(GPC), ಇದು ಕೆಲವೊಂದು ಬಾರಿ ಕಾಂಟ್ಯಾಕ್ಟ್ ಲೆನ್ಸ್ ಗಳ ಕಳಪೆಯಾದ ಜೋಡಣೆಯಿಂದ ಉಂಟಾಗುತ್ತದೆ.

ಬದಲಾವಣೆ ಮಾಡುವ ಆವರ್ತನ[ಬದಲಾಯಿಸಿ]

ಲಭ್ಯವಿರುವ ಹಲವಾರು ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಸಾಮಾನ್ಯವಾಗಿ ಅವುಗಳ ಬದಲಾವಣೆ ವೇಳಾಪಟ್ಟಿಯ ಮೂಲಕ ವರ್ಗೀಕರಿಸಲಾಗುತ್ತದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಬದಲಾವಣೆ ಮಾಡುವ ವೇಳಾಪಟ್ಟಿ ಎಂದರೆ ಒಂದೇ ಒಂದು ಸಾರಿ ಬಳಸಿ ಬಿಸಾಡುವ ಲೆನ್ಸ್ ಗಳು(ಪ್ರತಿ ದಿನವೂ ಬದಲಾಯಿಸುವಂತಹದ್ದು), ಇದನ್ನು ಬಳಸಿ ಪ್ರತಿ ರಾತ್ರಿ ಬಿಸಾಡಬಹುದಾಗಿದೆ. ಅತ್ಯಂತ ಕಡಿಮೆ ಅವಧಿಗೆ ಬಳಸಿ ಬಿಸಾಡಬಹುದಾದಂತಹ ಮಸೂರಗಳು ಸಾಮಾನ್ಯವಾಗಿ ತೆಳುವಾಗಿಯೂ ಹಗುರವಾಗಿಯೂ ಇರುತ್ತದೆ, ಏಕೆಂದರೆ ಇವುಗಳ ಬಾಳಿಕೆಯ ಬಗ್ಗೆ ಅಧಿಕವಾಗಿ ಪರಿಗಣಿಸಲಾಗುವುದಿಲ್ಲ, ಜೊತೆಗೆ ವರ್ಗ ಹಾಗು ಪೀಳಿಗೆಗೆ ಸಂಬಂಧಿಸಿದಂತೆ ಇದು ಅತ್ಯಂತ ಅನುಕೂಲಕರವಾಗಿರುತ್ತದೆ. ಇದು ಕಣ್ಣಿನ ಅಲರ್ಜಿಗಳು ಅಥವಾ ಇತರ ಪರಿಸ್ಥಿತಿಗಳನ್ನು ಉಳ್ಳ ರೋಗಿಗಳಿಗೆ ಉತ್ತಮವಾಗಿದೆ, ಏಕೆಂದರೆ ಇದು ಪ್ರತಿಜನಕ ಹಾಗು ಪ್ರೋಟೀನ್ ಗಳ ಸಂಚಯವನ್ನು ಮಿತಿಗೊಳಿಸುತ್ತದೆ. ಒಂದೇ ಬಾರಿ ಬಳಕೆ ಮಾಡುವ ಮಸೂರಗಳು, ಕಾಂಟ್ಯಾಕ್ಟ್ ಗಳನ್ನು ಅನಿಯಮಿತವಾಗಿ ಬಳಕೆ ಮಾಡುವ, ಅಥವಾ ಇತರ ಉದ್ದೇಶಗಳಿಗೆ ಬಳಸುವ ವ್ಯಕ್ತಿಗಳಿಗೂ ಸಹ ಸಹಾಯಕವಾಗಿದೆ (ಉದಾಹರಣೆಗೆ ಈಜು ಅಥವಾ ಇತರ ಕ್ರೀಡಾ ಚಟುವಟಿಕೆಗಳು) ಇವರುಗಳು ಮಸೂರಗಳನ್ನು ಕಳೆದುಕೊಳ್ಳುವುದು ಸಂಭಾವ್ಯವಾಗಿರುತ್ತದೆ. ಇನ್ನೂ ಸಾಮಾನ್ಯವಾಗಿ, ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಎರಡು ವಾರ ಅಥವಾ ತಿಂಗಳ ಆಧಾರದಲ್ಲಿ ಬಳಸಿ ಬಿಸಾಡುವಂತೆ ಸೂಚಿಸಲಾಗುತ್ತದೆ. ನಾಲ್ಕು ತಿಂಗಳಿಗೊಮ್ಮೆ ಅಥವಾ ವಾರ್ಷಿಕವಾಗಿ ಬಳಸುವ ಮಸೂರಗಳು ಬಹಳ ಸಾಮಾನ್ಯವಾಗಿತ್ತು, ಆದರೆ ಮೆಚ್ಚುಗೆಯನ್ನು ಕಳೆದುಕೊಂಡಿತು. ಏಕೆಂದರೆ ನಿಯಮಿತವಾಗಿ ಬಳಸಿ ಬಿಸಾಡುವ ವೇಳಾಪಟ್ಟಿಯಿಂದ ತೆಳುವಾದ ಮಸೂರಗಳ ಧಾರಣೆಗೆ ಅವಕಾಶ ಮಾಡಿಕೊಡುತ್ತದೆ ಹಾಗು ಸಂಚಯವನ್ನು ಮಿತಿಗೊಳಿಸುತ್ತದೆ. ರಿಜಿಡ್ ಗ್ಯಾಸ್ ಪರ್ಮೀಯಬಲ್ ಲೆನ್ಸ್ ಗಳನ್ನು ದೀರ್ಘಕಾಲಿಕವಾಗಿ ಬಳಕೆ ಮಾಡಬಹುದು ಹಾಗು ಬದಲಾವಣೆ ಮಾಡದೆ ಹಲವಾರು ವರ್ಷಗಳ ಕಾಲ ಬಳಸಬಹುದು. PMMA ಕಠಿಣ ಮಸೂರಗಳು ದೀರ್ಘಕಾಲಿಕವಾಗಿ ಬಳಕೆಗೆ ಬರುತ್ತದೆ, ಹಾಗು ಇದನ್ನು ಸಾಮಾನ್ಯವಾಗಿ 5 ರಿಂದ 10 ವರ್ಷಗಳ ಕಾಲ ಬಳಕೆ ಮಾಡಬಹುದು. ಕುತೂಹಲಕಾರಿಯಾದ ವಿಷಯವೆಂದರೆ, 'ಪ್ರತಿನಿತ್ಯ' ಬಳಸಿ ಬಿಸಾಡಬಹುದಾದ ಹಲವು ಮಸೂರಗಳ ತಯಾರಿಕೆಯಲ್ಲಿ ಬಳಸಲಾಗುವ ಸಾಮಗ್ರಿಗಳ ಬಗೆಗಿನ ಒಂದು ಸೂಕ್ಷ್ಮ ವಿಶ್ಲೇಷಣೆಯು, ಅವುಗಳು (ಉದಾಹರಣೆಗೆ ಸಿಲಿಕೋನ್-ಹೈಡ್ರೋಜೆಲ್[ಸೆನೋಫಿಲ್ಕಾನ್-A]) ಒಂದೇ ಸಂಸ್ಥೆಯಲ್ಲಿ ತಯಾರಾಗುವ ದೀರ್ಘಕಾಲಿಕವಾಗಿ ಬಳಸಬಹುದಾದ ಮಸೂರಗಳ (ಉದಾಹರಣೆಗೆ ತಿಂಗಳಿಗೊಮ್ಮೆ ಬದಲಾವಣೆ ಮಾಡಲಾಗುವ ಮಸೂರಗಳು) ತಯಾರಿಕೆಯಲ್ಲಿ ಉಪಯೋಗಿಸುವ ಸಾಮಗ್ರಿಗಳಿಂದಲೇ ಇದನ್ನೂ ಸಹ ಸಾಮಾನ್ಯವಾಗಿ ತಯಾರಿಸಲಾಗುತ್ತದೆ ಎಂದು ಸೂಚಿಸುತ್ತದೆ. ಮಸೂರಗಳು ಸಾಮಾನ್ಯವಾಗಿ ಬೆಲೆಯಲ್ಲಿ, ವ್ಯಾಸದಲ್ಲಿ ಅಥವಾ ವಕ್ರವಾದ ತಳದಿಂದ ಮಾತ್ರ ಭಿನ್ನವಾಗಿರುತ್ತದೆ.

ವಿನ್ಯಾಸ[ಬದಲಾಯಿಸಿ]

ಗೋಲಾಕೃತಿಯ ಕಾಂಟ್ಯಾಕ್ಟ್ ಲೆನ್ಸ್ ಎಂದರೆ ದೃಷ್ಟಿಯ ಮೇಲ್ಮೈಗಳ ಒಳಗಿನ ಹಾಗು ಹೊರಗಿನ ಭಾಗಗಳು ಗೋಲದ ಭಾಗಗಳಾಗಿರುತ್ತವೆ. ಒಂದು ಉಬ್ಬಿದ ಮಸೂರವೆಂದರೆ ದೃಷ್ಟಿ ಮೇಲ್ಮೈಗಳಲ್ಲಿ ಒಂದು ಅಥವಾ ಎರಡೂ ಸಿಲಿಂಡರಾಕಾರದ ಮಸೂರದ ಸಂಯೋಜನೆಯನ್ನು ಹೊಂದಿರುತ್ತದೆ, ಸಾಮಾನ್ಯವಾಗಿ ಗೋಲಾಕಾರದ ಲೆನ್ಸ್ ನ ಪರಿಣಾಮದ ಸಂಯೋಜನೆಯನ್ನು ಹೊಂದಿರುತ್ತದೆ. ಮೈಓಪಿಕ್(ಸಮೀಪದೃಷ್ಟಿ) ಹಾಗು ಹೈಪರ್ಮೆಟ್ರೋಪಿಕ್(ದೂರದೃಷ್ಟಿ) ಉಳ್ಳ ಜನರು ಅಸಮದೃಷ್ಟಿಯನ್ನೂ ಸಹ ಹೊಂದಿರುತ್ತಾರೆ ಹಾಗು ಸಾಮಾನ್ಯವಾಗಿ ಬಳಸಲಾಗುವ ಕಾಂಟ್ಯಾಕ್ಟ್ ಲೆನ್ಸ್ ಗಳು ಇವರಿಗೆ ಸರಿಯಾಗದ ಕಾರಣ ಅವರು ಟಾರಿಕ್ ಲೆನ್ಸ್ (ಉಬ್ಬಿದ ಮಸೂರ)ಗಳನ್ನು ಬಳಸಬಹುದು. ಒಂದು ಕಣ್ಣು ಅಸಮದೃಷ್ಟಿಯನ್ನು ಹೊಂದಿದ್ದು ಮತ್ತೊಂದು ಸರಿಯಾಗಿದ್ದರೆ, ರೋಗಿಯು ಒಂದು ಕಣ್ಣಿಗೆ ಗೋಲಾಕಾರದ ಮಸೂರವನ್ನು ಹಾಗು ಮತ್ತೊಂದು ಕಣ್ಣಿಗೆ ಉಬ್ಬಿದ ಮಸೂರವನ್ನು ಧರಿಸಲು ಸೂಚಿಸಲಾಗುತ್ತದೆ. ಸಾಮಾನ್ಯ ಕಾಂಟ್ಯಾಕ್ಟ್ ಲೆನ್ಸ್ ಗಳ ತಯಾರಿಕೆಯಲ್ಲಿ ಬಳಸಲಾಗುವ ಸಾಮಗ್ರಿಗಳಿಂದಲೇ ಉಬ್ಬಿದ ಲೆನ್ಸ್ ಗಳನ್ನು ತಯಾರಿಸಲಾಗುತ್ತದೆ ಆದರೆ ಇವುಗಳು ಹೆಚ್ಚಿನ ಕೆಲವು ಲಕ್ಷಣಗಳನ್ನು ಹೊಂದಿರುತ್ತವೆ:

 • ಇವುಗಳು ಗೋಲಾಕಾರದ ಹಾಗು ಸಿಲಿಂಡರಾಕಾರದ ಪಥಭ್ರಂಶ ಎರಡೂ ದೋಷಗಳನ್ನು ಸರಿಪಡಿಸುತ್ತದೆ.
 • ಅವುಗಳು ನಿರ್ದಿಷ್ಟವಾದ 'ಮೇಲ್ಭಾಗ' ಹಾಗು 'ಕೆಳಭಾಗವನ್ನು' ಹೊಂದಿರುತ್ತವೆ, ಏಕೆಂದರೆ ಅವುಗಳು ಕೇಂದ್ರಭಾಗದ ಸುತ್ತಲೂ ಸಮ್ಮಿತೀಯವಾಗಿರುವುದಿಲ್ಲ ಹಾಗು ಇವುಗಳನ್ನು ತಿರುಗಿಸಬಾರದು. ಕಣ್ಣಿನ ಚಲನೆಯನ್ನು ಪರಿಗಣಿಸದೆ ಅವುಗಳ ಸ್ಥಾನವನ್ನು ಕಾಪಾಡಿಕೊಳ್ಳುವಂತೆ ಮಸೂರಗಳನ್ನು ವಿನ್ಯಾಸಗೊಳಿಸಬೇಕು. ಸಾಮಾನ್ಯವಾಗಿ ಮಸೂರಗಳು ಕೆಳಭಾಗದಲ್ಲಿ ದಪ್ಪನಾಗಿರುತ್ತದೆ ಹಾಗು ಈ ದಪ್ಪನಾದ ಭಾಗವನ್ನು ಮೇಲ್ಭಾಗದ ಕಣ್ರೆಪ್ಪೆಯು ಕಣ್ಣನ್ನು ಮಿಟುಕಿಸುವ ಸಮಯದಲ್ಲಿ ಕೆಳಕ್ಕೆ ತಳ್ಳುತ್ತದೆ, ಇದರಿಂದಾಗಿ ಮಸೂರವು ಸರಿಯಾದ ಸ್ಥಾನದಲ್ಲಿ ತಿರುಗಲು ಅವಕಾಶ ನೀಡುತ್ತದೆ(ದಪ್ಪನಾದ ಭಾಗವು ಕಣ್ಣಿನಲ್ಲಿ 6 o' ಕ್ಲಾಕ್ ಭಂಗಿಯಲ್ಲಿರುತ್ತದೆ). ಉಬ್ಬಿದ ಮಸೂರಗಳು ಸಾಮಾನ್ಯವಾಗಿ ಅವುಗಳ ಅಳವಡಿಕೆಗೆ ಸಹಾಯಕವಾಗುವಂತೆ ಸೂಕ್ಷ್ಮವಾದ ಏಣುಗಳಿಂದ ಸೂಚಿತವಾಗಿರುತ್ತದೆ.
 • ಉಬ್ಬನ್ನು ಹೊಂದದ ಮಸೂರಗಳಿಗಿಂತ ಇವುಗಳ ತಯಾರಿಕೆಯು ಬಹಳ ದುಬಾರಿಯಾಗಿರುತ್ತದೆ; ಈ ರೀತಿಯಾಗಿ ಅವುಗಳನ್ನು ಸಾಮಾನ್ಯವಾಗಿ ದೀರ್ಘಕಾಲಿಕ ಬಳಕೆಗೆ ಉಪಯೋಗಿಸಲಾಗುತ್ತದೆ. ಬಳಸಿ ಬಿಸಾಡಬಹುದಾದಂತಹ ಉಬ್ಬಿದ ಮಸೂರಗಳನ್ನು 2000ದಲ್ಲಿ ಮೊದಲ ಬಾರಿಗೆ ವಿಸ್ಟಾಕೋನ್ ತಯಾರಿಸಿತು.

ಕನ್ನಡಕಗಳ ಮಾದರಿಯಲ್ಲಿ, ಕಾಂಟ್ಯಾಕ್ಟ್ ಲೆನ್ಸ್ ಗಳು ಒಂದು(ಏಕದೃಷ್ಟಿ) ಅಥವಾ ಅಧಿಕ(ಬಹುದೃಷ್ಟಿ) ನಾಭಿಬಿಂದುಗಳನ್ನು ಹೊಂದಿರುತ್ತವೆ.

ಪ್ರೆಸ್ಬಯೋಪಿಯ ಅಥವಾ ಹೊಂದಿಕೆಯ ಕೊರತೆಯನ್ನು ಸರಿಪಡಿಸಲು ಬಹುತೇಕ ಸಾಮಾನ್ಯವಾಗಿ ಬಹುನಾಭಿಸ್ಥ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಬಳಕೆ ಮಾಡಲಾಗುತ್ತದೆ. ಆದಾಗ್ಯೂ, ಮಾನೋವಿಶನ್ ಎಂಬ ಪ್ರಕ್ರಿಯೆಯಲ್ಲಿ ಏಕದೃಷ್ಟಿಯ ಮಸೂರಗಳನ್ನೂ ಸಹ ಬಳಕೆ ಮಾಡಬಹುದು:[೩೪] ಏಕದೃಷ್ಟಿಯ ಮಸೂರಗಳನ್ನು ಒಂದು ಕಣ್ಣಿನ ದೂರದೃಷ್ಟಿ ದೋಷ ಹಾಗು ಮತ್ತೊಂದು ಕಣ್ಣಿನ ಸಮೀಪ ದೃಷ್ಟಿದೋಷವನ್ನು ಸರಿಪಡಿಸಲು ಬಳಕೆ ಮಾಡಬಹುದು. ಪರ್ಯಾಯವಾಗಿ, ಒಬ್ಬ ವ್ಯಕ್ತಿಯು ದೂರ ದೃಷ್ಟಿಯನ್ನು ಸರಿಪಡಿಸಿಕೊಳ್ಳಲು ಏಕದೃಷ್ಟಿಯ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಹಾಗು ಸಮೀಪ ದೃಷ್ಟಿಯನ್ನು ಸರಿಪಡಿಸಿಕೊಳ್ಳಲು ಕನ್ನಡಕಗಳನ್ನು ಬಳಕೆ ಮಾಡಬಹುದು.

ರಿಜಿಡ್ ಅನಿಲ ಪ್ರವೇಶಸಾಧ್ಯ ದ್ವಿನಾಭಿ ಕಾಂಟ್ಯಾಕ್ಟ್ ಲೆನ್ಸ್ ಗಳು ಸಮೀಪದೃಷ್ಟಿಯನ್ನು ಸರಿಪಡಿಸುವಲ್ಲಿ ಸಾಮಾನ್ಯವಾಗಿ ತಳಭಾಗದಲ್ಲಿ ಒಂದು ಸಣ್ಣ ಮಸೂರವನ್ನು ಹೊಂದಿರುತ್ತವೆ, ಕಣ್ಣುಗಳನ್ನು ಓದಲು ಕೆಳಗೆ ಬಾಗಿಸಿದಾಗ, ಈ ಮಸೂರವು ಕಣ್ಣಿನ ಪಥಕ್ಕೆ ಬರುತ್ತದೆ. RGPಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಚಲಿಸಬೇಕಾಗುತ್ತದೆ(ಲಂಬವಾಗಿ ಚಲಿಸಬೇಕು), ಹಾಗು ಈ ರೀತಿಯಾಗಿ ಕಣ್ಣಿನ ಚಲನೆಯು ಸಮೀಪದಿಂದ ದೂರದ ಭಾಗಗಳನ್ನು ವೀಕ್ಷಿಸುವಂತೆ ಬದಲಾವಣೆ ಮಾಡಲಾಗುತ್ತದೆ, ಇದು ದ್ವಿನಾಭಿ ಕನ್ನಡಕಗಳ ಮಾದರಿಯಲ್ಲಿರುತ್ತದೆ.

ಬಹುನಾಭಿ ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ ಗಳ ತಯಾರಿಕೆಯು ಬಹಳ ಜಟಿಲವಾಗಿರುತ್ತದೆ ಹಾಗು ಇದನ್ನು ಅಳವಡಿಸಲು ಹೆಚ್ಚಿನ ಕುಶಲತೆಯ ಅಗತ್ಯವಿರುತ್ತದೆ. ಎಲ್ಲ ಸಾಫ್ಟ್ ದ್ವಿನಾಭಿ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು "ಏಕಕಾಲಿಕ ದೃಷ್ಟಿ" ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ದೂರ ಹಾಗು ಸಮೀಪದ ದೃಷ್ಟಿ ಸರಿಪಡಿಸುವಿಕೆಗಳು ಏಕಕಾಲಿಕವಾಗಿ ಅಕ್ಷಿಪಟಕ್ಕೆ ಗೋಚರವಾಗುತ್ತದೆ, ಇದು ಕಣ್ಣಿನ ಸ್ಥಾನವನ್ನು ಪರಿಗಣಿಸುವುದಿಲ್ಲ. ಸಹಜವಾಗಿ, ಕೇವಲ ಒಂದೇ ಒಂದು ದೋಷ ಸರಿಪಡಿಸುವಿಕೆಯು ಸರಿಯಾಗಿರುತ್ತದೆ, ದೋಷ ಸರಿಪಡಿಸುವಿಕೆಯಲ್ಲಿ ತಪ್ಪಾದರೆ ಇದು ಮಸುಕು ದೃಷ್ಟಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಮಸೂರಗಳ ಮಧ್ಯಭಾಗದಲ್ಲಿನ ದೂರ ದೃಷ್ಟಿಯನ್ನು ಸರಿಪಡಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಜೊತೆಗೆ ಸಮೀಪದೃಷ್ಟಿಯ ದೋಷ ಸರಿಪಡಿಸುವಿಕೆಯನ್ನು ಹೊರಭಾಗದಲ್ಲಿ ಮಾಡಲಾಗುತ್ತದೆ, ಅಥವಾ ಇದರ ಪ್ರತಿಕ್ರಮದಲ್ಲಿ ನಡೆಯುತ್ತದೆ.

ಅಂತರ್ನಿವೇಶನ[ಬದಲಾಯಿಸಿ]

ಇಂಟ್ರಾಆಕ್ಯುಲರ್ ಮಸೂರಗಳನ್ನು ಅಂತರ್ನಿವೇಶಿತ ಕಾಂಟ್ಯಾಕ್ಟ್ ಲೆನ್ಸ್ ಗಳೆಂದು ಕರೆಯಲಾಗುತ್ತದೆ, ಇವುಗಳು ವಿಶೇಷವಾದ ದೋಷ ಸರಿಪಡಿಸುವ ಸಣ್ಣ ಮಸೂರಗಳಾಗಿರುತ್ತವೆ, ಇವುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಕಣ್ಣಿನ ಪಾಪೆಯ ಹಿಂದಿರುವ ಹಿಂಭಾಗದ ಕೋಶದಲ್ಲಿ ಅಂತರ್ನಿವೇಶಿಸಲಾಗುತ್ತದೆ ಹಾಗು ಇದನ್ನು ಲೆನ್ಸ್ ನ ಮುಂಭಾಗದಲ್ಲಿ ಅಧಿಕ ಮಟ್ಟದ ಸಮೀಪದೃಷ್ಟಿ ಹಾಗು ದೂರದೃಷ್ಟಿಯನ್ನು ಸರಿಪಡಿಸಲು ಅಳವಡಿಸಲಾಗುತ್ತದೆ.

ಕಾಂಟ್ಯಾಕ್ಟ್ ಲೆನ್ಸ್ ಗಳ ತಯಾರಿಕೆ[ಬದಲಾಯಿಸಿ]

ಹೆಚ್ಚಿನ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಅಧಿಕ ಸಂಖ್ಯೆಯಲ್ಲಿ ಒಟ್ಟಿಗೆ ತಯಾರಿಸಲಾಗುತ್ತದೆ.

 • ಸ್ಪಿನ್-ಕ್ಯಾಸ್ಟ್ ಲೆನ್ಸ್ ಗಳು - ಸ್ಪಿನ್ ಕ್ಯಾಸ್ಟ್ ಲೆನ್ಸ್ ಎಂಬುದು ಒಂದು ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ ಆಗಿದೆ. ಇದನ್ನು ಅಧಿಕ ವೇಗದ ಪರಿಭ್ರಮಿಸುವ ಅಚ್ಚಿನಲ್ಲಿ ತಿರುಗುವ ದ್ರವರೂಪದ ಸಿಲಿಕೋನ್ ನಿಂದ ತಯಾರಿಸಲಾಗುತ್ತದೆ.[೩೫]
 • ಲೇದ್ ಟರ್ನ್ಡ್- ಚರಕಿಯಂತ್ರದಿಂದ ರೂಪಿತವಾದ ಕಾಂಟ್ಯಾಕ್ಟ್ ಲೆನ್ಸ್‌ನ್ನು CNC ಚರಕಿಯಂತ್ರದಲ್ಲಿ ತುಂಡರಿಸಿ ಉಜ್ಜಿ ನಯಗೊಳಿಸಲಾಗುತ್ತದೆ.[೩೫] ಮಸೂರವು ಮೊದಲಿಗೆ ಚರಕಿಯಂತ್ರದ ದವಡೆಗಳಿಂದ ಹಿಡಿಯಲಾದ ಸಿಲಿಂಡರಾಕಾರದ ಬಿಲ್ಲೆಯಾಗಿ ಹೊರಬರುತ್ತದೆ. ಕೈಗಾರಿಕೆಗಳಲ್ಲಿ ಬಳಕೆಯಾಗುವ ಮಟ್ಟದ ವಜ್ರವನ್ನು ತುಂಡರಿಸುವ ಒಂದು ಸಾಧನವಾಗಿ ಚರಕಿಯಂತ್ರವು ಒಳಗೊಂಡಿರುತ್ತದೆ. CNC ಚರಕಿಯಂತ್ರವು ಸುಮಾರು 6000 RPM(ಪ್ರತಿ ನಿಮಿಷಕ್ಕೆ ಪರಿಭ್ರಮಣೆ) ವೇಗದಲ್ಲಿ ತಿರುಗುತ್ತದೆ. ಕತ್ತರಿಸುವ ಸಾಧನವು ಲೆನ್ಸ್‌ನ ಒಳಗಿನಿಂದ ಬೇಕಾದಷ್ಟು ಪ್ರಮಾಣದ ಪದಾರ್ಥವನ್ನು ತೆಗೆದುಹಾಕುತ್ತದೆ. ಮಸೂರದ ಕಾನ್ಕೇವ್(ಒಳಭಾಗದ) ಮೇಲ್ಮೈಯನ್ನು ನಂತರದಲ್ಲಿ ಕೆಲವು ಉತ್ತಮ ಮಟ್ಟದ ಅಪಘರ್ಷಕ ಪೇಸ್ಟ್, ತೈಲ, ಹಾಗು ಅಧಿಕ ವೇಗದಲ್ಲಿ ತಿರುಗಿಸಲಾಗುವ ಒಂದು ಸಣ್ಣ ಪಾಲಿಯಸ್ಟರ್ ಹತ್ತಿಯ ಉಂಡೆಯಿಂದ ನಯಗೊಳಿಸಲಾಗುತ್ತದೆ. ಸೂಕ್ಷ್ಮವಾದ ಮಸೂರವನ್ನು ವಿರುದ್ಧವಾದ ರೀತಿಯಲ್ಲಿ ಹಿಡಿದುಕೊಳ್ಳುವ ಸಲುವಾಗಿ, ಮೇಣವನ್ನು ಅಂಟಾಗಿ ಬಳಸಲಾಗುತ್ತದೆ. ಲೆನ್ಸ್ ನ ಕಾನ್ವೆಕ್ಸ್(ಹೊರಭಾಗದ)ಮೇಲ್ಮೈಯನ್ನು ಇದೆ ರೀತಿಯಲ್ಲಿ ತುಂಡರಿಸಿ ಉಜ್ಜಿ ನಯಗೊಳಿಸಲಾಗುತ್ತದೆ.
 • ಮೋಲ್ಡಡ್ - ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ ಗಳ ಕೆಲವು ಬ್ರ್ಯಾಂಡ್ ಗಳ ತಯಾರಿಕೆಯಲ್ಲಿ ಅಚ್ಚೊತ್ತುವಿಕೆಯನ್ನು ಬಳಸಲಾಗುತ್ತದೆ. ಪರಿಭ್ರಮಿಸುವ ಅಚ್ಚುಗಳನ್ನು ಬಳಸಲಾಗುತ್ತದೆ ಜೊತೆಗೆ ಕರಗಿಸಿದ ಪದಾರ್ಥವನ್ನು ಅದಕ್ಕೆ ಸೇರಿಸಿ ಅಪಕೇಂದ್ರ ಬಲಗಳಿಂದ ಅದಕ್ಕೆ ಆಕಾರ ನೀಡಲಾಗುತ್ತದೆ. ಅಚ್ಚೊತ್ತುವಿಕೆ ಹಾಗು ಕಂಪ್ಯೂಟರ್ ನಿಯಂತ್ರಣವನ್ನೂ ಸಹ ಹೆಚ್ಚುಕಡಿಮೆ ದೋಷರಹಿತ ಲೆನ್ಸ್‌ಗಳನ್ನು ರೂಪಿಸಲು ಬಳಕೆ ಮಾಡಲಾಗುತ್ತದೆ.[೩೬]
 • ಹೈಬ್ರಿಡ್ಸ್

ಆದಾಗ್ಯೂ ಹಲವು ಸಂಸ್ಥೆಗಳು ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ತಯಾರಿಸುತ್ತವೆ. USನಲ್ಲಿ ನಾಲ್ಕು ಪ್ರಮುಖ ತಯಾರಕರಿದ್ದಾರೆ:[೩೭]

 • ಆಕ್ಯುವುಯೇ/ವಿಸ್ಟಕೋನ್(ಜಾನ್ಸನ್ & ಜಾನ್ಸನ್)
 • ಸಿಬಾ ವಿಷನ್ (ನೋವಾರ್ಟಿಸ್)
 • ಬಾಷ್ & ಲೊಂಬ್
 • ಕೂಪರ್‌ವಿಷನ್

ಹೈಡ್ರೋಜೆಲ್ ಪದಾರ್ಥಗಳು[ಬದಲಾಯಿಸಿ]

 • ಅಲ್ಫಾಫಿಲ್ಕಾನ್ A
 • ಆಸ್ಮೋಫಿಲ್ಕಾನ್ A
 • ಬಾಲಾಫಿಲ್ಕಾನ್ A
 • ಕಾಂಫಿಲ್ಕಾನ್ A
 • ಎನ್ಫಿಲ್ಕಾನ್ A
 • ಗಾಲಿಫಿಲ್ಕಾನ್ A
 • ಹಿಲಾಫಿಲ್ಕಾನ್ A
 • ಹಿಲಾಫಿಲ್ಕಾನ್ B
 • ಹಿಯೋಕ್ಸಿಫಿಲ್ಕಾನ್ A
 • ಹಿಯೋಕ್ಸಿಫಿಲ್ಕಾನ್ D
 • ಲೋಟ್ರಫಿಲ್ಕಾನ್ B
 • ಮೆಥಫಿಲ್ಕಾನ್ A
 • ಓಮಫಿಲ್ಕಾನ್ A
 • ಫೆಂಫಿಲ್ಕಾನ್ A
 • ಪಾಲಿಮಕೋನ್
 • ಸೆನೋಫಿಲ್ಕಾನ್
 • ಟೆಟ್ರಫಿಲ್ಕಾನ್ A
 • ವಿಫಿಲ್ಕಾನ್ A

ಕಾಂಟ್ಯಾಕ್ಟ್ ಲೆನ್ಸ್ ನ ಲಿಖಿತಸೂಚಿಗಳು[ಬದಲಾಯಿಸಿ]

ಕಾಂಟ್ಯಾಕ್ಟ್ ಲೆನ್ಸ್ ನ್ನು ಧರಿಸಲು ನೀಡುವ ಲಿಖಿತಸೂಚಿಯು ಸಾಮಾನ್ಯವಾಗಿ ಸೂಕ್ತ ಅರ್ಹತೆಯನ್ನು ಹೊಂದಿರುವ ಕಣ್ಣಿನ ತಜ್ಞರಿಗೆ ಮಾತ್ರ ಸೀಮಿತವಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಂತಹ ರಾಷ್ಟ್ರಗಳಲ್ಲಿ(ಇಲ್ಲಿ ಎಲ್ಲ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೆಶನ್ ವೈದ್ಯಕೀಯ ಸಾಧನವೆಂದು ಪರಿಗಣಿಸುತ್ತದೆ), ಯುನೈಟೆಡ್ ಕಿಂಗ್ಡಂ ಹಾಗು ಆಸ್ಟ್ರೇಲಿಯದಲ್ಲಿ, ಸಾಮಾನ್ಯವಾಗಿ ಇದಕ್ಕೆ ದೃಷ್ಟಿಮಾಪನಕಾರರು ಜವಾಬ್ದಾರರಾಗಿರುತ್ತಾರೆ. ಫ್ರಾನ್ಸ್ ಹಾಗು ಪೂರ್ವ ಯುರೋಪಿಯನ್ ದೇಶಗಳಲ್ಲಿ, ನೇತ್ರಶಾಸ್ತ್ರಜ್ಞರು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ವಿಶ್ವದ ಇತರ ಭಾಗಗಲ್ಲಿ, ನೇತ್ರತಜ್ಞರು ಸಾಮಾನ್ಯವಾಗಿ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸಲು ಲಿಖಿತ ಸೂಚಿ ನೀಡುತ್ತಾರೆ. ಕಾಂಟ್ಯಾಕ್ಟ್ ಲೆನ್ಸ್ ಹಾಗು ಕನ್ನಡಕಗಳಿಗೆ ಒಂದೇ ತೆರನಾದ ಲಿಖಿತಸೂಚಿಗಳಿರಬಹುದು, ಆದರೆ ಇದನ್ನು ಅದಲುಬದಲು ಮಾಡಲು ಸಾಧ್ಯವಿಲ್ಲ.

ನೇತ್ರತಜ್ಞರು ಅಥವಾ ಕಾಂಟ್ಯಾಕ್ಟ್ ಲೆನ್ಸ್‌ನ್ನು ಅಳವಡಿಸುವವರು, ಕಣ್ಣಿನ ಪರೀಕ್ಷೆಯ ಸಂದರ್ಭದಲ್ಲಿ ಒಬ್ಬ ವ್ಯಕ್ತಿಗೆ ಕಾಂಟ್ಯಾಕ್ಟ್ ಲೆನ್ಸ್ ನ ಅಳವಡಿಕೆಯು ಯುಕ್ತವಾಗಿದೆಯೇ ಎಂದು ನಿರ್ಧರಿಸುತ್ತಾರೆ. ಪಾರದರ್ಶಕ ಪಟಲದ ಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ; ನೇತ್ರಕದ ಅಲರ್ಜಿಗಳು ಅಥವಾ ಕಣ್ಣಿನ ಶುಷ್ಕತೆಯಿಂದಾಗಿ ಒಬ್ಬ ವ್ಯಕ್ತಿಯು ಕಾಂಟ್ಯಾಕ್ಟ್ ಲೆನ್ಸ್ ನ್ನು ಯಶಸ್ವಿಯಾಗಿ ಧರಿಸುವ ಸಾಮರ್ಥ್ಯಕ್ಕೆ ಅಡ್ಡಿ ಉಂಟಾಗುತ್ತದೆ.

ಕಾಂಟ್ಯಾಕ್ಟ್ ಲೆನ್ಸ್ ನ ಲಿಖಿತ ಸೂಚಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗುವ ಪ್ರಮಿತಿಗಳಲ್ಲಿ:

ಸಾಮಗ್ರಿ(ಉದಾಹರಣೆಗೆ ಆಮ್ಲಜನಕದ ಪ್ರವೇಶಸಾಧ್ಯತೆ/ಸಂವಹನೀಯತೆ(Dk/L, Dk/t), ನೀರಿನ ಅಂಶ, ಮಾಡ್ಯುಲಸ್(ಸ್ಥಿರ ಅಪವರ್ತನ ಅಥವಾ ನಿಷ್ಪತ್ತಿ); ಐಚ್ಚಿಕ)

 • ಆಧಾರದ ವಕ್ರ ತ್ರಿಜ್ಯ(BC, BCR; ಅಗತ್ಯವಿದ್ದಲ್ಲಿ)
 • ವ್ಯಾಸ (D, OAD; ಅಗತ್ಯವಿದ್ದಲ್ಲಿ)
 • ಡಯಾಪ್ಟರ್ಸ್ಗಳಲ್ಲಿರುವ ಪವರ್(ಅಗತ್ಯವಿದ್ದಲ್ಲಿ ಗೋಲಾಕಾರ, ಅಸಮದೃಷ್ಟಿಯನ್ನು ಸರಿಪಡಿಸಲು ಕೇವಲ ಸಿಲಿಂಡರಾಕಾರದ ಲೆನ್ಸ್, ಹೆಚ್ಚುವರಿ ಓದುವಿಕೆಯು ಕೇವಲ ದ್ವಿನಾಭಿ ಲಿಖಿತಸೂಚಿಗೆ ಅಗತ್ಯವಾಗಿರುತ್ತದೆ.)
 • ಸಿಲಿಂಡರ್ ಅಕ್ಷ (ಸಾಮಾನ್ಯವಾಗಿ ಕೇವಲ "ಅಕ್ಷ" ಎಂದು ಸೂಚಿಸಲಾಗಿರುತ್ತದೆ; ಇದು ಸಿಲಿಂಡರಾಕಾರದ ದೋಷ ಸರಿಪಡಿಸುವಿಕೆಗೆ ಮಾತ್ರ ಕೇವಲ ಅಗತ್ಯವಾಗಿರುತ್ತದೆ)
 • ಮಧ್ಯದ ದಪ್ಪನಾದ ಭಾಗ (CT; ಐಚ್ಚಿಕ ಹಾಗು ವಿರಳವಾಗಿ ಒದಗಿಸಲಾಗುತ್ತದೆ)
 • ಬ್ರ್ಯಾಂಡ್ (ಐಚ್ಚಿಕ)

ಕಾಂಟ್ಯಾಕ್ಟ್ ಲೆನ್ಸ್ ನ ಲಿಖಿತ ಸೂಚಿಯಲ್ಲಿ, ಒಬ್ಬ ನಿರ್ದಿಷ್ಟ ವ್ಯಕ್ತಿಗೆ ಸ್ಪಷ್ಟವಾಗಿ ನಮೂದಿಸಲಾದ ವ್ಯಾಸ ಹಾಗು ಆಧಾರದ ವಕ್ರಾಕೃತಿ(ಬೇಸ್ ಕರ್ವ್)ಯನ್ನು ಹೊಂದಿದ ಪರಿಪೂರ್ಣವಾದ ಲೆನ್ಸ್ ನ್ನು ಸೂಚಿಸಬಹುದು. ಹಲವು ತಯಾರಕರು ಬಹಳ ಸೀಮಿತ ಅವಧಿಯಲ್ಲಿ ಲೆನ್ಸ್ ಗಳನ್ನು ತಯಾರಿಸುತ್ತಾರೆ. "ಆಕ್ಯುವುಯೇ" ಸಾಫ್ಟ್ ಲೆನ್ಸ್ ನ್ನು ತಯಾರಿಸುವ ಜಾನ್ಸನ್ & ಜಾನ್ಸನ್ ಸಂಸ್ಥೆಯು, 8.3mm ಅಥವಾ 8.7mm ಆಧಾರ ವಕ್ರಾಕೃತಿಯನ್ನು ಹೊಂದಿರುವ ಇಂತಹ ಲೆನ್ಸ್ ಗಳನ್ನು ತಯಾರಿಸುತ್ತದೆ, ಜೊತೆಗೆ ಇದು 14.0mmನಷ್ಟು ವ್ಯಾಸವನ್ನು ಹೊಂದಿರುತ್ತದೆ-ಇಂತಹ ಲೆನ್ಸ್ ಗಳನ್ನು "ನಿಗದಿಪಡಿಸಿದ ವರ್ಗ"ದವರಿಗೆ ಹೊಂದಾಣಿಕೆಯಾಗುವಂತೆ ವಿನ್ಯಾಸಗೊಳಿಸಿರುತ್ತದೆ. ಇಂತಹ ಲೆನ್ಸ್ ಗಳು ಬಹುತೇಕ ಮಂದಿಗೆ ಹೊಂದಿಕೆಯಾಗುತ್ತದೆ ಅಥವಾ ಕಡೇಪಕ್ಷ ಇದನ್ನು ಧರಿಸುವುದು ಸಾಕಷ್ಟು ಹಿತಕರವೆಂಬಂತೆ ಅವರಿಗೆ ಕಾಣಬಹುದು.

ಅಂತರಜಾಲದ ಮೂಲಕ ಕಾಂಟಾಕ್ಟ್ ಲೆನ್ಸ್‌ಗಳಿಗೆ ಆದೇಶ ನೀಡಿ ಹಲವು ಜನರು ಈಗಾಗಲೇ ಅವುಗಳನ್ನು ಧರಿಸುತ್ತಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, 2004ರಲ್ಲಿ ಜಾರಿಗೆ ಬಂದ ಫೇರ್ನೆಸ್ಸ್ ಟು ಕಾಂಟ್ಯಾಕ್ಟ್ ಲೆನ್ಸ್ ಕನ್ಸ್ಯೂಮರ್ಸ್ ಆಕ್ಟ್, ರೋಗಿಗಳಿಗೆ ಕಾಂಟ್ಯಾಕ್ಟ್ ಲೆನ್ಸ್ ಲಿಖಿತಸೂಚಿಯನ್ನು ಖಾತ್ರಿಪಡಿಸಿ ಅವುಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿತ್ತು.[೩೮] ಕಾನೂನಿನ ಪ್ರಕಾರ ಗ್ರಾಹಕರು ತಮ್ಮ ಕಾಂಟ್ಯಾಕ್ಟ್ ಲೆನ್ಸ್‌ನ ಲಿಖಿತಸೂಚಿಯ ಒಂದು ಪ್ರತಿಯನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ. ಇದು ಅವರಿಗೆ ತಮಗೆ ಇಷ್ಟವಾಗುವ ವ್ಯವಹಾರ ವೇಳೆಯಲ್ಲಿ ಲಿಖಿತಸೂಚಿಯನ್ನು ತುಂಬಲು ಅವಕಾಶ ಒದಗಿಸುತ್ತದೆ. ಲಿಖಿತ ಸೂಚಿ ನೀಡುವ ಮೂಲ ವೈದ್ಯರು ಎಂಟು ಗಂಟೆಗಳ ಕಾಲದ ವ್ಯವಹಾರ ವೇಳೆಯಲ್ಲಿ ಉತ್ತರಿಸದಿದ್ದರೆ, ಆನ್ಲೈನ್ ಮಾರಾಟಗಾರರು ಲಿಖಿತಸೂಚಿಯನ್ನು ಭರ್ತಿ ಮಾಡುವ ಅವಕಾಶದ ಬಗ್ಗೆ ಕೆಲವು ವಿವಾದಗಳು ಹುಟ್ಟಿಕೊಂಡಿವೆ. ಏಕೆಂದರೆ ಪರಿಶೀಲನೆಗಳನ್ನು ಲಿಖಿತಸೂಚಿ ವೈದ್ಯರ(ಪ್ರಿಸ್ಕ್ರೈಬರ್) ಮುಗಿದ ಕೆಲಸದ ಅವಧಿಯಲ್ಲಿ ಆಗಾಗ್ಗೆ ಕಳಿಸಲಾಗುತ್ತದೆ. ಇದರಿಂದ ಅವಧಿ ಮುಗಿದ ಲಿಖಿತ ಸೂಚಿಯನ್ನು ಕೂಡ ಭರ್ತಿ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತದೆ.[೩೮]

ತೊಡಕುಗಳು[ಬದಲಾಯಿಸಿ]

ಕಾಂಟ್ಯಾಕ್ಟ್ ಲೆನ್ಸ್ ನ್ನು ಧರಿಸುವ ಸುಮಾರು 5%ನಷ್ಟು ಜನರು ಪ್ರತಿ ವರ್ಷ ಅದರಿಂದಾಗಿ ತೊಡಕುಗಳನ್ನು ಅನುಭವಿಸುತ್ತಾರೆ.[೩೯] ಕಾಂಟ್ಯಾಕ್ಟ್ ಲೆನ್ಸ್ ಗಳ ಅತಿಯಾದ ಬಳಕೆ, ಅದರಲ್ಲೂ ವಿಶೇಷವಾಗಿ ರಾತ್ರಿಯಲ್ಲಿ ಧರಿಸುವುದು ಅತಿಯಾದ ಸುರಕ್ಷತೆ ಕಾಳಜಿಗಳಿಗೆ ಸಂಬಂಧಿಸಿದೆ. ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸುವುದರಿಂದ ಉಂಟಾಗುವ ಸಮಸ್ಯೆಗಳು ಕಣ್ರೆಪ್ಪೆಗೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು, ಕಣ್ಣಿನ ಆರ್ದ್ರಚರ್ಮ(ಕಂಜಕ್ಟಿವಾ) ಪಾರದರ್ಶಕ ಪಟಲದ ಹಲವಾರು ಪದರಗಳು,[೪೦] ಹಾಗು ಕಣ್ಣಿನ ಹೊರಭಾಗವನ್ನು ಆವರಿಸುವ ಕಣ್ಣೀರು ಪೊರೆಗೂ ಸಹ ಹಾನಿ ಉಂಟಾಗಬಹುದು.[೩೯]

ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ದೀರ್ಘಾವಧಿಯಲ್ಲಿ ಅಂದರೆ ಸುಮಾರು 5 ವರ್ಷಕ್ಕೂ ಅಧಿಕ ಅವಧಿ ಧಾರಣೆ ಮಾಡಿದರೆ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ಜುಗೊ ಲಿಯು ಮತ್ತಿರರು 2000ದಲ್ಲಿ ನಡೆಸಿದ ಅಧ್ಯಯನವು,[೪೧]"ಕಾಂಟ್ಯಾಕ್ಟ್ ಲೆನ್ಸ್ ಗಳ ದೀರ್ಘಕಾಲಿಕ ಧಾರಣೆಯು ಸಂಪೂರ್ಣ ಪಾರದರ್ಶಕ ಪಟಲದ ಸ್ಥೂಲತ್ವವನ್ನು ತಗ್ಗಿಸುತ್ತದೆ ಜೊತೆಗೆ ಪಾರದರ್ಶಕ ಪಟಲದ ವಕ್ರತೆ ಹಾಗು ಮೇಲ್ಮೈಯ ಕ್ರಮರಾಹಿತ್ಯವನ್ನು ಹೆಚ್ಚಿಸುತ್ತದೆ" ಎಂದು ವರದಿ ಮಾಡಿದ್ದಾರೆ.

ರಿಜಿಡ್ ಕಾಂಟ್ಯಾಕ್ಟ್ ಲೆನ್ಸ್ ಗಳ ದೀರ್ಘಕಾಲಿಕ ಧಾರಣೆಯು ಪಾರದರ್ಶಕ ಪಟಲದ ಕೆರಟೋಸೈಟ್ ಸಾಂದ್ರತೆಯನ್ನು ತಗ್ಗಿಸುವುದಕ್ಕೆ ಸಂಬಂಧಿಸಿದೆ[೪೨] ಹಾಗು ಎಪಿತೀಲಿಕ ಲಾಂಗೆರ್ಹನ್ಸ್ ಕೋಶಗಳ ಸಂಖ್ಯೆಯನ್ನು ಅಧಿಕಗೊಳಿಸುತ್ತದೆ.[೪೩]

ಕಣ್ರೆಪ್ಪೆ[ಬದಲಾಯಿಸಿ]

 • ಟೋಸಿಸ್(ಬೀಳುರೆಪ್ಪೆ)

ಕಣ್ಣಿನ ಆರ್ದ್ರಚರ್ಮ[ಬದಲಾಯಿಸಿ]

 • ಜೈಂಟ್ ಪ್ಯಾಪಿಲ್ಲರಿ ಕಾಂಜಂಕ್ಟಿವಿಟಿಸ್
 • ಸುಪೀರಿಯರ್ ಲಿಂಬಿಕ್ ಕೆರಟೋ ಕಾಂಜಂಕ್ಟಿವಿಟಿಸ್

ಪಾರದರ್ಶಕ ಪಟಲ[ಬದಲಾಯಿಸಿ]

 • ಎಪಿತೀಲಿಯಂ(ಶರೀರದ ಕುಹರಗಳ ಲೋಳೆಪೊರೆಯ ಹೊರಪದರವನ್ನು ರೂಪಿಸುವ ಊತಕ)
  • ಪಾರದರ್ಶಕ ಪಟಲದ ಸವೆತ
  • ಪಾರದರ್ಶಕ ಪಟಲದ ಕ್ಷರಣ
  • ಪಾರದರ್ಶಕ ಪಟಲದ ಹುಣ್ಣು
  • ಆಮ್ಲಜನಕದ ಕೊರತೆ(ಹೈಪೋಕ್ಸಿಯ)
 • ಸ್ಟ್ರೋಮ
  • ಸೋಂಕು ಹಾಗು ಕೆರಟೈಟಿಸ್
  • ಕಾಂಟ್ಯಾಕ್ಟ್ ಲೆನ್ಸ್ ತೀವ್ರತರವಾದ ಕೆಂಗಣ್ಣು (CLARE)
  • ಕೆರಟೋಕೊನಸ್
 • ಪಾರದರ್ಶಕ ಪಟಲದ ಅಂತಸ್ತರ

ಬಳಕೆ[ಬದಲಾಯಿಸಿ]

ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಮುಟ್ಟುವುದಕ್ಕೆ ಅಥವಾ ಕಣ್ಣನ್ನು ಮುಟ್ಟಿಕೊಳ್ಳುವುದಕ್ಕೆ ಮುಂಚೆ, ಆರ್ದ್ರಕಾರಿಗಳಾದ ಅಥವಾ ಸುವಾಸನೆಗಳು ಮುಂತಾದ ಅಲರ್ಜಿಕಗಳನ್ನು ಹೊಂದಿರದ ಸಾಬೂನಿನಿಂದ ಕೈಯನ್ನು ತೊಳೆದುಕೊಳ್ಳುವುದು ಬಹಳ ಮುಖ್ಯ. ಕೈಯನ್ನು ಸರಿಯಾಗಿ ತೊಳೆದುಕೊಳ್ಳದ ಅಪಾಯವಿರುವ ಕಾರಣದಿಂದಾಗಿ ಸಾಬೂನು ಆಂಟಿಬ್ಯಾಕ್ಟೀರಿಯಲ್ ಆಗಿರಬಾರದು ಹಾಗು ಇದು ಕಣ್ಣಿನಲ್ಲಿರುವ ಸಹಜ ಬ್ಯಾಕ್ಟೀರಿಯಗಳನ್ನು ನಾಶಮಾಡುವ ಸಾಧ್ಯತೆಯನ್ನು ಹೊಂದಿರುತ್ತದೆ. ಈ ಬ್ಯಾಕ್ಟೀರಿಯಗಳು, ಪಾರದರ್ಶಕ ಪಟಲದ ಮೇಲೆ ರೋಗಕಾರಕ ಬ್ಯಾಕ್ಟೀರಿಯಗಳು ಸಂಗ್ರಹವಾಗದಂತೆ ನೋಡಿಕೊಳ್ಳುತ್ತವೆ. ಲೆನ್ಸ್ ಸಾಫ್ಟ್ ಆಗಿದೆಯೇ ಅಥವಾ ರಿಜಿಡ್(ಗಡುಸು) ಲೆನ್ಸ್ ಆಗಿದೆಯೇ ಎಂಬುದನ್ನು ಅವಲಂಬಿಸಿ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ತೆಗೆಯುವುದು ಅಥವಾ ಅಳವಡಿಸುವ ಕೌಶಲ್ಯವು ಸ್ವಲ್ಪಮಟ್ಟಿಗೆ ಭಿನ್ನವಾಗಿರುತ್ತದೆ.

ಎಲ್ಲ ಪರಿಸ್ಥಿತಿಗಳಲ್ಲಿ, ಲೆನ್ಸ್ ನ ಅಳವಡಿಕೆಗೆ ಹಾಗು ಅದನ್ನು ತೆಗೆಯಲು ತರಬೇತಿ ಮತ್ತು ಅಭ್ಯಾಸದ ಅಗತ್ಯವಿರುತ್ತದೆ ಜೊತೆಗೆ ಇದು ಬಳಕೆದಾರನ ರೂಢಿಯನ್ನೂ ಅವಲಂಬಿಸಿರುತ್ತದೆ, ಇದು ವಾಸ್ತವವಾಗಿ ಬೆರಳತುದಿಯಿಂದ ಕಣ್ಣುಗುಡ್ಡೆಯನ್ನು ಮುಟ್ಟಿಕೊಳ್ಳಲು ಇರುವ ಸಹಜ ಹಿಂಜರಿಕೆಯನ್ನು ಎದುರಿಸುವುದಾಗಿದೆ.

ಅಳವಡಿಕೆ[ಬದಲಾಯಿಸಿ]

ಕಾಂಟ್ಯಾಕ್ಟ್ ಲೆನ್ಸ್ ನ ಅಳವಡಿಕೆ

ಕಾಂಟ್ಯಾಕ್ಟ್ ಲೆನ್ಸ್ ನ್ನು ಸಾಮಾನ್ಯವಾಗಿ ತೋರುಬೆರಳಿನ ಮೇಲಿಟ್ಟುಕೊಂಡು ಕಣ್ಣಿಗೆ ಅಳವಡಿಸಿಕೊಳ್ಳಲಾಗುತ್ತದೆ. ಇದರಂತೆ ಕಾನ್ಕೇವ್(ಒಳಭಾಗ) ಭಾಗವು ಮೇಲ್ಮುಖವಾಗಿರುತ್ತದೆ ಹಾಗು ಅದನ್ನು ಪಾರದರ್ಶಕ ಪಟಲಕ್ಕೆ ತಾಗುವಂತೆ ಮೇಲೆ ತೆಗೆದುಕೊಂಡು ಹೋಗಲಾಗುತ್ತದೆ. ಕಣ್ಣನ್ನು ತೆರೆದಿಟ್ಟುಕೊಳ್ಳಲು ಮತ್ತೊಂದು ಕೈಯನ್ನು ಬಳಸಬಹುದು. ವಿಶೇಷವಾಗಿ ಬಳಸಿ ಬಿಸಾಡಬಹುದಾದ ಸಾಫ್ಟ್ ಲೆನ್ಸ್ ಗಳಿಂದ ಸಮಸ್ಯೆಗಳು ಉಂಟಾಗಬಹುದು; ಲೆನ್ಸ್ ಹಾಗು ಬೆರಳ ನಡುವಿನ ಮೇಲ್ಮೈ ಕರ್ಷಣವು ಬಹಳ ಅಧಿಕವಾಗಿದ್ದರೆ, ಮಸೂರವು ತನ್ನಷ್ಟಕ್ಕೆ ಒಳಹೊರಗಾಗಬಹುದು. ಪರ್ಯಾಯವಾಗಿ ಇದು ಅರ್ಧ ಭಾಗವಾಗಿ ಮಡಚಿಕೊಳ್ಳಬಹುದು. ಲೆನ್ಸ್ ಮೊದಲು ಕಣ್ಣಿನ ಜತೆ ಸಂಪರ್ಕಕ್ಕೆ ಬಂದಾಗ, ಕಣ್ಣಿನಲ್ಲಿ ಸ್ವಲ್ಪ ಕಾಲ ಕಿರಿಕಿರಿ ಉಂಟಾಗಬಹುದು, ಏಕೆಂದರೆ ಲೆನ್ಸ್ ಕಣ್ಣಿಗೆ ಒಗ್ಗಿಕೊಳ್ಳಲು ಸಮಯ ಹಿಡಿಯುತ್ತದೆ ಅಲ್ಲದೆ ಲೆನ್ಸ್ ನ ಮೇಲಿರುವ ಧೂಳು ಕಣ್ಣಿಗೆ ಕಿರಿಕಿರಿಯನ್ನು ಉಂಟುಮಾಡುತ್ತದೆ(ಬಹುಬಳಕೆಯ ಲೆನ್ಸ್ ನ್ನು ಸರಿಯಾಗಿ ಶುದ್ಧಗೊಳಿಸದಿದ್ದಾಗ). ಈ ಅವಧಿಯಲ್ಲಿ ಕಣ್ಣನ್ನು ನೀರಿನಿಂದ ತೊಳೆದುಕೊಳ್ಳುವುದು ಸಹಾಯಕವಾಗುತ್ತದೆ, ಆದರೆ ಇದು ಸಾಧಾರಣವಾಗಿ ಒಂದು ನಿಮಿಷಕ್ಕಿಂತ ಅಧಿಕವಾಗಬಾರದು. ಆದಾಗ್ಯೂ ಕೆಲವು ಮಾದರಿಯ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಹಿಮ್ಮುಖನಾಗಿ ಅಳವಡಿಸಿದ್ದರೆ ಅದನ್ನು ಸುಲಭವಾಗಿ ಪತ್ತೆ ಹಚ್ಚಬಹುದೆಂದು ಗಮನಿಸಬೇಕು(ಏಕೆಂದರೆ ಇದರ ತಪ್ಪಾದ ಅಳವಡಿಕೆಯಿಂದಾಗಿ ಸಾಮಾನ್ಯವಾಗಿ ನೋವಿನಿಂದ ಕೂಡಿರುತ್ತದೆ ಹಾಗು ದೃಷ್ಟಿಯು ದುರ್ಬಲಗೊಳ್ಳುತ್ತದೆ) ಲೆನ್ಸ್ ನ್ನು ಬೆರಳ ತುದಿಯಲ್ಲಿ ಹಿಡಿದುಕೊಂಡು ಅದರ ಕೆಳಭಾಗವನ್ನು ಇನ್ನೊಂದು ಕೈಯಿಂದ ಎರಡು ಬೆರಳುಗಳಲ್ಲಿ ಒತ್ತಿದರೆ, ಲೆನ್ಸ್ ನ ಸರಿಯಾದ ಭಾಗವನ್ನು ಮುಂಚೆಯೇ ಗುರುತಿಸಬಹುದು, ಟಾಕೋ(ಒಂದು ವಿಧವಾದ ಮೆಕ್ಸಿಕನ್ ತಿನಿಸು) ಮಾದರಿಯಲ್ಲಿ ಲೆನ್ಸ್ ನ ವಕ್ರಾಕೃತಿಯ ತುದಿಗಳು ಒಳಭಾಗದಲ್ಲಿದೆಯೇ ಎಂಬುದು ತಿಳಿದುಬರುತ್ತದೆ. ವಕ್ರಾಕಾರವು ಹೊರಭಾಗದಲ್ಲಿದರೆ ಲೆನ್ಸ್ ನ್ನು ತಿರುಗಿಸಿಕೊಳ್ಳುವ ಅಗತ್ಯವಿರುತ್ತದೆ. ಆದಾಗ್ಯೂ ಕೆಲವು ಮಾದರಿಯ ಲೆನ್ಸ್ ಗಳಲ್ಲಿ, ಎರಡೂ ಬದಿಯು ಒಂದೇ ರೀತಿಯಾಗಿ ಗೋಚರಿಸುವುದರಿಂದ ಸರಿಯಾದ ಭಾಗವನ್ನು ಗುರುತಿಸುವುದು ಕಷ್ಟ. ಹಲವು ಲೆನ್ಸ್ ಗಳಲ್ಲಿ ಅದು ಒಳಹೊರಗಾಗಿದೆಯೇ ಎನ್ನುವುದು ಕಣ್ಣಿನಲ್ಲಿ ಅಳವಡಿಸಿಕೊಂಡ ನಂತರವೂ ಹೇಳುವುದು ಕಷ್ಟವಾಗುತ್ತದೆ. ಇದಕ್ಕೆ ಕಾರಣ ಲೆನ್ಸ್ ನ ದೃಷ್ಟಿ ಹಾಗು ಸಂವೇದನೆಯು ಎರಡೂ ಬದಿಯಲ್ಲಿ ಒಂದೇ ತೆರನಾಗಿರುತ್ತದೆ. ಈ ಕಾರಣಗಳಿಂದಾಗಿ ಹಲವರು ಕಾಂಟ್ಯಾಕ್ಟ್ ಲೆನ್ಸ್ ಗಳ ವಿವಿಧ ಭಾಗಗಳ ದೃಷ್ಟಿಯ ಜಾಡನ್ನು ಗುರುತಿಸಲು ಅದನ್ನು ತೆರೆದ ದಿನದಿಂದಲೇ ಆರಂಭಿಸುತ್ತಾರೆ; ಲೆನ್ಸ್ ಒಳಹೊರಗಾಗಿದೆಯೆಂದು ಅವರು ಶಂಕಿಸಿದರೆ ನಂತರದ ಹಂತದಲ್ಲಿ ಅವರು ಅದರ ಸ್ಥಾನನಿರ್ಣಯವನ್ನು ಬದಲಾಯಿಸಬಹುದು. ಅನುಕೂಲಕರವಾಗಿ ಕಂಡುಬಂದರೂ ಹಾಗು ದೃಷ್ಟಿಯಲ್ಲಿ ಸ್ಪಷ್ಟತೆಯು ಇದ್ದರೂ ಲೆನ್ಸ್ ನ್ನು ಒಳಹೊರಗಾಗಿ ಧರಿಸುವುದು ಸೂಕ್ತವಲ್ಲ.

ತೆಗೆಯುವುದು[ಬದಲಾಯಿಸಿ]

ಕಣ್ರೆಪ್ಪೆಗಳು ತೆರೆದಿರುವಂತೆ ಸಾಫ್ಟ್ ಲೆನ್ಸ್ ನ್ನು ತೆಗೆಯಬಹುದು ಜೊತೆಗೆ ವಿರುದ್ಧ ಬೆರಳುಗಳಲ್ಲಿ ಲೆನ್ಸ್ ನ್ನು ಹಿಡಿಯಬಹುದು. ಈ ವಿಧಾನವು ಕಿರಿಕಿರಿಯನ್ನು ಉಂಟುಮಾಡಬಹುದು, ಇದರಲ್ಲಿ ಕಣ್ಣಿಗೆ ಹಾನಿಯಾಗುವ ಸಂಭವವಿರುತ್ತದೆ ಹಾಗು ಹಲವು ಪರಿಸ್ಥಿತಿಗಳಲ್ಲಿ ಕಣ್ಣು ಮಿಟುಕಿಸುವ ಅನುವರ್ತನದಿಂದಾಗಿ ಕಷ್ಟಕರವಾಗಬಹುದು. ಲೆನ್ಸ್ ನ್ನು ಪಾರದರ್ಶಕ ಪಟಲದಿಂದ ಆಚೆಗೆ ತರಬೇಕಾದರೆ(ತೋರುಬೆರಳಿನಿಂದ ಲೆನ್ಸ್ ನ್ನು ಮುಟ್ಟುವುದು ಹಾಗು ಮೂಗಿನ ಕಡೆ ನೋಡುತ್ತಾ, ಲೆನ್ಸ್‌ನ್ನು ಚಲಿಸಬೇಕು) ಅದು ಜಗ್ಗುತ್ತದೆ(ವಕ್ರಾಕೃತಿಯಲ್ಲಿನ ಭಿನ್ನತೆಯಿಂದಾಗಿ), ಇದರಿಂದಾಗಿ ಲೆನ್ಸ್‌ನ್ನು ಹಿಡಿಯಲು ಸುಲಭವಾಗುತ್ತದೆ.

ಲೆನ್ಸ್ ನ್ನು ತೆಗೆಯಲು ಇರುವ ಮತ್ತೊಂದು ಪರ್ಯಾಯ ವಿಧಾನವೆಂದರೆ, ಲೆನ್ಸ್ ನ್ನು ಪಾರದರ್ಶಕ ಪಟಲದಿಂದ ಕಣ್ಣಿನ ಒಳ ತುದಿಗೆ ತಂದರೆ, ಇದನ್ನು ಬೆರಳಿನಿಂದ ಮೇಲಿನ ಕಣ್ರೆಪ್ಪೆಯನ್ನು ಕೆಳಭಾಗಕ್ಕೆ ಒತ್ತುತ್ತಾ ಕಣ್ಣಿನಿಂದ ಹೊರಕ್ಕೆ ತೆಗೆಯಬಹುದು. ಈ ವಿಧಾನದಲ್ಲಿ ಬೆರಳುಗಳಿಂದ ಕಣ್ಣನ್ನು ಮುಟ್ಟುವ ಅಪಾಯ ಕಡಿಮೆಯಿರುತ್ತದೆ, ಹಾಗು ಉದ್ದವಾದ ಉಗುರುಗಳನ್ನು ಹೊಂದಿರುವವರಿಗೆ ಇದು ಸುಲಭವಾಗುತ್ತದೆ.

ರಿಜಿಡ್ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಹೊರಭಾಗದ ಅಥವಾ ಪಾರ್ಶ್ವ ಕುಡಿಗಣ್ಣುಮೇಲೆ ಒಂದು ಬೆರಳಿನಿಂದ ಎಳೆದು ತೆಗೆಯಬಹುದು, ನಂತರ ಲೆನ್ಸ್ ತನ್ನ ಅಂಟನ್ನು ಕಳೆದುಕೊಳ್ಳಲು ಕಣ್ಣನ್ನು ಮಿಟುಕಿಸಬಹುದು. ಮತ್ತೊಂದು ಕೈ, ಲೆನ್ಸ್ ನ್ನು ಹಿಡಿದುಕೊಳ್ಳಲು ಕಣ್ಣಿನ ಕೆಳಭಾಗದಲ್ಲಿ ಬಟ್ಟಲಿನಂತೆ ಹಿಡಿದುಕೊಳ್ಳಬಹುದು. ನಿರ್ದಿಷ್ಟವಾಗಿ ಲೆನ್ಸ್ ಗಳನ್ನು ತೆಗೆಯಲು ಸಣ್ಣ ಸಾಧನಗಳೂ ಸಹ ಇವೆ, ಮೃದುವಾದ ಪ್ಲ್ಯಾಸ್ಟಿಕ್ ನಿಂದ ತಯಾರಾದ ಇವುಗಳು ಪ್ಲಂಜರ್(ತೆರೆದ ಬಾಯುಳ್ಳ ನಳಿಕೆ)ನ್ನು ಹೋಲುತ್ತವೆ; ಕಣ್ಣಿನ ತನಕ ಒಳಭಾಗದ ತುದಿಯನ್ನು ಎತ್ತರಿಸಿ ಲೆನ್ಸ್ ಗೆ ತಗಲುವಂತೆ ಮಾಡಲಾಗುತ್ತದೆ; ಇದು ಪಾರದರ್ಶಕ ಪಟಲದೊಂದಿಗಿನ ಲೆನ್ಸ್‌ಗಿಂತ ಹೆಚ್ಚು ಬಿಗಿಯಾಗಿ ಅಂಟುತ್ತದೆ. ಇದು ಕಣ್ಣಿನಿಂದ ಲೆನ್ಸ್‌ನ್ನು ತೆಗೆದುಹಾಕಲು ಅವಕಾಶ ನೀಡುತ್ತದೆ.

ಕಾಳಜಿ[ಬದಲಾಯಿಸಿ]

ಕಾಂಟ್ಯಾಕ್ಟ್ ಲೆನ್ಸ್ ನ್ನು ಇಡುವ ಲೆನ್ಸ್ ಕವರ್

ಪ್ರತಿನಿತ್ಯ ಬಳಸಿ ಬಿಸಾಡಬಹುದಾದ ಲೆನ್ಸ್ ಗಳನ್ನು ಶುಚಿಗೊಳಿಸುವ ಅಗತ್ಯವಿರುವುದಿಲ್ಲ, ಇತರ ಮಾದರಿಗಳನ್ನು ನಿಯಮಿತವಾಗಿ ಶುಚಿಗೊಳಿಸುವ ಹಾಗು ಸೋಂಕು ನಿವಾರಿಸುವ ಅಗತ್ಯವಿರುತ್ತದೆ, ಏಕೆಂದರೆ ಹಲವಾರು ಸೂಕ್ಷ್ಮಜೀವಿಗಳಿಂದ ಕಿರಿಕಿರಿ ಮತ್ತು ಸೋಂಕುಗಳು ಉಂಟಾಗಬಹುದು, ಇದರಲ್ಲಿ ಬ್ಯಾಕ್ಟೀರಿಯ, ಫಂಜೈ, ಹಾಗು ಅಕಾಂಥಾಮೀಬ ಗಳು ಸೇರಿವೆ. ಅವು ಲೆನ್ಸ್ ನ ಮೇಲ್ಮೈಯಲ್ಲಿ ಬಯೋಫಿಲ್ಮ್ ಸೃಷ್ಟಿಸುತ್ತವೆ. ಈ ಕೆಲಸಗಳನ್ನು ನಿರ್ವಹಿಸಲು ಹಲವಾರು ಉತ್ಪನ್ನಗಳನ್ನು ಬಳಕೆ ಮಾಡಬಹುದು:

 • ವಿವಿಧೋದ್ದೇಶದ ದ್ರಾವಣ - ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಶುದ್ಧಿಗೊಳಿಸಲು ಇರುವ ಅತ್ಯಂತ ಜನಪ್ರಿಯ ದ್ರಾವಣ. ಲೆನ್ಸ್ ಗಳನ್ನು ತೊಳೆಯಲು, ಸೋಂಕು ನಿವಾರಣೆ ಮಾಡಲು, ಶುಚಿಗೊಳಿಸಲು ಹಾಗು ಇದನ್ನು ಸಂಗ್ರಹಿಸಲು ಇದನ್ನು ಬಳಸಲಾಗುತ್ತದೆ. ಹಲವಾರು ಪರಿಸ್ಥಿತಿಗಳಲ್ಲಿ ಈ ಉತ್ಪನ್ನದ ಬಳಕೆಯಿಂದಾಗಿ ಪ್ರೋಟೀನ್ ತೆಗೆದು ಹಾಕುವ ಕಿಣ್ವ ಗುಳಿಗೆಗಳ ಅಗತ್ಯವನ್ನು ನಿವಾರಿಸುತ್ತದೆ. ಲೆನ್ಸ್ ನಿಂದ ಅಕಾಂಥಾಮೀಬ ದ ಸೋಂಕು ನಿವಾರಿಸುವಲ್ಲಿ ಕೆಲವು ವಿವಿಧೋದ್ದೇಶ ದ್ರಾವಣಗಳು ಅಷ್ಟೇನೂ ಪರಿಣಾಮಕಾರಿಯಾಗಿಲ್ಲ.[೪೫] ಮೇ 2007ರಲ್ಲಿ, ವಿವಿಧೋದ್ದೇಶ ದ್ರಾವಣದ ಒಂದು ಬ್ರ್ಯಾಂಡ್ ನ್ನು ಅಕಾಂಥಾಮೀಬ ಸೊಂಕುಗಳನ್ನು ಉಂಟುಮಾಡಿದ ಕಾರಣಕ್ಕೆ ಹಿಂಪಡೆಯಲಾಯಿತು.[೪೬][೪೭] ಹೊಸ ವಿವಿಧೋದ್ದೇಶ ದ್ರಾವಣಗಳು ಬ್ಯಾಕ್ಟೀರಿಯ, ಫಂಜೈ, ಹಾಗು ಅಕಾಂಥಾಮೀಬ ಕ್ಕೆ ಪರಿಣಾಮಕಾರಿಯಾಗಿದೆ ಜೊತೆಗೆ ಲೆನ್ಸ್‌ಗಳನ್ನು ಮುಳುಗಿಸಿ ಇಟ್ಟಂತಹ ಪರಿಸ್ಥಿತಿಯಲ್ಲಿ ಸುಸ್ಥಿತಿಯಲ್ಲಿರುವಂತೆ ವಿನ್ಯಾಸಗೊಳಿಸಲಾಗಿರುತ್ತದೆ.

ಲವಣಯುಕ್ತದ್ರಾವಣ - ಇದನ್ನು ಲೆನ್ಸ್ ನ್ನು ಶುಚಿಗೊಳಿಸಿದ ನಂತರ ಅಳವಡಿಕೆಗೆ ಮುಂಚಿತವಾಗಿ ತೊಳೆಯಲು ಬಳಸಲಾಗುತ್ತದೆ. ಲವಣಯುಕ್ತ ದ್ರಾವಣಗಳು ಲೆನ್ಸ್‌ಗಳಿಗೆ ತಗುಲಿದ ಸೋಂಕನ್ನು ನಿವಾರಿಸುವುದಿಲ್ಲ.

 • ನಿತ್ಯಬಳಕೆಯ ಮಾರ್ಜಕ - ನಿಯಮಿತವಾಗಿ ಲೆನ್ಸ್ ನ್ನು ಶುಚಿಗೊಳಿಸಲು ಇದನ್ನು ಬಳಸಲಾಗುತ್ತದೆ. ಲೆನ್ಲ್ ಅಂಗೈಯಲ್ಲಿರುವಾಗ ಮಾರ್ಜಕದ ಕೆಲವು ಹನಿಗಳನ್ನು ಲೆನ್ಸ್ ಗೆ ಹಾಕಲಾಗುತ್ತದೆ. ನಂತರ ಬೆರಳತುದಿಯಿಂದ ಪ್ರತಿ ಭಾಗವನ್ನು ಸುಮಾರು 20 ಸೆಕೆಂಡುಗಳ ಕಾಲ ಉಜ್ಜಲಾಗುತ್ತದೆ(ಇದು ಮಾರ್ಜಕದ ನಿರ್ದೇಶನಗಳ ಮೇಲೆ ಅವಲಂಬಿಸಿರುತ್ತದೆ). ಉದ್ದನೆಯ ಉಗುರುಗಳು ಲೆನ್ಸ್ ಗೆ ಹಾನಿಯುಂಟುಮಾಡಬಹುದು, ಹೀಗಾಗಿ ಕಾಳಜಿಯನ್ನು ವಹಿಸಬೇಕಾಗುತ್ತದೆ.
 • ಹೈಡ್ರೋಜನ್ ಪೆರಾಕ್ಸೈಡ್ ದ್ರಾವಣ - ಇದು ಲೆನ್ಸ್ ಗಳ ಸೋಂಕು ನಿವಾರಣೆಗೆ ಬಳಕೆಯಾಗುತ್ತದೆ, ಜೊತೆಗೆ ಇದು 'ಎರಡು-ಹಂತ' ಅಥವಾ 'ಒಂದು-ಹಂತ'ದ ವ್ಯವಸ್ಥೆಗಳಲ್ಲಿ ಲಭ್ಯವಿದೆ. 'ಎರಡು-ಹಂತದ' ಉತ್ಪನ್ನವನ್ನು ಬಳಸುವಾಗ, ಹೈಡ್ರೋಜನ್ ಪೆರಾಕ್ಸೈಡ್ ನಿಂದ ಹೊರತೆಗೆಯಲಾದ ಲೆನ್ಸ್, ಅದರ ಧಾರಣೆಗೆ ಮುಂಚೆ ಆ ದ್ರಾವಣದ ಪರಿಣಾಮದಿಂದ ತಟಸ್ಥಗೊಂಡಿದೆಯೇ ಎಂಬುದನ್ನು ಖಾತರಿಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅದು ತೀವ್ರತರವಾದ ನೋವನ್ನು ಉಂಟುಮಾಡಬಹುದು. ಪೆರಾಕ್ಸೈಡ್ ನ್ನು ಹೋಗಲಾಡಿಸಲು ಲವಣಯುಕ್ತ ದ್ರಾವಣವನ್ನು ಬಳಸಬೇಕು. ಈ ದ್ರಾವಣವು ಕಣ್ಣಿಗೆ ಬಿದ್ದರೆ, ತುರ್ತು ಕೋಣೆಗೆ ಹೋಗಿ ಕಣ್ಣನ್ನು(ಗಳನ್ನು)[೪೮] ನೀರಿನಿಂದ ತೊಳೆಯಬೇಕೆಂದು ಶಿಫಾರಸು ಮಾಡಲಾಗುತ್ತದೆ.
 • ಕಿಣ್ವಕ ಮಾರ್ಜಕ - ಲೆನ್ಸ್ ನ ಮೇಲೆ ಶೇಖರಣೆಯಾಗಿರುವ ಪ್ರೊಟೀನುಗಳನ್ನು ಶುಚಿಗೊಳಿಸಲು ಇದನ್ನು ಬಳಸಲಾಗುತ್ತದೆ, ಸಾಮಾನ್ಯವಾಗಿ ಪ್ರತಿ ನಿತ್ಯ ಬಳಸಲಾಗುವ ಮಾರ್ಜಕಗಳಿಂದ ಲೆನ್ಸ್ ನ ಶುಚಿತ್ವವು ಕಡಿಮೆಯೆನಿಸಿದರೆ, ಸಾಮಾನ್ಯವಾಗಿ ಇದನ್ನು ವಾರಕ್ಕೊಮ್ಮೆ ಬಳಸಬಹುದು. ಮಾದರಿಯಾಗಿ, ಈ ಮಾರ್ಜಕವು ಗುಳಿಗೆಯ ರೂಪದಲ್ಲಿದೆ. ಕಾಂಟ್ಯಾಕ್ಟ್ ಲೆನ್ಸ್ ನ ಮೇಲೆ ಶೇಖರಣೆಯಾದ ಪ್ರೊಟೀನುಗಳು ಅಹಿತಕರವೆನಿಸುತ್ತದೆ ಹಾಗು ಹಲವಾರು ರೀತಿಯ ಕಣ್ಣಿನ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
 • ನೇರಳಾತೀತ, ಕಂಪನ ಅಥವಾ ಶ್ರವಣಾತೀತ ಸಾಧನಗಳು - ಕಾಂಟ್ಯಾಕ್ಟ್ ಲೆನ್ಸ್‌ ಗಳಿಗೆ ತಗುಲಿರುವ ಸೋಂಕಿನ ನಿವಾರಣೆ ಹಾಗು ಅದನ್ನು ಶುಚಿಗೊಳಿಸಲು ಎರಡಕೂ ಬಳಸಲಾಗುತ್ತದೆ. ಪೋರ್ಟಬಲ್ ಸಾಧನದೊಳಗೆ ಲೆನ್ಸ್ ಗಳನ್ನು ಎರಡರಿಂದ ಆರು ನಿಮಿಷಗಳ ಕಾಲ ಸೇರಿಸಲಾಗುತ್ತದೆ (ಇದು ಬ್ಯಾಟರಿಗಳು ಹಾಗು/ಅಥವಾ ಪ್ಲಗ್-ಇನ್ ಸಾಧನಗಳಿಂದ ಚಲಿಸುತ್ತವೆ). ಈ ಅವಧಿಯಲ್ಲಿ ಸೂಕ್ಷ್ಮಜೀವಿಗಳು ಹಾಗು ಪ್ರೋಟೀನ್ ಸಂಗ್ರಹ ಎರಡರಿಂದ ಸಂಪೂರ್ಣವಾಗಿ ಶುದ್ಧಗೊಳ್ಳುತ್ತದೆ. ವಿವಿಧೋದ್ದೇಶ ದ್ರಾವಣಗಳಾಗಿ ಮಾದರಿಯಾಗಿ ಬಳಕೆಯಾಗುವ ಲವಣಯುಕ್ತ ದ್ರಾವಣದ ಅಗತ್ಯವಿರುವುದಿಲ್ಲ. ಈ ಸಾಧನಗಳು ಸಾಮಾನ್ಯವಾಗಿ ದೃಶ್ಯೋಪಕರಣದ ಅಂಗಡಿಗಳಲ್ಲಿ ದೊರೆಯುವುದಿಲ್ಲ ಬದಲಿಗೆ ಇದು ಕೆಲವು ವಿದ್ಯುತ್ತಿಗೆ ಸಂಬಂಧಿಸಿದ ಅಂಗಡಿಗಳಲ್ಲಿ ದೊರಕುತ್ತದೆ.[೪೯][೫೦][೫೧]

ಕೆಲವು ಉತ್ಪನ್ನಗಳನ್ನು ಕೇವಲ ನಿರ್ದಿಷ್ಟ ಮಾದರಿಯ ಕಾಂಟ್ಯಾಕ್ಟ್ ಲೆನ್ಸ್ ಗಳೊಂದಿಗೆ ಬಳಸಬೇಕು: ಗೊತ್ತಾದ ವಿಧದ ಲೆನ್ಸ್‌ಗೆ ಬಳಕೆ ಮಾಡಬಹುದೆಂಬ ಖಾತರಿಗೆ ಉತ್ಪನ್ನದ ಲೇಬಲ್‌ನ್ನು ಪರೀಕ್ಷಿಸಬೇಕು. ಕಾಂಟ್ಯಾಕ್ಟ್ ಲೆನ್ಸ್ ನ್ನು ಶುಚಿಗೊಳಿಸಲು ಕೇವಲ ನೀರನ್ನು ಮಾತ್ರ ಬಳಸಬಾರದು. ಏಕೆಂದರೆ ಲೆನ್ಸ್ ನಲ್ಲಿರುವ ಸೋಂಕನ್ನು ನಿವಾರಿಸಲು ಕೇವಲ ನೀರು ಮಾತ್ರ ಸಾಕಾಗುವುದಿಲ್ಲ. ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಶುಚಿಗೊಳಿಸಲು ನೀರನ್ನು ಬಳಸುವುದು ಲೆನ್ಸ್ ನ ಸೋಂಕಿಗೆ ಕಾರಣವಾಗುತ್ತದೆ ಜೊತೆಗೆ ಕೆಲವೊಂದು ಪರಿಸ್ಥಿತಿಗಳಲ್ಲಿ ಕಣ್ಣಿಗೆ ಸರಿಪಡಿಸಲಾಗದಷ್ಟು ಹಾನಿ ಉಂಟಾಗಿರುವುದು ತಿಳಿದುಬಂದಿದೆ.[೫೨] ಕಣ್ಣಿನ ಸೋಂಕು ಅಥವಾ ಕಣ್ಣಿಗೆ ಉಂಟಾಗುವ ಕಿರಿಕಿರಿಯನ್ನು ತಪ್ಪಿಸಲು ಉತ್ಪನ್ನದ ನಿರ್ದೇಶನಗಳನ್ನು ಅನುಸರಿಸುವುದೂ ಸಹ ಬಹಳ ಮುಖ್ಯವಾಗುತ್ತದೆ. ಇದರ ಜೊತೆಯಲ್ಲಿ, ಕಾಂಟ್ಯಾಕ್ಟ್ ಗಳನ್ನೂ ಸಂಗ್ರಹಿಸುವ ಡಬ್ಬಿಗಳು ಅಥವಾ ಲೆನ್ಸ್ ನ ಕವರ್ ಗಳನ್ನು ನೀರಿನಲ್ಲಿ ಹಾಗು ವಿವಿಧೋದ್ದೇಶ ದ್ರಾವಣ ಅಥವಾ ಹೈಡ್ರೋಜನ್ ಪೆರಾಕ್ಸೈಡ್ ನಿಂದ ಸಂಪೂರ್ಣವಾಗಿ ತೊಳೆಯಬೇಕು, ಇದು ಲೆನ್ಸ್ ಗಳ ಮೇಲ್ಮೈಯಲ್ಲಿ ರೂಪುಗೊಳ್ಳುವ ಬಯೋಫಿಲ್ಮ್‌ಗಳನ್ನು ನಿರೋಧಿಸುತ್ತವೆ.

ಉತ್ಪನ್ನವು ಸೂಕ್ಷ್ಮಜೀವಿಗಳಿಂದ ಕಲುಷಿತಗೊಳ್ಳದಂತೆ ಖಾತರಿಪಡಿಸುವುದು ಮುಖ್ಯವಾಗಿದೆ: ಈ ದ್ರಾವಣಗಳು ತುಂಬಿರುವ ಧಾರಕಗಳ ತುದಿಗಳು ಯಾವುದೇ ಮೇಲ್ಮೈಯನ್ನು ಸ್ಪರ್ಶಿಸಬಾರದು, ಜೊತೆಗೆ ಬಳಕೆಯಲ್ಲಿಲ್ಲದಿದ್ದಾಗ ಧಾರಕವನ್ನು ಮುಚ್ಚಿಡಬೇಕು. ಉತ್ಪನ್ನಕ್ಕೆ ತಗಲುವ ಸ್ವಲ್ಪಮಟ್ಟಿಗಿನ ಮಾಲಿನ್ಯವನ್ನು ಪ್ರತಿರೋಧಿಸಲು ಹಾಗು ಕಾಂಟ್ಯಾಕ್ಟ್ ಲೆನ್ಸ್ ನ ಮೇಲಿರುವ ಸೂಕ್ಷ್ಮಜೀವಿಗಳನ್ನು ತೊಲಗಿಸಲು, ಕೆಲವು ಉತ್ಪನ್ನಗಳು ಥಿಯೋಮರ್ಸಲ್, ಬೆನ್ಜಲ್ಕೋನಿಯಂ ಕ್ಲೋರೈಡ್, ಬೆನ್ಜೈಲ್ ಆಲ್ಕೋಹಾಲ್, ಹಾಗು ಇತರ ಸಂಯುಕ್ತಗಳನ್ನು ಒಳಗೊಂಡ ಸಂರಕ್ಷಕಗಳನ್ನು ಒಳಗೊಂಡಿರುತ್ತವೆ. 1989ರಲ್ಲಿ, ಕಾಂಟ್ಯಾಕ್ಟ್ ಲೆನ್ಸ್ ಗಳಿಗೆ ಸಂಬಂಧಪಟ್ಟ 10%ನಷ್ಟು ಸಮಸ್ಯೆಗಳಿಗೆ ಥಿಯೋಮರ್ಸಲ್ ಕಾರಣವಾಗಿತ್ತು:[೫೩] ಈ ಕಾರಣದಿಂದಾಗಿ, ಮುಂದೆ ಬಂದ ಹಲವು ಉತ್ಪನ್ನಗಳು ಥಿಯೋಮರ್ಸಲ್ ಅನ್ನು ಹೊಂದಿರಲಿಲ್ಲ. ಸಂರಕ್ಷಕ-ಮುಕ್ತ ಉತ್ಪನ್ನಗಳು ಸಾಮಾನ್ಯವಾಗಿ ಕಡಿಮೆ ಬಡು ಅವಧಿ(ಶೆಲ್ಫ್ ಲೈಪ್)ಯನ್ನು ಹೊಂದಿರುತ್ತವೆ. ಉದಾಹರಣೆಗೆ, ವಾಯುಕಲಿಲವಲ್ಲದ ಸಂರಕ್ಷಕ-ಮುಕ್ತ ಲವಣಯುಕ್ತ ದ್ರಾವಣಗಳನ್ನು ಒಂದೊಮ್ಮೆ ತೆರೆದರೆ ಅದನ್ನು ಕೇವಲ ಎರಡು ವಾರಗಳ ಮಟ್ಟಿಗೆ ಮಾತ್ರ ಬಳಸಬೇಕು. 1999ರಲ್ಲಿ ಬಿಡುಗಡೆಯಾದ ಸಿಲಿಕೋನ್-ಹೈಡ್ರೋಜೆಲ್ ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ ಪದಾರ್ಥಗಳು, ಸರಿಯಾದ ಸೋಂಕು ನಿವಾರಣಾ ದ್ರಾವಣದ ಆಯ್ಕೆಯು ಬಹಳ ಮುಖ್ಯವೆಂದು ತೋರಿಸಿದವು. PureVision™ ಸಿಲಿಕೋನ್ ಹೈಡ್ರೋಜೆಲ್ ಲೆನ್ಸ್ ಗಳ ಜೊತೆಗೆ ಬಳಕೆ ಮಾಡಬಾರದಂತಹ ಒಂದು ಉತ್ಪನ್ನವೆಂದರೆ(ಬಾಷ್ & ಲಾಂಬ್, ರಾಚೆಸ್ಟರ್, NY) Allergan Ultracare Disinfecting System™(ಅಲ್ಲೆರ್ಜನ್, Inc., ಇರ್ವಿನೆ, CA) ಅಥವಾ ಇದರ ಯಾವುದೇ ಸಂಯೋಜನೆಗಳು(ಅಲ್ಟ್ರಾಕೇರ್ ಡಿಸ್ಇನ್ಫೆಕ್ಟಿಂಗ್ ಸಲ್ಯೂಶನ್, ಅಲ್ಟ್ರಾಕೇರ್ ನ್ಯೂಟ್ರಲೈಜಿಂಗ್ ಟ್ಯಾಬ್ಲೆಟ್ಸ್, ಲೆನ್ಸ್ ಪ್ಲಸ್ ಡೈಲಿ ಕ್ಲೀನರ್, ಹಾಗು ಅಲ್ಟ್ರಾಜೈಮ್ ಎಂಜೈಮ್ಯಾಟಿಕ್ ಕ್ಲೀನರ್), ಏಕೆಂದರೆ ಇವುಗಳನ್ನು PureVision ಲೆನ್ಸ್ ಗಳೊಂದಿಗೆ ಬಳಸುವುದು ಸೂಕ್ತವಲ್ಲ.[೫೪][೫೫]

ಪ್ರಸಕ್ತ ಸಂಶೋಧನೆ[ಬದಲಾಯಿಸಿ]

ಪ್ರಸಕ್ತದ ಕಾಂಟ್ಯಾಕ್ಟ್ ಲೆನ್ಸ್ ಬಗೆಗಿನ ಸಂಶೋಧನೆಯ ಒಂದು ದೊಡ್ಡ ವಿಭಾಗವು, ಕಾಂಟ್ಯಾಕ್ಟ್ ಲೆನ್ಸ್ ನ ಮಾಲಿನ್ಯ ಹಾಗು ಬಾಹ್ಯ ಸೂಕ್ಷ್ಮಜೀವಿಗಳ ಸಂಗ್ರಹದ ಪರಿಸ್ಥಿತಿಗಳನ್ನು ತಡೆಯುವುದು ಹಾಗು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡುವುದರ ಬಗ್ಗೆ ನಿರ್ದೇಶಿಸುತ್ತದೆ. ಕಾಂಟ್ಯಾಕ್ಟ್ ಲೆನ್ಸ್ ನ ಧಾರಣೆಯಿಂದ ಉಂಟಾಗುವ ಗಮನಾರ್ಹ ಸಮಸ್ಯೆಯೆಂದರೆ ಮೈಕ್ರೋಬಿಯಲ್ ಕೆರಟೈಟಿಸ್(ಪಾರದರ್ಶಕ ಪಟಲದ ಉರಿಯೂತ) ಹಾಗು ಅತ್ಯಂತ ಪ್ರಮುಖವಾದ ಸೂಕ್ಷ್ಮಜೀವಿ ರೋಗಕಾರಕವೆಂದರೆ ಸ್ಯುಡೊಮೊನಸ್ ಏರುಗಿನೋಸ .[೫೬] ಎಂದು ಪ್ರಾಯೋಗಿಕ ಚಿಕಿತ್ಸಕರು ಸಾಮಾನ್ಯವಾಗಿ ಅಂಗೀಕರಿಸಿದ್ದಾರೆ. ಕಾಂಟ್ಯಾಕ್ಟ್ ಲೆನ್ಸ್ ನ ಧಾರಣೆಯಲ್ಲಿ ಬ್ಯಾಕ್ಟೀರಿಯ ಕೆರಟೈಟಿಸ್ ನೊಂದಿಗೆ ಇತರ ಜೀವಿಗಳೂ ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ, ಆದಾಗ್ಯೂ ವಿಭಿನ್ನ ನೆಲೆಗಳಲ್ಲಿ ಅವುಗಳ ವ್ಯಾಪಕತೆಯು ಬದಲಾಗುತ್ತದೆ. ಇವುಗಳು ಸ್ಟ್ಯಾಫಿಲಕಾಕಸ್ (ಸಾಮಾನ್ಯವಾಗಿ ಚರ್ಮದ ಮೇಲೆ ಕುರು ಉಂಟುಮಾಡುವ ಗೋಲಾಕಾರದ ಬ್ಯಾಕ್ಟೀರಿಯ) (ಔರೆಯಸ್ ಹಾಗು ಎಪಿಡರ್ಮಿಡಿಸ್ ) ಹಾಗು ಸ್ಟ್ರೆಪ್ಟಾಕಾಕಸ್ (ಸರಪಣಿ ಆಕಾರದ ಸೂಕ್ಷ್ಮಾಣುಜೀವಿ) ಎರಡೂ ಜಾತಿಗಳನ್ನು ಒಳಗೊಂಡಿರುತ್ತವೆ.[೫೭][೫೮] ಪ್ರಸಕ್ತ ಸಂಶೋಧನೆಯು ಮೈಕ್ರೋಬಿಯಲ್ ಕೆರಟೈಟಿಸ್ ನ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿತು, ಇದಕ್ಕೆ ಕಾರಣ ಕಣ್ಣಿಗೆ ಇದು ವಿನಾಶಕಾರಿ ಪರಿಣಾಮ ಉಂಟುಮಾಡುವ ಸಾಮರ್ಥ್ಯ ಹೊಂದಿದೆ, ಇದರಲ್ಲಿ ತೀವ್ರತರವಾಗಿ ದೃಷ್ಟಿಯ ನಾಶವೂ ಸೇರಿದೆ.[೫೯]

ಸಂಶೋಧನೆಯಲ್ಲಿ ಕುತೂಹಲಕಾರಿಯಾದ ಒಂದು ನಿರ್ದಿಷ್ಟ ವಿಷಯವೆಂದರೆ ಸ್ಯೂಡೋಮೊನಸ್ ಏರುಗಿನೋಸ ದಂತಹ ಸೂಕ್ಷ್ಮಜೀವಿಗಳು ಕಣ್ಣಿಗೆ ಹೇಗೆ ಆಕ್ರಮಣ ಮಾಡುತ್ತವೆ ಹಾಗು ಸೋಂಕನ್ನು ಉಂಟುಮಾಡುತ್ತದೆ ಎನ್ನುವುದಾಗಿದೆ. ಆದಾಗ್ಯೂ ಮೈಕ್ರೋಬಿಯಲ್ ಕೆರಟೈಟಿಸ್ ನ ರೋಗೋತ್ಪತ್ತಿ ಬಗ್ಗೆ ಹೆಚ್ಚಾಗಿ ಗ್ರಹಿಸಲಾಗಿಲ್ಲ, ಹಲವು ವಿವಿಧ ಅಂಶಗಳ ಬಗ್ಗೆ ತನಿಖೆ ನಡೆಸಲಾಗಿದೆ. ಸಂಶೋಧಕರ ಒಂದು ಗುಂಪು, ಪಾರದರ್ಶಕ ಪಟಲದಲ್ಲಿನ ಆಮ್ಲಜನಕದ ಕೊರತೆ(ಹೈಪೋಕ್ಸಿಯ)ಯು ಪಾರದರ್ಶಕ ಪಟಲದ ಎಪಿತೀಲಿಯಂಗೆ ಬಂಧಿತವಾದ ಸ್ಯೂಡೋಮೊನಸ್ ಗಳನ್ನು ಉಲ್ಬಣಗೊಳಿಸುತ್ತವೆ ಮತ್ತು ಸೂಕ್ಷ್ಮಜೀವಿಗಳ ಆಂತರಿಕಗೊಳಿಸುವಿಕೆ, ಹಾಗು ಉರಿಯೂತ ಪ್ರತಿಕ್ರಿಯೆಯ ಚೋದನಗಳನ್ನು ಉಲ್ಬಣಿಸುತ್ತದೆಂದು ತೋರಿಸಿದೆ.[೬೦] ಆಮ್ಲಜನಕದ ಕೊರತೆಯನ್ನು ಪರಿಹರಿಸುವ ಒಂದು ಮಾರ್ಗವೆಂದರೆ, ಪಾರದರ್ಶಕ ಪಟಲಕ್ಕೆ ಅಧಿಕ ಪ್ರಮಾಣದ ಆಮ್ಲಜನಕವನ್ನು ರವಾನಿಸುವುದು. ಆದಾಗ್ಯೂ ಸಿಲಿಕೋನ್-ಹೈಡ್ರೋಜೆಲ್ ಲೆನ್ಸ್ ಗಳು ರೋಗಿಗಳಲ್ಲಿರುವ ಆಮ್ಲಜನಕದ ಕೊರತೆಯನ್ನು ಬಹುತೇಕವಾಗಿ ತೊಲಗಿಸುತ್ತವೆ ಏಕೆಂದರೆ ಇವುಗಳು ಅಧಿಕ ಮಟ್ಟದ ಆಮ್ಲಜನಕವನ್ನು ಕಣ್ಣಿಗೆ ಸಾಗಗೊಡುತ್ತವೆ.[೬೧] ಆದರೆ ಇವು ಬ್ಯಾಕ್ಟೀರಿಯಾ ಮಾಲಿನ್ಯತೆಗೆ ಹಾಗು ಪಾರದರ್ಶಕ ಪಟಲದ ಒಳಗೆ ವ್ಯಾಪಿಸುವುದನ್ನು ತಡೆಯಲು ಸಾಂಪ್ರದಾಯಿಕ ಹೈಡ್ರೋಜೆಲ್ ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ ಗಳಿಗಿಂತ ಪರಿಣಾಮಕಾರಿ ವೇದಿಕೆ ಒದಗಿಸುತ್ತದೆ. ಒಂದು ಇತ್ತೀಚಿನ ಅಧ್ಯಯನವು, ಸ್ಯೂಡೋಮೊನಸ್ ಏರುಗಿನೋಸ ಹಾಗು ಸ್ಟ್ಯಾಫಿಲಕಾಕಸ್ ಎಪಿಡರ್ಮಿಸ್ ಗಳು, ಸಾಂಪ್ರದಾಯಿಕ ಹೈಡ್ರೋಜೆಲ್ ಕಾಂಟ್ಯಾಕ್ಟ್ ಲೆನ್ಸ್ ಗಳಿಗಿಂತ ಬಲವಾಗಿ ಸಿಲಿಕೋನ್ ಹೈಡ್ರೋಜೆಲ್ ಕಾಂಟ್ಯಾಕ್ಟ್ ಲೆನ್ಸ್ ಗಳಿಗೆ ಅಂಟಿಕೊಳ್ಳುತ್ತವೆ. ಜೊತೆಗೆ ಸ್ಟ್ಯಾಫಿಲಕಾಕಸ್ ಎಪಿಡರ್ಮಿಡಿಸ್ ಅಂಟಿಕೊಳ್ಳುವುದಕ್ಕಿಂತ 20 ಪಟ್ಟು ಬಲವಾಗಿ ಸ್ಯೂಡೋಮೊನಸ್ ಏರುಗಿನೋಸ ಅಂಟಿಕೊಳ್ಳುತ್ತದೆ.[೬೨] ಇದರಿಂದಾಗಿ ಸ್ಯೂಡೋಮೊನಸ್ ಸೋಂಕುಗಳು ಹೆಚ್ಚು ಪ್ರಬಲವಾಗಿರಲು ಕಾರಣವೆಂದು ವಿವರಿಸಬಹುದು.

ಕಾಂಟ್ಯಾಕ್ಟ್ ಲೆನ್ಸ್ ಸಂಶೋಧನೆಯ ಒಂದು ಪ್ರಮುಖ ವಿಭಾಗವು ರೋಗಿಯ ಅನುವರ್ತನೆಯ ಬಗ್ಗೆ ಸಂಬಂಧಿಸಿರುತ್ತದೆ. ಕಾಂಟ್ಯಾಕ್ಟ್ ಲೆನ್ಸ್ ನ ಬಳಕೆಯನ್ನು ಸುತ್ತುವರೆದಿರುವ ಒಂದು ಪ್ರಮುಖ ವಿಷಯವೆಂದರೆ ಅನುವರ್ತನೆ ಏಕೆಂದರೆ ರೋಗಿಯ ಅನನುವರ್ತನೆಯು ಸಾಮಾನ್ಯವಾಗಿ ಲೆನ್ಸ್ ನ, ಸಂಗ್ರಹಣ ಡಬ್ಬಿ, ಅಥವಾ ಎರಡರ ಮಲಿನತೆಗೆ ದಾರಿ ಮಾಡಿಕೊಡುತ್ತದೆ.[೬೩][೬೪][೬೫] ವಿವಿಧೋದ್ದೇಶ ದ್ರಾವಣಗಳ ಪರಿಚಯ ಹಾಗು ಪ್ರತಿನಿತ್ಯ ಬಳಸಿ ಬಿಸಾಡಬಹುದಾದ ಲೆನ್ಸ್ ಗಳು ಅಸಮರ್ಪಕ ಶುದ್ದಿಯಿಂದ ಉಂಟಾಗುವ ಕೆಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯಕವಾಗಿದೆ. ಆದರೆ ಸೂಕ್ಷ್ಮಜೀವಿಗಳಿಂದ ಉಂಟಾಗುವ ಮಾಲಿನ್ಯವನ್ನು ತೊಡೆದುಹಾಕಲು ಹೊಸ ವಿಧಾನಗಳನ್ನು ಪ್ರಸಕ್ತದಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ. ಬೆಳ್ಳಿದಿಂದ ವ್ಯಾಪ್ತವಾಗಿರುವ ಲೆನ್ಸ್ ಡಬ್ಬಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಲೆನ್ಸ್ ನ ಡಬ್ಬಿಯ ಜೊತೆ ಸಂಪರ್ಕಕ್ಕೆ ಬರುವ ಸೂಕ್ಷ್ಮಜೀವಿಗಳಿಂದ ಮಲಿನವಾಗುವ ಸಂಭಾವ್ಯತೆಯನ್ನು ತೊಲಗಿಸುವಲ್ಲಿ ಸಹಾಯಕವಾಗಿದೆ.[೬೬] ಇದರ ಜೊತೆಯಲ್ಲಿ, ಸೂಕ್ಷ್ಮಜೀವಿ ಪ್ರತಿರೋಧಕ ಕಾರಕಗಳನ್ನೂ ಸಹ ಅಭಿವೃದ್ದಿಪಡಿಸಲಾಗುತ್ತಿದೆ, ಇವುಗಳನ್ನು ಕಾಂಟ್ಯಾಕ್ಟ್ ಲೆನ್ಸ್ ನೊಳಗೆ ಸೇರಿಸಲಾಗುತ್ತದೆ. ಸೆಲೆನಿಯಂ ಅಣುಗಳಿಂದ ಕೋವೇಲೆನ್ಸಿ ರೀತಿಯಲ್ಲಿ ಸೇರಿಕೊಂಡ ಕಾಂಟ್ಯಾಕ್ಟ್ ಲೆನ್ಸ್ ಗಳು ಒಂದು ಮೊಲದ ಕಣ್ಣಿನ ಪಾರದರ್ಶಕ ಪಟಲಕ್ಕೆ ಯಾವುದೇ ಅಡ್ಡಪರಿಣಾಮವನ್ನು ಬೀರದೆ ಬ್ಯಾಕ್ಟೀರಿಯದ ಸಂಗ್ರಹಣೆಯನ್ನು ಕಡಿಮೆ ಮಾಡುತ್ತದೆ ಎಂಬುದು ಕಂಡುಬಂದಿದೆ[೬೭] ಜೊತೆಗೆ ಕಾಂಟ್ಯಾಕ್ಟ್ ಲೆನ್ಸ್ ನ ಬಾಹ್ಯತಲ ಸಾಂದ್ರತಾಹ್ರಾಸಕವಾಗಿ(ಸರ್ಫಾಕ್ಟಂಟ್) ಬಳಕೆಯಾಗುವ ಆಕ್ಟಿಲ್‍‌ಗ್ಲುಕೋಸೈಡ್ ಗಳು ಬ್ಯಾಕ್ಟೀರಿಯಾದ ಸಂಸಕ್ತಿಯನ್ನು ಪರಿಣಾಮಕಾರಿ ರೀತಿಯಲ್ಲಿ ತಗ್ಗಿಸುತ್ತದೆ.[೬೮] ಈ ಸಂಯುಕ್ತಗಳು ಕಾಂಟ್ಯಾಕ್ಟ್ ಲೆನ್ಸ್ ತಯಾರಕರಲ್ಲಿ ವಿಶೇಷವಾದ ಆಸಕ್ತಿಯನ್ನು ಹುಟ್ಟಿಸಿದೆ ಜೊತೆಗೆ ಇದನ್ನು ದೃಷ್ಟಿಮಾಪನಕಾರರು ಸಹ ಸೂಚಿಸುತ್ತಾರೆ ಏಕೆಂದರೆ ಬ್ಯಾಕ್ಟೀರಿಯ ಸಂಗ್ರಹಣೆಯ ಪ್ರಭಾವವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ರೋಗಿಯ ಯಾವುದೇ ಅನುವರ್ತನೆಯ ಅಗತ್ಯವಿರುವುದಿಲ್ಲ.

ಇದನ್ನು ಸಹ ನೋಡಿ[ಬದಲಾಯಿಸಿ]

 • ಬಯೋನಿಕ್ ಕಾಂಟ್ಯಾಕ್ಟ್ ಲೆನ್ಸ್
 • ದೋಷಸರಿಪಡಿಸುವ ಮಸೂರಗಳು
 • ಕನ್ನಡಕದ ಲಿಖಿತ ಸೂಚಿ
 • ದೃಷ್ಟಿಯ ತೀಕ್ಷ್ಣತೆ

ಉಲ್ಲೇಖಗಳು[ಬದಲಾಯಿಸಿ]

 1. "ಆರ್ಕೈವ್ ನಕಲು". Archived from the original on 2010-11-24. Retrieved 2010-10-08.
 2. ೨.೦ ೨.೧ ೨.೨ ಬಾರ್ರ್, J. " Archived 2011-09-28 ವೇಬ್ಯಾಕ್ ಮೆಷಿನ್ ನಲ್ಲಿ.2004 ಆನ್ಯುಯಲ್ ರಿಪೋರ್ಟ್" Archived 2011-09-28 ವೇಬ್ಯಾಕ್ ಮೆಷಿನ್ ನಲ್ಲಿ.. ಕಾಂಟ್ಯಾಕ್ಟ್ ಲೆನ್ಸ್ ಸ್ಪೆಕ್ಟ್ರಂ . ಜನವರಿ, 2005.
 3. ನ್ಯಾಷನಲ್ ಕನ್ಸ್ಯೂಮರ್ ಅಫ್ಫೇರ್ಸ್ ಸೆಂಟರ್ ಆಫ್ ಜಪಾನ್. NCAC ನ್ಯೂಸ್ ಸಂಪುಟ. 12, ನಂ. 4 Archived 2012-03-04 ವೇಬ್ಯಾಕ್ ಮೆಷಿನ್ ನಲ್ಲಿ.. NCAC ನ್ಯೂಸ್ . ಮಾರ್ಚ್ 2001.
 4. ಸೋಕೊಲ್ JL, ಮಿಯೇರ್ MG, ಬ್ಲೂಮ್ S, ಅಸ್ಬೆಲ್ PA. "ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಜನಸಂಖ್ಯೆಯಲ್ಲಿ ತಾಳ್ಮೆಯ ಅನುವರ್ತನ ಬಗ್ಗೆ ಒಂದು ಅಧ್ಯಯನ." CLAO J. 1990 ಜುಲೈ-ಸೆಪ್ಟೆಂಬರ್;16(3):209-13. PMID 2379308
 5. ಹೆಯಿಟ್ಜ್, RF ಹಾಗು ಎನೋಚ್, J. M. (1987) "ಲಿಯೋನಾರ್ಡೊ ಡಾ ವಿಂಚಿ: ಆನ್ ಅಸೆಸ್ಮೆಂಟ್ ಆನ್ ಹಿಸ್ ಡಿಸ್ಕೊರ್ಸಸ್ ಆನ್ ಇಮೇಜ್ ಫಾರ್ಮೇಶನ್ ಇನ್ ದಿ ಐ." ಅಡ್ವಾನ್ಸಸ್ ಇನ್ ಡಯಾಗ್ನೋಸ್ಟಿಕ್ ವಿಷುವಲ್ ಆಪ್ಟಿಕ್ಸ್ 19—26, ಸ್ಪ್ರಿಂಗರ್-ವೆರ್ಲಾಗ್.
 6. "ದಿ ಹಿಸ್ಟರಿ ಆಫ್ ಕಾಂಟ್ಯಾಕ್ಟ್ ಲೆನ್ಸಸ್. Archived 2008-10-11 ವೇಬ್ಯಾಕ್ ಮೆಷಿನ್ ನಲ್ಲಿ. eyeTopics.com. ಅಕ್ಟೋಬರ್ 18, 2006ರಲ್ಲಿ ಮರುಸಂಪಾದಿಸಲಾಗಿದೆ.
 7. "ಕಾಂಟ್ಯಾಕ್ಟ್ ಲೆನ್ಸ್ ಕೌನ್ಸಿಲ್". Archived from the original on 2008-12-08. Retrieved 2010-10-08.
 8. ಪಿಯರ್ಸನ್ RM, ಎಫ್ರೋನ್ N. ಹಂಡ್ರೆಡ್ಥ್ ಆನಿವರ್ಸರಿ ಆಫ್ ಆಗಸ್ಟ್ ಮುಲ್ಲರ್'ಸ್ ಇನಾಗರಲ್ ಡಿಸರ್ಟೆಶನ್ ಆನ್ ಕಾಂಟ್ಯಾಕ್ಟ್ ಲೆನ್ಸಸ್ . ಸರ್ವ್ ಆಪ್ತಾಲ್ಮೋಲ್. 1989 ಸೆಪ್ಟೆಂಬರ್-ಅಕ್ಟೋಬರ್;34(2):133-41. PMID 2686057
 9. Hellemans, Alexander; Bunch, Bryan (1988). The Timetables of Science. Simon & Schuster. p. 367. ISBN 0671621300.
 10. ರಾಬರ್ಟ್ B. ಮನ್ಡೆಲ್. ಕಾಂಟ್ಯಾಕ್ಟ್ ಲೆನ್ಸ್ ಪ್ರ್ಯಾಕ್ಟಿಸ್ , 4ನೇ ಆವೃತ್ತಿ. ಚಾರ್ಲ್ಸ್ C. ಥಾಮಸ್, ಸ್ಪ್ರಿಂಗ್ಫೀಲ್ಡ್, IL, 1988.
 11. U.S. ಪೇಟೆಂಟ್ ನಂ. 2,510,438, ೧೯೪೮ ಫೆಬ್ರವರಿ 28ರಲ್ಲಿ ದಾಖಲು ಮಾಡಲಾಗಿದೆ.
 12. "ದಿ ಕಾರ್ನಿಯಲ್ ಲೆನ್ಸ್", ದಿ ಆಪ್ಟಿಶಿಯನ್ , ಸೆಪ್ಟೆಂಬರ್ 2, 1949, ಪುಟಗಳು. 141–144.
 13. "ಕಾರ್ನಿಯಲ್ ಕಾಂಟ್ಯಾಕ್ಟ್ ಲೆನ್ಸಸ್", ದಿ ಆಪ್ಟಿಶಿಯನ್ , ಸೆಪ್ಟೆಂಬರ್ 9, 1949, ಪುಟ. 185.
 14. "ನ್ಯೂ ಕಾಂಟ್ಯಾಕ್ಟ್ ಲೆನ್ಸ್ ಫೈಟ್ಸ್ ಪ್ಯೂಪಿಲ್ ಓನ್ಲಿ", ದಿ ನ್ಯೂಯಾರ್ಕ್ ಟೈಮ್ಸ್ , ಫೆಬ್ರವರಿ 11, 1952, ಪುಟ.27.
 15. Pearce, Jeremy (2007-09-23). "Norman Gaylord, 84; helped develop type of contact lens". (New York Times News Service). The Boston Globe. Retrieved 2007-10-06. {{cite web}}: Italic or bold markup not allowed in: |publisher= (help)
 16. ವಿಚ್ಟೆರ್ಲೇ O, ಲಿಮ್, D. "ಜೈವಿಕ ಬಳಕೆಗಾಗಿ ಹೈಡ್ರೋಫಿಲಿಕ್ ಜೆಲ್‌ಗಳು". ನೇಚರ್‌ . 1960; 185:117–118.
 17. ಅಗರ್ವಾಲ್, ರಿಷಿ K. (1972), ಸಮ್ ಥಾಟ್ಸ್ ಆನ್ ಸಾಫ್ಟ್ ಲೆನ್ಸಸ್, ದಿ ಕಾಂಟ್ಯಾಕ್ಟ್ ಲೆನ್ಸ್, ಸಂಪುಟ 4, ನಂಬರ್ 1, ಪುಟ 28.
 18. ಸಂಪಾದಕೀಯ ಟಿಪ್ಪಣಿ (1988), ಅಮೆರಿಕನ್ ಜರ್ನಲ್ ಆಫ್ ಆಪ್ಟೋಮೆಟ್ರಿ ಅಂಡ್ ಫಿಸಿಯೋಲಾಜಿಕಲ್ ಆಪ್ಟಿಕ್ಸ್, ಸಂಪುಟ 65, ನಂಬರ್ 9, ಪುಟ 744.
 19. ೧೯.೦ ೧೯.೧ "Looking at Silicone Hydrogels Across Generations". Optometric Management. Archived from the original on ಜುಲೈ 19, 2011. Retrieved April 5, 2009.
 20. ""ವಾಟ್ ಆರ್ ದಿ ಟೈಪ್ಸ್ ಆಫ್ ಕಾಂಟ್ಯಾಕ್ಟ್ ಲೆನ್ಸಸ್?"". Archived from the original on 2011-07-15. Retrieved 2010-10-08.
 21. ""ಡಿಫರೆಂಟ್ ಟೈಪ್ಸ್ ಆಫ್ ಕಾಂಟ್ಯಾಕ್ಟ್ ಲೆನ್ಸಸ್."". Archived from the original on 2008-09-08. Retrieved 2010-10-08.
 22. ಹಾರ್ಟೆನ್ಬೂಮ್ NP, ಸ್ಟ್ಯಾಕ್ CM."ಬಣ್ಣದ ದೃಷ್ಟಿ ಕೊರತೆ ಮತ್ತು ದಿ X-ಕ್ರೋಮ್ ಲೆನ್ಸ್." ಆಕ್ಯುಪ್ ಹೆಲ್ತ್ ಸಾಫ್. 1997 ಸೆಪ್ಟೆಂಬರ್;66(9):36-40, 42. PMID 9314196
 23. ಸ್ವಾರ್ಬ್ರಿಕ್ HA, ನ್ಗುಯೇನ್ P, ನ್ಗುಯೇನ್ T, ಫಾಮ್ P. ದಿ X-ಕ್ರೋಮ್ ಲೆನ್ಸ್. ಆನ್ ಸೀಯಿಂಗ್ ರೆಡ್. ಸರ್ವ್ ಆಪ್ತಲ್ಮೊಲ್. 1981 ಮಾರ್ಚ್-ಏಪ್ರಿಲ್;25(5):312-24. PMID 6971497.
 24. ಸ್ವಾರ್ಬ್ರಿಕ್ HA, ನ್ಗುಯೇನ್ P, ನ್ಗುಯೇನ್ T, ಫಾಮ್ P. " ದಿ ChromaGen ಕಾಂಟ್ಯಾಕ್ಟ್ ಲೆನ್ಸ್ ಸಿಸ್ಟಂ: ಬಣ್ಣದ ದೃಷ್ಟಿ ಪರೀಕ್ಷೆಯ ಫಲಿತಾಂಶಗಳು ಮತ್ತು ವಸ್ತುನಿಷ್ಠ ಪ್ರತಿಕ್ರಿಯೆಗಳು." ಆಪ್ತಾಲ್ಮಿಕ್ ಫಿಸಿಯೋಲ್ ಆಪ್ಟ್. 2001 May;21(3):182-96. PMID 11396392
 25. ಹ್ಯಾರಿಸ್ D "ಕಲರಿಂಗ್ ಸೈಟ್: ಏ ಸ್ಟಡಿ ಆಫ್ CL ಫಿಟ್ಟಿಂಗ್ಸ್ ವಿಥ್ ಕಲರ್ ಎನ್ಹ್ಯಾನ್ಸಿಂಗ್ ಲೆನ್ಸಸ್" 'ಆಪ್ಟಿಶಿಯನ್' 8 ಜೂನ್ 1997
 26. ಹ್ಯಾರಿಸ್ DA, MacRow-ಹಿಲ್ ಸಜ್ "ಅಪ್ಲಿಕೇಶನ್ ಆಫ್ ChromaGen ಹಾಪ್ಲೋಸ್ಕೊಪಿಕ್ ಲೆನ್ಸಸ್ ಟು ಪೇಷೆಂಟ್ಸ್ ವಿಥ್ ಡಿಸ್ಲೆಕ್ಸಿಯ: ಏ ಡಬಲ್ ಮಾಸ್ಕ್ಡ್ ಪ್ಳಸೆಬೋ ಕಂಟ್ರೋಲ್ಡ್ ಟ್ರಯಲ್" ಜರ್ನಲ್ ಆಫ್ ದಿ ಅಮೇರಿಕನ್ ಆಪ್ಟೋಮೆಟ್ರಿಕ್ ಅಸೋಸಿಯೇಶನ್ 25/10/99.
 27. "ಏ ಗೈಡ್ ಟು ಥಿಯೇಟ್ರಿಕಲ್ ಕಾಂಟ್ಯಾಕ್ಟ್ ಲೆನ್ಸಸ್" Archived 2009-03-01 ವೇಬ್ಯಾಕ್ ಮೆಷಿನ್ ನಲ್ಲಿ. eyecontactguide.com 31 ಡಿಸೆಂಬರ್ 2006ರಲ್ಲಿ ಮರುಸಂಪಾದಿಸಲಾಗಿದೆ.
 28. ಮೋರ್ಗನ್ PB ಮತ್ತಿತರರು." Archived 2011-06-14 ವೇಬ್ಯಾಕ್ ಮೆಷಿನ್ ನಲ್ಲಿ."ಇಂಟರ್ನ್ಯಾಷನಲ್ ಕಾಂಟ್ಯಾಕ್ಟ್ ಲೆನ್ಸ್ ಪ್ರಿಸ್ಕ್ರೈಬಿಂಗ್ ಇನ್ 2004: 2004ರಲ್ಲಿ 14 ರಾಷ್ಟ್ರಗಳ 17 ,000ಕ್ಕಿಂತ ಹೆಚ್ಚು ಕಾಂಟಾಕ್ಟ್ ಲೆನ್ಸ್‌ಗಳ ವಿಶ್ಲೇಷಣೆಯಿಂದ ವಿಶ್ವಾದ್ಯಂತ ಕಾಂಟಾಕ್ಟ್ ಲೆನ್ಸ್‌ನ ಅಭ್ಯಾಸದ ವೈವಿಧ್ಯತೆಯನ್ನು ಬಹಿರಂಗಗೊಳಿಸುತ್ತದೆ." Archived 2011-06-14 ವೇಬ್ಯಾಕ್ ಮೆಷಿನ್ ನಲ್ಲಿ. ಕಾಂಟ್ಯಾಕ್ಟ್ ಲೆನ್ಸ್ ಸ್ಪೆಕ್ಟ್ರಂ. ಜನವರಿ, 2005.
 29. "ಆರ್ಕೈವ್ ನಕಲು". Archived from the original on 2010-04-27. Retrieved 2010-10-08.
 30. "EyeMDLink.com". Archived from the original on 2008-04-09. Retrieved 2010-10-08.
 31. "45 COVERAGE ISSUES - SUPPLIES - DRUGS 11-91 45" (PDF). Centers for Medicare and Medicaid Services. Archived from the original (PDF) on 2006-03-04. Retrieved 2006-03-01.
 32. ""ಕಾಂಟ್ಯಾಕ್ಟ್ ಲೆನ್ಸ್ ಎಂಪ್ಲಾಯ್ಡ್ ಫಾರ್ ಡ್ರಗ್ ಡೆಲಿವರಿ."". Archived from the original on 2008-12-05. Retrieved 2010-10-08.
 33. FDA ಪ್ರೀಮಾರ್ಕೆಟ್ ನೋಟಿಫಿಕೇಶನ್ ಫಾರ್ "ದಿನನಿತ್ಯದ ಬಳಕೆಗಾಗಿ ಹೊಸ ಸಿಲಿಕೋನ್ ಹೈಡ್ರೋಜೆಲ್" Archived 2008-10-03 ವೇಬ್ಯಾಕ್ ಮೆಷಿನ್ ನಲ್ಲಿ. 'ಜುಲೈ 2008.
 34. ಲೆಬೌ KA, ಗೋಲ್ಡ್ಬರ್ಗ್ JB. "ಒಂದು ದೃಷ್ಟಿಯ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸುವ ಪ್ರೆಸ್ಬಿಯೋಪಿಕ್ ರೋಗಿಗಳಲ್ಲಿ ದ್ವಿನೇತ್ರೀಯ ದೃಷ್ಟಿಯ ಲಕ್ಷಣವು ಕಂಡುಬಂದಿದೆ." J Am ಆಪ್ಟಂ ಅಸ್ಸೋಸಿ. 1975 ನವೆಂಬರ್;46(11):1116-23. PMID 802938
 35. ೩೫.೦ ೩೫.೧ ಕಾಸ್ಸಿನ್, B. ಹಾಗು ಸಾಲೋಮನ್, S. ಡಿಕ್ಷನರಿ ಆಫ್ ಐ ಟರ್ಮಿನಾಲಜಿ . ಗೈನ್ಸ್ವಿಲ್ಲೇ, ಫ್ಲೋರಿಡ: ಟ್ರೈಡ್ ಪಬ್ಲಿಷಿಂಗ್ ಕಂಪನಿ, 1990.
 36. ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್‌ಗಳ ತಯಾರಿಕೆ. "ಮ್ಯಾನ್ಯುಫ್ಯಾಕ್ಚರ್ ಆಫ್ ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸಸ್".
 37. ಫೆಡರಲ್ ಟ್ರೇಡ್ ಕಮಿಷನ್. "ದಿ ಸ್ಟ್ರೆಂತ್ ಆಫ್ ಕಾಂಪಿಟಿಶನ್ ಇನ್ ದಿ ಸೆಲ್ ಆಫ್ Rx ಕಾಂಟ್ಯಾಕ್ಟ್ ಲೆನ್ಸಸ್: ಆನ್ FTC ಸ್ಟಡಿ". Archived 2010-10-22 ವೇಬ್ಯಾಕ್ ಮೆಷಿನ್ ನಲ್ಲಿ. ಫೆಬ್ರವರಿ, 2005.
 38. ೩೮.೦ ೩೮.೧ "ಫೆರ್ನೆಸ್ಸ್ ಟು ಕಾಂಟ್ಯಾಕ್ಟ್ ಲೆನ್ಸ್ ಕನ್ಸ್ಯೂಮರ್ಸ್ ಆಕ್ಟ್" Archived 2011-07-21 ವೇಬ್ಯಾಕ್ ಮೆಷಿನ್ ನಲ್ಲಿ. ಅಕ್ಟೋಬರ್‌ 15, 2003.
 39. ೩೯.೦ ೩೯.೧ ಜಾನ್ ಸ್ಟಾಮ್ಲರ್. "ಕಾಂಟ್ಯಾಕ್ಟ್ ಲೆನ್ಸ್ ಕಾಂಪ್ಲಿಕೇಷನ್ಸ್." eMedicine.com. ಸಪ್ಟೆಂಬರ್ 1, 2004
 40. Efron N (2007). "Contact lens-induced changes in the anterior eye as observed in vivo with the confocal microscope". Prog Retin Eye Res. 26 (4): 398–436. doi:10.1016/j.preteyeres.2007.03.003. PMID 17498998. {{cite journal}}: Unknown parameter |month= ignored (help)
 41. Liu Z, Pflugfelder SC (2000). "The effects of long-term contact lens wear on corneal thickness, curvature, and surface regularity". Ophthalmology. 107 (1): 105–11. doi:10.1016/S0161-6420(99)00027-5. PMID 10647727. {{cite journal}}: Unknown parameter |month= ignored (help)
 42. Hollingsworth JG, Efron N (2004). "Confocal microscopy of the corneas of long-term rigid contact lens wearers". Cont Lens Anterior Eye. 27 (2): 57–64. doi:10.1016/j.clae.2004.02.002. PMID 16303530. {{cite journal}}: Unknown parameter |month= ignored (help)
 43. Zhivov A, Stave J, Vollmar B, Guthoff R (2007). "In vivo confocal microscopic evaluation of langerhans cell density and distribution in the corneal epithelium of healthy volunteers and contact lens wearers". Cornea. 26 (1): 47–54. doi:10.1097/ICO.0b013e31802e3b55. PMID 17198013. Archived from the original on 2012-05-28. Retrieved 2010-10-08. {{cite journal}}: Unknown parameter |month= ignored (help)CS1 maint: multiple names: authors list (link)
 44. "Contact lens wearers warned about eye fungus". Archived from the original on 2010-12-31. Retrieved 2006-08-07.
 45. Hiti, K; Walochnik, J; Haller-Schober, E M; Faschinger, C; Aspöck, H (February 2002). "Viability of Acanthamoeba after exposure to a multipurpose disinfecting contact lens solution and two hydrogen peroxide systems". British Journal of Ophthalmology. 86 (2): 144–146. doi:10.1136/bjo.86.2.144. PMC 1771011. PMID 11815336.
 46. ಅರ್ಲಿ ರಿಪೋರ್ಟ್ ಆಫ್ ಸೀರಿಯಸ್ ಐ ಇನ್ಫೆಕ್ಷನ್ಸ್ ಅಸೋಸಿಯೇಟೆಡ್ ವಿಥ್ ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ ಸಲ್ಯೂಶನ್ Archived 2007-05-31 ವೇಬ್ಯಾಕ್ ಮೆಷಿನ್ ನಲ್ಲಿ.. CDC ಹೆಲ್ತ್ ಅಡ್ವೈಸರಿ. ಮೇ 25, 2007 CDCHAN-00260-2007-05-25-ADV-N
 47. ಅಕಾಂಥಮೀಬ ಕೆರಟೈಟಿಸ್ --- ಮಲ್ಟಿಪಲ್ ಸ್ಟೇಟ್ಸ್, 2005--2007. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ MMWR ಡಿಸ್ಪ್ಯಾಚ್. May 26, 2007 / 56(ಡಿಸ್ಪ್ಯಾಚ್);1-3
 48. Hughes, Reanne; Kilvington, Simon (July 2001). "Comparison of Hydrogen Peroxide Contact Lens Disinfection Systems and Solutions against Acanthamoeba polyphaga". Antimicrobial Agents and Chemotherapy. 45 (7): 50–57. doi:10.1128/AAC.45.7.2038-2043.2001. PMC 90597. PMID 11408220. Archived from the original on 2010-10-15. Retrieved 2010-10-08.
 49. "How Optical Ultrasonic Cleaners Work". {{cite journal}}: Cite journal requires |journal= (help)
 50. White, Gina. "Caring for Soft Contact Lenses". {{cite journal}}: Cite journal requires |journal= (help)
 51. Ward, Michael. "Soft Contact Lens Care Products". Archived from the original on 2010-12-09. Retrieved 2010-10-08. {{cite journal}}: Cite journal requires |journal= (help)
 52. "ಕಾಂಟ್ಯಾಕ್ಟ್ ಲೆನ್ಸ್ ವೇರಿಂಗ್ ಗೈಡ್". Archived from the original on 2010-09-17. Retrieved 2010-10-08.
 53. ವಿಲ್ಸನ್-ಹೊಲ್ಟ್ N, ಡರ್ಟ್ JK. "ಥಿಯೋಮರ್ಸಲ್ ಕೆರಟೋಕಾಂಜಂಕ್ಟಿವಿಟಿಸ್, ಫ್ರೀಕ್ವೆನ್ಸಿ, ಕ್ಲಿನಿಕಲ್ ಸ್ಪೆಕ್ಟ್ರಂ ಅಂಡ್ ಡಯಾಗ್ನೋಸಿಸ್." ಐ. 1989;3 (Pt 5):581–7. PMID 2630335
 54. PureVision™ (ಬಾಲಫಿಲ್ಕಾನ್ A) ಪ್ಯಾಕೇಜ್ ಇನ್ಸರ್ಟ್. ಬಾಷ್ & ಲಾಂಬ್; ರಾಚೆಸ್ಟರ್, NY. [೧][೨]
 55. ಸಿಂಡರ್, C. ಸಿಲಿಕೋನ್ ಹೈಡ್ರೋಜೆಲ್ ಲೆನ್ಸಸ್: Q&A ವಿಥ್ ಬಾಶ್ಚ್ & ಲಾಂಬ್ ಹಾಗು CIBA ವಿಷನ್. ICLC. 2000;27:158–64.
 56. ರಾಬರ್ಟ್ಸನ್, DM, ಪೆಟ್ರೋಲ್, WM, ಜೆಸ್ಟರ್, JV & ಕಾವನಗ್ಹ್, HD: ಕರೆಂಟ್ ಕಾನ್ಸೆಪ್ಟ್ಸ್: ಕಾಂಟ್ಯಾಕ್ಟ್ ಲೆನ್ಸ್ ರಿಲೇಟೆಡ್ ಸ್ಯೂಡೋಮೊನಸ್ ಕೆರಟೈಟಿಸ್. ಕಾಂಟ್ ಲೆನ್ಸ್ ಆಂಟಿರಿಯರ್ ಐ , 30: 94–107, 2007.
 57. ಶರ್ಮ, S, ಕುನಿಮೋಟೋ, D, ರಾವ್, N, ಗರ್ಗ್, P & ರಾವ್, G: ಟ್ರೆಂಡ್ಸ್ ಇನ್ ಆಂಟಿಬಯೋಟಿಕ್ ರೆಸಿಸ್ಟೆನ್ಸ್ ಆಫ್ ಕಾರ್ನಿಯಲ್ ಪ್ಯಾತೋಜನ್ಸ್: ಭಾಗ II. ಆನ್ ಅನಾಲಿಸಿಸ್ ಆಫ್ ಲೀಡಿಂಗ್ ಬ್ಯಾಕ್ಟಿರಿಯಲ್ ಕೆರಟೈಟಿಸ್ ಐಸೊಲೆಟ್ಸ್, 1999.
 58. ವರ್ಹೆಲ್ಸ್ಟ್ D, ಕೊಪ್ಪೆನ್ C, ಲೂವೆರೆನ್ JV, ಮೆಹೆಯುಸ್ ಅ, ಟಸ್ಸಿಗ್ನೋನ್ ಮ್ (2005) ಕ್ಲಿನಿಕಲ್, ಎಪಿಡೆಮಿಯೋಲಾಜಿಕಲ್ ಅಂಡ್ ಕಾಸ್ಟ್ ಆಸ್ಪೆಕ್ಟ್ಸ್ ಆಫ್ ಕಾಂಟ್ಯಾಕ್ಟ್ ಲೆನ್ಸ್ ರಿಲೇಟೆಡ್ ಇನ್ಫೆಕ್ಷಿಯಸ್ ಕೆರಟೈಟಿಸ್ ಇನ್ ಬೆಲ್ಜಿಯಂ: ರಿಸಲ್ಟ್ಸ್ ಆಫ್ ಏ ಸೆವೆನ್-ಇಯರ್ ರೆಟ್ರೋಸ್ಪ್ಕೆಟಿವ್ ಸ್ಟಡಿ. ಬುಲ್ ಸೊಕ್ ಬೆಲ್ಗೆ ಆಪ್ಥಾಲ್ಮೊಲ್ 297:7–15.
 59. ಬುರ್ಡ್ EM, ಒಗವಾ GSH, ಹಿಂಡಿಯುಕ್ ರ. ಬ್ಯಾಕ್ಟೀರಿಯ ಕೆರಟೈಟಿಸ್ ಅಂಡ್ ಕಾಂಜಂಕ್ಟಿವಿಟಿಸ್. ಇನ್: ಸ್ಮೊಲಿನ್ G, ತ್ಹೊಫ್ಟ್ RA, ಸಂಪಾದಕರು. ದಿ ಕಾರ್ನಿಯ . ಸೈಂಟಿಫಿಕ್ ಫೌಂಡೆಶನ್ಸ್ ಅಂಡ್ ಕ್ಲಿನಿಕಲ್ ಪ್ರ್ಯಾಕ್ಟಿಸ್ . 3ನೇ ಆವೃತ್ತಿ. ಬಾಸ್ಟನ್: ಲಿಟಲ್, ಬ್ರೌನ್, & ಕೋ, 1994. ಪುಟ 115-67.
 60. ಜೈದಿ, T, ಮೊವ್ರೆಯ್-ಮ್ಯಾಕ್ಕೀ, M & ಪಿಯೆರ್, ಗಬ್: ಆಮ್ಲಜನಕದ ಕೊರತೆಯು CFTRನ ಪಾರದರ್ಶಕ ಪಟಲದ ಕೋಶ ಹಿಂಡುವಿಕೆಯನ್ನು ಹೆಚ್ಚಿಸುತ್ತದೆ.ಇದರಿಂದ ಸೂಡೋಮೋನಾಸ್ ಎರುಗಿನೋಸಾ ಅಂಟಿಕೊಳ್ಳುವಿಕೆ, ಆಂತರಿಕಗೊಳಿಸುವಿಕೆ ಮತ್ತು ಉರಿಯೂತ ಆರಂಭ ಹೆಚ್ಚುತ್ತದೆ. Invest Ophthalmol Vis Sci , 45: 4066–74, 2004.
 61. ಸ್ವೀನಿ DF, ಕೇಯ್ L, ಜಲ್ಬರ್ಟ್ I. ಕ್ಲಿನಿಕಲ್ ಪರ್ಫಾರ್ಮೆನ್ಸ್ ಆಫ್ ಸಿಲಿಕೋನ್ ಹೈಡ್ರೋಜೆಲ್ ಲೆನ್ಸಸ್. ಇನ್ ಸ್ವೀನಿ DF, ಸಂಪಾದನೆ. ಸಿಲಿಕೋನ್ ಹೈಡ್ರೋಜೆಲ್ಸ್: ದಿ ರೀಬರ್ಥ್ ಆಫ್ ಕಂಟಿನ್ಯೂಯಸ್ ವೇರ್ ಕಾಂಟ್ಯಾಕ್ಟ್ ಲೆನ್ಸಸ್. ವೊಬರ್ನ್, Ma: ಬಟರ್ವರ್ತ್ ಹೆಯಿನೆಮಂನ್; 2000.
 62. ಕೊಡ್ಜಿಕಿಯನ್, ಲ, ಕಾಸೋಲಿ-ಬರ್ಜರಾನ್, E, ಮಲೆಟ್, F, ಜಾನಿನ್-ಮನಿಫಿಕಾಟ್, ಹ, ಫ್ರೆನೆಯ್, J, ಬುರಿಲ್ಲೋನ್, C, ಕಾಲಿನ್, J & ಸ್ಟೇಗೆನ್ಸ್, JP: ಕನ್ವೆನ್ಶನಲ್ ಹೈಡ್ರೋಜೆಲ್ ಮತ್ತು ನ್ಯೂ ಸಿಲಿಕಾನ್ ಹೈಡ್ರೋಜೆಲ್ ಕಾಂಟ್ಯಾಕ್ಟ್ ಲೆನ್ಸ್ ವಸ್ತುಗಳಿಗೆ ಬ್ಯಾಕ್ಟೀರಿಯ ಅಂಟಿಕೊಳ್ಳುವಿಕೆ. ಗ್ರಯೇಫೆಸ್ ಆರ್ಚ್ ಕ್ಲೀನ್ ಎಕ್ಸ್ಪ್ ಆಪ್ಥಲ್ಮಾಲ್ , 246: 267–73, 2008.
 63. ಯುಂಗ್ ಮಸ್, ಬೂಸ್ಟ್ M, ಚೋ P, ಯಾಪ್ M, ಹಾಂಕಾಂಗ್‌ನಲ್ಲಿ ಕಾಂಟಾಕ್ಟ್ ಲೆನ್ಸ್‌ನ ಸೂಕ್ಷ್ಮಜೀವಿ ಮಲಿನತೆ ಹಾಗು ಸಾಫ್ಟ್ ಕಾಂಟಾಕ್ಟ್ ಲೆನ್ಸ್ ಧಾರಕರ ಲೆನ್ಸ್ ಪೋಷಿಸುವ ಪರಿಕರಗಳು (ಯುನಿವರ್ಸಿಟಿ ಸ್ಟೂಡೆಂಟ್ಸ್) ಆಪ್ಥಾಲ್ಮಿಕ್ ಅಂಡ್ ಫಿಸಿಯೋಲಾಜಿಕಲ್ ಆಪ್ಟಿಕ್ಸ್ , 2007 ಜನವರಿ;27(1):11–21.
 64. J. ಮಿಡೆಲ್ಫಾರ್ಟ್, A. ಮಿಡೆಲ್ಫಾರ್ಟ್ ಹಾಗು L. ಬೆವನ್ಜರ್, ವೈದ್ಯ ವಿದ್ಯಾರ್ಥಿಗಳ ನಡುವೆ ಕಾಂಟಾಕ್ಟ್ ಲೆನ್ಸ್ ಡಬ್ಬಿಗಳ ಸೂಕ್ಷ್ಮಜೀವಿ ಮಲಿನತೆ,CLAO J 22 (1996) (1), ಪುಟಗಳು. 21–24.
 65. T.B. ಗ್ರೆಯ್, R.T. ಕರ್ಸಂಸ್, J.F. ಶೆರ್ವಾನ್ ಹಾಗು P.R. ರೋಸ್,ಕಾಂಟಾಕ್ಟ್ ಲೆನ್ಸ್ ಸಂಗ್ರಹ ಡಬ್ಬಿಗಳ ಅಕಾಂಥಮೀಬ, ಬ್ಯಾಕ್ಟೀರಿಯಲ್, ಹಾಗು ಫಂಗಲ್ ಮಲಿನತೆBr J ಆಪ್ಥಲ್ಮೊಲ್ 79 (1995), ಪುಟಗಳು. 601–605.
 66. ಅಮೋಸ್, CF & ಜಾರ್ಜ್, MD: ಕ್ಲಿನಿಕಲ್ ಅಂಡ್ ಲ್ಯಾಬೋರೇಟರಿ ಟೆಸ್ಟಿಂಗ್ ಆಫ್ ಏ ಸಿಲ್ವರ್-ಇಮ್ಪ್ರೇಗ್ನೆಟೆದ್ ಲೆನ್ಸ್ ಕೇಸ್. ಕಾಂಟ್ ಲೆನ್ಸ್ ಆನ್ತೀರಿಯರ್ ಐ , 29: 247-55, 2006.
 67. ಮ್ಯಾಥ್ಯೂಸ್, SM, ಸ್ಪಲ್ಹೊಲ್ಜ್, JE, ಗ್ರಿಮ್ಸನ್, ಮಜ್, ಡುಬಿಯೆಲ್ಜಿಗ್, RR, ಗ್ರೆಯ್, T & ರೆಯಿಡ್, TW: ಕೋವೆಲೆನ್ಸಿ ಅಂಟಿಸಿದ ಸೆಲೆನಿಯಂನಿಂದ ಕಾಂಟಾಕ್ಟ್ ಲೆನ್ಸ್‌ಗಳ ಬ್ಯಾಕ್ಟೀರಿಯ ಸಂಗ್ರಹದ ನಿವಾರಣೆ ಹಾಗೂ ಮೊಲದ ಕಾರ್ನಿಯ ಮೇಲೆ ಪರಿಣಾಮಗಳು. ಕಾರ್ನಿಯ , 25: 806–14, 2006.
 68. ಸಾಂಟೋಸ್, L, ರೋಡ್ರಿಗ್ಸ್, D, ಲಿರ, M, ಒಲಿವಿಯೇರ, R, ರಿಯಲ್ ಒಲಿವಿಯೇರ, ME, ವಿಲರ್, EY & ಅಜೆರೆಡೊ, J: ದಿ ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸಸ್‌ಗೆ ಸ್ಟ್ಯಾಫಿಲೋಕಾಕಸ್ ಎಪಿಡರ್ಮಿಡಿಸ್ ಅಂಡ್ ಸ್ಯೂಡೋಮೊನಸ್ ಏರುಗಿನೋಸ ಅಂಟುವಿಕೆಯಿಂದ ಆಕ್ಟಿಲ್‌ಗ್ಲೂಕೋಸೈಡ್ ಮತ್ತು ಸೋಡಿಯಂ ಕ್ಲೋರೇಟ್‌ನ ಪರಿಣಾಮ. Optom Vis Sci , 84: 429–34, 2007.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

 • ಎಫ್ರೋನ್, ನಾಥನ್ (2002). ಕಾಂಟ್ಯಾಕ್ಟ್ ಲೆನ್ಸ್ ಪ್ರ್ಯಾಕ್ಟಿಸ್ , ಎಲ್ಸೆವಿಯೇರ್ ಹೆಲ್ತ್ ಸೈನ್ಸಸ್. ISBN 0-7506-4690-X.

ಹೊರಗಿನ ಕೊಂಡಿಗಳು[ಬದಲಾಯಿಸಿ]