ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1999
1994 ← | ಏಪ್ರಿಲ್ 20, 2004 ಏಪ್ರಿಲ್ 26, 2004 |
→ 2004 |
ಎಲ್ಲಾ 224 ವಿಧಾನಸಭಾ ಸ್ಥಾನಗಳಿಗೂ ಚುನಾವಣೆ | ||
ಬಹುಮತ ಪಡೆದ ಪಕ್ಷ | ಪ್ರಮುಖ ವಿರೋಧ ಪಕ್ಷ | |
ನಾಯಕ | ಎಸ್ ಎಮ್ ಕೃಷ್ಣ | ಬಿ.ಎಸ್. ಯಡಿಯೂರಪ್ಪ |
ಪಕ್ಷ | ಕಾಂಗ್ರೆಸ್ | ಭಾಜಪ |
ನಾಯಕನ ಕ್ಷೇತ್ರ | ಮದ್ದೂರು | ಶಿಕಾರಿಪುರ |
ಹಿಂದಿನ ಸ್ಥಾನಗಳು | 34 | 40 |
ಈಗ ಗೆದ್ದ ಸ್ಥಾನಗಳು | 132 | 44 |
ಸ್ಥಾನ ಬದಲಾವಣೆ | 98 | 4 |
ಹಿಂದಿನ ಮುಖ್ಯಮಂತ್ರಿ | ಚುನಾಯಿತ ಮುಖ್ಯಮಂತ್ರಿ | |
ಜೆ ಹೆಚ್ ಪಟೇಲ್ ಜೆಡಿ (ಯು) | ಎಸ್ ಎಮ್ ಕೃಷ್ಣ ಕಾಂಗ್ರೆಸ್ |
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1999 ಕರ್ನಾಟಕದ 224 ಅಸೆಂಬ್ಲಿ ಸ್ಥಾನಗಳಿಗೆ ಅಕ್ಟೋಬರ್ 1999ರಲ್ಲಿ ನಡೆಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 132 ಸ್ಥಾನ ಪಡೆಯುವ ಮೂಲಕ ಮೆಜಾರಿಟಿ ಪಡೆಯಿತು. ಭಾರತೀಯ ಜನತಾ ಪಾರ್ಟಿ ಮತ್ತು ಜನತಾ ದಳ (ಯುನೈಡ್) ಗಳು ಇದ್ದ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) 63 ಸ್ಥಾನಗಳನ್ನಷ್ಟೇ ಪಡೆಯಿತು. ಹೆಚ್. ಡಿ. ದೇವಗೌಡ ನೇತೃತ್ವದ ಜನತಾ ದಳ (ಜಾತ್ಯಾತೀತ) ಕೇವಲ 10 ಸ್ಥಾನಗಳನ್ನು ಪಡೆಯುವ ಮೂಲಕ ನೆಲಕಚ್ಚಿತು. ವಿಧಾನಸಭೆಯ ಚುನಾವಣೆ ಲೋಕಸಭಾ ಚುನಾವಣೆಗಳೊಂದಿಗೆ ನಡೆಯಿತು. ಹಿಂದಿನ ವಿಧಾನಸಬೆಯ ಚುನಾವಣೆಗಳು ನವೆಂಬರ್ 26 ಮತ್ತು ಡಿಸೆಂಬರ್ 1 1994 ನಡೆದಿದ್ದು ಜನತಾದಳ ಅಧಿಕಾರಕ್ಕೆ ಬಂದಿತ್ತು (ನೋಡಿ). ಆದರೆ 5 ವರುಷಗಳ ಅವಧಿ ಮುಗಿಯುವ ಮುನ್ನವೇ ಜನತಾ ದಳದ ವಿಭನೆಯಿಂದಾಗಿ ಚುನಾವಣೆ ಎದುರಿಸ ಬೇಕಾಯಿತು. ಮುಖ್ಯಮಂತ್ರಿ ಜೆ. ಹೆಚ್. ಪಟೇಲ್ ಗುಂಪು ಜನತಾ ದಳ (ಯುನೈಟೆಡ್) ಸೇರಿತು ಮತ್ತು ದೇವೇಗೌಡ ನೇತೃತ್ವದ ಜನತಾ ದಳ ಗುಂಪು ಜನತಾ ದಳ (ಜಾತ್ಯಾತೀತ) ಎಂದು ಹೆಸರು ಪಡೆಯಿತು. ಎರಡೂ ಜನತಾ ದಳಗಳ ವಿರುದ್ಧದ ಅಧಿಕಾರ ವಿರೋಧಿ ಅಲೆಯ ಪರಿಣಾಮವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು ಮತ್ತು ಅಕ್ಟೋಬರ್ 11 1999ರಂದು ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಪಲಿತಾಂಶ
[ಬದಲಾಯಿಸಿ]ಪಕ್ಷಗಳು | ಸ್ಪರ್ದಿಸಿದ ಸ್ಥಾನಗಳು |
ಗೆಲುವು | ಠೇವಣಿ ನಷ್ಟ | ಒಟ್ಟಾರೆ ಮತಗಳು | ಶೇಕಡವಾರು ಮತಗಳು |
---|---|---|---|---|---|
ಭಾರತ ರಾಷ್ಟ್ರೀಯ ಕಾಂಗ್ರೆಸ್ | 222 | 132 | 8 | 9 077 815 | 40.84 |
ಭಾರತೀಯ ಜನತಾ ಪಕ್ಷ | 149 | 44 | 37 | 4 598 741 | 20.69 |
ಜನತಾ ದಳ (ಯು) | 112 | 18 | 38 | 3 006 253 | 13.53 |
ಜನತಾ ದಳ (ಜಾತ್ಯಾತೀತ) | 203 | 10 | 148 | 2 316 885 | 10.42 |
ಎಡಿಎಮ್‌ಕೆ | 13 | 1 | 12 | 39 865 | 0.18 |
ಇತರ ಪಕ್ಷಗಳು | 166 | 0 | 159 | 519 496 | 2.33 |
ಪಕ್ಷೇತರರು | 476 | 19 | 416 | 2 666 444 | 12.00 |
ಮೊತ್ತ | 1341 | 224 | 818 | 22 225 499 | 99.99 |
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ. |
ಆಧಾರಗಳು
[ಬದಲಾಯಿಸಿ]- Karnataka Legislative Assembly election 1999 retrived on 2016-11-29
- Karnataka Legislative Assembly election 1994 retrived on 2016-11-29
- The split and the wait, Frontline, Volume 16 - Issue 16, Jul. 31 - Aug. 13, 1999, retrieved on 2016-11-29