ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುವಲ್ ಫಂಡ್
ಸಂಸ್ಥೆಯ ಪ್ರಕಾರ | Public |
---|---|
ಸ್ಥಾಪನೆ | 1993 |
ಮುಖ್ಯ ಕಾರ್ಯಾಲಯ | Mumbai, India |
ವ್ಯಾಪ್ತಿ ಪ್ರದೇಶ | India |
ಪ್ರಮುಖ ವ್ಯಕ್ತಿ(ಗಳು) | Mr. Nimesh Shah[೧] (Managing Director & CEO), Mr. S. Naren[೨] (Chief Investment Officer), Mr. Rahul Goswami (Chief Investment Officer - Fixed Income) |
ಉದ್ಯಮ | Mutual Funds |
ಉತ್ಪನ್ನ | Mutual Fund, Portfolio Management Services, Advisory Services, Real Estate Investments |
ಒಟ್ಟು ಆಸ್ತಿ | ₹೧,೭೫,೮೮೧ ಕೋಟಿ (ಯುಎಸ್$೩೯.೦೫ ಶತಕೋಟಿ) (March 31, 2016) |
ಉದ್ಯೋಗಿಗಳು | 1000-1500 |
ಜಾಲತಾಣ | www |
ಐಸಿಐಸಿಐ ಪ್ರೂಡೆನ್ಷಿಯಲ್ ಅಸ್ಸೆಟ್ ಮ್ಯಾನೇಜ್‌ಮಂಟೆ ಕಂಪೆನಿ ಲಿ., ಎಂಬುದು ದೇಶದ ಅತ್ಯಂತ ದೊಡ್ಡ ಅಸ್ಸೆಟ್ ಮ್ಯಾನೇಜ್‌ಮಂಟ್ ಕಂಪನಿಗಳಲ್ಲಿ (AMC) ಒಂದಾಗಿದ್ದು, ಇದು ಹಣದ ಉಳಿತಾಯಗಳು ಮತ್ತು ಹಣ ಹೂಡಿಕೆಗಳ ನಡುವಿನ ಅಂತರವನ್ನು ದೂರಮಾಡಲು ಮತ್ತು ಸರಳ ಹಾಗೂ ಸಮಂಜಸವಾದ ಹಣ ಹೂಡಿಕೆಯ ಪರಿಹಾರಗಳ ಶ್ರೇಣಿಯ ಮೂಲಕ ಹಣ ಹೂಡಿಕೆದಾರರಿಗೆ ದೀರ್ಘಕಾಲೀನ ಸಂಪತ್ತನ್ನು ಸೃಷ್ಟಿಸಲು ಕೆಲಸ ಮಾಡುತ್ತದೆ.[೩][೪]
ಇತಿಹಾಸ
[ಬದಲಾಯಿಸಿ]ಅ. ಮೂಲ
[ಬದಲಾಯಿಸಿ]ಏಎಮ್‌ಸಿ ಎಂಬುದು ಭಾರತದಲ್ಲಿ ಅರ್ಥಿಕ ಸೇವೆಗಳಿಗಾಗಿ ಪ್ರಖ್ಯಾತವಾಗಿರುವ ಮತ್ತು ವಿಶ್ವಾಸಪಾತ್ರವಾಗಿರುವ ಐಸಿಐಸಿಐ ಬ್ಯಾಂಕ್ ಮತ್ತು ಯುಕೆ-ಯ ಆರ್ಥಿಕ ಸೇವೆಗಳ ರಂಗದಲ್ಲಿನ ಅತ್ಯಂತ ದೊಡ್ಡ ಕಂಪನಿಗಳಲ್ಲಿ ಒಂದಾಗಿರುವ ಪ್ರೂಡೆನ್ಷಿಯಲ್ ಪಿಐಸಿ, ಇವೆರಡರ ಜಂಟಿ ಉದ್ಯಮವಾಗಿದೆ.
ಇದರ ಕಾರ್ಪೊರೇಟ್ ಆಫಿಸ್ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್, ಮುಂಬಯಿ, ಭಾರತದಲ್ಲಿದ್ದು ಇದು ಪ್ರಮಾಣದಲ್ಲಿ ಗಣನೀಯ ಬೆಳವಣಿಗೆಯನ್ನು ಕಂಡಿದೆ; ಈ ಜಂಟಿ ಉದ್ಯಮವು 1998ರಲ್ಲಿ ಆರಂಭವಾದಾಗ ಇದು 2 ಸ್ಥಳಗಳು ಮತ್ತು 6 ನೌಕರರನ್ನು ಹೊಂದಿತ್ತು; ಈಗ ಇದು 120 ಸ್ಥಳಗಳು ಮತ್ತು 1000ಕ್ಕಿಂತ ನೌಕರರನ್ನು ಹೊಂದಿದ್ದು 19 ಲಕ್ಷಕ್ಕೂ ಹೆಚ್ಚು ಹಣ ಹೂಡಕೆದಾರರಿಗೆ ಆರ್ಥಿಕ ಸೇವೆಗಳನ್ನು ಒದಗಿಸುತ್ತಿದೆ.[೫]
ಸಂಪೂರ್ಣವಾಗಿ ಹಣ ಹೂಡಿಕೆದಾರ ಕೇಂದ್ರಿತ ದೃಷ್ಟಿಯನ್ನು ಹೊಂದಿದ್ದು, ಈ ಸಂಸ್ಥೆಯ ಇವತ್ತು ಹಣ ಹೂಡಿಕೆಯ ತಜ್ಞತೆ, ಸಂಪನ್ಮೂಲಗಳ ವೈಶಾಲ್ಯ ಮತ್ತು ಹಣ ಹೂಡಿಕೆಯ ಕ್ರಮವನ್ನು ಪರಿಚಯಿಸುವುದರ ಸೂಕ್ತ ಮಿಶ್ರಣವಾಗಿದೆ.
ಸಂಸ್ಥೆ
[ಬದಲಾಯಿಸಿ]ನಿರ್ದೇಶಕರ ಮಂಡಲಿ: ಅಸ್ಸೆಟ್ ಮ್ಯಾನೇಜ್‌ಮೆಂಟ್ ಕಂಪನಿ
- ಶ್ರೀಮತಿ ಚಂದಾ ಕೊಚ್ಛಾರ್ - ಆಧ್ಯಕ್ಷರು
- ಶ್ರೀ ಸುರೇಶ್ ಕುಮಾರ್
- ಶ್ರೀ ವಿಜಯ್ ಠಕ್ಕರ್
- ಶ್ರೀ ಎನ್.ಎಸ್. ಕಣ್ಣನ್
- ಶ್ರೀ ಸಿ.ಆರ್. ಮುರಲೀಧರನ್
- ಶ್ರೀ ನಿಮೇಷ್ ಶಾ[೭]
- ಶ್ರೀ ಗೈ ಸ್ಟ್ರಾಪ್
- ಶ್ರೀಮತಿ ಲಕ್ಮಿ ವೆಂಕಟಾಚಲಮ್
- ಶ್ರೀ ಎನ್. ನರೇನ್
ಆಡಳಿತದ ತಂಡ
- ಶ್ರೀ ಬಿ. ರಾಮಕೃಷ್ಣ – ಎಕ್ಸೆಕ್ಯುಟಿವ್ ವೈಸ್ ಪ್ರೆಸಿಡಂಟ್
- ಶ್ರೀ ರಾಘವ ಅಯ್ಯಂಗಾರ್ – ಎಕ್ಸೆಕ್ಯುಟಿವ್ ವೈಸ್ ಪ್ರೆಸಿಡಂಟ್ ಮತ್ತು ಹೆಡ್ ಆಫ್ ರೀಟೇಲ್ ಆ್ಯಂಡ್ ಇನ್‌ಸ್ಟಿಟ್ಯೂಶನಲ್ ಬಿಸಿನೆಸ್
- ಶ್ರೀ ಹೇಮಂತ್ ಅಗರ್‌ವಾಲ್ – ಹೆಡ್ ಆಫ್ ಆಪರೇಶನ್ಸ್
- ಶ್ರೀ ವಿವೇಕ್ ಶ್ರೀಧರನ್ – ಹೆಡ್ ಆಫ್ ಇನ್‌ಸ್ಟಿಟ್ಯೂಶನಲ್ ಬಿಸಿನೆಸ್
- ಶ್ರೀ ಅಮರ್ ಶಾ – ಹೆಡ್ ಆಫ್ ರೀಟೀಲ್ ಬಿಸಿನೆಸ್
- ಶ್ರೀಮತಿ ಸುಪ್ರಿಯಾ ಸಪ್ರೆ ಹೆಡ್ ಆಫ್ ಕಂಪ್ಲೈಯನ್ಸ್ ಆ್ಯಂಡ್ ಲೀಗಲ್
- ಶ್ರೀ ಅಭಿಜಿತ್ ಶಾ – ಹೆಡ್ ಆಫ್ ಮಾರ್ಕೆಟಿಂಗ್, ಡಿಜಿಟಲ್ ಆ್ಯಂಡ್ ಕಸ್ಟಮರ್ ಎಕ್ಸ್‌ಪೀರಿಯನ್ಸ್
- ಶ್ರೀ ಅಮಿತ್ ಭೋಸಳಿ – ಹೆಡ್ ಆಫ್ ರಿಸ್ಕ್ ಮ್ಯಾನೇಜ್‌ಮಂಟ್
- ಶ್ರೀ ನಿಖಿಲ್ ಭೇಂಡೆ – ಹೆಡ್ ಆಫ್ ಹ್ಯೂಮನ್ ರಿಸೋರ್ಸಸ್
- ಶ್ರೀ ಆದಿಲ್ ಭಕ್ಷಿ – ಹೆಡ್ ಆಫ್ ಪಬ್ಲಿಕ್ ರಿಲೇಶನ್ಸ್ ಆ್ಯಂಡ್ ಕಮ್ಯುನಿಕೇಶನ್
- ಶ್ರೀ ಲಲಿತ್ ಪೋಪ್ಲಿ – ಹೆಡ್ ಆಫ್ ಇನ್‌ಫರ್ಮೇಶನ್ ಟೆಕ್ನಾಲಜಿ
- ಶ್ರೀ ರಾಹುಲ್ ರಾಯ್ – ಹೆಡ್, ರಿಯಲ್ ಎಸ್ಟೇಟ್ ಬಿಸಿನೆಸ್
ಹಣ ಹೂಡಿಕೆಯ ನಿರ್ವಹಣೆ
- ಶ್ರೀ ಎಸ್. ನರೇನ್ - ಎಕ್ಸೆಕ್ಯುಟಿವ್ ಡೈರೆಕ್ಟರ್ ಮತ್ತು ಚೀಫ್ ಇನ್‌ವೆಸ್ಟ್‌ಮೆಂಟ್ ಆಫೀಸರ್ [೮]
- ಶ್ರೀ ರಾಹುಲ್ ಗೋಸ್ವಾಮಿ – ಚೀಫ್ ಇನ್‌ವೆಸ್ಟ್‌ಮೆಂಟ್ ಆಫೀಸರ್ - ಫಿಕ್ಸ್‌ಡ್ ಇನ್‌ಕಮ್
- ಶ್ರೀ ರಾಹುಲ್ ರಾಯ್ – ಹೆಡ್, ರಿಯಲ್ ಎಸ್ಟೇಟ್ ಬಿಸಿನೆಸ್
ಪ್ರಾಡಕ್ಟ್‌ಗಳು ಮತ್ತು ಸರ್ವೀಸ್‌ಗಳು
[ಬದಲಾಯಿಸಿ]ಏಎಮ್‌ಸಿ-ಯು ಬೇರೆಬೇರೆ ಅಸ್ಸೆಟ್ ವರ್ಗಗಳಲ್ಲಿನ ಮ್ಯೂಚುಯಲ್ ಫಂಡ್ ವಿಭಾಗದಲ್ಲಿ ಗಣನೀಯ ಅಸ್ಸೆಟ್ಸ್ ಅಂಡರ್ ಮ್ಯಾನೇಜ್‌ಮಂಟ್‌ಗಳನ್ನು (AUM) ನಿರ್ವಹಿಸುತ್ತದೆ. ಏಎಮ್‌ಸಿ-ಯು ದೇಶದಾದ್ಯಂತ ಹರಡಿಕೊಂಡಿರುವ ಹಣ ಹೂಡಿಕೆದಾರರಿಗೆ ಪೋರ್ಟ್‌ಫೋಲಿಯೇ ಸರ್ವೀಸ್‌ಗಳು ಮತ್ತು ರಿಯಲ್ ಎಸ್ಟೇಟ್ ವಿಭಾಗದ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ, ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟಿಗಳ ಗ್ರಾಹಕರಿಗೆ ಇಂಟರ್‌ನ್ಯಾಶನಲ್ ಅಡ್ವೈಸರಿ ಮ್ಯಾಂಡೇಟ್‌ಗಳನ್ನೂ ಒದಗಿಸುತ್ತದೆ.[೯][೧೦]
ಮ್ಯೂಚುಯಲ್ ಫಂಡ್
[ಬದಲಾಯಿಸಿ]ಮ್ಯೂಚುಯಲ್ ಫಂಡ್ ಮೂಲತಃ ರೀಟೇಲ್ (ಸಣ್ಣ ಪ್ರಮಾಣದ) ಹಣ ಹೂಡಿಕೆದಾರರಿಗೆ ನೆರವಾಗುತ್ತದೆ.[೧೧] ಅದು ರೀಟೇಲ್ ಹಣ ಹೂಡಿಕೆದಾರರಿಗೆ ಅವರ ಬದುಕಿನ ಉದ್ದೇಶಗಳನ್ನು ಸಾಧಿಸಲು ನೆರವಾಗುವಲ್ಲಿ ಸತತವಾಗಿ ಅವರಿಗೆ ಆರ್ಥಿಕ ಪರಿಹಾರೋಪಾಯಗಳನ್ನು ಒದಗಿಸುವ ಉದ್ದೇಶದಿಂದ ಕೆಲಸ ಮಾಡುತ್ತದೆ. ಐಸಿಐಸಿಐ ಪ್ರೂಡೆನ್ಷಿಯಲ್ ಏಎಮ್‌ಸಿ-ಯು ಗ್ರಾಹಕರ ಅವಶ್ಯಕತೆಗಳಿಗೆ ತಳುಕು ಹಾಕಿಕೊಂಡಿರುವ ಪ್ರಾಡಕ್ಟ್‌ಗಳನ್ನು ಪ್ರಸ್ತುತಪಡಿಸಿದ್ದು ಆವು ಮ್ಯೂಚುಯಲ್ ಫಂಡ್ ಪ್ರಾಡಕ್ಟ್‌ಗಳ ವೈವಿಧ್ಯಮಯ ಪೋರ್ಟ್‌ಫೋಲಿಯೋಗಳನ್ನು ಒಳಗೊಂಡಿವೆ.
ಪೋರ್ಟ್‌ಫೋಲಿಯೋ ಮ್ಯಾನೇಜ್‌ಮಂಟ್ ಸರ್ವೀಸ್‌ಗಳು
[ಬದಲಾಯಿಸಿ]ಪೋರ್ಟ್‌ಫೋಲಿಯೋ ಮ್ಯಾನೇಜ್‌ಮಂಟ್ ಸರ್ವೀಸ್‌ಗಳು ಒಟ್ಟು ಅಧಿಕ ಮೊತ್ತದ ಹಣ ಹೂಡಿಕೆ ಮಾಡುವವರಿಗೆ ಹೆಚ್ಚು ಪ್ರತಿಫಲಗಳನ್ನು (ರಿಟರ್ನ್ಸ್) ಪಡೆಯುವ ಉದ್ದೇಶದಿಂದ ಹೆಚ್ಚು ಕೇಂದ್ರೀಕೃತ ಪೋರ್ಟ್‌ಫೋಲಿಯೋದಲ್ಲಿ ಹಣ ತೊಡಗಿಸಲು ಅನುವು ಮಾಡಿಕೊಡುತ್ತವೆ. ಇಸವಿ 2000ದಲ್ಲಿ ಐಸಿಐಸಿಐ ಪ್ರೊಡೆನ್ಷಿಯಲ್ ಏಎಮ್‌ಸಿ-ಯು ಈ ಸರ್ವೀಸನ್ನು ಒದಗಿಸುವ ಮೊದಲ ಸಾಂಸ್ಥಿಕ ಪಾರ್ಟಿಸಿಪಂಟ್ ಆಗಿತ್ತು. ಈಗ ಇದು 10 ವರ್ಷಕ್ಕೊ ಹೆಚ್ಚಿನ ಯಶೋಪಥದಲ್ಲಿದೆ.[೧೨]
ರಿಯಲ್ ಎಸ್ಟೇಟ್ ಬಿಸಿನೆಸ್
[ಬದಲಾಯಿಸಿ]ಐಸಿಐಸಿಐ ಪ್ರೊಡೆನ್ಷಿಯಲ್ ಏಎಮ್‌ಸಿ-ಯು ಇಸವಿ 2007ರಲ್ಲಿ ರಿಯಲ್ ಎಸ್ಟೇಟ್ ಇನ್‌ವೆಸ್ಟ್‌ಮಂಟ್ ಸೀರೀಸ್ ಪೋರ್ಟ್‌ಫೋಲಿಯೋವನ್ನು ಆರಂಭಿಸಿತು. ಈ ರಿಯಲ್ ಎಸ್ಟೇಟ್ ವಿಭಾಗವು ಒಟ್ಟು ಅಧಿಕ ಮೊತ್ತದ ಹಣ ಹೂಡಿಕೆ ಮಾಡುವವರಿಗೆ ಮತ್ತು ದೇಶೀಯ ಸಾಂಸ್ಥಿಕ ಹಣ ಹೂಡಿಕೆದಾರರಿಂಗೆ ನೆರವಾಗುತ್ತದೆ.[೧೩]
ಅಂತರರಾಷ್ಟ್ರೀಯ ಅಡ್ವೈಸರಿ
[ಬದಲಾಯಿಸಿ]ಐಸಿಐಸಿಐ ಪ್ರೂಡೆನ್ಷಿಯಲ್ ಏಎಮ್‌ಸಿ-ಯಲ್ಲಿ ನಮ್ಮ ಹಣ ಹೂಡಿಕೆಯ ಸಲಹಾ ಸಮರ್ಥತೆಗಳನ್ನು ಜಾಗತಿಕ ಹಣ ಹೂಡಿಕೆದಾರರಿಗೆ ಒದಗಿಸಲು ನೆರವಾಗುವುದಕ್ಕಾಗಿಯೇ ಮೀಸಲಿಟ್ಟ ವಿದೇಶೀ ಅಡ್ವೈಸರಿ ಯೂನಿಟ್ಟನ್ನು ಹೊಂದಿದ್ದೇವೆ. ನಮ್ಮ ಸಂಸ್ಥೆಯ ಅಂತರರಾಷ್ಟ್ರೀಯ ಬಿಸಿನೆಸ್‌ನ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕೆಲವು ಮುಖ್ಯಾಂಶಗಳನ್ನು ಕೆಳಗೆ ಕೊಡಲಾಗಿದೆ -
- ಐಸಿಐಸಿಐ ಪ್ರೂಡೆನ್ಷಿಯಲ್ ಏಎಮ್‌ಸಿ-ಯು ಅಂತರರಾಷ್ಟ್ರೀಯ ಗ್ರಾಹಕರಿಗೆ ಸಲಹಾ ಸೇವೆಗಳನ್ನು ಒದಗಿಸುವ ಕೆಲವೇ ಭಾರತೀಯ ಏಎಮ್‌ಸಿಗಳಲ್ಲಿ ಒಂದಾಗಿದೆ.
- 2006ರಿಂದ ಯಶಸ್ವಿಯಾಗಿ ವಿದೇಶೀ ಸಲಹೆಯ ಬಿಸಿನೆಸ್
- ಜಪಾನ್, ಟೈವಾನ್, ಯೂರೋಪ್ ಮತ್ತು ಮಿಡ್ಲ್ ಈಸ್ಟ್-ನಂತಹ ಹಲವಾರು ದೇಶಗಳಲ್ಲಿ ನಮ್ಮ ಗ್ರಾಹಕರಿದ್ದಾರೆ
- ಫಂಡ್ ರಚನೆಗಳು ಮತ್ತು ಪ್ರತ್ಯೇಕ ಅಕೌಂಟ್‌ಗಳ ರೂಪದಲ್ಲಿ ವಿವಿಧ ಗ್ರಾಹಕ ವಿಭಾಗಗಳಿದ್ದು, ಇವು ಭಾರತೀಯ ಈಕ್ವಿಟಿಗಳು ಮತ್ತು ಫಿಕ್ಸ್‌ಡ್ ಇನ್‌ಕಮ್ ಪ್ರಕಾರಗಳನ್ನು ಒಳಗೊಳ್ಳುತ್ತವೆ.
ನಮ್ಮ ಪ್ರಮುಖ ಪ್ರತಿಸ್ಪರ್ಧಿಗಳು
[ಬದಲಾಯಿಸಿ]ಮ್ಯೂಚುಯಲ್ ಫಂಡ್ ವಿಭಾಗದಲ್ಲಿ ಐಸಿಐಸಿಐ ಪ್ರೂಡೆನ್ಷಿಯಲ್ ಮ್ಯೂಚುಯಲ್ ಫಂಡ್‌ನ ಕೆಲವು ಪ್ರತಿಸ್ಪರ್ಧಿಗಳೆಂದರೆ ಎಚ್‌ಡಿಎಫ್‌ಸಿ ಮ್ಯೂಚುಯಲ್ ಫಂಡ್, ರಿಲಯನ್ಸ್ ಮ್ಯೂಚುಯಲ್ ಫಂಡ್, ಎಸ್‌ಬಿಐ ಮ್ಯೂಚುಯಲ್ ಫಂಡ್, ಬಿರ್ಲಾ ಸನ್ ಲೈಫ್ ಮ್ಯೂಚುಯಲ್ ಫಂಡ್ ಮತ್ತು ಯೂಟಿಐ ಮ್ಯೂಚುಯಲ್ ಫಂಡ್.[೧೪]
ಉಲ್ಲೇಖಗಳು
[ಬದಲಾಯಿಸಿ]- ↑ "Budget 2016 must look at innovative ways to create demand & jobs, improve trade". Economic Indiatimes. 12 Feb 2016. Retrieved 5 July 2016.
- ↑ "This is a great year for mutual fund investors, a bad year for traders: S Naren, ICICI Prudential AMC". Economic Indiatimes. 12 Feb 2016. Retrieved 5 July 2016.
- ↑ "Average AUM". AMFI India. Retrieved 5 July 2016.
- ↑ "ICICI Prudential Long Term Equity: Top-class performer, consistently". The Hindu - BusinessLine. 13 Feb 2016. Retrieved 5 July 2016.
- ↑ "Mutual Fund". ICICI Prudential AMC. Archived from the original on 11 ಜುಲೈ 2016. Retrieved 5 July 2016.
- ↑ "Management Team". ICICI Prudential AMC. Archived from the original on 8 ಜುಲೈ 2016. Retrieved 5 July 2016.
- ↑ "Nimesh Shah: Make most of volatility". MydigitalFC. 19 Jun 2015. Archived from the original on 21 ಜೂನ್ 2015. Retrieved 5 July 2016.
- ↑ "Sankaran Naren of ICICI Prudential MF does things pre-mortem than post-mortem". Forbes India. 16 October 2012. Archived from the original on 17 ಸೆಪ್ಟೆಂಬರ್ 2016. Retrieved 5 July 2016.
- ↑ "About ICICI Prudential Mutual Funds". ICICI Prudential AMC. Archived from the original on 8 ಜುಲೈ 2016. Retrieved 5 July 2016.
- ↑ "Nimesh Shah, MD and CEO, ICICI Prudential Asset Management Views on Current State of Market". Indian SHare Tips. Retrieved 5 July 2016.
- ↑ "Q & A: Nimesh Shah, MD & CEO, ICICI Prudential AMC". Mutual Fund News Group. 13 October 2010. Retrieved 5 July 2016.
- ↑ "PMS (Portfolio Management services)". ICICI Prudential AMC. Archived from the original on 11 ಮೇ 2016. Retrieved 5 July 2016.
- ↑ "About Real Estate Investment". ICICI Prudential AMC. Archived from the original on 19 ಜುಲೈ 2016. Retrieved 5 July 2016.
- ↑ "Top Fund Houses". NDTV Profit. 18 Feb 2016. Archived from the original on 21 ಜೂನ್ 2016. Retrieved 5 July 2016.