ಉದ್ದಿನ ವಡೆ
| ಮೂಲ | |
|---|---|
| ಪರ್ಯಾಯ ಹೆಸರು(ಗಳು) | ತೂತು ವಡೆ, ಮೆದು ವಡಾ |
| ಮೂಲ ಸ್ಥಳ | ಭಾರತ |
| ಪ್ರಾಂತ್ಯ ಅಥವಾ ರಾಜ್ಯ | ದಕ್ಷಿಣ ಭಾರತ, ಶ್ರೀಲಂಕಾ |
| ವಿವರಗಳು | |
| ಸೇವನಾ ಸಮಯ | ಉಪಹಾರ |
| ನಮೂನೆ | ಕುರುಕಲು ತಿಂಡಿ |
| ಬಡಿಸುವಾಗ ಬೇಕಾದ ಉಷ್ಣತೆ | ಬಿಸಿಯಾಗಿ ( ಸಾಂಬಾರ್ ಮತ್ತು ಚಟ್ನಿಯೊಂದಿಗೆ) ಅಥವಾ ಸಾಮಾನ್ಯ ತಾಪಮಾನದಲ್ಲಿ ( ಮೊಸರಿನೊಂದಿಗೆ) |
| ಮುಖ್ಯ ಘಟಕಾಂಶ(ಗಳು) | ಉದ್ದಿನ ಬೇಳೆ, ಅಕ್ಕಿ |
ಉದ್ದಿನ ವಡೆ ಉದ್ದಿನ ಬೇಳೆಯಿಂದ ತಯಾರಿಸಿದ ದಕ್ಷಿಣ ಭಾರತದ ಉಪಹಾರ ತಿಂಡಿ. ಇದನ್ನು ಸಾಮಾನ್ಯವಾಗಿ ಡೋನಟ್ ಆಕಾರ/ಉಂಗುರದ ಆಕಾರದಲ್ಲಿ ತಯಾರಿಸಲಾಗುತ್ತದೆ. ಹೊರಗಿನಿಂದ ಗರಿಗರಿಯಾಗಿದ್ದು, ಮೃದುವಾದ ಒಳಭಾಗವನ್ನು ಹೊಂದಿರುತ್ತದೆ.[೧] ದಕ್ಷಿಣ ಭಾರತದ ಪಾಕಪದ್ಧತಿಯಲ್ಲಿ ಜನಪ್ರಿಯ ಆಹಾರ ಪದಾರ್ಥವಾಗಿದೆ [೨] ಇದನ್ನು ಸಾಮಾನ್ಯವಾಗಿ ಉಪಹಾರ ಅಥವಾ ಲಘು ಆಹಾರವಾಗಿ ಸೇವಿಸಲಾಗುತ್ತದೆ.[೧]
ಇತಿಹಾಸ
[ಬದಲಾಯಿಸಿ]ವೀರ್ ಸಾಂಘ್ವಿ ಅವರ ಪ್ರಕಾರ, ಉದ್ದಿನ ವಡೆಯ ಮೂಲವನ್ನು "ಸ್ವಲ್ಪ ಖಚಿತವಾಗಿ" ಇಂದಿನ ಕರ್ನಾಟಕದ ಮದ್ದೂರು ಪಟ್ಟಣದಲ್ಲಿ ಕಂಡುಹಿಡಿಯಬಹುದು. ಮುಂಬೈನ ಉಡುಪಿ ರೆಸ್ಟೋರೆಂಟ್‌ಗಳು ದಕ್ಷಿಣ ಭಾರತದ ಹೊರಗೆ ಈ ಖಾದ್ಯವನ್ನು ಜನಪ್ರಿಯಗೊಳಿಸಿದವು.[೩]
ತಯಾರಿ
[ಬದಲಾಯಿಸಿ]ಉದ್ದಿನ ವಡೆಯನ್ನು ಪ್ರಾಥಮಿಕವಾಗಿ ಉದ್ದಿನ ಬೇಳೆಯ ಹಿಟ್ಟಿನಿಂದ ತಯಾರಿಸಲಾಗುತ್ತದೆ.[೧] ಉದ್ದಿನ ಬೇಳೆಯನ್ನು ಹಲವಾರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ನಂತರ ರುಬ್ಬಲಾಗುತ್ತದೆ.[೧] ಈ ಪೇಸ್ಟಿನಲ್ಲಿ ಇಂಗು, ಮೆಂತ್ಯ, ಶುಂಠಿ, ಜೀರಿಗೆ, ಕರಿಮೆಣಸು, ಕರಿಬೇವು, ಮೆಣಸಿನಕಾಯಿ ಮತ್ತು ತೆಂಗಿನಕಾಯಿ ತುಂಡುಗಳಂತಹ ಇತರ ಪದಾರ್ಥಗಳನ್ನು ಸೇರಿಸಬಹುದು.[೧] ನಂತರ ಅದನ್ನು ಡೋನಟ್ ಆಕಾರ/ಉಂಗುರದ ಆಕಾರದಲ್ಲಿ ರೂಪಿಸಲಾಗುತ್ತದೆ ಮತ್ತು ತಿಳಿ ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಹುರಿಯಲಾಗುತ್ತದೆ.[೧][೨]
ಕೆಲವರು ಹುರಿಯುವ ಬದಲು ಬೇಯಿಸುತ್ತಾರೆ.[೧] ಇನ್ನೂ ಕೆಲವರು,ಉದ್ದಿನ ಬೇಳೆಯ ಬದಲು ಇತರ ಬೇಳೆಗಳನ್ನು ಬಳಸುತ್ತಾರೆ. ಉದಾಹರಣೆಗೆ, ಅಮ್-ಬಡಾ (ಅಥವಾ ಆಮಾ ವಡೆ) ಅನ್ನು ಕಡಲೆ ಬೇಳೆಯಿಂದ ತಯಾರಿಸಲಾಗುತ್ತದೆ; ಸಾಂದರ್ಭಿಕವಾಗಿ, ತೊಗರಿ ಬೇಳೆ ಮತ್ತು ಮಸೂರ ಅವರೆಯನ್ನೂ ಬಳಸಲಾಗುತ್ತದೆ.[೪]
ಬಡಿಸುವುದು
[ಬದಲಾಯಿಸಿ]ಈ ಭಕ್ಷ್ಯವನ್ನು ಸಾಮಾನ್ಯವಾಗಿ ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ಇಡ್ಲಿ ಜೊತೆಗೆ, ಇದನ್ನು ಸಾಮಾನ್ಯವಾಗಿ ಉಪಹಾರವಾಗಿ ಸೇವಿಸಲಾಗುತ್ತದೆ. ಇದನ್ನು ಲಂಚ್ ಸ್ಟಾರ್ಟರ್ ಅಥವಾ ಲಘು ಉಪಹಾರವಾಗಿಯೂ ಸೇವಿಸಲಾಗುತ್ತದೆ.[೨][೫]
ಉದ್ದಿನ ವಡೆಯನ್ನು ಕೆಲವೊಮ್ಮೆ ಮೊಸರಿನೊಂದಿಗೆ ಚಾಟ್ ತಿಂಡಿಯಾಗಿ ನೀಡಲಾಗುತ್ತದೆ ( ಮೊಸರು ವಡೆ ನೋಡಿ).[೧]
ಗ್ಯಾಲರಿ
[ಬದಲಾಯಿಸಿ]-
ಉದ್ದಿನ ವಡೆಗಳು ತೆಂಗಿನಕಾಯಿ ಚಟ್ನಿಯೊಂದಿಗೆ
-
ಹುರಿದ ವಡೆ
-
ದಕ್ಷಿಣ ಭಾರತದ ಸಾಮಾನ್ಯ ಉಪಹಾರ: ಇಡ್ಲಿ, ವಡೆ, ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿ
-
ಮತ್ತೊಂದು ಸಾಮಾನ್ಯ ಉಪಹಾರ: ವಡೆ,ಪೊಂಗಲ್, ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿ
-
ಮೊಸರು ವಡೆ ರೂಪದಲ್ಲಿ
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ ೧.೫ ೧.೬ ೧.೭ Richa Hingle (2015). Vegan Richa's Indian Kitchen: Traditional and Creative Recipes for the Home Cook. Andrews McMeel. p. pt122. ISBN 9781941252109.
- ↑ ೨.೦ ೨.೧ ೨.೨ Meher Mirza (15 December 2015). "The Star of South India: Medu Vada in its Many Avatars". NDTV. Archived from the original on 13 ಡಿಸೆಂಬರ್ 2024. Retrieved 27 ಮೇ 2024.
- ↑ Vir Sanghvi (2004). Rude Food: The Collected Food Writings of Vir Sanghvi. Penguin India. pp. 110–111. ISBN 9780143031390.
- ↑ K. T. Achaya (1994). Indian Food: A Historical Companion. Oxford University Press. p. 127. ISBN 978-0-19-563448-8.
- ↑ "Recipe: Medu vada". The Times of India. 22 May 2015.
<ref> tag with name "Hingle 2015" defined in <references> is not used in prior text.