ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಕರ್ನಾಟಕದ ೨೮ ಲೋಕಸಭಾ(ಸಂಸತ್ತಿನ ಕೆಳಮನೆ) ಕ್ಷೇತ್ರಗಲ್ಲಿ ಒಂದು. 2002 ರಲ್ಲಿ ಡೆಲಿಮಿಟೇಷನ್ ಕಮಿಷನ್ ಆಫ್ ಇಂಡಿಯಾ ಶಿಫಾರಸಿನ ಆಧಾರವಾಗಿ, 2008 ರಲ್ಲಿ ಸಂಸಧೀಯ ಕ್ಷೇತ್ರದ ವಿಂಗಡಣೆಯ ಅನುಷ್ಠಾನದ ಭಾಗವಾಗಿ ಈ ಕ್ಷೇತ್ರವನ್ನು ರಚಿಸಲಾಯಿತು. [೧][೨] ೨೦೦೯ರ ಮೊದಲ ಚುನಾವಣೆಯಲ್ಲಿ ಭಾಜಪ ಪಕ್ಷದಿಂದ ಡಿ.ವಿ.ಸದಾನಂದ ಗೌಡರು ಸಂಸದರಾದರು. ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣದಿಂದ , ೪ ಆಗಸ್ಟ್ ೨೦೧೧ ರಂದು ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು.[೩] ಆದ ಕಾರಣದಿಂದ ಡಿವಿಎಸ್, ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು ಹಾಗು ೨೦೧೨ರಲ್ಲಿ ಈ ಕ್ಶೇತ್ರಕ್ಕೆ ಉಪಚುನಾವಣೆಯನ್ನು ನಡೆಸಲಾಯಿತು.[೪] ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಕೆ.ಜಯಪ್ರಕಾಶ್ ಹೆಗ್ಡೆ ಜಯಗಳಿಸಿದರು. 2014 ರ ಚುನಾವಣೆಯಲ್ಲಿ , ಬಿಜೆಪಿಯ ಶೋಭಾ ಕರಂದ್ಲಾಜೆ ಗೆದ್ದು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಕ್ಷೇತ್ರ ವಿಭಾಗಗಳು[ಬದಲಾಯಿಸಿ]
2014 ರ ಪ್ರಕಾರ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಎಂಟು ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿದೆ:[೧]
- ಚಿಕ್ಕಮಗಳೂರು
- ಕಾಪು
- ಕಾರ್ಕಳ
- ಕುಂದಾಪುರ
- ಮೂಡಿಗೆರೆ ( ಪ.ಜಾ)
- ಶೃಂಗೇರಿ
- ತರಿಕೆರೆ
- ಉಡುಪಿ
ನಾಲ್ಕು ವಿಧಾನಾಸಭಾ ಕ್ಷೇತ್ರಗಳು: ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಮತ್ತು ತರೀಕೆರೆ - ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.ಇನ್ನುಳಿದ ನಾಲ್ಕು : ಕುಂದಾಪುರ ,ಉಡುಪಿ, ಕಾಪು ಮತ್ತು ಕಾರ್ಕಳ - ಉಡುಪಿ ಜಿಲ್ಲೆಯಲ್ಲಿದೆ.[೨]
ಸಂಸತ್ತಿನ ಸದಸ್ಯರು[ಬದಲಾಯಿಸಿ]
- 2008ರಲ್ಲಿ ರಚನೆ
- 2009: ಡಿ.ವಿ.ಸದಾನಂದ ಗೌಡ, ಭಾರತೀಯ ಜನತಾ ಪಕ್ಷ
- 2012 (ಉಪ ಚುನಾವಣೆ): ಕೆ. ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್
- 2014: ಶೋಭಾ ಕರಂದ್ಲಾಜೆ, ಭಾರತೀಯ ಜನತಾ ಪಕ್ಷ
ಚುನಾವಣಾ ಫಲಿತಾಂಶಗಳು[ಬದಲಾಯಿಸಿ]
ಸಾರ್ವತ್ರಿಕ ಚುನಾವಣೆ 2009[ಬದಲಾಯಿಸಿ]
ಪಕ್ಷ | ಅಭ್ಯರ್ಥಿ | ಮತಗಳು | % | ± | |
---|---|---|---|---|---|
ಬಿಜೆಪಿ | ಡಿ.ವಿ.ಸದಾನಂದ ಗೌಡ | 401,441 | 48.09 | N/A | |
ಕಾಂಗ್ರೆಸ್ | ಕೆ. ಜಯಪ್ರಕಾಶ್ ಹೆಗ್ಡೆ | 374,423 | 44.86 | N/A | |
ಸಿಪಿಐ ಎಂ | ರಾಧ ಸುಂಧರೇಶ್ | 24,991 | 2.99 | N/A | |
ಪಕ್ಷೇತರ | ಶ್ರೀನಿವಾಸ ಪೂಜಾರಿ | 11,263 | 1.35 | N/A | |
ಬಿಎಸ್ಪಿ | ಸ್ಟೀವನ್ ಮೆನೆಜೆಸ್ | 9,971 | 1.19 | N/A | |
ಪಕ್ಷೇತರ | ಶ್ರೀಧರ ಉಡುಪ | 3,467 | 0.42 | N/A | |
ಪಕ್ಷೇತರ | ಉಮೇಶ್ ಕುಮಾರ್ | 3,283 | 0.39 | N/A | |
ಪಕ್ಷೇತರ | ವಿನಾಯಕ ಮಲ್ಲ್ಯ | 3,096 | 0.37 | N/A | |
ಪಕ್ಷೇತರ | ಕೆ.ಗಣಪತಿ ಶೆಟ್ಟಿಗಾರ್ | 2,793 | 0.33 | N/A | |
ಗೆಲುವಿನ ಅಂತರ | 27,018 | 3.23 | N/A | ||
ಶೇಕಡಾವಾರು ಮತದಾನ | 834,728 | 68.18 | N/A | ||
ಬಿಜೆಪಿ ಗೆಲುವು |
2012 ರ ಚುನಾವಣೆ[ಬದಲಾಯಿಸಿ]
ಪಕ್ಷ | ಅಭ್ಯರ್ಥಿ | Votes | % | ± | |
---|---|---|---|---|---|
ಕಾಂಗ್ರೆಸ್ | ಕೆ. ಜಯಪ್ರಕಾಶ್ ಹೆಗ್ಡೆ | 398,723 | 46.75 | +1.89 | |
ಬಿಜೆಪಿ | ವಿ.ಸುನಿಲ್ ಕುಮಾರ್ | 352,999 | 41.39 | -6.70 | |
JD(S) | ಭೋಜೆ ಗೌಡ | 72,080 | 8.45 | N/A | |
ಪಕ್ಷೇತರ | ಹರೀಶ್ ಕಟೀಲ್ | 6,930 | 0.81 | N/A | |
JD(U) | ಭರತೇಶ್ | 4,945 | 0.58 | N/A | |
ಪಕ್ಷೇತರ | ಹುಣ್ಸೂರ್ ಚಂದ್ರಶೇಖರ್ | 3,640 | 0.43 | N/A | |
ಪಕ್ಷೇತರ | ಶ್ರೀನಿವಾಸ ಪೂಜಾರಿ | 3,293 | 0.39 | -0.96 | |
ಪಕ್ಷೇತರ | ಸುರೇಶ್ ಪೂಜಾರಿ | 2,177 | 0.26 | N/A | |
ಪಕ್ಷೇತರ | ಜಯಪ್ರಕಾಶ್ ಹೆಗ್ಡೆ (ಕೊಕ್ಕರಣೆ) | 1,755 | 0.21 | N/A | |
ಪಕ್ಷೇತರ | ಅಸಾದುಲ್ಲಾ | 1,491 | 0.17 | N/A | |
ಪಕ್ಷೇತರ | ದೀಪಕ್ ರಾಜೇಶ್ | 1,429 | 0.17 | N/A | |
ಪಕ್ಷೇತರ | ಶ್ರೀದರ ಪೆಡಮನೆ | 1,377 | 0.16 | N/A | |
ಪಕ್ಷೇತರ | ಎನ್.ವೆಂಕಟೇಶ್ | 1,064 | 0.12 | N/A | |
ಪಕ್ಷೇತರ | ರಿಯಾಜ್ ಅಹ್ಮದ್ | 921 | 0.11 | N/A | |
ಗೆಲುವಿನ ಅಂತರ | 45,724 | 5.36 | +2.13 | ||
ಮತದಾನ | 852,824 | 68.06 | -0.12 | ||
ಬಿಜೆಪಿ ಯಿಂದ ಕಾಂಗ್ರೆಸ್ ಲಾಭ ಪಡೆಯಿತು | Swing |
ಸಾರ್ವತ್ರಿಕ ಚುನಾವಣೆ 2014[ಬದಲಾಯಿಸಿ]
ಪಕ್ಷ | ಅಭ್ಯರ್ಥಿ | ಮತಗಳು | % | ± | |
---|---|---|---|---|---|
ಬಿಜೆಪಿ | ಶೋಭಾ ಕರಂದ್ಲಾಜೆ | 581,168 | 56.20 | +14.81 | |
ಕಾಂಗ್ರೆಸ್ | ಕೆ. ಜಯಪ್ರಕಾಶ್ ಹೆಗ್ಡೆ | 399,525 | 38.63 | -8.12 | |
ಜೆಡಿಎಸ್ | ವಿ.ಧನಂಜಯ ಕುಮಾರ್ | 14,895 | 1.44 | -7.01 | |
ಸಿಪಿಐ | ವಿಜಯ್ ಕುಮಾರ್ | 9,691 | 0.94 | N/A | |
ಬಿಎಸ್ಪಿ | ಜಾಕಿರ್ ಹುಸ್ಸೈನ್ | 7,449 | 0.72 | N/A | |
ಆಮ್ ಆದ್ಮಿ | ಗುರುದೇವ | 6,049 | 0.58 | N/A | |
ಪಕ್ಷೇತರ | ಶ್ರಿನಿವಾಸ ಪೂಜಾರಿ | 1,899 | 0.18 | -0.21 | |
ಪಕ್ಷೇತರ | ಸುಧೀರ್ ಕಂಚನ್ | 1,689 | 0.16 | N/A | |
ಸಿಪಿಐ(ಎಂಎಲ್) | ಜಗನ್ನಾತ್ | 1,612 | 0.16 | N/A | |
ಪಕ್ಷೇತರ | ಮೊಇನ್ನುದ್ದಿನ್ ಖಾನ್ | 1,214 | 0.12 | N/A | |
ಪಕ್ಷೇತರ | ಮಂಜುನಾಥ ಜಿ | 1,089 | 0.11 | N/A | |
ನೋಟ | ಮೇಲಿನ ಯಾವುದೂ ಅಲ್ಲ | 7,828 | 0.76 | N/A | |
ಗೆಲುವಿನ ಅಂತರ | 181,643 | 17.57 | +12.21 | ||
ಮತದಾನ | 1,034,108 | 74.54 | +6.48 | ||
ಕಾಂಗ್ರೆಸ್ ನಿಂದ ಬಿಜೆಪಿ ಲಾಭ ಪಡೆಯಿತು |
ಇದನ್ನು ಸಹ ನೋಡಿ[ಬದಲಾಯಿಸಿ]
ಉಲ್ಲೇಖಗಳು[ಬದಲಾಯಿಸಿ]
- ↑ ೧.೦ ೧.೧ "Delimitation of Parliamentary and Assembly Constituencies Order, 2008" (PDF). The Election Commission of India. p. 208.
- ↑ ೨.೦ ೨.೧ Prabhu, Ganesh (19 July 2007). "Udupi Lok Sabha seat loses its coastal character". The Hindu. N. Ram. Retrieved 1 April 2010.
- ↑ "Here's everything you need to know about Railway Minister Sadananda Gowda". Daily News and Analysis. Deepak Rathi. 8 July 2014. Retrieved 13 December 2014.
- ↑ "Deve Gowda Among MPs Who Posed No Queries in LS". The New Indian Express. Express Publications (Madurai) Limited. 27 January 2014. Retrieved 13 December 2014.
- ↑ "Constituency Wise Detailed Results" (PDF). Election Commission of India. p. 59. Archived from the original (PDF) on 11 August 2014. Retrieved 30 April 2014.
- ↑ "Udupi Chimaglur" (PDF). Chief Electoral Officer of Karnataka. Retrieved 13 December 2014.
- ↑ "Udupi: Jayaprakash Hegde wins by 45,724 votes". Udupi Today. 21 March 2012. Retrieved 13 December 2014.
- ↑ "Jan–Jun 2012" (.xls). Election Commission of India. Retrieved 13 December 2014.
- ↑ "Parliamentary Constituency wise Turnout for General Election – 2014". Election Commission of India. Archived from the original on 2 July 2014. Retrieved 31 July 2014.
- ↑ "Udupi Chikmagalur". Election Commission of India. Archived from the original on 28 June 2014.