ಶೋಭಾ ಕರಂದ್ಲಾಜೆ

ವಿಕಿಪೀಡಿಯ ಇಂದ
Jump to navigation Jump to search
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ

ಕುಮಾರಿ ಶೋಭಾ ಕರಂದ್ಲಾಜೆ


ಜನನ ೨೩-೧೦-೧೯೬೬
ಪುತ್ತೂರು, ಕರ್ನಾಟಕ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ

ಶೋಭಾ ಕರಂದ್ಲಾಜೆ (ಜನನ ೨೩ ಅಕ್ಟೋಬರ್ ೧೯೬೬) [೧] ಕರ್ನಾಟಕದ ಬಿಜೆಪಿ ರಾಜಕಾರಣಿ, ಮತ್ತು ೧೬ ನೇ ಲೋಕಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸತ್ ಪ್ರತಿನಿಧಿ.

ತಂದೆ ಮೋನಪ್ಪಗೌಡ, ತಾಯಿ ಪೂವಕ್ಕ. ಕರಾವಳಿ ಕರ್ನಾಟಕದ ಪುತ್ತೂರಿನ ಶೋಭಾ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಬಹಳ ಚಿಕ್ಕ ವಯಸ್ಸಿನಲ್ಲಿಯೆ ಆಸಕ್ತಿ ಹೊಂದಿದ್ದರು. ಸಂಘ ಪರಿವಾರದ ಅನೇಕ ಮಹಿಳಾ ಕಾರ್ಯಕರ್ತೆಯಲ್ಲಿ ಒಬ್ಬರಾಗಿದ್ದರು. ರಾಜಕೀಯದಲ್ಲಿ ಸೇರಲು ಅವರು ನಿರ್ಧರಿಸಿದಾಗ, ಆರ್ಎಸ್ಎಸ್ ಆರಂಭದಲ್ಲಿ ಸ್ಫೂರ್ತಿಯಾಯಿತು .

ಅವರು ೨೦೦೪ ರಲ್ಲಿ ಭಾರತೀಯ ಜನತಾ ಪಕ್ಷದಿಂದ ಶಾಸನ ಸಭೆಗೆ ಆಯ್ಕೆಯಾದರು. ಮೇ ೨೦೦೮ ರಲ್ಲಿ ಅವರು ಬೆಂಗಳೂರಿನ ಯಶ್ವಂತಪುರದಿಂದ ವಿಧಾನ ಸಭೆಗೆ ಆಯ್ಕೆಯಾದರು ಮತ್ತು ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆಯಾಗಿ ನೇಮಕಗೊಂಡರು.

ಅವರು ೨೦೧೪ ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ) ದಿಂದ ಸ್ಪರ್ಧಿಸಿ ೧.೮೧ ಲಕ್ಷ ಮತಗಳ ಅಂತರದಿಂದ ಜಯಗಳಿಸಿದರು.

ಸ್ಥಾನಗಳು[ಬದಲಾಯಿಸಿ]

2004 - 2008 ರ ಕರ್ನಾಟಕ ವಿಧಾನ ಪರಿಷತ್ತು ಸದಸ್ಯರು

2008 - 2013 , ಕರ್ನಾಟಕ ವಿಧಾನಸಭೆ ಸಚಿವೆ, ಕರ್ನಾಟಕ ಸರ್ಕಾರ

2014 ಮೇ , ೧೬ನೇ ಲೋಕಸಭೆಗೆ ಆಯ್ಕೆ

1 ಸೆಪ್ಟೆಂಬರ್ 2014 - 03 ಡಿಸೆಂಬರ್ 2014 , ಮಹಿಳಾ ಸಬಲೀಕರಣ ಸಮಿತಿ ಸದಸ್ಯೆ

1 ಸೆಪ್ಟೆಂಬರ್ 2014 ನಂತರ , ರಕ್ಷಣಾ ಸ್ಥಾಯಿ ಸಮಿತಿ ಸದಸ್ಯೆ ಮತ್ತು ಸಲಹಾ ಸಮಿತಿ ಸದಸ್ಯೆ, ಕೃಷಿ ಸಚಿವಾಲಯ

13 ಮೇ 2015 ರಿಂದ , ಜಮೀನು ಸ್ವಾಧೀನದಲ್ಲಿ ನ್ಯಾಯೋಚಿತ ಪರಿಹಾರ ಮತ್ತು ಪಾರದರ್ಶಕತೆ ಜಂಟಿ ಸಮಿತಿ,ಪುನರ್ವಸತಿ  (ಎರಡನೇ ತಿದ್ದುಪಡಿ) ಬಿಲ್, 2015

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Shobha Karandlaje | National Portal of India". www.india.gov.in (in ಇಂಗ್ಲಿಷ್). Retrieved 2018-05-21.