ವಿಷಯಕ್ಕೆ ಹೋಗು

ಆಲ್ಟೈ ಗಣರಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲ್ಟೈ ಗಣರಾಜ್ಯದಲ್ಲಿ ಕತೂನ್ ನದಿ

ಆಲ್ಟೈ ಗಣರಾಜ್ಯವು ರಷ್ಯಾದ ಒಂದು ಗಣರಾಜ್ಯ. ಇದು ದಕ್ಷಿಣ ಸೈಬೀರಿಯಾದಲ್ಲಿ ಸ್ಥಿತವಾಗಿದೆ. ಹಿಂದೆ ಇದು ರಷ್ಯನ್ ಸೋವಿಯತ್ ಸಂಯುಕ್ತ ಸಮಾಜವಾದಿ ಗಣರಾಜ್ಯದ ಆಲ್ಟೈ ಕ್ರೈ ಪ್ರದೇಶದ ಆಗ್ನೇಯ ಭಾಗದಲ್ಲಿನ ಸ್ವಯಮಾಡಳಿತ ವಿಭಾಗ (ಆಬ್ಲಾಸ್ಟ್) ಆಗಿತ್ತು. ಇದನ್ನು ರಚಿಸಿದ್ದು 1922ರಲ್ಲಿ. ಆಗ ಇದಕ್ಕೆ ಆಯಿರಟ್ ಸ್ವಯಮಾಡಳಿತ ವಿಭಾಗವೆಂಬ (Oyrot Autonomous Oblast) ಹೆಸರಿತ್ತು. ಇದಕ್ಕೆ ಈಗಿನ ನಾಮಕರಣವಾದದ್ದು 1948 ರಲ್ಲಿ. ೧೯೯೧ರಲ್ಲಿ ಇದನ್ನು ಗಾರ್ನ-ಆಲ್ಟೈ ಸ್ವಯಮಾಡಳಿತ ವಿಭಾಗವೆಂದು ಮರುಸಂಘಟಿಸಲಾಯಿತು. ೧೯೯೨ರಲ್ಲಿ ಇದಕ್ಕೆ ಆಲ್ಟೈ ಗಣರಾಜ್ಯವೆಂದು ಮರುನಾಮಕರಣ ಮಾಡಲಾಯಿತು.

ಭೌಗೋಳಿಕ ವಿವರಗಳು

[ಬದಲಾಯಿಸಿ]

ಇದರ ವಿಸ್ತೀರ್ಣ 35,870 ಚ.ಮೈಲಿ.[] ಈ ಪ್ರದೇಶದ ಬಹುಭಾಗ ಪರ್ವತಮಯ. ಪರ್ವತಶ್ರೇಣಿಗಳು ಉತ್ತರದಿಂದ ದಕ್ಷಿಣಕ್ಕೆ ಹಬ್ಬಿ ಆಲ್ಟೈ ಶ್ರೇಣಿಯನ್ನು ಸೇರಿಕೊಳ್ಳುತ್ತವೆ. ಇವುಗಳ ಕೊನೆಯಲ್ಲಿರುವ ಬ್ಯಿಲೂಕ ಶಿಖರದ ಎತ್ತರ 14,783'.[] ಗಾರ್ನ - ಆಲ್ಟೈ ಪ್ರದೇಶದ ಉನ್ನತ ಪರ್ವತ ಶ್ರೇಣಿಗಳಲ್ಲಿ ಮುಖ್ಯವಾದವು ಕತೂನ್‍ಸ್ಕಿ, ಉತ್ತರ ದಕ್ಷಿಣ ಚುಯಾ ಮತ್ತು ಚಿಕಾಚೇವ. ಬಿಯಾ, ಚುಯಾ, ಕತೂನ್ - ಇವು ಅಬ್ ನದಿಯ ಶಿರೋಭಾಗದ ತೊರೆಗಳು.[]

ಗಾರ್ನ-ಆಲ್ಟೈ ಪ್ರದೇಶದ್ದು ಖಂಡಾಂತರ ವಾಯುಗುಣ. ಜನವರಿಯ ಸರಾಸರಿ ಉಷ್ಣತೆ -200 ಫ್ಯಾ. ಬೇಸಿಗೆ ತಂಪಾಗಿರುತ್ತದೆ (580 - 600 ಫ್ಯಾ). ಮಳೆ ಪಶ್ಚಿಮದ ಪರ್ವತ ಶ್ರೇಣಿಗಳ ಪ್ರದೇಶದಲ್ಲಿ 50", ಪೂರ್ವದ ಕಣಿವೆಗಳಲ್ಲೂ 12".

ಗಾರ್ನ - ಆಲ್ಟೈ ಜನಸಂಖ್ಯೆ 2,10,924 (2021). ಆಡಳಿತ ಕೇಂದ್ರ ಗಾರ್ನ - ಆಲ್ಟೈಕ್ಸ್ (56,933).

ಜನಜೀವನ

[ಬದಲಾಯಿಸಿ]

ಈ ವಿಭಾಗದ ಜನರ ಮುಖ್ಯ ಕಸುಬು ಕೃಷಿ. ಹಾಲು, ಮಾಂಸಗಳಿಗೆ ದನವನ್ನು ಹೆಚ್ಚಾಗಿ ಸಾಕುವುದೂ ಉಂಟು. ಓಟ್ಸ್, ಬಾರ್ಲಿ, ರೈ, ಗೋಧಿ, ತರಕಾರಿ, ಆಲೂಗಡ್ಡೆ ಮುಖ್ಯ ಬೆಳೆಗಳು. ಜೇನುಸಾಕಣೆ, ಚೌಬೀನೆ ಇನ್ನೆರಡು ಮುಖ್ಯ ಕಸುಬುಗಳು.

ಗಾರ್ನ - ಆಲ್ಟೈಕ್ಸ್‌ನಲ್ಲಿ ಕೈಗಾರಿಕೆಗಳು ಕೇಂದ್ರೀಕೃತವಾಗಿವೆ. ಜವಳಿ, ಅಣೆಕಟ್ಟು, ಮಾಂಸವೇಷ್ಟನ-ಇವು ಮುಖ್ಯ ಕೈಗಾರಿಕೆಗಳು. ಆಲ್ಟೈ ಭಾಷೆಯ ವೈಜ್ಞಾನಿಕ ಸಂಶೋಧನ ಸಂಸ್ಥೆಯೊಂದು ಇಲ್ಲಿದೆ. ಚೆಮಾಲ್ ಆರೋಗ್ಯದಾಣ. ಕಬ್ಬಿಣ ಅದುರು, ಕಲ್ಲಿದ್ದಲು, ಅಮೃತಶಿಲೆ, ಆಸ್ಬೆಸ್ಟಸ್, ಗ್ರಾಫೈಟ್, ಸಿನ್ನಾಬಾರ್, ಚಿನ್ನ, ಪಾದರಸ-ಇವು ಈ ಪ್ರದೇಶದಲ್ಲಿ ದೊರಕುವ ಮುಖ್ಯ ಖನಿಜಗಳು. ಕೊನೆಯ ಎರಡರ ಗಣಿಗಾರಿಕೆ ಬೆಳೆದಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Федеральная служба государственной статистики (Federal State Statistics Service) (May 21, 2004). "Территория, число районов, населённых пунктов и сельских администраций по субъектам Российской Федерации (Territory, Number of Districts, Inhabited Localities, and Rural Administration by Federal Subjects of the Russian Federation)". Всероссийская перепись населения 2002 года (All-Russia Population Census of 2002) (in ರಷ್ಯನ್). Federal State Statistics Service. Archived from the original on September 28, 2011. Retrieved November 1, 2011.
  2. "The Central Asian Republics Ultra Prominence Page" Archived 29 August 2012 ವೇಬ್ಯಾಕ್ ಮೆಷಿನ್ ನಲ್ಲಿ. Listed as "Gora Belukha" on Peaklist.org. Retrieved 2011-11-20.
  3. Бия, Great Soviet Encyclopedia


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: