ಅವತಾರ ಪುರುಷ (೨೦೨೨ರ ಚಲನಚಿತ್ರ)
ಅವತಾರ ಪುರುಷ ಭಾರತೀಯ ಕನ್ನಡ ಭಾಷೆಯ ಹಾಸ್ಯ ನಾಟಕ ಚಿತ್ರವಾಗಿದ್ದು ಸುನಿ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಪುಷ್ಕರ ಮಲ್ಲಿಕಾರ್ಜುನಯ್ಯ ಅವರು ತಮ್ಮ ಸ್ಟುಡಿಯೋ ಪುಷ್ಕರ್ ಫಿಲಂಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಶೀಲಂ ಕಿರಣ್ ಸಹ ಕಥೆ ಬರೆದಿದ್ದಾರೆ. [೧] ಇದರಲ್ಲಿ ಶರಣ್ ಮತ್ತು ಆಶಿಕಾ ರಂಗನಾಥ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಾಯಿಕುಮಾರ್, ಸುಧಾರಾಣಿ, ಭವ್ಯ, ಶ್ರೀನಗರ ಕಿಟ್ಟಿ, ಬಾಲಾಜಿ ಮನೋಹರ್ ಮತ್ತು ಸಾಧು ಕೋಕಿಲ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. [೨] [೩]
ಈ ಚಲನಚಿತ್ರವು ಮೊದಲನೆಯ ಭಾಗವಾಗಿದ್ದು "ಅಷ್ಟ ದಿಗ್ಬಂಧನ ಮಂಡಲಕ" ಎಂಬ ಅಡಿಬರಹವನ್ನು ನೀಡಲಾಗಿದೆ. [೪] ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ ಮತ್ತು ವಿಲಿಯಂ ಡೇವಿಡ್ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]- ಶರಣ್
- ಸಿರಿ ಪಾತ್ರದಲ್ಲಿ ಆಶಿಕಾ ರಂಗನಾಥ್
- ಪಿ. ಸಾಯಿ ಕುಮಾರ್
- ಸುಧಾ ರಾಣಿ
- ಸುಶೀಲಾ ಪಾತ್ರದಲ್ಲಿ ಭವ್ಯ
- ಕುಮಾರ ಪಾತ್ರದಲ್ಲಿ ಶ್ರೀನಗರ ಕಿಟ್ಟಿ
- ಹಿನ್ನುಡಿಯಾಗಿ ಬಾಲಾಜಿ ಮನೋಹರ್
- ಸಾಧು ಕೋಕಿಲ
ನಿರ್ಮಾಣ
[ಬದಲಾಯಿಸಿ]ನಿರ್ದೇಶಕ ಸುನಿ ತಾವು ವಾಮಾಚಾರ ಕುರಿತು ಆಸಕ್ತಿ ಹೊಂದಿದ್ದಾಗಿ ಹಾಗೂ ತುಳಸಿ ದಳ ದಂತಹ ಕಾದಂಬರಿಗಳಿಂದ ಸ್ಫೂರ್ತಿ ಪಡೆದುದಾಗಿ ಹೇಳಿದ್ದಾರೆ. ಅವರು ವೆಬ್ ಸರಣಿಗೆ ಅಳವಡಿಸಿಕೊಳ್ಳಲು ವಾಮಾಚಾರದ ಕಥೆಯನ್ನು ಬರೆದರು, ಆದರೆ ಅಂತಿಮವಾಗಿ "ಒಟಿಟಿ ಕನ್ನಡ ಪ್ರೇಕ್ಷಕರೊಂದಿಗೆ ಹೇಗೆ ಕೆಲಸ ಮಾಡುತ್ತದೆ" ಎಂದು ಖಚಿತವಾಗಿಲ್ಲದ ಕಾರಣ ನಿರ್ಧಾರ ಬದಲಿಸಿದರು. [೫] 1988 ರಲ್ಲಿ ಅಂಬರೀಶ್ ನಟಿಸಿದ ಅದೇ ಹೆಸರಿನ ಚಿತ್ರದಿಂದ ಈ ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ, ಚಿತ್ರವು ಹಿಂದೂ ಮಹಾಕಾವ್ಯ ಮಹಾಭಾರತದಿಂದ ಒಂದು ಎಳೆಯನ್ನು ತೆಗೆದುಕೊಳ್ಳುತ್ತದೆ ಎಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದರು. ನಾಯಕ ನಟ ಶರಣ್ ಚಿತ್ರದಲ್ಲಿ "ಜೂನಿಯರ್ ಆರ್ಟಿಸ್ಟ್" ಆಗಿ ನಟಿಸಲಿದ್ದು, "ಗುಂಪಿನಲ್ಲಿ ಒಬ್ಬರಾಗಿ" ಇರುತ್ತಾರೆ ಎಂದು ಸುನಿ ಹೇಳಿದ್ದಾರೆ. ಶರಣ್ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾರೆ ಮತ್ತು ಅನೇಕ ಗೆಟ್‌ಅಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ವಿಭಿನ್ನ ಛಾಯೆಗಳು ಅವರ ಸ್ವಂತ ಜೀವನಕ್ಕೆ ಸಂಬಂಧಿಸಿವೆ. ಅವತಾರ ಪುರುಷ ಶೀರ್ಷಿಕೆಯು ಕಥೆಯೊಂದಿಗೆ ಬೆರೆಯುತ್ತದೆ. "ಈ ಚಿತ್ರಕ್ಕಾಗಿ ವ್ಯಾಪಕವಾದ ಸಂಶೋಧನೆ ಮಾಡಲಾಗಿದೆ. ಅವತಾರ ಪುರುಷನು ತ್ರಿಶಂಕುವಿನ ಅಂಶವನ್ನು ನೋಡುತ್ತಾನೆ ಮತ್ತು ಅಶ್ವತ್ಥಾಮ ಹತಃ ಕುಂಜರಃ . ಎಂಬ ವಾಕ್ಯವು ನಮ್ಮ ಚಿತ್ರದಲ್ಲಿ ಒಂದು ಅಮೂಲ್ಯವಾದ ಅಂಶವನ್ನು ಸೇರಿಸುತ್ತದೆ" ಎಂದು ಅವರು ಹೇಳಿದರು. [೬] ಚಿತ್ರವು ಕರ್ನಾಟಕ ದಲ್ಲಿನ ವಾಮಾಚಾರದ ಕುರಿತಾಗಿದೆ ಎಂದೂ ಸುನಿ ಹೇಳಿದರು. ಅದರ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ, ಅವರು ಮಾಟಮಂತ್ರವು ಬಳಕೆಯಲ್ಲಿರುವ ಕೇರಳ, ಕೊಳ್ಳೇಗಾಲ ಮತ್ತು ರಾಜಸ್ಥಾನಕ್ಕೆ ಅದನ್ನು ಅಧ್ಯಯನ ಮಾಡಲು ಪ್ರಯಾಣಿಸಿದ್ದರು. ಅವರು ಪುರಾಣದಲ್ಲಿ ತ್ರಿಶಂಕು ಮಹಾರಾಜನ ಅಮರತ್ವದ ಬಯಕೆ ಮತ್ತು ಅವನು ತಲೆಕೆಳಗಾಗಿ ಇರಬೇಕಾದ ಸ್ಥಿತಿ ಮತ್ತು ವಿಶ್ವಾಮಿತ್ರ ಋಷಿಯು ಅವನಿಗಾಗಿ ಒಂದು ಲೋಕ ದ ಸೃಷ್ಟಿಯನ್ನು ಮಾಡಿದ್ದು ಚಿತ್ರದ ಕತೆಗೆ ಆಧಾರವಾಗಿದ್ದು ಈ ಕತೆಯನ್ನು ವಿಶೇಷ ಸೆಟ್ ಮತ್ತು ಆನಿಮೇಶನ್ ಮೂಲಕ ತೋರಿಸಲಾಗಿದೆ. [೭]
ಪಾತ್ರವರ್ಗ
[ಬದಲಾಯಿಸಿ]ಈ ಹಿಂದೆ ರಾಂಬೋ ೨ (2018) ನಲ್ಲಿ ಒಟ್ಟಿಗೆ ಕೆಲಸ ಮಾಡಿದ ಶರಣ್ ಮತ್ತು ಆಶಿಕಾ ರಂಗನಾಥ್ ಪ್ರಮುಖ ಜೋಡಿಯಾಗಿ ಈ ಚಿತ್ರದಲ್ಲಿದ್ದಾರೆ. [೮] ಆಶಿಕಾ ಅವರು ಸಿರಿ ಎಂಬ ಅನಿವಾಸಿ ಭಾರತೀಯ [೯] ದಿಟ್ಟ ಹುಡುಗಿ ಪಾತ್ರವನ್ನು ನಿರ್ವಹಿಸಿದ್ದಾರೆ. [೧೦] ಶರಣ್ ಪಾತ್ರದ ಅವತಾರಗಳಲ್ಲಿ ಒಂದಾದ ಕುಮಾರ ಎಂಬ ಒಡಿಶಾದ ಮಾಟಮಂತ್ರದ ಅಭ್ಯಾಸ ಮಾಡುವವನಾಗಿ ಶ್ರೀನಗರ ಕಿಟ್ಟಿ ನಟಿಸಿದ್ದಾರೆ. [೧೧] [೧೨] ಚರಣ್ ರಾಜ್ ಚಿತ್ರಕ್ಕೆ ಸಂಗೀತ ನೀಡಲಿದ್ದು, ವಿಲಿಯಂ ಡೇವಿಡ್ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. 11 ಫೆಬ್ರವರಿ 2019 ರಂದು ಚಿತ್ರೀಕರಣ ಪ್ರಾರಂಭವಾಗಲಿದೆ ಮತ್ತು ಹೆಚ್ಚಿನ ಭಾಗವನ್ನು ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಚಿತ್ರೀಕರಿಸಲಾಗುವುದು ಎಂದು ಸುನಿ ಹೇಳಿದರು. [೬] ಅಶುತೋಷ್ ರಾಣಾ ಅವರು ಚಿತ್ರದ ಭಾಗವಾಗಲಿದ್ದಾರೆ, 13 ವರ್ಷಗಳ ನಂತರ ಅವರು ಕನ್ನಡ ಚಲನಚಿತ್ರಗಳಲ್ಲಿ ನಟಿಸಲು ಮರಳುತ್ತಾರೆ ಎಂಬುದು ಜನವರಿ 2021 ರಲ್ಲಿ ಬಹಿರಂಗವಾಯಿತು. ಚಿತ್ರದ ಪೋಷಕ ಪಾತ್ರದಲ್ಲಿ ಬಾಲಾಜಿ ಮನೋಹರ್ , P. ಸಾಯಿ ಕುಮಾರ್, ಸುಧಾ ರಾಣಿ, ಭವ್ಯ ಮತ್ತು ಸಾಧು ಕೋಕಿಲ ಇದ್ದರು . [೧೩] [೧೪]
ಬಿಡುಗಡೆ ಮತ್ತು ಮಾರುಕಟ್ಟೆ
[ಬದಲಾಯಿಸಿ]ಚಿತ್ರದ ಮೊದಲ ಟೀಸರ್ ಅನ್ನು ಫೆಬ್ರವರಿ 2020 ರಲ್ಲಿ ಬಿಡುಗಡೆ ಮಾಡಲಾಯಿತು. [೫] ಶರಣ್ ಅವರ 49 ನೇ ಹುಟ್ಟುಹಬ್ಬದ ನೆನಪಿಗಾಗಿ, ಮತ್ತೊಂದು ಟೀಸರ್ ಅನ್ನು 6 ಫೆಬ್ರವರಿ 2021 ರಂದು ಬಿಡುಗಡೆ ಮಾಡಲಾಯಿತು ಮತ್ತು ಚಿತ್ರವು ಮೇ 28 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಯಿತು. [೧೫] ಲಾಕ್‌ಡೌನ್ ನಂತರ 2021 ರ ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣದ ಉಳಿದ ಭಾಗಗಳು ಪೂರ್ಣಗೊಂಡ ನಂತರ, ಅದೇ ವರ್ಷ ಡಿಸೆಂಬರ್ 10 ರಂದು ಚಲನಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ತಯಾರಕರು ಘೋಷಿಸಿದರು ಆದರೆ ಅದನ್ನು ಮುಂದೂಡಲಾಯಿತು. [೧೬]
ಉಲ್ಲೇಖಗಳು
[ಬದಲಾಯಿಸಿ]- ↑ Sharadhaa, A. (31 March 2021). "Avatar Purusha's first single brings in IPL flavour". The New Indian Express. Archived from the original on 7 November 2021. Retrieved 7 November 2021.
- ↑ "Part-1 of 'Avatara Purusha' to release in theatres on May 28th". The Times of India (in ಇಂಗ್ಲಿಷ್). 7 February 2021. Archived from the original on 8 February 2021. Retrieved 7 November 2021.
- ↑ "'Avatara Purusha' shoot successfully wrapped up". The Times of India (in ಇಂಗ್ಲಿಷ್). 21 September 2021. Archived from the original on 8 October 2021. Retrieved 7 November 2021.
- ↑ "Sharan's Avatar Purusha to be out in two parts". The New Indian Express (in ಇಂಗ್ಲಿಷ್). 3 November 2020. Archived from the original on 11 July 2021. Retrieved 7 November 2021.
- ↑ ೫.೦ ೫.೧ Yerasala, Ikyatha (21 February 2020). "Sandalwood must value its writers: Simple Suni". Deccan Herald (in ಇಂಗ್ಲಿಷ್). Retrieved 21 November 2021.
- ↑ ೬.೦ ೬.೧ "Sharan's connection with 'Avatar' in 'Avatar Purusha'". The New Indian Express. 5 February 2019. Archived from the original on 21 ನವೆಂಬರ್ 2021. Retrieved 21 November 2021.
- ↑ Suresh, Sunayana (19 November 2021). "Avatara Purusha dabbles in black magic". The Times of India (in ಇಂಗ್ಲಿಷ್). Retrieved 20 November 2021.
- ↑ "Sharan and Ashika Ranganath's Avatara Purusha takes off". The Times of India (in ಇಂಗ್ಲಿಷ್). 17 February 2021. Retrieved 21 November 2021.
- ↑ "Ashika Ranganath and Sharan to team up again for 'Avatara Purusha'". The Times of India (in ಇಂಗ್ಲಿಷ್). 11 February 2019. Retrieved 21 November 2021.
- ↑ "Ashika Ranganath plays an NRI in Sharan-starrer Avatar Purusha". The New Indian Express (in ಇಂಗ್ಲಿಷ್). 6 August 2019. Retrieved 21 November 2021.
- ↑ P. S., Tanvi (8 July 2019). "Srinagar Kitty to play a black magician in Avatara Purusha". The Times of India (in ಇಂಗ್ಲಿಷ್). Retrieved 21 November 2021.
- ↑ "Srinagar Kitty to appear in a cameo in Sharan's Avatar Purusha". The New Indian Express (in ಇಂಗ್ಲಿಷ್). 8 July 2019. Retrieved 21 November 2021.
- ↑ "Part-1 of 'Avatara Purusha' to release in theatres on May 28th - Times of India". The Times of India (in ಇಂಗ್ಲಿಷ್). 7 February 2021. Retrieved 21 November 2021.
- ↑ "ಭವ್ಯ ಸುಶೀಲಾವತಾರ - chitraloka.com". Chitraloka.com. 14 January 2020. Archived from the original on 21 ನವೆಂಬರ್ 2021. Retrieved 21 November 2021.
- ↑ "Part-1 of 'Avatara Purusha' to release in theatres on May 28th". The Times of India (in ಇಂಗ್ಲಿಷ್). 7 February 2021. Retrieved 21 November 2021.
- ↑ "Sharan-Suni's Avatara Purusha release date announced". The New Indian Express (in ಇಂಗ್ಲಿಷ್). 4 November 2021. Archived from the original on 4 November 2021. Retrieved 7 November 2021.