ವಿಷಯಕ್ಕೆ ಹೋಗು

ಲೋಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಷ್ಣುವಿನ ವಿಶ್ವರೂಪ. ಮೂರು ಲೋಕಗಳನ್ನು ತೋರಿಸಲಾಗಿದೆ. ಸ್ವರ್ಗ - ಸತ್ಯ ಇಂದ ಭುವರ್ ಲೋಕ (ತಲೆಯಿಂದ ಹೊಟ್ಟೆ), ಭೂಮಿ - ಭೂಲೋಕ (ತೊಡೆಸಂದು), ಭೂಗತ ಲೋಕ - ಅತಳದಿಂದ ಪಾತಾಳ ಲೋಕ (ಕಾಲುಗಳು).

ಲೋಕ ಎಂದರೆ ಪ್ರಪಂಚ/ಜಗತ್ತು ಎಂಬ ಅರ್ಥಕೊಡುವ ಒಂದು ಸಂಸ್ಕೃತ ಶಬ್ದ.

ಹಿಂದೂ ಸಂಪ್ರದಾಯ

[ಬದಲಾಯಿಸಿ]

ಪುರಾಣಗಳು ಮತ್ತು ಅಥರ್ವವೇದದಲ್ಲಿ, ಹದಿನಾಲ್ಕು ಲೋಕಗಳನ್ನು ಹೆಸರಿಸಲಾಗಿದೆ, ಏಳು ಮೇಲಿನ ಲೋಕಗಳು (ವ್ಯಾಹೃತಿಗಳು) ಮತ್ತು ಏಳು ಕೆಳಗಿನ ಲೋಕಗಳು (ಪಾತಾಳಗಳು), ಅವೆಂದರೆ ಮೇಲೆ ಭೂ, ಭುವಸ್, ಸ್ವರ, ಮಹಸ್, ಜನಸ್, ತಪಸ್, ಹಾಗೂ ಸತ್ಯ ಮತ್ತು ಕೆಳಗೆ ಅತಳ, ವಿತಳ, ಸುತಳ, ರಸಾತಳ, ತಲಾತಳ, ಮಹಾತಳ, ಪಾತಾಳ ಹಾಗೂ ನರಕ.

ಲೋಕ ಅಥವಾ ಲೋಕಗಳ ಪರಿಕಲ್ಪನೆ ವೈದಿಕ ಸಾಹಿತ್ಯದಲ್ಲಿ ವಿಕಸನಗೊಳ್ಳುತ್ತದೆ. ಅಲೆಮಾರಿ ಜನರಿಗೆ ಸ್ಥಳ ಅಥವಾ ಜಾಗ ಶಬ್ದವು ಹೊಂದಿರುವ ವಿಶೇಷ ಅರ್ಥಗಳಿಂದ ಪ್ರಭಾವಿತವಾಗಿ, ವೇದದಲ್ಲಿ ಲೋಕ ಶಬ್ದವು ಕೇವಲ ಸ್ಥಳ ಅಥವಾ ಜಗತ್ತು ಎಂಬ ಅರ್ಥ ಹೊಂದಿರಲಿಲ್ಲ, ಬದಲಾಗಿ ಒಂದು ಸಕಾರಾತ್ಮಕ ಮೌಲ್ಯವನ್ನು ಹೊಂದಿತ್ತು: ಅದು ಅದರದ್ದೇ ಆದ ಕಾರ್ಯದ ವಿಶೇಷ ಮೌಲ್ಯವಿರುವ ಧಾರ್ಮಿಕ ಅಥವಾ ಮಾನಸಿಕ ಆಸಕ್ತಿಯ ಸ್ಥಳ ಅಥವಾ ಸ್ಥಾನವಾಗಿತ್ತು.

ಹಾಗಾಗಿ, ಅತ್ಯಂತ ಮುಂಚಿನ ಸಾಹಿತ್ಯದಲ್ಲಿ 'ಲೋಕ' ಎಂಬ ಪರಿಕಲ್ಪನೆಯಲ್ಲಿ ಇಮ್ಮಡಿ ಅಂಶ ಅಂತರ್ಗತವಾಗಿತ್ತು; ಅದೆಂದರೆ, ದೈಶಿಕತೆಯ ಜೊತೆಗೆ ಸಹ ಅಸ್ತಿತ್ವದಲ್ಲಿ ಧಾರ್ಮಿಕ ಅಥವಾ ಮೋಕ್ಷ ಸಿದ್ಧಾಂತ ಸಂಬಂಧಿ ಅರ್ಥವಿತ್ತು. ಇದು ಸ್ಥಾನದ ಕಲ್ಪನೆಯಿಂದ ಸ್ವತಂತ್ರವಾಗಿರಬಲ್ಲದ್ದಾಗಿತ್ತು, ಅಂದರೆ ಒಂದು ಅಭೌತಿಕ ಮಹತ್ವವುಳ್ಳದ್ದು. ವೇದದಲ್ಲಿ ಲೋಕಗಳ ಅತ್ಯಂತ ಸಾಮಾನ್ಯ ಬ್ರಹ್ಮಾಂಡ ಸಂಬಂಧಿ ಪರಿಕಲ್ಪನೆ ತ್ರೈಲೋಕ್ಯ ಅಥವಾ ಮೂರು ಲೋಕಗಳದ್ದಾಗಿತ್ತು: ಆ ಮೂರು ಲೋಕಗಳೆಂದರೆ ಭೂಮಿ, ಆಕಾಶ ಮತ್ತು ಸ್ವರ್ಗ. ಈ ಮೂರರಿಂದ ಬ್ರಹ್ಮಾಂಡವಾಗುತ್ತಿತ್ತು.[] ಹೀಗೆಂದು ವಿದ್ವಾಂಸೆ ಡೆಬೋರಾ ಸೊಯಿಫ಼ರ್ ಅವರ ಅಭಿಪ್ರಾಯವಾಗಿದೆ.

# ಗ್ರಹಗಳ ವ್ಯವಸ್ಥೆಯ ಹೆಸರು
01 ಸತ್ಯಲೋಕ
02 ತಪ-ಲೋಕ
03 ಜನ-ಲೋಕ
04 ಮಹರ್ಲೋಕ
05 ಸ್ವರ್ಲೋಕ
06 ಭುವರ್ಲೋಕ
07 ಭೂಲೋಕ
08 ಅತಳಲೋಕ
09 ವಿತಳಲೋಕ
10 ಸುತಳಲೋಕ
11 ತಲಾತಳಲೋಕ
12 ಮಹಾತಳಲೋಕ
13 ರಸಾತಳಲೋಕ
14 ಪಾತಾಳಲೋಕ

ಉಲ್ಲೇಖಗಳು

[ಬದಲಾಯಿಸಿ]
  1. Soiver, Deborah A., The Myths of Narasimha and Vamana: Two Avatars in Cosmological Perspective State University of New York Press (Nov 1991), ISBN 978-0-7914-0799-8 p. 51 [೧]
"https://kn.wikipedia.org/w/index.php?title=ಲೋಕ&oldid=843420" ಇಂದ ಪಡೆಯಲ್ಪಟ್ಟಿದೆ