ಅಲಿ ಅಹ್ಮದ್ ಹುಸೇನ್ ಖಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲಿ ಅಹ್ಮದ್ ಹುಸೇನ್ ಖಾನ್
আলী আহমেদ হুসেন খান
ಜನನ(೧೯೩೯-೦೩-೨೧)೨೧ ಮಾರ್ಚ್ ೧೯೩೯
ಮರಣMarch 16, 2016(2016-03-16) (aged 76)
ರಾಷ್ಟ್ರೀಯತೆಭಾರತೀಯ
ವೃತ್ತಿಶಹನಾಯಿ ಪ್ರವೀಣ
ಮಕ್ಕಳು5 ಪುತ್ರರು ಮತ್ತು 5 ಪುತ್ರಿಯರು
ಪೋಷಕ
  • ಅಲಿ ಜಾನ್ ಖಾನ್ (father)
Awards

ಅಲಿ ಅಹ್ಮದ್ ಹುಸೇನ್ ಖಾನ್ (21 ಮಾರ್ಚ್ 1939 – 16 ಮಾರ್ಚ್ 2016) ಶಹನಾಯಿ ವಾದಕರಾಗಿದ್ದರು. [೧]

ಆರಂಭಿಕ ಜೀವನ[ಬದಲಾಯಿಸಿ]

ಅಲಿ ಅಹ್ಮದ್ ಹುಸೇನ್ ಖಾನ್ 21 ಮಾರ್ಚ್ 1939 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಅವರ ಅಜ್ಜ ವಜೀರ್ ಅಲಿ ಖಾನ್ ಅವರು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಶಹನಾಯಿ ಮೂಲಕ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಮೊದಲು ಪ್ರದರ್ಶಿಸಿದರು. ಅವರ ತಂದೆ ಅಲಿ ಜಾನ್ ಖಾನ್ ಮತ್ತು ಚಿಕ್ಕಪ್ಪ ನಜೀರ್ ಹುಸೇನ್ ಖಾನ್ ಮತ್ತು ಬೆನಾರಸ್‌ನ ಇಮ್ದಾದ್ ಹುಸೇನ್ ಖಾನ್ ಕೂಡ ಹೆಸರಾಂತ ಶೆಹನಾಯಿ ಪ್ರವೀಣರು. [೨] [೧] [೩]

ವೃತ್ತಿ[ಬದಲಾಯಿಸಿ]

1974 ರಿಂದ ಕಲ್ಕತ್ತಾದ ಸಂಗೀತ ರಿಸರ್ಚ್ ಅಕಾಡೆಮಿಯಲ್ಲಿ ಶೆಹ್ನೈ ಎಂಬ ವಾದ್ಯವನ್ನು ಹೇಗೆ ನುಡಿಸಬೇಕೆಂದು ಅವರು ಕಲಿಸಿದರು. ಅವರು ಆಲ್ ಇಂಡಿಯಾ ರೇಡಿಯೋ ಮತ್ತು ಇಂಡಿಯನ್ ಟೆಲಿವಿಷನ್‌ನಲ್ಲಿ ನಿಯಮಿತವಾಗಿ ಕಾಣಿಸಿಕೊಂಡಿದ್ದರು. 1973 ರಲ್ಲಿ ಪಂಡಿತ್ ರವಿಶಂಕರ್ ಅವರೊಂದಿಗೆ ದೂರದರ್ಶನಕ್ಕಾಗಿ ಅಂಕಿತರಾಗವನ್ನು ರಚಿಸಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.. [೧] [೩]

ಗೋಷ್ಠಿಗಳು[ಬದಲಾಯಿಸಿ]

ಅಲಿ ಅಹ್ಮದ್ ಭಾರತ ಮತ್ತು ವಿದೇಶಗಳಲ್ಲಿ ಅನೇಕ ವಾದ್ಯ ಗೋಷ್ಟಿ ನಡೆಸಿದ್ದಾರೆ. ಅವರ ಸಂಗೀತ ಪ್ರವಾಸಗಳಲ್ಲಿ ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಸ್ವಿಟ್ಜರ್ಲೆಂಡ್, ನೆದರ್‌ಲ್ಯಾಂಡ್ಸ್, ಫ್ರಾನ್ಸ್, ಬೆಲ್ಜಿಯಂ, ರಷ್ಯಾ, ಟುನೀಶಿಯಾ, ಥೈಲ್ಯಾಂಡ್, ಸಿಂಗಾಪುರ್, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ದೇಶಗಳಲ್ಲಿ ವಾದ್ಯ ಗೋಷ್ಟಿ ನಡೆಸಿದ್ದಾರೆ . [೧]

ಮರಣ[ಬದಲಾಯಿಸಿ]

ಕೋಲ್ಕತ್ತಾದಲ್ಲಿ 77 ನೇ ವಯಸ್ಸಿನಲ್ಲಿ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದಾಗಿ ಅಲಿ ಅಹ್ಮದ್ ಹುಸೇನ್ ಖಾನ್ 16 ಮಾರ್ಚ್ 2016 ರಂದು ನಿಧನರಾದರು. [೩]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ Profile of Ali Ahmed Hussain Khan on SwarGanga Music Foundation website Retrieved 11 October 2020
  2. "Shehnai exponent Ustad Ali Ahmad Hussain Khan dies at 77, but the music won't stop". Firstpost. 16 March 2016. Retrieved 11 October 2020.
  3. ೩.೦ ೩.೧ ೩.೨ Shehnai exponent Ali Ahmed Hussain Khan dies Hindustan Times (newspaper), Published 16 March 2016, Retrieved 11 October 2020