ಬಕಿಂಗ್ಹ್ಯಾಮ್ ಅರಮನೆ

Coordinates: 51°30′04″N 0°08′31″W / 51.501°N 0.142°W / 51.501; -0.142
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಕಿಂಗ್ಹ್ಯಾಮ್ ಅರಮನೆ. ಇದು ಪ್ರಧಾನ ಮುಂಭಾಗ, ಪೂರ್ವದ ಮುಂಭಾಗ; ಇದನ್ನು ಮೂಲತಃ ಎಡ್ವರ್ಡ್ ಬ್ಲೋರ್ ನಿರ್ಮಿಸಿದರು ಮತ್ತು 1850ರಲ್ಲಿ ಪೂರ್ಣಗೊಳಿಸಲಾಯಿತು.ಇದನ್ನು 1913ರಲ್ಲಿ ಸರ್ ಆಸ್ಟನ್ ವೆಬ್ ಹೊಸದಾಗಿ ರೂಪಿಸಿದ ನಂತರ ಇದು ಈಗಿನ ರೂಪವನ್ನು ಪಡೆಯಿತು.
ರಾಣಿ ವಿಕ್ಟೋರಿಯಾ, ಈಕೆ ಬಕಿಂಗ್ಹ್ಯಾಮ್ ಅರಮನೆಯಲ್ಲಿ ವಾಸಿಸಿದ ಮೊದಲ ರಾಣಿ, ಈಕೆ 1837ರಲ್ಲಿ ಅಧಿಕಾರಕ್ಕೆ ಬಂದ ನಂತರ ಹೊಸದಾಗಿ ನಿರ್ಮಿಸಿದ ಅರಮನೆಗೆ ಹೋದರು.

ಬಕಿಂಗ್ಹ್ಯಾಮ್ ಅರಮನೆ ಯು ಬ್ರಿಟಿಷ್ ರಾಜವಂಶದ ಪ್ರಧಾನ ನಿವಾಸ ಮತ್ತು ಲಂಡನ್‌ ನೆಲೆಯಾಗಿದೆ.[೧] ವೆಸ್ಟ್‌ಮಿಂಸ್ಟರ್ ನಗರದಲ್ಲಿರುವ ಈ ಅರಮನೆಯು ರಾಜ್ಯದ ವಿಶೇಷ ಸಮಾರಂಭಗಳು ಮತ್ತು ರಾಜಯೋಗ್ಯ ಆತಿಥ್ಯಕ್ಕಿರುವ ಒಂದು ವ್ಯವಸ್ಥೆಯಾಗಿದೆ. ಇದು ರಾಷ್ಟ್ರೀಯ ಸಂತೋಷ ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ರಿಟಿಷ್ ಜನರು ಸೇರುವ ಒಂದು ಮುಖ್ಯ ಕೇಂದ್ರ.

ಮೂಲತಃ ಬಕಿಂಗ್ಹ್ಯಾಮ್‌ ನಿವಾಸ ವೆಂದು ಕರೆಯಲ್ಪಡುತ್ತಿದ್ದ ಮತ್ತು ಇಂದಿನ ಅರಮನೆಯ ಮುಖ್ಯ ಭಾಗವಾಗಿರುವ ಈ ಕಟ್ಟಡವು ಕನಿಷ್ಠ ೧೫೦ ವರ್ಷಗಳ ಕಾಲ ಖಾಸಗಿ ಒಡೆತನದಲ್ಲಿದ್ದ ಜಾಗದಲ್ಲಿ ೧೭೦೫ರಲ್ಲಿ ಬಕಿಂಗ್ಹ್ಯಾಮ್‌‌ನ ಡ್ಯೂಕ್‌ಗಾಗಿ ನಿರ್ಮಿಸಿದ ಒಂದು ದೊಡ್ಡ ಪುರಭವನವಾಗಿತ್ತು. ಇದನ್ನು ನಂತರ ೧೭೬೧ರಲ್ಲಿ ಜಾರ್ಜ್ III ವಶಪಡಿಸಿಕೊಂಡು,[೨] ರಾಣಿ ಚಾರ್ಲೊಟ್‌ಗೆ ಖಾಸಗಿ ನಿವಾಸವಾಗಿ ಮಾಡಿದರು ಮತ್ತು ಅದನ್ನು "ರಾಣಿಯ ನಿವಾಸ"ವೆಂದು ಕರೆಯಲಾಯಿತು. ೧೯ನೇ ಶತಮಾನದಲ್ಲಿ, ಮುಖ್ಯವಾಗಿ ಜಾನ್ ನ್ಯಾಶ್ ಮತ್ತು ಎಡ್ವರ್ಡ್ ಬ್ಲೋರ್ ಮೊದಲಾದ ವಾಸ್ತುಶಿಲ್ಪಿಗಳು ಇದರ ಮಧ್ಯಭಾಗದ ಅಂಗಣದ ಸುತ್ತ ಮೂರು ಪಾರ್ಶ್ವ ಭಾಗಗಳನ್ನು ನಿರ್ಮಿಸಿ ವಿಸ್ತಾರಗೊಳಿಸಿದರು. ಬಕಿಂಗ್ಹ್ಯಾಮ್ ಅರಮನೆಯು ಅಂತಿಮವಾಗಿ ೧೮೩೭ರಲ್ಲಿ ರಾಣಿ ವಿಕ್ಟೋರಿಯಾರ ಒಪ್ಪಿಗೆಯೊಂದಿಗೆ ಬ್ರಿಟಿಷ್ ರಾಜರ ಅಧಿಕೃತ ರಾಜೋಚಿತ ಅರಮನೆಯಾಯಿತು. ಅಂತಿಮ ಪ್ರಮುಖ ಹೆಚ್ಚುವರಿ ರಚನೆಗಳನ್ನು ೧೯ನೇ ಶತಮಾನದ ಉತ್ತರಾರ್ಧದಲ್ಲಿ ಮತ್ತು ೨೦ನೇ ಶತಮಾನದ ಆರಂಭದಲ್ಲಿ ಮಾಡಲಾಯಿತು, ಮುಖ್ಯವಾಗಿ ಪೂರ್ವದ ಮುಂಭಾಗದಲ್ಲಿ ಪ್ರಸಿದ್ಧ ಬಾಲ್ಕನಿಯನ್ನು ನಿರ್ಮಿಸಲಾಯಿತು, ಅಲ್ಲಿ ಹೊರಗಿನ ಜನಸಮೂಹವನ್ನು ಎದುರಿಸಲು ರಾಜ-ಕುಟುಂಬವು ಸಾಂಪ್ರದಾಯಿಕವಾಗಿ ಸೇರುತ್ತಿತ್ತು. ಆದರೆ ಆ ಅರಮನೆಯ ಚ್ಯಾಪಲ್ ವಿಶ್ವ ಸಮರ II ರ ಸಂದರ್ಭದಲ್ಲಿ ಜರ್ಮನ್ ಬಾಂಬಿನಿಂದ ನಾಶಗೊಂಡಿತು; ನಂತರ ಅಲ್ಲಿ ರಾಣಿಯ ಗ್ಯಾಲರಿಯನ್ನು ನಿರ್ಮಿಸಲಾಯಿತು ಮತ್ತು ೧೯೬೨ರಲ್ಲಿ ರಾಜವಂಶದ ಸಂಗ್ರಹದ ಕಲಾಕೃತಿಗಳನ್ನು ಪ್ರದರ್ಶಿಸಲು ಸಾರ್ವಜನಿಕರಿಗೆ ತೆರವುಗೊಳಿಸಲಾಯಿತು.

೧೯ನೇ ಶತಮಾನದ ಆರಂಭದ ಮೂಲಭೂತ ಒಳಾಂಗಣ ವಿನ್ಯಾಸಗಳಲ್ಲಿ ಪ್ರಕಾಶಮಾನ ಬಣ್ಣದ ಗಾರೆಕಲ್ಲು ಹಾಗೂ ನೀಲಿ ಮತ್ತು ಗುಲಾಬಿ ಬಣ್ಣದ ಲ್ಯಾಪಿಸ್‌ಅನ್ನು ವ್ಯಾಪಕವಾಗಿ ಬಳಸಲಾಯಿತು, ಸರ್ ಚಾರ್ಲ್ಸ್ ಲಾಂಗ್‌ರ ಸೂಚನೆಯೊಂದಿಗೆ ಮಾಡಲಾದ ಇವುಗಳಲ್ಲಿ ಹೆಚ್ಚಿನವು ಈಗಲೂ ಉಳಿದಿವೆ. ರಾಜ ಎಡ್ವರ್ಡ್ VII ಬೆಲ್ಲೆ ಎಪೋಕ್ಯೂ ಕೆನೆಬಣ್ಣದ ಮತ್ತು ಬಂಗಾರ ಬಣ್ಣದ ಯೋಜನೆಯಲ್ಲಿ ಭಾಗಶಃ ಪುನರಲಂಕರಣವನ್ನು ಮಾಡಿದರು. ಅನೇಕ ಸಣ್ಣ ಸ್ವಾಗತ ಕೊಠಡಿಗಳನ್ನು ಬ್ರೈಟನ್‌ನ ರಾಯಲ್ ಪೆವಿಲಿಯನ್ ಮತ್ತು ಕಾರ್ಲ್ಟನ್ ಹೌಸ್‌ನಿಂದ ಪಡೆದ ಪೀಠೋಪಕರಣಗಳು ಮತ್ತು ಸಲಕರಣಗಳೊಂದಿಗೆ ಚೈನೀಸ್ ಆಳ್ವಿಕೆಯ ಶೈಲಿಯಲ್ಲಿ ಸಜ್ಜುಗೊಳಿಸಲಾಗಿದೆ. ಬಕಿಂಗ್ಹ್ಯಾಮ್ ಅರಮನೆ ಉದ್ಯಾನವು ಲಂಡನ್‌‌ನಲ್ಲಿರುವ ಅತಿ ದೊಡ್ಡ ಖಾಸಗಿ ಉದ್ಯಾನವಾಗಿದೆ.

ಅಧಿಕೃತ ಮತ್ತು ರಾಜ್ಯ ಮನರಂಜನೆಗೆ ಬಳಸುವ ವೈಭವದ ಕೋಣೆಗಳನ್ನು ಅರಮನೆಯ ಬೇಸಿಗೆಯ ಪ್ರದರ್ಶನವಾಗಿ ಪ್ರತಿ ವರ್ಷ ಹೆಚ್ಚಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕರಿಗೆ ತೆರವುಗೊಳಿಸಲಾಗುತ್ತದೆ. ಈ ಅರಮನೆಯನ್ನು ಕೆಲವೊಮ್ಮೆ ಆಡುಮಾತಿನಲ್ಲಿ ಬಕ್ ಹೌಸ್ ಎಂದು ಕರೆಲಾಗುತ್ತದೆ.

ಇತಿಹಾಸ[ಬದಲಾಯಿಸಿ]

ಸುಮಾರು 1710ರ ಅವಧಿಯ ಬಕಿಂಗ್ಹ್ಯಾಮ್‌ ನಿವಾಸ, ಇದನ್ನು ನಾರ್ಮನ್‌ಬೈ ಮತ್ತು ಬಕಿಂಗ್ಹ್ಯಾಮ್‌‌ನ ಮೊದಲ ಡ್ಯೂಕ್‌ಗಾಗಿ ವಿಲಿಯಂ ವಿಂಡೆಯು ವಿನ್ಯಾಸಗೊಳಿಸಿದರು.ಈ ಮುಂಭಾಗವು ಪ್ರಾಂಗಣದ ಪಶ್ಚಿಮ (ಒಳಗಿನ) ಭಾಗದಲ್ಲಿ ಇಂದಿನ ಭವ್ಯ ಪ್ರವೇಶವಾಗಿ ವಿಕಸಿಸಿದೆ, ಮೇಲೆ ಹಸಿರು ಭೇಟಿ-ಕೊಠಡಿಯಿದೆ.

ಜಾಗ[ಬದಲಾಯಿಸಿ]

ಮಧ್ಯ ಯುಗದಲ್ಲಿ, ಬಕಿಂಗ್ಹ್ಯಾಮ್ ಅರಮನೆಯ ಜಾಗವನ್ನು ಮೇನರ್ ಆಫ್ ಎಬರಿಯ (ಅಯ ಎಂದೂ ಕರೆಯುತ್ತಾರೆ) ಭಾಗವಾಗಿ ರಚಿಸಲಾಯಿತು. ಈ ಜವುಗು ಭೂಮಿಗೆ ಟಿಬರ್ನ್ ನದಿಯಿಂದ ನೀರು ಸರಬರಾಜು ಮಾಡಲಾಯಿತು, ಈ ನದಿಯು ಈಗಲೂ ಅರಮನೆಯ ಅಂಗಣದ ಕೆಳಗೆ ಮತ್ತು ದಕ್ಷಿಣದ ಪಾರ್ಶ್ವದಲ್ಲಿ ಹರಿಯುತ್ತದೆ.[೩] ಈ ನದಿಯನ್ನು ದಾಟಬಹುದಾದ ಸ್ಥಳದಲ್ಲಿ (ಕೌ ಫೋರ್ಡ್‌ನಲ್ಲಿ) ಐ ಕ್ರಾಸ್ ಹಳ್ಳಿಯು ಬೆಳೆಯಿತು. ಈ ಜಾಗದ ಮಾಲಿಕತ್ವವು ಅನೇಕ ಬಾರಿ ಹಲವಾರು ಮಂದಿಗೆ ಬದಲಾಯಿತು; ಇದರ ಮಾಲೀಕರಾಗಿದ್ದವರೆಂದರೆ ಸ್ಯಾಕ್ಸನ್ ಅವಧಿಯ ಉತ್ತರಾರ್ಧದಲ್ಲಿ ಎಡ್ವರ್ಡ್ ಕನ್ಫೆಸರ್ ಮತ್ತು ಆತನ ಪತ್ನಿ ಎಡಿತ್ ಆಫ್ ವೆಸ್ಸೆಕ್ಸ್ ಮತ್ತು ನಂತರ ನಾರ್ಮನ್ ಕಾಂಕ್ವೆಸ್ಟ್ ವಿಲಿಯಂ ದಿ ಕಾಂಕರರ್(ಮೊದಲನೇ ವಿಲಿಯಂ). ವಿಲಿಯಂ ಆ ಜಾಗವನ್ನು ಜಿಯೋಫ್ರಿ ಡಿ ಮ್ಯಾಂಡೆವಿಲ್ಲೆಗೆ ನೀಡಿದರು, ಆತ ಅದನ್ನು ವೆಸ್ಟ್‌ಮಿಂಸ್ಟರ್ ಅಬ್ಬೆಯ ಸಂನ್ಯಾಸಿಗಳಿಗೆ ವರ್ಗಾಯಿಸಿದರು.[೪]

೧೫೩೧ರಲ್ಲಿ, ಹೆನ್ರಿ VIII ಎಟನ್ ಕಾಲೇಜ್‌ನಿಂದ ಸೇಂಟ್ ಜೇಮ್ಸ್ ಆಸ್ಪತ್ರೆಯನ್ನು (ನಂತರ ಸೇಂಟ್ ಜೇಮ್ಸ್ ಅರಮನೆ)[೫] ವಶಪಡಿಸಿಕೊಂಡರು ಮತ್ತು ೧೫೩೬ರಲ್ಲಿ ಆತ ವೆಸ್ಟ್‌ಮಿಂಸ್ಟರ್ ಅಬ್ಬೆಯಿಂದ ಮೇನರ್ ಆಫ್ ಎಬರಿಯನ್ನು ಪಡೆದುಕೊಂಡರು.[೬] ಈ ವರ್ಗಾವಣೆಗಳು ಬಕಿಂಗ್ಹ್ಯಾಮ್ ಅರಮನೆಯ ಜಾಗವನ್ನು ಸುಮಾರು ೫೦೦ ವರ್ಷಗಳ ಹಿಂದೆ ವಿಲಿಯಂ ದಿ ಕಾಂಕೆರರ್ ಬೇರೆಯವರಿಗೆ ನೀಡಿದ ನಂತರ ಮೊದಲ ಬಾರಿಗೆ ರಾಜರ ಕೈಗೆ ಹಿಂದಿರುಗಿಸಿದವು.[೭]

ವಿವಿಧ ಮಾಲೀಕರು ಇದನ್ನು ರಾಜಯೋಗ್ಯ ಭೂಮಾಲೀಕರಿಂದ ಗೇಣಿಗೆ ತೆಗೆದುಕೊಂಡರು ಮತ್ತು ೧೭ನೇ ಶತಮಾನದಲ್ಲಿ ಉತ್ತರಾಧಿಕಾರದ ಮೂಲಕ ನಿರುಪಾಧಿಕವಾಗಿ ಪಡೆಯುವ ಹಿಡುವಳಿಯು ಹುಚ್ಚು ಸಟ್ಟಾ ಬಂಡವಾಳ ಹೂಡಿಕೆಗೆ ಸಂಬಂಧಿಸಿತ್ತು. ಅನಂತರ ಐ ಕ್ರಾಸ್ ಹಳೆಯ ಹಳ್ಳಿಯು ಕ್ಷೀಣಿಸಲು ಆರಂಭವಾಯಿತು ಮತ್ತು ಆ ಪ್ರದೇಶವು ಬಂಜರುಭೂಮಿಯಾಯಿತು.[೮] ಹಣದ ಅವಶ್ಯಕತೆಯಿಂದಾಗಿ ಜೇಮ್ಸ್ I ರಾಜವಂಶಪಾರಂಪರ್ಯವಾಗಿ ಬಂದ ಆಸ್ತಿಯ ಒಂದು ಭಾಗವನ್ನು ಮಾರಾಟ ಮಾಡಿದರು. ಮತ್ತೊಂದು ಭಾಗವನ್ನು ಉಳಿಸಿಕೊಂಡು, ಅಲ್ಲಿ ರೇಷ್ಮೆ ಕೈಗಾರಿಕೆಗಾಗಿ ಒಂದು 4-acre (16,000 m2) ಹಿಪ್ಪುನೇರಳೆ ತೋಟವನ್ನು ನಿರ್ಮಿಸಿದರು. (ಇದು ಇಂದಿನ ಅರಮನೆಯ ವಾಯವ್ಯ ಭಾಗದಲ್ಲಿದೆ.)[೯] ಕ್ಲೆಮೆಂಟ್ ವಾಕರ್ ಅನಾರ್ಕಿಯ ಆಂಗ್ಲಿಕಾನ ದಲ್ಲಿ (೧೬೪೯) 'ಎಸ್. ಜೇಮ್ಸ್‌ನ ಹಿಪ್ಪುನೇರಳೆ ತೋಟದಲ್ಲಿನ ಹೊಸದಾಗಿ ಹುಟ್ಟಿಕೊಂಡ ಸೋಡಮ್ ಮತ್ತು ಸ್ಪಿನ್ಟ್ರೀಸ್'ಅನ್ನು ಸೂಚಿಸಿದ್ದಾರೆ; ಇದು ಈ ಜಾಗವು ಭೋಗಲೋಲುಪತೆಯ ಸ್ಥಳವಾಗಿರಬಹುದೆಂಬುದನ್ನು ಸೂಚಿಸುತ್ತದೆ. ಅಂತಿಮವಾಗಿ ೧೭ನೇ ಶತಮಾನದ ಉತ್ತರಾರ್ಧದಲ್ಲಿ, ಈ ಉತ್ತರಾಧಿಕಾರದ ಮೂಲಕ ನಿರುಪಾಧಿಕವಾಗಿ ಪಡೆದ ಹಿಡುವಳಿಯನ್ನು ಆಸ್ತಿಯ ಒಡೆಯ ಸರ್ ಹ್ಯೂಘ್ ಆಡ್ಲೆಯಿಂದ ಮುಂದಿನ ಹಕ್ಕುದಾರಿಣಿ ಮೇರಿ ಡೇವಿಸ್‌‌ ವಂಶಪಾರಂಪರ್ಯವಾಗಿ ಪಡೆದರು.[೧೦]

ಆ ಜಾಗದಲ್ಲಿದ್ದ ಮೊದಲ ನಿವಾಸಗಳು[ಬದಲಾಯಿಸಿ]

ಗೋರಿಂಗ್ ನಿವಾಸ[ಬದಲಾಯಿಸಿ]

ಬಹುಶಃ ಆ ಜಾಗದಲ್ಲಿ ಸ್ಥಾಪಿಸಲಾದ ಮೊದಲ ನಿವಾಸವೆಂದರೆ ೧೬೨೪ರಲ್ಲಿ ನಿರ್ಮಿಸಲಾದ ಸರ್ ವಿಲಿಯಂ ಬ್ಲೇಕ್‌ರ ನಿವಾಸ.[೧೧] ನಂತರದ ಮಾಲೀಕರೆಂದರೆ ಲಾರ್ಡ್ ಗೋರಿಂಗ್, ಆತ ೧೬೩೩ರಿಂದ ಬ್ಲೇಕ್‌ರ ನಿವಾಸವನ್ನು ವಿಸ್ತರಿಸಿದರು ಮತ್ತು ಈಗ ಇರುವ ತೋಟದ ಹೆಚ್ಚಿನ ಭಾಗವನ್ನು ಅಭಿವೃದ್ಧಿಗೊಳಿಸಿದರು, ಆಗ ಅದನ್ನು ಗೋರಿಂಗ್ ಗ್ರೇಟ್ ಗಾರ್ಡನ್ ಎಂದು ಕರೆಯಲಾಗುತ್ತಿತ್ತು.[೧೨][೧೩] ಆದರೆ ಆತ ಆ ಹಿಪ್ಪುನೇರಳೆ ತೋಟವನ್ನು ಉತ್ತರಾಧಿಕಾರದ ಮೂಲಕ ನಿರುಪಾಧಿಕವಾಗಿ ಪಡೆಯುವ ಬಗ್ಗೆ ಆಸಕ್ತಿಯನ್ನು ತೋರಿಸಲಿಲ್ಲ. ಗೋರಿಂಗ್‌ಗೆ ತಿಳಿಯದೆ,೧೬೪೦ರಲ್ಲಿ ರಾಜ ಚಾರ್ಲ್ಸ್ I ಲಂಡನ್‌‌ಗೆ ಓಡಿಹೋಗುವುದಕ್ಕಿಂತ ಮೊದಲು ಕಾನೂನಿಗೆ ಅನುಗುಣವಾಗಿ ಜಾರಿಗೆ ತರಲು" ಅಗತ್ಯವಾದ ದಾಖಲೆಯು ಮಹಾ-ಮುದ್ರೆಯನ್ನು ಪಡೆಯಲು ವಿಫಲಗೊಂಡಿತು.[೧೪] (ಈ ನಿರ್ಣಾಯಕ ಲೋಪವು ಬ್ರಿಟಿಷ್ ರಾಜ-ಕುಟುಂಬವು ರಾಜ ಜಾರ್ಜ್ IIIರ ಅಧೀನದಲ್ಲಿ ಉತ್ತರಾಧಿಕಾರದ ಮೂಲಕ ನಿರುಪಾಧಿಕವಾಗಿ ಪಡೆಯುವ ಹಿಡುವಳಿಯನ್ನು(ಫ್ರೀಹೋಲ್ಡ್) ಪುನಃ ಸ್ವಾಧೀನಪಡಿಸಿಕೊಳ್ಳಲು ಸಹಕರಿಸಿತು.)[೧೫]

ಅರ್ಲಿಂಗ್ಟನ್ ನಿವಾಸ[ಬದಲಾಯಿಸಿ]

ದುಂದುವೆಚ್ಚ ಮಾಡುವ ಗೋರಿಂಗ್ ಗೇಣಿ ಕೊಡಲು ವಿಫಲಗೊಂಡರು;[೧೬] ನಂತರ ಅರ್ಲಿಂಗ್ಟನ್‌ನ ಮೊದಲ ಅರ್ಲ್ ಹೆನ್ರಿ ಬೆನ್ನೆಟ್ ಆ ಭವನವನ್ನು ಪಡೆದುಕೊಂಡರು ಮತ್ತು ಈಗ ಗೋರಿಂಗ್ ನಿವಾಸವೆಂದು ಕರೆಯಲ್ಪಡುವ ಅದು ೧೬೭೪ರಲ್ಲಿ ಹೊತ್ತಿಕೊಂಡಾಗ ಅದರಲ್ಲಿ ವಾಸಿಸುತ್ತಿದ್ದರು.[೧೩] ನಂತರದ ವರ್ಷದಲ್ಲಿ ಆ ಜಾಗದಲ್ಲಿ ಅರ್ಲಿಂಗ್ಟನ್ ನಿವಾಸವು -ಇಂದಿನ ಅರಮನೆಯ ದಕ್ಷಿಣದ ಪಾರ್ಶ್ವ- ನಿರ್ಮಿಸಲ್ಪಟ್ಟಿತು[೧೩] ಮತ್ತು ಅದರ ಉತ್ತರಾಧಿಕಾರದ ಮೂಲಕ ನಿರುಪಾಧಿಕವಾಗಿ ಪಡೆಯುವ ಹಿಡುವಳಿಯನ್ನು ೧೭೦೨ರಲ್ಲಿ ಖರೀದಿಸಲಾಯಿತು.

ಬಕಿಂಗ್ಹ್ಯಾಮ್‌ ಮನೆ[ಬದಲಾಯಿಸಿ]

ಈಗಿನ ಅರಮನೆಯ ವಾಸ್ತುಶಿಲ್ಪೀಯ ಜೀವಾಳವಾಗಿರುವ ನಿವಾಸವನ್ನು ೧೭೦೩ರಲ್ಲಿ ಬಕಿಂಗ್ಹ್ಯಾಮ್‌ ಮತ್ತು ನಾರ್ಮನ್‌ಬೈಯ ಮೊದಲ ಡ್ಯೂಕ್‌ಗಾಗಿ ನಿರ್ಮಿಸಲಾಯಿತು, ಇದನ್ನು ವಿಲಿಯಂ ವಿಂಡೆ ವಿನ್ಯಾಸಗೊಳಿಸಿದರು. ಇದು ಪಾರ್ಶ್ವದಲ್ಲಿ ಎರಡು ಸಣ್ಣ ಸೇವಾ ಕೊಠಡಿಗಳೊಂದಿಗೆ ದೊಡ್ಡ, ಮೂರು-ಅಂತಸ್ತಿನ ಕೇಂದ್ರ ಬ್ಲಾಕ್‌ನ ಶೈಲಿಯನ್ನು ಒಳಗೊಂಡಿತ್ತು.[೧೭] ಬಕಿಂಗ್ಹ್ಯಾಮ್‌ ನಿವಾಸವನ್ನು ಬಕಿಂಗ್ಹ್ಯಾಮ್‌ನ ವಂಶಜ ಸರ್ ಚಾರ್ಲ್ಸ್ ಶೆಫ್ಫೀಲ್ಡ್ ೧೭೬೧ರಲ್ಲಿ[೨] ಜಾರ್ಜ್ IIIಗೆ £೨೧,೦೦೦[೧೮] (೨೦೨೪ ನ ಪ್ರಕಾರ £ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".{Inflation} - NaN check amount: ೨೧,೦೦೦ or year: ೧,೭೬೧. ) ಮೌಲ್ಯಕ್ಕೆ ಮಾರಾಟ ಮಾಡಿದರು.}}) ಮೌಲ್ಯಕ್ಕೆ ಮಾರಾಟ ಮಾಡಿದರು.) ಮೌಲ್ಯಕ್ಕೆ ಮಾರಾಟ ಮಾಡಿದರು.[೧೯]

ಅಜ್ಜ ಜಾರ್ಜ್‌ II ರಂತೆ, ಜಾರ್ಜ್‌ III ಸಹ ಹಿಪ್ಪುನೇರಳೆ ತೋಟವನ್ನು ಮಾರಾಟ ಮಾಡಲು ನಿರಾಕರಿಸಿದರು, ಆದ್ದರಿಂದ ಶೆಫ್ಫೀಲ್ಡ್‌ಗೆ ಆ ಜಾಗದ ಸಂಪೂರ್ಣ ಉತ್ತರಾಧಿಕಾರದ ಮೂಲಕ ನಿರುಪಾಧಿಕವಾಗಿ ಪಡೆಯುವ ಹಿಡುವಳಿಯನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಶೆಫ್ಫೀಲ್ಡ್ ಬಕಿಂಗ್ಹ್ಯಾಮ್‌ ನಿವಾಸವನ್ನು ಮಾರಾಟ ಮಾಡಿದಾಗ, ಅದು ರಾಜ ಕುಟುಂಬದ ಕೈಗೆ ಬಂದಿತು.

ಚಿತ್ರ:Buckingham palace 1897.jpg
1897ರಲ್ಲಿದ್ದ ಬಕಿಂಗ್ಹ್ಯಾಮ್ ಅರಮನೆ ಮತ್ತು ಉದ್ಯಾನಗಳು.

ರಾಣಿಯ ನಿವಾಸದಿಂದ ಅರಮನೆಗೆ[ಬದಲಾಯಿಸಿ]

ಆ ನಿವಾಸವನ್ನು ಮೂಲತಃ ಒಂದು ಖಾಸಗಿ ಆಶ್ರಯ ಸ್ಥಾನವಾಗಿ ಅದರಲ್ಲೂ ವಿಶೇಷವಾಗಿ ರಾಣಿ ಚಾರ್ಲೊಟ್‌ಗಾಗಿ ನಿರ್ಮಿಸಲಾಗಿತ್ತು ಮತ್ತು ಅದನ್ನು ರಾಣಿಯ ನಿವಾಸವೆಂದು[೨೦] ಕರೆಯಲಾಗುತ್ತಿತ್ತು, ಅವರ ೧೫ ಮಕ್ಕಳಲ್ಲಿ ೧೪ ಮಕ್ಕಳು ಇಲ್ಲೇ ಜನಿಸಿದರು. ಸೇಂಟ್ ಜೇಮ್ಸ್‌ನ ಅರಮನೆಯು ಅಧಿಕೃತ ಮತ್ತು ಶುಭಾಶುಭ ಕರ್ಮಾಚರಣೆಗಳನ್ನು ನಡೆಸುವ ರಾಜವಂಶದ ನಿವಾಸವಾಗಿ ಉಳಿಯಿತು.[೨೧]

ಈ ನಿವಾಸಕ್ಕೆ ಹೊಸ ರೂಪ ಕೊಡುವ ಕಾರ್ಯವು ೧೭೬೨ರಲ್ಲಿ ಆರಂಭವಾಯಿತು.[೨೨] ೧೮೨೦ರಲ್ಲಿ ಪಟ್ಟಕ್ಕೆ ಬಂದ ನಂತರ ಜಾರ್ಜ್‌ IV ಒಂದು ಸಣ್ಣ, ಅನುಕೂಲಕರ ನಿವಾಸವನ್ನು ನಿರ್ಮಿಸುವ ಕಲ್ಪನೆಯೊಂದಿಗೆ ಇದರ ನವೀಕರಣವನ್ನು ಮುಂದುವರಿಸಿದರು. ನವೀಕರಣ ಕಾರ್ಯವು ಪ್ರಗತಿಯಲ್ಲಿದ್ದಾಗ ೧೮೨೬ಲ್ಲಿ ರಾಜ ತನ್ನ ವಾಸ್ತುಶಿಲ್ಪಿ ಜಾನ್ ನ್ಯಾಶ್‌ರ ನೆರವಿನೊಂದಿಗೆ ಈ ನಿವಾಸವನ್ನು ಒಂದು ಅರಮನೆಯಾಗಿ ಮಾರ್ಪಡಿಸಲು ನಿರ್ಧರಿಸಿದರು.[೨೩] ಕೆಲವು ಪೀಠೋಪಕರಣಗಳನ್ನು ಕಾರ್ಲ್ಟನ್ ನಿವಾಸದಿಂದ ತರಲಾಯಿತು ಹಾಗೂ ಮತ್ತೆ ಕೆಲವನ್ನು ಫ್ರೆಂಚ್ ಕ್ರಾಂತಿಯ ನಂತರ ಫ್ರಾನ್ಸಿನಿಂದ ಕೊಂಡುತರಲಾಯಿತು.[೨೪] ಹೊರಗಿನ ಮುಂಭಾಗವನ್ನು ಜಾರ್ಜ್‌ IV ಸೂಚಿಸಿದಂತೆ ಫ್ರೆಂಚ್ ನವ-ಕ್ಲಾಸಿಕಲ್ ಶೈಲಿಯ ಪ್ರಭಾವದಲ್ಲಿ ವಿನ್ಯಾಸಗೊಳಿಸಲಾಯಿತು. ಈ ನವೀಕರಣ ಕಾರ್ಯದ ಖರ್ಚು ಘಾತೀಯ ಪ್ರಮಾಣದಲ್ಲಿ ಹೆಚ್ಚಾಯಿತು ಮತ್ತು ೧೮೨೯ರಲ್ಲಿ ನ್ಯಾಶ್‌ನ ವಿನ್ಯಾಸಗಳ ಮಿತಿಮೀರಿದ ವೆಚ್ಚವು ಆತನನ್ನು ವಾಸ್ತುಶಿಲ್ಪಿ ಎಂಬ ಸ್ಥಾನದಿಂದ ತೆಗೆದುಹಾಕಿತು. ೧೮೩೦ರಲ್ಲಿ ಜಾರ್ಜ್‌ IV ಮರಣ ಹೊಂದಿದ ನಂತರ ಅವರ ತಮ್ಮ ವಿಲಿಯಂ IV ಈ ಕೆಲಸವನ್ನು ಪೂರ್ಣಗೊಳಿಸಲು ಎಡ್ವರ್ಡ್ ಬ್ಲೋರ್‌ರನ್ನು ನೇಮಿಸಿದರು.[೨೫][೨೬] ೧೮೩೪ರಲ್ಲಿ ಅಸ್ತಿತ್ವದಲ್ಲಿದ್ದ ಅದೇ ಹೆಸರಿನದು ಬೆಂಕಿಯಿಂದ ನಾಶಗೊಂಡ ನಂತರ, ವಿಲಿಯಂ ಈ ಅರಮನೆಯನ್ನು ಸಂಸತ್ತಿನ ಹೊಸ ನಿವಾಸಗಳಾಗಿ ಪರಿವರ್ತಿಸಲು ನಿರ್ಧರಿಸಿದರು.[೨೭]

ರಾಜವಂಶದ ನಿವಾಸ[ಬದಲಾಯಿಸಿ]

ಸುಮಾರು 1837ರಲ್ಲಿದ್ದ ಮಾರ್ಬಲ್ ಕಮಾನನ್ನು ಹೊಂದಿರುವ ಅರಮನೆ, ಇದು ಅರಮನೆಯ ಆವರಣಕ್ಕೆ ವಿಧ್ಯುಕ್ತ ಪ್ರವೇಶವಾಗಿತ್ತು.ಇದನ್ನು 1847ರಲ್ಲಿ ನಿರ್ಮಿಸಿದ ಪೂರ್ವದ ಪಾರ್ಶ್ವ ಭಾಗಕ್ಕೆ ಅವಕಾಶ ಮಾಡಿಕೊಡುವುದಕ್ಕಾಗಿ ಸರಿಸಲಾಯಿತು, ಇದು ಪ್ರಾಂಗಣವನ್ನು ಆವರಿಸಿದೆ.

ಬಕಿಂಗ್ಹ್ಯಾಮ್ ಅರಮನೆಯು ಅಂತಿಮವಾಗಿ ೧೮೩೭ರಲ್ಲಿ ರಾಣಿ ವಿಕ್ಟೋರಿಯಾರ ಒಪ್ಪಿಗೆಯಂತೆ ರಾಜವಂಶದ ಪ್ರಧಾನ ನಿವಾಸವಾಯಿತು.[೨೮] ರಾಣಿ ವಿಕ್ಟೋರಿಯಾ ಈ ಅರಮನೆಯು ಪೂರ್ಣಗೊಳ್ಳುವುದಕ್ಕಿಂತ ಮೊದಲು ಆಕೆಯ ಪೂರ್ವಾಧಿಕಾರಿ ವಿಲಿಯಂ IV ಸಾವನ್ನಪ್ಪಿದರಿಂದ ಅಲ್ಲಿ ವಾಸಿಸಿದ ಮೊದಲ ರಾಣಿಯಾಗಿದ್ದಾರೆ.[೨೯] ವೈಭವದ ಕೋಣೆಗಳು ಸ್ವರ್ಣಲೇಪ ಮತ್ತು ಬಣ್ಣದ ವಿಜೃಂಭಣೆಯಿಂದ ಕೂಡಿದ್ದವು, ಇವುಗಳಿಗೆ ಹೋಲಿಸಿದರೆ ಹೊಸ ಅರಮನೆಯ ಸೌಕರ್ಯಗಳು ಸ್ವಲ್ಪ ಕಡಿಮೆ ವೈಭವವನ್ನು ಹೊಂದಿದ್ದವು. ಹೊಗೆ ಕೊಳವೆಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಉಗುಳಿದರೆ ಬೆಂಕಿಯು ಕ್ರಮೇಣ ತಗ್ಗುವಂತೆ ಈ ಕೊಳವೆಗಳನ್ನು ರೂಪಿಸಲಾಗಿತ್ತು ಮತ್ತು ಅದರ ಪರಿಣಾಮವಾಗಿ ಅರಮನೆಯ ಒಳಾಂಗಣವು ಭಾರಿ ಪ್ರಮಾಣದ ಮಂಜಿನ ಪ್ರಭಾವಕ್ಕೆ ಒಳಗಾಯಿತು.[೩೦] ಗಾಳಿ-ಬೆಳಕುಗಳ ಸಂಚಾರವು ತುಂಬಾ ಕಡಿಮೆಯಿದ್ದುದರಿಂದ ಒಳಾಂಗಣದಲ್ಲಿ ಕೆಟ್ಟ ವಾಸನೆ ಬರುತ್ತಿತ್ತು. ಇದಕ್ಕಾಗಿ ಅನಿಲ ಲ್ಯಾಂಪುಗಳನ್ನು ಅಳವಡಿಲು ನಿರ್ಧರಿಸಿದಾಗ, ಕೆಳಗಿನ ಅಂತಸ್ತುಗಳಿಗೆ ಅನಿಲವನ್ನು ಪೂರೈಸುವ ಬಗ್ಗೆ ಗಂಭೀರ ಸಮಸ್ಯೆಯು ಎದುರಾಯಿತು. ಇಲ್ಲಿನ ಸಿಬ್ಬಂದಿಗಳು ಅಲಕ್ಷ್ಯದಿಂದ ಕೆಲಸ ಮಾಡುತ್ತಿದ್ದರು ಮತ್ತು ಮೈಗಳ್ಳರಾಗಿದ್ದರು, ಅದರಿಂದ ಅರಮನೆಯು ಸ್ವಚ್ಛವಾಗಿರಲಿಲ್ಲವೆಂದು ಹೇಳಲಾಗಿದೆ.[೩೦] ೧೮೪೦ರಲ್ಲಿ ರಾಣಿಯ ವಿವಾಹವಾದ ನಂತರ ಆಕೆಯ ಪತಿ ರಾಜ ಆಲ್ಬರ್ಟ್ ರಾಜಕುಟುಂಬದ ಗೃಹವಿಭಾಗಗಳು ಮತ್ತು ಸಿಬ್ಬಂದಿಗಳ ಪುನಸ್ಸಂಘಟನೆ ಹಾಗೂ ಅರಮನೆಯ ವಿನ್ಯಾಸ ಲೋಪಗಳ ಬಗ್ಗೆ ಗಮನ ಹರಿಸಿದರು. ಎಲ್ಲಾ ಸಮಸ್ಯೆಗಳು ೧೮೪೦ರ ಅಂತ್ಯದೊಳಗೆ ಪರಿಹರಿಸಲ್ಪಟ್ಟವು. ಆದರೆ ನಿರ್ಮಾಪಕರಿಗೆ ಆ ದಶಕದೊಳಗೆ ಮತ್ತೆ ಬರಲು ಅವಕಾಶ ಒದಗಿಬಂತು.

೧೮೪೭ರಲ್ಲಿ, ಈ ದಂಪತಿಗಳು ರಾಜಪರಿವಾರಕ್ಕೆ ಮತ್ತು ತಮ್ಮ ಬೆಳೆಯುತ್ತಿರುವ ಕುಟುಂಬಕ್ಕೆ ಈ ಅರಮನೆಯು ತುಂಬಾ ಸಣ್ಣದಾಗಿದೆಯೆಂದು ಭಾವಿಸಿದರು.[೩೧] ಅದರಿಂದಾಗಿ ಕೇಂದ್ರ ಪ್ರಾಂಗಣವನ್ನು ಆವರಿಸಿ ಹೊಸ ಪಾರ್ಶ್ವಭಾಗವನ್ನು ಎಡ್ವರ್ಡ್ ಬ್ಲೋರ್‌ರ ವಿನ್ಯಾಸದಂತೆ ಥೋಮಸ್ ಕ್ಯುಬಿಟ್ ನಿರ್ಮಿಸಿದರು.[೩೨] ಮಾಲ್‌ನ ಎದುರಿಗಿರುವ ಪೂರ್ವದಿಕ್ಕಿನ ದೊಡ್ಡ ಮುಂಭಾಗವು ಇಂದಿನ ಬಕಿಂಗ್ಹ್ಯಾಮ್ ಅರಮನೆಯ 'ಸಾರ್ವಜನಿಕ ಮುಂಭಾಗ'ವಾಗಿದೆ ಮತ್ತು ಇದು ಬಾಲ್ಕನಿಯನ್ನು ಹೊಂದಿದೆ, ಅಲ್ಲಿಂದ ರಾಜ-ಪರಿವಾರವು ಪ್ರಮುಖ ಸಂದರ್ಭಗಳಲ್ಲಿ ಮತ್ತು ವಾರ್ಷಿಕವಾಗಿ ಟ್ರೂಪಿಂಗ್ ದಿ ಕಲರ್‌ನ ನಂತರ ಜನಸ್ತೋಮವನ್ನು ಎದುರಿಸುತ್ತದೆ. ನೃತ್ಯ ಮಂದಿರ ಕೊಠಡಿಯನ್ನು ಮತ್ತು ವೈಭವದ ಕೋಣೆಗಳ ಮತ್ತೊಂದು ಗುಂಪನ್ನೂ ಈ ಅವಧಿಯಲ್ಲಿ ನಿರ್ಮಿಸಲಾಯಿತು, ಇವನ್ನು ನ್ಯಾಶ್‌ನ ಶಿಷ್ಯ ಸರ್ ಜೇಮ್ಸ್ ಪೆನ್ನೆಥ್ರೋನ್ ವಿನ್ಯಾಸಗೊಳಿಸಿದರು.

ರಾಜ ಆಲ್ಬರ್ಟ್‌ ಸಾವನ್ನಪ್ಪುವುದಕ್ಕಿಂತ ಮೊದಲು, ಆ ಅರಮನೆಯು ಸಾಧಾರಣವಾಗಿ ಸಂಗೀತ ಮನರಂಜನೆಯ ಸ್ಥಳವಾಗಿತ್ತು[೩೩] ಮತ್ತು ಶ್ರೇಷ್ಠ ಆಧುನಿಕ ಸಂಗೀತಗಾರರು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಮನರಂಜನೆ ನೀಡಿದ್ದಾರೆ. ಸಂಯೋಜಕ ಫೆಲಿಕ್ಸ್ ಮೆಂಡಲ್ಸನ್ ಅಲ್ಲಿ ಮೂರು ಸಮಾರಂಭಗಳಲ್ಲಿ ಪ್ರದರ್ಶನ ನಡೆಸಿಕೊಟ್ಟಿದ್ದಾರೆಂದು ಹೇಳಲಾಗುತ್ತದೆ.[೩೪] ಜೊಹಾನ್ ಸ್ಟ್ರಾಸ್ II ಮತ್ತು ಆತನ ವಾದ್ಯವೃಂದವು ಇಂಗ್ಲೆಂಡ್‌ನಲ್ಲಿರುವಾಗ ಈ ಅರಮನೆಯಲ್ಲಿ ಪ್ರದರ್ಶನ ನಡೆಸಿಕೊಟ್ಟರು.[೩೫] ಸ್ಟ್ರಾಸ್‌ನ "ಅಲಿಸ್ ಪೋಲ್ಕ"ವು ರಾಣಿಯ ಮಗಳು ರಾಜಕುಮಾರಿ ಅಲಿಸ್‌ಳ ಗೌರವಾರ್ಥವಾಗಿ ೧೮೪೯ರಲ್ಲಿ ಅರಮನೆಯಲ್ಲಿ ನಡೆಸಿಕೊಟ್ಟ ಮೊದಲ ಪ್ರದರ್ಶನವಾಗಿದೆ.[೩೬] ವಿಕ್ಟೋರಿಯಾರ ನಿರ್ದೇಶನದಡಿಯಲ್ಲಿ, ಬಕಿಂಗ್ಹ್ಯಾಮ್ ಅರಮನೆಯು ಸಾಧಾರಣವಾಗಿ ಅದ್ಧೂರಿ ಪೋಷಾಕು ನೃತ್ಯ ಗೋಷ್ಠಿಗಳಿಗೆ ರಂಗವಾಗುತ್ತಿತ್ತು, ಇದಕ್ಕೆ ಹೆಚ್ಚುವರಿಯಾಗಿ ಇಲ್ಲಿ ನಿಯತಕ್ರಮದಲ್ಲಿ ರಾಜೋಚಿತ ಸಮಾರಂಭಗಳು, ಅಧಿಕಾರ ಪ್ರದಾನಗಳು ಮತ್ತು ಪ್ರದರ್ಶನಗಳು ನಡೆಯುತ್ತಿದ್ದವು.

೧೮೬೧ರಲ್ಲಿ ವಿಧವೆಯಾದ ತೀವ್ರ ವ್ಯಥೆಗೊಳಗಾದ ರಾಣಿಯು ಜನಸಂಪರ್ಕದಿಂದ ದೂರ ಉಳಿದರು ಮತ್ತು ಬಕಿಂಗ್ಹ್ಯಾಮ್ ಅರಮನೆಯನ್ನು ಬಿಟ್ಟು ವಿಂಡ್ಸರ್ ಕೋಟೆ, ಬಾಲ್ಮೊರಲ್ ಕೋಟೆ ಮತ್ತು ಒಸ್ಬರ್ನ್ ನಿವಾಸದಲ್ಲಿ ವಾಸಿಸಿದರು. ಅನೇಕ ವರ್ಷಗಳ ಕಾಲ ಆ ಅರಮನೆಯನ್ನು ತೀರ ವಿರಳವಾಗಿ ಬಳಸಲಾಯಿತು ಮತ್ತು ಅಲಕ್ಷ ತೋರಿಸಲಾಯಿತು. ಅಂತಿಮವಾಗಿ, ಸಾರ್ವಜನಿಕರು ಆಕೆಗೆ ಲಂಡನ್‌ಗೆ ಹಿಂದಿರುಗುವಂತೆ ಬಲವಂತ ಪಡಿಸಿದರೂ ಆಕೆ ಸಾಧ್ಯವಾದಾಗಲೆಲ್ಲಾ ಬೇರೆ ಕಡೆ ವಾಸಿಸಲು ಇಷ್ಟಪಡುತ್ತಿದ್ದರು. ರಾಜಪರಿವಾರದ ಕಾರ್ಯಕ್ರಮಗಳೂ ಸಹ ಅರಮನೆಯ ಬದಲಿಗೆ ವಿಂಡ್ಸರ್ ಕೋಟೆಯಲ್ಲಿ ನಡೆಯುತ್ತಿದ್ದವು, ಸದಾ ಶೋಕ ಪ್ರದರ್ಶನ ಕರಿಯ ಉಡುಪನ್ನು ಧರಿಸಿದ ಮಂಕಾದ ರಾಣಿಯು ಆ ಕಾರ್ಯಕ್ರಮಗಳ ಅಧ್ಯಕ್ಷತೆಯ ವಹಿಸುತ್ತಿದ್ದರು. ಅನೇಕ ವರ್ಷಗಳ ಕಾಲ ಬಕಿಂಗ್ಹ್ಯಾಮ್ ಅರಮನೆಯನ್ನು ಮುಚ್ಚಲಾಗಿತ್ತು.[೩೭]

ಒಳಾಂಗಣ[ಬದಲಾಯಿಸಿ]

ಬಕಿಂಗ್ಹ್ಯಾಮ್ ಅರಮನೆಯ ಮುಖ್ಯ ಅಂತಸ್ತು.A: ವೈಭವದ ಊಟದ ಮನೆ; B: ನೀಲಿ ಭೇಟಿ-ಕೊಠಡಿ; C: ಸಂಗೀಕ ಕೊಠಡಿ; D: ಬಿಳಿ ಭೇಟಿ-ಕೊಠಡಿ; E: ರಾಜಪರಿವಾರದ ಏಕಾಂತ-ಕೋಣೆ; F: ಸಿಂಹಾಸನದ ಕೊಠಡಿ; G: ಹಸಿರು ಭೇಟಿ-ಕೊಠಡಿ; H: ಅಡ್ಡ ಗ್ಯಾಲರಿ; J: ನೃತ್ಯ-ಮಂದಿರ; K: ಪೂರ್ವ ಗ್ಯಾಲರಿ; L: ಹಳದಿ ಭೇಟಿ-ಕೊಠಡಿ; M: ಕೇಂದ್ರ/ಬಾಲ್ಕನಿ ಕೊಠಡಿ; N: ಚೈನೀಸ್ ಉಪಹಾರ ಕೊಠಡಿ; O: ಪ್ರಧಾನ ಕಾರಿಡಾರ್; P: ಖಾಸಗಿ ವಿಭಾಗಗಳು; Q: ಸೇವಾ ಭಾಗಗಳು; W: ಭವ್ಯ ಮೆಟ್ಟಿಲ ಸಾಲು. ನೆಲ ಅಂತಸ್ತಿನಲ್ಲಿ: R: ರಾಯಭಾರಿಗಳ ಪ್ರವೇಶ; T: ಭವ್ಯ ಪ್ರವೇಶ.ಕಪ್ಪು ಗೋಡೆಗಳಿಂದ ನಿರೂಪಿಸಿದ ಭಾಗಗಳು ಕೆಳಗಿನ ಅಮುಖ್ಯ ಪಾರ್ಶ್ವಗಳನ್ನು ಸೂಚಿಸುತ್ತವೆ.ಗಮನಿಸಿ: ಇದು ಉಲ್ಲೇಖಕ್ಕಾಗಿ ಮಾತ್ರ ಇರುವ ಒಂದು ಅಳತೆ ಮಾಡದ ಸ್ಥೂಲ ಚಿತ್ರವಾಗಿದೆ.ಕೆಲವು ಕೊಠಡಿಗಳ ಗಾತ್ರವು ನಿಜವಾಗಿ ಸ್ವಲ್ಪ ಭಿನ್ನವಾಗಿರಬಹುದು.

ಈ ಅರಮನೆಯು ೧೦೮ ಮೀಟರ್‌ಗಳಷ್ಟು ಉದ್ದ ಮತ್ತು ೧೨೦ ಮೀಟರ್‌ಗಳಷ್ಟು ಅಗಲವಿದೆ. ೨೪ ಮೀಟರ್‌ಗಳಷ್ಟು ಎತ್ತರವಿರುವ ಇದು ಸುಮಾರು 77,000 m2 (830,000 sq ft) ನಷ್ಟು ವಿಸ್ತೀರ್ಣವನ್ನು ಹೊಂದಿದೆ.[೩೮] ಅರಮನೆಯ ಹಿಂಭಾಗದಲ್ಲಿ ಪಶ್ಚಿಮಕ್ಕೆ ಮುಖಮಾಡಿರುವ ತೋಟದ ಮುಂದುಗಡೆಯ ಹಿಂಭಾಗದಲ್ಲಿರುವ ಮುಖ್ಯ ಅಂತಸ್ತಿನಲ್ಲಿ ಅರಮನೆಯ ಪ್ರಧಾನ ಕೊಠಡಿಗಳಿವೆ. ಈ ಅಲಂಕೃತ ವೈಭವದ ಕೋಣೆಗಳ ಗುಂಪಿನ ಮುಖ್ಯ ಕೇಂದ್ರವೆಂದರೆ ಸಂಗೀತ ಕೊಠಡಿ, ಇದರ ದೊಡ್ಡ ಕಮಾನು ಮುಂಭಾಗದ ಪ್ರಧಾನ ಲಕ್ಷಣವಾಗಿದೆ. ಸಂಗೀತ ಕೊಠಡಿಯ ಪಕ್ಕದಲ್ಲಿ ನೀಲಿ ಮತ್ತು ಬಿಳಿ ಭೇಟಿ-ಕೊಠಡಿಗಳಿವೆ. ಈ ಕೊಠಡಿಗಳ ಮಧ್ಯದಲ್ಲಿ ವೈಭವದ ಕೋಣೆಗಳಿಗೆ ಸಂಪರ್ಕ ಕಲ್ಪಿಸುವ ಕಾರಿಡಾರ್ ಆಗಿ ಒಂದು ಚಿತ್ರ ಗ್ಯಾಲರಿ ಇದೆ, ಇದು ೫೫ ಗಜಗಳಷ್ಟು (೫೦ ಮೀಟರ್) ಉದ್ದವಿದ್ದು ಎದ್ದು ಕಾಣುತ್ತದೆ.[೩೯] ಈ ಗ್ಯಾಲರಿಯಲ್ಲಿ ರೆಂಬ್ರ್ಯಾಡ್ಟ್, ವ್ಯಾನ್ ಡಿಕ್, ರುಬೆನ್ಸ್ ಮತ್ತು ವರ್ಮೀರ್ ಮೊದಲಾದವರ ಚಿತ್ರಗಳನ್ನೂ ಒಳಗೊಂಡಂತೆ ಅಸಂಖ್ಯಾತ ಚಿತ್ರಗಳನ್ನು ಜೋಡಿಸಲಾಗಿದೆ;[೪೦][೪೧] ಚಿತ್ರ ಗ್ಯಾಲರಿಯ ನಂತರ ಮುಖ್ಯವಾದ ಕೋಣೆಗಳೆಂದರೆ ಸಿಂಹಾಸನ ಕೊಠಡಿ ಮತ್ತು ಹಸಿರು ಭೇಟಿ ಕೊಠಡಿ. ಹಸಿರು ಭೇಟಿ ಕೊಠಡಿಯು ಸಿಂಹಾಸನ ಕೊಠಡಿಗೆ ಒಂದು ವಿಶಾಲ ಪ್ರವೇಶ ಕೋಣೆಯಾಗಿದೆ ಮತ್ತು ಇದು ಮುಖ್ಯ ಮೆಟ್ಟಿಲ ಸಾಲಿನ ಮೇಲ್ಭಾಗದಲ್ಲಿ ರಕ್ಷಾ-ಗೃಹದಿಂದ ಸಿಂಹಾಸನದೆಡೆಗೆ ಹೋಗುವ ಕರ್ಮಾಚರಣೆಯ ಹಾದಿಯ ಭಾಗವಾಗಿದೆ.[೩೯] ರಕ್ಷಾ-ಗೃಹವು ರೋಮನ್ ಪೋಷಾಕಿನಲ್ಲಿರುವ ರಾಣಿ ವಿಕ್ಟೋರಿಯಾ ಮತ್ತು ರಾಜ ಆಲ್ಬರ್ಟ್‌ರ ಬಿಳಿ ಮಾರ್ಬಲ್ ಶಿಲ್ಪಗಳನ್ನು ಹೊಂದಿದೆ, ಅವನ್ನು ಚಿತ್ರ ನೇಯ್ದ ಕೈಮಗ್ಗದ ಬಟ್ಟೆಯಿಂದ ಒಳಪದರ ಜೋಡಿಸಿದ ನ್ಯಾಯವೇದಿಕೆಯಲ್ಲಿ ಜೋಡಿಸಲಾಗಿದೆ. ಈ ಸಾಂಪ್ರದಾಯಿಕ ಕೊಠಡಿಗಳನ್ನು ಕೇವಲ ಕರ್ಮಾಚರಣೆಯ ಮತ್ತು ಅಧಿಕೃತ ಮನರಂಜನೆಗೆ ಮಾತ್ರ ಬಳಸಲಾಗುತ್ತದೆ, ಆದರೆ ಪ್ರತಿ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ತೆರವುಗೊಳಿಸಲಾಗುತ್ತದೆ.

ಈ ವೈಭವದ ಕೋಣೆಗಳ ಕೆಳಗೆ ಸ್ವಲ್ಪ ಕಡಿಮೆ ವಿಜೃಂಭಣೆಯ ಕೋಣೆಗಳಿವೆ, ಅವನ್ನು ಅರೆ-ವೈಭವದ ಕೋಣೆಗಳೆಂದು ಕರೆಯಲಾಗುತ್ತದೆ. ಮಾರ್ಬಲ್ ಹಜಾರದಿಂದ ತೆರೆದುಕೊಳ್ಳುವ ಈ ಕೊಠಡಿಗಳನ್ನು ಸ್ವಲ್ಪ ಕಡಿಮೆ ಸಾಂಪ್ರದಾಯಿಕ ಮನರಂಜನೆಗೆ ಬಳಸಲಾಗುತ್ತದೆ, ಉದಾ. ಉಪಹಾರ ಪಾರ್ಟಿಗಳು ಮತ್ತು ಖಾಸಗಿ ಭೇಟಿ. ಕೆಲವು ಕೊಠಡಿಗಳನ್ನು ವಿಶೇಷ ಸಂದರ್ಶಕರಿಗಾಗಿ ಸೂಚಿಸಲಾಗಿದೆ ಮತ್ತು ಅಲಂಕರಿಸಲಾಗಿದೆ, ಉದಾಹರಣೆಗಾಗಿ, ೧೮೪೪ ಕೊಠಡಿ , ಇದನ್ನು ರಷ್ಯಾದ ಚಕ್ರವರ್ತಿ ನಿಕೋಲಸ್ Iರ ರಾಜ್ಯ ಭೇಟಿಗಾಗಿ ಆ ವರ್ಷದಲ್ಲಿ ಅಲಂಕರಿಸಲಾಗಿತ್ತು ಹಾಗೂ ಕಮಾನು ಕೊಠಡಿಯ ಮತ್ತೊಂದು ಪಕ್ಕದಲ್ಲಿರುವ ೧೮೫೫ ಕೊಠಡಿ , ಇದನ್ನು ಫ್ರಾನ್ಸಿನ ನೆಪೋಲಿಯನ್ IIIರ ಭೇಟಿಯ ಗೌರವಾರ್ಥವಾಗಿ ವ್ಯವಸ್ಥೆಗೊಳಿಸಲಾಗಿತ್ತು.[೪೨] ಇವುಗಳ ಮಧ್ಯಭಾಗದಲ್ಲಿರುವುದು ಕಮಾನು ಕೊಠಡಿ. ಇಲ್ಲಿಗೆ ವಾರ್ಷಿಕವಾಗಿ ಸಾವಿರಾರು ಅತಿಥಿಗಳು ರಾಣಿಯ ಉದ್ಯಾನ ಪಾರ್ಟಿಗಳಿಗಾಗಿ ಬರುತ್ತಿರುತ್ತಾರೆ.[೪೩] ರಾಣಿಯು ಉತ್ತರ ಪಾರ್ಶ್ವದಲ್ಲಿರುವ ಕೊಠಡಿಗಳ ಒಂದು ಸಣ್ಣ ಗುಂಪನ್ನು ಖಾಸಗಿಯಾಗಿ ಬಳಸಿಕೊಳ್ಳುತ್ತಾರೆ.

1887ರಲ್ಲಿದ್ದ ರಾಜ ಆಲ್ಬರ್ಟ್‌ರ ಸಂಗೀತ ಕೊಠಡಿ, ಇದು ಅರಮನೆಯಲ್ಲೇ ಸಣ್ಣ, ಕಡಿಮೆ ಸಾಂಪ್ರದಾಯಿಕ ಕೊಠಡಿಯಾಗಿದೆ.

೧೮೪೭ ಮತ್ತು ೧೮೫೦ರ ಸಂದರ್ಭದಲ್ಲಿ, ಬ್ಲೋರ್ ಪೂರ್ವದ ಹೊಸ ಪಾರ್ಶ್ವ ಭಾಗವನ್ನು ನಿರ್ಮಿಸುತ್ತಿದ್ದಾಗ ಬ್ರೈಟನ್ ಪೆವಿಲಿಯನ್‌ನಿಂದ ಮತ್ತೊಮ್ಮೆ ಪೀಠೋಪಕರಣಗಳನ್ನು ಕದಿಯಲಾಯಿತು. ಅದರ ಪರಿಣಾಮವಾಗಿ, ಹೊಸ ಪಾರ್ಶ್ವ ಭಾಗದ ಹೆಚ್ಚಿನ ಕೊಠಡಿಗಳು ಒಂದು ವಿಭಿನ್ನ ಪೌರಸ್ತ್ಯ ವಾತಾವರಣವನ್ನು ಹೊಂದಿವೆ. ಕೆಂಪು ಮತ್ತು ನೀಲಿ ಚೈನೀಸ್ ಉಪಹಾರ ಕೊಠಡಿಯನ್ನು ಬ್ರೈಟನ್ ಭೋಜನ ಕೂಟ ಮತ್ತು ಸಂಗೀತ ಕೊಠಡಿಗಳ ಭಾಗಗಳಿಂದ ರಚಿಸಲಾಗಿದೆ, ಆದರೆ ಇದು ಡಬ್ಲ್ಯೂ. ಎಮ್. ಫೀತ್ಯಾಮ್ ವಿನ್ಯಾಸಗೊಳಿಸಿದ ಒಂದು ಹೊಗೆ-ಕೊಳವೆಯನ್ನೂ ಹೊಂದಿದೆ. ಹಳದಿ ಬೇಟಿ-ಕೊಠಡಿಯು ಅಲಂಕಾರದ ನಮೂನೆಗಳನ್ನೊಳಗೊಂಡ ಗೋಡೆ-ಕಾಗದವನ್ನು ಹೊಂದಿದೆ, ಇದನ್ನು ೧೮೧೭ರಲ್ಲಿ ಬ್ರೈಟನ್ ಸಭಾಂಗಣಕ್ಕೆ ಪೂರೈಸಲಾಗಿತ್ತು ಮತ್ತು ಈ ಕೊಠಡಿಯಲ್ಲಿರುವ ಹೊಗೆ-ಕೊಳವೆಯು ಗೂಡಿನಲ್ಲಿ ತಲೆತೂಗುತ್ತಿರುವ ಚೀನೀ ಬೊಂಬೆಗಳು ಮತ್ತು ಭಯಂಕರವಾಗಿ ಕಾಣುವ ರೆಕ್ಕೆಗಳಿರುವ ಡ್ರ್ಯಾಗನ್ ಚಿತ್ರಗಳನ್ನು ಹೊಂದಿರುವ ಚೈನೀಸ್ ಹೊಗೆ-ಕೊಳವೆಯು ಹೇಗೆ ಕಾಣಬಹುದು ಎಂಬುದರ ಒಂದು ಯುರೋಪಿಯನ್ ನೋಟವಾಗಿದೆ, ಇದನ್ನು ರಾಬರ್ಟ್ ಜೋನ್ಸ್ ವಿನ್ಯಾಸಗೊಳಿಸಿದ್ದಾರೆ.[೪೪]

ರಾಣಿಯ ಉಪಹಾರ ಕೊಠಡಿ

ಈ ಪಾರ್ಶ್ವ ಭಾಗದ ಕೇಂದ್ರದಲ್ಲಿ ಪ್ರಸಿದ್ಧ ಬಾಲ್ಕನಿಯಿದೆ, ಅದರ ಗಾಜಿನ ದ್ವಾರಗಳ ಹಿಂದೆ ಕೇಂದ್ರ ಕೊಠಡಿಯಿದೆ. ಇದು ಚೈನೀಸ್-ಶೈಲಿಯ ಸಭಾಂಗಣವಾಗಿದೆ, ಇದನ್ನು ವಿನ್ಯಾಸಕ ಸರ್ ಚಾರ್ಲ್ಸ್ ಅಲ್ಲಮ್‌ನ ನೆರವಿನೊಂದಿಗೆ ೧೯೨೦ರ ಉತ್ತರಾರ್ಧದಲ್ಲಿ ಹೆಚ್ಚು "ಬಂಧಕ"[೪೫] ಚೀನೀಸ್ ಅಂಶವನ್ನು ರಚಿಸಿದ ರಾಣಿ ಮೇರಿ ವರ್ಧಿಸಿದರು, ಆದರೂ ಲ್ಯಾಕರ್ ದ್ವಾರಗಳನ್ನು ಬ್ರೈಟನ್‌ನಿಂದ ೧೮೭೩ರಲ್ಲಿ ತೆಗೆದುಕೊಂಡುಬರಲಾಗಿತ್ತು. ಪೂರ್ವ ಪಾರ್ಶ್ವ ಭಾಗದ ಮುಖ್ಯ ಅಂತಸ್ತಿನ ಉದ್ದಕ್ಕೂ ಪ್ರಧಾನ ಕಾರಿಡಾರ್ ಎನ್ನುವ ವಿಶೇಷ ಗ್ಯಾಲರಿಯಿದೆ, ಇದು ಪ್ರಾಂಗಣದ ಪೂರ್ವ ಭಾಗದಾದ್ಯಂತ ಹರಡಿಕೊಂಡಿದೆ.[೪೬] ಇದು ಪ್ರತಿಬಿಂಬಿಸುವ ಬಾಗಿಲುಗಳು ಮತ್ತು ಅಡ್ಡ ಗೋಡೆಗಳನ್ನು ಹೊಂದಿದೆ, ಇವು ಬ್ರೈಟನ್‌‌ನ ಪೋರ್ಸೆಲೈನ್ ಪಗೋಡಗಳು ಮತ್ತು ಇತರ ಪೌರಾಸ್ತ್ಯ ಪೀಠೋಪಕರಣಗಳನ್ನು ಹೋಲುತ್ತವೆ. ಚೈನೀಸ್ ಉಪಹಾರ ಕೊಠಡಿ ಮತ್ತು ಹಳದಿ ಭೇಟಿ ಕೊಠಡಿಯು ಈ ಗ್ಯಾಲರಿಯ ಎರಡೂ ಕೊನೆಯಲ್ಲಿವೆ ಹಾಗೂ ಕೇಂದ್ರ ಕೊಠಡಿಯು ಇದರ ಮಧ್ಯಭಾಗದಲ್ಲಿದೆ.

೧೯ನೇ ಶತಮಾನದ ಮೂಲತಃ ಒಳಾಂಗಣ ವಿನ್ಯಾಸಗಳೆಂದರೆ ಪ್ರಕಾಶಮಾನ ಬಣ್ಣದ ಗಾರೆಕಲ್ಲು ಹಾಗೂ ನೀಲಿ ಮತ್ತು ಗುಲಾಬಿ ಬಣ್ಣದ ಲ್ಯಾಪಿಸ್‍‌‌‌ಗಳ ವ್ಯಾಪಕ ಬಳಕೆ, ಇದನ್ನು ಸರ್ ಚಾರ್ಲ್ಸ್ ಲಾಂಗ್‌ರ ಮಾರ್ಗದರ್ಶನದಂತೆ ಮಾಡಲಾಯಿತು. ಈ ವಿನ್ಯಾಸಗಳಲ್ಲಿ ಹೆಚ್ಚಿನವು ಈಗಲೂ ಉಳಿದಿವೆ. ರಾಜ ಎಡ್ವರ್ಡ್ VII ಬೆಲ್ಲೆ ಎಪೋಕ್ಯೂ ಕೆನೆಬಣ್ಣದ ಮತ್ತು ಬಂಗಾರ ಬಣ್ಣದ ಯೋಜನೆಯಲ್ಲಿ ಭಾಗಶಃ ಪುನರಲಂಕರಣವನ್ನು ಮಾಡಿದರು.[೪೭]

ಬ್ರಿಟನ್‌ಗೆ ಭೇಟಿ ನೀಡುವಾಗ ವಿದೇಶಿ ಮುಖಂಡರಿಗೆ ಸಾಮಾನ್ಯವಾಗಿ ಬಕಿಂಗ್ಹ್ಯಾಮ್ ಅರಮನೆಯಲ್ಲಿ ರಾಣಿಯು ಮನರಂಜನಾ ಕೂಟಗಳನ್ನು ಏರ್ಪಡಿಸುತ್ತಾರೆ. ಅವರಿಗೆ ಬೆಲ್ಜಿಯನ್ ಕೊಠಡಿಗಳ ಗುಂಪು ಎಂದು ಕರೆಯುವ ಕೋಣೆಗಳ ದೊಡ್ಡ ಗುಂಪೊಂದನ್ನು ನಿಗದಿಪಡಿಸಲಾಗುತ್ತದೆ, ಅವು ಮಂತ್ರಿಯ ಮೆಟ್ಟಿಲು ಸಾಲಿನ ಬುಡದಲ್ಲಿ, ಉತ್ತರಕ್ಕೆ ಮುಖಮಾಡಿರುವ ಉದ್ಯಾನದ ಪಾರ್ಶ್ವ ಭಾಗದ ನೆಲ ಅಂತಸ್ತಿನಲ್ಲಿವೆ. ಈ ಕೊಠಡಿಗಳ ಗುಂಪು ಕಿರಿದಾದ ಕಾರಿಡಾರ್‌ಗಳಿಂದ ಕೂಡಿಸಲ್ಪಟ್ಟಿವೆ, ಇವುಗಳಿಗೆ ಸಾಸರ್ ಕಮಾನು-ಚಾವಣೆಗಳು ಒಂದು ಹೆಚ್ಚುವರಿ ಎತ್ತರವನ್ನು ನೀಡಿವೆ, ಇವನ್ನು ನ್ಯಾಶ್ ಸೋಯಾನೆ ಶೈಲಿಯಲ್ಲಿ ವಿನ್ಯಾಸಗೊಳಿಸಿದ್ದಾರೆ.[೪೮] ಈ ಕೋಣೆಗಳ ಗುಂಪಿನ ಎರಡನೇ ಕಾರಿಡಾರ್ ಗಾತಿಕ್ ಪ್ರಭಾವಿತ ಅಡ್ಡ ಕಮಾನು-ಚಾವಣಿಯನ್ನು ಹೊಂದಿದೆ.[೪೮] ಬೆಲ್ಜಿಯನ್ ಕೊಠಡಿಗಳನ್ನು ಅವುಗಳ ಈಗಿರುವ ಶೈಲಿಯಲ್ಲೇ ಅಲಂಕರಿಸಲಾಗಿತ್ತು ಮತ್ತು ಅವುಗಳಿಗೆ ರಾಜ ಆಲ್ಬರ್ಟ್‌ರ ಅಂಕಲ್ ಮತ್ತು ಬೆಲ್ಜಿಯನ್ನರ ಮೊದಲ ರಾಜ ಲಿಯೊಪೋಲ್ಡ್ Iರ ಹೆಸರನ್ನು ಇಡಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಆ ಕೊಠಡಿಗಳ ಗುಂಪನ್ನು ವಿದೇಶಿ ಮುಖಂಡರಿಗೆ ಪ್ರತ್ಯೇಕವಾಗಿ ಮೀಸಲಿರಿಸಲಾಗಿರಲಿಲ್ಲ; ೧೯೩೬ರಲ್ಲಿ, ಅಲ್ಲಿ ಎಡ್ವರ್ಡ್ VIII ವಾಸಿಸಲು ಆರಂಭಿಸಿದಾಗ ಆ ಕೊಠಡಿಗಳ ಗುಂಪು ಅರಮನೆಯ ಖಾಸಗಿ ವಿಭಾಗವಾದವು.[೪೯]

ರಾಜಪರಿವಾರದ ಸಮಾರಂಭಗಳು[ಬದಲಾಯಿಸಿ]

ಬಕಿಂಗ್ಹ್ಯಾಮ್ ಅರಮನೆಯಲ್ಲೇ ಅತ್ಯಂತ ದೊಡ್ಡ ಕೊಠಡಿ ನೃತ್ಯ ಮಂದಿರ.ಇದನ್ನು ರಾಣಿ ವಿಕ್ಟೋರಿಯಾ ಸೇರಿಸಿದರು ಮತ್ತು ಇದನ್ನು ಬಿರುದು-ಪ್ರದಾನ ಮತ್ತು ವೈಭವದ ಔತಣ-ಕೂಟಗಳಂತಹ ಸಮಾರಂಭಗಳಿಗೆ ಬಳಸಲಾಗುತ್ತದೆ.ಈ ಚಿತ್ರವು 1856ರಷ್ಟು ಹಿಂದಿನದಾಗಿದೆ.ಬಹುವರ್ಣೀಯ ಸಂಯೋಜನೆಯನ್ನು ಮುಖ್ಯವಾಗಿ ಚಿನ್ನದ ಬಣ್ಣದ ಬಿಡಿಭಾಗಗಳು ಮತ್ತು ಕೆಂಪು ಸಜ್ಜುಗಳೊಂದಿಗೆ ಬಿಳಿ ಅಲಂಕಾರದಿಂದ ಬದಲಿಸಲಾಗಿದೆ.

ರಾಜಪರಿವಾರದ ಉಡುಗೆ[ಬದಲಾಯಿಸಿ]

ಹಿಂದೆ, ಮಿಲಿಟರಿ ಸಮವಸ್ತ್ರವನ್ನು ಧರಿಸದ ಪುರುಷರು ೧೮ನೇ ಶತಮಾನದ ವಿನ್ಯಾಸದ ಬ್ರಿಚಿಸ್‌ಗಳನ್ನು ಧರಿಸಬೇಕಾಗಿತ್ತು. ಮಹಿಳೆಯರ ಸಂಜೆಯುಡುಪೆಂದರೆ ಹಿಂದುಗಡೆ ಇಳಿಬಿದ್ದ ನಿಲುವಂಗಿ ಮತ್ತು ತಲೆಯುಡಿಗೆ ಅಥವಾ ತಲೆಕೂದಲಲ್ಲಿ ಗರಿಗಳನ್ನು ಸಿಕ್ಕಿಸಿಕೊಳ್ಳುವುದು (ಅಥವಾ ಎರಡೂ).

ರಾಜಪರಿವಾರದ ಸಾಂಪ್ರದಾಯಿಕ ಸಮವಸ್ತ್ರ ಮತ್ತು ಉಡುಪನ್ನು ನಿಯಂತ್ರಿಸುವ ಪೋಷಾಕು-ಕೋಡ್ ಕ್ರಮೇಣ ಸಡಿಲಗೊಂಡಿತು. ವಿಶ್ವ ಸಮರ I ರ ನಂತರ, ರಾಣಿ ಮೇರಿಯು ತನ್ನ ಲಂಗವನ್ನು ಕೆಲವು ಇಂಚುಗಳಷ್ಟು ಗಿಡ್ಡಗೊಳಿಸುವ ಮೂಲಕ ಫ್ಯಾಷನ್ ಆಗಿರಲು ಬಯಸಿದರಿಂದ, ಆಕೆ ರಾಜನ ಪ್ರತಿಕ್ರಿಯೆಯನ್ನು ಅಳೆಯಲು ಮೊದಲು ರಾಣಿಯ ಸೆಜ್ಜೆವಳ್ತಿ(ಲೇಡಿ-ಇನ್-ವೈಟಿಂಗ್)ಯ ಲಂಗವನ್ನು ಗಿಡ್ಡಗೊಳಿಸುವಂತೆ ಕೇಳಿದರು. ಇದರಿಂದ ರಾಜ ಜಾರ್ಜ್ V ದಿಗಿಲುಗೊಂಡರು ಮತ್ತು ಆಕೆಯ ಲಂಗದ ಕೆಳಅಂಚು ಫ್ಯಾಷನ್ ಆಗಿರದೆ ಹಾಗೆಯೇ ಉಳಿದುಕೊಂಡಿತು.[೫೦] ಅನಂತರ ರಾಜ ಜಾರ್ಜ್ VI ಮತ್ತು ಆತನ ಪತ್ನಿ ರಾಣಿ ಎಲಿಜಬೆತ್ ಹಗಲು ಹೊತ್ತಿನ ಲಂಗಗಳನ್ನು ಗಿಡ್ಡಗೊಳಿಸಲು ಒಪ್ಪಿದರು.

ಇಂದು ಯಾವುದೇ ಅಧಿಕೃತ ಉಡುಪು ಕೋಡ್ ಇಲ್ಲ.[೫೧] ಬಕಿಂಗ್ಹ್ಯಾಮ್ ಅರಮನೆಗೆ ಆಹ್ವಾನಿಸಲ್ಪಟ್ಟ ಹೆಚ್ಚಿನ ಪುರುಷರು ಹಗಲು ಹೊತ್ತಿನಲ್ಲಿ ಸೇವಾ ಸಮವಸ್ತ್ರ ಅಥವಾ ಲೌಂಜ್ ಸೂಟ್‌ಗಳನ್ನು ಧರಿಸುತ್ತಾರೆ, ಕೆಲವು ಮಂದಿ ಬೆಳಗಿನ ಕೋಟುಗಳನ್ನು ಧರಿಸುತ್ತಾರೆ ಮತ್ತು ಸಂಜೆ ಹೊತ್ತಿನಲ್ಲಿ ಸಮಾರಂಭದ ಶಿಷ್ಟಾಚಾರದ ಆಧಾರದಲ್ಲಿ ಕಪ್ಪು ಟೈ ಅಥವಾ ಬಿಳಿ ಟೈಯನ್ನು ಧರಿಸುತ್ತಾರೆ. 'ಬಿಳಿ ಟೈ'ಯನ್ನು ಧರಿಸುವ ಸಮಾರಂಭವಾಗಿದ್ದರೆ, ಮಹಿಳೆಯರು ತಲೆಯುಡಿಗೆಯನ್ನು ಧರಿಸುತ್ತಾರೆ.[೪೯]

ಡೆಬ್ಯೂಟಾಂಟ್‌ಗಳ ಔಪಚಾರಿಕ ಪರಿಚಯ[ಬದಲಾಯಿಸಿ]

ರಾಜರಿಗೆ ಶ್ರೀಮಂತವರ್ಗದ ಕನ್ಯೆಯರ ಔಪಚಾರಿಕ ಪರಿಚಯಗಳು ಸಿಂಹಾಸನ ಕೊಠಡಿಯಲ್ಲಿ ನಡೆದವು. ಈ ಕನ್ಯೆಯರನ್ನು ಡೆಬ್ಯೂಟಾಂಟ್‌ಗಳೆಂದು ಕರೆಯಲಾಯಿತು ಮತ್ತು ಆ ಸಮಾರಂಭವು- ಅವರ 'ಹೊರಬರುವಿಕೆ' ಎಂದು ಕರೆಯುವ- ಸಮಾಜಕ್ಕೆ ಅವರ ಮೊದಲ ಪ್ರವೇಶವನ್ನು ಸೂಚಿಸಿತು. ಡೆಬ್ಯೂಟಾಂಟ್‌ಗಳು ಸಂಪೂರ್ಣ ರಾಜಪರಿವಾರದ ಉಡುಪನ್ನು ಧರಿಸಿದ್ದರು, ಉದ್ದನೆಯ ಮೂರು ಆಸ್ಟ್ರಿಚ್ ಗರಿಗಳನ್ನು ತಮ್ಮ ತಲೆಕೂದಲಲ್ಲಿ ಸಿಕ್ಕಿಸಿಕೊಂಡಿದ್ದರು. ಅವರು ಒಳ ಪ್ರವೇಶಿಸಿ, ಗೌರವ ನಮನ ಮಾಡಿ, ಬ್ಯಾಲೆ ನೃತ್ಯದಲ್ಲಿ ಹಿಂದೆಕ್ಕೆ ಚಲಿಸಿದರು ಮತ್ತು ಸೂಚಿತ ಉದ್ದದ ಉಡುಪಿನ ಕುಶಲಚಲನೆಯೊಂದಿಗೆ ಇನ್ನೊಮ್ಮೆ ಗೌರವ ವಂದನೆ ಸಲ್ಲಿಸಿದರು. (ಸಂಜೆಯ ಓಲಗವೆಂದು ಕರೆಯುವ ಆ ಸಮಾರಂಭವು ಹಿಂದಿನ ರಾಜ್ಯಭಾರದ 'ಅರಮನೆಯ ಭೇಟಿ ಕೊಠಡಿ'ಗಳನ್ನು ಹೋಲುತ್ತಿತ್ತು.)

೧೯೫೮ರಲ್ಲಿ, ರಾಣಿ ಡೆಬ್ಯುಟಾಂಟ್‌ಗಳ ಪರಿಚಯ ಪಾರ್ಟಿಗಳನ್ನು ರದ್ದುಗೊಳಿಸಿ,[೫೨] ಅವುಗಳ ಬದಲಿಗೆ ಉದ್ಯಾನ ಪಾರ್ಟಿಗಳನ್ನು ಗೊತ್ತುಮಾಡಿದರು.[೫೩] ಇಂದು ಸಿಂಹಾಸನ ಕೊಠಡಿಯನ್ನು ಸಾಂಪ್ರದಾಯಿಕ ಭಾಷಣಗಳ ಸ್ವಾಗತ ಸಮಾರಂಭಕ್ಕೆ ಬಳಸಲಾಗುತ್ತದೆ, ಉದಾ, ರಾಣಿಯ ಜನ್ಮದಿನದಂದು ಆಕೆ ಮಾಡುವ ಭಾಷಣ. ಇದು ರಾಜವಂಶದ ವಿವಾಹದ ಭಾವಚಿತ್ರಗಳು ಮತ್ತು ಕುಟುಂಬದ ಛಾಯಾಚಿತ್ರಗಳಿರುವ ಸಿಂಹಾಸನದ ವೇದಿಕೆಯಲ್ಲಿ ನಡೆಯುತ್ತದೆ.

ಬಿರುದು-ಪ್ರದಾನ[ಬದಲಾಯಿಸಿ]

ನೈಟ್‌ ಪದವಿಗಳಂತಹ ಬಿರುದು-ಪ್ರದಾನಗಳು ಮತ್ತು ಇತರ ಪ್ರಶಸ್ತಿ ಪ್ರದಾನಗಳು ೧೮೫೪ರಲ್ಲಿ ನಿರ್ಮಿಸಲ್ಪಟ್ಟ ಅರಮನೆಯ ನೃತ್ಯ ಮಂದಿರ ಕೊಠಡಿಯಲ್ಲಿ ನಡೆಯುತ್ತವೆ. 36.6 m (120.08 ft) ಉದ್ದ, 18 m (59.06 ft) ಅಗಲ ಮತ್ತು 13.5 m (44.29 ft) ಎತ್ತರವಿರುವ [೫೪] (೧೨೦' X ೫೯' X ೪೪' ೩.೫") ಇದು ಅರಮನೆಯಲ್ಲೇ ಅತ್ಯಂತ ದೊಡ್ಡ ಕೊಠಡಿಯಾಗಿದೆ. ಇದು ಪ್ರಾಮುಖ್ಯತೆ ಮತ್ತು ಬಳಕೆಯಲ್ಲಿ ಸಿಂಹಾಸನ ಕೊಠಡಿಯನ್ನು ಮೀರಿಸಿದೆ. ಬಿರುದು ಪ್ರದಾನ ಸಂದರ್ಭದಲ್ಲಿ, ರಾಣಿಯು ಒಂದು ಭಾರಿ, ಗುಮ್ಮಟಾಕಾರದ ವೆಲ್ವೆಟ್-ಬಟ್ಟೆಯ ಮೇಲ್ಕಟ್ಟಿನ ಅಡಿಯಲ್ಲಿ ಸಿಂಹಾಸನ ವೇದಿಕೆಯ ಮೇಲೆ ನಿಲ್ಲುತ್ತಾರೆ. ಈ ಮೇಲ್ಕಟ್ಟನ್ನು ಶಾಮಿಯಾನ ಅಥವಾ ಬಾಲ್ಡಾಚಿನ್(ಕಿಂಕಾಪು) ಎಂದು ಕರೆಯಲಾಗುತ್ತದೆ ಮತ್ತು ಇದನ್ನು ೧೯೧೧ರಲ್ಲಿ ದೆಹಲಿಯ ಪಟ್ಟಾಭಿಷೇಕದ ದರ್ಬಾರಿನಲ್ಲಿ ಬಳಸಲಾಗಿತ್ತು.[೫೫] ಪ್ರಶಸ್ತಿ ಸ್ವೀಕೃತದಾರರು ತಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ರಾಣಿಯ ಹತ್ತಿರಕ್ಕೆ ಹೋಗಿ ತಮ್ಮ ಬಿರುದನ್ನು ಪಡೆಯುವಾಗ ಸಂಗೀತಗಾರರ ಗ್ಯಾಲರಿಯಲ್ಲಿ ಒಂದು ಮಿಲಿಟರಿ ವಾದ್ಯ-ವೃಂದವು .[೫೬]

ಔಪಚಾರಿಕ ಔತಣ-ಕೂಟಗಳು[ಬದಲಾಯಿಸಿ]

1870ರಲ್ಲಿ ಅತಿಥಿಗಳು ಭವ್ಯ ಮೆಟ್ಟಿಲ ಸಾಲನ್ನು ಏರುತ್ತಿರುವುದು.

ಔಪಚಾರಿಕ ಔತಣ-ಕೂಟಗಳನ್ನೂ ಸಹ ನೃತ್ಯ ಮಂದಿರದಲ್ಲಿ ನಡೆಸಲಾಗುತ್ತದೆ; ಈ ಸಾಂಪ್ರದಾಯಿಕ ಔತಣ-ಕೂಟಗಳನ್ನು ವಿದೇಶಿ ಮುಖಂಡರ ವಿಶೇಷ ಭೇಟಿಯ ದಿನದಂದು ಸಂಜೆ ಏರ್ಪಡಿಸಲಾಗುತ್ತದೆ.[೫೬] ಈ ವಿಶೇಷ ಸಂದರ್ಭಗಳಲ್ಲಿ, ೧೫೦ ಅಥವಾ ಅದಕ್ಕಿಂಚ ಹೆಚ್ಚು ಅತಿಥಿಗಳು ಸಾಂಪ್ರದಾಯಿಕ 'ಬಿಳಿ ಟೈ ಮತ್ತು ಅಲಂಕಾರ'ಗಳೊಂದಿಗೆ, ಮಹಿಳೆಯರು ತಲೆಯುಡಿಗೆಗಳನ್ನು ಧರಿಸಿಕೊಂಡು ಚಿನ್ನದ ತಟ್ಟೆಗಳಲ್ಲಿ ಊಟ ಮಾಡುತ್ತಾರೆ. ಬಕಿಂಗ್ಹ್ಯಾಮ್ ಅರಮನೆಯ ಅತ್ಯಂತ ದೊಡ್ಡ ಮತ್ತು ಹೆಚ್ಚು ಸಾಂಪ್ರದಾಯಿಕ ಸ್ವಾಗತ ಸಮಾರಂಭವು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ನಡೆಯುತ್ತದೆ, ಅಂದು ರಾಣಿ ಲಂಡನ್‌ನಲ್ಲಿ ವಾಸವಾಗಿರುವ ವಿದೇಶಿ ‌ರಾಯಭಾರ ಘಟಕದ ಸದಸ್ಯರಿಗೆ ಮನರಂಜನೆಯನ್ನು ಏರ್ಪಡಿಸುತ್ತಾರೆ.[೫೭] ಈ ವಿಶೇಷ ಸಂದರ್ಭದಲ್ಲಿ, ಚಿತ್ರ ಗ್ಯಾಲರಿಯ ಉತ್ತರದ ದ್ವಾರಗಳಿಂದ ಆರಂಭಿಸಿ ಎಲ್ಲಾ ವೈಭವದ ಕೋಣೆಗಳು ರಾಜಕುಟುಂಬದವರಿಂದ ಬಳಸಲ್ಪಡುತ್ತವೆ[೫೮]. ನ್ಯಾಶ್ ರೂಪಿಸಿದ ಎಲ್ಲಾ ದೊಡ್ಡ, ಇಬ್ಬದಿಯಲ್ಲೂ ಪ್ರತಿಬಿಂಬಿಸುವ ದ್ವಾರಗಳು ಅಸಂಖ್ಯಾತ ಸ್ಫಟಿಕ ಗೊಂಡೆದೀಪಗಳನ್ನು ಮತ್ತು ಮೇಣದ ಬತ್ತಿ ಕಂಬಗಳನ್ನು ಪ್ರತಿಫಲಿಸುತ್ತಾ ತೆರೆದಿರುತ್ತವೆ, ಇದು ಬೆಳಕು ಮತ್ತು ಅವಕಾಶದ ದೃಷ್ಟಿ-ಭ್ರಾಂತಿಯನ್ನು ಉಂಟುಮಾಡುತ್ತದೆ.

ಇತರ ಸಮಾರಂಭಗಳು ಮತ್ತು ಕಾರ್ಯಕ್ರಮಗಳು[ಬದಲಾಯಿಸಿ]

ಹೊಸ ರಾಯಭಾರಿಗಳ ಸ್ವಾಗತ ಸಮಾರಂಭಗಳಂತಹ ಸಣ್ಣ ಕಾರ್ಯಕ್ರಮಗಳು '೧೮೪೪ ಕೊಠಡಿ'ಯಲ್ಲಿ ನಡೆಯುತ್ತವೆ. ಈ ಸಂದರ್ಭದಲ್ಲೂ ರಾಣಿಯು ಸಣ್ಣ ಮಧ್ಯಾಹ್ನದ-ಭೋಜನ ಕೂಟಗಳನ್ನು ಏರ್ಪಡಿಸುತ್ತಾರೆ ಮತ್ತು ಹೆಚ್ಚಾಗಿ ಪ್ರಿವಿ ಕೌನ್ಸಿಲ್‌ ಸಭೆಗಳೂ ನಡೆಯುತ್ತವೆ. ದೊಡ್ಡ ಮಧ್ಯಾಹ್ನದ-ಭೋಜನ ಕೂಟಗಳು ಹೆಚ್ಚಾಗಿ ಬಾಗಿದ ಮತ್ತು ಗೊಮ್ಮಟಾಕಾರದ ಸಂಗೀತ ಕೊಠಡಿಯಲ್ಲಿ ಅಥವಾ ವೈಭವದ ಭೋಜನ ಕೊಠಡಿಯಲ್ಲಿ ಏರ್ಪಡುತ್ತವೆ. ಎಲ್ಲಾ ಸಾಂಪ್ರದಾಯಿಕ ವಿಶೇಷ-ಸಂದರ್ಭಗಳಂದು ಮತ್ತು ಸಮಾರಂಭಗಳಂದು ರಾಜನ ಅಂಗರಕ್ಷಕ ದಳದವರು ಅವರ ಐತಿಹಾಸಿಕ ಸಮವಸ್ತ್ರದಲ್ಲಿ ಮತ್ತು ದರ್ಬಾರು ಬಕ್ಷಿ ಮೊದಲಾದ ರಾಜನ ಇತರ ಅಧಿಕಾರಿಗಳು ಹಾಜರಿರಬೇಕು.[೫೯]

ವಿಶ್ವ ಸಮರ IIರಲ್ಲಿ ಅರಮನೆಯ ಚ್ಯಾಪಲ್‌ನ ಮೇಲೆ ಬಾಂಬ್ ದಾಳಿ ಮಾಡಿದರಿಂದ, ರಾಜವಂಶದ ನಾಮಕರಣದ ದೀಕ್ಷಾಸ್ನಾನಗಳನ್ನು ಕೆಲವು ಸಂದರ್ಭಗಳಲ್ಲಿ ಸಂಗೀತ ಕೊಠಡಿಯಲ್ಲಿ ನಡೆಸಲಾಗಿದೆ. ರಾಣಿಯ ಮೊದಲ ಮೂರು ಮಕ್ಕಳ ದೀಕ್ಷಾಸ್ನಾನವನ್ನು ಇಲ್ಲಿ[೬೦] ವಿಶೇಷ ಚಿನ್ನದ ದಿವ್ಯಸ್ನಾನದ ತೊಟ್ಟಿಯಲ್ಲಿ ಮಾಡಿಸಲಾಗಿದೆ. ರಾಜ ವಿಲಿಯಂರಿಗೂ ಸಹ ಸಂಗೀತ ಕೊಠಡಿಯಲ್ಲಿ ದೀಕ್ಷಾಸ್ನಾನ ಮಾಡಿಸಲಾಗಿತ್ತು; ಆದರೆ ಆತನ ಸಹೋದರ ರಾಜ ಹ್ಯಾರಿಗೆ ವಿಂಡ್ಸರ್‌ನ ಸೇಂಟ್ ಜಾರ್ಜ್ ಚ್ಯಾಪಲ್‌‌ನಲ್ಲಿ ದೀಕ್ಷಾಸ್ನಾನ ಮಾಡಿಸಲಾಗಿತ್ತು.

ವರ್ಷದ ಅತ್ಯಂತ ದೊಡ್ಡ ಕಾರ್ಯಕ್ರಮಗಳೆಂದರೆ ರಾಣಿಯ ಉದ್ಯಾನ ಪಾರ್ಟಿಗಳು, ಈ ಪಾರ್ಟಿಗಳಲ್ಲಿ ಉದ್ಯಾನದಲ್ಲಿ ಸುಮಾರು ೮,೦೦೦ ಮಂದಿ ಆಹ್ವಾನಿತರು ಪಾಲ್ಗೊಳ್ಳುತ್ತಾರೆ.

ಆಧುನಿಕ ಇತಿಹಾಸ[ಬದಲಾಯಿಸಿ]

1909ರಲ್ಲಿನ ಬಕಿಂಗ್ಹ್ಯಾಮ್ ಅರಮನೆಯ ದೃಶ್ಯಾವಳಿ.

೧೯೦೧ರಲ್ಲಿ ಎಡ್ವರ್ಡ್ VIIರ ಆಳ್ವಿಕೆಯ ಸಂದರ್ಭದಲ್ಲಿ ಅರಮನೆಯಲ್ಲಿ ಹೊಸ ಬದಲಾವಣೆಗಳು ಕಂಡುಬಂದವು. ಹೊಸ ರಾಜ ಮತ್ತು ಆತನ ಪತ್ನಿ ರಾಣಿ ಅಲೆಕ್ಸಾಂಡ್ರ ಲಂಡನ್‌‌ನ ಉನ್ನತ ವರ್ಗದವರಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದರು ಮತ್ತು "ಮಾರ್ಲ್‌ಬೋರೋ ಹೌಸ್ ಸೆಟ್" ಎನ್ನುವ ಅವರ ಸ್ನೇಹಿತರನ್ನು ಈ ಯುಗದ ಹೆಚ್ಚು ಹೆಗ್ಗಳಿಕೆ ಹೊಂದಿದ, ಫ್ಯಾಷನ್‌ಗಾರರೆಂದು ಪರಿಗಣಿಸಲಾಗಿತ್ತು. ನೃತ್ಯ ಮಂದಿರ, ಪ್ರಧಾನ ಪ್ರವೇಶ, ಮಾರ್ಬಲ್ ಸಭಾಂಗಣ, ಭವ್ಯ ಮೆಟ್ಟಿಲ ಸಾಲು, ಸಂಪರ್ಕ ಕೋಣೆ ಯಾ ಹಾದಿ ಮತ್ತು ಗ್ಯಾಲರಿಗಳನ್ನು ಬೆಲ್ಲೆ ಎಪೋಕ್ಯೂ ಕೆನೆಬಣ್ಣದ ಮತ್ತು ಚಿನ್ನದ ಬಣ್ಣದ ಯೋಜನೆಯಲ್ಲಿ ಪುನರಲಂಕರಣ ಮಾಡಿದ ಬಕಿಂಗ್ಹ್ಯಾಮ್ ಅರಮನೆಯು ಮತ್ತೊಮ್ಮೆ ವೈಭವಯುತವಾಗಿ ಮನರಂಜನೆ ನೀಡುವ ಒಂದು ವ್ಯವಸ್ಥೆಯಾಯಿತು. ರಾಜ ಎಡ್ವರ್ಡ್‌‌ ಅರಮನೆಯಲ್ಲಿ ನಿರ್ವಹಿಸಿದ ಭಾರಿ ಪ್ರಮಾಣದ ಪುನರಲಂಕರಣ ಕಾರ್ಯವು ನ್ಯಾಶ್‌ನ ಮೂಲತಃ ಕೆಲಸಕ್ಕೆ ಪೂರಕವಾಗಿಲ್ಲವೆಂದು ಹೆಚ್ಚಿನವರು ಅಭಿಪ್ರಾಯ ಪಟ್ಟಿದ್ದಾರೆ.[೬೧] ಆದರೂ ಇದನ್ನು ಸುಮಾರು ಒಂದೂ ನೂರು ವರ್ಷಗಳ ಕಾಲ ಉಳಿಸಲಾಗಿತ್ತು.

The east front of Buckingham Palace was completed in 1850 (shown on the left); it was remodelled to its present form in 1913 (shown on the right).

ಅಂತಿಮ ಪ್ರಮುಖ ನಿರ್ಮಾಣ ಕಾರ್ಯವನ್ನು ರಾಜ ಜಾರ್ಜ್ Vರ ಆಳ್ವಿಕೆಯ ಸಂದರ್ಭದಲ್ಲಿ ಮಾಡಲಾಯಿತು, ೧೯೧೩ರಲ್ಲಿ ಸರ್ ಆಸ್ಟನ್ ವೆಬ್ ಬ್ಲೋರ್‌ನ ೧೮೫೦ರ ಪೂರ್ವದ ಮುಂಭಾಗವನ್ನು ಚೆಶೈರ್‌ನ ಜಿಯಕೊಮೊ ಲಿಯೋನಿಯ ಲೈಮ್ ಉದ್ಯಾನವನ್ನು ಭಾಗಶಃ ಹೋಲುವಂತೆ ಮರುವಿನ್ಯಾಸಗೊಳಿಸಿದರು. ಈ ಹೊಸಮುಖ ನೀಡಿದ ಪ್ರಧಾನ ಮುಂಭಾಗವನ್ನು (ಪೋರ್ಟ್‌ಲ್ಯಾಂಡ್ ಶಿಲೆಯ) ವಿಕ್ಟೋರಿಯಾ ಸ್ಮಾರಕದ ಹಿಂದೆರೆಯಾಗಿ ವಿನ್ಯಾಸಗೊಳಿಸಲಾಯಿತು, ಈ ರಾಣಿ ವಿಕ್ಟೋರಿಯಾರ ದೊಡ್ಡ ಸ್ಮಾರಕ ಪ್ರತಿಮೆಯು ಮುಖ್ಯ ದ್ವಾರದ ಹೊರಗಿದೆ.[೬೨] ೧೯೧೦ರಲ್ಲಿ ಎಡ್ವರ್ಡ್ VIIರ ಉತ್ತರಾಧಿಕಾರಿಯಾದ ಜಾರ್ಜ್‌ V ತನ್ನ ತಂದೆಗಿಂತ ಹೆಚ್ಚು ಗಂಭೀರ ವ್ಯಕ್ತಿತ್ವವನ್ನು ಹೊಂದಿದ್ದರು; ಈತನ ಅವಧಿಯಲ್ಲಿ ದುಂದುವೆಚ್ಚದ ಪಾರ್ಟಿಗಳಿಗಿಂತ ಅಧಿಕೃತ ಮನರಂಜನೆಗೆ ಮತ್ತು ರಾಜವಂಶದ ಕರ್ತವ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಯಿತು.[೬೩] ಆತ ಒರಿಜಿನಲ್ ಡಿಕ್ಸಿಲ್ಯಾಂಡ್ ಜ್ಯಾಸ್‌ ವಾದ್ಯ-ವೃಂದ(೧೯೧೯) – ಇದು ವಿದೇಶಿ ಮುಖಂಡರಿಗೆ ನೀಡಿದ ಮೊದಲ ಜ್ಯಾಸ್‌ ಪ್ರದರ್ಶನವಾಗಿದೆ, ಸಿಡ್ನಿ ಬೆಚೆಟ್ ಮತ್ತು ಲೂಯಿಸ್ ಆರ್ಮ್‌ಸ್ಟ್ರಾಂಗ್ (೧೯೩೨) ಮೊದಲಾದ ಜ್ಯಾಸ್‌ ಸಂಗೀತಗಾರರನ್ನು ಒಳಗೊಂಡ ಅನೇಕ ಆದೇಶ ಪ್ರದರ್ಶನಗಳನ್ನು ವ್ಯವಸ್ಥೆಗೊಳಿಸಿದರು. ಇದರಿಂದಾಗಿ ಅರಮನೆಯು ೨೦೦೯ರಲ್ಲಿ ಯುನೈಟೆಡ್ ಕಿಂಗ್ಡಮ್‌ನಲ್ಲಿ ಜ್ಯಾಸ್‌ ಸಂಗೀತಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಒಂದು ಸ್ಥಳವೆಂದು ಬ್ರೆಕನ್ ಜ್ಯಾಸ್‌ ಫೆಸ್ಟಿವಲ್‌ನಿಂದ (ಒಂದು ರೀತಿಯ)ನೀಲಿ ಬಿರುದಿಗೆ ನಾಮನಿರ್ದೇಶನಗೊಂಡಿತು.[೬೪][೬೫] ಜಾರ್ಜ್‌ V ರ ಪತ್ನಿ ರಾಣಿ ಮೇರಿಯು ಕಲಾ ರಸಿಕರಾಗಿದ್ದರು. ಆಕೆ ಪೀಠೋಪಕರಣಗಳು ಮತ್ತು ಕಲೆಯ ರಾಜವಂಶದ ಸಂಗ್ರಹದ ಬಗ್ಗೆ, ಇದಕ್ಕೆ ಸೇರಿಸುವುದು ಮತ್ತು ಪುನರ್ವಶಪಡಿಸುವುದು ಎರಡರ ಬಗ್ಗೆಯೂ, ಅತೀವ ಆಸಕ್ತಿಯನ್ನು ತೋರಿದರು. ರಾಣಿ ಮೇರಿಯು ಹಲವಾರು ಹೊಸ ನೆಲೆವಸ್ತುಗಳು ಮತ್ತು ಸಲಕರಣೆಗಳನ್ನು ಜೋಡಿಸಿದರು, ಉದಾ, ೧೮೧೦ರ ಕಾಲದ ಬೆಂಜಮಿನ್ ವುಲ್ಲಿಯಾಮಿಯ ಮಾರ್ಬಲ್ ಸಾಮ್ರಾಜ್ಯದ-ಶೈಲಿಯ ಹೊಗೆಕೊಳವೆಗಳು. ಇವನ್ನು ರಾಣಿಯು ಉದ್ಯಾನದ ಮುಂಭಾಗದ ಕೇಂದ್ರದಲ್ಲಿರುವ ವಿಶಾಲ ಕೆಳ ಕೋಣೆ, ನೆಲ ಅಂತಸ್ತಿನ ಕಮಾನು ಕೊಠಡಿಯಲ್ಲಿ ಜೋಡಿಸಿದರು. ರಾಣಿ ಮೇರಿಯು ನೀಲಿ ಭೇಟಿ-ಕೊಠಡಿಯ ಅಲಂಕಾರಕ್ಕೂ ಜವಾಬ್ದಾರರಾಗಿದ್ದಾರೆ.[೬೬] ಹಿಂದೆ ದಕ್ಷಿಣದ ಭೇಟಿ-ಕೊಠಡಿಯೆಂದು ಕರೆಯಲಾಗುತ್ತಿದ್ದ ೬೯ ಅಡಿ (೨೧ ಮೀ) ಉದ್ದವಿರುವ ಈ ಕೊಠಡಿಯು ವಿಶೇಷವಾಗಿ ನ್ಯಾಶ್ ವಿನ್ಯಾಸಗೊಳಿಸಿದ ಚಾವಣಿಯನ್ನು ಹೊಂದಿದೆ, ಇದು ದೊಡ್ಡ ಸ್ವರ್ಣಲೇಪದ ಆಸರೆ ಚಾಚುಪೀಠಗಳಿಂದ ಕೂಡಿದ ಮಾಳಿಗೆ-ಗೂಡನ್ನು ಹೊಂದಿದೆ.[೬೭]

೧೯೯೯ರಲ್ಲಿ ರಾಜವಂಶದ ಸಂಗ್ರಹ ವಿಭಾಗದಿಂದ ಪ್ರಕಟಗೊಂಡ ಪುಸ್ತಕವೊಂದು, ಅರಮನೆಯು ೧೯ ವೈಭವದ ಕೋಣೆಗಳು, ೫೨ ಪ್ರಧಾನ ಶಯನಗೃಹಗಳು, ೧೮೮ ಸಿಬ್ಬಂದಿಗಳ ಶಯನಗೃಹಗಳು, ೯೨ ಕಛೇರಿಗಳು ಮತ್ತು ೭೮ ಸ್ನಾನಗೃಹಗಳನ್ನು ಹೊಂದಿದೆಯೆಂದು ವರದಿ ಮಾಡಿದೆ.[೬೮] ದೊಡ್ಡದಾಗಿ ಕಂಡುಬಂದರೂ ಇದು ಸೇಂಟ್ ಪೀಟರ್ಸ್‌ಬರ್ಗ್ ಮತ್ತು ಟ್ಸಾರ್ಸ್ಕೋಯ್ ಸೆಲೊದಲ್ಲಿರುವ ರಷ್ಯಾ ಸಾಮ್ರಾಜ್ಯದ ಅರಮನೆಗಳು, ರೋಮ್‌ನಲ್ಲಿರುವ ಪಪಾಲ್ ಅರಮನೆ, ಮ್ಯಾಡ್ರಿಡ್‌ನ ರಾಜಮನೆತನದ ಅರಮನೆ, ಸ್ಟಾಕ್ಹೋಲ್ಮ್ ಅರಮನೆ ಅಥವಾ ಹಿಂದಿನ ವೈಟ್‌ಹಾಲ್‌ನ ಅರಮನೆ ಮೊದಲಾದವುಗಳಿಗೆ ಹೋಲಿಸಿದರೆ ಸಣ್ಣದಾಗಿದೆ ಹಾಗೂ ಫಾರ್ಬಿಡನ್ ಸಿಟಿ ಮತ್ತು ಪೊಟಾಲ ಅರಮನೆಗೆ ಹೋಲಿಸಿದರೆ ಇದು ಚಿಕ್ಕದಾಗಿದೆ. ಅರಮನೆಯು ಸಣ್ಣದಾಗಿದೆಯೆಂಬುದು ಒಳಗಿನ ಪ್ರಾಂಗಣವನ್ನು ನೋಡಿ ತಿಳಿಯಬಹುದು. ೧೯೩೮ರಲ್ಲಿ ಅರಮನೆಯಲ್ಲಿ ಒಂದು ಸಣ್ಣ ಬದಲಾವಣೆಯನ್ನು ಮಾಡಲಾಯಿತು, ಈ ಸಂದರ್ಭದಲ್ಲಿ ಸಸ್ಯ-ರಕ್ಷಣಾಗೃಹವಾಗಿ ನ್ಯಾಶ್ ವಿನ್ಯಾಸಗೊಳಿಸಿದ ಮತ್ತು ೧೯೧೧–೧೩ರಲ್ಲಿ ವ್ಯವಹಾರ ಅಂಗಣವಾಗಿ ಮಾರ್ಪಡಿಸಲಾದ ವಾಯವ್ಯ ಭಾಗದಲ್ಲಿದ್ದ ಉದ್ಯಾನಗೃಹವನ್ನು ಒಂದು ಈಜುಕೊಳವಾಗಿ ಪರಿವರ್ತಿಸಲಾಯಿತು.

1911ರಲ್ಲಿ ಶಿಲ್ಪಿ ಸರ್ ಥೋಮಸ್ ಬ್ರೋಕ್ ರಚಿಸಿದ ವಿಕ್ಟೋರಿಯಾ ಸ್ಮಾರಕ, ಇದನ್ನು ವಾಸ್ತುಶಿಲ್ಪಿ ಸರ್ ಆಸ್ಟನ್ ವೆಬ್ ನಿರ್ಮಿಸಿದ ಆವರಣದಲ್ಲಿ ಬಕಿಂಗ್ಹ್ಯಾಮ್ ಅರಮನೆಯ ಮುಖ್ಯ ಮಹಾದ್ವಾರಗಳ ಮುಂಭಾಗದಲ್ಲಿ ನಿಲ್ಲಿಸಲಾಗಿದೆ.

ವಿಶ್ವ ಸಮರ I ರ ಸಂದರ್ಭದಲ್ಲಿ, ರಾಜ ಜಾರ್ಜ್ V ಮತ್ತು ರಾಣಿ ಮೇರಿಯ ಆಗಿನ ನಿವಾಸವಾಗಿದ್ದ ಈ ಅರಮನೆಯು ಯಾವುದೇ ಅಪಾಯಕ್ಕೊಳಗಾಗದೆ ಉಳಿದುಕೊಂಡಿತು. ಇದರ ಹೆಚ್ಚು ಮೌಲ್ಯಯುತ ಅಂಶಗಳನ್ನು ವಿಂಡ್ಸರ್‌ಗೆ ಕಳುಹಿಸಿಬಿಡಲಾಯಿತು, ಆದರೆ ರಾಜ-ಕುಟುಂಬವು ಮಾತ್ರ ಆ ಸ್ಥಾನ ದಲ್ಲೇ ಉಳಿಯಿತು. ರಾಜ ತನ್ನ ಅತಿಥಿಗಳಿಗೆ ಮತ್ತು ರಾಜ-ಕುಟುಂಬದವರಿಗೆ ಗಾಬರಿಗೊಳಿಸಲು ಅರಮನೆಯಲ್ಲಿ ಆಹಾರವನ್ನು ನಿಗದಿತ ಪ್ರಮಾಣದಲ್ಲಿ ನೀಡಲು ಆರಂಭಿಸಿದರು.[೬೯] ಕುಡುಕ ಕಾರ್ಮಿಕ ವರ್ಗಕ್ಕೆ ಮಾದರಿಯಾಗಲು, ರಾಜನು ಸಾರಾಯಿ ಉಗ್ರಾಣಕ್ಕೆ ಬೀಗ ಹಾಕುವಂತೆ ಮತ್ತು ಮದ್ಯಸಾರವನ್ನು ನಿಯಂತ್ರಿಸುವಂತೆ ಡೇವಿಡ್ ಲಾಯ್ಡ್ ಜಾರ್ಜ್‌ ಆತನ ಮನವೊಲಿಸಿದರು, ಇದರಿಂದ ನಂತರ ರಾಜ ವಿಷಾದಿಸಿದರು. ಕಾರ್ಮಿಕರು ಕುಡಿಯುವುದನ್ನು ಮುಂದುವರಿಸಿದರು ಮತ್ತು ರಾಜ ತನ್ನ ಬಲವಂತದ ಕುಡಿತದ-ವರ್ಜನೆಯಿಂದ ಅಸಂತೋಷಗೊಂಡರು.[೭೦]

ವಿಶ್ವ ಸಮರ II ರ ಸಂದರ್ಭದಲ್ಲಿ ಅರಮನೆಯು ದುರದೃಷ್ಟಕ್ಕೆ ಒಳಗಾಯಿತು; ಇದರ ಮೇಲೆ ಏಳಕ್ಕಿಂತ ಕಡಿಮೆ ಇಲ್ಲದಷ್ಟು ಬಾರಿ ಬಾಂಬ್ ದಾಳಿ ಮಾಡಲಾಯಿತು, ಅದರಲ್ಲಿ ಹೆಚ್ಚು ಗಂಭೀರ ಮತ್ತು ಪ್ರಸಿದ್ಧವಾದ ದಾಳಿಯು ೧೯೪೦ರಲ್ಲಿ ಅರಮನೆಯ ಚ್ಯಾಪಲ್‌ನ ನಾಶಕ್ಕೆ ಕಾರಣವಾಯಿತು. ಶ್ರೀಮಂತ ಮತ್ತು ಬಡಜನರ ಸಾಮಾನ್ಯ ನೋವನ್ನು ತೋರಿಸುವುದಕ್ಕಾಗಿ ಈ ಘಟನೆಯನ್ನು UKಯಾದ್ಯಂತ ಸಿನೇಮಾಗಳಲ್ಲಿ ಪ್ರಚಾರ ಮಾಡಲಾಯಿತು. ಒಂದು ಬಾಂಬ್ಅನ್ನು ಅರಮನೆಯ ಪ್ರಾಂಗಣದ ಮೇಲೆ ಹಾಕಲಾಯಿತು, ಆ ಸಂದರ್ಭದಲ್ಲಿ ರಾಜ ಜಾರ್ಜ್ VI ಮತ್ತು ರಾಣಿ ಎಲಿಜಬೆತ್ ಅಲ್ಲಿ ವಾಸಿಸುತ್ತಿದ್ದರು. ಇದರಿಂದಾಗಿ ಅನೇಕ ಕಿಟಕಿಗಳು ಒಡೆದುಹೋದವು ಮತ್ತು ಚ್ಯಾಪಲ್ ನಾಶಗೊಂಡಿತು.[೭೧] ಆದರೆ ಯುದ್ಧ ಸಂದರ್ಭದ ಅಂತಹ ಘಟನೆಗಳ ಪ್ರಸಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿತ್ತು. ಬಾಂಬ್ ದಾಳಿಗೆ ಒಳಗಾದ ತಮ್ಮ ನಿವಾಸವನ್ನು ವೀಕ್ಷಿಸುತ್ತಿರುವ ರಾಜ ಮತ್ತು ರಾಣಿಯನ್ನು ಚಿತ್ರೀಕರಿಸಲಾಯಿತು, ನಗುಮುಖದ ರಾಣಿಯು ಚೊಕ್ಕವಾಗಿ ಹ್ಯಾಟು ಮತ್ತು ಸರಿಹೊಂದುವ ಕೋಟ್ಅನ್ನು ಧರಿಸಿದ್ದರು, ಆಕೆ ಸುತ್ತಲಿನ ಹಾನಿಯಿಂದ ಯಾವುದೇ ಅಪಾಯಕ್ಕೆ ಒಳಗಾಗಿರಲಿಲ್ಲ. ಈ ಸಂದರ್ಭದಲ್ಲಿ ರಾಣಿಯು ಹೀಗೆಂದು ಘೋಷಿಸಿದರು: 'ನಮ್ಮ ಮೇಲೆ ಬಾಂಬ್ ದಾಳಿ ನಡೆದುದರಿಂದ ನಾನು ಸಂತೋಷಗೊಂಡಿದ್ದೇನೆ. ಈಗ ನಾನು ಪೂರ್ವ ಕೊನೆಯನ್ನು ಎದುರಿಗೆ ನೋಡಬಹುದು". ರಾಜ-ಕುಟುಂಬದವರು ಹಂಚಿಕೊಂಡ ತಾವು ಪಟ್ಟ ಯಾತನೆಯನ್ನು ದಿ ಸಂಡೆ ಗ್ರಾಫಿಕ್ ಹೀಗೆಂದು ವರದಿ ಮಾಡಿದೆ:

By the Editor: The King and Queen have endured the ordeal which has come to their subjects. For the second time a German bomber has tried to bring death and destruction to the home of Their Majesties...When this war is over the common danger which King George and Queen Elizabeth have shared with their people will be a cherished memory and an inspiration through the years.[೭೨]

೧೯೪೦ರ ಸೆಪ್ಟೆಂಬರ್ ೧೫ರಂದು, ಬ್ರಿಟನ್ ಡೇ ಯುದ್ಧವೆಂದು ಕರೆಯುವ ದಿನದಂದು ನಂಬರ್ ೫೦೪ ಸ್ಕ್ವಾಡ್ರನ್ RAFನ RAF ಪೈಲಟ್ ರೇ ಹೋಮ್ಸ್ ಅರಮನೆಯ ಮೇಲೆ ಬಾಂಬ್ ದಾಳಿ ಮಾಡಲು ಹೋಗುತ್ತಿದೆಯೆಂದು ತಿಳಿದ ಒಂದು ಜರ್ಮನ್ ಬಾಂಬ್ ದಾಳಿ ವಿಮಾನಕ್ಕೆ ಬಲವಾಗಿ ಢಿಕ್ಕಿ ಹೊಡೆಸಿದರು. ಹೋಮ್ಸ್ ಯುದ್ಧಸಾಮಗ್ರಿಯಿಂದ ಹೊರಕ್ಕೆ ಓಡಿಹೋದರು ಮತ್ತು ಅದು ಅತಿ ಶೀಘ್ರದಲ್ಲಿ ಢಿಕ್ಕಿ ಹೊಡೆಯುವಂತೆ ವ್ಯವಸ್ಥೆಗೊಳಿಸಿದ್ದರು. ಹೋಮ್ಸ್ ಅದರಿಂದ ಪಾರಾದರು. ಎರಡೂ ವಿಮಾನಗಳು ಢಿಕ್ಕಿ ಹೊಡೆದುಕೊಂಡವು. ವಾಸ್ತವವಾಗಿ ಡೋರ್ನಿಯರ್ ಡೊ ೧೭ ಬಾಂಬ್-ದಾಳಿ ವಿಮಾನವು ಖಾಲಿಯಾಗಿತ್ತು. ಅದು ಅದಾಗಲೇ ಹಾನಿಗೊಳಗಾಗಿತ್ತು, ಅದರ ಇಬ್ಬರು ಸಿಬ್ಬಂದಿಗಳು ಕೊಲ್ಲಲ್ಪಟ್ಟರು ಮತ್ತು ಉಳಿದವರು ಪಾರಾದರು. ಪೈಲಟ್ ಫೆಲ್ಡ್‌ವೆಬೆಲ್ ರಾಬರ್ಟ್ ಜೆಹ್ಬೆ ಮಾತ್ರ ಆ ವಿಮಾನದಿಂದ ಕೆಳಕ್ಕಿಳಿದರು, ಆದರೆ ಅವರು ಜನಸಮೂಹದಿಂದ ಚೆನ್ನಾಗಿ ಮಾರಕ ಹೊಡೆತಗಳನ್ನು ಪಡೆದರು. ಡೋರ್ನಿಯರ್ ಕುಸಿಯುವಾಗ ಹೇಗೊ ಕೆಲವು ಬಾಂಬ್‌ಗಳನ್ನು ಕೆಳಕ್ಕೆ ಬೀಳಿಸಿತು, ಅದರಲ್ಲಿ ಒಂದು ಅರಮನೆಯ ಮೇಲೆ ಬಿದ್ದಿತು. ಇದು ಲಂಡನ್‌ ವಿಕ್ಟೋರಿಯಾ ನಿವಾಸದ ಮುಂಭಾಗದ ಪ್ರಾಂಗಣಕ್ಕೆ ಬಡಿಯಿತು.[೭೩] ಈ ಬಾಂಬ್-ದಾಳಿ ವಿಮಾನದ ಎಂಜಿನ್ಅನ್ನು ನಂತರ ಲಂಡನ್‌ನ ಇಂಪೀರಿಯಲ್ ವಾರ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಯಿತು. ಆ ಬ್ರಿಟಿಷ್ ಪೈಲಟ್ ಯುದ್ಧದ ನಂತರ ರಾಜನ ಸಂದೇಶವಾಹಕನಾದನು ಮತ್ತು ಆತ ೨೦೦೫ರಲ್ಲಿ ೯೦ನೇ ವಯಸ್ಸಿನಲ್ಲಿ ಸಾವನ್ನಪ್ಪಿದನು.[೭೪]

೧೯೪೫ರ ಮೇ ೮ರ VE ದಿನದಂದು, ಅರಮನೆಯು ಬ್ರಿಟಿಷ್ ಉತ್ಸವಾಚರಣೆಗಳ ಕೇಂದ್ರವಾಗಿತ್ತು, ಅಂದು ಮಾಲ್‌ನಲ್ಲಿ ನೆರೆದಿದ್ದ ಭಾರಿ ಜನಸ್ತೋಮದಿಂದ ಜಯಘೋಷವನ್ನು ಸ್ವೀಕರಿಸಲು ರಾಜ, ರಾಣಿ ಮತ್ತು ಭವಿಷ್ಯದ ರಾಣಿ ರಾಜಕುಮಾರಿ ಎಲಿಜಬೆತ್ ಹಾಗೂ ರಾಜಕುಮಾರಿ ಮಾರ್ಗರೆಟ್ ಮೊದಲಾದವರು ಬಾಲ್ಕನಿಯಲ್ಲಿ ಸೇರಿದ್ದರು, ಅವರ ಹಿಂದಿನ ಅರಮನೆಯ ಕಿಟಕಿಗಳನ್ನು ಕಪ್ಪು ಪರದೆಯಿಂದ ಮುಚ್ಚಲಾಗಿತ್ತು.[೭೫]

ದಿ ಬಾಯ್ ಜೋನ್ಸ್ ೧೮೩೮ ಮತ್ತು ೧೮೪೧ರ ಅವಧಿಯಲ್ಲಿ ಮೂರು ಸಮಾರಂಭಗಳಿಗೆ ಅರಮನೆಗೆ ಪ್ರವೇಶ ಪಡೆದ ಮಧ್ಯ ಪ್ರವೇಶಕವೆಂದು ೪೦ ವರ್ಷಗಳ ನಂತರ ಚಾರ್ಲ್ಸ್ ಡಿಕೆನ್ಸ್ ದಾಖಲು ಮಾಡಿದ್ದಾರೆ.[೭೬] ೧೯೮೨ರಲ್ಲಿ, ಮೈಕೆಲ್ ಫೇಗನ್ ಅರಮನೆಯನ್ನು ಎರಡು ಬಾರಿ ಪ್ರವೇಶಿಸಿದರು ಮತ್ತು ಇದರಲ್ಲಿ ಒಂದು ಬಾರಿ ರಾಣಿಯೊಂದಿಗೆ ಮಾತಾಡಿದರು.[೭೭] ವರದಿಯಾಗಿರುವಂತೆ, ಅರಮನೆಯ ಪೋಲೀಸರು ನೆರವಿಗಾಗಿ ಓಡಿಬಂದಾಗ ಮಹಾರಾಣಿಯು ಶಾಂತಸ್ಥಿತಿಯನ್ನು ನಿರ್ವಹಿಸಿದರು ಮತ್ತು ಫೇಗನ್ ರಾಣಿಗೆ ಯಾವುದೇ ಬೆದರಿಕೆಯನ್ನೊಡ್ಡುವ ಹಾವಭಾವಗಳನ್ನು ತೋರಲಿಲ್ಲ.

ಉದ್ಯಾನ, ರಾಜವಂಶದ ಅಶ್ವಶಾಲೆ ಮತ್ತು ಮಾಲ್[ಬದಲಾಯಿಸಿ]

ಅರಮನೆಯ ಉದ್ಯಾನದಿಂದ ಗೋಚರಿಸುವ, ಬಾತ್ ಶಿಲೆಯ ಮುಂದೆ ಇರುವ ಬಕಿಂಗ್ಹ್ಯಾಮ್ ಅರಮನೆಯ ಪಶ್ಚಿಮದ ಮುಂಭಾಗ.

ಅರಮನೆಯ ಹಿಂಭಾಗದಲ್ಲಿ ಒಂದು ದೊಡ್ಡ ಉದ್ಯಾನ ಮತ್ತು ಪಕ್ಕದಲ್ಲಿ ಒಂದು ಸರೋವರವಿದೆ, ಇದು ಲಂಡನ್‌ನಲ್ಲೇ ಅತ್ಯಂತ ದೊಡ್ಡ ಖಾಸಗಿ ಉದ್ಯಾನವಾಗಿದೆ‌.[೭೮] ಇಲ್ಲಿ ರಾಣಿಯು ಪ್ರತಿ ಬೇಸಿಗೆಯಲ್ಲಿ ವಾರ್ಷಿಕ ಉದ್ಯಾನ ಪಾರ್ಟಿಗಳನ್ನು ನಡೆಸುತ್ತಾರೆ ಮತ್ತು ವಾರ್ಷಿಕೋತ್ಸವಗಳಂತಹ ರಾಜಪರಿವಾರದವರ ಜೀವನದ ಮಹತ್ವಪೂರ್ಣ ಘಟನೆಗಳನ್ನು ಆಚರಿಸಲು ದೊಡ್ಡ ಸಮಾರಂಭಗಳನ್ನು ಏರ್ಪಡಿಸುತ್ತಾರೆ. ಮೂಲತಃ ಕೇಪೆಬಿಲಿಟಿ ಬ್ರೌನ್‌ ಭೂದೃಶ್ಯ ವಿನ್ಯಾಸ ಮಾಡಿದ ಈ ಉದ್ಯಾನವನ್ನು ಕ್ಯೂ ಗಾರ್ಡನ್ಸ್‌ನ ವಿಲಿಯಂ ಟೌನ್‌ಸೆಂಡ್ ಏಟನ್ ಮತ್ತು ಜಾನ್ ನ್ಯಾಶ್ ಮರುವಿನ್ಯಾಸಗೊಳಿಸಿದರು. ಈ ಕೃತಕ ಸರೋವರವನ್ನು ೧೮೨೮ರಲ್ಲಿ ಪೂರ್ಣಗೊಳಿಸಲಾಯಿತು ಮತ್ತು ಇದಕ್ಕೆ ನೀರನ್ನು ಹೈಡ್ ಪಾರ್ಕ್‌ನ ಮೂಲಕ ಹರಿಯುವ ನದಿ ಸರ್ಪೆಂಟೈನ್‌ನಿಂದ ಪೂರೈಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಅರಮನೆಯ ಪಕ್ಕದಲ್ಲಿ ರಾಜವಂಶದ ಅಶ್ವಶಾಲೆಯಿದೆ, ಇದನ್ನೂ ಸಹ ನ್ಯಾಶ್ ವಿನ್ಯಾಸಗೊಳಿಸಿದ್ದಾರೆ. ಇಲ್ಲಿ ಗೋಲ್ಡ್ ಸ್ಟೇಟ್ ಕೋಚ್ಅನ್ನೂ ಒಳಗೊಂಡಂತೆ ರಾಜವಂಶದ ಸಾರೋಟುಗಳನ್ನು ಇರಿಸಲಾಗಿದೆ. ೧೭೬೦ರಲ್ಲಿ ಸರ್ ವಿಲಿಯಂ ಚೇಂಬರ್ಸ್ ವಿನ್ಯಾಸಗೊಳಿಸಿದ ಈ ರಕೋಕೋ ಶೈಲಿಯ ಸ್ವರ್ಣಲೇಪದ ರಾಜನ ಸಾರೋಟಿನ ಭಾಗಗಳಿಗೆ ಜಿ. ಬಿ. ಸಿಪ್ರಿಯಾನಿಯು ಬಣ್ಣ ಹಚ್ಚಿದರು. ಇದನ್ನು ಮೊದಲು ೧೭೬೨ರಲ್ಲಿ ರಾಜ್ಯ ಸಂಸತ್ತಿನ ಉದ್ಘಾಟನ ಸಮಾರಂಭದಂದು ಜಾರ್ಜ್‌ III ಬಳಸಿದರು ಮತ್ತು ಇದನ್ನು ಪಟ್ಟಾಭಿಷೇಕ ಅಥವಾ ವಾರ್ಷಿಕೋತ್ಸವ ಸಮಾರಂಭಗಳಿಗೆ ಮಾತ್ರ ರಾಜ ಬಳಸುತ್ತಾರೆ.[೭೯] ಅಶ್ವಶಾಲೆಯಲ್ಲಿರುವ ಸಾರೋಟು ಕುದುರೆಗಳನ್ನು ರಾಜಮನೆತನದ ವಿಧ್ಯುಕ್ತ ಮೆರವಣಿಗೆಯಲ್ಲಿ ಬಳಸಲಾಗುತ್ತದೆ.[೮೦]

ಅರಮನೆಯನ್ನು ತಲುಪುವ ಒಂದು ವಿಧ್ಯುಕ್ತ ಮಾರ್ಗ ಮಾಲ್ಅನ್ನು ಸರ್ ಆಸ್ಟನ್ ವೆಬ್ ವಿನ್ಯಾಸಗೊಳಿಸಿದರು ಮತ್ತು ಇದು ೧೯೧೧ರಲ್ಲಿ ರಾಣಿ ವಿಕ್ಟೋರಿಯಾರ ಭವ್ಯ ಸ್ಮಾರಕದ ಒಂದು ಭಾಗವಾಗಿ ಪೂರ್ಣಗೊಂಡಿತು. ಇದು ಅಡ್ಮಿರಾಲ್ಟಿ ಆರ್ಕ್‌ನಿಂದ, ಕೆನಡಾ ಗೇಟ್, ದಕ್ಷಿಣ ಆಫ್ರಿಕಾ ಗೇಟ್ ಮತ್ತು ಆಸ್ಟ್ರೇಲಿಯಾ ಗೇಟ್‌ನಿಂದ ಆವರಿಸಲ್ಪಟ್ಟ ವಿಕ್ಟೋರಿಯಾ ಸ್ಮಾರಕದ ಸುತ್ತಲೂ, ಅರಮನೆಯ ಮುಂಭಾಗದ ಪ್ರಾಂಗಣದವರೆಗೆ ವಿಸ್ತರಿಸಿದೆ. ಈ ಮಾರ್ಗವನ್ನು ಭೇಟಿನೀಡುವ ಎಲ್ಲಾ ವಿದೇಶಿ ಮುಖಂಡರ ಮೆರವಣಿಗೆ ಮತ್ತು ಮೋಟಾರು ವಾಹನಗಳ ಮೆರವಣಿಗೆಗೆ ಬಳಸಲಾಗುತ್ತದೆ ಹಾಗೂ ವಾರ್ಷಿಕ ರಾಜ್ಯ ಸಂಸತ್ತಿನ ಉದ್ಘಾಟನ ಸಮಾರಂಭ ಮತ್ತು ಟ್ರೂಪಿಂಗ್ ದಿ ಕಲರ್ ಮೊದಲಾದ ವಿಶೇಷ ಸಂದರ್ಭಗಳಲ್ಲಿ ರಾಜ-ಕುಟುಂಬದವರು ಬಳಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು]

ಹಸಿರು ಉದ್ಯಾನದಿಂದ ಕಾಣಿಸುವ ಬಕಿಂಗ್ಹ್ಯಾಮ್ ಅರಮನೆ.

೨೧ನೇ ಶತಮಾನ: ರಾಜಪರಿವಾರದವರ ಬಳಕೆ ಮತ್ತು ಸಾರ್ವಜನಿಕ ಪ್ರವೇಶ[ಬದಲಾಯಿಸಿ]

1986ರಲ್ಲಿ ಬಾಲ್ಕನಿಯಲ್ಲಿ ನೆರೆದ ರಾಜ-ಕುಟಂಬ.

ಪ್ರತಿ ವರ್ಷ ಸುಮಾರು ೫೦,೦೦೦ ಮಂದಿ ಆಹ್ವಾನಿತ ಅತಿಥಿಗಳು ಉದ್ಯಾನ ಪಾರ್ಟಿಗಳು, ಸ್ವಾಗತ ಸಮಾರಂಭಗಳು, ಸಂದರ್ಶನಗಳು ಮತ್ತು ಔತಣ-ಕೂಟಗಳಲ್ಲಿ ಮನರಂಜನೆ ಪಡೆಯುತ್ತಾರೆ. ಸಾಮಾನ್ಯವಾಗಿ ಮೂರು ಉದ್ಯಾನ ಪಾರ್ಟಿಗಳನ್ನು ಬೇಸಿಗೆಯಲ್ಲಿ ಜುಲೈ ತಿಂಗಳಲ್ಲಿ ನಡೆಸಲಾಗುತ್ತದೆ. ಬಕಿಂಗ್ಹ್ಯಾಮ್ ಅರಮನೆಯ ಮುಂಭಾಗದ ಪ್ರಾಂಗಣವನ್ನು ಒಂದು ಪ್ರಮುಖ ಸಮಾರಂಭ ಮತ್ತು ಪ್ರವಾಸಿ ಆಕರ್ಷಣೆಯಾದ ಕಾವಲು ಪಡೆಯನ್ನು ಬದಲಾಯಿಸುವ ಸಂದರ್ಭದಲ್ಲಿ (ಬೇಸಿಗೆ ತಿಂಗಳಲ್ಲಿ ದಿನನಿತ್ಯ; ಚಳಿಗಾಲದಲ್ಲಿ ಒಂದು ದಿನ ಬಿಟ್ಟು ಒಂದು ದಿನ) ಬಳಸಲಾಗುತ್ತದೆ.

ವಿಂಡ್ಸರ್ ಕೋಟೆಯಂತಹ ಅರಮನೆಯನ್ನು ಬ್ರಿಟಿಷ್ ರಾಜ್ಯವು ಸ್ವಂತವಾಗಿ ಹೊಂದಿದೆ. ಇದು ಸ್ಯಾಂಡ್ರಿಂಗ್ಹ್ಯಾಮ್ ನಿವಾಸ ಮತ್ತು ಬಾಲ್ಮೊರಲ್ ಕೋಟೆಯಂತೆ ರಾಜವಂಶದ ವೈಯಕ್ತಿಕ ಆಸ್ತಿಯಾಗಿಲ್ಲ. ಬಕಿಂಗ್ಹ್ಯಾಮ್ ಅರಮನೆ, ವಿಂಡ್ಸರ್ ಕೋಟೆ ಕೆನ್ಸಿಂಗ್ಟನ್ ಅರಮನೆ ಮತ್ತು ಸೇಂಟ್ ಜೇಮ್ಸ್ ಅರಮನೆ ಮೊದಲಾದವುಗಳನ್ನು ಒಟ್ಟಾಗಿ ರಾಜವಂಶದ ಸಂಗ್ರಹವೆಂದು ಕರೆಯಲಾಗುತ್ತದೆ; ಪರಮಾಧಿಕಾರವುಳ್ಳ ರಾಜನು ಸ್ವಂತವಾಗಿ ಪಡೆದಿದ್ದ ಇವುಗಳನ್ನು ವಿಶೇಷ ಸಂದರ್ಭಗಳಲ್ಲಿ ರಾಜವಂಶದ ಅಶ್ವಶಾಲೆಯ ಹತ್ತಿರ ರಾಣಿಯ ಗ್ಯಾಲರಿಯಲ್ಲಿ ಸಾರ್ವಜನಿಕರು ವೀಕ್ಷಿಸಬಹುದು. ಅರಮನೆ ಮತ್ತು ಕೋಟೆಗೆ ಭಿನ್ನವಾಗಿ, ಗ್ಯಾಲರಿಯು ನಿರಂತರವಾಗಿ ತೆರೆದುಕೊಳ್ಳುತ್ತದೆ ಮತ್ತು ಬದಲಾಗುವ ಅಂಶಗಳ ಸಂಗ್ರಹವನ್ನು ಪ್ರದರ್ಶಿಸುತ್ತದೆ. ರಾಣಿಯ ಗ್ಯಾಲರಿಯನ್ನು ಹೊಂದಿರುವ ಕೋಣೆಗಳು ವಿಶ್ವ ಸಮರ II ರ ಸಂದರ್ಭದಲ್ಲಿ ಅರಮನೆಯ ಮೇಲೆ ದಾಳಿ ಮಾಡಿದ ಏಳು ಬಾಂಬ್‌ಗಳಲ್ಲಿ ಒಂದರಿಂದ ಹಾನಿಗೊಳಗಾದ ಹಿಂದಿನ ಚ್ಯಾಪಲ್‌ನ ಜಾಗದಲ್ಲಿವೆ. ಅರಮನೆಯ ವೈಭವದ ಕೋಣೆಗಳು ೧೯೯೩ರಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸಾರ್ವಜನಿಕರಿಗೆ ತೆರೆದುಕೊಳ್ಳುತ್ತಿವೆ. ಪ್ರವೇಶ ಶುಲ್ಕವನ್ನು ಹೆಚ್ಚಿಸಿದರಿಂದ ಬಂದ ಹಣವನ್ನು ೧೯೯೨ರ ಬೆಂಕಿಯಿಂದ ವಿಂಡ್ಸರ್ ಕೋಟೆಯ ಹಾನಿಗೊಳಗಾದ ಹೆಚ್ಚಿನ ವೈಭವದ ಕೋಣೆಗಳನ್ನು ಪುನಃ ನಿರ್ಮಿಸಲು ಬಳಸಲಾಯಿತು.

೨೦೦೯ರ ಮೇಯಲ್ಲಿ, ಅರಮನೆಯ ಬಾಕಿ ಉಳಿದ ರಿಪೇರಿ ಕಾರ್ಯಗಳಿಗಾಗಿ ರಾಜ-ಕುಟುಂಬವು ಸರ್ಕಾರದಿಂದ ಹಣವನ್ನು ಕೇಳಿದುದಕ್ಕೆ ಪ್ರತಿಯಾಗಿ, ಪಬ್ಲಿಕ್ ಅಕೌಂಟ್ಸ್ ಕಮಿಟಿಯ MP ಗಳ ಗುಂಪೊಂದು ಕೇಳಿದ ವಾರ್ಷಿಕ ಹಣದಲ್ಲಿ ಹೆಚ್ಚುವರಿ £೪ ದಶಲಕ್ಷವನ್ನು ಹಿಂದಿರುಗಿಸಲು ಅರಮನೆಯನ್ನು ರಾಜ-ಕುಟುಂಬದವರು ಅಲ್ಲಿ ವಾಸಿಸುತ್ತಿರುವಾಗ ಮತ್ತು ೬೦ ದಿನಗಳಿಗಿಂತಲೂ ಹೆಚ್ಚು ದಿನ ಸಾರ್ವಜನಿಕ ಪ್ರದರ್ಶನಕ್ಕೆ ತೆರವುಗೊಳಿಸಬೇಕೆಂದು ಸೂಚಿಸಿತು.[೮೧] ಬ್ರಿಟಿಷ್ ಸರ್ಕಾರವು ಪ್ರಸ್ತುತ ಅರಮನೆಯ ದುರಸ್ತಿಗಾಗಿ ವಾರ್ಷಿಕವಾಗಿ £೧೫ ದಶಲಕ್ಷದಷ್ಟು ಹಣವನ್ನು ಒದಗಿಸುತ್ತದೆ.

ಆದ್ದರಿಂದ ಬಕಿಂಗ್ಹ್ಯಾಮ್ ಅರಮನೆಯು ಬ್ರಿಟಿಷ್ ರಾಜವಂಶದ ನಿವಾಸ ಮತ್ತು ಸಂಕೇತವಾಗಿದೆ, ಕಲಾಕೃತಿಗಳ ಗ್ಯಾಲರಿಯಾಗಿದೆ ಮತ್ತು ಪ್ರವಾಸಿ ಆಕರ್ಷಣೆಯಾಗಿದೆ. ಬ್ರೋಮ್ಸ್‌ಗ್ರೂ ಗಿಲ್ಡ್‌ನಿಂದ[೩೭] ಮಾಡಲ್ಪಟ್ಟ ಚಿನ್ನದ ಲೇಪ ಹಾಕಿದ ಬೇಲಿ ಮತ್ತು ಗೇಟ್‌ಗಳ ಹಿಂಭಾಗ ಮತ್ತು ವೆಬ್‌ನ ಪ್ರಸಿದ್ಧ ಮುಂಭಾಗವನ್ನು ರಾಜವಂಶದ ಸಂಗ್ರಹದಿಂದ ಪ್ರಕಟವಾದ ಪುಸ್ತಕವೊಂದರಲ್ಲಿ 'ಪ್ರತಿಯೊಬ್ಬರ ಕಲ್ಪನಾ ಅರಮನೆಯಂತೆ ಗೋಚರಿಸುತ್ತದೆಂದು' ವಿವರಿಸಲಾಗಿದೆ;[೩೭] ರಾಣಿ ಮತ್ತು ರಾಜ ಫಿಲಿಪ್‌ರ ವಾರದ-ದಿನದ ನಿವಾಸವಾಗಿರುವುದಲ್ಲದೆ ಡ್ಯೂಕ್ ಆಫ್ ಯೋರ್ಕ್ ಹಾಗೂ ಅರ್ಲ್ ಮತ್ತು ಕೌಂಟೆಸ್ ಆಫ್ ವೆಸ್ಸೆಕ್ಸ್‌ನ ಲಂಡನ್ ನೆಲೆಯಾಗಿದೆ. ಅರಮನೆಯು ರಾಜಪರಿವಾರದ ಕಛೇರಿಗಳನ್ನೂ ಹೊಂದಿದೆ ಮತ್ತು ೪೫೦ ಮಂದಿಯ ಕಾರ್ಯಸ್ಥಳವಾಗಿದೆ.

ಇವನ್ನೂ ಗಮನಿಸಿ[ಬದಲಾಯಿಸಿ]

Page ಮಾಡ್ಯೂಲ್:Portal/styles.css has no content.

 • ಬಕಿಂಗ್ಹ್ಯಾಮ್ ಅರಮನೆಯ ಬಾವುಟಗಳು
 • ಬ್ರಿಟಿಷ್ ರಾಜೋಚಿತ ನಿವಾಸಗಳ ಪಟ್ಟಿ

ಟಿಪ್ಪಣಿಗಳು[ಬದಲಾಯಿಸಿ]

 1. ಸಂಪ್ರದಾಯ ಪ್ರಕಾರ, ಬ್ರಿಟಿಷ್ ರಾಜವಂಶದ ಸಭಾಮಂದಿರವು ಸೇಂಟ್ ಜೇಮ್ಸ್ ಅರಮನೆಯಲ್ಲಿ ಈಗಲೂ ಅಧಿಕೃತ ನಿವಾಸವಾಗಿದೆ, ಅಂದರೆ ವಿದೇಶಿ ರಾಯಭಾರಿಗಳು ತಮ್ಮ ಹೊಸ ನೆಲೆಯನ್ನು ಪಡೆಯುವಾಗ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಬ್ರಿಟಿಷ್ ರಾಜರಿಂದ ಆಹ್ವಾನಿಸಲ್ಪಡುತ್ತಾರೆ, ವಾಸ್ತವವಾಗಿ ಅವರು "ಸೇಂಟ್ ಜೇಮ್ಸ್ ಅರಮನೆಯ ಸಭಾಂಗಣ"ಕ್ಕೆ ನಿಯೋಗಿಸಲ್ಪಟ್ಟಿರುತ್ತಾರೆ. ಇದು ಬಕಿಂಗ್ಹ್ಯಾಮ್ ಅರಮನೆಯು ಬಹುಮಟ್ಟಿಗೆ ಅಧಿಕೃತ ನಿವಾಸವೆಂಬ ಸಂಪ್ರದಾಯದ ನಿಮಿತ್ತ ಮುಂದುವರಿಯುತ್ತಿದೆ. ಗಮನಿಸಿ - ಹಿಸ್ಟರಿ ಆಫ್ ಸೇಂಟ್ ಜೇಮ್ಸ್ ಪ್ಯಾಲೇಸ್ (ರಾಜವಂಶದ ಜಾಲತಾಣ).
 2. ೨.೦ ೨.೧ ರಾಬಿನ್ಸನ್, ಪುಟ ೧೪
 3. ಗೋರಿಂಗ್, ಪುಟ ೧೫
 4. ದಿ ಟೋಪೋಗ್ರಫಿ ಆಫ್ ದಿ ಸೈಟ್ ಆಂಡ್ ಇಟ್ಸ್ ಓನರ್‌ಶಿಪ್ ಆರ್ ಡೆಲ್ಟ್ ವಿದಿನ್ ವ್ರೈಟ್, ಚ್ಯಾಪ್ಟರ್‌ಗಳು ೧–೪
 5. ಗೋರಿಂಗ್, ಪುಟ ೨೮
 6. ಗೋರಿಂಗ್, ಪುಟ ೧೮
 7. ದಿ ಅಕ್ವಿಸಿಶನ್ ಆಫ್ ದಿ ಎಸ್ಟೇಟ್ Archived 13 December 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. , ಸರ್ವೆ ಆಫ್ ಲಂಡನ್‌ : ಸಂಪುಟ ೩೯: ದಿ ಗ್ರೋಸ್ವೆನರ್ ಎಸ್ಟೇಟ್ ಇನ್ ಮೇಫೇರ್, ಭಾಗ ೧ (ಸಾಮಾನ್ಯ ಇತಿಹಾಸ) (೧೯೭೭), ಪುಟಗಳು ೧–೫. ಸಂಕಲನಗೊಳಿಸಿದ ದಿನಾಂಕ: ೩ ಫೆಬ್ರವರಿ ೨೦೦೯
 8. ವ್ರೈಟ್, ಪುಟ ೭೬–೮
 9. ಗೋರಿಂಗ್, ಪುಟಗಳು ೩೧&೩೬
 10. ಆಡ್ಲಿ ಮತ್ತು ಡೇವೀಸ್ ಈಗಲೂ ಅಸ್ತಿತ್ವದಲ್ಲಿರುವ ಗ್ರೋಸ್ವೆನರ್ ಮತ್ತು ಎಬರಿ ಮೇನರ್‌ನ ಅಭಿವೃದ್ಧಿಯ ಪ್ರಮುಖ ವ್ಯಕ್ತಿಗಳಾಗಿದ್ದಾರೆ (ಗಮನಿಸಿ - ಡ್ಯೂಕ್ಸ್ ಆಫ್ ವೆಸ್ಟ್‌ಮಿಂಸ್ಚರ್). (ಅವರನ್ನು ಉತ್ತರದ ಆಡ್ಲಿ ರಸ್ತೆ, ದಕ್ಷಿಣದ ಆಡ್ಲಿ ರಸ್ತೆ ಮತ್ತು ಡೇವಿಸ್ ರಸ್ತೆ ಮೊದಲಾದ ರಸ್ತೆಯ ಹೆಸರುಗಳನ್ನು ನೆನಪಿಸಿಕೊಳ್ಳಲಾಗುತ್ತದೆ, ಇವೆಲ್ಲವೂ ಮೇಫೇರ್‌ನಲ್ಲಿವೆ.)
 11. ವ್ರೈಟ್, ಪುಟ ೮೩
 12. ಗೋರಿಂಗ್, ಚ್ಯಾಪ್ಟರ್ V
 13. ೧೩.೦ ೧೩.೧ ೧೩.೨ ಹ್ಯಾರಿಸ್, ಪುಟ ೨೧
 14. ವ್ರೈಟ್, ಪುಟ ೯೬
 15. ಗೋರಿಂಗ್, ಪುಟ ೬೨
 16. ಗೋರಿಂಗ್, ಪುಟ ೫೮
 17. ಹ್ಯಾರಿಸ್, ಪುಟ ೨೨
 18. ನ್ಯಾಶ್, ಪುಟ ೧೮, ವ್ರೈಟ್, ಪುಟ ೧೪೨, ನೀಡಿದ ಖರೀದಿ ದರ £೨೮,೦೦೦
 19. UK CPI inflation numbers based on data available from Gregory Clark (2013), "What Were the British Earnings and Prices Then? (New Series)" MeasuringWorth.
 20. ೧೭೭೫ರಲ್ಲಿ, ಸಂಸತ್ತಿನಯ ಕಾಯಿದೆಯು ಸೋಮರ್ಸೆಟ್ ನಿವಾಸದ ಮೇಲಿನ ಹಕ್ಕುಗಳಿಗೆ ಬದಲಿಯಾಗಿ ರಾಣಿ ಚಾರ್ಲೊಟ್‌ಗೆ ಆಸ್ತಿಯನ್ನು ಬರೆದುಕೊಟ್ಟಿತು (ಗಮನಿಸಿ - ಓಲ್ಡ್ ಆಂಡ್ ನ್ಯೂ ಲಂಡನ್‌ (ಕೆಳಗೆ)
 21. ವೆಸ್ಟ್‌ಮಿಂಸ್ಟರ್: ಬಕಿಂಗ್ಹ್ಯಾಮ್ ಪ್ಯಾಲೇಸ್ Archived 8 October 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. , ಓಲ್ಡ್ ಆಂಡ್ ನ್ಯೂ ಲಂಡನ್‌ : ಸಂಪುಟ ೪ (೧೮೭೮), ಪುಟಗಳು ೬೧–೭೪. ಸಂಕಲನಗೊಳಿಸಿದ ದಿನಾಂಕ: ೩ ಫೆಬ್ರವರಿ ೨೦೦೯. "ಸೇಂಟ್ ಜೇಮ್ಸ್ ಅರಮನೆ"ಗೆ ವಿದೇಶಿ ರಾಯಭಾರಿಗಳನ್ನು ಸಾಂಪ್ರದಾಯಿಕವಾಗಿ ನಿಯೋಗಿಸುವ ಪದ್ಧತಿಯು ಉಳಿದುಕೊಂಡಿದೆ. ಆದರೂ ಅವರು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಅವರ ಆಧಾರಗಳು ಮತ್ತು ಸಿಬ್ಬಂದಿಗಳನ್ನು ರಾಣಿಗೆ ಒಪ್ಪಿಸುತ್ತಾರೆ.
 22. ಹ್ಯಾರಿಸ್, ಪುಟ ೨೪
 23. ಹ್ಯಾರಿಸ್, ಪುಟ ೩೦–೩೧
 24. ಜೋನ್ಸ್, ಪುಟ ೪೨
 25. ಹ್ಯಾರಿಸ್, ಪುಟ ೩೩
 26. "The Royal Residences > Buckingham Palace > History". www.royal.gov.uk. Retrieved 2 ಫೆಬ್ರವರಿ 2009.
 27. Ziegler, Phillip (1971). King William IV. Collins. p. 280. ISBN 0-00-211934-X.. {{cite book}}: Check |isbn= value: invalid character (help)
 28. "The Royal Residences > Buckingham Palace". www.royal.gov.uk. Archived from the original on 27 ಜನವರಿ 2009. Retrieved 2 ಫೆಬ್ರವರಿ 2009.
 29. ಹೆಡ್ಲಿ, ಪುಟ ೧೦
 30. ೩೦.೦ ೩೦.೧ ವುಧ್ಯಾಮ್-ಸ್ಮಿತ್, ಪುಟ ೨೪೯
 31. ಹ್ಯಾರಿಸ್, ಡಿ ಬೆಲ್ಲೈಗ್ ಮತ್ತು ಮಿಲ್ಲರ್, ಪುಟ ೩೩
 32. ಹಾಲೆಂಡ್ ಆಂಡ್ ಹ್ಯಾನೆನ್ ಆಂಡ್ ಕ್ಯುಬಿಟ್ಸ್ - ದಿ ಇನ್ಸೆಪ್ಷನ್ ಆಂಡ್ ಡೆವಲಪ್ಮೆಂಟ್ ಆಫ್ ಎ ಗ್ರೇಟ್ ಬಿಲ್ಡಿಂಗ್ ಫರ್ಮ್ , ೧೯೨೦ರಲ್ಲಿ ಪ್ರಕಟಗೊಂಡಿದೆ, ಪುಟ ೩೫
 33. ಹೆಡ್ಲಿ, ಪುಟ ೧೯
 34. ಹೀಲಿ, ಪುಟ ೧೩೭–೧೩೮
 35. ಹೀಲಿ, ಪುಟ ೧೨೨
 36. ಅಲೆನ್ಸ್ ಇಂಡಿಯನ್ ಮೇಲ್ ಆಂಡ್ ರಿಜಿಸ್ಟರ್ ಆಫ್ ಬ್ರಿಟಿಷ್ ಆಂಡ್ ಫಾರಿನ್ ಇಂಡಿಯಾ, ಚೀನಾ ಆಂಡ್ ಆಲ್ ಪಾರ್ಟ್ಸ್ ಆಫ್ ದಿ ಈಸ್ಟ್. ೧೮೫೦, ಸಂಪುಟ VIII. ಗೂಗಲ್ ಬುಕ್ ಲಿಂಕ್
 37. ೩೭.೦ ೩೭.೧ ೩೭.೨ ರಾಬಿನ್ಸನ್, ಪುಟ ೯
 38. "40 facts about Buckingham Palace". The British Monarchy.
 39. ೩೯.೦ ೩೯.೧ ಹ್ಯಾರಿಸ್, ಪುಟ ೪೧
 40. ಹ್ಯಾರಿಸ್, ಪುಟಗಳು ೭೮–೭೯
 41. ಹೀಲಿ, ಪುಟಗಳು ೩೮೭–೩೮೮
 42. ಹ್ಯಾರಿಸ್, ಪುಟ ೮೧
 43. ಹ್ಯಾರಿಸ್, ಪುಟ ೪೦
 44. ಹೀಲಿ, ಪುಟಗಳು ೧೫೯–೧೬೦
 45. ಹ್ಯಾರಿಸ್, ಡಿ ಬೆಲೈಗ್ಯೂ ಆಂಡ್ ಮಿಲ್ಲರ್, ಪುಟ ೯೩
 46. ಹ್ಯಾರಿಸ್, ಡಿ ಬೆಲೈಗ್ಯೂ ಆಂಡ್ ಮಿಲ್ಲರ್, ಪುಟ ೯೧
 47. ಜೋನ್ಸ್, ಪುಟ ೪೩
 48. ೪೮.೦ ೪೮.೧ ಹ್ಯಾರಿಸ್, ಪುಟ ೮೨.
 49. ೪೯.೦ ೪೯.೧ 40 ಫ್ಯಾಕ್ಟ್ಸ್ ಎಬೌಟ್ ಬಕಿಂಗ್ಹ್ಯಾಮ್ ಪ್ಯಾಲೇಸ್ Archived 11 December 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. (ರಾಯಲ್ ಇನ್ಸೈಟ್: ದಿ ಬ್ರಿಟಿಷ್ ಮೊನಾರ್ಕಿ ಮೀಡಿಯಾ ಸೆಂಟರ್) ೨೦೦೯ರ ಫೆಬ್ರವರಿ ೩ರಂದು ಸಂಕಲನಗೊಳಿಸಲಾಗಿದೆ
 50. ಹೀಲಿ, ಪುಟ ೨೩೩, ಉಲ್ಲೇಖ ದಿ ಮೆಮೋಯರ್ಸ್ ಆಫ್ ಮ್ಯಾಬೆಲ್, ಕೌಂಟೆಸ್ ಆಫ್ ಏರ್ಲೈ , ಜೆನಿಫರ್ ಎಲ್ಲಿಸ್ ಸಂಪಾದಿಸಿದ್ದಾರೆ ಮತ್ತು ವ್ಯವಸ್ಥೆಗೊಳಿಸಿದ್ದಾರೆ, ಲಂಡನ್‌:ಹಟ್ಚಿನ್ಸನ್, ೧೯೬೨.
 51. ಹೆಚ್ಎಮ್‌ನ ಪ್ರತಿನಿಧಿಗಳು ನೀಡಿದ ಸಲಹೆಸೂಚನೆ
 52. "Mailbox". Royal Insight Magazine. Archived from the original on 23 ಜನವರಿ 2008. Retrieved 23 ಜನವರಿ 2008.
 53. ದಿ ಲೇಟ್ ಪ್ರಿನ್ಸೆಸ್ ಮಾರ್ಗರೆಟ್ ಈಸ್ ರೆಪ್ಯೂಟೆಡ್ ಟು ಹ್ಯಾವ್ ರಿಮಾರ್ಕ್ಡ್ ಆಫ್ ದಿ ಡೆಬ್ಯೂಟಾಂಟ್ ಪ್ರೆಸೆಂಟೇಶನ್ಸ್: "ವಿ ಹ್ಯಾಡ್ ಟು ಪುಟ್ ಎ ಸ್ಟಾಪ್ ಟು ಇಟ್, ಎವ್ರಿ ಟಾರ್ಟ್ ಇನ್ ಲಂಡನ್‌ ವಾಸ್ ಗೆಟ್ಟಿಂಗ್ ಇನ್." ಗಮನಿಸಿ - ಬ್ಲೈಕಿ, ಥೋಮಸ್ (೨೦೦೨). ಯು ಲುಕ್ ಆಫುಲಿ ಲೈಕ್ ದಿ ಕ್ವೀನ್: ವಿಟ್ ಆಂಡ್ ವಿಸ್ಡಮ್ ಫ್ರಮ್ ದಿ ಹೌಸ್ ಆಫ್ ವಿಂಡ್ಸರ್ . ಲಂಡನ್‌: ಹಾರ್ಪರ್ ಕೊಲಿನ್ಸ್. ISBN ೦-೦೦-೭೧೪೮೭೪-೭
 54. "Fact files > 40 facts about Buckingham Palace". Royal.gov.uk. Retrieved 11 ಆಗಸ್ಟ್ 2010.
 55. ಹ್ಯಾರಿಸ್, ಪುಟ ೭೨
 56. ೫೬.೦ ೫೬.೧ ಹೀಲಿ, ಪುಟ ೩೬೪
 57. ಹೀಲಿ, ಪುಟ ೩೬೨
 58. ಹೆಡ್ಲಿ, ಪುಟ ೧೬
 59. ಹೀಲಿ, ಪುಟಗಳು ೩೬೩–೩೬೫
 60. ರಾಬಿನ್ಸನ್, ಪುಟ ೪೯
 61. ರಾಬಿನ್ಸನ್ (ಪುಟ ೯) ಅಸರ್ಟ್ಸ್ ದ್ಯಾಟ್ ದಿ ಡೆಕೊರೇಶನ್ಸ್, ಇನ್‌ಕ್ಲೂಡಿಂಗ್ ಪ್ಲಾಸ್ಟರ್ ಸ್ವ್ಯಾಗ್ಸ್ ಆಂಡ್ ಅದರ್ ಡೆಕೊರೇಟಿವ್ ಮೋಟಿಫ್ಸ್, ಆರ್ "ಫಿನಿಕಿ" ಆಂಡ್ "ಅಟ್ ಆಡ್ಸ್ ವಿದ್ ನ್ಯಾಶ್ಸ್ ಒರಿಜಿನಲ್ ಡಿಟೈಲಿಂಗ್".
 62. ಹ್ಯಾರಿಸ್, ಪುಟ ೩೪
 63. ಹೀಲಿ, ಪುಟ ೧೮೫
 64. "Buckingham Palace hits right note with jazz fans". London Evening Standard. Thisislondon.co.uk. 3 August 2009). Retrieved 11 August 2010. {{cite web}}: Check date values in: |date= (help)
 65. Stephen Bates (3 ಆಗಸ್ಟ್ 2009). "By royal approval: Buckingham Palace's place in jazz history". The Guardian. London. Retrieved 11 ಆಗಸ್ಟ್ 2010.
 66. ಹೀಲಿ ಪುಟಗಳು ೨೨೧–೨೨೨
 67. ಹ್ಯಾರಿಸ್, ಪುಟ ೬೩
 68. ರಾಬಿನ್ಸನ್, ಪುಟ ೧೧
 69. Rose, Kenneth (1983). King George V. London: Weidenfeld and Nicolson. pp. 176–177. ISBN 0-297-78245-2.
 70. ರೋಸ್, ಪುಟಗಳು ೧೭೮–೧೭೯
 71. Thornton, Michael (1984). Royal Feud. M.Joseph. p. 216.
 72. The Sunday Graphic, 18 September 1939, p. 1
 73. ಪ್ರೈಸ್, ಆಲ್ಫ್ರೆಡ್. ಬ್ಯಾಟಲ್ ಆಫ್ ಬ್ರಿಟನ್ ಡೇ , ಗ್ರೀನ್‌ಹಿಲ್ ಬುಕ್ಸ್, ಲಂಡನ್‌, ೧೯೯೦, ಪುಟಗಳು ೪೯-೫೦ ಮತ್ತು ಸ್ಟೀಫನ್ ಬಂಗೆ, ದಿ ಮೋಸ್ಟ್ ಡೇಂಜರಸ್ ಎನಿಮಿ: ಎ ಹಿಸ್ಟರಿ ಆಫ್ ದಿ ಬ್ಯಾಟಲ್ ಆಫ್ ಬ್ರಿಟನ್ . ಆರಮ್ ಪ್ರೆಸ್, ಲಂಡನ್‌, ೨೦೦೦, ಪುಟ ೩೨೫.
 74. "Pilot who 'saved Palace' honoured". BBC news website. British Broadcasting Corporation (BBC). 2 ನವೆಂಬರ್ 2005. Retrieved 18 ಮಾರ್ಚ್ 2009.
 75. 1945: ರಿಜೋಯ್ಸಿಂಗ್ ಆಟ್ ಎಂಡ್ ಆಫ್ ವಾರ್ ಇನ್ ಯುರೋಪ್ (BBC ಆನ್ ದಿಸ್ ಡೇ .) ೨೦೦೯ರ ಫೆಬ್ರವರಿ ೩ರಂದು ಮರುಸಂಪಾದಿಸಲಾಯಿತು.
 76. ಡಿಕೆನ್ಸ್, ಚಾರ್ಲ್ಸ್ (೫ ಜುಲೈ೧೮೮೫) "ದಿ ಬಾಯ್ ಜೋನ್ಸ್", ಆಲ್ ದಿ ಯಿಯರ್ ರೌಂಡ್ , ಪುಟಗಳು ೨೩೪–೩೭.
 77. ಗಾಡ್ ಸೇವ್ ದಿ ಕ್ವೀನ್, ಫಾಸ್ಟ್ Archived 15 October 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. , ಸ್ಪೆನ್ಸರ್ ಡ್ಯಾವಿಡ್ಸನ್ ಮತ್ತು ಅರ್ತುರ್ ವೈಟ್, ಟೈಮ್ ಮ್ಯಾಗಜಿನ್ ೨೬ ಜುಲೈ ೧೯೮೨ ಸಂಕಲನಗೊಳಿಸಲಾಗಿದೆ ೩ ಫೆಬ್ರವರಿ ೨೦೦೯
 78. Buckingham Palace (ಲಂಡನ್‌‌ನ ವಸ್ತುಸಂಗ್ರಹಾಲಯ.) ೨೦೦೯ರ ಮೇ ೨ರಂದು ಮರುಸಂಪಾದಿಸಲಾಗಿದೆ.
 79. "Kid's Zone:The Gold State Coach". The official website of the British Monarchy. Retrieved 25 ಮೇ 2007.
 80. "The Royal Residences > The Royal Mews". www.royal.gov.uk. Retrieved 2 ಫೆಬ್ರವರಿ 2009.
 81. Pierce, Andrew (30 ಮೇ 2009). "Queen must open palace more in return for extra funds". The Daily Telegraph. London. Archived from the original on 5 ಜೂನ್ 2009. Retrieved 4 ಜೂನ್ 2009.

ಉಲ್ಲೇಖಗಳು[ಬದಲಾಯಿಸಿ]

 • ಬ್ಲೈಕಿ, ಥೋಮಸ್ (೨೦೦೨). ಯು ಲುಕ್ ಆಫುಲ್ಲಿ ಲಿಕೈ ದಿ ಕ್ವೀನ್: ವಿಟ್ ಆಂಡ್ ವಿಸ್ಡಮ್ ಫ್ರಮ್ ದಿ ಹೌಸ್ ಆಪ್ ವಿಂಡ್ಸರ್ . ಲಂಡನ್‌: ಹಾರ್ಪರ್ ಕೊಲಿನ್ಸ್. ISBN ೦-೦೦-೭೧೪೮೭೪-೭.
 • ಗೋರಿಂಗ್, ಒ. ಜಿ. (೧೯೩೭). ಫ್ರಮ್ ಗೋರಿಂಗ್ ಹೌಸ್ ಟು ಬಕಿಂಗ್ಹ್ಯಾಮ್ ಪ್ಯಾಲೇಸ್ . ಲಂಡನ್‌:ಐವರ್ ನಿಕೋಲ್ಸನ್ ಆಂಡ್ ವ್ಯಾಟ್ಸನ್.
 • ಹ್ಯಾರಿಸ್, ಜಾನ್; ಡಿ ಬೆಲ್ಲೈಗ್ಯೂ, ಜಿಯೋಫ್ರಿ; ಆಂಡ್ ಮಿಲ್ಲರ್, ಆಲಿವರ್ (೧೯೬೮). ಬಕಿಂಗ್ಹ್ಯಾಮ್ ಪ್ಯಾಲೇಸ್ . ಲಂಡನ್‌:ನೆಲ್ಸನ್. ISBN ೦-೧೭-೧೪೧೦೧೧-೪
 • ಹೇಲಿ, ಎಡ್ಮ (೧೯೯೭). ದಿ ಕ್ವೀನ್ಸ್ ಹೌಸ್: ಎ ಸೋಷಿಯಲ್ ಹಿಸ್ಟರಿ ಆಫ್ ಬಕಿಂಗ್ಹ್ಯಾಮ್ ಪ್ಯಾಲೇಸ್ . ಲಂಡನ್‌:ಪೆಂಗ್ವಿನ್ ಗ್ರೂಪ್. ISBN ೦೭೧೮೧೭೦೮೯೩.
 • ಹೆಡ್ಲಿ, ಒಲ್ವೆನ್ (೧೯೭೧) ದಿ ಪಿಕ್ಟೋರಿಯಲ್ ಹಿಸ್ಟರಿ ಆಫ್ ಬಕಿಂಗ್ಹ್ಯಾಮ್ ಪ್ಯಾಲೇಸ್ . ಪಿಟ್ಕಿನ್, ISBN ೦-೮೫೩೭೨-೦೮೬-X
 • Jones, Nigel R. (2005). Architecture of England, Scotland, and Wales. Greenwood Publishing Group. ISBN 0-313-31850-6.
 • ನ್ಯಾಶ್, ರಾಯ್ (೧೯೮೦). ಬಕಿಂಗ್ಹ್ಯಾಮ್ ಪ್ಯಾಲೇಸ್: ದಿ ಪ್ಲೇಸ್ ಆಂಡ್ ದಿ ಪೀಪಲ್ . ಲಂಡನ್‌: ಮ್ಯಾಕ್‌ಡೊನಾಲ್ಡ್ ಫ್ಯೂಟುರ. ISBN ೦-೩೫೪-೦೪೫೨೯-೬
 • ರಾಬಿನ್ಸನ್, ಜಾನ್ ಮಾರ್ಟಿನ್ (೧೯೯೯). ಬಕಿಂಗ್ಹ್ಯಾಮ್ ಪ್ಯಾಲೇಸ್ . ಸೇಂಟ್ ಜೇಮ್ಸ್ ಅರಮನೆಯ ದಿ ರಾಯಲ್ ಕಲೆಕ್ಷನ್‌ನಿಂದ ಪ್ರಕಟಗೊಂಡಿದೆ, ಲಂಡನ್‌ ISBN ೧-೯೦೨೧೬೩-೩೬-೨.
 • ವಿಲಿಯಮ್ಸ್, ನೆವಿಲ್ಲೆ (೧೯೭೧). ರಾಯಲ್ ಹೋಮ್ಸ್ . ಲುಟ್ಟರ್‌ವರ್ತ್ ಪ್ರೆಸ್. ISBN ೦-೭೧೮೮-೦೮೦೩-೭.
 • ವೂಧ್ಯಾಮ್-ಸ್ಮಿತ್, ಸೆಸಿಲ್ (೧೯೭೩). ಕ್ವೀನ್ ವಿಕ್ಟೋರಿಯಾ (ಸಂಪುಟ ೧) ಹ್ಯಾಮಿಶ್ ಹ್ಯಾಮಿಲ್ಟನ್ ಲಿಮಿಟೆಡ್.
 • ವ್ರೈಟ್, ಪ್ಯಾಟ್ರಿಕಿಯಾ (೧೯೯೯; ಮೊದಲು ಪ್ರಕಟಗೊಂಡಿದ್ದು ೧೯೯೬). ದಿ ಸ್ಟ್ರೇಂಜ್ ಹಿಸ್ಟರಿ ಆಫ್ ಬಕಿಂಗ್ಹ್ಯಾಮ್ ಪ್ಯಾಲೇಸ್ . ಸ್ಟ್ರೌಡ್, ಗ್ಲೌಕ್ಸ್.: ಸುಟ್ಟನ್ ಪಬ್ಲಿಷಿಂಗ್ ಲಿಮಿಟೆಡ್, ISBN ೦-೭೫೦೯-೧೨೮೩-೯

ಬಾಹ್ಯ ಕೊಂಡಿಗಳು‌[ಬದಲಾಯಿಸಿ]

51°30′04″N 0°08′31″W / 51.501°N 0.142°W / 51.501; -0.142