ಅಗ್ನಿಶಿಖಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಗ್ನಿಶಿಖಾ
Gloriosa rothschildiana 01.jpg
ಅಗ್ನಿಶಿಖಾ
Egg fossil classification
Kingdom:
plantae
(unranked):
ಹೂವು ಬಿಡುವ ಗಿಡ
(unranked):
ಏಕದಳ ಬೀಜಗಳು
Order:
Liliales
Family:
ಕೋಲ್ಚಿಕೇಸಿ
Genus:
ಗ್ಲೋರಿಯೋಸಾ
Binomial nomenclature
ಗ್ಲೋರಿಯೋಸಾ ಸುಪರ್ಬಾ

ಇದು ಒಂದು ಬಳ್ಳಿಯ ರೀತಿ ಹರಡಿಕೊಂಡು ಬೆಳೆಯುವ ಗಿಡವಾಗಿದೆ. ಇದು ಲಿಲಿಯೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದನ್ನು ಕೋಲ್ಚಿಕೇಸಿ ಸಸ್ಯ ಕುಟುಂಬದಲ್ಲಿ ಸೇರಿಸಲಾಗಿದೆ. ಈ ಗಿಡದ ಇತರ ಹೆಸರುಗಳೆಂದರೆ, ಗೌರಿಹೂ ಅಕ್ಕತಂಗಿ ಗಿಡ, ನೆಲಗುಲಿಕ ಲಾಂಗುಲಿಕ ಮಲಬಾರ್ ಗ್ಲೊರಿಲಿಲ್ಲಿ, ಕೋಳಿಕಟುಕನ ಗಡ್ಡೆ, ಕಾಲಿಹರಿ ಇತ್ಯಾದಿ. ಇದು ಹೂವುಗಳನ್ನು ಬಿಡುವ ಗಿಡ/ಬಳ್ಳಿಯಾಗಿದ್ದು, ಇದರ ಮೂಲ ಜನ್ಮಸ್ಥಾನ ಆಫ್ರಿಕ ಮತ್ತು ಏಷಿಯಾ ದೇಶಗಳು[೧].ಏಕದಳ ಬೀಜಗಳನ್ನು(monocotyledon)ಹೊಂದಿರುತ್ತದೆ. ಇದರ ಗಡ್ಡೆ ವಿಷಗುಣವುಳ್ಳದ್ದಾಗಿದೆ.

ಭಾರತೀಯ ಭಾಷೆಗಳಲ್ಲಿ ಇದರ ಸಾಧಾರಣ ಹೆಸರು[೨][ಬದಲಾಯಿಸಿ]

Common name: Glory Lily, Gloriosa lily, Tiger claw, claw

ಮೂಲ ಮತ್ತು ಪ್ರಭೇದಗಳು[ಬದಲಾಯಿಸಿ]

ಏಷ್ಯಾ ಮತ್ತು ಆಫ್ರಿಕಾದ ಶೀತವಲಯದಲ್ಲಿ ಈ ಗಿಡದ ಮೂಲ ಸ್ಥಾನವಾಗಿದೆ. ಗ್ಲೋರಿಯೋಸಾದ ಉಪವರ್ಗಗಳು ಆಫ್ರಿಕಾದ ಉತ್ತರ ಮತ್ತು ದಕ್ಷಿಣ ಭಾಗಗಳು, ಮಡಗಾಸ್ಕರ್, ಭಾರತ, ಶ್ರೀಲಂಕಾ ಇಂಡೋನೇಷ್ಯಾ ದೇಶಗಳಲ್ಲಿ ಕಂಡುಬರುತ್ತವೆ. ನಮ್ಮಲ್ಲಿ ಕಂಡುಬರುವ ಗ್ಲೋರಿಯೋಸಾ ಸೂಪರ್ಬಾದ ಮೂಲ ಭಾರತವೇ ಆಗಿದೆ. ಇದರ ಇನ್ನೊಂದು ಪ್ರಬೇಧ ಗ್ಲೋರಿಯೋಸಾ ರೋಟ್ಷಿಲ್ಡಿಯಾನಾ ಸಹ ನಮ್ಮಲ್ಲಿ ಕಂಡುಬರುತ್ತದೆ.[೩]

ಬೇರೆ ದೇಶಗಳಲ್ಲಿ ಬೆಳೆಯಲ್ಪಡುವ ಇತರ ಪ್ರಭೇದಗಳೆಂದರೆ, ಗ್ಲೋರಿಯೋಸಾ ಕಾರ್ಸೊನಿ, ಗ್ಲೋರಿಯೋಸಾ ಪ್ಲಾಂಟಿ, ಗ್ಲೋರಿಯೋಸಾ ಸಿಂಪ್ಲೆಕ್ಸ್, ಗ್ಲೋರಿಯೋಸಾ ಅಬಿಸೀನಿಕಾ, ಗ್ಲೋರಿಯೋಸಾ ರಿಚ್ಮಾಂಡೆನ್ಸಿಸ್, ಗ್ಲೋರಿಯೋಸಾ ವೈರೆಸೆನ್ಸ್, ಗ್ಲೋರಿಯೋಸಾ ಲುಟಿಯಾ, ಗ್ಲೋರಿಯೋಸಾ ಮ್ಯಾಗ್ನಿಫಿಕಾ, ಗ್ಲೋರಿಯೋಸಾ ಲಾಂಗಿಫೋಲಿಯಾ ಮತ್ತು ಗ್ಲೋರಿಯೋಸಾ ಲ್ಯಾಟಿಫೋಲಿಯಾ.[೩]

ಸಸ್ಯ[ಬದಲಾಯಿಸಿ]

ಇದು ನೇರವಾಗಿ ಬೆಳೆಯುವ ಪರ್ಯಾಯವಾಗಿ ಜೋಡಣೆ ಹೊಂದಿರುವ ಎಲೆಗಳಿರುವ ಸಸ್ಯ.ಇದರ ಹೂವು ಕೊಂಬೆಯ ತುದಿಯ ಎಲೆಯ ಕಂಕುಳದಲ್ಲಿದ್ದು ಕೆಂಪು ಮಿಶ್ರಿತ ಹಳದಿ ಬಣ್ಣದ್ದಾಗಿದೆ. ಸಾಮಾನ್ಯವಾಗಿ ಅಗೋಸ್ಟು ತಿಂಗಳಲ್ಲಿ ಹೂ ಬಿಡುವ ಇದು ನೋಡುಗರನ್ನು ಆಕರ್ಷಿಸುತ್ತದೆ. ಇದರ ತಳಭಾಗದಲ್ಲಿರು (ಮಣ್ಣೊನೊಳಗೆ) ಗಡ್ಡೆ ಔಷಧೀಯ ಗುಣಗಳನ್ನು ಹೊಂದಿರುತ್ತದೆ[೨].ಅಗ್ನಿಶಿಖಾದ ಸಸ್ಯಾಭಿವೃದ್ಧಿ ಇದರ ಬೀಜ ಮತ್ತು ಕಾಂಡಗಳಿಂದ ಸಾಧ್ಯ. ಇದರ ಕಾಂಡಗಳನ್ನು ಮಳೆಗಾಲದಲ್ಲಿ ನರ್ಸರಿ ಮಡಿಗಳಲ್ಲಿ ನಾಟಿ ಮಾಡಿ ಸಸ್ಯಗಳನ್ನು ಪಡೆದು ಕೊಳ್ಳಬಹುದು.ಇದು ೩.೦ನಿಂದ ೩.೫ ಮೀಟರುಗಳ ಉದ್ದದಲ್ಲಿ ಹರಡುವ ಬಳ್ಳಿ.ಎಲೆಯ ಕಡಭಾಗ/ಶೀರ್ಷಭಾಗ ನುಲಿಗೊಳ್ಳಿರುತ್ತದೆ. ಕಾಯಿ:ಕಾಯಿ/ಹಣ್ಣುಗಳು ೭-೮ ಸೆಂ.ಮೀ.ಗಳ ಉದ್ದವಾಗಿರುತ್ತವೆ.ಒಂದು ಹಣ್ಣು ಒಳಗೆ ೪೦-೫೦ ಬೀಜಗಳಿರುತ್ತವೆ.ಬೀಜಗಳು ಕೆಂಪು ಬಣ್ಣ ಕೂಡಿದ ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ.ನಾಟಿ ಮಾಡಿದ ೬ ತಿಂಗಳುಗಳಲ್ಲಿ ಇದರ ಹಣ್ಣುಗಳನ್ನು ಕೊಯ್ಲು ಮಾಡಬಹುದು. ಸಂಗ್ರಹಿಸಿದ ಹಣ್ಣುಗಳನ್ನು ೧೦ ರಿಂದ ೧೫ ದಿನಗಳ ಕಾಲ ನೆರಳಿನಲ್ಲಿ ಒಣಗಿಸಬೇಕು.ಒಂದು ಎಕ್ರೆ ಅಗ್ನಿಶಿಖಾ ಕೃಷಿಯಿಂದ ವಾರ್ಷಿಕವಾಗಿ ಸುಮಾರು ೧೨೨ ಕಿ.ಗ್ರಾಂ. ಬೀಜಗಳನ್ನು ಸಂಗ್ರಹಿಸಬಹುದು.ಬಿತ್ತನೆದಲ್ಲಿ ಕೊಲ್ಬೋಸಿಸ್ ಯನ್ನುವ ಆಲ್ಕಾಲಾಯಿಡ್ ಲಭ್ಯವಾಗುತ್ತದೆ.[೪] ಗಡ್ಡೆ:ಇದರ ಗಡ್ಡೆಗಳನ್ನು ೬ ವರ್ಷಗಳ ನಂತರ ಹೊರ ತೆಗೆಯಬೇಕು. ಈ ಗಡ್ಡೆಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ನೆರಳಲ್ಲಿ ಒಣಗಿಸಿಡಬೇಕು. ಈ ರೀತಿ ಸರಿಯಾಗಿ ಒಣಗಿಸಿದ ಗಡ್ಡೆಯನ್ನು ೨ ವರ್ಷಗಳ ಕಾಲ ಶೇಖರಿಸಿಡ ಬಹುದಾಗಿದೆ. ಆರು ವರ್ಷಗಳ ಬಳಿಕ ಅದರಿಂದ ಪಡೆಯ ಬಹುದಾದ ಗಡ್ಡೆಯ ಪ್ರಮಾಣ ಸುಮಾರು ೧.೨೨ ಟನ್‌ಗಳಷ್ಟಾಗಬಹುದು.

ಅಗ್ನಿಶಿಖಾದ ಉಪಯೋಗ[ಬದಲಾಯಿಸಿ]

  • ಈ ಸಸ್ಯದ ಬೇರು ಯಾ ಗಡ್ಡೆಯನ್ನು ವಿಷಜಂತುಗಳು ಕಡಿದಾಗ ಲೇಪನಕ್ಕಾಗಿ ಬಳಸುವುದು ವಾಡಿಕೆ.[೫]
  • ಇದನ್ನು ವಿಷಕೀಟ,ಚೇಳು,ಹಾವು ಇತ್ಯಾದಿಗಳು ಕಡಿದಾಗ ಲೇಪನಕ್ಕಾಗಿ ಬಳಸುತ್ತಾರೆ.
  • ಶುದ್ಧಗೊಳಿಸಿದ ನಿಗದಿಪಡಿಸಿದ ಗಡ್ಡೆಯ ಸೇವನೆಯಿಂದ ನಾಗರಹಾವಿನ ವಿಷ ಇಳಿಮುಖವಾಗುವುದು.

ಚಿತ್ರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Gloriya supreba". www.ars-grin.gov. Archived from the original on 2015-09-24. Retrieved 2013-11-22.
  2. ೨.೦ ೨.೧ "Gloriosa superba- Gloriosa lily". flowersofindia.net. Retrieved 2013-11.22. {{cite web}}: Check date values in: |accessdate= (help)
  3. ೩.೦ ೩.೧ ಔಷಧೀಯ ಬೆಳೆಗಳು (೨೦೦೩ ed.). ಬೆಂಗಳೂರು: ಶ್ರೀಲಕ್ಷ್ಮಿ ಪಬ್ಲಿಕೇಶನ್ಸ್.
  4. "ವಿಷಕನ್ನಿಕೆ! ...... ಇವಳು ಅಗ್ನಿಶಿಖೆ". minchublog.blogspot.in. Retrieved 2013-11-22.
  5. "Gloriosa superba (flame lily)". kew.org. Archived from the original on 2013-06-06. Retrieved 2013-11-22.