ವಿಷಯಕ್ಕೆ ಹೋಗು

ಡಾಂಗಿ (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾಂಗಿ
ತಳಿಯ ಹೆಸರುಡಾಂಗಿ
ಮೂಲನಾಸಿಕ್, ಅಹಮದ್‌ನಗರ - ಮಹಾರಾಷ್ಟ್ರ
ವಿಭಾಗಕೆಲಸಗಾರ ತಳಿ. ಸಾಧಾರಣದಿಂದ ದೊಡ್ಡ ಗಾತ್ರ
ಬಣ್ಣಬಿಳಿ ಬಣ್ಣದಲ್ಲಿ ಕಪ್ಪು / ಕೆಂಪು ಚುಕ್ಕೆಗಳು
ಮುಖಡೊಡ್ಡ ಮೂತಿ
ಕೊಂಬುಸಣ್ಣ ಹಾಗೂ ದಪ್ಪ

ಡಾಂಗಿಗಳಿಗೆ ಆ ಹೆಸರು ಬಂದಿದ್ದು ಅವುಗಳ ತವರೂರು ಮುಂಬಯಿ ಹತ್ತಿರದ 'ಡಾಂಗ್ಸ್ ' ಎಂಬ ಗುಡ್ಡಗಾಡು ಪ್ರದೇಶದಿಂದ. ಇಲ್ಲಿಯ ಅತೀ ಮಳೆಯ ಕಾರಣ, ಕೃಷಿ ಇಲ್ಲಿ ಆರ್ಥಿಕವಾಗಿ ಅನುಕೂಲಕರವಾಗಿಲ್ಲ. ಆದರೆ ಡಾಂಗಿಗಳ ಕಷ್ಟಸಹಿಷ್ಣು ದೇಹಧಾರ್ಡ್ಯತೆ, ಅತೀ ಮಳೆಗೂ ಜಗ್ಗದೇ ದುಡಿಯಬಲ್ಲ ಸಾಮರ್ಥ್ಯ ಇರುತ್ತದೆ. ಡಾಂಗಿಗಳು ಹೈನುಗಾರಿಕ ತಳಿಗಳಲ್ಲ. ಇದು ಕೆಲಸಗಾರ ತಳಿ.

ಡಾಂಗಿಗಳು ಸಾಮಾನ್ಯವಾಗಿ ನಸುಗೆಂಪು, ಕಪ್ಪು ಇಲ್ಲವೇ ಕೃಷ್ಣವರ್ಣದವು. ಬೆನ್ನ ಮೇಲೆ ಇಡೀ ಆಕಾರಕ್ಕೆ ಒಂದು ಗಂಭೀರತೆ ತರಬಲ್ಲಂತ ಡುಬ್ಬ. ಮಧ್ಯಮ ಗಾತ್ರದ ಕುಳ್ಳ ತಳಿ. ಚಿಕ್ಕ ತಲೆ, ಉಬ್ಬಿದ ಹಣೆ, ಕೊಂಬುಗಳು ಹೀಗೆ ಅಂತ ಏನಿಲ್ಲದಿದ್ದರೂ ಸಾಮಾನ್ಯವಾಗಿ ಸಣ್ಣ ದಪ್ಪನೆಯದು. ಕಿವಿಗಳಂತೂ ತೀರ ಚಿಕ್ಕದು. ಇದರ ಹೊಳೆವ ದಪ್ಪ ಚರ್ಮ ಒಂದು ರೀತಿಯ ಜಿಡ್ಡನ್ನು ಸೃಜಿಸಿ ಮಳೆಯ ಹೊಡೆತದಿಂದ ರಕ್ಷಿಸುವುದು ಡಾಂಗಿಯ ವೈಶಿಷ್ಟ್ಯ. ಇವುಗಳು ದಿನಕ್ಕೆ ಸರಾಸರಿ ೨೫ರಿಂದ ೩೦ ಕಿ.ಮಿ. ಕ್ರಮಿಸಬಲ್ಲವು. ಡಾಂಗಿಗಳನ್ನು ಕಟ್ಟಿ ಸಾಕುವ ಕ್ರಮ ಕಡಿಮೆ. ಆಹಾರದ ಅವಶ್ಯಕತೆಯೂ ತುಲನಾತ್ಮಕವಾಗಿ ಕಡಿಮೆಯೆ. ಜಡಿಮಳೆಯಲ್ಲಿ ಭತ್ತದ ಗದ್ದೆಯಲ್ಲಿ ಇವುಗಳ ಉಳುಮೆ, ಗುಡ್ಡಗಾಡುಗಳ ಏರು ಹಾದಿ ಇವುಗಳ ಶ್ರಮರಹಿತ ಓಡಾಟದಿಂದ ಆ ಪ್ರದೇಶದ ಜನರಿಗೆ ಅನುಕೂಲಕರವಾಗಿವೆ.

ಚಿತ್ರಗಳು

[ಬದಲಾಯಿಸಿ]

ಆಧಾರ/ಆಕರ

[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.

ಬಾಹ್ಯ ಕೊಂಡಿಗಳು

[ಬದಲಾಯಿಸಿ]