ಕಾಕತೀಯ
ಕಾಕತೀಯ ಸಾಮ್ರಾಜ್ಯ | |||||
కాకతీయ సామ్రాజ్యము | |||||
ಸಮ್ರಾಜ್ಯ | |||||
| |||||
ರಾಜಧಾನಿ | ಓರುಗಲ್ಲು(ವಾರಂಗಳ್) | ||||
ಭಾಷೆಗಳು | ತೆಲುಗು | ||||
ಧರ್ಮ | ಹಿಂದು | ||||
ಸರ್ಕಾರ | ರಾಜಪ್ರಭುತ್ವ | ||||
ಇತಿಹಾಸ | |||||
- | ಸ್ಥಾಪಿತ | ೧೦೮೩ | |||
- | ಸ್ಥಾಪನೆ ರದ್ದತಿ | ೧೩೨೩ | |||
Warning: Value specified for "continent" does not comply |
ಈ ಕಾಕತೀಯ ಯಾದವ ವಂಶವು ಭಾರತೀಯ ಒಂದು ರಾಜ ಸಂತತಿಯಾಗಿದ್ದು, ಭಾರತದಲ್ಲಿರುವ ಆಂಧ್ರ ಪ್ರದೇಶದ ಭಾಗಗಳನ್ನು ಆಗ ಈ ರಾಜವಂಶವು ತನ್ನ ಆಳ್ವಿಕೆಯ ಸಂಸ್ಥಾನದ ಭಾಗ ಮಾಡಿಕೊಂಡಿತ್ತು. ಇದು ಕ್ರಿ.ಶ. 1083 ದಿಂದ ಕ್ರಿ.ಶ. 1323 ವರೆಗೆ ಈ ವಂಶಜರ ಆಡಳಿತಕ್ಕೊಳಪಟ್ಟಿತ್ತು. ಆಗ ಒರುಗಲ್ಲು (ಈಗಿನ ವಾರಂಗಲ್) ಆ ರಾಜ್ಯದ ರಾಜಧಾನಿಯಾಗಿತ್ತು. ಒರುಗಲ್ಲುವನ್ನು 'ಏಕ ಶಿಲಾ ನಗರಮ್' ಎಂದು ಕರೆಯಲಾಗುತ್ತದೆ. ಯಾದವ ಶೈವ ಸಂಪ್ರದಾಯದ ಹಿಂದೂ ಧರ್ಮೀಯರ ಒಡೆತನದ ಕಳೆದ ಶತಮಾನದಲ್ಲಿದ್ದ ವೈಭವದ ತೆಲುಗು ರಾಜ್ಯಗಳಲ್ಲಿ ಇದೂ ಒಂದಾಗಿತ್ತು. ಕಾಕತಿ ಗ್ರಾಮ ಮತ್ತು ಈ ಗ್ರಾಮದ ದೇವತೆ ಕಾಕತೆಮ್ಮ-ಇವು ಕಾಕತೀಯ ಪದದ ಮೂಲವನ್ನು ಸೂಚಿಸುತ್ತವೆ.
ಆರಂಭಿಕ ಇತಿಹಾಸ
[ಬದಲಾಯಿಸಿ]ಗುಂಡಯಾ (ಕ್ರಿ.ಶ. 950) ಎಂಬಾತನು ಐತಿಹಾಸಿಕ ಕಾಕತೀಯರಲ್ಲಿ ಪ್ರಥಮ ವ್ಯಕ್ತಿಯಾಗಿದ್ದಾನೆ. ರಾಷ್ಟ್ರಕೂಟರ ಸೇವೆಯಲ್ಲಿ ಆಳರಸ ಎರಡನೇ ಕೃಷ್ಣಾ ನೊಂದಿಗೆ ಜೊತೆಯಾಗಿ ಪೂರ್ವದ ಚಾಲುಕ್ಯರೊಂದಿಗೆ ಹೋರಾಡುವಾಗ ಆತ ತನ್ನ ಪ್ರಾಣ ತ್ಯಾಗ ಮಾಡಿದ್ದ. ಕೃತಜ್ಞನಾದ ಎರಡನೇ ಕೃಷ್ಣಾನು ಗುಂಡಯಾನ ಪುತ್ರ ಈರಿಯಾನನ್ನು ವಾರಂಗಲ್ ಸಮೀಪದ ಕುರ್ರವಾಡಿ ರಾಜ್ಯಕ್ಕೆ ಒಡೆಯನಾಗಿ ನೇಮಿಸಿದ. ಪೂರ್ವದಲ್ಲಿರುವ ಚಾಲುಕ್ಯರ ಮುಡಿಗೊಂಡಾ ಗಡಿ ಭಾಗದಲ್ಲಿನ ರಾಷ್ಟ್ರಕೂಟರ ಸಾಮ್ರಾಜ್ಯದ ಆಡಳಿತ ವಲಯದ ಮೇಲೆ ಒಂದು ಕಣ್ಣಿಡುವ ಸಲುವಾಗಿ ಈ ರಾಜ್ಯವನ್ನು ಸೃಷ್ಟಿಸಲಾಗಿತ್ತು.[8] ಈರಿಯಾ ಕಾಕತೀಪುರವನ್ನು ತನ್ನ ರಾಜಧಾನಿಯನ್ನಾಗಿಸಿದ. ಈರಿಯಾನ ಮೊಮ್ಮಗ ಕಾಕರ್ತ್ಯಾ ಗುಂಡ್ಯಾನಾ ಎಂಬಾತನು ತನ್ನ ಒಡೆಯ ಮೂರನೇ ಕೃಷ್ಣಾ ನ ಪರವಾಗಿ ದನರ್ನವಾಗೆ ಸಹಾಯ ಮಾಡಿ ಆತನ ಸಹೋದರ ಎರಡನೇ ಅಮ್ಮಾ ನನ್ನು ಹಿಂದೆ ಸರಿಸಿ ವೆಂಗಿ ಸಂಸ್ಥಾನದ ಗದ್ದುಗೆ ಏರಲು ನೆರವಾದ. ಇದರ ಪರಿಣಾಮವಾಗಿ ಆತನಿಗೆ ನಾಟವಾಡಿಯನ್ನು ಸಹಾಯದ ಸಂಕೇತವಾಗಿ ದಾನ ನೀಡಲಾಯಿತು. ಗುಂಡ್ಯಾನಾನ ಪುತ್ರ ಮತ್ತು ಉತ್ತರಾಧಿಕಾರಿ ಮೊದಲನೇ ಬೆತರಾಜಾ, ಚಾಲುಕ್ಯ-ಚೋಳರ ಕಲಹದಿಂದ ಲಾಭ ಪಡೆದುಕೊಂಡ. ಅದರಿಂದ ತನ್ನದೇ ಆದ ಸಣ್ಣದೊಂದು ಆಶ್ರಿತ ಸಂಸ್ಥಾನ ಸ್ಥಾಪಿಸಿದ. ಆತನ ಪುತ್ರ ಮತ್ತು ಉತ್ತರಾಧಿಕಾರಿ ಮೊದಲನೇ ಪ್ರೊಲಾ ಎಂಬಾತನು ಮೊದಲನೇ ಸೋಮೇಶ್ವರ ಎಂಬಾತನಿಂದ ಹನುಮಕೊಂಡಾವನ್ನು ಅನುದಾನವನ್ನಾಗಿ ಪಡೆದುಕೊಂಡ.ಪ್ರೊಲಾನ ಪುತ್ರ ಮತ್ತು ಉತ್ತರಾಧಿಕಾರಿ ಎರಡನೇ ಬೆತಾ ಇದನ್ನು ಕ್ರಿ.ಶ. 1076 ಮತ್ತು ಕ್ರಿ.ಶ. 1108 ಸುಮಾರಿಗೆ ಆಳ್ವಿಕೆ ಮಾಡಿದ. ಆತನ ಸಮಯದಲ್ಲಿ ಒರುಗಲ್ಲು ಕಾಕತೀಯರ ರಾಜಧಾನಿಯಾಗಿತ್ತು. ಎರಡನೇ ಬೆತಾ ಎಂಬ ಆಳರಸನ ಕಿರಿಯ ಸಹೋದರ ಎರಡನೇ ಪ್ರೊಲಾ, ತನ್ನ ಆಳ್ವಿಕೆ ಕಾಲದಲ್ಲೇ ಕಾಕತೀಯ ಆಳರಸರಲ್ಲಿಯೇ ಹೆಚ್ಚು ಪ್ರಸಿದ್ದನಾಗಿದ್ದ. ಯಾವಾಗ ಚಾಲುಕ್ಯರ ಅಧಿಕಾರವು ತನ್ನ ಪ್ರಭಾವ ಕಳೆದುಕೊಂಡು ಗೊಂದಲ ಸ್ಥಿತಿಗೊಳಗಾಗಲು ಆರಂಭಿಸಿತೋ ಆಗ ಎರಡನೇ ಪ್ರೊಲಾ ಇದರ ಲಾಭ ಪಡೆದುಕೊಂಡು ತನ್ನ ಸಂಸ್ಥಾನವನ್ನು ಸ್ವತಂತ್ರ ಎಂದು ಘೋಷಿಸಿದ. ಅದಲ್ಲದೇ ಆತ ಮಂತ್ರಕೂಟದ (ಕೃಷ್ಣಾ ಜಿಲ್ಲೆಯ ನುಜಿವಿಡು ತಾಲುಕು) ಆಡಳಿತಗಾರ ಗುಂಡಾನನ್ನು ಸೋಲಿಸಿ ಕೊಂದು ಬಿಟ್ಟ. ನಂತರ ಅದನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡು ವೆಲಾನತಿ ರಾಜ್ಯವನ್ನು ವಶಪಡಿಸಿಕೊಳ್ಳಲು ಆತ ಪ್ರಯತ್ನಪಟ್ಟಾಗ ಚಾಂಡೊಲು ವಿನ ವೆಲಾನತಿ ತೆಲುಗು ಚೋಡಾಗಳ ರಾಜನಾಗಿದ್ದ ರಾಜೇಂದ್ರ ಚೋಡಾನ ಕೈಯಲ್ಲಿ ಆತ ಹತನಾದ. ಇದು ಆಗ ತನ್ನದೇ ಆದ ಸ್ವಂತ ಹಕ್ಕಿನ ಬಲದ ಮೇಲೆ ಕಾಕತೀಯ ಸಂಸ್ಥಾನವನ್ನು ರಚಿಸುವ ಕಾಲವಾಗಿ ಪರಿಣಮಿಸಿತು. ಪ್ರೋಲನ ಮಗ ಇಮ್ಮಡಿ ಭೇತ (1075-1090) 6ನೆಯ ವಿಕ್ರಮಾದಿತ್ಯನಿಗೆ (1076-1126) ವಿರೋಧವಾಗಿ ವರ್ತಿಸಿ ಆತನ ಕ್ರೋಧಕ್ಕೆ ಈಡಾದರೂ ಅನಂತರ ಕ್ಷಮೆ ಕೋರಿ ತನ್ನ ಪಿತ್ರಾರ್ಜಿತ ರಾಜ್ಯವನ್ನು ಮತ್ತೆ ಸಂಪಾದಿಸಿಕೊಂಡ. ವಿಕ್ರಮಾದಿತ್ಯನ ಪರವಾಗಿ ಇವನು ಮಾಲ್ವದ ಪರಮಾರ ಉದಯಾದಿತ್ಯ, 1ನೆಯ ಕುಲೋತ್ತುಂಗ ಜೋಳ-ಇವರ ಮೇಲೆ ಜಯಗಳಿಸಿದ. ಸುಪ್ರೀತನಾದ ವಿಕ್ರಮಾದಿತ್ಯ ತ್ರಿಭುವನ ಮಲ್ಲ ಎಂಬ ಬಿರುದನ್ನೂ ಸಬ್ಬಿಸಾಯಿರ 1000 ಪ್ರಾಂತ್ಯವನ್ನೂ ಇವನಿಗೆ ಕೊಟ್ಟಂತೆ ಕಾಣುತ್ತದೆ.
ಇಮ್ಮಡಿ ಪ್ರೋಲ ಆಳ್ವಿಕೆ
[ಬದಲಾಯಿಸಿ]ಇಮ್ಮಡಿ ಪ್ರೋಲ ಇವನ ಅನಂತರ ಅಧಿಕಾರಕ್ಕೆ ಬಂದ (1115). ಈತ ಪರಾಕ್ರಮಿ, ಮಹಾತ್ವಾಕಾಂಕ್ಷಿ. ಆಗ 6ನೆಯ ವಿಕ್ರಮಾದಿತ್ಯನ ರಾಜ್ಯಭಾರ ಕೊನೆಯ ಹಂತ ಮುಟ್ಟಿತ್ತು. 1126ರಲ್ಲಿ ವಿಕ್ರಮಾದಿತ್ಯ ಮರಣ ಹೊಂದಿದ. ಅನಂತರ ಬಂದ ಚಾಳುಕ್ಯ ಅರಸರು ಸಮರ್ಥರಾಗಿರಲಿಲ್ಲ. ಈ ಸನ್ನಿವೇಶ ಪ್ರೋಲನ ರಾಜ್ಯ ವಿಸ್ತರಣಾಕಾಂಕ್ಷೆಯನ್ನು ಸಫಲಗೊಳಿಸಿತು. ಈತ ಕೊಂಡಪಲ್ಲಿಯ ಗೋವಿಂದರಾಜ ಮತ್ತು ಮಂತ್ರಕೂಟದ ಗುಂಡರನ್ನು ಸೋಲಿಸಿ, ಆ ಪ್ರದೇಶಗಳನ್ನು ವಶಪಡಿಸಿಕೊಂಡುದಲ್ಲದೆ ಚಾಳುಕ್ಯ ಚಕ್ರವರ್ತಿ ಮುಮ್ಮಡಿ ತೈಲನನ್ನು ಸೆರೆಹಿಡಿದು. ಅನಂತರ ದಯೆತೋರಿ ವಿಮುಕ್ತಿಗೊಳಿಸಿದನಲ್ಲದೆ ಚಾಳುಕ್ಯರ ಮಾಂಡಲಿಕತ್ವವನ್ನು ತ್ಯಜಿಸಿ ಸ್ವತಂತ್ರನಾದ. ಆರಂಭದಲ್ಲಿ ತೆಲಂಗಾಣದ ವಾರಂಗಲ್ ಮತ್ತು ಕರೀಂನಗರ ಜಿಲ್ಲೆಗಳ ಪ್ರದೇಶಕ್ಕೆ ಸೀಮಿತವಾಗಿದ್ದ ಕಾಕತೀಯ ಆಧಿಪತ್ಯ ಅನಂತರ ಗೋದಾವರೀ ಕೃಷ್ಣಾ ನದಿಗಳ ನಡುವಣ ಭೂಭಾಗವನ್ನೂ ವ್ಯಾಪಿಸಿತು. ಪ್ರೋಲ ಸು. 1158ರ ವರೆಗೆ ಜೀವಿಸಿದ್ದ.[೧]
ರುದ್ರ ದೇವ
[ಬದಲಾಯಿಸಿ]ಪ್ರೊಲಾ II ನಂತರ ರುದ್ರದೇವ ಆಡಳಿತ ವಹಿಸಿಕೊಂಡ.(1158–1195). ರುದ್ರದೇವ ಅಥವಾ ಈತನನ್ನು ಪ್ರೊಲಾ II ಸಂಸ್ಥಾನಿಕನ ಹಿರಿಯ ಪುತ್ರ ಪ್ರತಾಪರುದ್ರ I ಎಂದೂ ಕರೆಯಲಾಯಿತು.ಸುಮಾರು 1162 CE ರಲ್ಲಿ ಆತ ಹಲವಾರು ವೈರಿಗಳನ್ನು ಸೆದೆ ಬಡಿದು ತನ್ನ ಸಣ್ಣ ಸಂಸ್ಥಾನವನ್ನು ವಿಸ್ತೃತ ರಾಜ್ಯವನ್ನಾಗಿಸಿದ. ರುದ್ರದೇವ ತನ್ನ ಮುಂದಿನ ದಿಗ್ವಿಜಯಗಳಿಗಾಗಿ ಕರಾವಳಿ ಪ್ರದೇಶದ ಮೇಲೆ ಹೆಚ್ಚು ಕೇಂದ್ರೀಕೃತನಾಗಿದ್ದ. ತನ್ನ ರಾಜ್ಯವನ್ನು ಸಮಷ್ಟಿಗೊಳಿಸಿದ ಆತ ಪೂರ್ವ ಗೋದಾವರಿಯ ನದಿ ಮುಖಜ ಪ್ರದೇಶಗಳೆಡೆಗೂ ವಿಸ್ತರಿಸಿದ್ದ. ಹನುಮಕೊಂಡದಲ್ಲಿ 1163 AD ನಲ್ಲಿ ಥೌಸಂಡ್ ಪಿಲ್ಲರ್ ಟೆಂಪಲ್ ಅಂದರೆ ಸಾವಿರ ಕಂಬಗಳ ದೇವಾಲಯವನ್ನು ರುದ್ರದೇವ ನಿರ್ಮಿಸಿದ. ಅದೇ ವೇಳೆಗೆ 1176-82 CE ರಲ್ಲಿ ಪಲನಾಡು ಕಾಳಗ ನಡೆಯಿತು. ಕಾಳಗ ನಿರತ ನಲಗಾಮಾ ಪಂಗಡಕ್ಕೆ ತನ್ನ ಪರವಾಗಿ ರುದ್ರದೇವ ಸೈನ್ಯದ ಸಹಾಯ ಒದಗಿಸಿದ. ಈ ಕಾಳಗದಲ್ಲಿ ವೆಲನಾಡುವಿನ ಸೈನ್ಯ ಬಲವು ದುರ್ಬಲಗೊಂಡಿತ್ತು. ಈ ಸಂದರ್ಭವನ್ನು ಬಳಸಿಕೊಂಡ ರುದ್ರದೇವನು ತನ್ನ ಸೈನ್ಯದೊಂದಿಗೆ ಆಂಧ್ರ ಕರಾವಳಿಯೆಡೆಗೆ ದಂಡೆತ್ತಿ ಹೋಗಿ ಶ್ರೀಶೈಲಮ್ ವರೆಗೂ ಗೆದ್ದುಕೊಂಡನಲ್ಲದೇ ದಕ್ಷಿಣದಲ್ಲಿ ತ್ರಿಪುರಾಂತಕಮ್ ನ್ನು ವಶಪಡಿಸಿಕೊಂಡನು. ತನ್ನ ಆಡಳಿತದ ಅಂತ್ಯಾವಧಿಯಲ್ಲಿ (1195 CE)ಆತ ದೇವಗಿರಿಯ ಸೆಯುನಾರೊಂದಿಗೆ (ಯಾದವರು)ಕದನಕ್ಕಿಳಿದಿದ್ದ. ರುದ್ರದೇವ ಸೋಲನ್ನುಂಡನಲ್ಲದೇ ಜೈತ್ರಪಾಲ್ I ನ ಕೈಯಿಂದ ಹತನಾದ. ರುದ್ರದೇವ ತನ್ನ ಆಳ್ವಿಕೆಯ ಕೊನೆಯ ಭಾಗದಲ್ಲಿ ಅನುಮಕೊಂಡ ರಾಜಧಾನಿಯ ಪಕ್ಕದಲ್ಲಿ ಓರುಗಲ್ಲು (ಈಗಿನ ವಾರಂಗಲ್) ಎಂಬ ಹೊಸ ನಗರವನ್ನು ಕಟ್ಟಿಸಿದ. ಇದು ಮುಂದೆ ಇವರ ಆಳ್ವಿಕೆಯಲ್ಲಿ ಸಮಸ್ತ ಆಂಧ್ರಪ್ರದೇಶದ ರಾಜಧಾನಿಯಾಯಿತು. ಆತನ ಮರಣಾನಂತರ ಆತನ ಸಂಬಂಧಿ ಗಣಪತಿಯನ್ನು ಯಾದವರು ಸೆರೆಮನೆಯಲ್ಲಿಟ್ಟರು. ಆದರೆ ಆತನ ಕಿರಿಯ ಸಹೋದರ ಮಹಾದೇವ ನಂತರ ರಾಜ್ಯಭಾರ ವಹಿಸಿಕೊಂಡನಾದರೂ ಅತ್ಯಂತ ಕಡಿಮೆ ಕಾಲಾವಧಿ (1196-1198 CE)ವರೆಗೆ ಮಾತ್ರ ರಾಜ್ಯಭಾರ ಮಾಡಿದ. ನಂತರ ಆತ ದೇವಗಿರಿಯ ಸೆಯುನಾ ಯಾದವರ ಮೇಲೆ ದಂಡೆತ್ತಿ ಹೋಗಿ ರುದ್ರನ ಸಾವಿನ ಪ್ರತೀಕಾರ ಮತ್ತು ತನ್ನ ಪುತ್ರ ಗಣಪತಿಯನ್ನು ಬಿಡಿಸಿಕೊಳ್ಳಲು ಆಕ್ರಮಣ ನಡೆಸಿದ. ಆದರೆ ಕಾಳಗದಲ್ಲಿ ಆತ ತನ್ನ ಪ್ರಾಣ ಕಳೆದುಕೊಂಡ.
ಮಹಾದೇವನ ಮರಣದ ನಂತರ ರಾಜ್ಯದಲ್ಲಿ ಅಸ್ತವ್ಯಸ್ತತೆ ಉಂಟಾಯಿತು. ಕಾಕತೀಯ ಆಳರಸನ ಸೈನ್ಯಾಧಿಪತಿ ರೆಚೆರ್ಲಾ ರುದ್ರ, ರಾಜ್ಯ ಹರಿದು ಹೋಗುವುದನ್ನು ತಪ್ಪಿಸಿ ಉಳಿಸಿದ. ಕೆಲವು ರಾಜಕೀಯ ಕಾರಣಗಳಿಗಾಗಿ ಜೈತ್ರಪಾಲನು ಗಣಪತಿಯನ್ನು ಸೆರೆಯಿಂದ ಬಿಡುಗಡೆ ಮಾಡಿದ.ದಕ್ಷಿಣದಲ್ಲಿನ ಆಕ್ರಮಣಕಾರಿ ಹೊಯ್ಸಳರ ವಿರುದ್ದ ತನ್ನನ್ನು ತಾನು ಸುತ್ತಲಿನವರ ಬೆಂಬಲಕ್ಕಾಗಿ ಆತ ಈತನನ್ನು ಬಿಡುಗಡೆಗೊಳಿಸಿದ. ಗಣಪತಿ ದೇವನ ಆಳ್ವಿಕೆಯು 2000 ವರ್ಷದ ವರೆಗೆ ನಡೆಯಿತು. ಈ ಘಟನೆಯು ಇತಿಹಾಸದಲ್ಲಿನ ಹೊಸ ಯುಗಾರಂಭದ ಸ್ವರಣೀಯ ಸಂದರ್ಭವೆನಿಸಿದೆ. ಗಣಪತಿಯ ಈ ಸುದೀರ್ಘ ಆಳ್ವಿಕೆಯಿಂದಾಗಿ ಇಡೀ ತೆಲುಗು ಮಾತನಾಡುವ ಪ್ರದೇಶಗಳನ್ನು ಒಂದೆಡೆ ಸೇರಿಸುವ ಕಾರ್ಯವೂ ಕೆಲಕಾಲ ನಡೆಯಿತು. ಕರೀಮನಗರ ಮತ್ತು ಉತ್ತರದಲ್ಲಿ ಅನಕಾಪಲ್ಲಿಯಿಂದ ಹಿಡಿದು ದಕ್ಷಿಣದ ಒಂಗೊಲೆ ವರೆಗೂ ಆತನ ಪ್ರಭಾವವಿತ್ತು. ಗಣಪತಿ ದೇವನು 1269 CE ರ ವರೆಗೆ ಬದುಕಿದ್ದನಲ್ಲದೇ ಅಧಿಕಾರವನ್ನು ಪುತ್ರಿ ರುದ್ರಮಾದೇವಿಗೆ 1262 A.D. ರಲ್ಲಿ ವಹಿಸಿಕೊಟ್ಟನು.ಹೀಗೆ ಆತ ತಾನು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಿದ್ದ.
ಗಣಪತಿದೇವನು ಕಾಕತೀಯರಲ್ಲಿಯೇ ಅತ್ಯಂತ ದೊಡ್ಡ ಅರಸನೆಸಿಸಿದ. ಅಲ್ಲದೇ ಸಾತವಾಹನರ ನಂತರ ಇಡೀ ತೆಲುಗು ಮಾತನಾಡುವ ಪ್ರದೇಶಗಳನ್ನು ಒಂದೆಡೆ ತರುವಲ್ಲಿ ಶ್ರಮಿಸಿದವರಲ್ಲಿ ಮೊದಲಿಗನಾಗಿದ್ದಾನೆ. ಆತನು ತೆಲುಗು ಚೋಳರ ಆಡಳಿತಕ್ಕೆ 1216 ರಲ್ಲಿ ಕೊನೆಹಾಡಿದನಲ್ಲದೇ ಅವರು ತನ್ನ ಪ್ರಭುತ್ವವವನ್ನು ಒಪ್ಪಿಕೊಳ್ಳುವಂತೆಯೂ ಮಾಡಿದ. ಆತ ತನ್ನ ವಿಸ್ತೃತ ಸಾಮ್ರಾಜ್ಯದಲ್ಲಿ ತನ್ನ ಪ್ರಭುತ್ವ ಮೆರೆದನಲ್ಲದೇ ವ್ಯಾಪಾರಕ್ಕೆ ಪ್ರೊತ್ಸಾಹ ನೀಡಿದ. ಇದೇ ವೇಳೆಯಲ್ಲಿ ಗೊಲ್ಕೊಂಡಾ ಕೋಟೆಯನ್ನು ನಿರ್ಮಾಣ ಮಾಡಲಾಯಿತು. ಅದಲ್ಲದೇ ಕಾಕತೀಯ ಶೈಲಿಯ ಹಲವು ಸುಂದರ ದೇವಾಲಯಗಳನ್ನು ನಿರ್ಮಿಸಲಾಯಿತು.ಉದಾಹರಣೆಗೆ ವಾರಂಗಲ್ ನ ಹೊರವಲಯದ ಸಣ್ಣ ಗ್ರಾಮ ಪಾಲಮ್ ಪೇಟೆ ಯಲ್ಲಿನ ರಾಮಪ್ಪಾ ದೇವಾಲಯ ಪ್ರಖ್ಯಾತವಾಗಿದೆ.
ರುದ್ರಮ ದೇವಿ
[ಬದಲಾಯಿಸಿ]ಈ ಸಂಸ್ಥಾನದ ಅತ್ಯಂತ ಪ್ರಮುಖ ರಾಣಿ, ರಾಣಿ ರುದ್ರಮ ದೇವಿ 1262-1289 CE ಆಳ್ವಿಕೆ ನಡೆಸಿದ ಅವಳು ಭಾರತದ ಹಲವು ರಾಣಿಯರ ಇತಿಹಾಸದ ಪಟ್ಟಿಯಲ್ಲಿದ್ದಾಳೆ. ಆಕೆ ಗಣಪತಿದೇವನ ಪ್ರೀತಿಯ ಪುತ್ರಿ ರುದ್ರಾಂಬಾ ಆಗಿ ಜನಿಸಿದಳು.ಆತನಿಗೆ ಪುತ್ರ ಸಂತಾನವಿರಲಿಲ್ಲ. ಆಕೆಯನ್ನು ಪುತ್ರಸ್ವರೂಪಳಾಗಿ ಆಡಳಿತದ ಗದ್ದುಗೆಗೇರಿಸಲಾಯಿತು.ಹಿಂದಿನ ಕಾಲದ ಸಂಪ್ರದಾಯದಂತೆ ಪುತ್ರಿಕಾ ಸಮಾರಂಭದಲ್ಲಿ ಆಕೆಗೆ ಪುರುಷನ ಹೆಸರಿಟ್ಟು ಆಳ್ವಿಕೆಯ ರಾಣಿ ಎಂದು ನಾಮಕರಣ ಮಾಡಲಾಯಿತು. ನಂತರ ಪೂರ್ವ ಚಾಲುಕ್ಯರ ನಿದದಾವೊಲು ಯುವರಾಜ ವೀರಭದ್ರನೊಂದಿಗೆ ವಿವಾಹವಾಯಿತು. ಆರಂಭದಲ್ಲಿ ಆಕೆ ಕೆಲವು ಸೈನ್ಯಾಧಿಕಾರಿಗಳ ದಾರಿತಪ್ಪಿಸುವ ವಿಚಾರಗಳಿಂದ ಸಂಕಷ್ಟಕ್ಕೀಡಾದರೂ ನಂತರ ಆಕೆ ತಾನು ಮಹಿಳೆಯಾದರೂ ಹೊರಗಿನ ವೈರಿಗಳಿಗೆ ಮತ್ತು ಒಳಗಿನವರಿಗೆ ಸೂಕ್ತ ಉತ್ತರ ನೀಡಬಲ್ಲೆ ಎಂದು ಪರಾಕ್ರಮ ತೋರಿದಳು. ಸಮರ್ಥ ಯುದ್ದಗಾರ್ತಿ ಮತ್ತು ಆಡಳಿತಗಾರಳಾಗಿದ್ದ ರುದ್ರಾಂಬಾ ತನ್ನ ರಾಜ್ಯವನ್ನು ಚೋಳರು ಮತ್ತು ಯಾದವರಿಂದ ರಕ್ಷಿಸಿದಳಲ್ಲದೇ ಅವರಿಂದ ಗೌರವಕ್ಕೂ ಪಾತ್ರಳಾದಳು. ದಕ್ಷಿಣ ಭಾರತದ ಎಲ್ಲಾ ಕಾಲದ ಅತ್ಯಂತ ಪ್ರಭಾವೀ ಮಹಿಳಾ ಶಕ್ತಿಗಳಲ್ಲಿ ಆಕೆಯೂ ಓರ್ವಳಾಗಿದ್ದಾಳೆ.
ಪ್ರತಾಪರುದ್ರ
[ಬದಲಾಯಿಸಿ]ರುದ್ರಮಾದೇವಿಯು, ಬಂಡುಕೋರ ಕಾಯಸ್ಥದ ಮುಖ್ಯಸ್ಥನಾದ ಅಂಬಾದೇವ್ ವಿರುದ್ದ ಸೆಣೆಸುವಾಗ ಆಕೆ 1289 ರ ನವೆಂಬರ್ ನಲ್ಲಿ ಮೃತಪಟ್ಟಳು. ರುದ್ರಮಾಳ ಮರಣದ ನಂತರ ಆಕೆಯ ಮೊಮ್ಮಗ ಪ್ರತಾಪರುದ್ರನನ್ನು ಪುತ್ರನಾಗಿ ದತ್ತು ಪಡೆಯಲಾಗಿತ್ತು.ತಂದೆ ಗಣಪತಿದೇವನ ಸಲಹೆಯಂತೆ ಆತನನ್ನೇ ಉತ್ತಾರಾಧಿಕಾರಿಯನ್ನಾಗಿಸಿ 1290 ರ ಆರಂಭದಲ್ಲಿ ಆತನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಲಾಯಿತು.ರುದ್ರಪ್ರತಾಪನು ತನ್ನ ಆಡಳಿತದುದ್ದಕ್ಕೂ ಆಂತರಿಕ ಇಲ್ಲವೆ ಬಾಹ್ಯ ವೈರಿಗಳೊಂದಿಗೆ ಸೆಣಸಾಡುವುದೇ ಆತನ ಕಾರ್ಯಚಟುವಟಿಕೆಯಾಯಿತು. ಪ್ರತಾಪರುದ್ರನು ತನ್ನ ರಾಜ್ಯದ ಗಡಿಯನ್ನು ರಾಯಚೂರ್ ನ ವರೆಗೆ ವಿಸ್ತರಿಸಿದ.ಇದೇ ಸಂದರ್ಭದಲ್ಲಿ ಹಲವು ಆಡಳಿತಾತ್ಮಕ ಸುಧಾರಣೆಗಳನ್ನು ತಂದನಲ್ಲದೇ ಕೆಲವನ್ನು ವಿಜಯನಗರ ಸಾಮ್ರಾಜ್ಯದಲ್ಲೂ ಜಾರಿಗೊಳಿಸಲಾಗಿತ್ತು.
ಸಾಮಾಜಿಕ ಸ್ಥಾನ-ಮಾನ ಮತ್ತು ವೈವಾಹಿಕ ಸಂಬಂಧಗಳು
[ಬದಲಾಯಿಸಿ]ಗಣಪತಿದೇವನ ಆಡಳಿತಾವಧಿಯಲ್ಲಿ ಸಣ್ಣ ಆಂಧ್ರ ರಾಜ್ಯಗಳಾದ ಚಾಗಿ,ಪರಿಚೆಡಾಗಳು ಕೊಟಾ ವಂಶ ಮತ್ತು ವೆಲನತಿ ಚೋಡಾಸ್ ಇತ್ಯಾದಿ ಸಾಮಂತ ಅರಸು ಸಂಸ್ಥಾನಿಕವೆನಿಸಿದವುಗಳಲ್ಲಿ ಪ್ರಮುಖವೆನಿಸಿವೆ. ಗಣಪತಿ ದೇವನ ಕಾಲದಿಂದ ಪೂರ್ವದ ಚಾಲುಕ್ಯರು,ಚಾಗಿ,ಕೊಟಾ ವಂಶ ಮತ್ತು ಒರಿಸ್ಸಾದ ಭಾಂಜ್ ಸಂಸ್ಥಾನಿಕರೊಂದಿಗೆ ವೈವಾಹಿಕ ಸಂಬಂಧಗಳನ್ನು ಕಾಕತೀಯರು ಆರಂಭಿಸಿದರು.
ಗಣಪತಿ ದೇವನು ಕಾಕತೀಯ ಆನೆ ದಳದ ಮುಖ್ಯಸ್ಥ ಜಯಪ್ಪಾ ಸೇನಾನಿಯ ಇಬ್ಬರೂ ಸಹೋದರಿಯರಾದ ನರಮಾಂಬಾ ಮತ್ತು ಪೆರಮಾಂಬಾರನ್ನು ವಿವಾಹ ಮಾಡಿಕೊಂಡಿದ್ದನು. ಗಣಪತಿ ದೇವನ ಸಹೋದರಿ ಮೆಲಾಂಬಿಕಾ ಚಾಗಿ ಬುದ್ದರಾಜುವಿನ ಎರಡನೆಯ ಪುತ್ರನನ್ನು ವಿವಾಹವಾದಳು.ಆತ ನಟವಾಡಿ ಪ್ರದೇಶವನ್ನಾಳುತ್ತಿದ್ದ. ಗಣಪತಿದೇವನ ಮೊದಲ ಪುತ್ರಿ ರುದ್ರಾಮಾದೇವಿ,ಪೂರ್ವದ ಚಾಲುಕ್ಯ ರ ನಿದಾದವೊಲುವಿನ ಯುವರಾಜ ವೀರಭದ್ರನೊಂದಿಗೆ ವಿವಾಹ ಮಾಡಿಕೊಂಡಿದ್ದಳು.ಆತನ ಎರಡನೆಯ ಪುತ್ರಿ ಗಣಪಾಂಬಾಳು ಕೊಟಾ ಬೆತರಾಜಾನನ್ನು ವಿವಾಹವಾಗಿದ್ದಳು. ಕ್ಷತ್ರಿಯರೊಂದಿಗಿನ ಈ ವಿವಾಹದ ಸಂಬಂಧಗಳು ಅಂದರೆ ಚಾಗಿಗಳು,ಪೂರ್ವ ಚಾಲುಕ್ಯರು ಮತ್ತು ಕೊಟಾ ವಂಶದವರೊಂದಿಗಿನ ಈ ರಕ್ತಸಂಬಂಧಗಳು ಕಾಕತೀಯರಿಗೆ ಕ್ಷತ್ರೀಯ ಸ್ಥಾನಮಾನ ನೀಡಲು ಪ್ರಾರಂಭಿಸಿದವು.ಗುಂಟೂರ್ ಜಿಲ್ಲೆಯಲ್ಲಿ ದೊರಕಿದ ಹಲವು ಶಾಸನಗಳ ಮೂಲಕ ಇದಕ್ಕೆ ಪುರಾವೆಯೂ ದೊರಕಿದೆ. ಶಾಸನಪ್ರಕಾರ ರುದ್ರಮ್ಮಾ ದೇವಿಯ ಪತಿ ವೀರಭದ್ರನು ಪೂರ್ವದ ಚಾಲುಕ್ಯ ಕಾಶ್ಯಪ ಗೋತ್ರದ ಕುಟುಂಬದವನಾದ್ದರಿಂದ ನಂತರ ಕಾಕತೀಯ ಆಡಳಿತಗಾರರೂ ಕೂಡ ತಮ್ಮನ್ನು ಕಾಶ್ಯಪ ಗೋತ್ರದವರೆಂದು ಹೇಳಿಕೊಳ್ಳಲು ಆರಂಭಿಸಿದರೆಂದು ಶಾಸನಗಳಲ್ಲಿ ದಾಖಲಾಗಿದ್ದನ್ನು ಕಾಣಬಹುದು.
ಸಾಮ್ರಾಜ್ಯದ ಪತನ
[ಬದಲಾಯಿಸಿ]ದಕ್ಷಿಣ ಭಾರತದ (ಡೆಕ್ಕನ್)ಭಾಗಗಳು 1296 CE ನಲ್ಲಿ ದೆಹಲಿ ಸುಲ್ತಾನರ ಲೂಟಿಗೆ ಒಳಗಾಗಲಾರಂಭಿಸಿದವು.ಅಲ್ಲಾವುದ್ದೀನ್ ಖಿಲ್ಜಿ ಈತ ಸುಲ್ತಾನ ಜಲಾಲುದ್ದೀನ್ ನ ಅಳಿಯ ಮತ್ತು ಸೈನ್ಯಾಧಿಪತಿಯಾಗಿದ್ದ.ಈತ ದೇವಗಿರಿಯ (ಮಹಾರಾಷ್ಟ್ರ)ಮೇಲೆ ದಂಡೆತ್ತಿ ಬಂದು ಅಲ್ಲಿನ ಆಸ್ತಿಪಾಸ್ತಿಗಳನ್ನು ಲೂಟಿ ಮಾಡಿದ. ಖಿಲ್ಜಿ ನಂತರ ಸುಲ್ತಾನನನ್ನು ಕೊಂದು ಸುಲ್ತಾನ ಪ್ರಭುತ್ವವನ್ನು ತನ್ನ ವಶಕ್ಕೆ ತೆಗೆದುಕೊಂಡನು. ಕಾಕತೀಯರ ರಾಜ್ಯ ವೈಭವ ಮತ್ತು ಸಂಪತ್ತು ಖಿಲ್ಜಿಯನ್ನು ಆಕರ್ಷಿಸಿತ್ತು. ಮೊದಲ ಬಾರಿಗೆ ತೆಲುಗು ರಾಜ್ಯವನ್ನು ಸುಲ್ತಾನನ ಸೈನ್ಯವು 1303 CE ರಲ್ಲಿ ಮಲಿಕ್ ಫಕ್ರುದ್ದೀನ್ ನೇತೃತ್ವದಲ್ಲಿ ಆಕ್ರಮಣ ಮಾಡಿತು.ಈ ಕದನವು ವಿನಾಶಕಾರಿಯಾಗಿತ್ತು.ಕಾಕತೀಯರು ತಮ್ಮೆಲ್ಲ ಬಲದೊಂದಿಗೆ ಹೋರಾಡಿದರು.ಕರೀಮ್ ನಗರ ಜಿಲ್ಲೆಯ ಉಪ್ಪರಪಲ್ಲಿಯಲ್ಲಿ ಈ ಭೀಕರ ಕದನ ನಡೆಯಿತು. ಎರಡನೆಯ ಕದನವು 1309 CE ನಲ್ಲಿ ಮಲಿಕ್ ಕಾಫರ್ ನಿಂದ ನಡೆಯಿತು. ಆತ ಸಿರಿಪುರ್ ಮತ್ತು ಹನುಮಕೊಂಡ ಕೋಟೆಗಳನ್ನು ವಶಪಡಿಸಿಕೊಂಡ. ದೀರ್ಘಕಾಲದ ಹೋರಾಟದ ನಂತರ ವಾರಂಗಲ್ ಕೋಟೆಯನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಕೋಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಲಿಕ್ ಕಾಫರ್ ಕೊಲೆ ಮತ್ತು ನರಮೇಧಗಳಲ್ಲಿ ತೊಡಗಿದಾಗ ರಾಜ ಪ್ರತಾಪರುದ್ರನು ಬೃಹತ್ ಪ್ರಮಾಣದಲ್ಲಿ ಕಪ್ಪು ಕಾಣಿಕೆ ಕೊಡುವುದಾಗಿ ಹೇಳಿ ಈ ದುರಂತಕ್ಕೆ ತೆರೆ ಎಳೆದನು. ಪ್ರತಾಪರುದ್ರನು 1320 CE ನಲ್ಲಿ ದೆಹಲಿಯಲ್ಲಿನ ಆಡಳಿತದ ಬದಲಾವಣೆ ನಂತರ ತನ್ನ ಸ್ವಾತಂತ್ರ್ಯವನ್ನು ಘೋಷಿಸಿದ. ಖಿಲ್ಜಿ ಆಡಳಿತ ಅಂತ್ಯಗೊಂಡಿತು,ಘಿಯಾಸುದ್ದೀನ್ ತಘಲಕ್ ದೆಹಲಿಯ ಸಿಂಹಾಸನವನ್ನೇರಿದ. ತಘಲಕ್ ತನ್ನ ಪುತ್ರ ಉಲುಘ್ ಖಾನ್ ನನ್ನು, ಕಾಕತೀಯ ಉದ್ದಟ,ಅವಿಧೇಯ ರಾಜನನ್ನು ಸೋಲಿಸುವಂತೆ 1323 CE ರಲ್ಲಿ ಸೈನ್ಯದೊಂದಿಗೆ ಕಳಿಸಿಕೊಟ್ಟನು. ಉಲುಘ್ ಖಾನ್ ನ (ಮಹ್ಮದ ಬಿನ್ ತಘಲಕ್ ನ ದಾಳಿಯನ್ನು ಅಟ್ಟಲಾಯಿತು.ಆದರೆ ಆತ ಒಂದು ತಿಂಗಳ ನಂತರ ದೊಡ್ಡ ಸೈನ್ಯದೊಂದಿಗೆ ಮತ್ತೆ ದಾಳಿಗೆ ಮುಂದಾದ. ಸಿದ್ದತೆ ಇಲ್ಲದ ಮತ್ತು ಕದನದ ಅನುಭವಿರದ ವಾರಂಗಲ್ ಸೈನ್ಯವು ಅಂತಿಮವಾಗಿ ಸೋತಿತು.ರಾಜ ಪ್ರತಾಪರುದ್ರನನ್ನು ಖೈದಿಯನಾಗಿಸಿ ಬಂಧಿಸಲಾಯಿತು. ಆತನನ್ನು ದೆಹಲಿಗೆ ಕರೆದುಕೊಂಡು ಹೋಗುವಾಗ ಆತ ನರ್ಮದಾ ನದಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡನು.
ಕಾಕತೀಯ ಪ್ರಭುತ್ವದ ಪತನವು ಸಣ್ಣ ಸಣ್ಣ ಪಾಳೆಯಗಾರರಿಂದಾಗಿ ಕೆಲಕಾಲ ಗೊಂದಲ ಮತು ಅರಾಜಕತೆಗೆ ಕಾರಣವಾಯಿತು. ನಂತರ[24] ಮುಸುನುರಿ ನಾಯಕರುಗಳು, ಇವರು ಕಾಕತೀಯ ಅರಸರಲ್ಲಿ ಸೈನ್ಯಾಧಿಕಾರಿಗಳಾಗಿದ್ದವರು; ತೆಲುಗು ಭಾಷಿಕರನ್ನು ಒಟ್ಟುಗೂಡಿಸಿ ಒಗ್ಗಟ್ಟಿನಿಂದ ವಾರಂಗಲ್ ನ್ನು ದೆಹಲಿ ಸುಲ್ತಾನ್ ಪ್ರಭುತ್ವದಿಂದ ವಾಪಸು ಪಡೆದು ಸುಮಾರು ಅರ್ಧಶತಮಾನದ ಕಾಲ ರಾಜ್ಯಭಾರ ಮಾಡಿದರು.[24][25]
ಬಸ್ತಾರ್ ನ [26]ರಾಜ ಕುಟುಂಬವು ಕಾಕತೀಯ ರಾಜ ಪ್ರತಾಪ ರುದ್ರನ ಸಹೋದರ ಅನ್ನಮ್ ದೆವ್ ವಾರಂಗಲ್ ಬಿಟ್ಟು ತನ್ನ ರಾಜ್ಯವನ್ನು ಛತ್ತೀಸ್ ಗಢದ ಬಸ್ತಾರ್ [28]ನಲ್ಲಿ ಸುಮಾರು 14 ನೆಯ ಶತಮಾನದಲ್ಲಿ ಸ್ಥಾಪಿಸಿದ. ನಂತರ ರಾಜಾ ರುದ್ರ ಪ್ರತಾಪ್ ದೆವ್ ನ ಪ್ರಫುಲ್ ಕುಮಾರಿ ದೇವಿ 1922 ರಲ್ಲಿ ಸಿಂಹಾಸನವೇರಿದಳು. ತರುವಾಯ ಆಕೆ 1927 ರಲ್ಲಿ ಮಯೂರ್ ಭಾಂಜ್ ಕುಟುಂಬದ ಪ್ರಫುಲ್ ಕುಮಾರ್ ಭಾಂಜ್ ನನ್ನು ವಿವಾಹವಾದಳು.[30] ಪ್ರಫುಲ್ ಕುಮಾರಿ ದೇವಿ ಲಂಡನ್ ನಲ್ಲಿ 1936 ರಲ್ಲಿ ನಿಧನಳಾದಳು.ಆಕೆಯ ಹಿರಿಯ ಪುತ್ರ ಪ್ರವೀರ್ ಚಂದ್ರ ಭಾಂಜ್ ದೇವ್ ಕಾಕತೀಯ 1936 ರಲ್ಲಿ ಅತ್ಯಂತ ಕಿರಿಯ ವಯಸ್ಸನಲ್ಲೇ ರಾಜ್ಯಭಾರ ವಹಿಸಿಕೊಂಡನು. ಪ್ರಫುಲ್ ಕುಮಾರಿ ದೇವಿಯು ಕಾಕತೀಯರ ವಂಶದ ಕೊನೆಯ ಕೊಂಡಿ ಎಂದು ನಂಬಲಾಗುತ್ತದೆ. ಸದ್ಯದ ಈ ಸಂಸ್ಥಾನದ ಪ್ರಮುಖರೆಂದರೆ ಕೋಮಲ್ ಚಂದ್ರ ಭಾಂಜ್ ದೇವ್ ಎಂದು ಹೇಳಲಾಗುತ್ತದೆ.
ಐತಿಹ್ಯದ ಪರಂಪರೆ
[ಬದಲಾಯಿಸಿ]ಕಾಕತೀಯ ಸಂಸ್ಥಾನದ ಪ್ರಭುತ್ವವು ತೆಲುಗು ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಕಥೆಯಾಗಿದೆ. ತೆಲುಗು ಭಾಷಿಕರಿಂದ ಆಳಲ್ಪಟ್ಟ ಈ ಭಾಗದಲ್ಲಿ ಸಾಹಿತ್ಯ,ಕಲೆ ಮತ್ತು ವಾಸ್ತುಶಿಲ್ಪಕ್ಕೆ ಪ್ರೊತ್ಸಾಹ ನೀಡಲಾಗಿತ್ತು. ಹನುಮಕೊಂಡದಲ್ಲಿರುವ ಸಾವಿರ-ಕಂಬದ ದೇವಾಲಯವು (ಅದೀಗ ವಾರಂಗಲ್ ನೊಂದಿಗೆ ವಿಲೀನವಾಗಿದೆ ಅದು ಸಾಕ್ಷ್ಯವಾಗಿದೆ) ಅವರ ಆಡಳಿತದಲ್ಲಿ ಅತ್ಯಂತ ಪ್ರಸಿದ್ದ ಕೋಹಿನೂರ್ ವಜ್ರವನ್ನು ಕೃಷ್ಣಾ ನದಿ ದಡದಲ್ಲಿನ ಕೊಲ್ಲುರ್ ಬಳಿ ಪತ್ತೆಹಚ್ಚಲಾಗಿದೆ.ಈ ಪ್ರಭುತ್ವ ಪತನವಾದ ನಂತರ ಅದನ್ನು ದೆಹಲಿಗೆ ಕೊಂಡೊಯ್ಯಲಾಯಿತು. ರಾಮಪ್ಪಾ ದೇವಾಲಯವು ವಾರಂಗಲ್ ನಿಂದ 77 ಕಿಮೀ ದೂರದಲ್ಲಿದೆ.ಕಾಕತೀಯರ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿ ಇನ್ನೂ ಅವರ ಉತ್ಕೃಷ್ಟತೆಗೆ ಪುರಾವೆಯಾಗಿದೆ.
ಕಾಕತೀಯ ಸಂಸ್ಥಾನದ ಆಡಳಿತಗಾರರು
[ಬದಲಾಯಿಸಿ]- ಬೆತಾ II (1075-1110)
- ಪ್ರೊಲಾ II (1110-1158)
- ಮಹಾದೇವ (1195-1198): ರುದ್ರದೇವ ರಾಜನ ಸಹೋದರ
- ಗಣಪತಿ ದೇವ (1199-1261)
- ರುದ್ರಮಾ ದೇವಿ (1262-1296)
- ಪ್ರತಾಪರುದ್ರ/ ರುದ್ರದೇವ II (1296-1323): ಸನ್ ರಾಣಿ ರುದ್ರಾಂಬಾಳ ಪುತ್ರ
ಟಿಪ್ಪಣಿಗಳು
[ಬದಲಾಯಿಸಿ]ಇವನ್ನೂ ಗಮನಿಸಿ
[ಬದಲಾಯಿಸಿ]- ರಾಮಪ್ಪ ದೇವಸ್ಥಾನ
- ಚಾಲುಕ್ಯ
- ವಿಕ್ರಮಾದಿತ್ಯ VI
- ಕುಲೊತುಂಗ ಚೋಳ I
- ವಿಜಯನಗರ ಸಾಮ್ರಾಜ್ಯ
- ಮುಸ್ನೂರಿ ನಾಯಕರು
Classical India | ||||||||||||
---|---|---|---|---|---|---|---|---|---|---|---|---|
Timeline: | Northwestern India | Northern India | Southern India | Northeastern India | ||||||||
6th century BCE |
(Persian rule)
|
|
|
|