ಸಂತತಿ
ಜೀವಶಾಸ್ತ್ರದಲ್ಲಿ, ಸಂತತಿಗಳು ಜೀವಿಗಳಿಗೆ ಹುಟ್ಟಿದ ಮರಿಗಳು, ಮತ್ತು ಒಂದೇ ಜೀವಿಯಿಂದ ಅಥವಾ, ಲೈಂಗಿಕ ಸಂತಾನೋತ್ಪತ್ತಿಯ ಸಂದರ್ಭದಲ್ಲಿ ಎರಡು ಜೀವಿಗಳಿಂದ ಉತ್ಪತ್ತಿಯಾಗುತ್ತವೆ. ಸಾಮೂಹಿಕ ಸಂತತಿಗಳನ್ನು ಹೆಚ್ಚು ಸಾಮಾನ್ಯ ರೀತಿಯಲ್ಲಿ ಮರಿಗುಂಪು ಅಥವಾ ಮರಿಗಳು ಎಂದು ಕರೆಯಬಹುದು. ಇದು ಮೊಟ್ಟೆಗಳಿಂದ ಹೊರಬಂದ ಕೋಳಿಮರಿಗಳಂತಹ ಏಕಕಾಲದ ಸಂತತಿಗಳ ಸಮೂಹವನ್ನು, ಅಥವಾ ಜೇನುನೊಣ ಮರಿಗಳಂತಹ ಎಲ್ಲ ಸಂತತಿಗಳನ್ನು ಸೂಚಿಸಬಹುದು.
ಮಾನವ ಸಂತತಿಗಳನ್ನು ಮಕ್ಕಳು ಎಂದು ಸೂಚಿಸಲಾಗುತ್ತದೆ (ವಯಸ್ಸಿಗೆ ಸಂಬಂಧವಿರದಂತೆ, ಹಾಗಾಗಿ ಒಬ್ಬರು ವಯಸ್ಸನ್ನು ಅವಲಂಬಿಸಿ ಹೆತ್ತವರ "ಅಪ್ರಾಪ್ತ ಮಕ್ಕಳು" ಅಥವಾ ವಯಸ್ಕ ಮಕ್ಕಳು ಅಥವಾ ಶಿಶುಗಳು ಅಥವಾ ಹದಿಹರೆಯದವರನ್ನು ಸೂಚಿಸಬಹುದು); ಗಂಡು ಮಕ್ಕಳು ಪುತ್ರರು ಮತ್ತು ಹೆಣ್ಣು ಮಕ್ಕಳು ಪುತ್ರಿಯರು. ಸಂತತಿಗಳ ಉತ್ಪತ್ತಿ ಸಂಭೋಗದ ನಂತರ ಅಥವಾ ಕೃತಕ ಗರ್ಭಧಾರಣೆಯ ನಂತರ ಆಗಬಹುದು.
ಸಂತತಿಯು ನಿಖರ ಮತ್ತು ಸರಿಯಾದ ಅನೇಕ ಭಾಗಗಳು ಮತ್ತು ಲಕ್ಷಣಗಳನ್ನು ಹೊಂದಿರುತ್ತದೆ. ಒಂದು ಹೊಸ ಪ್ರಜಾತಿಯ ಸಂತತಿಯು ತಂದೆ ಮತ್ತು ತಾಯಿಯ (ಇದನ್ನು ಪೋಷಕ ಪೀಳಿಗೆ ಎಂದು ಕರೆಯಲಾಗುತ್ತದೆ) ವಂಶವಾಹಿಗಳನ್ನು ಹೊಂದಿರುತ್ತದೆ.[೧] ಈ ಪ್ರತಿಯೊಂದು ಸಂತತಿಯು ನಿರ್ದಿಷ್ಟ ಕ್ರಿಯೆಗಳು ಮತ್ತು ಲಕ್ಷಣಗಳಿಗೆ ಸಂಕೇತೀಕರಣವಿರುವ ಅಸಂಖ್ಯಾತ ವಂಶವಾಹಿಗಳನ್ನು ಹೊಂದಿರುತ್ತದೆ. ಗಂಡುಗಳು ಮತ್ತು ಹೆಣ್ಣುಗಳು ಎರಡೂ ತಮ್ಮ ಸಂತತಿಯ ಆನುವಂಶಿಕ ರಚನೆಗಳಿಗೆ ಸಮಾನವಾಗಿ ಕೊಡುಗೆ ನೀಡುತ್ತವೆ. ಸಂತತಿಗಳಲ್ಲಿ ಜಂಪತಿಗಳು ಕೂಡಿ ರಚನೆಯಾಗುತ್ತವೆ. ಸಂತತಿಯ ರಚನೆಯಲ್ಲಿ ವರ್ಣತಂತು ಒಂದು ಪ್ರಮುಖ ಅಂಶವಾಗಿದೆ. ವರ್ಣತಂತು ಅನೇಕ ವಂಶವಾಹಿಗಳನ್ನು ಹೊಂದಿರುವ ಡಿಎನ್ಎ ಯ ಒಂದು ರಚನೆ.
ಲಿಂಗ ಸಂಪರ್ಕ ಎಂದು ಕರೆಯಲಾದ ಒಂದು ಆನುವಂಶಿಕತೆ ಮುಖ್ಯವಾಗಿದೆ. ಇದು ಲಿಂಗ ವರ್ಣತಂತುವಿನಲ್ಲಿ ಸ್ಥಿತವಾದ ಒಂದು ವಂಶವಾಹಿ ಮತ್ತು ಈ ಆನುವಂಶಿಕತೆಯ ಮಾದರಿಗಳು ಹೆಣ್ಣು ಮತ್ತು ಗಂಡು ಎರಡರಲ್ಲೂ ಭಿನ್ನವಾಗಿರುತ್ತವೆ. ಕ್ರಾಸಿಂಗ್ ಓವರ್ ಎಂಬ ವಿವರಣೆ ಅಥವಾ ಪ್ರಕ್ರಿಯೆಯು ಒಂದು ಸಂತತಿಯು ಎರಡೂ ಪೋಷಕ ಪೀಳಿಗೆಗಳ ವಂಶವಾಹಿಗಳನ್ನು ಹೊಂದಿರುವ ಸಿದ್ಧಾಂತವನ್ನು ಸಾಬೀತುಪಡಿಸುತ್ತದೆ. ಇದರಲ್ಲಿ ಗಂಡು ವರ್ಣತಂತುಗಳಿಂದ ವಂಶವಾಹಿಗಳು ಮತ್ತು ಹೆಣ್ಣು ವರ್ಣತಂತುಗಳಿಂದ ವಂಶವಾಹಿಗಳನ್ನು ತೆಗೆದುಕೊಂಡು, ಅರೆವಿದಳನ ಪ್ರಕ್ರಿಯೆ ನಡೆದು, ವರ್ಣತಂತುಗಳು ಸಮವಾಗಿ ವಿಭಜನೆಯಾಗುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ "chromosome". Retrieved 1 April 2014.