ವಿಷಯಕ್ಕೆ ಹೋಗು

ರುಕ್ಮಿಣಿದೇವಿ ಅರುಂಡೇಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರುಕ್ಮಿಣಿದೇವಿ ಅರುಂಡೇಲ್

ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ರುಕ್ಮಿಣಿದೇವಿ
ಟೆಂಪ್ಲೇಟು:ಹುಟ್ಟಿದ ದಿನಾಂಕ
ಮಧುರೈ, ತಮಿಳುನಾಡು, ಭಾರತ
ನಿಧನ ಟೆಂಪ್ಲೇಟು:ನಿಧನರಾದ ದಿನಾಂಕ ಮತ್ತು ವಯಸ್ಸು
ಚೆನ್ನೈ, ತಮಿಳುನಾಡು, ಭಾರತ
ವರ್ಷಗಳು ಸಕ್ರಿಯ 1920-1986

ರುಕ್ಮಿಣಿ ದೇವಿ ಅರುಂಡೇಲ್ (ತಮಿಳು:ருக்மிணி தேவி அருண்டேல்) (1904 ರ ಫೆಬ್ರವರಿ 29–1986 ರ ಫೆಬ್ರವರಿ 24,[] )ಇವರು ಭಾರತೀಯ ಧಾರ್ಮಿಕ,ಆಧ್ಯಾತ್ಮಿಕ ತತ್ವಗಳ ಬ್ರಹ್ಮವಿದ್ಯಾವಾದಿ ತತ್ವದ ಪ್ರತಿಪಾದಕಿ, ನೃತ್ಯಗಾರ್ತಿ ಹಾಗು ಭರತನಾಟ್ಯದ ರೂಪವಾದ ಭಾರತೀಯ ಶಾಸ್ತ್ರೀಯ ನೃತ್ಯದ ಸಂಯೋಜಕಿಯಾಗಿದ್ದರು. ಅಲ್ಲದೇ ಪ್ರಾಣಿಗಳ ಹಕ್ಕುಗಳು ಮತ್ತು ಅಭಿವೃದ್ಧಿಗಾಗಿ ಹೋರಾಡುವ ಕಾರ್ಯಕರ್ತೆಯಾಗಿದ್ದರು.

ಇವರನ್ನು ಮೂಲ 'ಸಾಧಿರ್' ಶೈಲಿಯಿಂದ, ಭರತನಾಟ್ಯದ ರೂಪವಾದ ಭಾರತೀಯ ಶಾಸ್ತ್ರೀಯ ನೃತ್ಯದಲ್ಲಿ ಜೀರ್ಣೋದ್ದಾರ ಮಾಡಿದವರು ಎಂದು ಪರಿಗಣಿಸಲಾಗುತ್ತದೆ. ಈ ಸಾಧಿರ್ ಶೈಲಿಯನ್ನು ದೇವಸ್ಥಾನದ ನೃತ್ಯಗಾರ್ತಿಯರೆಂದು ಕರೆಯಲಾಗುವ ದೇವದಾಸಿಯರಲ್ಲಿ ಹೆಚ್ಚಾಗಿ ನೋಡ ಬಹುದಾಗಿದೆ.[][] ಇವರು ಸಾಂಪ್ರದಾಯಿಕ ಭಾರತೀಯ ಕಲೆ ಮತ್ತು ಕೌಶಲಗಳನ್ನು ಪುನಃ ಸ್ಥಾಪಿಸುವುದರ ಮೇಲೂ ಕಾರ್ಯನಿರ್ವಹಿಸಿದ್ದರು.

ಇವರು ಭಾರತದ ಮೇಲ್ವರ್ಗದ ಜಾತಿಗೆ ಸೇರಿದ್ದರೂ ಕೂಡ ಭರತನಾಟ್ಯದ ಧ್ಯೇಯಗಳನ್ನು ಎತ್ತಿ ಹಿಡಿದರು. ಇವುಗಳನ್ನು 1920 ರ ಪೂರ್ವಾರ್ಧದಲ್ಲಿ ಕೀಳುಮಟ್ಟದ ಮತ್ತು ದೇಸಿಕಲೆಯೆಂದು ಪರಿಗಣಿಸಲಾಗುತ್ತಿತ್ತು. ಈ ಕಲಾ ಸ್ವರೂಪದ ಸೌಂದರ್ಯ ಮತ್ತು ಆಧ್ಯಾತ್ಮಿಕ ಮೌಲ್ಯವನ್ನು ಗುರುತಿಸಿ, ನೃತ್ಯವನ್ನು ಕಲಿತರಷ್ಟೇ ಅಲ್ಲದೇ, ಸಾರ್ವಜನಿಕರ ಪ್ರಬಲ ವಿರೋಧದ ಹೊರತಾಗಿಯು ಇದನ್ನು ವೇದಿಕೆಯ ಮೇಲೆ ಪ್ರದರ್ಶಿಸಿದ್ದರು.

'ಭಾರತದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸರೂಪ ನೀಡಿದ 100 ಜನರ' ಪಟ್ಟಿ ಸಿದ್ದಪಡಿಸಿ ಪ್ರಕಟಿಸಿದ ಇಂಡಿಯಾ ಟುಡೇ ಪತ್ರಿಕೆಯಲ್ಲಿ ರುಕ್ಮಿಣಿ ದೇವಿಯವರ ಹೆಸರನ್ನೂ ಪ್ರಸ್ತಾಪಿಸಲಾಗಿದೆ.[] ಇವರಿಗೆ 1956 ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಮತ್ತು 1967 ರಲ್ಲಿ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ನೀಡಿ ಗೌರವಿಸಲಾಯಿತು.

ಜೀವನ ಚರಿತ್ರೆ

[ಬದಲಾಯಿಸಿ]

ಆರಂಭಿಕ ಜೀವನ ಮತ್ತು ವಿವಾಹ

[ಬದಲಾಯಿಸಿ]
  • ರುಕ್ಮಿಣಿ ದೇವಿ, 1904 ರ ಫೆಬ್ರವರಿ 29 ರಂದು ಮಧುರೈ ಯ ಮೇಲ್ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ನೀಲಕಂಠಶಾಸ್ತ್ರಿ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಮತ್ತು ವಿದ್ವಾಂಸರಾಗಿದ್ದರು. ತಾಯಿ ಶೇಷಾಮ್ಮಲ್ ಸಂಗೀತದ ಉತ್ಸಾಹಿಯಾಗಿದ್ದರು. ತಂದೆಯದು ವರ್ಗಾವಣೆಯಾಗುತ್ತಿದ್ದ ಕೆಲಸವಾಗಿದ್ದರಿಂದ ಕುಟುಂಬವನ್ನು ಪದೇ ಪದೇ ಬೇರೆಡೆಗೆ ಸ್ಥಳಾಂತರಿಸಬೇಕಿತ್ತು. ಇವರನ್ನು 1901 ರಲ್ಲಿ ಬ್ರಹ್ಮವಿದ್ಯಾವಾದ ಸಮಾಜಕ್ಕೆ ಪರಿಚಯಿಸಲಾಯಿತು.
  • ಬ್ರಹ್ಮಸಮಾಜದ ಅನುಚರರಾದ ಡಾ.ಅನ್ನಿ ಬೆಸೆಂಟ್ ರವರ ಬ್ರಹ್ಮವಿದ್ಯಾವಾದ ಚಳವಳಿಯಿಂದ ಪ್ರಭಾವಿತರಾದ ನೀಲಕಂಠಶಾಸ್ತ್ರಿ, ಅವರ ನಿವೃತ್ತಿಯ ನಂತರ ಚೆನ್ನೈನ ಅಡ್ಯಾರ್ ಗೆ ತೆರೆಳಿದರು. ಅಲ್ಲಿ ಅವರು ಬ್ರಹ್ಮವಿದ್ಯಾವಾದ ಸಮಾಜ, ಅಡ್ಯಾರ್ ನ ಕೇಂದ್ರ ವಿಭಾಗದ ಸಮೀಪದಲ್ಲಿಯೇ ತಮ್ಮ ಮನೆ ನಿರ್ಮಿಸಿದರು. ಇಲ್ಲಿಯೇ ಎಳೆಯ ರುಕ್ಮಿಣಿ ಬ್ರಹ್ಮವಿದ್ಯಾವಾದದ ಸಿದ್ಧಾಂತಗಳಿಗೆ ಮಾತ್ರವಲ್ಲದೇ ಸಂಸ್ಕೃತಿ, ರಂಗಕಲೆ ಸಂಗೀತ ಮತ್ತು ನೃತ್ಯಕ್ಕೆ ಸಂಬಂಧಿಸಿದ ಹೊಸ ಆಲೋಚನೆಗಳ ಪ್ರಭಾವಕ್ಕೊಳಗಾದರು.
  • ಅನಂತರ ಪ್ರಸಿದ್ಧ ಬ್ರಹ್ಮವಿದ್ಯಾವಾದಿ ಡಾಕ್ಟರ್.ಜಾರ್ಜ್ ಅರುಂಡೇಲ್ ರವರನ್ನು ಭೇಟಿಮಾಡಿದರು. ಇವರು ಅನ್ನಿ ಬೆಸೆಂಟ್ ರವರ ಆಪ್ತ ಸಹಚರರಾಗಿದ್ದು, ಅನಂತರ ವಾರಣಾಸಿಯ ಸೆಂಟ್ರಲ್ ಹಿಂದು ಕಾಲೇಜ್ ನ ಪ್ರಾಂಶುಪಾಲರಾದರು. ಅಲ್ಲದೇ ರುಕ್ಮಿಣಿ ಇವರೊಡನೆ ಆಗ ನಿಕಟ ಸಂಬಂಧ ಬೆಳೆಸಿಕೊಂಡರು.[]
  • ಇವರು 1920ರಲ್ಲಿ ಮದುವೆಯಾದರು. ಇದು ಸಂಪ್ರದಾಯಶೀಲ ಸಮಾಜಕ್ಕೆ ಆಘಾತವನ್ನು ಉಂಟುಮಾಡಿತ್ತು. ವಿವಾಹದ ನಂತರ ರುಕ್ಮಿಣಿದೇವಿ ಪ್ರಪಂಚವನ್ನೆಲ್ಲಾ ಸುತ್ತಿದರಲ್ಲದೇ, ಬ್ರಹ್ಮವಿದ್ಯಾವಾದಿ ಸಮಾಜದ ಅನುಚರರನ್ನು ಭೇಟಿಮಾಡಿದರು. ಅಷ್ಟೇ ಅಲ್ಲದೇ ಶಿಕ್ಷಕ ಮರಿಯಾ ಮಾಂಟಸ್ಸರಿ, ಮತ್ತು ಕವಿ ಜೇಮ್ಸ್ ಕಸಿನ್ಸ್ ರೊಂದಿಗೆ ಸ್ನೇಹ ಬೆಳೆಸಿಕೊಂಡರು.[]
  • ಅವರು 1923 ರಲ್ಲಿ, ಯುವ ಬ್ರಹ್ಮವಿದ್ಯಾವಾದಿಗಳ ಅಖಿಲ ಭಾರತ ಒಕ್ಕೂಟದ ಅಧ್ಯಕ್ಷರಾದರು. ಅಲ್ಲದೇ 1925 ರಲ್ಲಿ ಯುವ ಬ್ರಹ್ಮವಿದ್ಯಾವಾದಿಗಳ ಅಖಿಲ ವಿಶ್ವ ಒಕ್ಕೂಟದ ಅಧ್ಯಕ್ಷರಾದರು.[]
  • ರಷ್ಯಾದ ಪ್ರಸಿದ್ಧ ಬ್ಯಾಲೆ ನರ್ತಕಿ ಅನ್ನಾ ಪಾವಲೋವ, 1928 ರಲ್ಲಿ ಬಾಂಬೆಗೆ ಭೇಟಿ ನೀಡಿದ್ದರಲ್ಲದೇ, ಅರುಂಡೇಲ್ ಜೋಡಿ; ಅವರ ಪ್ರದರ್ಶನ ನೋಡಲು ಹೋಗಿದ್ದರು.
  • ಅನಂತರ ಆಸ್ಟ್ರೇಲಿಯಾದಲ್ಲಿ ತಮ್ಮ ಮುಂದಿನ ಪ್ರದರ್ಶನವನ್ನು ನೀಡಲು ಹೋಗುತ್ತಿದ್ದ ಅನ್ನಾ ಮತ್ತು ಇವರು ಒಂದೇ ಹಡಗಿನಲ್ಲಿ ಪ್ರಯಾಣ ಬೆಳೆಸುವ ಪ್ರಸಂಗ ಬಂದಿತು; ಪ್ರಯಾಣದ ಸಂದರ್ಭದಲ್ಲಿ ಅವರ ನಡುವೆ ಸ್ನೇಹ ಉಂಟಾಯಿತಲ್ಲದೇ, ರುಕ್ಮಿಣಿ ದೇವಿ ಶೀಘ್ರದಲ್ಲೆ ಅನ್ನಾರವರ ಪ್ರಮುಖ ನೃತ್ಯಗಾರ ಶಿಷ್ಯರಲ್ಲಿ ಒಬ್ಬರಾದ ಕ್ಲಿಯೊನಾರ್ಡಿಯವರಿಂದ ನೃತ್ಯ ಕಲಿಯಲು ಪ್ರಾರಂಭಿಸಿದರು.[]
  • ಅನಂತರ ಅನ್ನಾರವರ ಅಣತಿಯ ಮೇರೆಗೆ ರುಕ್ಮಿಣಿ ದೇವಿ, ಪಾರಂಪರಿಕ ಭಾರತೀಯ ನೃತ್ಯದ ರೂಪಗಳನ್ನು ಹೊರತೆಗೆಯುವಲ್ಲಿ ತಮ್ಮ ಗಮನ ಹರಿಸಿದರು.ಜನಪ್ರಿಯತೆ ನಶಿಸಿದ ನೃತ್ಯ ಕಲೆಗಳ ಬಗ್ಗೆ ಹೆಚ್ಚು ಆಸಕ್ತಿಯಿಂದ ಅಧ್ಯಯನ ಮಾಡಿದರು.ಅಲ್ಲದೇ ಅವುಗಳ ಪುನರುಜ್ಜೀವನಕ್ಕಾಗಿ ತಮ್ಮ ಉಳಿದ ಜೀವನವನ್ನೆಲ್ಲಾ ಮುಡಿಪಾಗಿಟ್ಟರು.[]

ಪುನರುಜ್ಜೀವಕಿ

[ಬದಲಾಯಿಸಿ]

ಮದ್ರಾಸ್ ಸಂಗೀತ ಅಕಾಡೆಮಿಯ 1933ರಲ್ಲಿನ ವಾರ್ಷಿಕ ಸಮ್ಮೇಳನದಲ್ಲಿ ಮೊಟ್ಟ ಮೊದಲ ಬಾರಿಗೆ ಸಾಧಿರ್ ಶೈಲಿಯಲ್ಲಿ ಮಾಡಿದ ನೃತ್ಯ ಪ್ರದರ್ಶನವನ್ನು ಅವರು ವೀಕ್ಷಿಸಿದರು.[೧೦]

  • ಅನಂತರ ಅವರು 'ಮೈಲಾಪೊರೆ ಗೌರಿ ಅಮ್ಮ' ನವರಿಂದ ಮತ್ತು ಅಂತಿಮವಾಗಿ ಇ.ಕೃಷ್ಣ ಐಯ್ಯರ್[೧೧] ರವರ ಸಹಾಯದೊಂದಿಗೆ 'ಪಂಡನಲೂರ್ ಮೀನಾಕ್ಷಿ ಸುದರಂ ಪಿಳ್ಳೈ'ಯವರಿಂದ ನೃತ್ಯಾಭ್ಯಾಸ ಮಾಡಿದರು. ರುಕ್ಮಿಣಿ ದೇವಿ 1935 ರಲ್ಲಿ ಬ್ರಹ್ಮವಿದ್ಯಾವಾದ ಸಮಾಜದ 'ವಜ್ರಮಹೋತ್ಸವ ಸಮ್ಮೇಳನದಲ್ಲಿ ತಮ್ಮ ಪ್ರಥಮ ಪ್ರದರ್ಶನ ನೀಡಿದರು.[೧೨]
  • ಅವರು ತಮ್ಮ ಪತಿಯೊಂದಿಗೆ 1936 ರ ಜನವರಿಯಲ್ಲಿ,[೧೩] ಕಲಾಕ್ಷೇತ್ರವನ್ನು ಸ್ಥಾಪಿಸಿದರು. ಇದು ನೃತ್ಯ ಮತ್ತು ಸಂಗೀತದ ಅಕಾಡೆಮಿಯಾಗಿದ್ದು, ಇದನ್ನು ಚೆನ್ನೈನ ಆಡ್ಯರ್ ನಲ್ಲಿ ಪ್ರಾಚೀನ ಭಾರತದ ಗುರುಕುಲ ಪದ್ದತಿಯಂತೆ ಸ್ಥಾಪಿಸಲಾಗಿದೆ. ಇಂದು ಈ ಅಕಾಡೆಮಿ ಕಲಾಕ್ಷೇತ್ರ ಸಂಸ್ಥೆಯಡಿಯಲ್ಲಿ ನಡೆವ ಸ್ವತಂತ್ರ ವಿಶ್ವವಿದ್ಯಾನಿಲಯವಾಗಿದೆ , ಇದರ ಹೊಸ ೧೦೦ ಎಕರೆ ಕೇಂದ್ರ ಚೆನ್ನೈ ನ ತಿರುವಣ್ಮೈಯುರ್ ನಲ್ಲಿರುವ ಕ್ಯಾಂಪಸ್(ವಿಶ್ವವಿದ್ಯಾನಿಲಯದ ಆವರಣ)ದಲ್ಲಿದೆ. ಇಲ್ಲಿಗೆ ಇದನ್ನು 1962ರಲ್ಲಿ ವರ್ಗಾಯಿಸಲಾಯಿತು.[೧೪]
  • ಇವರ ಪ್ರಮುಖ ವಿದ್ಯಾರ್ಥಿಗಳಲ್ಲಿ : ರಾಧಾ ಬರ್ನಿಯರ್, ಶಾರದ ಹಾಫ್ ಮ್ಯಾನ್, ಕಮಲಾ ದೇವಿ ಚಟ್ಟೋಪಾಧ್ಯಾಯ, ಸಂಯುಕ್ತಾ ಪಾಣಿಗ್ರಹಿ, ಸಿ.ವಿ. ಚಂದ್ರಶೇಖರ್, ಯಾಮಿನಿ ಕೃಷ್ಣಮೂರ್ತಿ ಮತ್ತು ಲೀಲಾ ಸ್ಯಾಮ್ ಸನ್.ಸೇರಿದ್ದಾರೆ.[೧೫]
  • ಮೂಲತಃ ಸಾಧಿರ್ ಎಂದು ಕರೆಯಲ್ಪಡುವ ಭರತನಾಟ್ಯದ ರೂಪವಾದ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಸ್ತುತದಲ್ಲಿ ಇ.ಕೃಷ್ಣ ಐಯ್ಯರ್ ಮತ್ತು ರುಕ್ಮಿಣಿ ದೇವಿ ಅರುಂಡೇಲ್ ರವರಿಗೆ ಗೌರವ ದ್ಯೋತಕವಾದ ಋಣಿ ಅರ್ಪಿತವಾಗುತ್ತದೆ,[೧೬]
  • ಇವರು ಭರತನಾಟ್ಯದ ಪಂಡನಲೂರು ಶೈಲಿಯನ್ನು ಮಾರ್ಪಡಿಸುವಲ್ಲಿ ಸಫಲರಾದರು.ಅಲ್ಲದೇ ಅದನ್ನು ಜಾಗತಿಕವಾಗಿ ಆಕರ್ಷಣೆಗೆ ತರುವಲ್ಲಿ ಹಾಗು ಬಾಹ್ಯ ಶೃಂಗಾರ ಮತ್ತು ನೃತ್ಯದಿಂದ ಕಾಮ ಪ್ರಚೋದಕ ಅಂಶಗಳನ್ನು ತೆಗೆದುಹಾಕುವಲ್ಲಿ ಮಹತ್ವದ ಕಾರ್ಯನಿರ್ವಹಿಸಿದರು. ಇವುಗಳು ಹಿಂದೆ ಆಗಿನ ದೇವದಾಸಿ ಸಂಘಟನೆಗಳ ಆಸ್ತಿಯಾಗಿದ್ದವು. ಇಲ್ಲಿಂದ ಇದನ್ನು ಶುದ್ಧ ಕಲೆ ರೂಪಕ್ಕಿರುವ ಸ್ಥಾನಮಾನದ ಮಟ್ಟಕ್ಕೆ ತರಲಾಯಿತು.[೧೭]
  • ಅನಂತರ ಪೀಟಿಲಿನಂತಹ ವಾದ್ಯಗಳನ್ನು[೧೮] ಕಲಾತ್ಮಕ ವೇದಿಕೆಯಲ್ಲಿ ಬೆಳಕಿಗೆ ತಂದರು. ಅಲ್ಲದೇ ಬೆಳಕಿನ ವಿನ್ಯಾಸದ ಅಂಶಗಳನ್ನು ಮತ್ತು ಹೊಸ ಉಡುಪುಗಳನ್ನು, ಹಾಗು ದೇವಸ್ಥಾನದ ಶಿಲ್ಪಾಕೃತಿಗಳಿಂದ ಸ್ಪೂರ್ತಿಗೊಂಡ ಆಭರಣಗಳನ್ನು[೧೯] ಪರಿಚಯಿಸುವ ಮೂಲಕ ನೃತ್ಯದ ಸ್ವರೂಪವನ್ನು ಬದಲಾಯಿಸಿದರು. ಅವರ ನೃತ್ಯ ನಾಟಕಗಳ ನಿರ್ಮಾಣಗಳಿಗಾಗಿ ರುಕ್ಮಿಣಿಯವರು, ಅವರ ಶಿಕ್ಷಕಿಯಾಗಿದ್ದಾಗಲೇ ಅನೇಕ ಕಲೆಗಳು ಮತ್ತು ಶಾಸ್ತ್ರೀಯ ನೃತ್ಯದಲ್ಲಿ ಗುರುತಿಸಿಕೊಂಡಿರುವ ಗುರುಗಳನ್ನು ಭೇಟಿಮಾಡಿದರು.
  • ರುಕ್ಮಿಣಿದೇವಿ ಸ್ಪೂರ್ತಿಗಾಗಿ ಪ್ರಸಿದ್ಧ ವಿದ್ವಾಂಸರನ್ನು ಹಾಗು ಸಹಯೋಗಕ್ಕಾಗಿ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರು ಮತ್ತು ಕಲಾವಿದರನ್ನು ಭೇಟಿಮಾಡಿದರು. ಇದರ ಫಲಿತಾಂಶವಾಗಿ ವಾಲ್ಮಿಕಿರಾಮಾಯಣ ಮತ್ತು ಜಯದೇವರ ಗೀತ ಗೋವಿಂದ ದಂತಹ ಭಾರತದ ಮಹಾಕಾವ್ಯಗಳನ್ನು ಆಧರಿಸಿ ಮೊದಲ ನೃತ್ಯ ನಾಟಕಗಳು ಹೊರಬಂದವು.[೨೦]
  • ಪ್ರಸಿದ್ಧ 'ಸೀತಾ ಸ್ವಯಂವರ', 'ಶ್ರೀ ರಾಮ ವನಾಗಮನಮ್', 'ಪಾದುಕ ಪಟ್ಟಾಭಿಷೇಕಮ್' ಮತ್ತು 'ಶಬರಿ ಮೋಕ್ಷಮ್' ನಂತಹ ನೃತ್ಯ ನಾಟಕಗಳೊಂದಿಗೆ ಆರಂಭಿಸಿ, ಅನಂತರ 'ಕುಟ್ರಾಲ ಕುರುವಂಜಿ', 'ರಾಮಾಯಣ', 'ಕುಮಾರ ಸಂಭವ', 'ಗೀತ ಗೋವಿಂದಮ್' ಮತ್ತು 'ಉಷಾ ಪರಿಣಯಮ್' ಎಂಬವುಗಳನ್ನು ಮಾಡಿದರು.[೨೧]
  • ಡಾ. ಜಾರ್ಜ್ ಅರುಂಡೇಲ್ 'ಬೆಸೆಂಟ್ ಬ್ರಹ್ಮವಿದ್ಯಾವಾದ ಪ್ರೌಢ ಶಾಲೆ'ಯಲ್ಲಿ ಅಧ್ಯಯನಗಳನ್ನು ಪ್ರಾರಂಭಿಸಲು ಡಾಕ್ಟರ್. ಮರಿಯಾ ಮಾಂಟೆಸ್ಸರಿಯವರನ್ನು 1939 ರಲ್ಲಿ ಆಹ್ವಾನಿಸಿದಾಗ ,ಮಾಂಟೆಸ್ಸರಿ ಪದ್ಧತಿ ಆಧರಿತ ಶಾಲೆಗಳನ್ನು ಭಾರತದಲ್ಲಿ ಮೊದಲ ಬಾರಿಗೆ ಪ್ರಾರಂಭಿಸ ಲಾಯಿತು,[೨೨]
  • ಅಲ್ಲದೇ ಅನಂತರ ಕೂಡ 'ಬೆಸೆಂಟ್ ಅರುಂಡೇಲ್ ಹಿರಿಯರ ಪ್ರೌಢಶಾಲೆ',ಲಲಿತ ಕಲೆಗಳ ಕಾಲೇಜು, ಬೆಸೆಂಟ್ ಬ್ರಹ್ಮವಿದ್ಯಾವಾದ ಪ್ರೌಢ ಶಾಲೆ, ಮಕ್ಕಳಿಗಾಗಿ ಮರಿಯಾ ಮಾಂಟೆಸ್ಸರಿ ಶಾಲೆ, ಕರಕುಶಲ ಶಿಕ್ಷಣ ಮತ್ತು ಸಂಶೋಧನ ಕೇಂದ್ರ ಹಾಗು ಕಲಾಕ್ಷೇತ್ರದ ಕ್ಯಾಂಪಸ್ ನೊಳಗೆ ಯು.ವಿ.ಸ್ವಾಮಿನಾಥ ಐಯ್ಯರ್ ಗ್ರಂಥಾಲಯ ಸ್ಥಾಪಿಸಲಾಯಿತು.

ನಂತರದ ವರ್ಷಗಳು

[ಬದಲಾಯಿಸಿ]
  • ರುಕ್ಮಿಣಿದೇವಿ, ಭಾರತದ ಸಂಸತ್ತಿನ ರಾಜ್ಯಗಳ ಸಮಿತಿಯ ಸದಸ್ಯರಾಗಿ ನಾಮಕರಣಗೊಂಡರು ಹಾಗು 1952 ರ ಏಪ್ರಿಲ್ ನಲ್ಲಿ ರಾಜ್ಯ ಸಭೆಗೆ, 1956 ರಲ್ಲಿ ಮರುನಾಮಕರಣಗೊಂಡರು.[೨೩]
  • ಪ್ರಾಣಿಗಳ ಸಂರಕ್ಷಣೆಯ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಅವರು, ಅನೇಕ ಲೋಕೋಪಯೋಗಿ ಸಂಸ್ಥೆಗಳೊಂದಿಗೆ ತಮ್ಮ ಒಡನಾಟವನ್ನಿಟ್ಟುಕೊಂಡಿದ್ದರು. ಅಲ್ಲದೇ ರಾಜ್ಯಸಭೆಯ ಸದಸ್ಯರಾಗಿ 'ಪ್ರಾಣಿಗಳ ಮೇಲೆ ಕ್ರೌರ್ಯ ಪ್ರತಿಬಂಧಕ ಕಾಯಿದೆ(1960)' ಯನ್ನು ಜಾರಿಗೆ ತರಲು ಮತ್ತು ಅವರ ಅಧ್ಯಕ್ಷತೆಯಲ್ಲಿ ಭಾರತದ ಪ್ರಾಣಿಗಳ ಸಂರಕ್ಷಣಾ ಮಂಡಳಿಯನ್ನು 1962ರಲ್ಲಿ ಸ್ಥಾಪಿಸಲು ಕಾರಣರಾದರು. ಅಲ್ಲದೇ 1986 ರಲ್ಲಿ ಅವರು ನಿಧನಹೊಂದುವವರೆಗೂ ಇದರ ಅಧ್ಯಕ್ಷರಾಗಿದ್ದರು.
  • ಅವರು ಕಟ್ಟುನಿಟ್ಟಿನ ಸಸ್ಯಹಾರಿಯಾಗಿದ್ದು, ರಾಷ್ಟ್ರದಲ್ಲಿ ಸಸ್ಯಾಹಾರ ಅನುಷ್ಠಾನವನ್ನು ಪ್ರೋತ್ಸಾಹಿಸಲು ಬಹಳಷ್ಟು ಶ್ರಮಿಸಿದರು. ಇವರು 1955 ರಿಂದ 1986 ರ ವರೆಗೆ 31 ವರ್ಷಗಳ ಕಾಲ ಅಂತರರಾಷ್ಟ್ರೀಯ ಸಸ್ಯಹಾರಿಗಳ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು.[೨೪]
  • ಆಗ ಮೊರಾರ್ಜಿ ದೇಸಾಯಿ ಅವರು ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಇವರ ಹೆಸರನ್ನು 1977 ರಲ್ಲಿ ಸೂಚಿಸಿದ್ದರು, ಆದರೆ ರುಕ್ಮಿಣಿ ದೇವಿ ಅದನ್ನು ನಿರಾಕರಿಸಿದರು[.[೨೫] ರುಕ್ಮಿಣಿ ದೇವಿ ಅರುಂಡೇಲ್ ಚೆನ್ನೈನಲ್ಲಿ 1986 ರ ಫೆಬ್ರವರಿ 24 ರಂದು ನಿಧನರಾದರು.
  • ಜವಳಿ ಕ್ಷೇತ್ರದಲ್ಲಿನ ಬಟ್ಟೆ ಮೇಲಿನ ಮುದ್ರಣದ ಭಾರತೀಯ ಪ್ರಾಚೀನ ಕರ ಕುಶಲತೆಯ ಪುನರುಜ್ಜೀವನಕ್ಕಾಗಿ 1978 ರಲ್ಲಿ ಕಲಾಕ್ಷೇತ್ರದಲ್ಲಿ 'ಕಲಂಕರಿ ಕೇಂದ್ರ'("ಕುಸರಿ ಕಲಾ ಕುಶಲತೆ)ವನ್ನು ಪ್ರಾರಂಭಿಸಿದರು.[೨೬]

ಪರಂಪರೆ

[ಬದಲಾಯಿಸಿ]
  • ಭಾರತೀಯ ಸಂಸತ್ತಿನ ಒಂದು ಕಾಯಿದೆಯು 1994 ರ ಜನವರಿಯಲ್ಲಿ, ಕಲಾಕ್ಷೇತ್ರ ಪ್ರತಿಷ್ಠಾನವನ್ನು'ರಾಷ್ಟ್ರೀಯ ಮಹತ್ವದ ಸಂಸ್ಥೆ' ಎಂದು ಗುರುತಿಸಿತು.[೨೭][೨೮]
  • ಉಪನ್ಯಾಸಕರು, ಭೋಧನೆಗಳು ಮತ್ತು ಉತ್ಸವಗಳನ್ನು ಒಳಗೊಂಡ ವರ್ಷದುದ್ದಕ್ಕೂ ನಡೆದ ಸಮಾರಂಭಗಳ ಮೂಲಕ 2004 ರ ಫೆಬ್ರವರಿ 29 ರಂದು ಅವರ 100 ನೇ ವರ್ಷದ ಹುಟ್ಟಿದ ಹಬ್ಬವನ್ನು ಕಲಾಕ್ಷೇತ್ರದಲ್ಲಿ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ ಆಚರಿಸಲಾಯಿತು.[೨೯]
  • ಅಂದಿನ ದಿನದಂದು ಕಲಾಕ್ಷೇತ್ರದ ಆವರಣದಲ್ಲಿ ವಿಶೇಷ ಸಮಾರಂಭ ನಡೆಸಲಾಯಿತು. ಇದಕ್ಕಾಗಿ ಹಳೆಯ ವಿದ್ಯಾರ್ಥಿಗಳು ಭಾರತದಿಂದ ಮತ್ತು ಹೊರದೇಶದಿಂದ ಬಂದಿದ್ದರು. ಅಲ್ಲದೇ ಅಂದಿನ ಆಚರಣೆಯನ್ನು ಸಂಗೀತ ಮತ್ತು ನೃತ್ಯ ಪ್ರದರ್ಶನದ ದಿನವನ್ನಾಗಿಸಿದ್ದರು.[೩೦]
  • ಅಲ್ಲದೇ ಫೆಬ್ರವರಿ 29 ರಂದು ನವ ದೆಹಲಿಯ ಲಲಿತ ಕಲಾ ಗ್ಯಾಲರಿಯಲ್ಲಿ ಅವರ ಜೀವಮಾನದ ಮೇಲೆ ಛಾಯಾಚಿತ್ರ ಪ್ರದರ್ಶನವನ್ನು ತೆರೆಯಲಾಯಿತು. ಅಷ್ಟೇ ಅಲ್ಲದೇ ಅದೇ ದಿನದಂದು ಅಧ್ಯಕ್ಷರಾದ ಏ.ಪಿ.ಜೆ. ಅಬ್ದುಲ್ ಕಲಾಂರವರು, ಡಾ. ಸುನಿಲ್ ಕೋಥಾರಿಯವರು ಬರೆದು, ಸಂಕಲಿಸಿದ ಹಾಗು ಮಾಜಿ ಅಧ್ಯಕ್ಷರಾದ ಆರ್. ವೆಂಕಟರಾಮನ್ ರು ಬರೆದಿರುವ ಪೀಠಿಕೆಯನ್ನು ಒಳಗೊಂಡ ರುಕ್ಮಿಣಿದೇವಿಯವರ ಛಾಯಾಚಿತ್ರ-ಜೀವನವಚರಿತ್ರೆಯನ್ನು ಬಿಡುಗಡೆ ಮಾಡಿದರು.[೩೧][೩೨][೩೩]

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]
  • ಪದ್ಮ ಭೂಷಣ(1956)
  • ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1957)
  • ವಿಶ್ವ ಭಾರತಿ ವಿಶ್ವವಿದ್ಯಾನಿಲಯದಿಂದ ದೇಸಿಕೋತ್ತಮ (1972),
  • 1967: ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್
  • ಪ್ರಾಣಿ ಮಿತ್ರ(1968), ಫ್ರೆಂಡ್ ಆಫ್ ಆಲ್ ಅನಿಮಲ್ಸ್ , (ಭಾರತದ ಪ್ರಾಣಿ ಸಂರಕ್ಷಣಾ ಸಮಿತಿ)
  • ರಾಣಿ ವಿಕ್ಟೋರಿಯಾ ಬೆಳ್ಳಿ ಪದಕ, ಪ್ರಾಣಿಗಳ ಮೇಲಿನ ಕ್ರೌರ್ಯ ಪ್ರತಿಬಂಧಕ್ಕಾಗಿ ರಾಯಲ್ ಸೊಸೈಟಿ, ಲಂಡನ್
  • ಕಾಳಿದಾಸ ಸಮ್ಮಾನ್ (1984), ಮಧ್ಯಪ್ರದೇಶ ಸರ್ಕಾರ
  • ಹೇಗ್ ನ ಪ್ರಾಣಿ ಸಂರಕ್ಷಣಾ ವಿಶ್ವ ಒಕ್ಕೂಟದಿಂದ ಗೌರವ ಪಾತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು
  • USA ಯ ವೇನ್ ಸ್ಟೇಟ್ ವಿಶ್ವವಿದ್ಯಾನಿಲಯ ದಿಂದ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು.
  • ಕೌಂಟಿ ಮತ್ತು ಲಾಸ್ ಏಂಜಲ್ಸ್ ನ ನಗರದಿಂದ ಸ್ಕ್ರೋಲ್ಸ್ ಆಫ್ ಹಾನರ್

ಇವನ್ನೂ ನೋಡಿ

[ಬದಲಾಯಿಸಿ]
  • ಭರತನಾಟ್ಯಮ್
  • ನೃತ್ಯದಲ್ಲಿ ಭಾರತೀಯ ಮಹಿಳೆಯರು

ಉಲ್ಲೇಖಗಳು

[ಬದಲಾಯಿಸಿ]
  1. "ಸೆಂಚ್ಯುರಿ ಸೆಲೆಬ್ರೇಷನ್, 2004". Archived from the original on 2016-03-30. Retrieved 2011-01-21.
  2. ದೇವದಾಸಿ ರಿವೈವಲಿಸ್ಟ್
  3. ಭರತನಾಟ್ಯ ರೀಬರ್ತ್
  4. "ಇಂಡಿಯಾ ಟುಡೇ". Archived from the original on 2006-05-09. Retrieved 2011-01-21.
  5. "Rukmini Devi Arundale: A life dedicated to Art". Rediff.com. March, 2004. {{cite web}}: Check date values in: |date= (help)
  6. "Biography at naatya.org". Archived from the original on 2016-03-30. Retrieved 2011-01-21.
  7. hindu.com/ 2001/03/02/ stories/ 0902033a.htm ದಿ ಹಿಂದು, 2001 ಮಾರ್ಚ್ 02
  8. ದಿ ಟ್ರಿಬ್ಯೂನ್, 2002 ಸೆಪ್ಟೆಂಬರ್ 22,
  9. "ರುಕ್ಮಿಣಿ ದೇವಿ ಬಯೋಗ್ರಫಿ ಅಟ್ thinkquest.org". Archived from the original on 2012-07-16. Retrieved 2011-01-21.
  10. ಕಲಾಕ್ಷೇತ್ರ ಅಂಡ್ ರುಕ್ಮಿಣಿ ಅಟ್ katinkahesselink.net
  11. ಪ್ರೊಫೈಲ್ ಅಟ್ sawnet.org
  12. ಪ್ರೊಫೈಲ್ ಅಟ್ nartaki.com
  13. "ಪರ್ಸನಾಲಟೀಸ್ ಅಟ್ chennaibest.com". Archived from the original on 2006-11-02. Retrieved 2011-01-21.
  14. livemint.com, 2007 ಮೇ 18
  15. "ನೋಟೆಡ್ ಸ್ಟೂಡೆಂಟ್ ಆಫ್ ಕಲಾಕ್ಷೇತ್ರ". Archived from the original on 2008-03-12. Retrieved 2011-01-21.
  16. [http:// bharatanatyam.co.uk/bharatanatyam.html ಭರತನಾಟ್ಯಂ]
  17. "ಭರತನಾಟ್ಯ ಅಟ್ indeembassyathens.gr". Archived from the original on 2008-04-16. Retrieved 2011-01-21.
  18. "ರುಕ್ಮಿಣಿ ದೇವಿ ಅಟ್ ಎನ್ಕಾರ್ಟ". Archived from the original on 2009-11-01. Retrieved 2011-01-21.
  19. "ದಿ ಹಿಂದೂ, 2003 ಜನವರಿ 27". Archived from the original on 2008-12-16. Retrieved 2011-01-21.
  20. "ದಿ ಹಿಂದೂ, 2003 ಮಾರ್ಚ್ 16". Archived from the original on 2008-12-16. Retrieved 2011-01-21.
  21. ದಿ ರೆಡಿಫ್, 2004 ಫೆಬ್ರವರಿ 27
  22. "ಗ್ರೇಟ್ ಇಂಡಿಯನ್ ಅಟ್ whereincity.com". Archived from the original on 2011-07-18. Retrieved 2011-01-21.
  23. ಇಂಡಿಯನ್ ಹೀರೋಸ್ ಆಫ್ ಐ ಲವ್ ಇಂಡಿಯಾ
  24. [http: //www.ivu.org/members/council/rukmini-devi-arundale.html ಪ್ರೊಫೈಲ್ ಅಟ್ ಇಂಟರ್ ನ್ಯಾಷನಲ್ ವೆಜಿಟೇರಿಯನ್ ಯೂನಿಯನ್ (IVU)]
  25. org/ hundredtamils/arundale.htm 100 ತಮಿಳ್ಸ್[ಶಾಶ್ವತವಾಗಿ ಮಡಿದ ಕೊಂಡಿ]
  26. "1993, ನವೆಂಬರ್ hinduismtoday.com". Archived from the original on 2008-03-12. Retrieved 2011-01-21.
  27. ಕಲಾಕ್ಷೇತ್ರ ಫೌಂಡೇಷನ್ ಆಕ್ಟ್ 1993 Archived 2010-02-15 ವೇಬ್ಯಾಕ್ ಮೆಷಿನ್ ನಲ್ಲಿ. ಮಿನಿಸ್ಟ್ರಿ ಆಫ್ ಲಾ ಅಂಡ್ ಜಸ್ಟೀಸ್.
  28. "chennaibest.com". Archived from the original on 2006-11-02. Retrieved 2011-01-21.
  29. "Another centenary celebration". ದಿ ಹಿಂದೂ. Jan 27, 2003. Archived from the original on ಡಿಸೆಂಬರ್ 16, 2008. Retrieved ಜನವರಿ 21, 2011.
  30. "A legend lives on... It was time to pay tribute to Rukmini Devi Arundale, the czarina of dance". The Hindu. Mar 04, 2004. Archived from the original on ಮೇ 8, 2005. Retrieved ಜನವರಿ 21, 2011. {{cite news}}: Check date values in: |date= (help)
  31. "Her spirit still reigns". ದಿ ಹಿಂದೂ. Feb 22, 2004. Archived from the original on ಜನವರಿ 3, 2013. Retrieved ಜನವರಿ 21, 2011.
  32. "Time to celebrate". ದಿ ಹಿಂದೂ. Feb 27, 2003. Archived from the original on ಆಗಸ್ಟ್ 29, 2004. Retrieved ಜನವರಿ 21, 2011.
  33. ಸೆಂಚ್ಯುರಿ ಸೆಲೆಬ್ರೇಷನ್ಸ್ nartaki.com

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಆರ್ಟ್ ಅಂಡ್ ಕಲ್ಚರ್ ಇನ್ ಇಂಡಿಯನ್ ಲೈಫ್ . ಕೇರಳ ವಿಶ್ವವಿದ್ಯಾನಿಲಯದ ಮುದ್ರಣಾಲಯ, ತ್ರಿವೆಂಡ್ರಂ 1975
  • ಶಾರದ, S.: ಕಲಾಕ್ಷೇತ್ರ-ರುಕ್ಷ್ಮಿಣಿ ದೇವಿ, ರೆಮಿನಿಸನ್ಸ್ . ಕಲಾ ಮಂದಿರಾ ಟ್ರಸ್ಟ್, ಮದ್ರಾಸ್ 1985
  • ಇಂಡಿಯಾಸ್ 50 ಮೋಸ್ಟ್ ಇಲ್ಯೂಸ್ಟ್ರಿಯಸ್ ವುಮೆನ್ ಇಂದ್ರಾ ಗುಪ್ತಾರವರಿಂದ ಐಕಾನ್ ಪಬ್ಲಿಕೇಷನ್ಸ್, 2003. ISBN 81-88086-19-3.
  • ಸೆಲೆಕ್ಷನ್ಸ್, ಸಮ್ ಸೆಲೆಕ್ಷನ್ ಸ್ಪೀಚಸ್ ಅಂಡ್ ರೈಟಿಂಗ್ಸ್ ಆಫ್ ರುಕ್ಮಿಣಿದೇವಿ ಅರುಂಡೇಲ್ . ಕಲಾಕ್ಷೇತ್ರ ಫೌಂಡೇಷನ್, ಚೆನ್ನೈ 2003.
  • ರುಕ್ಮಿಣಿದೇವಿ ಅರುಂಡೇಲ್ : ಬರ್ತ್ ಸೆಂಚ್ಯುರಿ ವಾಲ್ಯುಮ್, ಶಾಂಕುತಲಾ ರಮಣಿಯವರಿಂದ ಸಂಪಾದಿಸಲಾಗಿದೆ. ಚೆನ್ನೈ, ಕಲಾಕ್ಷೇತ್ರ ಫೌಂಡೇಷನ್, 2003 ,
  • ಕಲಾಕ್ಷೇತ್ರ ಫೌಂಡೇಷನ್ (Hrsg.): ಶ್ರದ್ಧಾಂಜಲಿ, ಬ್ರೀಫ್ ಪೆನ್ ಪೋಟ್ರೇಟ್ಸ್ ಆಫ್ ಗೆಲ್ಯಾಕ್ಸಿ ಆಫ್ ಗ್ರೇಟ್ ಪೀಪಲ್ ಹೂ ಲೈಡ್ ದಿ ಫೌಂಡೇಷನ್ಸ್ ಆಫ್ ಕಲಾಕ್ಷೇತ್ರ . ಕಲಾಕ್ಷೇತ್ರ ಫೌಂಡೇಷನ್, ಚೆನ್ನೈ 2004
  • ಪೋಟೋ ಬಯೋಗ್ರಫಿ ಆಫ್ ರುಕ್ಷ್ಮಿಣಿದೇವಿ, ಸುನಿಲ್ ಕೋಥಾರಿ. ಚೆನ್ನೈ, ದಿ ಕಲಾಕ್ಷೇತ್ರ ಫೌಂಡೇಷನ್, 2004 .
  • ಮೆದುರಿ, ಆವಂತಿ (Hrsg.): ರುಕ್ಮಿಣಿದೇವಿ ಅರುಂಡೇಲ್ (1904-1986), ಅ ವಿಷನರಿ ಆರ್ಕಿಟೆಕ್ಟ್ ಆಫ್ ಇಂಡಿಯನ್ ಕಲ್ಚರ್ ಅಂಡ್ ದಿ ಫರ್ಫಾರ್ಮಿಂಗ್ ಆರ್ಟ್ಸ್ . ಮೋತಿಲಾಲ್ ಬನಾರಸಿದಾಸ್, ದೆಹಲಿ 2005; ISBN 81-208-2740-6.
  • ಸ್ಯಾಮ್ ಸನ್ ಲೀಲಾ (2010). ರುಕ್ಮಿಣಿದೇವಿ: ಅ ಲೈಫ್ , ದೆಹಲಿ: ಪೆನ್ವಿನ್ ಬುಕ್ಸ್, ಭಾರತ, ISBN 0670082643

ಹೊರಗಿನ ಕೊಂಡಿಗಳು

[ಬದಲಾಯಿಸಿ]