ವಿಷಯಕ್ಕೆ ಹೋಗು

ದಾಸವಾಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಾಸವಾಳ
Hibiscus rosa-sinensis
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
Hibiscus

Species

Over 200 species

Synonyms

Bombycidendron Zoll. & Moritzi
Bombycodendron Hassk.
Brockmania W.Fitzg.
Pariti Adans.
Wilhelminia Hochr.[]

ದಾಸವಾಳ ಗಳು (pronounced /hɨˈbɪskəs/[] ಅಥವಾ /haɪˈbɪskəs/[]) ಮ್ಯಾಲೋ ಗಳ(ಕೆನ್ನೀಲಿ ಬಣ್ಣದ ಹೂವು ಬಿಡುವ ಕಾಡು ಜಾತಿಯ ಗಿಡಗಳ) ವರ್ಗಕ್ಕೆ ಸೇರಿದ ಮಾಲ್ವಸಿಯೇ ಜಾತಿಯ ಹೂಬಿಡುವ ಸಸ್ಯಗಳಾಗಿವೆ. ಇದು ಸಾಕಷ್ಟು ದೊಡ್ಡ ಸಸ್ಯವರ್ಗ ಹೊಂದಿದ್ದು, ಸುಮಾರು ೨೦೦–೨೨೦ರಷ್ಟು ಪ್ರಭೇದಗಳನ್ನು ಒಳಗೊಂಡಿದೆ. ಇದು ಜಗತ್ತಿನಾದ್ಯಂತ ಶಾಖದ ತಾಪಮಾನ, ಉಪೋಷ್ಣವಲಯ ಹಾಗು ಉಷ್ಣವಲಯ ಪ್ರದೇಶಗಳಲ್ಲಿನ ಸ್ಥಳೀಯ ಸಸ್ಯವಾಗಿದೆ. ಇದೇ ಜಾತಿಯ ಇತರ ಸಸ್ಯಗಳು ಸಾಮಾನ್ಯವಾಗಿ ತಮ್ಮ ಆಕರ್ಷಕ ಹೂವುಗಳಿಂದ ಗಮನ ಸೆಳೆಯುತ್ತವೆ. ಅಲ್ಲದೇ ಇವುಗಳು ಸಾಮಾನ್ಯವಾಗಿ ಹೈಬಿಸ್ಕಸ್ (ದಾಸವಾಳ), ಸೋರ್ರೆಲ್ , ಹಾಗು ಫ್ಲೋರ್ ಡೆ ಜಮೈಕಾ ಎಂದು ಕರೆಯಲ್ಪಡುತ್ತವೆ; ಅಥವಾ ಅಷ್ಟೇನೂ ಪರಿಚಿತವಲ್ಲದ ರೋಸ್ ಮ್ಯಾಲೋ ಎಂಬ ಹೆಸರಿನಿಂದ ಪರಿಚಿತವಾಗಿವೆ. ಈ ಜಾತಿಯು ವಾರ್ಷಿಕ ಹಾಗು ವರ್ಷವಿಡೀ ಬೆಳೆಯುವ ಶಾಶ್ವತ ಸಸ್ಯಗಳೆರಡನ್ನೂ ಒಳಗೊಂಡಿದೆ. ಜೊತೆಗೆ ದಟ್ಟವಾಗಿ ಬೆಳೆಯುವ ಪೊದೆಗಳು ಹಾಗು ಸಣ್ಣ ಮರಗಳನ್ನೂ ಸಹ ಹೊಂದಿದೆ. ಸಸ್ಯಕುಲದ ಹೆಸರು ಗ್ರೀಕ್ ನ ಪದ ἱβίσκος (ಹೈಬಿಸ್ಕೋಸ್ )ನಿಂದ ವ್ಯುತ್ಪತ್ತಿಯನ್ನು ಹೊಂದಿದೆ. ಈ ಹೆಸರನ್ನು, ಪೆಡಾನಿಯಸ್ ಡಿಯೋಸ್ಕೋರೈಡ್ಸ್(ಗಿಡಮೂಲಿಕೆಗಳ ಸಸ್ಯಗಳ ತಜ್ಞ ತನ್ನ ಕೃತಿಯಲ್ಲಿ) (ಸುಮಾರು. ೪೦-೯೦) ಅಲ್ಥಾಯಿಯ ಅಫೀಷಿನಾಲಿಸ್ ಗೆ ನೀಡಿದರು.[]

Hibiscus blooming time lapse

ವಿವರಣೆ

[ಬದಲಾಯಿಸಿ]

ಎಲೆಗಳು ಏಕಾಂತರವಾಗಿದ್ದು, ಸರಳ ರಚನೆಯಲ್ಲಿದ್ದು ಸಾಮಾನ್ಯವಾಗಿ ಹಲ್ಲಿನಾಕಾರ ಅಥವಾ ಹಾಳೆಗಳುಳ್ಳ ಅಂಚಿನ ಮಾದರಿಯ ಈಟಿಯ ತುದಿಯಂತೆ ಮೊನಚಾದ ಅಂಡಾಕೃತಿಯಲ್ಲಿರುತ್ತವೆ. ಹೂವುಗಳು ದೊಡ್ಡದಾಗಿ, ಆಕರ್ಷಕವಾಗಿ, ಕಹಳೆಯ ಮಾದರಿಯಲ್ಲಿರುತ್ತವೆ. ಜೊತೆಗೆ ಇದು ಐದು ಅಥವಾ ಹೆಚ್ಚಿನ ದಳಗಳನ್ನು ಹೊಂದಿರುತ್ತದೆ. ಇದು ಬಿಳಿ ಬಣ್ಣದಿಂದ ಹಿಡಿದು ಗುಲಾಬಿ, ಕೆಂಪು, ಕೇಸರಿ, ನೇರಳೆ ಅಥವಾ ಹಳದಿ ಬಣ್ಣಗಳನ್ನು ಹೊಂದಿರುವುದರ ಜೊತೆಗೆ ೪–೧೮ ಸೆಂಮೀ ಅಗಲವಾಗಿರುತ್ತದೆ. ಕೆಲವು ಜಾತಿಗಳಲ್ಲಿ ಹೂವಿನ ಬಣ್ಣವು, ಉದಾಹರಣೆಗೆ H.ಮುಟಬಿಲಿಸ್ ಹಾಗು H. ಟಿಲಿಯಸಿಯಸ್ ,ಗಳಲ್ಲಿನ ವರ್ಣಕೋಶವು ಅದರ ಆಯುಷ್ಯದ ಕಾಲಾಂತರದಲ್ಲಿ ಬದಲಾವಣೆ ಹೊಂದುತ್ತದೆ.[] ಇದರ ಹಣ್ಣು ಒಣಗಿದ ಐದು-ಹಾಲೆಯ ಕೋಶವಾಗಿರುತ್ತದೆ, ಇದರ ಪ್ರತಿ ಹಾಲೆಯಲ್ಲಿಯೂ ಹಲವಾರು ಬೀಜಗಳಿರುತ್ತವೆ, ಪಕ್ವವಾಗುವ ಹಂತದಲ್ಲಿ ಕೋಶಗಳು ವಿದಳನಗೊಂಡಾಗ(ಬಿರಿದಾಗ)ಬೀಜಗಳು ಬಿಡುಗಡೆಯಾಗುತ್ತವೆ.

ಉಪಯೋಗಗಳು

[ಬದಲಾಯಿಸಿ]
ಹವಾಯಿಯಲ್ಲಿ ಕಂಡುಬಂದ ಒಂದು ಬಿಳಿ ಹೈಬಿಸ್ಕಸ್ ಅರ್ನೊಟ್ಟಿಯಾನಸ್.
ವಸಂತ ಋತುವಿನ ಉತ್ತರಾರ್ಧದಲ್ಲಿ, ಭಾರತದ ಚೆನ್ನೈನಲ್ಲಿ ಕಂಡುಬಂದ ಒಂದು ಕೆಂಪು ದಾಸವಾಳ ಹೂವು(ಹೈಬಿಸ್ಕಸ್ ರೋಸಾ-ಸಿನೆನ್ಸಿಸ್).

ಹಲವು ಜಾತಿಗಳನ್ನು ಅವುಗಳ ಆಕರ್ಷಕ ಹೂವುಗಳಿಗಾಗಿ ಬೆಳೆಯಲಾಗುತ್ತದೆ, ಅಥವಾ ಪೊದೆಗಳನ್ನು ಭೂದೃಶ್ಯಕ್ಕಾಗಿ ಬಳಸಲಾಗುತ್ತದೆ. ಹಲವು ಜಾತಿಗಳನ್ನು, ಚಿಟ್ಟೆಗಳು ಹಾಗು ದುಂಬಿಗಳನ್ನು ಆಕರ್ಷಿಸಲು ಬಳಸಲಾಗುತ್ತದೆ.[] ಹಲವು ಹರ್ಬಲ್ ಚಹಾಗಳಲ್ಲಿ ದಾಸವಾಳವೂ ಸಹ ಒಂದು ಪ್ರಮುಖ ಘಟಕಾಂಶವಾಗಿದೆ.

ಕೆನಾಫ್(ಹೈಬಿಸ್ಕಸ್ ಕ್ಯಾನ್ನಬಿನಸ್ ) ಎಂದು ಕರೆಯಲ್ಪಡುವ ದಾಸವಾಳ ದ ಒಂದು ಜಾತಿಯನ್ನು ಕಾಗದ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಮತ್ತೊಂದು ಜಾತಿ,ರೋಸೆಲ್ಲೆಯನ್ನು(ಹೈಬಿಸ್ಕಸ್ ಸಬ್ದರಿಫ್ಫಾ ) ತರಕಾರಿಯಾಗಿ ಬಳಸಲಾಗುತ್ತದೆ. ಅದಲ್ಲದೇ ವಿಶೇಷವಾಗಿ ಕೆರೇಬಿಯನ್ ನಲ್ಲಿ ಮೂಲಿಕೆ,ಹರ್ಬಲ್ ಚಹಾ ಹಾಗು ಜಾಮ್ ಗಳನ್ನು(ಮುರಬ್ಬ) ತಯಾರಿಸಲು ಬಳಸುತ್ತಾರೆ.

ದಾಸವಾಳ. ಕೊಡಗಿನ ಚೆಟ್ಟಳ್ಳಿಯಲ್ಲಿ ಕಂಡಂತೆ.

ಜಮೈಕಾ ಹಾಗು ಕೆರೇಬಿಯನ್ ನ ಇತರ ಹಲವು ದ್ವೀಪಗಳಲ್ಲಿ, ಇದರಿಂದ ತಯಾರಾದ ಪೇಯವನ್ನು ಸೋರ್ರೆಲ್ ಎಂದು ಕರೆಯುತ್ತಾರೆ.(ಹೈಬಿಸ್ಕಸ್ ಸಬ್ದರಿಫ್ಫಾ , ಇದನ್ನು ರುಮೆಕ್ಸ್ ಅಸೆಟೋಸ ದೊಂದಿಗೆ ತಪ್ಪಾಗಿ ಬಳಸಿ ಗೊಂದಲಕ್ಕೀಡಾಗಬಾರದು. ಈ ಜಾತಿಗಳೂ ಸಹ ಸೋರ್ರೆಲ್ ಎಂಬ ಸಮಾನಾರ್ಥಕ ಹೆಸರನ್ನು ಹಂಚಿಕೊಳ್ಳುತ್ತವೆ.) ಅಲ್ಲದೇ ಇದು ಕ್ರಿಸ್ಮಸ್ ಸಮಯದಲ್ಲಿ ಹೆಚ್ಚು ಜನಪ್ರಿಯವಾಗುತ್ತದೆಂದು ಪರಿಗಣಿಸಲಾಗಿದೆ. ಇದನ್ನು ಶೈತ್ಯೀಕರಿಸಿ ನೀಡಲಾಗುತ್ತದೆ; ಹಾಗು ಇತರ ಮೂಲಿಕೆಗಳು, ಬೇರುಗಳು ಹಾಗು ಸಂಬಾರ ಮಸಾಲೆಗಳೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಇದನ್ನು ಕಬ್ಬಿನ ಹಾಲಿನೊಂದಿಗೆ ಪೂರಕವಾಗಿ ಸಿಹಿಗೊಳಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಜಮೈಕನ್ ರಮ್ ಅಥವಾ ವೈನ್ ನೊಂದಿಗೆ ಮಿಶ್ರಣ ಮಾಡಿ ನೀಡಲಾಗುತ್ತದೆ. ಆದರೆ ಇದು ಯಾವುದೇ ಆಲ್ಕೋಹಾಲ್ ನೊಂದಿಗೆ ಮಿಶ್ರಣವಾಗಿ ಬಳಸದಿದ್ದರೂ ಸಹ ಬಹಳ ಚೇತೋಹಾರಿಯಾಗಿರುತ್ತದೆ. ರೋಸೆಲ್ಲೇಯನ್ನು ಗಾಜುಲೇಪಿತ ದೊಡ್ಡ ಪಾತ್ರೆಯಲ್ಲಿ ಸಾಮಾನ್ಯವಾಗಿ ಬೇಯಿಸಲಾಗುತ್ತದೆ. ಏಕೆಂದರೆ ಹೆಚ್ಚಿನ ವೆಸ್ಟ್ ಇಂಡಿಯನ್ನರು ಅಲ್ಯೂಮಿನಿಯಂ, ಸ್ಟೀಲ್ ಅಥವಾ ತಾಮ್ರದ ಮಡಕೆಗಳಲ್ಲಿ ಇದನ್ನು ಬೇಯಿಸಿದರೆ ನೈಸರ್ಗಿಕ ಖನಿಜಗಳು ಹಾಗು ವಿಟಮಿನ್ ಗಳು ನಾಶವಾಗುತ್ತವೆಂದು ನಂಬುತ್ತಾರೆ. ದೊಡ್ಡ ಪ್ರಮಾಣದಲ್ಲಿ ಈ ಹೂವನ್ನು ಗಟ್ಟಿಯಾದ, ಗಾಢ ಕೆಂಪು ವರ್ಣದ ಚಹಾ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಚಹಾ ಒಂದು ನೈಸರ್ಗಿಕ ಮೂತ್ರವರ್ಧಕವೆಂದು ಜನಪ್ರಿಯವಾಗಿದೆ. ಅಲ್ಲದೇ ಇದು ವಿಟಮಿನ್ C ಹಾಗು ಖನಿಜಗಳನ್ನು ಒಳಗೊಂಡಿದೆ. ಇದನ್ನು ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಒಂದು ಸೌಮ್ಯ ಔಷಧವಾಗಿ ಬಳಸಲಾಗುತ್ತದೆ.

ವಿಶ್ವದಾದ್ಯಂತ, ಇದರಿಂದ ತಯಾರಾದ ಚಹಾವನ್ನು ಬಿಸಿಯಾಗಿ ಅಥವಾ ತಂಪಾಗಿ ಸೇವಿಸಲಾಗುತ್ತದೆ. ಇದು ಪಶ್ಚಿಮ ಆಫ್ರಿಕಾದಲ್ಲಿ ಬಿಸ್ಸಪ್ ಎಂದು, ಈಜಿಪ್ಟ್ ಹಾಗು ಸುಡಾನ್ ನಲ್ಲಿ ಕರ್ಕಾಡೆ ಎಂದು, ಮೆಕ್ಸಿಕೋ ನಲ್ಲಿ ಫ್ಲೋರ್ ಡೆ ಜಮೈಕಾ ಎಂದು, ಭಾರತ ಹಾಗು ಬ್ರೆಜಿಲ್ ನಲ್ಲಿ ಗೊಂಗುರ(ಸೊಪ್ಪು) ಎಂಬ ಹೆಸರುಗಳಿಂದ ಪರಿಚಿತವಾಗಿದೆ. ಕೆಲವರು ಇದನ್ನು ರೋಸೆಲ್ಲೇ ಎಂದು ಉಲ್ಲೇಖಿಸುತ್ತಾರೆ, ಇದು ದಾಸವಾಳ ಹೂವಿನ ಒಂದು ಸಾಮಾನ್ಯ ಹೆಸರಾಗಿದೆ.

ಮೆಕ್ಸಿಕೋನಲ್ಲಿ, ಇದು ತನ್ನ ಬಣ್ಣ, ಕಟುವಾಸನೆ ಹಾಗು ಸೌಮ್ಯವಾದ ಸ್ವಾದದಿಂದ ಪರಿಚಿತವಾಗಿದೆ; ಒಂದೊಮ್ಮೆ ಇದಕ್ಕೆ ಸಕ್ಕರೆ ಸೇರಿಸಿದರೆ, ಇದು ಹೆಚ್ಚು ಗಾಢವರ್ಣದ ಮೂಲಿಕೆ (ಹರ್ಬಲ್) ಹಾಗು ಬೆರಿಯಲ್ಲಿ(ಕ್ರಾನ್ ಬೆರಿ, ರಾಸ್ ಬೆರಿ, ಬ್ಲ್ಯೂ ಬೆರಿ, ಮುಂತಾದವು) ನೆನೆದ ಚಹಾದ ಮಾದರಿಯ ರುಚಿಯನ್ನು ನೀಡುತ್ತದೆ. ಆಹಾರಕ್ರಮ ಪರಿಪಾಲಕರು ಅಥವಾ ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿರುವವರು,ಸಾಮಾನ್ಯವಾಗಿ ಸಕ್ಕರೆಯನ್ನು ಸೇರಿಸದೆಯೇ ಬಳಸುತ್ತಾರೆ.ಆದರೆ ಪ್ರಯೋಜನಕಾರಿಯಾಗುವ ಅಂಶಗಳಿಗೆ ಹಾಗು ನೈಸರ್ಗಿಕ ಮೂತ್ರವರ್ಧನೆಗಾಗಿ ಇದನ್ನು ಸೇವಿಸುತ್ತಾರೆ.

ಕಾಂಬೋಡಿಯಾದಲ್ಲಿ, ಮೊದಲು ದಳಗಳನ್ನು ಬಿಸಿನೀರಿನಲ್ಲಿ ನೆನೆಸಿ, ದಳಗಳಿಂದ ಅದರ ಬಣ್ಣವು ಬೇರ್ಪಡುವ ತನಕ ಕುದಿಸಲಾಗುತ್ತದೆ. ನಂತರ ಇದಕ್ಕೆ ನಿಂಬೆ ರಸ,(ಇದರಿಂದ ಪೇಯವು ಗಾಢ ಕಂದು/ ಕೆಂಪು ಬಣ್ಣದಿಂದ ಗಾಢ ಕೆಂಪು ಬಣ್ಣಕ್ಕೆ ತಿರುಗುತ್ತದೆ), ಸಿಹಿಕಾರಕಗಳು(ಸಕ್ಕರೆ/ಜೇನುತುಪ್ಪ) ಹಾಗು ಅಂತಿಮವಾಗಿ ತಣ್ಣೀರು/ಐಸ್ ಕ್ಯೂಬ್ ಗಳನ್ನು ಸೇರಿಸಿ ತಂಪು ಪಾನೀಯವನ್ನು ತಯಾರಿಸಲಾಗುತ್ತದೆ.

ದಾಸವಾಳದ ಕೆಲ ನಿರ್ದಿಷ್ಟ ಜಾತಿಗಳು ಆಹಾರಕ್ಕಾಗಿ ಬಳಸುವ ಬಣ್ಣದ ಒಂದು ನೈಸರ್ಗಿಕ ಆಧಾರವಾಗಿ ವ್ಯಾಪಕವಾಗಿ ಉಪಯೋಗಿಸಲ್ಪಡುತ್ತಿವೆ. (E೧೬೩)[ಸಾಕ್ಷ್ಯಾಧಾರ ಬೇಕಾಗಿದೆ], ಹಾಗು ಕೆಂಪು ಬಣ್ಣದ ಬದಲಿ ಬಣ್ಣವಾಗಿ ಬಳಕೆಯಾಗುತ್ತಿದೆ.Red #೩ / E೧೨೭[ಸಾಕ್ಷ್ಯಾಧಾರ ಬೇಕಾಗಿದೆ].

ದಾಸವಾಳ ದ ಜಾತಿಗಳನ್ನು ಆಹಾರ ಸಸ್ಯಗಳಾಗಿ ಕೆಲವು ಲೆಪಿಡೋಪ್ಟೆರ ಜಾತಿಯ ಲಾರ್ವಿಗಳು(ಮರಿಹುಳಗಳು), ಇದರಲ್ಲಿ ಚಿಯೋನೋಡೆಸ್ ಹೈಬಿಸ್ಸೆಲ್ಲ , ಹೈಪರ್ಕೊಂಪೆ ಹಂಬ್ಲೆಟೋನಿ , ಜಾಯಿಕಾಯಿ ಮರದಲ್ಲಿರುವ ಕೀಟ ಹಾಗು ಟರ್ನಿಪ್ ಕೀಟಗಳು ಸೇರಿವೆ.

ಹಿಂದೂ ಧಾರ್ಮಿಕ ಆರಾಧನೆಯಲ್ಲಿ ದಾಸವಾಳವನ್ನು ಕಾಳಿ ದೇವತೆ ಹಾಗು ಅಧಿದೇವತೆ ಗಣೇಶ ದೇವರ ಪೂಜೆಯಲ್ಲಿ ಅರ್ಪಿಸಲಾಗುತ್ತದೆ.

ಹೈಬಿಸ್ಕಸ್ ರೋಸಾ-ಸಿನೆನ್ಸಿಸ್ , ಚೈನೀಸ್ ಗಿಡಮೂಲಿಕೆ ಶಾಸ್ತ್ರದ ಪ್ರಕಾರ ಹಲವಾರು ಔಷಧೀಯ ಗುಣಗಳಿಂದಾಗಿ ಪ್ರಯೋಜನ ಪಡೆದಿದೆಯೆಂದು ಇದನ್ನು ಪರಿಗಣಿಸಲಾಗುತ್ತದೆ.[]

ದಾಸವಾಳದ ತೊಗಟೆಯು ಬಲಯುತ ನಾರಿನ ಹುರಿಗಳನ್ನು ಹೊಂದಿರುತ್ತದೆ. ಜೈವಿಕ ಪದಾರ್ಥವು (ಕಳಿತು)ನಶಿಸಿಹೋಗುವವರೆಗೂ ಸಮುದ್ರದೊಳಗೆ ಇದರ ತೊಗಟೆಯನ್ನು ಸುಲಿದು ನೆನಸಿಡುವ ಮೂಲಕ ಇದನ್ನು ಪಡೆಯಬಹುದಾಗಿದೆ. ಪಾಲಿನೇಶಿಯಾದಲ್ಲಿ(ಫ್ರೆಂಚ್) ಈ ನಾರುಗಳನ್ನು(ಫೌ, ಪುರೌ) ಹುಲ್ಲಿನ ಲಂಗಗಳನ್ನು(ನಿಲುವಂಗಿ) ತಯಾರಿಸಲು ಬಳಸಲಾಗುತ್ತದೆ. ಇವುಗಳಿಂದ ಕೇಶ ಕುಲಾವಿ ಅಥವಾ ಕೃತಕ ತಲೆಗೂದಲನ್ನೂ ಸಹ ತಯಾರಿಸಬಹುದಾಗಿದೆ.

ದಾಸವಾಳ, ಅದರಲ್ಲೂ ವಿಶೇಷವಾಗಿ ಬಿಳಿ ದಾಸವಾಳ ಹಾಗು ಕೆಂಪು ದಾಸವಾಳ(ಹೈಬಿಸ್ಕಸ್ ರೋಸಾ-ಸಿನೆನ್ಸಿಸ್ ), ಭಾರತೀಯ ಸಾಂಪ್ರದಾಯಿಕ ಔಷಧ ವಿಧಾನವಾಗಿರುವ ಆಯುರ್ವೇದದಲ್ಲಿ ಔಷಧೀಯ ಗುಣಗಳನ್ನು ಹೊಂದಿದೆಯೆಂದು ಪರಿಗಣಿಸಲಾಗಿದೆ. ಬೇರುಗಳಲ್ಲಿರುವ ಹಲವಾರು ಔಷಧೀಯ ಗುಣದ ಮಿಶ್ರಣಗಳನ್ನು ಕೆಮ್ಮಿನಂತಹ ಹಲವು ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆಂದು ನಂಬಲಾಗಿದೆ. ಇತರ ಪದಾರ್ಥಗಳೊಂದಿಗೆ ಹೂವುಗಳನ್ನು ಎಣ್ಣೆಯಲ್ಲಿ ಕುದಿಸಿ ಔಷಧಯುಕ್ತ ತೈಲವನ್ನು ತಯಾರಿಸಲಾಗುತ್ತದೆ. ಇದನ್ನು ನೆರೆಗೂದಲು ಹಾಗು ಕೂದಲುದುರುವಿಕೆ ತಡೆಗಟ್ಟಲು ಬಳಸಲಾಗುತ್ತದೆ. ಸ್ವಲ್ಪ ನೀರನ್ನು ಬಳಸಿಕೊಂಡು ಎಲೆ ಹಾಗು ಹೂಗಳನ್ನು ನುಣ್ಣಗೆ ಅರೆಯಲಾಗುತ್ತದೆ; ನಂತರ ನೊರೆನೊರೆಯಾಗಿ ಹೊರಬರುವ ಈ ಲೇಪವನ್ನು ತಲೆಗೂದಲದ ಚೊಕ್ಕಟಕ್ಕಾಗಿ ಶ್ಯಾಂಪು ಮತ್ತು ಕಂಡೀಶನರ್ ಆಗಿ ಬಳಸಲಾಗುತ್ತದೆ.

ಇತ್ತೀಚಿನ ೨೦೦೮ರ USDAದ ಒಂದು ಅಧ್ಯಯನವು, ದಾಸವಾಳದ ಚಹಾ ಸೇವನೆಯಿಂದ ರಕ್ತದೊತ್ತಡ,ಪ್ರಿ-ಹೈಪರ್ಟೆನ್ಸಿವ್(ತೀವ್ರ ತಳಮಳ) ಹಾಗು ತೀಕ್ಷ್ಣವಲ್ಲದ ಅತ್ಯುದ್ವಿಗ್ನತೆಯನ್ನು ಹೊಂದಿರುವ ಪ್ರೌಢರಲ್ಲಿ ಅದರ ಪ್ರಮಾಣ ಕಡಿಮೆ ಮಾಡಿದ್ದನ್ನು ನಿರೂಪಿಸಿದೆ. ಪ್ರತಿನಿತ್ಯ ಇದರಿಂದ ತಯಾರಾದ ಮೂರು ಕಪ್ ಚಹಾ ಸೇವನೆಯಿಂದ ಅವರ ಹೃದಯ ಸಂಕೋಚನದ ರಕ್ತದೊತ್ತಡದಲ್ಲಿ ಸರಾಸರಿ ೮.೧ ಪಾಯಿಂಟ್ ಇಳಿಕೆಯಾಗಿದ್ದು ಕಂಡುಬಂದಿತು. ಇದು ಪ್ಲಸಿಬೋ(ರೋಗಿಯ ಮನಸ್ಸನ್ನು ಸಮಾಧಾನಪಡಿಸುವುದಕ್ಕೆ ನೀಡುವ, ಆದರೆ ದೈಹಿಕವಾಗಿ ಯಾವುದೇ ಪರಿಣಾಮ ಬೀರದ ಔಷಧ)ಪಾನೀಯವನ್ನು ಸೇವಿಸಿದ ವ್ಯಕ್ತಿಗಳಿಗೆ ಹೋಲಿಸಿದಾಗ ಅವರಲ್ಲಿ ಕೇವಲ ೧.೩ ಪಾಯಿಂಟ್ ಗಳಷ್ಟು ಇಳಿಕೆ ಕಂಡುಬಂದಿತು. ಅಧಿಕ ರಕ್ತದೊತ್ತಡ ಹೊಂದಿದ ವ್ಯಕ್ತಿಗಳ ಮೇಲೆ ನಡೆಸಲಾದ ಅಧ್ಯಯನದ ಪ್ರಕಾರ, (೧೨೯ ಅಥವಾ ಅದಕ್ಕೂ ಮೇಲ್ಪಟ್ಟು), ದಾಸವಾಳ ಚಹಾ ಸೇವಿಸಿದ ವ್ಯಕ್ತಿಗಳಲ್ಲಿ ಹೆಚ್ಚಿನ ಪ್ರತಿಕ್ರಿಯೆ ದೊರೆಯಿತು: ಅವರ ಹೃದಯಕ್ಕೆ ಸಂಭಂಧಿಸಿದ ಸಂಕೋಚನ ರಕ್ತದೊತ್ತಡವು ೧೩.೨ ಪಾಯಿಂಟ್ ಗಳಷ್ಟು ಇಳಿಕೆ ಕಂಡಿತು. ಈ ದತ್ತಾಂಶವು, ದಾಸವಾಳ ಚಹಾವನ್ನು ಆಹಾರಕ್ರಮದಲ್ಲಿ ಸೇರಿಸಿಕೊಂಡು ಸಿದ್ಧಪಡಿಸಿದ ಪ್ರಮಾಣದಲ್ಲಿ ಸೇವಿಸಿದಾಗ, ಇದು ರಕ್ತದೊತ್ತಡದ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಬಹುದು,ಎಂಬುದನ್ನು ಸೂಚಿಸಿತು. ಆದಾಗ್ಯೂ ಈ ವಿಷಯದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ[].

ಫಿಲಿಫೈನ್ಸ್ ನಲ್ಲಿ, ಗುಮಮೆಲವನ್ನು (ದಾಸವಾಳದ ಸ್ಥಳೀಯ ಹೆಸರು) ಮಕ್ಕಳು ಇದರಿಂದ ಗುಳ್ಳೆಗಳನ್ನು ಮಾಡಿ ಅದರಿಂದ ಆಟ ಆಡುವ ಮೂಲಕ ಮೋಜು ಮಾಡುತ್ತಾರೆ. ಹೂವುಗಳು ಹಾಗು ಎಲೆಗಳನ್ನು, ಅದರಿಂದ ಅಂಟು ತುಂಬಿದ ರಸ ಹೊರಬರುವ ತನಕವೂ ಅರೆಯಲಾಗುತ್ತದೆ. ಟೊಳ್ಳಾದ ಪರಂಗಿ ಕಾಂಡಗಳನ್ನು ಇದರಲ್ಲಿ ಮುಳುಗಿಸಲಾಗುತ್ತದೆ, ಹಾಗು ಗುಳ್ಳೆಗಳನ್ನು ಟೊಳ್ಳಾದ ಈ ಕಾಂಡದ ಮೂಲಕ ಊದುವ ಕೊಳವೆಗಳಾಗಿ ಬಳಸಲಾಗುತ್ತದೆ.

ಒಣಗಿದ ದಾಸವಾಳವು ತಿನ್ನಲು ಯೋಗ್ಯವಾಗಿರುತ್ತದೆ, ಹಾಗು ಇದು ಸಾಮಾನ್ಯವಾಗಿ ಮೆಕ್ಸಿಕೊನಲ್ಲಿ ಮಧುರ ಭಕ್ಷ್ಯವಾಗಿ ಬಳಕೆಯಾಗುತ್ತದೆ. ಇದಕ್ಕೆ ಸಕ್ಕರೆಯನ್ನು ಲೇಪಿಸಿ ಆಕರ್ಷಕವಾಗಿ ಖಾದ್ಯಾಲಂಕಾರ ಮಾಡಲಾಗುತ್ತದೆ.[]

ಕೆಂಪು ದಾಸವಾಳ ಹೂವನ್ನು ಸಾಂಪ್ರದಾಯಿಕವಾಗಿ ತಹಿತಿ ಜನಾಂಗದ ಮಹಿಳೆಯರು ಮುಡಿಯುತ್ತಾರೆ. ಒಂದು ಹೂವನ್ನು ಕಿವಿಯ ಹಿಂಬದಿಯಲ್ಲಿ ಸಿಕ್ಕಿಸಿಕೊಳ್ಳಲಾಗುತ್ತದೆ. ಇದನ್ನು ಧರಿಸಿದವರು ಮದುವೆಗೆ ತಯಾರೆಂಬ ಸಂಕೇತವಾಗುತ್ತದೆ.

ರಾಷ್ಟ್ರೀಯ ಚಿಹ್ನೆ

[ಬದಲಾಯಿಸಿ]

ಹೈಬಿಸ್ಕಸ್ ಸಿರಿಯಾಕಾಸ್ , ದಕ್ಷಿಣ ಕೊರಿಯದ ರಾಷ್ಟ್ರೀಯ ಹೂವಾಗಿದೆ.

ಹೈಬಿಸ್ಕಸ್ ರೋಸಾ-ಸಿನೆನ್ಸಿಸ್ , ಮಲೇಷಿಯಾದ ರಾಷ್ಟ್ರೀಯ ಹೂವಾಗಿದೆ.

ಜಾತಿಗಳು

[ಬದಲಾಯಿಸಿ]

ಸಮಶೀತೋಷ್ಣ ವಲಯಗಳಲ್ಲಿ, ಬಹುತೇಕ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುವ ಅಲಂಕಾರಿಕ ಜಾತಿಯೆಂದರೆ ಹೈಬಿಸ್ಕಸ್ ಸಿರಿಯಾಕಾಸ್ , ಇದು ಸಾಮಾನ್ಯವಾಗಿ ತೋಟದಲ್ಲಿ ಬೆಳೆವ ದಾಸವಾಳವಾಗಿದೆ. ಇದು ಕೆಲ ಪ್ರದೇಶಗಳಲ್ಲಿ "ರೋಸ್ ಆಫ್ ಆಲ್ದಿಯ" ಅಥವಾ "ರೋಸ್ ಆಫ್ ಶರೋನ್" ಎಂದು ಪರಿಚಿತವಾಗಿದೆ.(ಇದಕ್ಕೆ ಸಂಬಂಧಿಸದ ಹೈಪರಿಕಂ ಕ್ಯಾಲಿಸಿನಂ ನೊಂದಿಗೆ ತಪ್ಪಾಗಿ ಗ್ರಹಿಸಬಾರದು, ಇದನ್ನೂ ಸಹ "ರೋಸ್ ಆಫ್ ಶರೋನ್" ಎಂದು ಕರೆಯಲಾಗುತ್ತದೆ). ಉಷ್ಣವಲಯ ಹಾಗು ಉಪೋಷ್ಣವಲಯಗಳಲ್ಲಿ, ಚೈನೀಸ್ ದಾಸವಾಳ(H. ರೋಸಾ-ಸಿನೆನ್ಸಿಸ್ ), ತನ್ನ ಹಲವು ಆಕರ್ಷಕ ತಳಿಗಳೊಂದಿಗೆ, ಅತ್ಯಂತ ಜನಪ್ರಿಯ ದಾಸವಾಳವಾಗಿದೆ.

ಸುಮಾರು ೨೦೦-೨೨೦ ಪ್ರವರ್ಗ ಜಾತಿಗಳು ಪರಿಚಿತವಾಗಿವೆ, ಇದರಲ್ಲಿ:

ಛಾಯಾಂಕಣ

[ಬದಲಾಯಿಸಿ]

ಭಾರತದ,ಕರ್ನಾಟಕ ರಾಜ್ಯದ, ಶಿವಮೂಗ್ಗ ಜಿಲ್ಲೆಯ ಸಾಗರದಲ್ಲಿ ನಲ್ಲಿ ಕಂಡುಬರುವ ದಾಸವಾಳ ಹೂಗಳು

ಉಲ್ಲೇಖಗಳು

[ಬದಲಾಯಿಸಿ]
  1. "Hibiscus L." Germplasm Resources Information Network. United States Department of Agriculture. 2007-10-05. Archived from the original on 2010-05-28. Retrieved 2010-02-16.
  2. ಆಕ್ಸ್‌ಫರ್ಡ್ ಇಂಗ್ಲಿಷ್‌ ನಿಘಂಟು
  3. ಸನ್‌ಸೆಟ್‌ ವೆಸ್ಟರ್ನ್‌ ಗಾರ್ಡನ್‌ ಬುಕ್ ‌, ೧೯೯೫:೬೦೬–೬೦೭
  4. Lawton, Barbara Perry (2004). Hibiscus: Hardy and Tropical Plants for the Garden. Timber Press. p. 36. ISBN 9780881926545.
  5. Lee, David Webster (2007). Nature's Palette: the Science of Plant Color. University of Chicago Press. p. 183. ISBN 9780226470528.
  6. ಫ್ಲೋರಿಡಾಟ: ಚಿಟ್ಟೆಗಳನ್ನು ಆಕರ್ಷಿಸುವ ಸಸ್ಯಗಳು
  7. ಭವಿಷ್ಯದ ಸಸ್ಯಗಳು: ಹೈಬಿಸ್ಕಸ್ ರೋಸಾ-ಸಿನೆನ್ಸಿಸ್ . Archived 2018-01-01 ವೇಬ್ಯಾಕ್ ಮೆಷಿನ್ ನಲ್ಲಿ.(೦೭/೦೫/೨೦೦೯ರಲ್ಲಿ ಸಂಕಲನಗೊಂಡಿದೆ).
  8. ದಾಸವಾಳ ಚಹಾದ ಸೇವನೆಯಿಂದ ರಕ್ತದೊತ್ತಡವು ಕಡಿಮೆಯಾಗುತ್ತದೆಂದು ಅಧ್ಯಯನವು ರುಜುವಾತುಪಡಿಸಿದೆ. (೦೫/೧೦/೨೦೦೯ರಲ್ಲಿ ಸಂಕಲನಗೊಂಡಿದೆ.)
  9. ನೇಶನ್ಸ್ ರೆಸ್ಟೋರೆಂಟ್ ನ್ಯೂಸ್: ದಾಸವಾಳವು ಆಹಾರವಾಗಿ ಅಭಿವೃದ್ಧಿ ಹೊಂದುತ್ತಿದೆ, ಪೇಯದ ಅಂಶ.
  10. ಬಸ್ಸ್ಮನ್, R. W., ಮತ್ತಿತರರು (೨೦೦೬). ಸೆಕೆನನಿ ಕಣಿವೆಯ ಮಾಸೈ ಆಗಿ ಸಸ್ಯದ ಬಳಕೆ, ಮಸಾಯಿ ಮಾರ, ಕೀನ್ಯಾ. J ಎಥ್ನೋಬಿಯೋಲ್ ಎಥ್ನೋಮೆಡ್ ೨ ೨೨.

9.Hibiscus Plant

"https://kn.wikipedia.org/w/index.php?title=ದಾಸವಾಳ&oldid=1190709" ಇಂದ ಪಡೆಯಲ್ಪಟ್ಟಿದೆ