ಬಾರ್ಬಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Barbie
ಚಿತ್ರ:Barbie doll modern.jpg
Barbara 'Barbie' Millicent Roberts
ಮೊದಲು ಚಿತ್ರಣ March 9 1959
ಕರ್ತೃ Ruth Handler
Information
Nickname(s)Barbie
ವೃತ್ತಿSee: Barbie's careers
ಕುಟುಂಬSee: List of Barbie's friends and family

ಅಮೆರಿಕಾದ ಗೊಂಬೆ-ತಯಾರಿಕಾ ಕಂಪೆನಿ ಮಾಟೆಲ್ ಇಂಕ್. 1959ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ ಒಂದು ಫ್ಯಾಷನ್ ಬೊಂಬೆಯೇ ಬಾರ್ಬಿ . ಅಮೆರಿಕಾದ ಮಹಿಳಾ ಉದ್ಯಮಿ ರುತ್ ಹ್ಯಾಂಡ್ಲರ್ (1916-2002)ಬಿಲ್ಡ್ ಲಿಲ್ಲಿ ಎಂಬ ಜರ್ಮನ್‌ ಗೊಂಬೆಯಿಂದ ಸ್ಪೂರ್ತಿ ಪಡೆದು ಬಾರ್ಬಿಯನ್ನು ರೂಪಿಸಿದರು.ಐವತ್ತು ವರ್ಷಗಳಲ್ಲಿ ಗೊಂಬೆ ಮಾರುಕಟ್ಟೆಯಲ್ಲಿ ಹಲವು ವಿವಾದ ವ್ಯಾಜ್ಯಗಳನ್ನು ಹುಟ್ಟುಹಾಕುತ್ತಲೇ ಟೀಕೆಗೆ ಒಳಗಾಗುತ್ತಲೇ ಬೆಳೆಯಿತು ಬಾರ್ಬಿ ಹಾಗೂ ಆಕೆಯ ಜೀವನ ಶೈಲಿ. ಇತ್ತೀಚಿನ ದಿನಗಳಲ್ಲಿ ಬಾರ್ಬಿಗೆ ಪ್ರತಿಸ್ಪರ್ಧಿಯಾಗಿ ಬ್ರಾಜ್ಸರಣಿಯ ಗೊಂಬೆಗಳು ಹುಟ್ಟಿಕೊಂಡಿವೆ.

ಇತಿಹಾಸ[ಬದಲಾಯಿಸಿ]

ತಮ್ಮ ಮಗಳು ಬಾರ್ಬರಾ ಕಾಗದದ ಬೊಂಬೆಗಳಿಗೆ ದೊಡ್ಡವರ ಪಾತ್ರ ನೀಡಿ ಆಟ ಆಡುತ್ತ ಖುಷಿ ಪಡುತ್ತಿರುವುದನ್ನು ರುತ್ ಹ್ಯಾಂಡ್ಲರ್ ಗಮನಿಸಿದರು. ಆಗೆಲ್ಲ ಮಕ್ಕಳ ಗೊಂಬೆಗಳು ನವಜಾತ ಶಿಶುವಿನ ಪ್ರತಿನಿಧಿಗಳಾಗಿದ್ದವು. ಗೊಂಬೆ ಮಾರುಕಟ್ಟೆಯಲ್ಲಿ ಇಂಥ ಕಂದರ ಇದ್ದುದನ್ನು ಗಮನಿಸಿದ ಹ್ಯಾಂಡ್ಲರ್ ತಮ್ಮ ಗಂಡ ಹಾಗೂ ಮಾಟೆಲ್ ಗೊಂಬೆ ಕಂಪೆನಿಯ ಸಹ ಸಂಸ್ಥಾಪಕ ಎಲಿಯಟ್ ಅವರಿಗೆ ದೊಡ್ಡವರ ದೇಹ ಹೊಂದಿದ ಗೊಂಬೆ ತಯಾರಿಸುವಂತೆ ತಿಳಿಸಿದರು. ಆದರೆ ಆತ ಕೂಡ ಮಾಟೆಲ್‌ನ ನಿರ್ದೇಶಕರಂತೆ ಈ ಬಗ್ಗೆ ಉತ್ಸಾಹ ತೋರಲಿಲ್ಲ. 1956ರಲ್ಲಿ ತಮ್ಮ ಮಕ್ಕಳಾದ ಬಾರ್ಬರಾ ಮತ್ತು ಕೆನೆತ್ ಅವರೊಂದಿಗೆ ಯೂರೋಪ್ ಪ್ರವಾಸ ಕೈಗೊಂಡ ರುತ್ ಹ್ಯಾಂಡ್ಲರ್ ಜರ್ಮನ್ ಗೊಂಬೆ ಬಿಲ್ವ್ ಲಿಲಿಯ ಬಗ್ಗೆ ಅರಿತರು.[೧] ಹ್ಯಾಂಡ್ಲರ್ ಮನಸ್ಸಿನಲ್ಲಿದ್ದ ದೊಡ್ಡ-ವಯಸ್ಸಿನ ಗೊಂಬೆಯಂತೆಯೇ ಇದ್ದುದನ್ನು ಕಂಡ ಹ್ಯಾಂಡ್ಲರ್ ಮೂರು ಗೊಂಬೆಗಳನ್ನು ಖರೀದಿಸಿದರು. ಅದರಲ್ಲಿ ಒಂದನ್ನು ತಮ್ಮ ಮಗಳಿಗೆ ಕೊಟ್ಟ ಆಕೆ ಉಳಿದವನ್ನು ಮಾಟೆಲ್ ಕಂಪೆನಿಗಾಗಿ ಕೊಂಡೊಯ್ದರು.ರೈನ್‌ಹರ್ಡ್ ಬ್ಯೂತಿನ್ ವೃತ್ತಪತ್ರಿಕೆ ಡೈ ಬಿಲ್ಡ್ ಜೈತುಂಗ್‌ ಗಾಗಿ ಬರೆದ ಕಾಮಿಕ್ ಸರಣಿ ಲಿಲಿ ಗೊಂಬೆಯ ಸೃಷ್ಟಿಗೆ ಪ್ರೇರಣೆ ನೀಡಿತ್ತು. ಲಿಲಿ ತನ್ನ ಆಕಾಂಕ್ಷೆಗಳನ್ನರಿತ ಒಬ್ಬ ವೃತ್ತಿಪರ ಹೆಣ್ಣಾಗಿದ್ದಳು ಮತ್ತು ತನಗೆ ಬೇಕಾದ್ದನ್ನು ಪಡೆಯಲು ಪುರುಷರನ್ನು ಬಳಸಿಕೊಳ್ಳಲೂ ಆಕೆ ಹಿಂಜರಿಯುತ್ತಿರಲಿಲ್ಲ. 1955ರಲ್ಲಿ ಲಿಲ್ಲಿ ಗೊಂಬೆ ಪ್ರಥಮ ಬಾರಿಗೆ ಜರ್ಮನಿಯಲ್ಲಿ ಮಾರಾಟವಾಯಿತು.ಮೊದಲು ದೊಡ್ಡವರೇ ಅದನ್ನು ಹೆಚ್ಚಾಗಿ ಕೊಂಡರೂ ಮಕ್ಕಳ ಮನಗೆಲ್ಲುವಲ್ಲಿ ಅದು ಯಶಸ್ವಿಯಾಯಿತು. ಆಕೆಗೆ ತೊಡಿಸುವ ಉಡುಪುಗಳು ಪ್ರತ್ಯೇಕವಾಗಿ ಲಭ್ಯ ಇದ್ದವು. ಅಮೆರಿಕಕ್ಕೆ ಹಿಂತಿರುಗಿದ ಹ್ಯಾಂಡ್ಲರ್ ಎಂಜಿನಿಯರ್ ಜಾಕ್ ರ್ಯಾನ್) ಅವರ ಸಹಾಯ ಪಡೆದು ಹೊಸ ಗೊಂಬೆ ತಯಾರಿಸಿ ಅದಕ್ಕೆ ತಮ್ಮ ಮಗಳು ಬಾರ್ಬರಾ ಹೆಸರನ್ನು ಹೋಲುವಂತೆ ಬಾರ್ಬಿ ಎಂಬ ಹೆಸರಿಟ್ಟರು. 9 ಮಾರ್ಚ್ , 1959ರಂದು ನ್ಯೂಯಾರ್ಕ್‌ನಲ್ಲಿ ನಡೆದ ಅಮೆರಿಕ ಅಂತರರಾಷ್ಟ್ರೀಯ ಗೊಂಬೆ ಮೇಳದಲ್ಲಿ ಈ ಗೊಂಬೆ ಮೊದಲ ಪ್ರದರ್ಶನ ಕಂಡಿತು. ಈ ದಿನದಂದೇ ಬಾರ್ಬಿಯ ಅಧಿಕೃತ ಹುಟ್ಟುಹಬ್ಬ ಆಚರಿಸಲಾಗುತ್ತಿದೆ.1964ರಲ್ಲಿ ಮಾಟೆಲ್ ಬಿಲ್ಡ್ ಲಿಲ್ಲಿ ಗೊಂಬೆ ಯ ಎಲ್ಲ ಹಕ್ಕುಗಳನ್ನು ಖರೀದಿಸಿ ನಂತರ ಅದರ ಉತ್ಪಾದನೆ ಸ್ಥಗಿತಗೊಳಿಸಲಾಯಿತು.ಮೊದಲ ಬಾರ್ಬಿ ಗೊಂಬೆಗೆ ಕಪ್ಪು ಬಿಳುಪು ಜೀಬ್ರಾ ಪಟ್ಟಿಗಳಿರುವ ಈಜುಡುಗೆ ತೊಡಿಸಿ ಜುಟ್ಟು ಕಟ್ಟಿದಂತೆ ಅಲಂಕರಿಸಲಾಗಿತ್ತು.ಹೊಂಬಣ್ಣ ಅಥವಾ ಕಂದು ಗೌರವರ್ಣದ ಜುಟ್ಟು ಕಟ್ಟಿಕೊಂಡ ಗೊಂಬೆಗಳು ಮಾರುಕಟ್ಟೆ ಯಲ್ಲಿ ಲಭ್ಯ ಇದ್ದವು. ಮಾಟೆಲ್ ವಸ್ತ್ರ ವಿನ್ಯಾಸಕ ಚಾರ್ಲಟ್ ಜಾನ್ಸನ್ ಅವರು ರೂಪಿಸಿದ ಉಡುಪುಗಳನ್ನು ಧರಿಸಿದ ಗೊಂಬೆಯನ್ನು "ಹದಿ ಹರೆಯದ ಫ್ಯಾಷನ್ ರೂಪದರ್ಶಿ" ಎಂದು ಬಿಂಬಿಸಿ ಮಾರಲಾಯಿತು.ಜಪಾನ್‌ಗುಡಿ ಕಾರ್ಮಿಕರುಕೈಯಲ್ಲಿ ಹೊಲಿದ ವಸ್ತ್ರಗಳನ್ನು ಧರಿಸುವ ಮೂಲಕ ಮೊದಲ ಬಾರ್ಬಿ ಗೊಂಬೆಗಳು ಜಪಾನ್‌ನಲ್ಲಿ ಮಾರಾಟವಾದವು. ಮೊದಲ ವರ್ಷ ಸುಮಾರು 350,000 ಬಾರ್ಬಿ ಗೊಂಬೆಗಳು ಮಾರಾಟವಾದವು. ವಯಸ್ಕ ರೀತಿಯ ಪೋಷಾಕು ಬಾರ್ಬಿಗೆ ಅಗತ್ಯ ಎಂದು ತಿಳಿದಿದ್ದ ಹ್ಯಾಂಡ್ಲರ್ ಅವರಿಗೆ ಮೊದಲ ಮಾರುಕಟ್ಟೆ ಸಂಶೋಧನೆಯಲ್ಲಿ ಗೊಂಬೆಯ ಉಬ್ಬಿದ ಎದೆಭಾಗದ ಬಗ್ಗೆ ಪೋಷಕರು ಅಸಂತೃಪ್ತಿ ಹೊಂದಿದ್ದಾರೆ ಎಂದು ತಿಳಿದು ಬಂತು. ಬಾರ್ಬಿಯ ಚಹರೆಯನ್ನು ಅನೇಕ ಬಾರಿ ಬದಲಾಯಿಸಲಾಗಿದ್ದು 1971ರಲ್ಲಿ ಆಕೆಯ ಕಣ್ಣುಗಳನ್ನು ವಾರೆನೋಟಕ್ಕೆ ಬದಲಾಗಿ ನೇರವಾಗಿ ನೋಡುವಂತೆ ಗಮನಾರ್ಹ ಮಾರ್ಪಾಡು ಮಾಡಲಾಯಿತು.ಟೆಲಿವಿಷನ್ ಜಾಹೀರಾತು ಬಳಸಿ ಮಾರುಕಟ್ಟೆ ತಂತ್ರದಲ್ಲಿ ಯಶಸ್ವಿಯಾದ ಮೊದಲ ಗೊಂಬೆ ಬಾರ್ಬಿಯಾಗಿದ್ದು ನಂತರ ಬಂದ ಗೊಂಬೆಗಳು ವ್ಯಾಪಕವಾಗಿ ಈ ತಂತ್ರವನ್ನು ಅನುಸರಿಸಿದವು. 150 ದೇಶಗಳಲ್ಲಿ ಈವರೆಗೆ ೧೦೦ ಕೋಟಿ ಬಾರ್ಬಿ ಗೊಂಬೆಗಳು ಮಾರಾಟವಾಗಿದ್ದು ಮಾಟೆಲ್ ಕಂಪೆನಿ ಹೇಳಿಕೊಂಡಿರುವಂತೆ ಪ್ರತಿ ಸೆಕೆಂಡಿಗೆ ಮೂರು ಬಾರ್ಬಿ ಗೊಂಬೆಗಳು ಮಾರಾಟವಾಗುತ್ತವೆಯಂತೆ.[೨] 1/6 ಅಳತೆ ಅಥವಾ ಪ್ಲೇಸ್ಕೇಲ್ ಅಳತೆಯಂತೆ ಬಾರ್ಬಿಯ ಪ್ರಮಾಣಿಕೃತ ಗಾತ್ರವನ್ನು ನಿರ್ಧರಿಸಲಾಗಿದೆ.[೩] ಬಾರ್ಬಿ ಕೇವಲ ಗೊಂಬೆ ಹಾಗೂ ಅದರ ಉಡುಪಿನ ಮಾರಾಟಕ್ಕೆ ಸೀಮಿತವಾಗಿಲ್ಲ ಬಾರ್ಬಿ ಬ್ರಾಂಡ್‌ನ ಪುಸ್ತಕಗಳು, ಫ್ಯಾಷನ್ ವಸ್ತುಗಳು ಹಾಗೂ ವೀಡಿಯೊ ಗೇಮ್‌ಗಳು ಕೂಡ ಲಭ್ಯ ಇವೆ. ಬಾರ್ಬಿ ಅನೇಕ ಅನಿಮೇಷನ್ ಸರಣಿ ಚಿತ್ರಗಳಲ್ಲಿ ಭಾಗವಹಿಸಿದ್ದು 1999ರ ಟಾಯ್ ಸ್ಟೋರಿ 2 ಚಿತ್ರದಲ್ಲಿ ಅತಿಥಿ ನಟಿಯಾಗಿ ಕಾಣಿಸಿಕೊಂಡಿದ್ದಾಳೆ. ಬಾರ್ಬಿಯು ಸಂಸ್ಕೃತಿಯನ್ನು ಬಿಂಬಿಸುವ ಪ್ರತಿಮೆ ಯಾಯಿತು, ಮತ್ತು ಗೊಂಬೆ ಪ್ರಪಂಚದಲ್ಲಿ ಅತಿ ವಿರಳವಾಗಿ ಸಿಗುವಂತದ್ದು ಎಂದು ಗೌರವಿಸಲ್ಪಟ್ಟಿದೆ. 1974ರಲ್ಲಿ ನ್ಯೂಯಾರ್ಕ್ ಸಿಟಿಯ ಒಂದು ವಿಭಾಗವಾದ ಟೈಮ್ಸ್ ಸ್ಕ್ವೇರ್‌ಅನ್ನು ಒಂದು ವಾರದವರೆಗೆ ಬಾರ್ಬಿ ಬೊಲಿವರ್ಡ್ ಎಂದು ಮರುಹೆಸರಿಸಲಾಗಿತ್ತು. 1985ರಲ್ಲಿ ಕಲಾಕಾರ 0}ಆಂಡಿ ವರೊಲ್ ಬಾರ್ಬಿಯ ವರ್ಣಚಿತ್ರವನ್ನು ರಚಿಸಿದ್ದನು.[೪][೫]

ಜೀವನಚರಿತ್ರೆ/ಜೀವನವೃತ್ತಾಂತ[ಬದಲಾಯಿಸಿ]

ಬಾರ್ಬಿಯ ಪೂರ್ಣ ಹೆಸರು ಬಾರ್ಬರಾ ಮಿಲಿಸೆಂಟ್ ರಾಬರ್ಟ್ಸ್ . 1960ರಲ್ಲಿ 0}ರಾಂಡಮ್ ಹೌಸ್‌ ಎಂಬುವವರು ಪ್ರಕಟಿಸಿದ ಕಥೆಗಳ ಶ್ರೇಣಿಯಲ್ಲಿ, ಫಿಕ್ಷನಲ್‌ಟೌನ್ ಆಫ್ ವಿಲ್ಲೋಸ್, ವಿಸ್ಕೋನ್ಸಿನ್ ಎಂಬ ಊರಿನವರಾದ ಅವಳ ತಂದೆ ತಾಯಿಯ ಹೆಸರುಗಳು ಜಾರ್ಜ್ ಮತ್ತು ಮಾರ್ಗರೆಟ್ ರಾಬರ್ಟ್ಸ್ ಎಂದು ನಮೂದಿತವಾಗಿದೆ.[೬] ರಾಂಡಮ್ ಹೌಸ್ ಕಾದಂಬರಿಗಳಲ್ಲಿ, ಬಾರ್ಬಿಯು ವಿಲ್ಲೋಸ್ ಪ್ರೌಢಶಾಲೆಯಲ್ಲಿ ಕಲಿತಿರುವುದಾಗಿ, ಹಾಗೂ 1999ರಲ್ಲಿ ಗೋಲ್ಡನ್ ಬುಕ್ಸ್‌ ಪ್ರಕಾಶನದಿಂದ ಪ್ರಕಟವಾದ ಜನರೇಶನ್ ಗರ್ಲ್‌ ನಲ್ಲಿ ಬಾರ್ಬಿಯು ನ್ಯೂಯಾರ್ಕ್ ನಗರದ ಫಿಕ್ಷನಲ್ ಮ್ಯಾನ್‌ಹಾಟನ್ ಇಂಟರ್‌ನ್ಯಾಷನಲ್ ಪ್ರೌಢಶಾಲೆಯಲ್ಲಿ ಕಲಿತಿರುವುದಾಗಿಯೂ ನಮೂದಿತವಾಗಿದೆ (ಆದರೆ ಅವಳ ನಿಜ ಜೀವನದಲ್ಲಿ ಸ್ಟುವೆಸಂಟ್ ಪ್ರೌಢಶಾಲೆಯಲ್ಲಿ ಕಲಿತಿದ್ದಾಳೆ[೭]). ಅವಳು ತನ್ನ ಬಾಯ್‌ಫ್ರೆಂಡ್ ಕೆನ್ (ಕೆನ್ ಕಾರ್ಸನ್ )ನೊಂದಿಗೆ ರೊಮ್ಯಾಂಟಿಕ್ ಸಂಬಂಧವನ್ನು ಹೊಂದಿದ್ದಾಳೆ ಎಂಬುದು 1961ರಲ್ಲಿ ಹೊರಬಂದಿತು. 2004ರ ಫೆಬ್ರವರಿಯಲ್ಲಿ ಮಾಟೆಲ್‌ನಿಂದ ಹೊರಬಂದ ಒಂದು ಪತ್ರಿಕಾ ಪ್ರಕಟಣೆಯಲ್ಲಿ ಬಾರ್ಬಿ ಮತ್ತು ಕೆನ್ ಒಬ್ಬರಿಗೊಬ್ಬರು ದೂರವಾಗುವ ನಿರ್ಧಾರ ತೆಗೆದುಕೊಂಡಿರುವರೆಂದು ವರದಿಯಾಗಿತ್ತು, ಆದರೆ 2006ರ ಫೆಬ್ರವರಿಯಲ್ಲಿ ಮತ್ತೆ ಒಂದಾದರು[೮][೯]ಬೆಕ್ಕುಗಳು ಮತ್ತು ನಾಯಿಗಳು, ಕುದುರೆಗಳು, ಒಂದು ಪಾಂಡ, ಒಂದು ಸಿಂಹದ ಮರಿ, ಹಾಗೂ ಒಂದು ಝೀಬ್ರಾವು ಸೇರಿದಂತೆ ಸುಮಾರು ನಲವತ್ತು ಮುದ್ದು ಪ್ರಾಣಿಗಳನ್ನು ಬಾರ್ಬಿಯು ಹೊಂದಿದ್ಡಳು. ಬಾರ್ಬಿಯು ಪಿಂಕ್ ಕಾರ್ವೆಟ್ ಕನ್ವರ್ಟಿಬಲ್‌ಗಳು, ಟ್ರೈಲರ್‌ಗಳು ಮತ್ತು ಜೀಪ್‌ಗಳನ್ನೊಳಗೊಂಡ ಬೃಹತ್ ಶ್ರೇಣಿಯ ವಾಹನಗಳ ಒಡತಿಯಾಗಿದ್ದಳು ಅವಳು ಪೈಲಟ್ ಪರವಾನಗಿಯನ್ನೂ ಹೊಂದಿದ್ದಳು, ಹಾಗೂ ಫ್ಲೈಟ್ ಅಟೆಂಡೆಂಟ್‌ ಆಗಿ ಸೇವೆ ಸಲ್ಲಿಸುವುದಲ್ಲದೆ ಕಮರ್ಷಿಯಲ್ ಏರ್‌ಲೈನರ್ಸ್‌ಗಳನ್ನು ಸಹ ನಿಯಂತಿಸುತ್ತಿದ್ದಳು. ಬಾರ್ಬಿಯ ಉದ್ಯೋಗಗಳು, ಒಂದು ಹೆಣ್ಣು ಎಲ್ಲಾ ರೀತಿಯ ಪಾತ್ರಗಳನ್ನು ಜೀವನದಲ್ಲಿ ನಿರ್ವಹಿಸಬಲ್ಲಳೆಂಬುದನ್ನು ತೋರಿಸುವಂತೆ ವಿನ್ಯಾಸಗೊಳಿಸಲಾಗಿದೆ, ಮತ್ತು ಬೊಂಬೆಗಳು ಮಿಸ್ ಆಸ್ಟೋನಾಟ್ ಬಾರ್ಬಿ (1965), ಡಾಕ್ಟರ್ ಬಾರ್ಬಿ (1988) ಮತ್ತು ನಾಸ್ಕರ್ ಬಾರ್ಬಿ (1998) ಗಳನ್ನೊಳಗೊಂಡಂತೆ ವೈವಿಧ್ಯಮಯ ಶ್ರೇಣಿಗಳಲ್ಲಿ ಮಾರಾಟವಾಗುತ್ತಿವೆ.[೧೦] ಬಾರ್ಬಿಯ ಜೊತೆಯಲ್ಲಿ ಹಿಸ್ಪಾನಿಕ್ ತೆರೆಸಾ , ಮಿಡ್ಜ್, ಅಫ್ರಿಕನ್ ಅಮೆರಿಕನ್ ಕ್ರಿಸ್ಟೀ ಮತ್ತು ಸ್ಟೀವನ್ (ಕ್ರಿಸ್ಟಿಯ ಬಾಯ್‌ಫ್ರೆಂಡ್) ಗಳನ್ನೊಳಗೊಂಡು ವೈವಿಧ್ಯಮಯ ಶ್ರೇಣಿಯ ಗೊಂಬೆಗಳನ್ನು ಮಾಟೆಲ್ ಸೃಷ್ಟಿಸಿತು. ಬಾರ್ಬಿಯ ಒಡಹುಟ್ಟಿದವರು ಮತ್ತು ಸೋದರ ಸಂಬಂಧಿಗಳಾದ ಸ್ಕಿಪ್ಪರ್, ಟುಟ್ಟಿ (ಟೋಡ್‌ನ ಅವಳಿ ಸೋದರಿ), ಟೋಡ್ (ಟುಟ್ಟಿ ಮತ್ತು ಸ್ಟೇಸೀಯ ಅವಳಿ ಸೋದರ), ಸ್ಟೇಸಿ (ಟೋಡ್‌ನ ಅವಳಿ ಸೋದರಿ), ಕೆಲ್ಲಿ, ಕ್ರಿಸ್ಸಿ, ಫ್ರಾನ್ಸಿ, ಮತ್ತು ಜಾಝೀಯ ಗೊಂಬೆಗಳೂ ಸಹ ಸೃಷ್ಠಿಸಲ್ಪಟ್ಟವು.

ಬಾರ್ಬಿಯ ಸ್ನೇಹಿತರು ಮತ್ತು ಕುಟುಂಬವನ್ನೂ ನೋಡಿ

ವಿವಾದಗಳು[ಬದಲಾಯಿಸಿ]

ಬಾರ್ಬಿಯ ಜನಪ್ರಿಯತೆಯಿಂದಾಗಿ ಮಕ್ಕಳ ಆಟದ ಮೇಲೆ ಆಕೆಯ ಪರಿಣಾಮವನ್ನು ಅತಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗುತ್ತದೆ. ಮಕ್ಕಳು ಬಾರ್ಬಿಯನ್ನೇ ತಮ್ಮ ಆದರ್ಶವನ್ನಾಗಿ ಭಾವಿಸಿಕೊಂಡು ಆಕೆಯನ್ನೇ ಅನುಕರಿಸಲು ಯತ್ನಿಸುವರೆಂಬ ಊಹೆಗಳು ಟೀಕೆಗಳಿಗೆಡೆಮಾಡಿಕೊಟ್ಟಿವೆ.

  • ಬಾರ್ಬಿಯ ಬಗ್ಗೆ ಇರುವ ಸಾಮಾನ್ಯ ಟೀಕೆಯೆಂದರೆ ಆಕೆ ಮಾನವ ದೇಹದ ಬಗ್ಗೆ ಅತಿರಂಜಿತ ಕಲ್ಪನೆಯನ್ನುಂಟುಮಾಡಿ ಹೆಣ್ಣುಮಕ್ಕಳಲ್ಲಿ ಅಂತೆಯೇ ಇರಬೇಕೆಂಬ ಭ್ರಮೆಯನ್ನು ಬೆಳೆಸಿ ಅವರುಗಳು ಬಾರ್ಬಿಯಂತೆಯೇ ಆಗಲೆಳಸಿ ಅನೋರೆಕ್ಸಿಕ್ ಆಗುವಂತೆ ಮಾಡುವಳೆಂಬುದು. ಒಂದು ಬಾರ್ಬೀ ಗೊಂಬೆ ಸಾಧಾರಣವಾಗಿ 11.5 ಇಂಚುಗಳಷ್ಟು ಎತ್ತರವಿದ್ದು, ಇದು 5 ಅಡಿ 9 ಇಂಚುಗಳನ್ನು 1/6 ಅಳತೆಗೆ ಇಳಿಸಿದರೆ ಬರುವ ಅಳತೆಯಾಗಿದೆ. ಬಾರ್ಬಿಯ ದೈಹಿಕ ಅಳತೆಗಳು 36 ಇಂಚುಗಳು (ಎದೆ), 18 ಇಂಚುಗಳು (ಕಟಿ) and 33 ಇಂಚುಗಳು (ನಿತಂಬಗಳು) ಎಂದು ಕಲ್ಪಿಸಲಾಗಿದೆ. ಫಿನ್‌ಲ್ಯಾಂಡ್ಹೆಲ್ಸಿಂಕಿಯ ಯುನಿವರ್ಸಿಟಿ ಸೆಂಟ್ರಲ್ ಆಸ್ಪತ್ರೆಯ ಸಂಶೋಧನೆಯೊಂದರ ಪ್ರಕಾರ ಮಹಿಳೆಯೊಬ್ಬಳು ಋತುಮತಿಯಾಗಲು ಅವಶ್ಯಕವಿರುವ 17 ರಿಂದ 22 ಶೇಕಡಾ ದೈಹಿಕ ಕೊಬ್ಬಿನ ಕೊರತೆ ಬಾರ್ಬಿಯಲ್ಲಿದೆ.[೧೧] 1965ರ ಸ್ಲಂಬರ್ ಪಾರ್ಟಿ ಬಾರ್ಬಿ ಯು ಹೌ ಟು ಲೂಸ್ ವೆಯಿಟ್ ಎಂಬ ಪುಸ್ತಕವನ್ನೂ ಹೊಂದಿದ್ದು ಆ ಪುಸ್ತಕವು "ಆಹಾರ ಸೇವಿಸಬೇಡಿ" ಎಂಬ ನಿರ್ದೇಶನವನ್ನು ಹೊಂದಿತ್ತು. ಈ ಗೊಂಬೆಯ ಜತೆ ಬಂದ ಗುಲಾಬಿ ಬಣ್ಣದ ಬಾತ್‌ರೂಮ್ ತೂಕದ ಯಂತ್ರವು 110 ಪೌಂಡುಗಳನ್ನು ತೋರಿಸುತ್ತಿದ್ದು ಇದು 5 ಅಡಿ 9 ಇಂಚು ಎತ್ತರದ ಒಬ್ಬ ಮಹಿಳೆ ಇರಬೇಕಾದ್ದಕ್ಕಿಂತ 35 ಪೌಂಡ್ ಕಡಿಮೆಯಿತ್ತು.[೧೨] 1997ರ ಬಾರ್ಬಿ ಅಚ್ಚನ್ನು ಹೆಚ್ಚು ಸೊಂಟದ ಸುತ್ತಳತೆಯಿರುವಂತೆ ವಿನ್ಯಾಸಗೊಳಿಸಲಾಯಿತು ಮತ್ತು ಮ್ಯಾಟ್ಟೆಲ್ ಪ್ರಕಾರ ಇದು ಹೊಸ ಫ್ಯಾಶನ್ ವಿನ್ಯಾಸಗಳಿಗೆ ಹೆಚ್ಚು ತಕ್ಕನಾಗಿತ್ತು.[೧೩][೧೪]
  • ಜುಲೈ 1992ರಲ್ಲಿ ಮ್ಯಾಟ್ಟೆಲ್ ಹೊರತಂದ ಟೀನ್ ಟಾಕ್ ಬಾರ್ಬಿ ಹಲವಾರು ಮಾತುಗಳನ್ನೂ ಆಡುತ್ತಿತ್ತು. ಉದಾಹರಣೆಗೆ - "Will we ever have enough clothes?", "I love shopping

!", ಮತ್ತು "Wanna have a pizza party?" ಪ್ರತಿಯೊಂದು ಗೊಂಬೆಯೂ ಆಯ್ದ 270 ಮಾತುಗಳಲ್ಲಿ ನಾಲ್ಕನ್ನು ಹೇಳುವಂತೆ ನಿಯಮಿತವಾಗಿದ್ದುದರಿಂದ ಪ್ರತಿಯೊಂದು ಗೊಂಬೆಯೂ ವಿಶಿಷ್ಟವಾಗಿರಲು ಸಾಧ್ಯವಾಗಿತ್ತು. ಈ 270 ಮಾತುಗಳಲ್ಲಿ "Math class is tough!" ಎಂಬುದೂ ಒಂದಾಗಿತ್ತು. (ಇದನ್ನು ತಪ್ಪಾಗಿ "Math is hard" ಎಂದು ಉದ್ಧರಿಸಲಾಗುತ್ತದೆ). ಮಾರಾಟಕ್ಕಿಟ್ಟ ಗೊಂಬೆಗಳಲ್ಲಿ ಕೇವಲ 1.5% ಮಾತ್ರ ಈ ಮಾತನ್ನು ಹೇಳುತ್ತಿದ್ದುವಾದರೂ ಇದು American Association of University Womenನಿಂದ ಟೀಕೆಗೊಳಗಾಯಿತು. 1992ರ ಅಕ್ಟೋಬರ್‌ನಲ್ಲಿ ಮ್ಯಾಟ್ಟೆಲ್ ಟೀನ್ ಟಾಕ್ ಬಾರ್ಬಿ ಯು ಇನ್ನುಮುಂದೆ ಆ ಮಾತನ್ನು ಹೇಳುವುದಿಲ್ಲವೆಂದೂ, ಯಾರ ಬಳಿಯಾದರೂ ಆ ಗೊಂಬೆಯಿದ್ದಲ್ಲಿ ಅದನ್ನು ವಿನಿಮಯ ಮಾದಲಾಗುವುದೆಂದೂ ಘೋಷಿಸಿತು.[೧೫]

ಚಿತ್ರ:Oreo Fun Barbie.jpg
1997ರ ನಂತರ ಒರಿಯೊ ಫನ್ ಬಾರ್ಬಿಯು ಬೊಂಬೆಯ ಹೆಸರಿನಲ್ಲಿರುವ ಋಣಾತ್ಮಕ ಅರ್ಥವಿವರಣೆಯಿಂದ ವಿವಾದಗಳಿಗೆ ಒಳಗಾಗಿತ್ತು.
  • 1967ರಲ್ಲಿ ಪರಿಚಯಿಸಲಾದ "ಕಲರ್ಡ್ ಫ್ರಾನ್ಸೀ"ಯನ್ನು ಕೆಲಬಾರಿ ಮೊತ್ತಮೊದಲ ಆಫ್ರಿಕನ್ ಅಮೆರಿಕನ್ ಬಾರ್ಬೀ ಗೊಂಬೆಯೆಂದು ಪರಿಗಣಿಸಲಾಗುತ್ತದೆ. ಆದರೆ ಈ ಗೊಂಬೆಯನ್ನು ತಯಾರಿಸಲು ಬಿಳಿಯ ಫ್ರಾನ್ಸೀ ಗೊಂಬೆಗೆ ಬಳಸಲಾಗುವ ಅಚ್ಚನ್ನೇ ಬಳಸಿದ್ದುದರಿಂದ ಇದರಲ್ಲಿ ಕಪ್ಪುಚರ್ಮವೊಂದನ್ನು ಬಿಟ್ಟರೆ ಯಾವುದೇ ಆಫ್ರಿಕನ್ ಲಕ್ಷಣಗಳಿರಲಿಲ್ಲ. 1968ರಲ್ಲಿ ಹೊರಬಂದ ಕ್ರಿಸ್ಟೀಯನ್ನು ಬಾರ್ಬೀ ಸರಣಿಯ ಮೊತ್ತಮೊದಲ ಆಫ್ರಿಕನ್ ಅಮೆರಿಕನ್ಗೊಂಬೆಯನ್ನಾಗಿ ಪರಿಗಣಿಸಲಾಗಿದೆ.[೧೬][೧೭] 1980ರಲ್ಲಿ ಬ್ಲಾಕ್ ಬಾರ್ಬಿಯನ್ನು ಮಾರುಕಟ್ಟೆಗೆ ಹೊರತರಲಾಯಿತಾದರೂ ಅದೂ ಬಿಳಿಯ ಬಾರ್ಬಿಯ ಲಕ್ಷಣಗಳನ್ನೇ ಹೊಂದಿತ್ತು. 2009ರ ಸೆಪ್ಟೆಂಬರ್‌ನಲ್ಲಿ ಮ್ತಾಟ್ಟೆಲ್ ಹೊರತಂದ So In Style ಸರಣಿಯು ಕಪ್ಪು ಜನರನ್ನು ಹಳೆಯ ಗೊಂಬೆಗಳಿಗಿಂತ ಹೆಚ್ಚು ನೈಜವಾದ ರೀತಿಯಲ್ಲಿ ಬಿಂಬಿಸುವ ಉದ್ದೇಶವನ್ನು ಹೊಂದಿತ್ತು.[೧೮]
  • 1997ರಲ್ಲಿ Nabisco ಜತೆ ಸೇರಿಕೊಂಡ ಮ್ಯಾಟ್ಟೆಲ್, ಬಾರ್ಬಿ ಮತ್ತು Oreo ಕುಕೀಗಳ ಜಂಟಿ ಮಾರುಕಟ್ಟೆ ಪ್ರವರ್ತನೆಯನ್ನು ಆರಂಭಿಸಿತು. ಓರಿಯೋ ಫನ್ ಬಾರ್ಬೀ ಯನ್ನು ಶಾಲೆಯ ನಂತರ ಪುಟ್ಟ ಹೆಣ್ಣುಮಕ್ಕಳು ಆಡಬಹುದಾದ ಮತ್ತು "ಅಮೆರಿಕಾದ ನೆಚ್ಚಿನ ಕುಕೀ"ಗಳನ್ನು ಹಂಚಿಕೊಳ್ಳಬಹುದಾದ ಗೊಂಬೆಯಾಗಿರುವುದಾಗಿ ಪ್ರಚಾರ ನೀಡಲಾಯಿತು. ತನ್ನ ಪದ್ಧತಿಯಂತೆ ಮ್ತಾಟ್ಟೆಲ್ ಬಿಳಿಯ ಮತ್ತು ಕಪ್ಪು ಗೊಂಬೆಗಳೆರಡನ್ನೂ ತಯಾರು ಮಾಡಿತು. ಇದರ ಟೀಕಾಕಾರರು ಆಫ್ರಿಕನ್ ಅಮೆರಿಕನ್ ಸಮುದಾಯದಲ್ಲಿ Oreo ಒಂದು ನಿಂದನಾತ್ಮಕ ಪದವಾಗಿರುವುದೆಂದೂ ಅದು ಈ ಚಾಕೊಲೆಟ್ ಕುಕಿಯಂತೆಯೇ ಒಬ್ಬ ವ್ಯಕ್ತಿಯು "ಬಾಹ್ಯವಾಗಿ ಕಪ್ಪಗಿದ್ದು ಆಂತರಿಕವಾಗಿ ಬಿಳಿಯನಾಗಿರುವುದನ್ನು" ಸೂಚಿಸುತ್ತದೆಯೆಂದೂ ವಾದಿಸಿದರು. ಈ ಗೊಂಬೆಯು ಮಾರುಕಟ್ಟೆಯಲ್ಲಿ ಸೋತು ಮ್ಯಾಟ್ಟೆಲ್ ಮಾರಲಾಗದೆ ಉಳಿದವನ್ನು ವಾಪಾಸು ತೆಗೆದುಕೊಂಡದ್ದರಿಂದ ಇವು ಸಂಗ್ರಹಕಾರರಿಗೆ ಬಹಳ ಬೇಕಾದವಾದವು.[೧೯]
  • 1997ರ ಮೇಯಲ್ಲಿ ಮ್ಯಾಟ್ಟೆಲ್ ಗುಲಾಬಿ ಬಣ್ಣದ ವೀಲ್‍ಚೇರ್‌ನಲ್ಲಿ ಕುಳಿತಿರುವ ಶೇರ್ ಎ ಸ್ಮೈಲ್ ಬೆಕೀ ಎಂಬ ಗೊಂಬೆಯನ್ನು ಹೊರತಂದಿತು. ಟಕೋಮಾ, ವಾಷಿಂಗ್ಟನ್ನ ಸೆರೆಬ್ರಲ್ with ಸೆರೆಬ್ರಲ್ ಪಾಲ್ಸೀ ಇದ್ದ 17 ವಯಸ್ಸಿನ ಹೈಸ್ಕೂಲ್ ವಿದ್ಯಾರ್ಥಿನಿ ಕೆರ್ಸ್ಟೀ ಜಾನ್ಸನ್ ಈ ಗೊಂಬೆಯು ಬಾರ್ಬಿಯ $100 ಡ್ರೀಮ್‌ಹೌಸ್‌ನ ಎಲಿವೇಟರ್ನೊಳಗೆ ಸೇರುವುವುದಿಲ್ಲವೆಂದು ತೋರಿಸಿದಳು. ಮ್ಯಾಟ್ಟೆಲ್ ತಾನು ಮುಂದೆ ತಯಾರಿಸುವ ಮನೆಗಳು ಈ ಗೊಂಬೆಯನ್ನು ಒಳಗೊಳ್ಳುವಂತೆ ಇರುವುವೆಂದು ಘೋಷಿಸಿತು.[೨೦][೨೧]
  • 2000ದ ಮಾರ್ಚ್‌ನಲ್ಲಿ ವಿಂಟೇಜ್ ಬಾರ್ಬೀ ಗೊಂಬೆಗಳಲ್ಲಿ ಬಳಸಲಾಗುವ ಗಟ್ಟಿ ವಿನೈಲ್ ಪದಾರ್ಥವು ವಿಷಯುಕ್ತ ರಾಸಾಯನಿಕಗಳನ್ನು ಹೊರಬಿಡುವುದೆಂದೂ, ಇದರ ಜತೆ ಆಡುವ ಮಕ್ಕಳಿಗೆ ಅಪಾಯವಿದೆಯೆಂದೂ ಮಾಧ್ಯಮದಲ್ಲಿ ಸುದ್ದಿಗಳು ಓಡಾಡತೊಡಗಿದವು. ಈ ಸುದ್ದಿಯನ್ನು ತಾಂತ್ರಿಕ ಪರಿಣಿತರು ಸುಳ್ಳೆಂದು ನಿರಾಕರಿಸಿದರು. ಆಧುನಿಕ ಬಾರ್ಬೀ ಗೊಂಬೆಯ ದೇಹವನ್ನು ABS ಪ್ಲಾಸ್ಟಿಕ್‌ನಿಂದಲೂ, ತಲೆಯನ್ನು ಮೆದುವಾದ PVCಯಿಂದಲೂ ತಯಾರಿಸಲಾಗುತ್ತದೆ.[೨೨][೨೩]
  • 2003ರ ಸೆಪ್ಟೆಂಬರ್‌ನಲ್ಲಿ ಮಧ್ಯಪೂರ್ವದೇಶವಾದ ಸೌದಿ ಅರೇಬಿಯಾದಲ್ಲಿ ಬಾರ್ಬೀ ಗೊಂಬೆಗಳು ಇಸ್ಲಾಮ್‌ನ ಆದರ್ಶಗಳಿಗೆ ತಕ್ಕುನಾಗಿಲ್ಲವೆಂದು ಕಾರಣ ನೀಡಿ ಅವುಗಳ ಮಾರಾಟವನ್ನು ನಿಷೇಧಿಸಲಾಯಿತು. Committee for the Propagation of Virtue and Prevention of Vice ನೀಡಿದ ಹೇಳಿಕೆಯ ಪ್ರಕಾರ "ಈ ಯಹೂದೀ ಬಾರ್ಬೀ ಗೊಂಬೆಗಳು ತಮ್ಮ ಬಟ್ಟೆಗಳು, ಕೆಟ್ಟ ನಿಲುವು, ಆಕ್ಸೆಸರಿಗಳು ಮತ್ತು ಪರಿಕರಗಳೊಂದಿಗೆ ತಪ್ಪುದಾರಿಗೆಳೆಯುವ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರತೀಕಗಳಾಗಿವೆ. ಅವಳು ಉಂಟುಮಾಡಬಹುದಾದ ತೊಂದರೆಗಳ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ."[೨೪] ಮಧ್ಯಪೂರ್ವ ದೇಶಗಳಲ್ಲಿ ಬಾರ್ಬೀಯಂತೆಯೇ ಇರುವ ಆದರೆ ಇಸ್ಲಾಮಿಕ್ ಆದರ್ಶಗಳಿಗೆ ತಕ್ಕನಾಗಿರುವಂತೆ ವಿನ್ಯಾಸಗೊಳೆಸಲಾಗಿರುವ ಫುಲ್ಲಾ ಎಂಬ ಗೊಂಬೆಯು ಮಾರುಕಟ್ಟೆಯಲ್ಲಿದೆ. ಫುಲ್ಲಾಳನ್ನು ಮ್ಯಾಟ್ಟೆಲ್ ತಯಾರಿಸುತ್ತಿಲ್ಲ ಮತ್ತು ಈಜಿಪ್ಟ್ ಅನ್ನೂ ಒಳಗೊಂಡಂತೆ ಇತರ ಎಲ್ಲಾ ಮಧ್ಯಪೂರ್ವ ದೇಶಗಳಲ್ಲೂ ಬಾರ್ಬೀ ಲಭ್ಯವಿದೆ.[೨೫] ಇರಾನ್‌ನಲ್ಲಿ ಬಾರ್ಬೀ ಗೊಂಬೆಗಳಿಗೆ ಬದಲಾಗಿ ಸಾರಾ ಮತ್ತು ದಾರಾ ಗೊಂಬೆಗಳು ಲಭ್ಯವಿವೆ.[೨೬]
ಚಿತ್ರ:Tramp Stamp Barbie.jpg
2009ರಲ್ಲಿ ಬೆನ್ನಿನ ಕೆಳಭಾಗದಲ್ಲಿ ಟ್ಯಾಟೂ ಇರುವ ಬಾರ್ಬಿಯು ಬಿಡುಗಡೆಯಾಯಿತು.
  • 2009ರ ಏಪ್ರಿಲ್‌ನಲ್ಲಿ "ಟೋಟಲೀ ಟ್ಯಾಟೂಸ್" ಬಾರ್ಬೀಯನ್ನು ಸಾದರಪಡಿಸಲಾಯಿತು ಮತ್ತು ಈ ಬಾರ್ಬಿಯ ಜತೆ ಅದಕ್ಕೆ ಹಚ್ಚಬಹುದಾದ ಕೆಳಬೆನ್ನಿನ ಟ್ಯಾಟೂವನ್ನೂ ಒಳಗೊಂಡ ಹಲವಾರು ಟ್ಯಾಟೂಗಳು ಇದ್ದಿದ್ದು ವಿವಾದಕ್ಕೆಡೆಮಾಡಿತು. ಮ್ಯಾಟ್ಟೆಲ್‌ನ ಪ್ರಚಾರಸಾಮಗ್ರಿಯಲ್ಲಿ "ಫ್ಯಾಶನ್ ಅನ್ನು ನಿಮ್ಮಿಚ್ಚೆಗೆ ತಕ್ಕಂತೆ ರೂಪುಗೊಳಿಸಿ, ಈ ತತ್ಕಾಲೀನ ಫನ್ ಟ್ಯಾಟೂಗಳನ್ನು ನೀವೂ ಹಚ್ಚಿಕೊಳ್ಳಿ" ಎಂದಿದ್ದರೂ, Consumer Focusನ ಪ್ರಧಾನ ನಿರ್ವಾಹಕನಾದ ಎಡ್ ಮೇಯೋ ಇದರಿಂದ ಮಕ್ಕಳು ತಾವೂ ಟ್ಯಾಟೂಗಳನ್ನು ಹಾಕಿಸಿಕೊಳ್ಳಲು ಬಯಸಬಹುದು ಎಂದು ವಾದಿಸಿದ.[೨೭]
  • 2005ರ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ಯುನಿವರ್ಸಿಟಿ ಆಫ್ ಬಾಥ್ನ ಡಾ. ಆಗ್ನೆಸ್ ನೇರ್ನ್ ಪ್ರಕಟಿಸಿದ ಸಂಶೋಧನೆಯ ಪ್ರಕಾರ ಹೆಣ್ಣುಮಕ್ಕಳು ತಮ್ಮ ಬಾರ್ಬೀ ಗೊಂಬೆಗಳನ್ನು ದ್ವೇಷಿಸುವ ಹಂತವೊಂದಿದೆಯೆಂದೂ ಆ ಸಮಯದಲ್ಲಿ ಅವರು ತಮ್ಮ ಗೊಂಬೆಗಳನ್ನು ಅಂಗವಿಚ್ಛೇದನ ಮತ್ತು ಮೈಕ್ರೋವೇವ್ ಅವನ್ನೊಳಗೆ ಇಡುವುದೇ ಮುಂತಾದ ಹಲವಾರು ಶಿಕ್ಷೆಗಳಿಗೊಳಪಡಿಸುತ್ತಾರೆಂದೂ ಬಹಿರಂಗಪಡಿಸಲಾಯಿತು. ಡಾ. ನೇರ್ನ್ ಹೇಳಿದಂತೆ: "ಬಾರ್ಬೀಗಳನ್ನು ನಿರ್ದಾಕ್ಷಿಣ್ಯವಾಗಿ ದೂರೀಕರಿಸುವುದು ಒಂದು ರೀತಿಯ ಸ್ವಾತಂತ್ರ್ಯವನ್ನು ಮತ್ತು ತಮ್ಮ ಭೂತಕಾಲದ ನಿರಾಕರಣೆಯನ್ನು ಸೂಚಿಸುತ್ತದೆ."[೨೮][೨೯]

ವಿಡಂಬನೆಗಳು ಮತ್ತು ಮೊಕದ್ದಮೆಗಳು[ಬದಲಾಯಿಸಿ]

ಜನಪ್ರಿಯ ಸಂಸ್ಕೃತಿಯಲ್ಲಿ ಬಾರ್ಬಿಯನ್ನು ಆಗಾಗ್ಗೆ ಪ್ರಸ್ತಾಪಿಸಲಾಗುತ್ತದೆ ಮತ್ತು ಪದೇಪದೇ ಬಾರ್ಬಿ ವಿಡಂಬನೆಗೆ ಗುರಿಯಾಗುತ್ತಿರುತ್ತದೆ. ಈ ರೀತಿಯ ಹಲವು ಸಂದರ್ಭಗಳೆಂದರೆ:

  • 1997ರಲ್ಲಿ ಡೇನಿಶ್-ನಾರ್ವೇಜಿಯನ್ ಪಾಪ್-ನೃತ್ಯತಂಡವಾದ ಅಕ್ವಾ "ಬಾರ್ಬೀ ಗರ್ಲ್" ಎಂಬ ಹಾಡನ್ನು ಬಿಡುಗಡೆ ಮಾಡಿತು. ಅದು "You can brush my hair / Undress me everywhere " ಎಂಬಂತಹ ಸಾಹಿತ್ಯದ ಬಳಕೆ ಮಾಡಿದ್ದಲ್ಲದೆ ಈ ಹಾಡಿನ ವಿಡಿಯೋದಲ್ಲಿ ಪಿಂಕ್ ಬಾರ್ಬಿಯ ಲೋಗೋನ ರೀತಿಯದೇ ಗ್ರಾಫಿಕ್ಸ್‌ಗಳನ್ನು ಬಳಸಲಾಗಿತ್ತು. ಟ್ರೇಡ್‌ಮಾರ್ಕ್ ಉಲ್ಲಂಘನೆಯಾಗಿದೆಯೆಂದು ವಾದಿಸಿದ ಮ್ಯಾಟ್ಟೆಲ್, 1997ಸೆಪ್ಟೆಂಬರ್ 11ರಂದು MCA Records ವಿರುದ್ಧ ಮಾನಹಾನಿ ದಾವೆ ಹೂಡಿತು, . 2002ರ ಜುಲೈಯಲ್ಲಿ ಜಡ್ಜ್ ಅಲೆಕ್ಸ್ ಕೊಜಿನ್ಸ್‍ಕಿ ಈ ಹಾಡು ಕಾನೂನಿನ First Amendment to the United States Constitution ಪ್ರಕಾರ ವಿಡಂಬನೆಯೆನ್ನಿಸಿಕೊಳ್ಳುವುದೆಂದು ತೀರ್ಪು ನೀಡಿದರು.[೩೦][೩೧]
  • ಆಟೋಮೊಬೈಲ್ ಕಂಪನಿಯಾದ ನಿಸ್ಸಾನ್ನ ಜಾಹೀರಾತೊಂದರಲ್ಲಿ ಬಾರ್ಬೀ ಮತ್ತು ಕೆನ್‌ರನ್ನು ಹೋಲಿವ ಗೊಂಬೆಗಳನ್ನು ಬಳಸಿದ್ದು 1997ರಲ್ಲಿ ಇನ್ನೊಂದು ಮೊಕದ್ದಮೆಗೆ ಕಾರಣವಾಯಿತು. ಈ ಜಾಹೀರಾತಿನಲ್ಲಿ GI Joeಅನ್ನು ಹೋಲುವ ಗೊಂಬೆಯೊಂದು ಒಂದು ಹೆಣ್ಣುಗೊಂಬೆಯನ್ನು ಕಾರ್‌ನೊಳಗೆ ಆಹ್ವಾನಿಸುವುದನ್ನು ಕೆನ್‌ ಅನ್ನು ಹೋಲುವ ಗೊಂಬೆಯೊಂದು ಬೇಸರದಿಂದ ನೋಡುತ್ತಿರುತ್ತದೆ. ಹಿನ್ನೆಲೆಯಲ್ಲಿ ವ್ಯಾನ್ ಹೇಲೆನ್‌You Really Got Me ಯನ್ನು ನುಡಿಸಲಾಗುತ್ತದೆ. ಈ ಜಾಹೀರಾತಿನ ನಿರ್ಮಾಪಕರ ಪ್ರಕಾರ ಈ ಗೊಂಬೆಗಳ ಹೆಸರುಗಳು ರಾಕ್ಸಾನ್, ನಿಕ್ ಮತ್ತು ಟ್ಯಾಡ್ ಎಂದಾಗಿದ್ದವು. ಮ್ಯಾಟ್ಟೆಲ್ ಈ ಜಾಹೀರಾತಿನಿಂದ ತನ್ನ ಉತ್ಪನ್ನಗಳಿಗೆ ಸರಿಪಡಿಸಲಾಗದ ಘಾಸಿಯುಂತಾಗಿದೆಯೆಂದು ವಾದಿಸಿದರೂ,[೩೨][೩೩] ನಂತರ ರಾಜಿ ಮಾಡಿಕೊಂಡಿತು.[೩೪]
  • Saturday Night Live ಕಾಲ್ಪನಿಕ "ಗ್ಯಾಂಗ್‌ಸ್ಟಾ ಬಿಚ್ ಬಾರ್ಬೀ" ಗೊಂಬೆ ಮತ್ತು ಒಂದು "ಟೂಪಾಕ್ ಕೆನ್" ಗೊಂಬೆಯನ್ನೊಳಗೊಂಡ ಬಾರ್ಬೀ ಜಾಹೀರಾತುಗಳ ಒಂದು ವಿಡಂಬನೆಯನ್ನು ಪ್ರಸಾರ ಮಾಡಿತು.[೩೫]
  • The Tonight Show with Jay Leno ದಲ್ಲಿ ಕಾಲ್ಪನಿಕ "ಬಾರ್ಬೀ ಕ್ರಿಸ್ಟಲ್ ಮೆಥ್ ಲ್ಯಾಬ್" ನ ಮೂಲಕ ಬಾರ್ಬೀ ಸಾಮಾನ್ಯವಾಗಿ ತನ್ನ ವೃತ್ತಿಜೀವನವನ್ನು "ಇಂದಿನ ಸಮಯಕ್ಕೆ ತಕ್ಕಂತೆ, ಅದೂ ಈ ಸಂದರ್ಭದಲ್ಲಿ ಸಾಮಾಜಿಕ ಪಿಡುಗುಗಳ ಬಗ್ಗೆ" ಹೊಂದಿಸಿಕೊಳ್ಳುತ್ತಾಳೆನ್ನುವುದನ್ನು ಲೇವಡಿ ಮಾಡಲಾಯಿತು.
  • ಮಾಲಿಬು ಸ್ಟೇಸೀ ಎಂಬುದು ದ ಸಿಂಪ್ಸನ್ಸ್ ಕಾರ್ಟೂನ್ ಸರಣಿಯಲ್ಲಿ ಬಾರ್ಬೀಯನ್ನು ವಿಡಂಬನೆ ಮಾಡುವ ಪಾತ್ರವಾಗಿದೆ. 1994ರ ಸರಣಿಯ "ಲಿಸಾ ವರ್ಸಸ್ ಮಾಲಿಬು ಸ್ಟೇಸೀ" ಟೀನ್ ಟಾಕ್ ಬಾರ್ಬೀ ವಿವಾದವನ್ನು ಬಳಸಿಕೊಂಡು, ಸ್ಟೇಸೀ ಗೊಂಬೆಯು "let's buy make-up so the boys will like us" ಎಂಬಂತಹ ಮಾತುಗಳನ್ನು ಹೇಳುವಂತೆ ತೋರಿಸಲಾಗಿತ್ತು. ಮಾಲಿಬು ಸ್ಟೇಸಿಯ "ಲೈಂಗಿಕ ಭಾಷಾ ಕೊರೆತದಿಂದ" ರೋಸಿಹೋದ ಲಿಸಾ ತನ್ನದೇ ಆದ "ಲಿಸಾ ಲಯನ್‌ಹಾರ್ಟ್" ಎಂಬ ಗೊಂಬೆಯನ್ನು ಮಾರುಕಟ್ಟೆಗೆ ಬಿಡುತ್ತಾಳೆ.
  • 1993ರಲ್ಲಿ ಯುನೈಟೆಡ್ ಸ್ಟೇಟ್ಸ್ನ "Barbie Liberation Organization" ಎಂದು ಕರೆದುಕೊಳ್ಳುವ ಗುಂಪೊಂದು ಬಾರ್ಬೀ ಗೊಂಬೆಗಳಿಗೆ ಮಾತನಾಡುವ G.I. Joe ಗೊಂಬೆಯ ಧ್ವನಿಪೆಟ್ಟಿಗೆಯನ್ನು ಅಳವಡಿಸಿ ಮಾರ್ಪಾಡು ಮಾಡಿ ಈ ಗೊಂಬೆಗಳನ್ನು ರಹಸ್ಯವಾಗಿ ವಾಪಾಸು ಗೊಂಬೆ ಅಂಗಡಿಗಳಿಗೆ ಮರಳಿಸಿತು. ಈ ಗೊಂಬೆಗಳನ್ನು ಕೊಂಡುಕೊಂಡ ತಂದೆತಾಯಂದಿರು ಮತ್ತು ಮಕ್ಕಳು ಈ ಗೊಂಬೆಗಳು "Eat lead, Cobra

!" ಮತ್ತು "Vengeance is mine." ಎಂದೆಲ್ಲ ಮಾತನಾಡತೊಡಗಿದಾಗ ಆಶ್ಚರ್ಯಚಕಿತರಾದರು.[೩೬][೩೭]

  • 1999ರಲ್ಲಿ ಮ್ಯಾಟ್ಟೆಲ್ ಟಾಮ್ ಫಾರ್‌ಸೈದ್ ಎಂಬ ಯುಟಾದ ಕಲಾವಿದನ ವಿರುದ್ಧ ಫುಡ್ ಚೈನ್ ಬಾರ್ಬೀ ಎಂಬ ಚಿತ್ರಸರಣಿಯಲ್ಲಿ ಬಾರ್ಬೀ ಗೊಂಬೆಯೊಂದು ಬ್ಲೆಂಡರ್ನಲ್ಲಿರುವಂತೆ ತೋರಿಸಿದ್ದಕ್ಕಾಗಿ ಮೊಕದ್ದಮೆ ಹೂಡಿತು. ಈ ಮೊಕದ್ದಮೆಯಲ್ಲಿ ಸೋತುಹೋದ ಮ್ಯಾಟ್ಟೆಲ್ ಶ್ರೀ ಫಾರ್‌ಸೈದ್‌ಗೆ $1.8 ಮಿಲಿಯನ್ ವೆಚ್ಚವನ್ನು ತೆರಬೇಕಾಗಿ ಬಂದಿತು.[೩೮][೩೯][೪೦]
  • 2002ರ ನವೆಂಬರ್‌ನಲ್ಲಿ a ನ್ಯೂಯಾರ್ಕ್ನ ನ್ಯಾಯಾಧೀಶರೊಬ್ಬರು ಬ್ರಿಟೀಶ್ ಮೂಲದ ಕಲಾವಿದೆ ಸುಸಾನ್ ಪಿಟ್‌ಳ ವಿರುದ್ಧ ಡಂಜನ್ ಬಾರ್ಬೀ ಎಂಬ ಬಾಂಡೇಜ್ ಉಡುಪು ಧರಿಸಿದ್ದ ಗೊಂಬೆಯೊಂದನ್ನು ವಿನ್ಯಾಸಗೊಳಿಸಿದ್ದಕ್ಕಾಗಿ ಇಂಜಂಕ್ಷನ್ ವಿಧಿಸಲು ನಿರಾಕರಿಸಿದರು. ಜಡ್ಜ್ ಲಾರಾ ಟೇಲರ್ ಸ್ವೇನ್ ತನ್ನ ಹೇಳಿಕೆಯಲ್ಲಿ: "ಕೋರ್ಟ್‌ಗೆ ತಿಳಿದಿರುವ ಪ್ರಕಾರ ಮ್ಯಾಟೆಲ್‍ ಯಾವುದೇ S&M ಬಾರ್ಬೀ ಸರಣಿಯನ್ನು ಹೊಂದಿಲ್ಲ."[೪೧]
  • 2004ರಲ್ಲಿ ಮ್ಯಾಟ್ಟೆಲ್ ಕೆನಡಾಕ್ಯಾಲಗರಿಯ ಬಾರ್ಬರಾ ಆಂಡರ್ಸನ್-ವಾಲಿಯ ಫೆಟಿಶ್ ಉಡುಪುಗಳನ್ನು ಮಾರುವ ಜಾಲತಾಣವಾದ www.barbiesshop.com ವಿರುದ್ಧ ಮೊಕದ್ದಮೆ ಹೂಡಿತು. ಮಿಸ್ ಆಂಡರ್ಸನ್ ವಾಲಿ ತಾನು ಬಾಲ್ಯದಿಂದಲೂ "ಬಾರ್ಬೀ" ಎಂಬ ಅಡ್ಡಹೆಸರಿನಿಂದಲೇ ಪರಿಚಿತಳಾಗಿದ್ದುದಾಗಿಯೂ ಗೊಂಬೆಯ ಟ್ರೇಡ್‍ಮಾರ್ಕ್ ಅನ್ನು ಉಲ್ಲಂಘಿಸುವ ಯಾವ ಉದ್ದೇಶವೂ ತನಗಿಲ್ಲವೆಂದೂ ವಾದಿಸಿದಳು. ಈ ಮೊಕದ್ದಮೆಯನ್ನು ನ್ಯೂಯಾರ್ಕ್ನ ಕೋರ್ಟಿನಲ್ಲಿ ಹೂಡಲಾಗಿದ್ದುದರಿಂದ ಕೋರ್ಟು ತನಗೆ ಕೆನಡಾದಲ್ಲಿ ನಡೆದ ವಿಷಯಗಳನ್ನು ಇತ್ಯರ್ಥಗೊಳಿಸುವ ಅಧಿಕಾರ ಪಡೆದಿಲ್ಲವೆಂದು ತೀರ್ಪು ನೀಡಿದ್ದರಿಂದ ಈ ಕೇಸು ಖುಲಾಸೆಗೊಂಡಿತು.[೪೨][೪೩]

ಸಂಗ್ರಹಣೆ[ಬದಲಾಯಿಸಿ]

ಚಿತ್ರ:Vintagebarbie.jpg
1962ರಲ್ಲಿ ತನ್ನ ಮೂಲ ಬಾಕ್ಸ್‌ನಿಂದ ವಿಂಟೇಜ್ #5 ಪೋನಿಟೇಲ್ ಬಾರ್ಬಿ ಬಿಡುಗಡೆಯಾಯಿತು

ಸುಮಾರು 100,000 ಬಾರ್ಬಿ ಸಂಗ್ರಹಿಸುವ ಉತ್ಸಾಹಿ ಜನರಿದ್ದಾರೆ ಎಂದು ಮಾಟೆಲ್ ಕಂಪನಿಯು ಅಂದಾಜಿಸಿದೆ ಅದರಲ್ಲಿ 90% ಹೆಂಗಸರಾಗಿದ್ದಾರೆ, ಸರಾಸರಿ 40ವರ್ಷ ವಯಸ್ಸಿನವರು ಒಂದು ವರ್ಷದಲ್ಲಿ ಸುಮಾರು 20ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಖರೀದಿಸುತ್ತಾರೆ. ಅದರಲ್ಲಿ 45%ರಷ್ಟು ಜನರು ವರ್ಷಕ್ಕೆ $1000ಕ್ಕಿಂತಲೂ ಹೆಚ್ಚು ವ್ಯಯಿಸುತ್ತಾರೆ. ವಿಂಟೇಜ್ ಬಾರ್ಬಿ ಬೊಂಬೆಗಳು ಹಿಂದಿನಿಂದಲೂ ಹರಾಜಿನಲ್ಲಿ ಭಾರೀ ಬೆಲೆಗೆ ಮಾರಾಟವಾಗುತ್ತವೆ, ಮತ್ತು ಮೂಲ ಬಾರ್ಬಿಯು 1959ರಲ್ಲಿ $3.00ಗೆ ಮಾರಾಟವಾಗಿತ್ತು.1959ರ ನಾಣ್ಯದ ಡಬ್ಬಿಯ ಬಾರ್ಬಿಯು 2004ರ ಅಕ್ಟೋಬರ್‌ನಲ್ಲಿ ಈಬೇಯ ಮೂಲಕ $3552.50ಕ್ಕೆ ಮಾರಾಟವಾಗಿತ್ತು.[೪೪] 2006ಸೆಪ್ಟೆಂಬರ್ 26ರಂದು ಲಂಡನ್‌ನ ಕ್ರಿಸ್ಟೀ ಯಲ್ಲಿ ನಡೆದ ಸ್ಟೆರ್ಲಿಂಗ್ ಹರಾಜಿನಲ್ಲಿ £9,000 ಗಳಿಗೆ (US $17,000) ಮಾರಾಟವಾಗಿ ಬಾರ್ಬಿ ಗೊಂಬೆಯು ವಿಶ್ವದಾಖಲೆ ಮಾಡಿತು. ಈಟ್ಜೆ ರೇಬೆಲ್ ಮತ್ತು ಅವಳ ಮಗಳು ಮರೀನಾ ಎಂಬ ಇಬ್ಬರುಡಚ್‌ ಮಹಿಳೆಯರ ಖಾಸಗಿ ಸಂಗ್ರಹಣೆಯಲ್ಲಿ ಸುಮಾರು 4000 ಬಾರ್ಬಿ ಬೊಂಬೆಗಳನ್ನು ಮಾರಾಟ ಮಾಡಿದರು, ಅದರಲ್ಲಿ 1965ರ ಬೊಂಬೆ ಬಾರ್ಬಿ ಇನ್ ಮಿಡ್‌ನೈಟ್ ರೆಡ್ ಕೂಡ ಇತ್ತು.[೪೫]} ಇತ್ತೀಚಿನ ವರ್ಷಗಳಲ್ಲಿ ಮಾಟೆಲ್ ವಿಶಿಷ್ಟವಾಗಿ ಬೊಂಬೆ ಸಂಗ್ರಹಣೆ ಮಾಡುವವರನ್ನು ಗುರಿಯಾಗಿಟ್ಟುಕೊಂಡು ಬೃಹತ್ ಶ್ರೇಣಿಯ ಬಾರ್ಬಿ ಬೊಂಬೆಗಳನ್ನು ತಯಾರಿಸಿತು, ಅವೆಂದರೆ ದಿ ಮನ್‌ಸ್ಟರ್ಸ್ ಮತ್ತು ಸ್ಟಾರ್ ಟ್ರೆಕ್ ಎಂಬ ದೂರದರ್ಶನದ ಸರಣಿಯನ್ನಾಧರಿಸಿದ ಪೋರ್ಸಲೈನ್ ರೂಪಗಳು, ವಿಂಟೇಜ್ ರಿಪ್ರೊಡಕ್ಷನ್ಸ್, ಮತ್ತು ಡೆಪಿಕ್ಷನ್ಸ್ ಆಫ್ ಬಾರ್ಬಿ ಎನ್ನುವ ಶ್ರೇಣಿಯ ಬೊಂಬೆಗಳು .[೪೬][೪೭] ಸಂಗ್ರಾಹಕರ ಆವೃತ್ತಿಯ ಬೊಂಬೆಗಳಾದ ವೈವಿಧ್ಯಮಯ ಸಾಂಪ್ರದಾಯಿಕತೆಯನ್ನು ವರ್ಣಿಸುವ ಬಾರ್ಬಿ ಬೊಂಬೆಗಳು ಕೂಡ ಇವೆ.[೪೮] 2004ರಲ್ಲಿ ಸಂಗ್ರಾಹಕ ಆವೃತ್ತಿಗೆ ಕಾಲರ್ ಟೈರ್ ಸಿಸ್ಟಂ ಅನ್ನು ಪರಿಚಯಿಸಿತು, ಇದರಲ್ಲಿ ಪಿಂಕ್, ಸಿಲ್ವರ್, ಗೋಲ್ಡ್ ಮತ್ತು ಪ್ಲಾಟಿನಮ್‌ಗಳನ್ನೊಳಗೊಂಡಿವೆ.[೪೯] ಮಾರ್ಚ್‌‌ 2009ರಲ್ಲಿ ಬಾರ್ಬಿಯು ತನ್ನ 50ನೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು, ಮತ್ತು ಈ ವಿಶೇಷ ಸಂದರ್ಭದ ಸಂಕೇತವಾಗಿ 1959ರ ಮೂಲ ಬಾರ್ಬಿ ಬೊಂಬೆಯನ್ನು ಮಾಟೆಲ್ ಪುನಃಉತ್ಪಾದಿಸಿತು.

ಬ್ರಾಟ್ಜ್ ಬೊಂಬೆಗಳ ಜೊತೆ ಸ್ಪರ್ಧೆ[ಬದಲಾಯಿಸಿ]

ಜೂನ್ 2001ರಲ್ಲಿ MGA ಎಂಟರ್‌ಟೈನ್‌ಮೆಂಟ್ ಕಂಪನಿಯು ಬ್ರಾಟ್ಜ್ ಗೊಂಬೆಗಳ ಸರಣಿಯನ್ನು ಪ್ರಾರಂಭಿಸಿತು, ಬೊಂಬೆಗಳ ಮಾರುಕಟ್ಟೆಯಲ್ಲಿ ಬಾರ್ಬಿಯ ಜೊತೆ ಗಂಭೀರ ಸ್ಪರ್ಧೆ ಏರ್ಪಟ್ಟಿತು. 2004ರಲ್ಲಿ ಮಾರಾಟವಾದ ಅಂಕಿಗಳು, ಬ್ರಾಟ್ಜ್ ಗೊಂಬೆಗಳು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿರುವುದನ್ನು ಸೂಚಿಸುತ್ತವೆ, ಆದಾಗ್ಯೂ ಮಾಟೆಲ್ ಕಂಪನಿಯು ಬಾರ್ಬಿ ಬೊಂಬೆಗಳ, ಅದರ ಬಟ್ಟೆಗಳ ಮತ್ತು ಇತರೆ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಈಗಲೂ ಮುಂಚೂಣಿಯಲ್ಲಿದೆ.[೫೦] 2005ರ ಅಂಕಿ ಅಂಶಗಳ ಪ್ರಕಾರ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಾರ್ಬಿ ಗೊಂಬೆಗಳ ಮಾರಾಟವು 30% ಕುಸಿದಿದೆ,[೫೧] ಹಾಗೂ ವಿಶ್ವದಾದ್ಯಂತ 18% , ಈ ಎಲ್ಲಾ ಕುಸಿತಕ್ಕೆ ಕಾರಣ ಬ್ರಾಟ್ಜ್ ಗೊಂಬೆಗಳ ಹೆಚ್ಚಿದ ಜನಪ್ರಿಯತೆ.2006ರ ಡಿಸೆಂಬರ್‌ನಲ್ಲಿ ಮಾಟೆಲ್ ಕಂಪನಿಯು MGA ಎಂಟರ್‌ಟೈನ್‌ಮೆಂಟ್ ಕಂಪನಿಗೆ $500 ಮಿಲಿಯನ್ ಮೊತ್ತದ ಹಣವನ್ನು ನೀಡುವಂತೆ ಆಜ್ಞಾಪಿಸಿ ಒಂದು ಕಟ್ಟಳೆ ಹೊರಡಿಸಿತು, ಏಕೆಂದರೆ ಬ್ರಾಟ್ಜ್ ಗೊಂಬೆಯನ್ನು ಸೃಷ್ಟಿಸಿದ ಕಾರ್ಟೆರ್ ಬ್ರ್ಯಾಂಟ್ ಬ್ರಾಟ್ಜ್ ಗೊಂಬೆಯ ಕಲ್ಪನೆ ಮಾಡಿ ಅದಕ್ಕೆ ರೂಪ ಕೊಟ್ಟಾಗ ಆತ ಮಾಟೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.[೫೨] 2008ರ ಜುಲೈ 17ರಲ್ಲಿ, ಬ್ರಾಟ್ಜ್ ಸೃಷ್ಠಿಕರ್ತ ಕಾರ್ಟರ್ ಬ್ರ್ಯಾಂಟ್ ಮಾಟೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬ್ರಾಟ್ಜ್‌ನ ರಚನೆ ಮಾಡಿದ್ದಾನೆಂದು ಸಂಯುಕ್ತ ರಾಷ್ಟ್ರಗಳ ನ್ಯಾಯಮೂರ್ತಿಗಳು ಸಮ್ಮತಿಸಿದರು. ಜ್ಯೂರಿಯ ಪ್ರಕಾರ MGA ಮತ್ತು ಅದರ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಐಸಾಕ್ ಲೇರಿಯನ್ ಮ್ಯಾಟ್ಟೆಲ್ ಸ್ವತ್ತನ್ನು ಸ್ವಂತ ಪ್ರಯೋಜನಕ್ಕೋಸ್ಕರ ಬದಲಾವಣೆ ಮಾಡಿದ ಮತ್ತು ಮ್ಯಾಟ್ಟೆಲ್ ಜತೆ ಬ್ರ್ಯಾಂಟ್‌ಗೆ ಇದ್ದ ಒಪ್ಪಂದದ ನಡುವೆ ಮೂಗುತೂರಿಸಿದ ಆರೋಪಗಳು ಸಾಬೀತಾದವು.[೫೩] ಆಗಸ್ಟ್ 26ರಂದು ಮ್ಯಾಟ್ಟೆಲ್‌ಗೆ $100 million ನಷ್ಟು ನಷ್ಟವನ್ನು ತೆರಬೇಕಾಗುವುದೆಂದು ಜ್ಯೂರಿ ಅಭಿಪ್ರಾಯಪಟ್ಟಿತು. ೨೦೦೮ಡಿಸೆಂಬರ್ 3ರಂದು ಯು.ಎಸ್‌ನ ಜಿಲ್ಲಾ ನ್ಯಾಯಾಧೀಶ ಸ್ಟೀಫನ್ ಲಾರ್ಸನ್ MGA ಬ್ರಾಟ್ಜ್ ಅನ್ನು ಮಾರುವುದನ್ನು ನಿಷೇಧಿಸಿದರು. ಆ ಚಳಿಗಾಲದ ರಜೆಯ ಅವಧಿಯವರೆಗೂ ಗೊಂಬೆಗಳನ್ನು ಮಾರಲು ಅವರು ಅನುಮತಿ ನೀಡಿದರು.[೫೪][೫೫] MGA ಈಗ ಈ ಕೋರ್ಟ್ ತೀರ್ಪಿನ ವಿರುದ್ಧ ಅಪೀಲು ಸಲ್ಲಿಸುತ್ತಿದೆ. 2009ರ ಆಗಸ್ಟ್ ನಲ್ಲಿ MGA ಮಾಕ್ಸಿ ಗರ್ಲ್ಸ್ ಎಂಬ ಸರಣಿಯ ಬೊಂಬೆಗಳನ್ನು ಬ್ರಾಟ್ಜ್ ಬೊಂಬೆಗಳ ಬದಲಿಗೆ ಮಾರುಕಟ್ಟೆಗೆ ಪರಿಚಯಿಸಿತು.[೫೬]

ಇದನ್ನೂ ನೋಡಿರಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ಫಾರ್‌ಎವರ್ ಬಾರ್ಬಿ ಯ ಲೇಖಕರಾದ ಎಮ್.ಜಿ.ಲಾರ್ಡ್‌ರ ಜೊತೆಯಲ್ಲಿ ಒಂದು ಸಂದರ್ಶನದಲ್ಲಿ , ರುತ್ ಹ್ಯಾಂಡ್ಲರ್ ಅವರು ಗೊಂಬೆಯನ್ನು ಸ್ವಿಟ್ಜರ್‌ಲ್ಯಾಂಡ್‌ನ ಲುಸೆರ್ನೆಯಲ್ಲಿ ನೋಡಿರುವುದಾಗಿ ಹೇಳಿದ್ದಾರೆ ಆದಾಗ್ಯೂ ಪುಸ್ತಕದಲ್ಲ್ಲಿ ಇತರೆ ಸಂದರ್ಭಗಳಲ್ಲಿ ಬೊಂಬೆಯನ್ನು ಜುರಿಚ್ ಅಥವಾ ವಿಯಿನ್ನಾದಲ್ಲಿ ಹ್ಯಾಂಡ್ಲರ್ ಅವರು ನೋಡಿರುವುದಾಗಿ ಸೂಚಿಸಲಾಗಿದೆ.
  2. BBC NEWS | Business | Vintage Barbie struts her stuff
  3. ""Playscale per About.com". Archived from the original on 2011-07-07. Retrieved 2009-12-30.
  4. "ಆರ್ಕೈವ್ ನಕಲು". Archived from the original on 2007-04-14. Retrieved 2009-12-30.
  5. Who Made America? | Innovators | Ruth Handler
  6. Lawrence, Cynthia (1962). Here's Barbie. Random House. OCLC 15038159. {{cite book}}: Unknown parameter |coauthors= ignored (|author= suggested) (help)
  7. Biederman, Marcia (September 20, 1999). "Generation Next: A newly youthful Barbie takes Manhattan". New York. Retrieved 2009-06-04. {{cite news}}: Italic or bold markup not allowed in: |publisher= (help)
  8. BBC NEWS | World | Americas | Passion over for Barbie and Ken
  9. CNN.com - Madeover Ken hopes to win back Barbie - Feb 10, 2006
  10. "Barbie's Secret". Archived from the original on 2008-03-02. Retrieved 2009-12-30.
  11. "What would Barbie's measurements be if she were a real woman ? - Yahoo! Answers". Archived from the original on 2021-04-22. Retrieved 2021-07-20.
  12. ಎಂ.ಜಿ. ಲಾರ್ಡ್ Forever Barbie , Chapter 11 ISBN 0-8027-7694-9
  13. BBC News | Business | Barbie undergoes plastic surgery
  14. What would a real life Barbie look like?
  15. COMPANY NEWS: Mattel Says It Erred; Teen Talk Barbie Turns Silent on Math - New York Times
  16. "African American Fashion Dolls of the 60s". Archived from the original on 2011-08-22. Retrieved 2009-12-30.
  17. "Faces of Christie". Archived from the original on 2011-07-20. Retrieved 2009-12-30.
  18. "Mattel introduces black Barbies, to mixed reviews". Fox News. 2009-10-09. Retrieved 2009-10-18.
  19. "ಆರ್ಕೈವ್ ನಕಲು". Archived from the original on 2007-10-12. Retrieved 2009-12-30.
  20. Barbie's Disabled Friend Can't Fit
  21. "ಆರ್ಕೈವ್ ನಕಲು". Archived from the original on 2007-06-17. Retrieved 2009-12-30.
  22. Kiss That Barbie! Archived 2008-12-10 ವೇಬ್ಯಾಕ್ ಮೆಷಿನ್ ನಲ್ಲಿ.Why There Is No Such Thing As A Toxic Barbie Archived 2008-12-10 ವೇಬ್ಯಾಕ್ ಮೆಷಿನ್ ನಲ್ಲಿ.
  23. Malibu Barbie, Holiday Barbie ... Toxic Barbie?
  24. ""Jewish" Barbie Dolls Denounced in Saudi Arabia". Archived from the original on 2011-05-25. Retrieved 2009-12-30.
  25. Al-Ahram Weekly | Living | Move over, Barbie
  26. BBC News | MIDDLE EAST | Muslim dolls tackle 'wanton' Barbie
  27. Barbie given tattoos by makers to mimic high-profile celebrities like Amy Winehouse
  28. BBC NEWS | England | Somerset | Barbie dolls become 'hate' figure
  29. "Press Release - 19 December 2005 University of Bath". Archived from the original on 4 ಜೂನ್ 2011. Retrieved 30 ಡಿಸೆಂಬರ್ 2009.
  30. BBC NEWS | World | Americas | Barbie loses battle over bimbo image
  31. "Aqua Barbie Girl lyrics". Archived from the original on 2011-06-29. Retrieved 2009-12-30.
  32. Mattel Sues Nissan Over TV Commercial
  33. After Aqua, Mattel goes after Car Ad MTV.com ಸೆಪ್ಟೆಂಬರ್ 24, 1997
  34. Battleground Barbie: When Copyrights Clash Archived 2012-10-21 ವೇಬ್ಯಾಕ್ ಮೆಷಿನ್ ನಲ್ಲಿ. ಪೀಟರ್ ಹಾರ್ಟ್‌ಲಾಬ್, The Los Angeles Daily News, ಮೇ 31, 1998. Accessed ಜುಲೈ 3, 2009.
  35. Barbie / gangsta-barbie.jpg
  36. Barbie Liberation
  37. While Barbie Talks Tough, G. I. Joe Goes Shopping - New York Times
  38. Barbie-in-a-blender artist wins $1.8 million award | OUT-LAW.COM
  39. "National Barbie-in-a-Blender Day!". Archived from the original on 2012-02-11. Retrieved 2009-12-30.
  40. https://web.archive.org/web/20071129055525/http://www.alteredbarbie.com/pdf/mattelfeescase.pdf
  41. The Scotsman
  42. "Barbies Shop in the news". Archived from the original on 2009-06-11. Retrieved 2009-12-30.
  43. "Mattel Loses Trade Mark Battle with 'Barbie'". Archived from the original on 2012-02-19. Retrieved 2021-08-10.
  44. "Scoop - Where the Magic of Collecting Comes Alive! - 1959 Blonde Ponytail Barbie Brings Over $3,000!". Archived from the original on 2006-11-26. Retrieved 2023-02-10.
  45. "ಆರ್ಕೈವ್ ನಕಲು". Archived from the original on 2006-10-03. Retrieved 2006-10-03.
  46. BarbieCollector.com - Welcome to the official Mattel site for Barbie Collector
  47. BarbieCollector.com - Welcome to the official Mattel site for Barbie Collector
  48. BarbieCollector.com - Welcome to the official Mattel site for Barbie Collector
  49. BarbieCollector.com - Welcome to the official Mattel site for Barbie Collector
  50. BBC NEWS | Business | Bratz topple Barbie from top spot
  51. BBC NEWS | Business | Barbie blues for toy-maker Mattel
  52. Goddard, Jacqui (December 11, 2006). "Barbie takes on the Bratz for $500m". The Daily Telegraph. Archived from the original on 2008-02-24. Retrieved 2008-12-07. {{cite news}}: Italic or bold markup not allowed in: |publisher= (help)
  53. "Jury rules for Mattel in Bratz doll case". New York Times. July 18, 2008. Retrieved 2008-12-07. {{cite news}}: Italic or bold markup not allowed in: |publisher= (help)
  54. "Barbie beats back Bratz". CNN Money. December 4, 2008. Retrieved 2008-12-07. {{cite news}}: Italic or bold markup not allowed in: |publisher= (help)
  55. Colker, David (December 4, 2008). "Bad day for the Bratz in L.A. court". Los Angeles Times. Retrieved 2008-12-07. {{cite news}}: Italic or bold markup not allowed in: |publisher= (help)
  56. Anderson, Mae (August 3, 2009). "Bratz maker introduces new doll line". Associated Press. Archived from the original on 2009-08-04. Retrieved 2009-10-29. {{cite news}}: Italic or bold markup not allowed in: |publisher= (help)

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • Gerber, Robin (2009). Barbie and Ruth: The Story of the World's Most Famous Doll and the Woman Who Created Her. Collins Business. ISBN 978-0-06-134131-1. {{cite book}}: Cite has empty unknown parameter: |coauthors= (help); More than one of |author= and |last= specified (help)
  • ನಾಕ್, ಸಿಲ್ಕ್, "German Fashion Dolls of the 50&60". Paperback www.barbies.de.
  • Lord, M. G. (2004). Forever Barbie: the unauthorized biography of a real doll. New York: Walker & Co. ISBN 978-0-8027-7694-5. {{cite book}}: Cite has empty unknown parameter: |coauthors= (help); More than one of |author= and |last= specified (help)
  • Plumb, Suzie, ed. (2005). Guys 'n' Dolls: Art, Science, Fashion and Relationships. Royal Pavilion, Art Gallery & Museums. ISBN 0-948723-57-2.
  • Rogers, Mary Ann (1999). Barbie culture. London: SAGE Publications. ISBN 0-7619-5888-6. {{cite book}}: Cite has empty unknown parameter: |coauthors= (help); More than one of |author= and |last= specified (help)
  • Singleton, Bridget (2000). The art of Barbie. London: Vision On. ISBN 0-9537479-2-1. {{cite book}}: Cite has empty unknown parameter: |coauthors= (help); More than one of |author= and |last= specified (help)

ಬಾಹ್ಯ ಸಂಪರ್ಕ[ಬದಲಾಯಿಸಿ]

"https://kn.wikipedia.org/w/index.php?title=ಬಾರ್ಬಿ&oldid=1204876" ಇಂದ ಪಡೆಯಲ್ಪಟ್ಟಿದೆ