ವಿಷಯಕ್ಕೆ ಹೋಗು

ನೈಸರ್ಗಿಕ ಸಂಪನ್ಮೂಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಫತು-ಹಿವದಲ್ಲಿರುವ ಮಳೆಕಾಡು, ಮಾರ್ಕ್ವೆಸಾಸ್ ಐಲ್ಯಾಂಡ್ ಬಾಧೆಗೊಳಗಾಗದ ನೈಸರ್ಗಿಕ ಸಂಪನ್ಮೂಲಕ್ಕೆ ಒಂದು ಉದಾಹರಣೆಯಾಗಿದೆ.
ಸಂತ ಕ್ರುಜ್ ಪ್ರೋವಿಂಸ್ ಆಫ್ ಅರ್ಜೆಂಟೈನಾ‌ದಲ್ಲಿರುವ ಉಪ್ಸಾಲ ಗ್ಲೇಸಿಯರ್ ನೈಸರ್ಗಿಕ ಸಂಪನ್ಮೂಲಕ್ಕೆ ಒಂದು ಉದಾಹರಣೆಯಾಗಿದೆ.
The conservation of natural resources is the fundamental problem. Unless we solve that problem, it will avail us little to solve all others.

Theodore Roosevelt[]

ಸಾಗರವು ನೈಸರ್ಗಿಕ ಸಂಪನ್ಮೂಲಕ್ಕೆ ಒಂದು ಉದಾಹರಣೆಯಾಗಿದೆ.

ನೈಸರ್ಗಿಕ ಸಂಪನ್ಮೂಲಗಳು ಭೂಮಿ ಅಥವಾ ಕಚ್ಛಾ ವಸ್ತುಗಳನ್ನು ) ಆರ್ಥಿಕಮಾನದಂಡ ಎಂದು ಉಲ್ಲೇಖಿಸಲಾಗಿದೆ) ಪರಿಸರದಲ್ಲಿ ಮಾನವರಿಂದ ಸ್ಥಾನಪಲ್ಲಟಕ್ಕೆ ಈಡಾಗದೇ ಇರುವಾಗ ಅವುಪ್ರಾಕೃತಿಕ ರೂಪದಲ್ಲಿ ಇರುತ್ತವೆ. ನೈಸರ್ಗಿಕ ಸಂಪನ್ಮೂಲವನ್ನು ವಿವಿಧ ಪರಿಸರ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಜೀವವೈವಿಧ್ಯತೆಯ ಆಧಾರದ ಮೇಲೆ ವಿಂಗಡಿಸಲಾಗಿದೆ.

ನೈಸರ್ಗಿಕ ಸಂಪನ್ಮೂಲಗಳೆಲ್ಲವೂಪರಿಸರ ಜನ್ಯ. ಹೆಚ್ಚಿನವುಗಳು ನಮ್ಮ ಉಳಿವಿಕೆಗೆ ಅತ್ಯವಶ್ಯಕ, ಮಿಕ್ಕವು ನಮ್ಮ ಬಯಕೆ ಪೂರೈಸಲು ಇರುವ ಸಾಧನಗಳು.ನೈಸರ್ಗಿಕ ಸಂಪನ್ಮೂಲಗಳನ್ನು ವಿವಿಧ ರೀತಿಯಲ್ಲಿ ವಿಂಗಡಿಸಬಹುದು.

ವರ್ಗೀಕರಣ

[ಬದಲಾಯಿಸಿ]

ದೊರೆಯುವ ಮೂಲದ ಆಧಾರದ ಮೇಲೆ, ಸಂಪನ್ಮೂಲಗಳನ್ನು ಹೀಗೆ ವಿಂಗಡಿಸಬಹುದು;

  • ಜೈವಿಕ{/0 - {1}ಜೀವಗೋಳದಿಂದ ಪಡೆದಿರುವಂತಹವುಗಳು ಜೈವಿಕ ಸಂಪನ್ಮೂಲಗಳು. ಅರಣ್ಯಗಳು ಮತ್ತು ಅರಣ್ಯೋತ್ಪನ್ನಗಳು, ಪ್ರಾಣಿಗಳು, ಪಕ್ಷಿಗಳು ಮತ್ತು ಅವುಗಳ ಉತ್ಪನ್ನಗಳು, ಮೀನು ಮತ್ತು ಇತರ ಸಮುದ್ರ ಜೀವಿಗಳು ಪ್ರಮುಖ ಉದಾಹರಣೆಗಳು. ಕೊಳೆತ ಜೈವಿಕ ವಸ್ತುಗಳಿಂದ ಮೈದಾಳುವ ಕಾರಣ ಕಲ್ಲಿದ್ದಲು ಮತ್ತು ಪೆಟ್ರೋಲಿಯಂನಂತಹ ಖನಿಜಗಳು ಸಹ ಈ ವಿಭಾಗಕ್ಕೆ ಸೇರುತ್ತವೆ.
  • ಅಜೈವಿಕ - ನಿರ್ಜೀವ ವಸ್ತುಗಳಿಂದ ನಿರ್ಮಾಣವಾದವು ಅಜೈವಿಕ ಸಂಪನ್ಮೂಲಗಳು.ಭೂಮಿ, ನೀರು, ಗಾಳಿ ಮತ್ತು ಚಿನ್ನ, ಕಬ್ಬಿಣ, ತಾಮ್ರ, ಬೆಳ್ಳಿ ಮುಂತಾದ ಖನಿಜಗಳು ಮೊದಲಾದವು ಇದಕ್ಕೆ ಉದಾಹರಣೆ.

ಅವುಗಳ ಅಭಿವೃದ್ಧಿಯ ಹಂತಗಳನ್ನು ಗಮನದಲ್ಲಿಟ್ಟುಕೊಂಡು, ನೈಸರ್ಗಿಕ ಸಂಪನ್ಮೂಲಗಳನ್ನು ಈ ಕೆಳಗಿನಂತೆ ಸೂಚಿಸಬಹುದು:

  • ಪ್ರಚ್ಛನ್ನ ಸಂಪನ್ಮೂಲಗಳು - ಪ್ರಚ್ಛನ್ನ ಸಂಪನ್ಮೂಲಗಳು ಭೂಮಿಯಲ್ಲಿ ಇರುವಂತಹವುಗಳು ಹಾಗೂ ಯಾವುದನ್ನು ಭವಿಷ್ಯದಲ್ಲಿ ಬಳಸಬಹುದೋ ಅವುಗಳನ್ನು ಪ್ರಚ್ಛನ್ನ ಸಂಪನ್ಮೂಲ ಎನ್ನಲಾಗಿದೆ. ಉದಾಹರಣೆಗಾಗಿ, ಖನಿಜ ತೈಲ ಭಾರತದ ಹಲವು ಭಾಗಗಳಲ್ಲಿರುವ ಸಂಚಿತ ಶಿಲೆಗಳಲ್ಲಿ ಇರಬಹುದು ಆದರೆ ಅದನ್ನು ನಿಜವಾಗಿ ಹೊರತೆಗೆದು, ಬಳಸುವವರೆಗೆ ಅದು ಪ್ರಚ್ಛನ್ನ ಸಂಪನ್ಮೂಲವಾಗಿಯೇ ಉಳಿದಿರುತ್ತದೆ.
  • ವಾಸ್ತವಿಕ ಸಂಪನ್ಮೂಲಗಳು ಯಾವುದನ್ನು ಈಗಾಗಲೇ ಪರಿಶೀಲಿಸಲಾಗಿದೆಯೋ,ಮತ್ತು ಅವುಗಳ ಪ್ರಮಾಣ ಹಾಗೂ ಗುಣಮಟ್ಟವನ್ನು ನಿರ್ಧರಿಸಿ, ಪ್ರಸ್ತುತ ದಿನಗಳಲ್ಲಿ ಬಳಸುತ್ತಿರುವೆವೋ ಅವು ಈ ಗುಂಪಿಗೆ ಸೇರುತ್ತವೆ. ಬಾಂಬೆ ಹೈ ಫೀಲ್ಡ್ಸ್‌ನಲ್ಲಿ ಸಿಗುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇದಕ್ಕೊಂದು ಉದಾಹರಣೆ. ಅರಣ್ಯ ಸಂಸ್ಕರಣೆಯಂತಹ ವಾಸ್ತವಿಕ ಸಂಪನ್ಮೂಲದ ಅಭಿವೃದ್ಧಿಯು ಲಭ್ಯವಿರುವ ತಂತ್ರಜ್ಞಾನ ಮತ್ತು ತಗಲುವ ದರವನ್ನು ಅವಲಂಬಿಸಿದೆ. ಲಭ್ಯವಿರುವ ತಂತ್ರಜ್ಞಾನದಿಂದ ಲಾಭದಾಯಕವಾಗಿ ಅಭಿವೃದ್ಧಿಗೊಳಿಸಬಹುದಾದ ವಾಸ್ತವಿಕ ಸಂಪನ್ಮೂಲದ ಭಾಗವನ್ನು ಮೀಸಲು ಎಂದು ಕರೆಯಲಾಗಿದೆ.

ನೈಸರ್ಗಿಕ ಸಂಪನ್ಮೂಲಗಳನ್ನು ಅವುಗಳಿಗಿರುವ ನವೀಕರಣ ಸಾಮರ್ಥ್ಯದ ಆಧಾರದ ಮೇಲೆ, ಈ ಕೆಳಗಿನಂತೆ ವಿಭಾಗಿಸಬಹುದು:

  • ಮರುಪೂರಣಗೊಳ್ಳುವ ಸಂಪನ್ಮೂಲಗಳು- ಸುಲಭವಾಗಿ ಪುನಃ ತುಂಬಬಹುದಾದ ಅಥವಾ ಪುನರುತ್ಪತ್ತಿ ಮಾಡಬಹುದಾದವುಗಳು ಯಾವುವೋ ಅವುಗಳೆಲ್ಲ ಮರುಪೂರಣಗೊಳ್ಳುವ ಸಂಪನ್ಮೂಲಗಳು. ಸೂರ್ಯನ ಬೆಳಕು, ಗಾಳಿ, ವಾಯು ಇತ್ಯಾದಿಗಳು ಸತತವಾಗಿ ಲಭ್ಯವಿರುತ್ತವೆ ಮತ್ತು ಅವುಗಳ ಪ್ರಮಾಣ ಮಾನವನ ಬಳಕೆಯಿಂದ ಧಕ್ಕೆಗೊಳಗಾಗುವುದಿಲ್ಲ. ಮಾನವನ ಬಳಕೆಯಿಂದ ಅನೇಕ ಸಂಪನ್ಮೂಲಗಳು ಖಾಲಿಯಾಗಬಹುದು, ಆದರೆ ಅದರ ಮರುಪೂರಣ ಸಾಧ್ಯ, ಹಾಗಾಗಿ ಇದರ ಹರಿವು ನಿರಂತರ ಇದ್ದೇ ಇರುತ್ತದೆ. ಕೆಲವೊಂದು, ಕೃಷಿ ಬೆಳೆಯಂತಹವುಗಳಿಗೆ ಮರಿಪೂರಣಗೊಳ್ಳಲು ಸ್ವಲ್ಪ ಸಮಯ ಸಾಕು, ನೀರು ಸ್ವಲ್ಪಮಟ್ಟಿಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಅರಣ್ಯಕ್ಕೆ ಇನ್ನಷ್ಟು ಹೆಚ್ಚು ಸಮಯ ಬೇಕಾಗುತ್ತದೆ.
  • ಮರುಪೂರಣಗೊಳ್ಳದ ಸಂಪನ್ಮೂಲಗಳು- - ಅನೇಕಾನೇಕ ವರ್ಷಗಳಿಂದ ಭೂ ಗರ್ಭದೊಳಗೆ ನಡೆದಿರುವ ಪ್ರಕ್ರಿಯೆಯಿಂದ ರೂಪುಗೊಂಡಿರುವ ಈ ಸಂಪನ್ಮೂಲವನ್ನು ಒಮ್ಮೆ ಹೊರತೆಗೆದರೆ ಅದರ ಮರುಪೂರಣ ಮಾಡುವುದು ಅಸಾಧ್ಯ.ಖನಿಜಗಳು ಮತ್ತು ಪಳೆಯುಳಿಕೆಗಳು ಈ ವರ್ಗಕ್ಕೆ ಸೇರುತ್ತವೆ. ಅವುಗಳು ರಚನೆಯಾಗುವುದು ತುಂಬಾ ನಿಧಾನ. ಒಮ್ಮೆ ಅವುಗಳು ಖಾಲಿಯಾದ ನಂತರ ಅವುಗಳ ಮರುಪೂರಣ ಅಸಾಧ್ಯ.ಲೋಹದಂಥ ಖನಿಜಗಳಿಗೆ ಪರಿವರ್ತನಾ ಬಳಕೆಯ ಸಾಧ್ಯತೆಯಿಂದಾಗಿ ಅವುಗಳನ್ನು ಮತ್ತೆ ಮತ್ತೆ ಉಪಯೋಗಿಸಲು ಸಾಧ್ಯವಿದೆ. ಆದರೆ ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳ ಮರುಬಳಕೆ ಅಸಾಧ್ಯ.

ಉದಾಹರಣೆಗಳು

[ಬದಲಾಯಿಸಿ]

ನೈಸರ್ಗಿಕ ಸಂಪನ್ಮೂಲಗಳ ಕೆಲವು ಉದಾಹರಣೆಗಳು ಈ ಹೀಗಿವೆ:

ನಿರ್ವಹಣೆ

[ಬದಲಾಯಿಸಿ]

ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಯು ನೆಲ, ನೀರು, ಮಣ್ಣು, ಗಿಡಗಳು ಮತ್ತು ಪ್ರಾಣಿಗಳು ಮುಂತಾದ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಜೀವನ ಗುಣಮಟ್ಟದ ಮೇಲೆ ಹೇಗೆ ಪರಿಣಾಮ ಬೀರಬಲ್ಲದು ಎಂಬುದನ್ನು ಒಳಗೊಂಡಿರುವ ಒಂದು ವಿಧಾನ. ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯು ಸಮರ್ಥನೀಯ ಅಭಿವೃದ್ಧಿಯ ಕಲ್ಪನೆಯೊಂದಿಗೆ ಸಂಬಂಧ ಹೊಂದಿದೆ. ಭೂಮಿಯ ದೇಖರೇಖೆ ಮತ್ತು ಪರಿಸರ ಸಂರಕ್ಷಣೆಗೆ ಪ್ರಪಂಚದಾದ್ಯಂತ ಈ ಕಲ್ಪಿತ ತತ್ತ್ವವೇ ಆಧಾರ.

ನಗರ ಯೋಜನೆಯ ನಿಯಮಗಳು ಮತ್ತು ಪರಿಸರ ನಿರ್ವಹಣೆಯ ವಿಸ್ತೃತ ಕಲ್ಪನೆಗೆ ಪ್ರತಿಯಾಗಿ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯು ನಿರ್ದಿಷ್ಟವಾಗಿ ಸಂಪನ್ಮೂಲಗಳ ವೈಜ್ಞಾನಿಕ ಮತ್ತು ತಾಂತ್ರಿಕ ತಿಳಿವಳಿಕೆ ಮತ್ತು ಆ ಸಂಪನ್ಮೂಲಗಳ ಪರಿಸರ ವಿಜ್ಞಾನ ಮತ್ತು ಜೀವರಾಶಿಯ ಆಧಾರ ಸಾಮರ್ಥ್ಯದತ್ತ ಬೆಳಕು ಚೆಲ್ಲುತ್ತದೆ.[]

ಬರಿದಾಗುವಿಕೆ

[ಬದಲಾಯಿಸಿ]

ಇತ್ತೀಚಿನ ವರ್ಷಗಳಲ್ಲಿ, ನೈಸರ್ಗಿಕ ಸಂಪನ್ಮೂಲಗಳ ಖಾಲಿಮಾಡುವುದು ಮತ್ತು [[ಪುಷ್ಟಿಕ





ರ ಅಭಿವೃದ್ಧಿ|ಸಮರ್ಥ ಅಭಿವೃದ್ಧಿ]]ಗೆ ಪ್ರಯತ್ನಿಸುವುದು ಅಭಿವೃದ್ದಿ ಸಂಸ್ಥೆಗಳ ಪ್ರಮುಖ ಕೆಲಸವಾಗಿದೆ. ಯಾರೂ ತುಂಬಿಕೊಡಲಾಗದಂಥ ಜೀವ ವೈವಿಧ್ಯತೆಯನ್ನು ಒಳಗೊಂಡಿರುವ ನೈಸರ್ಗಿಕ ರಾಜಧಾನಿ ಎನಿಸಿರುವ ಮಳೆಕಾಡು ಪ್ರದೇಶಗಳಲ್ಲಿ ಈ ಕಳಕಳಿ ಅಧಿಕವಾಗಿದೆ.ನೈಸರ್ಗಿಕ ಸ್ಥಿತಿವಂತಿಕೆ, ಪರಿಸರ ವಾದ,, ಪರಿಸರ ವಿಜ್ಞಾನ ಚಳವಳಿ, ಮತ್ತು ಹಸಿರು ನೀತಿ- ಈ ಎಲ್ಲ ಚಳವಳಿಗಳದ್ದೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯದ್ದೇ ನೈಸರ್ಗಿಕ ಸ್ಥಿತಿವಂತಿಕೆಮೂಲ ಮಂತ್ರ.ಸಾಮಾಜಿಕ ಅಶಾಂತಿ ಮತ್ತು ಸಂಘರ್ಷಗಳೇ ಬರಿದಾಗುವಿಕೆಯ ಮೂಲ ಕಾರಣ ಎಂದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿನ ಕೆಲವರ ಅಭಿಮತ.

ಗಣಿಗಾರಿಕೆ, ಪೆಟ್ರೋಲಿಯಂ ಹೊರತೆಗೆಯುವಿಕೆ, ಮೀನುಗಾರಿಕೆ, ಬೇಟೆಯಾಡುವುದು, ಮತ್ತು ಅರಣ್ಯಾವಲಂಬನೆ ಮುಂತಾದವುಗಳನ್ನು ಸಾಮಾನ್ಯವಾಗಿ ನೈಸರ್ಗಿಕ-ಸಂಪನ್ಮೂಲ ಉದ್ಯಮವನ್ನಾಗಿ ಪರಿಗಣಿಸಲಾಗಿದೆ. ಕೃಷಿಯನ್ನು ಮಾನವ-ನಿರ್ಮಿತ ಸಂಪನ್ಮೂಲವೆಂದು ಗುರುತಿಸಲಾಗಿದೆ. ಪ್ರಸಿದ್ಧ ಪರಿಸರ ವಾದಿ ಮತ್ತು ಯುನೈಟೆಡ್ ಸ್ಟೇಟ್ಸ್‌‌ನ ಮಾಜಿ ಅಧ್ಯಕ್ಷರಾದ ಥಿಯೊಡರ್ ರೂಸ‌್ವೆಲ್ಟ್‌ ಮಿತಿಮೀರಿದ ನೈಸರ್ಗಿಕ ಸಂಪನ್ಮೂಲಗಳ ಹೊರತೆಗೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. "ರಾಷ್ಟ್ರವೊಂದರ ನೈಸರ್ಗಿಕ ಸಂಪನ್ಮೂಲಗಳು ಖನಿಜಗಳು, ಶಕ್ತಿ, ನೆಲ, ಜಲ, ಮತ್ತು ಜೀವಿ ಸಮೂಹಗಳನ್ನು ಒಳಗೊಂಡಿರುತ್ತವೆ."[]-ಎಂದು ಯುನೈಟೆಡ್ ಸ್ಟೇಟ್ಸ್ ಜಿಯಲೋಜಿಕಲ್‌ ಸರ್ವೇ (=ಯುನೈಟೆಡ್ ಸ್ಟೇಟ್ಸ್ ಭೌಗೋಳಿಕ ಸಮೀಕ್ಷೆ)ಯು ಪದವನ್ನು ಹೀಗೆಂದು ವ್ಯಾಖ್ಯಾಸಿದೆ.

ರಕ್ಷಣೆ

[ಬದಲಾಯಿಸಿ]

ಭೂಮಿಯ ಜೀವ ವೈವಿಧ್ಯತೆಯ ಸ್ವಭಾವ ಮತ್ತು ಸ್ಥಿತಿಗತಿಯ ವೈಜ್ಞಾನಿಕ ಅಧ್ಯಯನವೇ ಸಂರಕ್ಷಣಾ ಜೀವ ವಿಜ್ಞಾನ.[][] ಜೀವಿಗಳು, ಅವುಗಳ ಆವಾಸಸ್ಥಾನ ಮತ್ತು ಪರಿಸರ ವ್ಯವಸ್ಥೆಯನ್ನು ಮಿತಿಮೀರಿದ ವೇಗದಲ್ಲಿ ನಾಶ ಆಗುವುದನ್ನು ತಪ್ಪಿಸುವುದು ಇದರ ಗುರಿ. ವಿಜ್ಞಾನ, ಅರ್ಥಶಾಸ್ತ್ರ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ- ಈ ವಿಷಯಗಳನ್ನು ಹಾಸುಹೊಕ್ಕಾಗಿ ಉಳ್ಳ ಒಂದು ಅಧ್ಯಯನ.ಸಂರಕ್ಷಣಾ ಜೀವ ವಿಜ್ಞಾನ ಎಂಬ ಪದಗುಚ್ಛವನ್ನು, ಜೀವ ವಿಜ್ಞಾನಿಗಳಾದ ಬ್ರೂಸ್ ವಿಲ್ಕೋಕ್ಸ್ ಮತ್ತು ಮೈಕೆಲ್ ಸೋಲ್‌‌ರವರು ಸಂಘಟಿಸಿದ ಸ್ಯಾನ್ ಡಿಯಾದಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯವು ಕ್ಯಾಲಿಫೋರ್ನಿಯಾದ ಲಾ ಜೊಲ್ಲಾದಲ್ಲಿ 1978ರಲ್ಲಿ ನಡೆಸಿದ ಅಧಿವೇಶನದ ಶೀರ್ಷಿಕೆಯಾಗಿ ಬಳಕೆಗೆ ಬಂತು.

ಆವಾಸಸ್ಥಾನ ಸಂರಕ್ಷಣೆಯು ಒಂದು ನೆಲ ನಿರ್ವಹಣೆ. ಅದು ಕಾಡು ಪ್ರಾಣಿಗಳಿಗಾಗಿ, ವಿಶೇಷವಾಗಿ ಸಂರಕ್ಷಣೆ ಮಾಡಲೇಬೇಕಾದ ಜೀವಿಗಳು, ಮತ್ತು ಗಿಡಗಳಿಗಾಗಿ ಆವಾಸಸ್ಥಾನ ಪ್ರದೇಶಗಳನ್ನು ಸಂರಕ್ಷಿಸಲು, ಮತ್ತು ಕಾಪಾಡಲು ಪ್ರಯತ್ನಿಸುತ್ತದೆ. ಸಂಖ್ಯಾ ಶ್ರೇಣಿಯಲ್ಲಿ ಅವುಗಳ ನಾಶ ತಡೆ,ಛಿದ್ರೀಕರಣ ಅಥವಾ ಅಳಿವಿನಂಚಿಗೆ ಹೋಗುವುದನ್ನು ತಡೆಯುತ್ತದೆ.[] ಇದು ಅನೇಕ ಗುಂಪುಗಳ ಆದ್ಯವಿಷಯ ಇದನ್ನು ಯಾವುದೇ ಒಂದು ಸಿದ್ಧಾಂತದ ನಿಯಮದಿಂದ ಸುಲಭವಾಗಿ ವಿವರಿಸಲು ಸಾಧ್ಯವಿಲ್ಲ.

ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಮಹತ್ವ =ಇದನ್ನೂ ನೋಡಿ=

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
ಬೆಲ್ಜಿಯನ್ ಕರಾವಳಿಯಲ್ಲಿರುವ ಥೋರ್ನಂಟನ್ ಬ್ಯಾಂಕ್‌ ವಾಯು ಫಾರ್ಮ್‌ನಲ್ಲಿ ಅನಿಲ ಚಕ್ರದಲ್ಲಿ REಶಕ್ತಿ 5MWನಷ್ಟು ವಾಯು ಶಕ್ತಿಯ ನೈಸರ್ಗಿಕ ಸಂಪನ್ಮೂಲವನ್ನು ಉತ್ಪಾದಿಸಲಾಗುತ್ತದೆ.
  1. Theodore Roosevelt, Address to the Deep Waterway Convention Memphis, TN, October 4, 1907
  2. ಯುನೈಟೆಡ್ ಸ್ಟೇಟ್ಸ್ ಕೃಷಿ ವಿಭಾಗ - ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಸೇವೆ Archived 2009-10-08 ವೇಬ್ಯಾಕ್ ಮೆಷಿನ್ ನಲ್ಲಿ..ಸೂಪರ್‌ಮ್ಯಾನ್ ಮೇ 2009ರಲ್ಲಿ ಆವಿಷ್ಕರಿಸಲಾಗಿದೆ.
  3. ಮ್ಯಾಸ್ಸೆ ವಿಶ್ವವಿದ್ಯಾನಿಲಯ: ಬ್ಯಾಚುಲರ್ ಆಫ್ ಅಪ್ಲೈಡ್ ಸೈನ್ಸ್ (ನೈಸರ್ಗಿಕ ಸಂಪನ್ಮೂಲ ನಿರ್ವಹಣೆ)[permanent dead link]
  4. "Natural Resources". U.S. Geological Survey. Archived from the original on 2008-09-17. Retrieved 2008-10-09.
  5. M.E. ಸೋಲ್ ಮತ್ತು B.A. ವಿಲ್ಕೋಕ್ಸ್. 1980. ಸಂರಕ್ಷಣಾ ಜೀವಶಾಸ್ತ್ರ: ವಿಕಾಸಾತ್ಮಕ-ಪರಿಸರವಿಜ್ಞಾನ ನೋಟ. ಸಿನಾಯೆರ್ ಸಂಸ್ಥೆಗಳು. ಸುಂದರ್‌ಲ್ಯಾಂಡ್, ಮಸ್ಸಾಚುಸೆಟ್ಸ್.
  6. M. E. ಸೋಲ್. (1986). ಸಂರಕ್ಷಣಾ ಜೀವಶಾಸ್ತ್ರ ಎಂದರೇನು? ಜೀವವಿಜ್ಞಾನ, 35(11): 727-734 http://www.michaelsoule.com/resource_files/85/85_resource_file1.pdf Archived 2019-04-12 ವೇಬ್ಯಾಕ್ ಮೆಷಿನ್ ನಲ್ಲಿ.
  7. Habitat Conservation Planning Branch. "Habitat Conservation". California Department of Fish & Game. Archived from the original on 2019-10-26. Retrieved 2009-04-07.

ಹೊರಗಿನ ಕೊಂಡಿಗಳು

[ಬದಲಾಯಿಸಿ]