ವಿಷಯಕ್ಕೆ ಹೋಗು

ಸಿದ್ಧಾಂತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿದ್ಧಾಂತ ಎಂದರೆ ಒಂದು ವಿದ್ಯಮಾನದ ಬಗ್ಗೆ ಆಲೋಚನಾತ್ಮಕ ಮತ್ತು ತರ್ಕಾಧಾರಿತ ಬಗೆಯ ಅಮೂರ್ತ ಅಥವಾ ಸಾಮಾನ್ಯೀಕೃತ ಚಿಂತನೆ, ಅಥವಾ ಅಂತಹ ವಿಚಾರದ ಫಲಿತಾಂಶಗಳು. ಹಲವುವೇಳೆ ಆಲೋಚನಾತ್ಮಕ ಮತ್ತು ತರ್ಕಾಧಾರಿತ ಚಿಂತನೆಯ ಪ್ರಕ್ರಿಯೆಯು ವೀಕ್ಷಣಾತ್ಮಕ ಅಧ್ಯಯನ, ಸಂಶೋಧನೆಯಂತಹ ಪ್ರಕ್ರಿಯೆಗಳೊಂದಿಗೆ ಸಂಬಂಧಿಸಿರುತ್ತದೆ. ಸಿದ್ಧಾಂತಗಳು ವೈಜ್ಞಾನಿಕವಾಗಿರಬಹುದು ಅಥವಾ ವೈಜ್ಞಾನಿಕದಿಂದ ಭಿನ್ನವಿರಬಹುದು (ಅಥವಾ ಸ್ವಲ್ಪಮಟ್ಟಿಗೆ ವೈಜ್ಞಾನಿಕವಿರಬಹುದು). ಸಂದರ್ಭವನ್ನು ಅವಲಂಬಿಸಿ, ಫಲಿತಾಂಶಗಳು, ಉದಾಹರಣೆಗೆ, ನಿಸರ್ಗವು ಹೇಗೆ ಕೆಲಸಮಾಡುತ್ತದೆ ಎಂಬುದಕ್ಕೆ ಸಾಮಾನ್ಯೀಕರಿಸಿದ ವಿವರಣೆಗಳನ್ನು ಒಗಳೊಳ್ಳಬಹುದು.

ಆಧುನಿಕ ವಿಜ್ಞಾನದಲ್ಲಿ, "ಸಿದ್ಧಾಂತ" ಪದವು ವೈಜ್ಞಾನಿಕ ಸಿದ್ಧಾಂತಗಳನ್ನು ಸೂಚಿಸುತ್ತದೆ, ಅಂದರೆ ವೈಜ್ಞಾನಿಕ ವಿಧಾನದೊಂದಿಗೆ ಸಮಂಜಸವಾದ ರೀತಿಯಲ್ಲಿ ಮಾಡಲಾದ, ಮತ್ತು ಆಧುನಿಕ ವಿಜ್ಞಾನಕ್ಕೆ ಬೇಕಾದ ಮಾನದಂಡಗಳನ್ನು ಪೂರೈಸುವ ನಿಸರ್ಗದ ಚೆನ್ನಾಗಿ ದೃಢಪಟ್ಟ ಬಗೆಯ ವಿವರಣೆ. ವೈಜ್ಞಾನಿಕ ಸಿದ್ಧಾಂತಗಳು ವೈಜ್ಞಾನಿಕ ಜ್ಞಾನದ ಅತ್ಯಂತ ವಿಶ್ವಾಸಾರ್ಹ, ಕೂಲಂಕಷವಾದ ಮತ್ತು ವಿಸ್ತಾರವಾದ ರೂಪವಾಗಿವೆ.[೧]

ಉಲ್ಲೇಖಗಳು[ಬದಲಾಯಿಸಿ]

  1. Schafersman, Steven D. "An Introduction to Science". Archived from the original on 2018-01-01. Retrieved 2020-02-01.