ಮಯೋಮಾರ್ಫ
ಮಯೋಮಾರ್ಫ Temporal range: Ypresian - Recent
| |
---|---|
ಪೂರ್ವದ ಮುಳ್ಳುಳ್ಳ ಇಲಿ (ಅಕೋಮಿಸ್ ಡಿಮಿಡಯಾಟಸ್) | |
Scientific classification | |
ಕ್ಷೇತ್ರ: | Eukaryota |
ಸಾಮ್ರಾಜ್ಯ: | Animalia |
ವಿಭಾಗ: | ಕಾರ್ಡೇಟಾ |
ವರ್ಗ: | Mammalia |
ಗಣ: | ರೊಡೆಂಷಿಯಾ |
ಉಪಗಣ: | ಮಯೋಮಾರ್ಫ Brandt, 1855 |
ಮೇಲ್ಕುಟುಂಬಗಳು | |
ಮ್ಯೂರಾಯ್ಡೀ | |
Synonyms | |
ಮ್ಯೂರಿಮೊರ್ಫ಼ಾ |
ಮಯೋಮಾರ್ಫ ರೊಡೆಂಷಿಯ ಗಣದ ಅತ್ಯಂತ ದೊಡ್ಡ ಉಪಗಣವಾಗಿದೆ. ನಿಜವಾದ ಇಲಿ, ಹೆಗ್ಗಣ, ಮತ್ತಿತರ ಸಂಬಂಧಿ ದಂಶಕಗಳನ್ನು ಇದು ಒಳಗೊಂಡಿದೆ.
ಆಹಾರ
[ಬದಲಾಯಿಸಿ]ಇವೆಲ್ಲವೂ ಸಸ್ಯಾಹಾರಿ. ಇವುಗಳಿಂದ ಬೆಳೆಗಳಿಗೆ, ದವಸಧಾನ್ಯಗಳಿಗೆ ಹಾನಿಯುಂಟು.
ದೇಹರಚನೆ
[ಬದಲಾಯಿಸಿ]ಇವುಗಳ ಹಲ್ಲುಗಳು ಸಸ್ಯಾಹಾರವನ್ನು ಕಡಿಯಲು ತಕ್ಕುದ್ದಾಗಿವೆ; ಒಂದು ಜೊತೆ ಹಲ್ಲುಗಳು ಉಳಿಯಂತೆ ಮೊನಚಾಗಿರುವುದರಿಂದ ಸಸ್ಯಾಹಾರವನ್ನು ಕಡಿದು ಸೇವಿಸಲು ಅನುಕೂಲ. ಕೋರೆಹಲ್ಲುಗಳಿಲ್ಲ. ಬಾಚಿಹಲ್ಲು ಮತ್ತು ದವಡೆ ಹಲ್ಲುಗಳ ನಡುವೆ ಡಯಾಸ್ಟೀಮ ಅವಕಾಶವುಂಟು. ಈ ಜೀವಿಗಳ ಹಿಂಗಾಲುಗಳಲ್ಲಿರುವ ಟಿಬಿಯ ಮತ್ತು ಫಿಬುಲ ಮೂಳೆಗಳು ಒಟ್ಟುಗೂಡಿವೆ. ಮಸೆಟ್ಟರ್ ಸ್ನಾಯುಗಳು ಕಣ್ಣಿನ ಗುಳಿಯ ತಳಭಾಗದಲ್ಲಿ ಹಾಯ್ದು ಹೋಗಿ ಮೂಲಗುಳಿಯಲ್ಲಿ ಸೇರಿವೆಯಾದರೆ ಸ್ನಾಯುಗಳ ಮೇಲ್ಭಾಗ ಕಣ್ಣಿನ ಗುಳಿಯ ಮುಂಭಾಗದಲ್ಲಿ ಹರಡಿರುವುವು. ಕಾಲುಗಳು ದೃಢವಾಗಿವೆ. ಬೆರಳುಗಳ ತುದಿಯಲ್ಲಿ ನಖಗಳುಂಟು. ಈ ಗುಂಪಿನ ಪ್ರಾಣಿಗಳು ಮಣ್ಣನ್ನು ಕೊರೆದು ಬಿಲಗಳನ್ನು ರೂಪಿಸಿಕೊಂಡೋ, ಮರದ ಪೊಟರೆಗಳಲ್ಲೋ, ಪೊದೆಗಳಲ್ಲೋ, ಮರದ ಮೇಲ್ಭಾಗದಲ್ಲೋ ವಾಸಿಸುತ್ತವೆ. ಇತರ ಸ್ತನಿಗಳಲ್ಲಿರುವಂತೆ ತಲೆಬುರುಡೆಯಲ್ಲಿ ಜೈಗೋಮ್ಯಾಟಿಕ್ ಕಮಾನು, ಟಿಂಪ್ಯಾನಿಕ್ ಬುಲ್ಲ, ಏಕೈಕ ಕಾಂಡೈಲ್ ಮತ್ತು ಕೆಳದವಡೆಯಲ್ಲಿ ಪ್ರತಿಯೊಂದು ಕಡೆ ಒಂದೊಂದು ಮೂಳೆ ಇವೆ. ಮಿದುಳಿನಲ್ಲಿ ತಿರಿಗಳ ರಚನೆ ಇಲ್ಲ. ವೃಷಣಗಳು ಉದರದಲ್ಲಿ ನೆಲೆಸಿದ್ದು ಪ್ರಾಣಿಯ ಬೆದೆಗಾಲದಲ್ಲಿ ಕೆಳಭಾಗದಲ್ಲಿರುವ ವೃಷಣ ಚೀಲಗಳಿಗೆ ಇಳಿಯುತ್ತವೆ.
ವ್ಯಾಪ್ತಿ ಮತ್ತು ವರ್ಗೀಕರಣ
[ಬದಲಾಯಿಸಿ]ಎಲ್ಲ ಪ್ರದೇಶಗಳಲ್ಲೂ ಈ ಗುಂಪಿನ ಪ್ರಾಣಿಗಳು ಕಾಣಬರುತ್ತವೆ. ಆದರೆ ದಕ್ಷಿಣ ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ.
ಈ ಉಪಗಣದಲ್ಲಿ ಮ್ಯೂರಿಡೀ, ಡೈಪೋಡಿಡೀ, ಕ್ರೈಸಿಟಿಡೀ ಮುಂತಾದ ಕುಟುಂಬಗಳಿವೆ. ಉದಾಹರಣೆಗಳು: ಹ್ಯಾಮ್‌ಸ್ಟರ್, ಹೈಡ್ರೋಮಿಸ್, ಮಸ್, ರ‍್ಯಾಟಸ್, ಡೈಪಸ್, ಮೈಕ್ರೋಟಸ್ ಇತ್ಯಾದಿ.
ಹೆಚ್ಚಿನ ಓದಿಗೆ
[ಬದಲಾಯಿಸಿ]- Carleton, M. D. and G. G. Musser. 2005. Order Rodentia. Pp745–752 in Mammal Species of the World A Taxonomic and Geographic Reference (D. E. Wilson and D. M. Reeder eds.). Baltimore, Johns Hopkins University Press.
- Clutton-Brock, Juliet (ed.). 2004. Mouse-like Rodents. Pp150–159 in Animal (David Burnley ed.). London, Dorling Kindersley.