ಕೋರೆಹಲ್ಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಉದ್ದವಾದ, ಚೂಪಾಗಿರುವ ಹಲ್ಲುಗಳೇ ಕೋರೆಹಲ್ಲುಗಳು

ಸಸ್ತನಿಗಳ ಬಾಯಿಯ ರಚನಾಶಾಸ್ತ್ರದಲ್ಲಿ, ಕೋರೆಹಲ್ಲುಗಳು ಎಂದರೆ ತುಲನಾತ್ಮಕವಾಗಿ ಉದ್ದ ಮತ್ತು ಚೂಪಾಗಿರುವ ಹಲ್ಲುಗಳು. ಆದರೆ, ಅವುಗಳು ಹೆಚ್ಚು ಚಪ್ಪಟೆಯಾಗಿ ಕಾಣಿಸಬಹುದು. ಈ ಕಾರಣದಿಂದ ಇವು ಬಾಚಿಹಲ್ಲುಗಳನ್ನು ಹೋಲುತ್ತವೆ. ಇವು ಚೆನ್ನಾಗಿ ಅಭಿವೃದ್ಧಿಯಾಗಿದ್ದು, ಇವನ್ನು ಮುಖ್ಯವಾಗಿ ಆಹಾರವನ್ನು ಪ್ರತ್ಯೇಕಿಸುವ ಸಲುವಾಗಿ ಅದನ್ನು ಹಿಡಿದಿಡಲು, ಮತ್ತು ಸಾಂದರ್ಭಿಕವಾಗಿ ಆಯುಧಗಳಾಗಿ ಬಳಸಲಾಗುತ್ತದೆ. ಹಲವುವೇಳೆ ಇವು ಸಸ್ತನಿಯ ಬಾಯಿಯಲ್ಲಿನ ಅತ್ಯಂತ ದೊಡ್ಡ ಹಲ್ಲುಗಳಾಗಿರುತ್ತವೆ. ಕೋರೆಹಲ್ಲುಗಳನ್ನು ವಿಕಸಿಸಿಕೊಂಡ ಬಹುತೇಕ ಪ್ರಜಾತಿಗಳ ಸದಸ್ಯರು ಸಾಮಾನ್ಯವಾಗಿ ನಾಲ್ಕು ಕೋರೆಹಲ್ಲುಗಳನ್ನು ಹೊಂದಿರುತ್ತವೆ, ಮೇಲಿನ ದವಡೆಯಲ್ಲಿ ಎರಡು ಮತ್ತು ಕೆಳಗಿನ ದವಡೆಯಲ್ಲಿ ಎರಡು. ಪ್ರತಿ ದವಡೆಯಲ್ಲಿ ಬಾಚಿಹಲ್ಲುಗಳು ಇವನ್ನು ಪ್ರತ್ಯೇಕಿಸುತ್ತವೆ; ಮಾನವರು ಮತ್ತು ನಾಯಿಗಳು ಉದಾಹರಣೆಗಳಾಗಿವೆ. ಬಹುತೇಕ ಪ್ರಜಾತಿಗಳಲ್ಲಿ, ಕೋರೆಹಲ್ಲುಗಳು ದವಡೆ ಎಲುಬಿನಲ್ಲಿನ ಅತ್ಯಂತ ಮುಂಭಾಗದ ಹಲ್ಲುಗಳಾಗಿರುತ್ತವೆ. ಕೋರೆಹಲ್ಲುಗಳು ಬಾಚಿಹಲ್ಲುಗಳಿಗಿಂತ ಹೆಚ್ಚು ದೊಡ್ಡ ಮತ್ತು ಹೆಚ್ಚು ಬಲಶಾಲಿಯಾಗಿರುತ್ತವೆ, ಮತ್ತು ಅವುಗಳ ಬೇರುಗಳು ಮೂಳೆಗಳಲ್ಲಿ ಆಳವಾಗಿ ಇಳಿದು, ಮೇಲ್ಮೈ ಮೇಲೆ ಒಳ್ಳೆ ಗುರುತುಗಳಿರುವ ಎದ್ದುಕೊಂಡಿರುವ ಭಾಗಗಳನ್ನು ಉಂಟುಮಾಡುತ್ತವೆ.