ಯಾರಿಗೆ ಸಾಲುತ್ತೆ ಸಂಬಳ (ಚಲನಚಿತ್ರ)
ಗೋಚರ
ಯಾರಿಗೆ ಸಾಲುತ್ತೆ ಸಂಬಳ 2000 ರ ಕನ್ನಡ ಚಲನಚಿತ್ರವಾಗಿದ್ದು, ಇದನ್ನು ಎಮ್. ಎಸ್. ರಾಜಶೇಖರ್ ನಿರ್ದೇಶಿಸಿದ್ದಾರೆ ಮತ್ತು ಬಿ. ಜಿ. ಹೇಮಲತಾ ನಿರ್ಮಿಸಿದ್ದಾರೆ. ಚಿತ್ರವು ಅನಂತ್ ನಾಗ್, ಸುಹಾಸಿನಿ ಮಣಿರತ್ನಂ, ಶಶಿಕುಮಾರ್, ಊರ್ವಶಿ, ಮೋಹನ್ ಶಂಕರ್, ಅನು ಪ್ರಭಾಕರ್ ಮತ್ತು ಉಮಾಶ್ರೀ ತಾರಾಗಣದಲ್ಲಿದ್ದಾರೆ . [೧] ಇದು ತಮಿಳಿನ ವೀರಲುಕ್ಕೆತ ವೀಕ್ಕಂ (1999) ಚಿತ್ರದ ರಿಮೇಕ್ ಆಗಿದೆ. [೨] ಇದರ ರೀಮೇಕ್ಗಳನ್ನು ತೆಲುಗುಭಾಷೆಯಲ್ಲಿ ಕ್ಷೇಮಾಂಗ ವೆಲ್ಲಿ ಲಾಬಂಗ ರಾಂಡಿ (2001) ಎಂದೂ ಮತ್ತು ಹಿಂದಿಯಲ್ಲಿ ಆಮ್ದಾನಿ ಅಠ್ಠಾನಿ ಖರ್ಚಾ ರುಪಯ್ಯಾ ಎಂದೂ ಮಾಡಲಾಯಿತು.
2000 ರಲ್ಲಿ ಬಿಡುಗಡೆಯಾದ ಈ ಚಲನಚಿತ್ರವು ಪ್ರಮುಖ ನಟರ ಅಭಿನಯ ಮತ್ತು ಹಂಸಲೇಖ ಅವರ ಸಂಗೀತ ಸಂಯೋಜನೆಗಳಿಗಾಗಿ ವಿಮರ್ಶಕರಿಂದ ಸಾಮಾನ್ಯವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.
ಪಾತ್ರವರ್ಗ
[ಬದಲಾಯಿಸಿ]- ವೆಂಕಟಗಿರಿಯಾಗಿ ಅನಂತ್ ನಾಗ್
- ರಮೇಶ್ ಪಾತ್ರದಲ್ಲಿ ಶಶಿಕುಮಾರ್
- ಲಕ್ಷ್ಮಿಯಾಗಿ ಸುಹಾಸಿನಿ ಮಣಿರತ್ನಂ
- ಮೋಹನ್ ಶಂಕರ್
- ಕುಸುಮಾ ಪಾತ್ರದಲ್ಲಿ ಅನು ಪ್ರಭಾಕರ್
- ಕರಿಬಸವಯ್ಯ
- ಸುಬ್ಬಿ ಪಾತ್ರದಲ್ಲಿ ಉಮಾಶ್ರೀ
- ಸುಗುಣ ಪಾತ್ರದಲ್ಲಿ ಊರ್ವಶಿ
- ಎಂ ಎಸ್ ಉಮೇಶ್
- ಕೋಟೆ ಪ್ರಭಾಕರ್
- ಪ್ರಶಾಂತ್ ಪಾತ್ರದಲ್ಲಿ ಹೊನ್ನವಳ್ಳಿ ಕೃಷ್ಣ
ಚಿತ್ರಸಂಗೀತ
[ಬದಲಾಯಿಸಿ]ಈ ಚಿತ್ರದ ಗೀತೆಗಳನ್ನು ಹಂಸಲೇಖ ಅವರು ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ..[೩]
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
---|---|---|---|---|
1. | "ಯಾರಿಗೆ ಸಾಲುತ್ತೆ ಸಂಬಳ" | ಹಂಸಲೇಖ | ರಾಜೇಶ್ ಕೃಷ್ಣನ್, ಹೇಮಂತ್, ರಮೇಶ್ ಚಂದ್ರ | |
2. | "ದೀಪದಿಂದ ದೀಪ" | ಹಂಸಲೇಖ | ಮಂಜುಳಾ ಗುರುರಾಜ್, ಅರ್ಚನಾ ಉಡುಪ, ನಂದಿತಾ, ರಾಜೇಶ್ ಕೃಷ್ಣನ್, ರಮೇಶ್ ಚಂದ್ರ, ಹೇಮಂತ್ | |
3. | "ಮೇಲಾ ಫೀಮೇಲಾ" | ಹಂಸಲೇಖ | ಮಂಜುಳಾ ಗುರುರಾಜ್, ಅರ್ಚನಾ ಉಡುಪ, ನಂದಿತಾ, ರಾಜೇಶ್ ಕೃಷ್ಣನ್, ಜಿ.ವಿ.ಅತ್ರಿ, ಹೇಮಂತ್ | |
4. | "ಶ್ರಾವಣ ವೀಣೆಯ" | ಹಂಸಲೇಖ | ರಾಜೇಶ್ ಕೃಷ್ಣನ್, ಲತಾ ಹಂಸಲೇಖ | |
5. | "ಪ್ರಿಯ ಪ್ರಿಯ ದೇಹದಲ್ಲಿ" | ಹಂಸಲೇಖ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ |
ಉಲ್ಲೇಖಗಳು
[ಬದಲಾಯಿಸಿ]- ↑ "Cast & Crew". Archived from the original on 2014-05-17. Retrieved 2021-11-22.
- ↑ "Viralukketha_Veekkam Movie review". Archived from the original on 2017-05-09. Retrieved 2021-11-22.
- ↑ "Songs list". Archived from the original on 2014-05-17. Retrieved 2021-11-22.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಯಾರಿಗೆ ಸಾಲುತ್ತೆ ಸಂಬಳ @ ಐ ಎಮ್ ಡಿ ಬಿಯಲ್ಲಿ