ಸುಹಾಸಿನಿ ಮಣಿರತ್ನಮ್

ವಿಕಿಪೀಡಿಯ ಇಂದ
Jump to navigation Jump to search
ಸುಹಾಸಿನಿ ಮಣಿರತ್ನಂ
Suhasini at a wedding of Soundarya Rajinikanth
ಜನನ (1961-08-15) 15 August 1961 (age 58)
ವೃತ್ತಿನಟಿ ನಿರ್ದೇಶಕಿ, ನಿರ್ಮಾಪಕಿ, ಬರಹಗಾರ್ತಿ
Years active1980–present
ಸಂಗಾತಿ(ಗಳು)ಮಣಿರತ್ನಂ
(1988–present)
ಮಕ್ಕಳು1ಸುಹಾಸಿನಿ ಮಣಿ ರತ್ನಮ್ (ಜನನ ಆಗಸ್ಟ್ ೧೫, ೧೯೬೧, ಹುಟ್ಟುಹೆಸರು ಸುಹಾಸಿನಿ) ಒಬ್ಬ ಪ್ರಶಸ್ತಿ ವಿಜೇತ ದಕ್ಷಿಣ ಭಾರತದ ಚಿತ್ರನಟಿ. ಅವರು ೧೯೮೦ರಲ್ಲಿ ತಮಿಳು ಚಲನಚಿತ್ರ ”ನೆಂಜತಾಯ್ ಕಿಲ್ಲಾತೆ” ಚಿತ್ರದ ಮೂಲಕ ತಮ್ಮ ಚಲನಚಿತ್ರ ಪಾದಾರ್ಪಣೆಯನ್ನು ಮಾಡಿದರು.

ಸುಹಾಸಿನಿಯವರು ಚೆನ್ನೈನಲ್ಲಿ ಕಮಲ್ ಹಾಸನ್‌ರ ಅಣ್ಣ ಚಾರುಹಾಸನ್‌ರ ಮಗಳಾಗಿ ಜನಿಸಿದರು. ಸುಹಾಸಿನಿಯವರು ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕ ಮಣಿರತ್ನಂ ಅವರ ಧರ್ಮಪತ್ನಿ.

ಸಿನಿಮಾ ಕ್ಷೇತ್ರದಲ್ಲಿ ಕ್ಯಾಮರಾ ಹಿಂದೆ ಕೆಲಸ ಮಾಡಬೇಕು ಎಂಬ ಮನಸ್ಸಿನಿಂದ ಬಂದು ಮುಂದೆ ಅವರನ್ನು ಕ್ಯಾಮರಾ ಮುಂದೆ ತಂದು ನಿಲ್ಲಿಸಿತು.."ನೆ೦ಜತ್ತೆ ಕಿಳ್ಳಾದೆ" ಚಿತ್ರದಲ್ಲಿ ಆಕಸ್ಮಿಕವಾಗಿ ಕ್ಯಾಮರಾ ಮುಂದೆ ಬಂದ ಸುಹಾಸಿನಿ ಇಂದು ಮಹಾನ್ ತಾರೆಯಾಗಿ, ದಕ್ಷಿಣ ಭಾರತದ ಎಲ್ಲಾ ಚಿತ್ರಗಳಲ್ಲೂ ಜನಸಾಗರಗಳ ಮನವನ್ನು ಗೆದ್ದು, ನಟನೆ, ನಿರ್ದೇಶನ, ನಿರ್ಮಾಣ, ಹೀಗೆ ಹೋದಲ್ಲೆಲ್ಲಾ ತಮ್ಮ ಪ್ರತಿಭೆಯ ಸುಗಂಧವನ್ನು ಪಸರಿಸಿದವರು.

ಕನ್ನಡದಲ್ಲಿ "ಉಷಾ", "ಬೆಂಕಿಯಲ್ಲಿ ಅರಳಿದ ಹೂವು" ಚಿತ್ರಗಳ ಮೂಲಕ ಕೆ ಬಾಲಚಂದರ್ ಅವರ ಚಿತ್ರಗಳಲ್ಲಿ ಪರಿಚಿತರಾದ ಸುಹಾಸಿನಿ ಮುಂದೆ "ಸುಪ್ರಭಾತ", "ಬಂಧನ", "ಹೊಸ ನೀರು", "ಮುತ್ತಿನ ಹಾರ", "ಹಿಮಪಾತ", "ಅಮೃತವರ್ಷಿಣಿ", "ಯಾರಿಗೆ ಸಾಲುತ್ತೆ ಸಂಭಳ", "ಮಾತಾಡು ಮಾತಾಡು ಮಲ್ಲಿಗೆ", "ಹೆಂಡ್ತೀಗೆ ಹೇಳ್ತೀನಿ", "ಸ್ಕೂಲ್ ಮಾಸ್ಟರ್ ", "ಎರಡನೇ ಮದುವೆ"... ಮುಂತಾದ ಚಲನಚಿತ್ರಗಳಲ್ಲಿ ನಟಿಸಿ ಕನ್ನಡಿಗರಿಗೆ ಅತ್ಯಂತ ಪ್ರಿಯರಾದ ಕಲಾವಿದೆಯರಲ್ಲಿ ಒಬ್ಬರಾದರು. ಅದರಲ್ಲೂ ಸುಪ್ರಭಾತ, ಬಂಧನ, ಅಮೃತವರ್ಷಿಣಿಗಳಂತೂ ಅವಿಸ್ಮರಣೀಯ ದೃಶ್ಯಕಾವ್ಯಗಳಾಗಿ ಹೊರ ಹೊಮ್ಮಿದವು.


"ಸಿಂಧು ಭೈರವಿ’" ಚಿತ್ರದಲ್ಲಿ ನೀಡಿದ ಅಭಿನಯಕ್ಕಾಗಿ ಸುಹಾಸಿನಿ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ. ದಕ್ಷಿಣ ಭಾರತದ ಪ್ರಸಿದ್ಧ ಕಲಾವಿದರಾದ ವಿಷ್ಣುವರ್ಧನ್, ಅನಂತನಾಗ್, ರಜನೀಕಾಂತ್, ಮುಮ್ಮುಟಿ, ಮೋಹನ್ ಲಾಲ್, ಚಿರಂಜೀವಿ, ರಮೇಶ್ ಮುಂತಾದ ಎಲ್ಲಾ ಪ್ರಸಿದ್ಧ ನಾಯಕನಟರು, ಎಲ್ಲಾ ಪ್ರಸಿದ್ಧ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಸುಹಾಸಿನಿ ತಾವೂ ಕೂಡಾ "ಇಂದಿರಾ" ಎಂಬ ಚಿತ್ರವನ್ನೂ, "ಪೆಣ್ " ಎಂಬ ದೂರದರ್ಶನ ಧಾರವಾಹಿಯನ್ನೂ ನಿರ್ದೇಶಿಸಿದ್ದಾರೆ. ತಮ್ಮ ಪತಿ ಪ್ರಸಿದ್ಧ ನಿರ್ದೇಶಕರಾದ "ಮಣಿರತ್ನಂ "ಅವರೊಂದಿಗೆ ಉತ್ತಮ ಚಿತ್ರಗಳ ನಿರ್ಮಾಣದಲ್ಲೂ ಅವರು ಸಹಭಾಗಿಗಳಾಗಿದ್ದಾರೆ. ಇಷ್ಟೇ ಅಲ್ಲದೆ ದೂರದರ್ಶನದಲ್ಲಿ ಸಿನಿಮಾ ವಿಮರ್ಶೆ, ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಭಾಗವಹಿಕೆ ಹೀಗೆ ಅವರು ಬಿಡುವಿಲ್ಲದೆ ನಿರಂತರ ನಿರತ ವ್ಯಕ್ತಿ. ಮುಕ್ತ ಚಿಂತನೆ, ನೇರ ನುಡಿ, ಸ್ನೇಹಶೀಲ ಪ್ರವೃತ್ತಿ, ಸೃಜನಶೀಲ ಚಟುವಟಿಕಗಳಿಂದ ಸುಹಾಸಿನಿ ಅವರು ಜನ ಸಾಮಾನ್ಯರ ಮೆಚ್ಹಿನ ನಟಿಯಾಗಿದ್ದಾರೆ.ಇವರ ತಂದೆ ಚಾರುಹಾಸನ್ ಅವರು ಕನ್ನಡದ ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ "ತಬರನ ಕತೆ" ಚಿತ್ರದಲ್ಲಿನ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದವರು."ನಮನ"

ಸುಹಾಸಿನಿ ಅಭಿನಯದ ಕೆಲವು ಚಿತ್ರಗಳು[ಬದಲಾಯಿಸಿ]

ಕನ್ನಡ[ಬದಲಾಯಿಸಿ]

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೮೩ ಬೆಂಕಿಯಲ್ಲಿ ಅರಳಿದ ಹೂವು ಕೆ.ಬಾಲಚಂದರ್ ಜೈಜಗದೀಶ್, ಪವಿತ್ರಾ
೧೯೮೪ ಬಂಧನ ಎಸ್.ವಿ.ರಾಜೇಂದ್ರಸಿಂಗ್ ಬಾಬು ವಿಷ್ಣುವರ್ಧನ್, ಜೈಜಗದೀಶ್
೧೯೮೬ ಉಷಾ ರಾಘವ ರಾಮಕೃಷ್ಣ
೧೯೮೬ ಹೊಸ ನೀರು ಕೆ.ವಿ.ಜಯರಾಂ ಅನಂತ್ ನಾಗ್
೧೯೮೮ ಸುಪ್ರಭಾತ ದಿನೇಶ್ ಬಾಬು ವಿಷ್ಣುವರ್ಧನ್
೧೯೯೦ ಮುತ್ತಿನಹಾರ ಎಸ್.ವಿ.ರಾಜೇಂದ್ರಸಿಂಗ್ ಬಾಬು ವಿಷ್ಣುವರ್ಧನ್
೧೯೯೫ ಹಿಮಪಾತ ಎಸ್.ವಿ.ರಾಜೇಂದ್ರಸಿಂಗ್ ಬಾಬು ವಿಷ್ಣುವರ್ಧನ್, ಜಯಪ್ರದಾ, ಜೈಜಗದೀಶ್
೧೯೯೭ ಅಮೃತವರ್ಷಿಣಿ ದಿನೇಶ್ ಬಾಬು ರಮೇಶ್, ಶರತ್ ಬಾಬು
೧೯೯೮ ಹೆಂಡ್ತಿಗೇಳ್ತೀನಿ ದಿನೇಶ್ ಬಾಬು ವಿಷ್ಣುವರ್ಧನ್
೧೯೯೯ ವಿಶ್ವ ಶಿವಮಣಿ ಶಿವರಾಜ್ ಕುಮಾರ್, ಅನಂತ್ ನಾಗ್
೨೦೦೦ ಯಾರಿಗೆ ಸಾಲುತ್ತೆ ಸಂಬಳ ಎಂ.ಎಸ್.ರಾಜಶೇಖರ್ ಶಶಿಕುಮಾರ್
೨೦೦೦ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕೂಡ್ಲು ರಾಮಕೃಷ್ಣ ಅನಂತ್ ನಾಗ್,ರಾಮಕೃಷ್ಣ, ತಾರ
೧೯೯೦ ಎಲ್ಲರ ಮನೆ ದೋಸೆನು ಎಚ್.ಎನ್.ಪ್ರಕಾಶ್ ರಾಮ್ ಕುಮಾರ್, ಶ್ರುತಿ
೨೦೦೧ ಹಾಲು ಸಕ್ಕರೆ ಯೋಗಿಶ್ ಹುಣಸೂರು ದೇವರಾಜ್, ಶಶಿಕುಮಾರ್, ಜಗ್ಗೇಶ್, ಅರ್ಚನಾ
೨೦೦೩ ಅಣ್ಣಾವ್ರು ಓಂಪ್ರಕಾಶ್ ರಾವ್ ಅಂಬರೀಶ್, ದರ್ಶನ್
೨೦೦೭ ಮಾತಾಡ್ ಮಾತಾಡು ಮಲ್ಲಿಗೆ ನಾಗತಿಹಳ್ಳಿ ಚಂದ್ರಶೇಖರ್ ವಿಷ್ಣುವರ್ಧನ್
೨೦೧೦ ಎರಡನೇ ಮದುವೆ ದಿನೇಶ್ ಬಾಬು ಅನಂತ್ ನಾಗ್
೨೦೧೦ ಸ್ಕೂಲ್ ಮಾಸ್ಟರ್ ದಿನೇಶ್ ಬಾಬು ವಿಷ್ಣುವರ್ಧನ್
೨೦೧೧ ಮತ್ತೊಂದು ಮದುವೇನಾ ದಿನೇಶ್ ಬಾಬು ಅನಂತ್ ನಾಗ್
೨೦೧೩ "ಮೈನಾ" ನಾಗಶೇಖರ್

ಚೇತನ್ , ನಿತ್ಯಾ ಮೆನನ್