ಪ್ರತೀಕ್ಷಾ ಕಾಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರತೀಕ್ಷಾ ಕಾಶಿ
೧೭ ಜನವರಿ ೨೦೧೬ ರಂದು ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಟ್ಟಾಂಬಿಯಲ್ಲಿ ಪ್ರತೀಕ್ಷಾ ಕಾಶಿಯವರ ಕೂಚಿಪೂಡಿ ನೃತ್ಯ ಪ್ರದರ್ಶನ
Born
Nationalityಭಾರತೀಯ
Occupation(s)ನೃತ್ಯಗಾರ್ತಿ, ನಟಿ
Known forಕೂಚಿಪೂಡಿ ನೃತ್ಯಗಾರ್ತಿ
Movementಕೂಚಿಪೂಡಿ
Parents
Websitewww.prateekshakashi.com
೨೦೧೩ ರಲ್ಲಿ ಬೆಂಗಳೂರಿನ ಒಡುಕ್ಕತ್ತೂರ್ ಮಠ್ ಹಾಲ್ ನಲ್ಲಿ ಪ್ರದರ್ಶನ ನೀಡುತ್ತಿರುವ ಪ್ರತೀಕ್ಷಾ[ಕೃಪೆ:ಅಂಜಲಿ ರೆಡ್ಡಿ ಜೆ]
೨೦೧೩ ರಲ್ಲಿ ಬೆಂಗಳೂರಿನ ಎಡಿಎ ರಂಗಮಂದಿರ ರಸ ಸಂಜೆಯಲ್ಲಿ ಪ್ರದರ್ಶನ ನೀಡುತ್ತಿರುವ ಪ್ರತೀಕ್ಷಾ[ಕೃಪೆ:ಅಂಜಲಿ ರೆಡ್ಡಿ ಜೆ]

ಪ್ರತೀಕ್ಷಾ ಕಾಶಿ ಯವರು ಕೂಚಿಪೂಡಿ ನೃತ್ಯಗಾರ್ತಿ.ಅವರು ಡಾ.ಗುಬ್ಬಿ ವೀರಣ್ಣರವರ ಕುಟುಂಬಕ್ಕೆ ಸೇರಿದವರು.[೧]ಐದನೆಯ ವಯಸ್ಸಿನಲ್ಲಿಯೇ ನೃತ್ಯ ಮಾಡಲು ಪ್ರಾರಂಭಿಸಿದ್ದರು.ಪ್ರತೀಕ್ಷಾರವರು ತಮ್ಮ ತಾಯಿ ವೈಜಯಂತಿ ಕಾಶಿ ಯವರ ಮಾರ್ಗದರ್ಶನದಿಂದ ಕೂಚಿಪೂಡಿ ಯಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.[೨]ಯುವಜನರನ್ನು ಕೂಚಿಪೂಡಿ ನೃತ್ಯದ ಕಡೆಗೆ ಪ್ರೇರೇಪಿಸಲು ಅವರು ಬೆಂಗಳೂರಿನಲ್ಲಿ ಆಸಕ್ತಿವುಳ್ಳ ನೃತ್ಯಗಾರರಿಗೆ ತರಬೇತಿ ನೀಡುತ್ತಿದ್ದಾರೆ.

ಜೀವನ ಮತ್ತು ವೃತ್ತಿ[ಬದಲಾಯಿಸಿ]

ಪ್ರತೀಕ್ಷಾ ಕಾಶಿಯವರು ಮೇ ೨೯ ೧೯೯೦ ರಂದು ಬೆಂಗಳೂರಿನಲ್ಲಿ ಜನಿಸಿದರು.[೩]ಅವರು ಕೂಚಿಪೂಡಿ ನೃತ್ಯಗಾರ್ತಿ ವೈಜಯಂತಿ ಕಾಶಿ ಮತ್ತು ದೂರದರ್ಶನ ಹಾಗೂ ರಂಗಭೂಮಿ ಕಲಾವಿದರಾದಂತಹ ವಿಜಯ್ ಕಾಶಿಯವರ ಮಗಳು.ಐದನೆಯ ವಯಸ್ಸಿನಲ್ಲಿ ನೃತ್ಯದ ಮೇಲೆ ಆಸಕ್ತಿ ವ್ಯಕ್ತಪಡಿಸಿದ ಪ್ರತೀಕ್ಷಾರವರಿಗೆ ಅವರ ತಾಯಿಯೇ ಮಾರ್ಗದರ್ಶಕರಾಗಿದ್ದರು.ತಮ್ಮ ಹದಿಮೂರನೇ ವಯಸ್ಸಿನಲ್ಲಿ ಪ್ರತೀಕ್ಷಾ ರವರು ಕೂಚಿಪೂಡಿ ನೃತ್ಯ ಪರೀಕ್ಷೆಯಲ್ಲಿ, ರಾಜ್ಯದಲ್ಲೇ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.ನೃತ್ಯ ಮಾತ್ರವಲ್ಲದೇ ಪ್ರತೀಕ್ಷಾರವರು ತಮ್ಮ ಅಧ್ಯಯನದಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ತಮ್ಮ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಉನ್ನತ ಸ್ಥಾನ ಗಳಿಸಿದ್ದಕ್ಕಾಗಿ ಚಿನ್ನದ ಪದಕವನ್ನೂ ಪಡೆದಿದ್ದಾರೆ.ಪ್ರತೀಕ್ಷಾ ಕಾಶಿಯವರು ತಮ್ಮ ಪ್ರತಿಭೆಯಿಂದಾಗಿ "ರೈಸಿಂಗ್ ಸ್ಟಾರ್" ಎಂದೇ ಗುರುತಿಸಲ್ಪಟ್ಟಿದ್ದಾರೆ.[೪]

೨೦೧೨ ರಲ್ಲಿ "ನವರಸ" ಪ್ರದರ್ಶನ ನೀಡುತ್ತಿರುವ ಪ್ರತೀಕ್ಷಾ ಕಾಶಿ ಮತ್ತು ಅವರ ತಾಯಿ ಹಾಗೂ ಗುರು ವೈಜಯಂತಿ ಕಾಶಿ[ಕೃಪೆ:ಅಂಜಲಿ ರೆಡ್ಡಿ ಜೆ]

ಗಮನಾರ್ಹ ಪ್ರದರ್ಶನಗಳು[ಬದಲಾಯಿಸಿ]

ಪ್ರತೀಕ್ಷಾ ಕಾಶಿ ಹಲವು ಪ್ರತಿಷ್ಠಿತ ಭಾರತೀಯ ನೃತ್ಯೋತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ.

"ಪರಂಪರ"ದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ಪ್ರತೀಕ್ಷಾ
  • ಮೈಸೂರು ದಸರಾ ಉತ್ಸವ - ಮೈಸೂರು
  • ಅಂತರ್ಜಾತಿಕ ನೃತ್ಯ ಸಂಗೀತ ಸಮಾರೋಹ ೨೦೧೨, ಕಟಕ್[೬]
  • ಪ್ರತಿವ ಫೆಸ್ಟಿವಲ್, ಕಲ್ಕತ್ತಾ
  • ತನೀಷ ಯುವ ಉತ್ಸವ, ಕೂಚಿಪೂಡಿ, ಆಂಧ್ರ ಪ್ರದೇಶ
  • "ಮಹಾ ಮಾಯ", ರವೀಂದ್ರ ಕಲಾಕ್ಷೇತ್ರ, ಬೆಂಗಳೂರು
  • ರಸ ಸಂಜೆ, ಎಡಿಎ ರಂಗಮಂದಿರ, ಬೆಂಗಳೂರು
  • ನೃತ್ಯಭಾರತ್ ಡ್ಯಾನ್ಸ್ ಫೆಸ್ಟಿವಲ್, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು
  • ಕಲಾಭಾರತಿ ನ್ಯಾಷನಲ್ ಯಂಗ್ ಡ್ಯಾನ್ಸ್ ಫೆಸ್ಟ್ ೨೦೧೩, ತ್ರಿಶೂರು, ಕೇರಳ
  • ವಿಶ್ವ ನೃತ್ಯ ದಿನ ೨೦೧೩, ಅಲೈನ್ಸ್ ಫ್ರಾಂಸೈಸ್, ಬೆಂಗಳೂರು
  • ವಿಶ್ವ ನೃತ್ಯ ದಿನ ೨೦೧೩, ಕೃಷ್ಣ ಗಾನ ಸಭಾ, ಚೆನ್ನೈ
  • ಸಮ್ಮರ್ ಫೆಸ್ಟಿವಲ್ ೨೦೧೩, ಕೂನುರ್, ಊಟಿ, ತಮಿಳುನಾಡು
  • ಕೂಚಿಪೂಡಿ ರಿಸೈಟಲ್ ೨೦೧೩, ಬೃಹದೀಶ್ವರ ದೇವಸ್ಥಾನ, ತಂಜಾವೂರು, ತಮಿಳುನಾಡು
  • ಸೋಲೋ ಕೂಚಿಪೂಡಿ ರಿಸೈಟಲ್, ವೀಣಾ ಶೇಷಣ್ಣ ಭವನ, ಮೈಸೂರು
  • ಎಸೆನ್ಸ್ ಆಫ್ ಲೈಫ್, ಚೌಡಯ್ಯ ಮೆಮೋರಿಯಲ್ ಹಾಲ್, ಬೆಂಗಳೂರು[೭]
  • ಎಸೆನ್ಸ್ ಆಫ್ ಲೈಫ್, ವಿವಾಂತ ಬೈ ತಾಜ್, ಹೈದರಾಬಾದ್
  • ನಾಟ್ಯ ಮಹೋತ್ಸವ - ಕಿಟ್ಟಪ್ಪ ಪಿಲ್ಲೈ ಶತಮಾನೋತ್ಸವ, ರವೀಂದ್ರ ಭವನ್, ಗೋವಾ
  • ಪಲ್ಲಕ್ಕಿ ಸೇವಾ ಪ್ರಬಂಧಂ(ನೃತ್ಯ ಗೀತನಾಟಕ), ನಾರದ ಗಾನ ಸಭಾ, ಚೆನ್ನೈ[೮]
  • ಚೆನ್ನೈನ ಸಂಗೀತ ಅಕಾಡೆಮಿಯ ವಾರ್ಷಿಕ ನೃತ್ಯ ಮಹೋತ್ಸವ
  • ನಾಯಿಕಾ - ರುಕ್ಮಿಣಿ ವಿಜಯಕುಮಾರ್ ಅವರೊಂದಿಗೆ ಕೂಚಿಪೂಡಿ ಹಾಗೂ ಭರತನಾಟ್ಯ ಯುಗಳ ಪ್ರದರ್ಶನ[೯]
  • ಫೀಲ್ ಇಂಡಿಯಾ, ಸಾಂಸ್ಕೃತಿಕ ಉತ್ಸವ, ದಿ ಅಶೋಕ್ ಆಂಫಿಥಿಯೇಟರ್, ನವದೆಹಲಿ
  • ಸಂಗೀತ ನಾಟಕ ಅಕಾಡೆಮಿ ಮತ್ತು ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ - 'ನಾಟ್ಯ ವೃಕ್ಷ'(ಯುವ ನೃತ್ಯಗಾರರ ಉತ್ಸವ)
  • ಸೂರ್ಯ ಮ್ಯೂಸಿಕ್ ಮತ್ತು ಡ್ಯಾನ್ಸ್ ಫೆಸ್ಟಿವಲ್, ತಿರುವನಂತಪುರಮ್, ಕೇರಳ
  • ನಿಶಾಗಾಂಧಿ ಡ್ಯಾನ್ಸ್ ಫೆಸ್ಟಿವಲ್ ೨೦೧೬, ತಿರುವನಂತಪುರಮ್, ಕೇರಳ

ಪ್ರಮುಖ ಸಾಧನೆಗಳು[ಬದಲಾಯಿಸಿ]

  • ಕರ್ನಾಟಕ ಸರ್ಕಾರ ನಡೆಸಿದ ಜೂನಿಯರ್ ಕೂಚಿಪೂಡಿ ನೃತ್ಯ ಪರೇಕ್ಷೆಯಲ್ಲಿ ಮೊದಲನೇ ರ್ಯಾಂಕ್.
  • ಗ್ರೇಡ್ 'ಎ' ದೂರದರ್ಶನ ಕಲಾವಿದೆ,(ಪ್ರಸಾರ ಮಾಧ್ಯಮ) ಬೆಂಗಳೂರು.
  • ಯುಕೆ ಯ ಮಿಲಾಪ್ ಇಂಟರ್ನ್ಯಾಷನಲ್ ಡ್ಯಾನ್ಸ್ ಸಮ್ಮರ್ ಶಾಲೆಯಲ್ಲಿ ಸಹಾಯಕ ಬೋಧಕರಾಗಿ ಕೆಲಸ ಮಾಡಿದ್ದಾರೆ.[೧೦]
  • ಹೈದರಾಬಾದ್ ನ ಅಂತರಾಷ್ಟ್ರೀಯ ಕೂಚಿಪೂಡಿ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.
  • "ಹೆಜ್ಜೆ ಗುರುತುಗಳು" ಎಂಬ ಟೆಲಿಫಿಲ್ಮ್ ನಲ್ಲಿ, ಅಕ್ಕಮಹಾದೇವಿ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.[೧೧]
  • ಉದಯ ಟಿವಿ ಯಲ್ಲಿ ಪ್ರಸಾರವಾದ "ಕಾದಂಬರಿ ಕಣಜ" ಎಂಬ ಕನ್ನಡ ಧಾರಾವಾಹಿಯಲ್ಲಿ ಮೋಹಿನಿ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
  • ನೃತ್ಯ ಪ್ರಕಾರವನ್ನು ವ್ಯಾಪಕವಾಗಿ ಹರಡುವ ಉದ್ದೇಶದಿಂದ "ದಿ ಮ್ಯಾಜಿಕ್ ಆಫ್ ಕೂಚಿಪೂಡಿ" ಹೆಸರಿನ ಕೂಚಿಪೂಡಿ ನೃತ್ಯ ಡಿವಿಡಿಯನ್ನು ಬಿಡುಗಡೆ ಮಾಡಿದ್ದಾರೆ.
  • "ಪ್ರಕೃತಿ" ಎಂಬ ಚಲನಚಿತ್ರದಲ್ಲಿ ನಟಿಸಿದ್ದು, ಈ ಚಿತ್ರ ಅತ್ಯುತ್ತಮವಾದ ಚಿತ್ರಕಥೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.[೧೨]

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

ಪ್ರತೀಕ್ಷಾ ಕಾಶಿ ನವದೆಹಲಿಯ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ 'ಉಸ್ತಾದ್ ಬಿಸ್ಮಿಲ್ಲಾಃ ಖಾನ್ ಯುವ ಪುರಸ್ಕಾರ್' ಪ್ರಶಸ್ತಿಗೆ ಆಯ್ಕೆಯಾಗಿದ್ದರು.ಅಲ್ಲದೇ ಮಹಾರಾಷ್ಟ್ರ ಸರ್ಕಾರ ಅವರಿಗೆ 'ಆದಿತ್ಯ ವಿಕ್ರಮ್ ಬಿರ್ಲಾ ಕಲಾಕಿರಣ್ ಪುರಸ್ಕಾರ - ೨೦೧೪' ನೀಡಿ ಗೌರವಿಸಿತು.[೧೩]ಕೂಚಿಪೂಡಿ ನೃತ್ಯದಲ್ಲಿನ ಶ್ರೇಷ್ಠತೆಗಾಗಿ ಅವರಿಗೆ '೩೭ ನೇ ವಾರ್ಷಿಕ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ - ೨೦೧೧' ನೀಡಿ ಗೌರವಿಸಲಾಗಿದೆ. ಪ್ರತೀಕ್ಷಾ ರವರಿಗೆ 'ನಳಂದ ನೃತ್ಯ ನಿಪುಣ' ಹಾಗೂ 'ನೃತ್ಯ ಜ್ಯೋತಿ' ಎಂಬ ಬಿರುದುಗಳಿವೆ.ಮಾತ್ರವಲ್ಲದೇ ಅವರು ನ್ಯೂಯಾರ್ಕ್ ನಲ್ಲಿ ಪಂಡಿತ್ ಜಸರಾಜ್ ಪ್ರತಿಷ್ಠಾನವು ನಡೆಸಿದ ನೃತ್ಯ ಸ್ಪರ್ಧೆಯ ವಿಜೇತಗಾರರಾಗಿದ್ದಾರೆ[೧೪] ಮತ್ತು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ ಪ್ರತಿಷ್ಠಿತ ವಿದ್ಯಾರ್ಥಿವೇತನವನ್ನೂ ಪಡೆದುಕೊಂಡಿದ್ದಾರೆ.ಅವರು 'ಪ್ರವಹ ೨೦೧೩' ರ ಅಂಗವಾಗಿ, ಒಡಿಸ್ಸಿಯ ಸಂಜಲಿ ಶಾಲೆಯಿಂದ 'ಯಂಗ್ ಡ್ಯಾನ್ಸರ್' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.೨೦೧೪ ರಲ್ಲಿ ಜಥಿಸ್ ಮ್ಯೂಸಿಕ್ ಮತ್ತು ಡ್ಯಾನ್ಸ್ ಫೆಸ್ಟಿವಲ್ ನ ಅಂಗವಾಗಿ, 'ನಾಟ್ಯವೇದ ಪ್ರಶಸ್ತಿ' ಹಾಗೆಯೇ ಕಲಾಭಾರತಿ ರಾಷ್ಟ್ರೀಯ ಯುವ ಪ್ರತಿಭಾ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

ನಿರ್ಮಾಣಗಳು[ಬದಲಾಯಿಸಿ]

ಶಾಂಭವಿ ಡ್ಯಾನ್ಸ್ ಥಿಯೇಟರ್, "ದಿ ಮ್ಯಾಜಿಕ್ ಆಫ್ ಕೂಚಿಪೂಡಿ" ಎಂಬ ನೃತ್ಯ ಡಿವಿಡಿಯನ್ನು ನಿರ್ಮಾಣ ಮಾಡಿತು.ಇದರಲ್ಲಿ ಪ್ರತೀಕ್ಷಾ ಕಾಶಿಯವರು ಪ್ರಮುಖರು.ಮಾರ್ಚ್ ೮,೨೦೧೪ ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಲಾಗಿದ್ದ "ನಾಯಿಕಾ-ಎಕ್ಸಲೆನ್ಸ್ ಪರ್ಸೋನಿಫೈಡ್" ನ ಅಂಗವಾಗಿ, ಪದ್ಮಭೂಷಣ್ ಡಾ.ಯಾಮಿನಿ ಕೃಷ್ಣಮೂರ್ತಿಯವರು ಈ ಡಿವಿಡಿಯನ್ನು ಬಿಡುಗಡೆ ಮಾಡಿದ್ದರು.[೧೫]"ಎಸೆನ್ಸ್ ಆಫ್ ಲೈಫ್" ಎಂಬ ಮಲ್ಟಿಮೀಡಿಯಾ ನಿರ್ಮಾಣದಲ್ಲಿ, ಜೆಕೆ ಅವರ ಬೋಧನೆಗಳನ್ನು ನೃತ್ಯ ಸಂಯೋಜನೆ ಮತ್ತು ಪ್ರಸ್ತುತಪಡಿಸಲು ಪ್ರತೀಕ್ಷಾ ಕಾಶಿಯವರನ್ನು ಆಯ್ಕೆ ಮಾಡಿಲಾಗಿತ್ತು.ಅದೇ ರೀತಿ ಅವರು "ಕ್ಯಾನ್ ವಿ ಲಿವ್ ವಿಥೌಟ್ ಪ್ರೋಬ್ಲಮ್ಸ್" ಎಂಬ ಪರಿಕಲ್ಪನೆಯನ್ನು ತಮ್ಮ ನೃತ್ಯ ಪ್ರದರ್ಶನದ ಮೂಲಕ ಪ್ರಸ್ತುತಪಡಿಸಿದ್ದಾರೆ.

"ಎಸೆನ್ಸ್ ಆಫ್ ಲೈಫ್"ನಲ್ಲಿ ಪ್ರತೀಕ್ಷಾ ಕಾಶಿ
"ಎಸೆನ್ಸ್ ಆಫ್ ಲೈಫ್"ನಲ್ಲಿ ಪ್ರತೀಕ್ಷಾ ಕಾಶಿ 
"ಎಸೆನ್ಸ್ ಆಫ್ ಲೈಫ್"ನ ಒಂದು ಭಾಗವಾಗಿ "ಕ್ಯಾನ್ ವಿ ಲಿವ್ ವಿಥೌಟ್ ಪ್ರೋಬ್ಲಮ್ಸ್" ಎಂಬ ಪರಿಕಲ್ಪನೆಯನ್ನು ತಮ್ಮ ನೃತ್ಯ ಪ್ರದರ್ಶನದ ಮೂಲಕ ಪ್ರಸ್ತುತಪಡಿಸಿದರು!
"ಎಸೆನ್ಸ್ ಆಫ್ ಲೈಫ್"ನ ಒಂದು ಭಾಗವಾಗಿ "ಕ್ಯಾನ್ ವಿ ಲಿವ್ ವಿಥೌಟ್ ಪ್ರೋಬ್ಲಮ್ಸ್" ಎಂಬ ಪರಿಕಲ್ಪನೆಯನ್ನು ತಮ್ಮ ನೃತ್ಯ ಪ್ರದರ್ಶನದ ಮೂಲಕ ಪ್ರಸ್ತುತಪಡಿಸಿದರು! 
೮ ಮಾರ್ಚ್ ೨೦೧೪ ರಂದು ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಪದ್ಮಭೂಷಣ್ ಡಾ.ಯಾಮಿನಿ ಕೃಷ್ಣಮೂರ್ತಿಯವರಿಂದ, ಶಾಂಭವಿ ಡ್ಯಾನ್ಸ್ ಥಿಯೇಟರ್ ನಿರ್ಮಾಣದ, "ದಿ ಮ್ಯಾಜಿಕ್ ಆಫ್ ಕೂಚಿಪೂಡಿ" ನೃತ್ಯ ಡಿವಿಡಿ ಬಿಡುಗಡೆ ಸಮಾರಂಭ !!!

ಉಲ್ಲೇಖಗಳು[ಬದಲಾಯಿಸಿ]

  1. https://www.indianetzone.com/73/prateeksha_kashi.htm
  2. http://www.associationsargam.com/vyjayanthi_kashi.htm
  3. "ಆರ್ಕೈವ್ ನಕಲು". Archived from the original on 2020-03-24. Retrieved 2020-03-25.
  4. http://www.buzzintown.com/bangalore/event--kuchipudi-rangapooja-prateeksha-kashi/id--81481.html[ಶಾಶ್ವತವಾಗಿ ಮಡಿದ ಕೊಂಡಿ]
  5. "ಆರ್ಕೈವ್ ನಕಲು". Archived from the original on 2016-03-05. Retrieved 2020-03-25.
  6. https://www.telegraphindia.com/states/odisha/dance-fiesta-comes-to-a-dazzling-close-solo-kuchipudi-recital-centre-of-attraction/cid/444189
  7. https://www.deccanherald.com/content/360507/emotions-conveyed-through-movement.html
  8. https://www.thehindu.com/features/friday-review/dance/team-gen-next/article5375499.ece
  9. https://web.archive.org/web/20140313085219/http://www.buzzintown.com/bangalore/events/nayika-excellence-personifed/id--883150.html
  10. "ಆರ್ಕೈವ್ ನಕಲು". Archived from the original on 2020-09-26. Retrieved 2020-03-25.
  11. https://www.thehindu.com/todays-paper/tp-national/tp-karnataka/film-on-akka-mahadevi-to-be-screened-today/article3334192.ece
  12. https://www.deccanherald.com/content/399813/southern-film-industry-bags-17.html
  13. https://timesofindia.indiatimes.com/city/mumbai/Lifetime-achievement-award-for-Pt-Birju-Maharaj-on-Saturday/articleshow/45207975.cms
  14. https://www.thehindu.com/features/friday-review/dance/journey-in-dance/article4742565.ece
  15. https://web.archive.org/web/20140302131843/http://www.narthaki.com/info/prv14/prv854.html