ಸದಸ್ಯ:Divyashree316

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನನ[ಬದಲಾಯಿಸಿ]

 ನನ್ನ ಹೆಸರು ದಿವ್ಯಶ್ರೀ.ನಾನು ಫೆಬ್ರವರಿ ೮,೨೦೦೦ ರಂದು ಶೃಂಗೇರಿ ಇಂದ ೧೩ ಮೈಲಿ ದೂರದಲ್ಲಿರುವ ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರವೆಂಬ ಪುಟ್ಟ ಊರಿನಲ್ಲಿ ಜನಿಸಿದೆ.ನನ್ನ ತಂದೆಹೆಸರು ಯೋಗರಾಜ್ ಮತ್ತು ತಾಯಿ ನಾಗರತ್ನ.ನನ್ನ ತಂದೆ-ತಾಯಿಗೆ ನಾನೊಬ್ಬಳೇ ಮಗಳಾದುದರಿಂದ ಅವರು ನನ್ನನ್ನು ಬಹಳ ಪ್ರೀತಿಯಿಂದ ಬೆಳೆಸಿದರು.ಜಯಪುರದ ಬಳಿ ಇರುವ ಕೊಗ್ರೆ ಎಂಬ ಹಳ್ಳಿಯಲ್ಲಿರುವ ಅಜ್ಜಿಮನೆಯಲ್ಲಿ ಹುಟ್ಟಿ ಬೆಳೆದ ನಾನು ಕೆಲವು ದಿನಗಳ ನಂತರ ಹಳ್ಳಿಯ ವಾತಾವರಣವನ್ನು ಬಿಟ್ಟು ಅರಸೀಕೆರೆ ಎಂಬ ಪಟ್ಟಣಕ್ಕೆ ಬಂದೆ.ನಾನು ಸಣ್ಣ ಹಳ್ಳಿಯಲ್ಲಿ ಹುಟ್ಟಿದ್ದರೂ ನಾನು ಬೆಳೆದದ್ದು ಎಲ್ಲಾ ಹಾಸನ ಜಿಲ್ಲೆಯ ಅರಸೀಕೆರೆ ಎಂಬ ಪಟ್ಟಣದಲ್ಲಿ.ತೆಂಗಿನ ಉತ್ಪಾದನೆಗೆ ಹೆಸರುವಾಸಿಯಾಗಿರುವ ಅರಸೀಕೆರೆಯಲ್ಲೇ ನನ್ನ ಗೆಳೆಯರೊಂದಿಗೆ ಆಟವಾಡಿಕೊಂಡು ಬಾಲ್ಯವನ್ನು ಕಳೆದೆ.

ಹವ್ಯಾಸಗಳು[ಬದಲಾಯಿಸಿ]

        ನನ್ನ ಹವ್ಯಾಸಗಳೆಂದರೆ ಹಾಡನ್ನು ಕೇಳುವುದು,ನರ್ತಿಸುವುದು,ಟಿ.ವಿ ನೋಡುವುದು,ಚಿತ್ರಿಸುವುದು,ನನಗೆ ಪುಸ್ತಕಗಳನ್ನು ಓದಲು ಬಹಳ ಆಸಕ್ತಿ.ನನಗೆ ನನ್ನ ಗೆಳತಿಯರೊಂದಿಗೆ ಇರುವುದೆಂದರೆ ಬಹಳ ಇಷ್ಟ ಆದರಿಂದ ನಾನು ಬಿಡುವಿನ ಸಮಯದಲ್ಲಿ ನನ್ನ ಗೆಳತಿಯರ ಜೊತೆ ಸಿನಿಮಾ ನೋಡುತ್ತಾ,ನೃತ್ಯ ಮಾಡುತ್ತಾ ಆನಂದಿಸುತ್ತೇನೆ.ನನಗೆ ಮಕ್ಕಳೊಂದಿಗೆ ಆಟವಾಡಿಕೊಂಡು ಅವರೊಂದಿಗೆ ಸಮಯವನ್ನು ಕಳೆಯುವುದೆಂದರೆ ಬಹಳ ಇಷ್ಟ.

ವಿದ್ಯಾಬ್ಯಾಸ[ಬದಲಾಯಿಸಿ]

       ಮೂರು ವರ್ಷಗಳ ಕಾಲ ಮನೆಯಲ್ಲಿ  ಆಟವಾಡಿಕೊಂಡು ಬೆಳೆದ ನನ್ನನ್ನು ವಿದ್ಯಭ್ಯಾಸಕ್ಕಾಗಿ ನನ್ನ ತಂದೆ-ತಾಯಿ ಅರಸೀಕೆರೆಯ ಪಾರ್ವತಮ್ಮ ಕಾನ್ವೆಂಟ್ಗೆ ಸೇರಿಸಿದರು.ಅಂದಿನಿಂದ ನನ್ನ ತಂದೆ-ತಾಯಿ ನನ್ನ ವ್ಯಾಸಂಗದ ಜೊತೆಗೆ ನನ್ನಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡುತ್ತಾ ಬಂದರು.ಅಲ್ಲಿ ಆಟದೊಂದಿಗೆ ಪಾಠ ಎನ್ನುವ ತತ್ವದಡಿ ವ್ಯಾಸಂಗ ಮುಗಿಸಿ ಅರಸೀಕೆರೆಯಲ್ಲೇ ತುಂಬಾ ಒಳ್ಳೆಯ ಹೆಸರು ಗಳಿಸಿರುವ ಸಂತ ಮೇರಿ ಶಾಲೆಗೆ ಒಂದನೇ ತರಗತಿಗೆ ಸೇರಿಸಿದರು.ಅಲ್ಲಿ ನನ್ನ ಓದು ನಿರಂತರವಾಗಿ ಸಾಗಿ ತರಗತಿಯಲ್ಲೂ ಅಧಿಕ ಅಂಕಗಳಿಸುತ್ತಾ ಶಿಕ್ಷಕರ ಗಮನ ಸೆಳೆಯುತ್ತಿದೆ.ನನ್ನಲ್ಲಿ ಗುಪ್ತವಾಗಿದ್ದ ನೃತ್ಯಕಲೆ,ಚಿತ್ರಕಲೆಗಳನ್ನು ಶಿಕ್ಷಕರು ಗುರುತಿಸಿ ಈ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಾ ಅವಕಾಶಗಳನ್ನು ಕಲ್ಪಿಸಿಕೊಡುತ್ತಾ ಬಂದರು.ಇದಕ್ಕೆ ನನ್ನ ತಂದೆ-ತಾಯಿ ಹೆಚ್ಚಿನ ಪ್ರೋತ್ಸಾಹ ಕೊಡುತ್ತಾ ಬಂದರು.ವರ್ಷಗಳಿಂದ ವರ್ಷಕ್ಕೆ ನಾನು ಸಾಗಿದಂತೆ ಉತ್ತಮ ಸ್ನೇಹ ಬಳಗವು ಸಹ ದೊರೆಯಿತು.ಎಲ್ಲರೊಂದಿಗೂ ನಗು-ನಗುತ್ತಲೇ ಮಾತನಾಡುತ್ತಿದ್ದ ನಾನು ಆ ಶಾಲೆಯಲ್ಲಿ ಎಲ್ಲರಿಗೂ ಚಿರಪರಿಚಿತವಾಗಿಬಿಟ್ಟಿದೆ.ಶಿಕ್ಷಕರು ಪಾಠವನ್ನು ಭೋದಿಸುತ್ತಿದ್ದಾಗ ನಾನು ತರ್ಲೆ ಪ್ರಶ್ನೆಗಳನ್ನು ಕೇಳುತ್ತಾ ಅವರನ್ನು ಕೆರಳಿಸುತ್ತಿದೆ.ಹೀಗೆ ಆಟವಾಡುವ ಸಮಯದಲ್ಲಿ ಆಟವಾಡುತ್ತಾ,ಓದುವ ಸಮಯದಲ್ಲಿ ಏಕಾಗ್ರತೆಯಿಂದ ಓದುತ್ತಾ,ಸ್ನೇಹಿತರೊಂದಿಗೆ ಮೋಜು-ಮಸ್ತಿ ಮಾಡಿಕೊಂಡು ಇದ್ದ ನನಗೆ ಏಳನೇ ತರಗತಿ ಮುಗಿದದ್ದು ತಿಳಿಯಲೇ ಇಲ್ಲ.ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಮೇಲೆ ನಾನು ಎಂಟನೇ ತರಗತಿಯನ್ನು ಅದೇ ಬೆಥನಿ ಸಂಸ್ಥೆಯಲ್ಲಿ ಮುಂದುವರೆಸಬೇಕೆಂದು ನಿರ್ಧರಿಸಿ ಸಂತ ಮೇರಿ ಪ್ರೌಡಶಾಲೆಗೆ ಸೇರಿದೆ.ಆ ಶಾಲೆಗೆ ಬಂದೊಡನೆ ನನ್ನ ಓದಿನ ಓಟ ಅಧಿಕವಾಯಿತು.ಓದುವುದರ ಜೊತೆಗೆ ನಾನು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ.ಅನೇಕ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದುಕೊಂಡೆ.ಎಲ್ಲಾ ತರಗತಿಯಲ್ಲೂ ಉತ್ತಮ ಅಂಕಗಳನ್ನು ಗಳಿಸುತ್ತಾ ತೇರ್ಗಡೆಯಾಗುತ್ತಾ ಬಂದೆ.ಇದಕ್ಕೆ ಶಿಕ್ಷಕರ ಉತ್ತಮ ಬೋಧನೆ ಮತ್ತು ಅವರ ಉತ್ತಮ ಮಾರ್ಗದರ್ಶನ ಹಾಗೂ ನನ್ನ ತಂದೆ-ತಾಯಿಯ ಪ್ರೋತ್ಸಾಹ ಮತ್ತು ಉತ್ತಮ ಸ್ನೇಹಿತರ ಒಡನಾಟವೇ ಕಾರಣ.ದಿನಗಳು ಕಳೆದಂತೆ ನಾನು ಹತ್ತನೇ ತರಗತಿಗೆ ಬಂದಿದೆ.ಇದಾದ ಕೆಲವೇ ದಿನಗಳಲ್ಲಿ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆ ಕೂಡ ಬಂದುಬಿಟ್ಟಿತ್ತು,ಪರೀಕ್ಷೆಯಲ್ಲಿ ನಾನು ಅಂದುಕೊಂಡ ಹಾಗೆ ಶೇ.೯೪ ರಷ್ಟು ಅಂಕವನ್ನುಗಳಿಸಿ ನನ್ನ ತಂದೆ-ತಾಯಿಯ ಮುಖದಲ್ಲಿ ನಗುವನ್ನು ಮುಡಿಸಿದೆ.ಅದೇ ಖುಷಿಯಲ್ಲಿ ನಾನು ನನ್ನ ಮುಂದಿನ ವಿದ್ಯಾಬ್ಯಾಸವನ್ನು ಕೂಡ ಅದೇ ಸಂಸ್ಥೆಯಲ್ಲಿ ಮುಂದುವರೆಸಲು ಇಚ್ಚಿಸಿ ಸಂತ ಮೇರಿಯ ಪಿ.ಯು ಕಾಲೇಜಿಗೆ ಸೇರಿದೆ. ಸಿ.ಎ ಮಾಡುವ ಉದ್ದೇಶದಿಂದ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿದೆ.ನಾನು ಪಾಠ ಕೆಳುವುದಕ್ಕಿಂತ ಹೆಚ್ಚಾಗಿ ನಾನು ನನ್ನ ಸ್ನೇಹಿತರೊಡನೆ ಸಿನೆಮಾ ನೋಡಲು ಹೋಗುತ್ತಿದ್ದೆ ಹೀಗೆ ಹೆಚ್ಚು ಕಾಲ ಸ್ನೇಹಿತರೊಂದಿಗೆ ಕಳೆಯುತ್ತಿದ್ದುದ್ದರಿಂದ ನನ್ನ ತಂದೆ-ತಾಯಿಗೆ ಹಾಗೂ ಅಲ್ಲಿನ ಶಿಕ್ಷಕರಿಗೆ ಎಲ್ಲಿ ನಾನು ಓದುವುದರಲ್ಲಿ ಹಿಂದುಳಿಯುತ್ತೇನೋ ಎಂಬ ಭಯವಿತ್ತು.ಆದರೆ ಪರೀಕ್ಷೆಯ ಸಮಯದಲ್ಲಿ ಶ್ರದ್ಧೆ ಇಂದ ಹಾಗೂ ಏಕಾಗ್ರತೆಯಿಂದ ಓದುತ್ತಿದೆ. ಈ ಕಾರಣದಿಂದಾಗಿ ನಾನು ದ್ವಿತೀಯ ಪಿ.ಯು.ಸಿ ಯಲ್ಲಿ ಶೇ.೯೫ ರಷ್ಟು ಅಂಕ ಪಡೆದು ಅರಸೀಕೆರೆ ತಾಲ್ಲೂಕಿಗೆ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದೆ.ಓದಿನೊಂದಿಗೆ ನಾನು ಶಾಲಾ-ಕಾಲೇಜುಗಳಲ್ಲಿ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದೆ.ಹೀಗೆ ಭಾಗವಹಿಸುತ್ತಿದ್ದುದರಿಂದ ನನಗೆ ಹಲವಾರು ಸ್ನೇಹಿತರ ಪರಿಚಯವಾಯಿತ್ತು.ಹೀಗೆ ೧೩ ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಓದಿದ ನನಗೆ ಕಾಲೇಜು ಬಿಡುವ ಸಮಯ ಬಂದಾಗ ಮನಸ್ಸಿಗೆ ಬಹಳ ಬೇಸರವಾಯಿತು.ನಂತರ ನನ್ನ ತಂದೆ-ತಾಯಿಯರ ಇಚ್ಛೆಯಂತೆ ನಾನು ನನ್ನ ಮುಂದಿನ ವಿದ್ಯಭ್ಯಾಸಕ್ಕಾಗಿ ಬೆಂಗಳೂರಿನಲ್ಲಿರುವ ಕ್ರೈಸ್ಟ್ ಯೂನಿವರ್ಸಿಟಿಗೆ ಸೇರಿದೆ.ಕಾಲೇಜಿಗೆ ಬಂದ ಹೊಸತರಲ್ಲಿ ನಾನು ಇತರರ ಜೊತೆ ಹೊಂದುಕೊಂಡು ಹೊಗುವೆನೋ ಇಲ್ಲವೋ ಎಂಬ ಭಯವಿತ್ತು ಆದರೆ ನಾನು ಏಲ್ಲಾರೊಂದಿಗೂ ಬೇಗನೆ ಬೆರೆಯುತ್ತ ಹೋದೆ.ಇಲ್ಲಿ ನಾನು ಓದಿನೊಂದಿಗೆ ಕೆಲವು ನೃತ್ಯ ಸ್ಪರ್ಧೆಯಲ್ಲೂ ಭಾಗವಹಿಸಿದ್ದೇನೆ ಮತ್ತು ಮೊದಲನೇ ಸೆಮಿಸ್ಟರ್ ನಲ್ಲಿ ೮೨% ಅಂಕವನ್ನುಗಳಿಸಿ ತರಗತಿಗೆ ಎರಡನೇ ಸ್ಥಾನವನ್ನು ಪಡೆದಿದ್ದೇನೆ.ಈಗ ನಾನು ನನ್ನ ಸಹಪಾಠಿಗಳೊಂದಿಗೆ ತುಂಬ ಸಂತೋಷದಿಂದ ಇರುವೆ.ನಾನು ಎಂದು ಕಷ್ಟಪಟ್ಟು ಓದಿದವಳಲ್ಲ ಇಷ್ಟಪಟ್ಟು ನಗುನಗುತ್ತಲೇ ಓದುತ್ತಿದೆ.ಇಂದಿಗೂ ಕೂಡ ನಾನು ಓದಿನ ಅದೇ ದಾರಿಯಲ್ಲಿ ಸಾಗುತ್ತಿದ್ದೇನೆ.ನನ್ನಲ್ಲಿರುವ ಪ್ರತಿಭೆಗಳೂ ಸಹ ನನ್ನನ್ನು ಹಿಂಬಾಲಿಸುತ್ತಿವೆ.

ಪ್ರವಾಸ[ಬದಲಾಯಿಸಿ]

          ನನ್ನಗೆ ಪ್ರವಾಸ ಮಾಡುವುದೆಂದರೆ ಬಹಳ ಇಷ್ಟ. ಹತ್ತನೇ ತರಗತಿಯ ಪ್ರವಾಸದ ದಿನಗಳನ್ನು ನಾನು ಮರೆಯಲು ಸಾಧ್ಯವೇ ಇಲ್ಲ.ಮುರುಡೇಶ್ವರ,ಗೋಕರ್ಣ,ಗೋವಾ ಮುಂತಾದ ಪ್ರವಾಸ ಸ್ಥಳಗಳಿಗೆ ಹೋಗಿ ಬಂದ ಮೇಲಂತೂ ನಮ್ಮ ಸ್ನೇಹ ಗಾಢವಾಗಿತ್ತು.ಅಲ್ಲಿ ನನ್ನಗೆ ಹೊಸ ಸ್ನೇಹಿತರ ಪರಿಚಯವು ಆಯಿತು.ಅದೇ ನಾನು ನನ್ನ ಸ್ನೇಹಿತರ ಜೊತೆ ಹೋದ ಮೊದಲ ಪ್ರವಾಸ ಸ್ಥಳ.ನನ್ನ ದ್ವಿತೀಯ ಪಿ.ಯು.ಸಿಯ ಜಿ.ಆರ್.ಎಸ್ ಟ್ರಿಪ್ ಅನ್ನು ನನ್ನ ಜೀವನದ ಒಂದು ಅಮೂಲ್ಯವಾದ ಕ್ಷಣವೆಂದು ಕೂಡ ಹೇಳಬಹುದು.ಏಕೆಂದರೆ ನನ್ನಗೆ ಸ್ನೇಹಿತರೊಂದಿಗೆ ಇರುವುದೆಂದರೆ ಬಹಳ ಇಷ್ಟ.ಹೀಗಿರುವಾಗ ಇಡೀ ಒಂದು ದಿನ ಅವರೊಂದಿಗೆ ಸಮಯವನ್ನು ಕಳೆಯವ ಅವಕಾಶ ಸಿಕಿದ್ದರಿಂದ ನಾನು ಮೋಜು-ಮಸ್ತಿ ಮಾಡಿಕೊಂಡು ಮನೆಗೆ ಹಿಂತಿರುಗಿದೆ.ಪ್ರತಿ ವರ್ಷದ ಬೇಸಿಗೆ ರಜೆಯಲ್ಲಿ ನಾನು ನನ್ನ ತಂದೆ-ತಾಯಿಯರೊಂದಿಗೆ ಧರ್ಮಸ್ಥಳ,ಸುಬ್ರಹ್ಮಣ್ಯ ಮುಂತಾದ ತೀರ್ಥಸ್ಥಳಗಳಿಗೆ ಹೋಗುತ್ತಿರುತ್ತೇನೆ.ಕ್ರೈಸ್ಟ್ ಕಾಲೇಜಿಗೆ ಸೇರಿದ ಒಂದು ತಿಂಗಳೊಳಗೆ ನಮ್ಮ ತರಗತಿಗೆ ಹೊಸಕೋಟೆಗೆ ಹೋಗುವ ಅವಕಾಶ ಸಿಕ್ಕಿತ್ತು.ನಾನು ನನ್ನ ಹೊಸ ಸ್ನೇಹಿತರೋದಿಗೆ ಆ ಹಳ್ಳಿಗೆ ಹೋಗಿದ್ದೆ.ಈ ಪ್ರವಾಸದಿಂದ ನನಗೆ ನನ್ನ ಹೊಸ ಸ್ನೇಹಿತರ ಬಗ್ಗೆ ತಿಳಿದುಕೊಳ್ಳಲು ಅವಕಾಶ ಸಿಕ್ಕಿತ್ತು ಹಾಗೂ ಹೊಸ ಸ್ನೇಹಿತರ ಪರಿಚಯವೂ ಆಯಿತು.

ಸಾಧನೆ[ಬದಲಾಯಿಸಿ]

      ನಾನು ಆರನೇ ತರಗತಿಯನ್ನು ಓದುತ್ತಿರುವಾಗ ಜೈನ ಧರ್ಮದ ಪಾಠ ಶಾಲೆಗೆ ಹೋಗುತ್ತಿದೆ.ಪ್ರತಿ ವರ್ಷವು ಕೂಡ ಅಲ್ಲಿ ಎಲ್ಲಾ ಶಾಲೆಗಳಲ್ಲಿ ನಡೆಯುವಂತೆ ಪರೀಕ್ಷೆ ನಡೆಯುತ್ತದೆ.ಇಡೀ ಭಾರತದಲ್ಲಿರುವ ಜೈನ ಮಕ್ಕಳ ನಡುವೆ ನಡೆಯುವ ಆ ಪರೀಕ್ಷೆಯಲ್ಲಿ ನಾನು ಭಾರತಕ್ಕೆ ಮೊದಲ ಸ್ಥಾನವನ್ನು ಪಡೆದು ಉತ್ತೀರ್ಣಳಾಗಿದೆ.ಈ ಕಾರಣಕ್ಕಾಗಿ ನನಗೆ ಮದ್ರಾಸ್ ಗೆ ಕರೆದು ಸನ್ಮಾನಿಸಲಾಯಿತು.ಇದೇ ನನ್ನ ಜೀವನದಲ್ಲಿ ನಡೆದ ಮೊದಲ ಸಾಧನೆ.ನಂತರ ನಾನು ಎಂಟನೇ ತರಗತಿಯಲ್ಲಿ ಓದುತ್ತಿರುವಾಗ ಅದೇ ಜೈನ ಪಾಠಶಾಲೆಯಲ್ಲಿ ನಡೆದ ಮತ್ತೊಂದು ಪರೀಕ್ಷೆಯಲ್ಲಿ ಇಡೀ ಭಾರತಕ್ಕೆ ಎರಡನೇ ಸ್ಥಾನ ಪಡೆದುದ್ದರಿಂದ ಮತ್ತೊಮ್ಮೆ ನನಗೆ ಮದ್ರಾಸ್ ಗೆ ಹೋಗಿ ಸನ್ಮಾನ ಮಾಡಿಸಿಕೊಳ್ಳುವ ಅವಕಾಶ ಸಿಕ್ಕಿತು. ವಾಣಿಜ್ಯ ವಿಭಾಗದಲ್ಲಿ ತಾಲ್ಲೂಕಿಗೆ ಮೊದಲ ಸ್ಥಾನ ಬಂದಿರುವುದರಿಂದ ನನಗೆ ಸ್ವತಂತ್ರ ದಿನಚಾರಣೆಯಂದು ಕ್ರೀಡಾಂಗಣಕ್ಕೆ ಕರೆದು ಸನ್ಮಾನಿಸಲಾಯಿತು.ಅರಸೀಕೆರೆಯ ಮರ್ಚೆಂಟ್ ಕ್ಲಬ್ ವತಿಯಿಂದ ನನಗೆ ೫೦೦೦ ರೂಪಾಯಿಗಳನ್ನು ಕೊಟ್ಟು ಗೌರವಿಸಿದರು.ಅದು ನನ್ನ ಜೀವನದಲ್ಲಿ ಆದ ಒಂದು ಸಿಹಿ ಘಟನೆ ಎಂದು ಹೇಳಬಹುದು.ತಂದೆ-ತಾಯಿಗೆ,ಓದಿದ ಶಾಲೆಗೆ,ಕಾಲೇಜಿಗೆ ಕೀರ್ತಿ ತಂದ ಸಂತಸ ನನ್ನ ಓದಿನ ಕಡೆ ಇನ್ನು ಹೆಚ್ಚು ಗಮನ ಕೊಡಲು ಪ್ರೇರಣೆಯಾಗುತ್ತಿದೆ.