ವಿಷಯಕ್ಕೆ ಹೋಗು

ಇಂಫಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಂಫಾಲ ನಗರ
ꯏꯝꯐꯥꯜ
ರಾಜಧಾನಿ
ಕಾಂಗ್ಲಾ ಗೇಟ್, ಇಂಫಾಲ
ಕಾಂಗ್ಲಾ ಗೇಟ್, ಇಂಫಾಲ
ದೇಶ ಭಾರತ
ರಾಜ್ಯಮಣಿಪುರ
ಜಿಲ್ಲೆಇಂಫಾಲ ಪಶ್ಚಿಮ, ಇಂಫಾಲ ಪೂರ್ವ
Elevation
೭೮೬ m (೨,೫೭೯ ft)
Population
 (೨೦೧೧ ಸೆನ್ಸಸ್)
 • Total೨,೬೪,೯೮೬
ಭಾಷೆಗಳು
 • ಅಧಿಕೃತಮೆಥೆ ಭಾಷೆ (ಮಣಿಪುರಿ)
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
PIN
795xxx
ದೂರವಾಣಿ ಕೋಡ್3852
ಜಾಲತಾಣwww.imphalwest.nic.in

ಇಂಫಾಲ ಮಣಿಪುರ ರಾಜ್ಯದ ರಾಜಧಾನಿ. ಭಾರತ ಸರ್ಕಾರದ ನೇರ ಆಡಳಿತಕ್ಕೆ ಒಳಪಟ್ಟಿರುವ ಮಣಿಪುರ ರಾಜ್ಯದ ಆಡಳಿತ ಕೇಂದ್ರ. ಕಲ್ಕತ್ತದ ಈಶಾನ್ಯ ದಿಕ್ಕಿಗೆ 640 ಕಿ.ಮೀ. ದೂರದಲ್ಲಿ ಮಣಿಪುರ ನದಿಕಣಿವೆ ಭಾಗದಲ್ಲಿದೆ. ಸಮುದ್ರಮಟ್ಟಕ್ಕಿಂತ 2,500' ಎತ್ತರದಲ್ಲಿದೆ. ಜನಸಂಖ್ಯೆ 67,717 (1961). ಇಲ್ಲಿ ಟಿಬೆಟನ್ನರು ಮತ್ತು ಬರ್ಮೀಯರನ್ನೊಳಗೊಂಡ ಮಿಶ್ರ ಜನಾಂಗವಿದೆ. ಇವರೆಲ್ಲ ವೈಷ್ಣವ ಪಂಥಕ್ಕೆ ಸೇರಿದ ಹಿಂದೂಗಳು. ಇವರು ಪ್ರೌಢಪ್ರಾಚೀನ ಸಂಗೀತ ನೃತ್ಯಗಳಲ್ಲಿ ತಮ್ಮದೇ ಆದ ಸಂಸ್ಕೃತಿ ಹಾಗೂ ಶೈಲಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಇಂಫಾಲ್ ಕಾಲೇಜು, ಇಂಫಾಲ್ ಬೋಧಶಿಕ್ಷಣ ಪ್ರೌಢಶಾಲೆ, ಧನಮಂಜರಿ ಪ್ರೌಢಶಾಲೆ-ಇವೆಲ್ಲ ಅಸ್ಸಾಮಿನ ಗೌಹಾತಿ ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಸೇರಿವೆ. ನೇಯ್ಗೆ, ಹಿತ್ತಾಳೆ ಮತ್ತು ಕಂಚಿನ ಪದಾರ್ಥಗಳ ತಯಾರಿಕೆ ಮುಂತಾದ ಗ್ರಾಮೋದ್ಯೋಗಗಳಿಗೆ ಇಂಫಾಲ್ ಹೆಸರು ಪಡೆದಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಇಂಫಾಲ&oldid=1023468" ಇಂದ ಪಡೆಯಲ್ಪಟ್ಟಿದೆ