ರುಚಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರುಚಿಯನ್ನು ಗುರುತಿಸಲು ಸಹಾಯ ಮಾಡುವ ನಾಲಿಗೆಯ ಭಾಗ

ರುಚಿಯು ಪದಾರ್ಥಗಳ ಪ್ರಮುಖ ರಾಸಾಯನಿಕ ಗುಣಗಳನ್ನು ಗುರುತಿಸಲು ಜೀವಿಗಳ ಒಂದು ಇಂದ್ರಿಯ ಕ್ರಿಯೆ. ಮುಖ್ಯವಾಗಿ ಒಂದು ಪದಾರ್ಥವು ಆಹಾರವೋ ಅಥವಾ ವಿಷವೋ ಎಂದು ಗುರುತಿಸಲು ಇದು ಕೆಲಸ ಮಾಡುತ್ತದೆ. ರುಚಿಯನ್ನು ಗುರುತಿಸುವ ಇಂದ್ರಿಯವು ನಾಲಿಗೆ. ನಾಲಿಗೆಯು ರುಚಿಯ ಜೊತೆಗೆ ಪದಾರ್ಥಗಳ ಇತರ ಗುಣಗಳನ್ನೂ ಗುರುತಿಸಿ ಆ ಪದಾರ್ಥದ ಅನುಭವವನ್ನು ನೀಡುತ್ತದೆ.

ಮೂಲಭೂತ ರುಚಿಗಳು[ಬದಲಾಯಿಸಿ]

ನರಶಾಸ್ತ್ರದಲ್ಲಿ ಐದು ರುಚಿಗಳನ್ನು ಗುರುತಿಸಲಾಗಿದೆ. ಇವು ಉಪ್ಪು, ಹುಳಿ, ಕಹಿ, ಸಿಹಿ ಮತ್ತು ಖಾರ.

ಹುಳಿ[ಬದಲಾಯಿಸಿ]

ಹುಳಿ ರುಚಿಯು ಆಮ್ಲೀಯತೆಯನ್ನು ಪತ್ತೆಹಚ್ಚುವ ರುಚಿ. ಪದಾರ್ಥಗಳ ಹುಳಿಯನ್ನು ೧ ಹುಳಿ ಸೂಚಕವನ್ನು ಹೊಂದಿರುವ ಸಾರಗುಂದಿಸಿದ ಹೈಡ್ರೊಕ್ಲೋರಿಕ್ ಆಮ್ಲಕ್ಕೆ ತುಲನಾತ್ಮಕವಾಗಿ ನಿರ್ಧರಿಸಲಾಗುತ್ತದೆ. ಹುಳಿ ರುಚಿಯನ್ನು ನಾಲಿಗೆಯಲ್ಲಿನ ಎಲ್ಲ ರುಚಿ ಮೊಗ್ಗುಗಳಾದ್ಯಂತ ಹರಡಿದ ಜೀವಕೋಶಗಳ ಉಪಸಮೂಹವು ಪತ್ತೆಹಚ್ಚುತ್ತದೆ.

ಕಹಿ[ಬದಲಾಯಿಸಿ]

ಕಹಿರುಚಿಯು ರುಚಿಗಳಲ್ಲಿ ಅತ್ಯಂತ ಸೂಕ್ಷ್ಮವಾದದ್ದು, ಮತ್ತು ಅನೇಕರು ಈ ರುಚಿಯನ್ನು ಅಹಿತಕರ, ಕಟು, ಅಥವಾ ಒಗ್ಗದಂಥಾದ್ದು ಎಂದು ಗ್ರಹಿಸುತ್ತಾರೆ, ಆದರೆ ಕೆಲವೊಮ್ಮೆ ಇದು ಅಪೇಕ್ಷಣೀಯವಾಗಿದ್ದು ಇದನ್ನು ವಿವಿಧ ಕಹಿಬರಿಸುವ ಪದಾರ್ಥಗಳ ಮೂಲಕ ಉದ್ದೇಶಪೂರ್ವಕವಾಗಿ ಸೇರಿಸಲಾಗುತ್ತದೆ. ಸಾಮಾನ್ಯ ಕಹಿ ಆಹಾರಗಳು ಮತ್ತು ಪೇಯಗಳಲ್ಲಿ ಕಾಫಿ, ಸಕ್ಕರೆಸೇರಿಸದ ಕೋಕೊ, ಮಾಟೆ, ಹಾಗಲಕಾಯಿ, ಆಲಿವ್, ಸಿಟ್ರಸ್ ಹಣ್ಣುಗಳ ಸಿಪ್ಪೆಗಳು, ಬ್ರ್ಯಾಸಿಕೇಸಿಯೀ ಕುಟುಂಬದಲ್ಲಿನ ಅನೇಕ ಸಸ್ಯಗಳು,ಕಾಡುಸೇವಂತಿಗೆ ಎಲೆಭಾಗಗಳು, ಕಾಡು ಚಿಕೋರಿ ಮತ್ತು ಎಸ್ಕರೋಲ್ ಸೇರಿವೆ. ಮದ್ಯಸಾರಯುಕ್ತ ಪಾನೀಯಗಳಲ್ಲಿನ ಎಥನಾಲ್ ಕಹಿ ರುಚಿ ಹೊಂದಿರುತ್ತದೆ.

ಇತರ ಗುಣಗಳು[ಬದಲಾಯಿಸಿ]

ನಾಲಿಗೆಯಲ್ಲಿ ಸ್ಪರ್ಶವನ್ನು ಗುರುತಿಸುವ ಭಾಗಗಳೂ ಇರುವುದರಿಂದ ಪದಾರ್ಥಗಳ ಈ ಇತರ ಗುಣಗಳನ್ನೂ ಗುರುತಿಸಲಾಗುತ್ತದೆ.

  • ಒಗರು - ಒಗರು ಎಂದರೆ ಅಪಕ್ವ ಹಣ್ಣುಗಳಲ್ಲಿರುವ ಟ್ಯಾನಿನ್‍ಗಳಿಂದ ಉಂಟಾಗುವ ಒಣ, ಸುಕ್ಕಾಗಿಸುವ ಬಾಯಿಯ ಅನಿಸಿಕೆ. ವಾಸ್ತವದಲ್ಲಿ ಈ ರಾಸಾಯನಿಕಗಳು ಹಣ್ಣುಗಳ ತಿನ್ನುವಿಕೆಯನ್ನು ತಡೆಯುವ ಮೂಲಕ ಹಣ್ಣುಗಳು ಪಕ್ವವಾಗುವಂತೆ ನೋಡಿಕೊಳ್ಳುತ್ತವೆ. ಬ್ಲ್ಯಾಕ್‍ಥಾರ್ನ್, ಚೋಕ್‍ಬೆರಿ, ಚೋಕ್‍ಚೆರಿ, ಬರ್ಡ್ ಚೆರಿ, ಶ್ರೀಫಲ ಹಾಗೂ ಪರ್ಸಿಮನ್ ಹಣ್ಣುಗಳು, ಮತ್ತು ಬಾಳೆಹಣ್ಣಿನ ಸಿಪ್ಪೆಗಳು ಸೇರಿದಂತೆ ಪಕ್ವ ಹಣ್ಣುಗಳು ಮತ್ತು ಹಣ್ಣಿನ ಭಾಗಗಳು ಬಹಳ ಒಗರಾಗಿರುತ್ತವೆ; ನಿಂಬೆಯಂತಹ ಸಿಟ್ರಸ್ ಹಣ್ಣುಗಳು ಸ್ವಲ್ಪಮಟ್ಟಿಗೆ ಒಗರಾಗಿರುತ್ತವೆ. ಟ್ಯಾನಿನ್‍ಗಳು ಜೊಲ್ಲು ಪ್ರೋಟೀನ್‍ಗಳನ್ನು ಬಂಧಿಸುತ್ತವೆ ಮತ್ತು ಅವುಗಳು ಘನರೂಪದಲ್ಲಿ ಮತ್ತು ಒಟ್ಟಾಗಿ ಬರುವಂತೆ ಮಾಡುತ್ತವೆ, ಮತ್ತು ಬಾಯಿಯಲ್ಲಿ ಒರಟಾದ, ಮರಳು ಕಾಗದದಂತಹ ಒಣ ಸಂವೇದನೆಯನ್ನು ಉತ್ಪಾದಿಸುತ್ತದೆ.
  • ಖಾರ
  • ಉಷ್ಣಾಂಶ
"https://kn.wikipedia.org/w/index.php?title=ರುಚಿ&oldid=934435" ಇಂದ ಪಡೆಯಲ್ಪಟ್ಟಿದೆ