ವಿಷಯಕ್ಕೆ ಹೋಗು

ಚೀನಾ

ನಿರ್ದೇಶಾಂಕಗಳು: 35°00′N 105°00′E / 35.000°N 105.000°E / 35.000; 105.000
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಚೈನ ಇಂದ ಪುನರ್ನಿರ್ದೇಶಿತ)
ಚೀನಾ ಪ್ರದೇಶದ ಭೌಗೋಳಿಕ ನಕ್ಷೆ

ಚೀನಾ (ಆಂಗ್ಲ ಭಾಷೆಯಲ್ಲಿ: China ಚೈನ; ಪಾರಂಪರಿಕ ಚೀನಿ ಭಾಷೆಯಲ್ಲಿ: 中國 ; ಸರಳೀಕೃತ ಚೀನಿ ಭಾಷೆಯಲ್ಲಿ: 中国 ; ಕನ್ನಡದಲ್ಲಿ ಅಕ್ಷರಸಹ: ಜಾಂಗುಓ) ಪೂರ್ವ ಏಷ್ಯಾದಲ್ಲಿ ಪುರಾತನ ಕಾಲದಿಂದಿರುವ ಒಂದು ಸಂಸ್ಕೃತಿಕ ಪ್ರದೇಶ. ಎರಡನೇ ವಿಶ್ವಯುದ್ಧದ ನಂತರದ ಸಮಯದಲ್ಲಿ ನಡೆದ ಚೀನಿ ಅಂತಃಕಲಹದ ಪರಿಣಾಮವಾಗಿ ಈಗ ಇದು ಎರಡು ದೇಶಗಳಾಗಿ ವಿಂಗಡಿತವಾಗಿದೆ:

ವಿಶ್ವದ ಅತ್ಯಂತ ಪ್ರಾಚೀನ ಹಾಗೂ ಅಖಂಡ ನಾಗರೀಕತೆಗಳಲ್ಲಿ ಒಂದಾದ ಚೀನಾವು, ಆರು ಸಹಸ್ರವರ್ಷ[ಸಾಕ್ಷ್ಯಾಧಾರ ಬೇಕಾಗಿದೆ]ಗಳಿಗಿಂತ ಹಳೆಯದಾದ ರಾಜ್ಯಗಳು ಹಾಗೂ ಸಂಸ್ಕೃತಿಯನ್ನು ಹೊಂದಿದೆ. ಇದು ವಿಶ್ವದಲ್ಲಿ ದೀರ್ಘಕಾಲದಿಂದ ನಿರಂತರವಾಗಿ ಬಳಸುತ್ತಿರುವ ಲಿಖಿತ ಭಾಷಾ ವ್ಯವಸ್ಥೆಯನ್ನು ಹೊಂದಿದೆ[ಸಾಕ್ಷ್ಯಾಧಾರ ಬೇಕಾಗಿದೆ] ಮತ್ತು ಇದನ್ನು ಬಹಳಷ್ಟು ಪ್ರಮುಖ ಆವಿಷ್ಕಾರಗಳ ಮೂಲವೆಂದು ಪರಿಗಣಿಸಲಾಗಿದೆ. ಚಾರಿತ್ರಿಕವಾಗಿ, ಚೀನಾದ ಸಾಂಸ್ಕೃತಿಕ ಪರಿಧಿಯು ಪೂರ್ವ ಏಷ್ಯಾದಾದ್ಯಂತ ಪಸರಿಸಿದ್ದು, ಚೀನಾದ ಧಾರ್ಮಿಕತೆ, ಪದ್ಧತಿಗಳು, ಮತ್ತು ಬರವಣಿಗೆಯ ವ್ಯವಸ್ಥೆಗಳನ್ನು ನೆರೆಹೊರೆಯ ದೇಶಗಳಾದ ಜಪಾನ್, ಕೊರಿಯಾ ಮತ್ತು ವಿಯೆಟ್ನಾಂಗಳು ವಿವಿಧ ಪ್ರಮಾಣದಲ್ಲಿ ಅಳವಡಿಸಿಕೊಂಡಿವೆ. ಈ ಪ್ರದೇಶದಲ್ಲಿನ ಮಾನವ ಅಸ್ತಿತ್ವದ ಮೊದಲ ಕುರುಹುಗಳು, ಸುಮಾರು ೩೦೦,೦೦೦ ರಿಂದ ೫೫೦,೦೦೦ ವರ್ಷಗಳ ಹಿಂದೆ ಜೀವಿಸಿದ್ದ ಪೀಕಿಂಗ್ ಮಾನವನೆಂದು ಕರೆಯಲ್ಪಡುವ, ಹೋಮೋ ಎರೆಕ್ಟಸ್‌ ನ ಪ್ರಪ್ರಥಮ ಮಾದರಿಗಳು, ಝುಕೋಡಿಯನ್‌ ಗುಹೆಯಲ್ಲಿ ಸಿಕ್ಕಿದವು.

ವ್ಯುತ್ಪತ್ತಿ ಶಾಸ್ತ್ರ

[ಬದಲಾಯಿಸಿ]
"ಚೀನಾ" ಪದಕ್ಕೆ ಸಮಾನವಾದ ಸಾಂಪ್ರದಾಯಿಕ (ಮೇಲಿನ) ಮತ್ತು ಸರಳೀಕೃತ (ಕೆಳಗಿನ) ಅಕ್ಷರಗಳು ಚೀನೀ ಭಾಷೆಯಲ್ಲಿವೆ. ಮೊದಲನೆಯ ಅಕ್ಷರ "ಮಧ್ಯದ" ಮತ್ತು ಎರಡನೆಯ ಅಕ್ಷರ "ಸಾಮ್ರಾಜ್ಯ" ಎಂಬರ್ಥ ಕೊಡುತ್ತವೆ.

ಆಂಗ್ಲ ಹೆಸರುಗಳು

[ಬದಲಾಯಿಸಿ]

"ಚೀನಾ" ಪದದ ಮೊತ್ತಮೊದಲ ದಾಖಲಿತ ಬಳಕೆ ೧೫೫೫[nb ೧][] ರಷ್ಟು ಹಿಂದಿನದು. ಮಾರ್ಕೋ ಪೋಲೋ[][] ರಿಂದ ಯೂರೋಪ್‌ನಲ್ಲಿ ಜನಪ್ರಿಯಗೊಳಿಸಲ್ಪಟ್ಟ ಚಿನ್ ಎಂಬ ಪರ್ಷಿಯನ್ ಹೆಸರಿನಿಂದ ಈ ಪದ ಜನಿಸಿದೆ. ಪ್ರಾಚೀನ ಬಳಕೆಯಲ್ಲಿ "ಚೀನಾ" ಪದವನ್ನು ಪಿಂಗಾಣಿಯನ್ನು ಹೆಸರಿಸಲು ಬಳಸಿದ್ದರೂ, ಎರಡೂ ಪದಗಳು ಬೇರೆ ಬೇರೆ ಪರ್ಷಿಯನ್ ಪದ[] ಗಳಿಂದ ಜನಿಸಿರುವುದರಿಂದ, ದೇಶದ ಹೆಸರನ್ನು ಪ್ರತ್ಯೇಕ ರೀತಿಯಲ್ಲಿ ಉಚ್ಚರಿಸಲಾಗುತ್ತದೆ. ಈ ಎರಡೂ ಪದಗಳು ಚೀನಾ ಪದಕ್ಕೆ ಸಂಸ್ಕೃತದಲ್ಲಿ ಸಮಾನವಾದ, ಚಿನ (चीन)[] ಎಂಬ ಪದದಿಂದ ಉಗಮಗೊಂಡಿವೆ. ಕ್ರಿ. ಪೂ. ೫ನೇ ಶತಮಾನ ಕಾಲದಲ್ಲಿ ಉತ್ತರದ "ಹಳದಿ ಬಣ್ಣದ" ಅನಾಗರಿಕ ಜನಾಂಗವೆಂದು ಉಲ್ಲೇಖಿತವಾಗಿದ್ದು, ಮಹಾಭಾರತ ,[][] ದಲ್ಲಿ ಪ್ರಪ್ರಥಮವಾಗಿ ದಾಖಲಾಗಿದೆ. ಈ ಜನಾಂಗವನ್ನು ರೂಢಿಗತವಾಗಿ ಚೀನಾದ ಪಶ್ಚಿಮ ಭಾಗದಲ್ಲಿದ್ದ ಕ್ವಿನ್(秦) (೭೭೮BC-೨೦೭BC),[][] ಸಾಮ್ರಾಜ್ಯದವರೆಂದು ಗುರುತಿಸುವರಾದರೂ, ಆ ಕಾಲದಲ್ಲಿ ಟಿಬೆಟ್‌ನಲ್ಲಿದ್ದ ಅಪರಿಚಿತ ಜನಾಂಗವನ್ನೂ ಉಲ್ಲೇಖಿಸಿರಬಹುದು. ಚೀನಾವನ್ನು ಚಾರಿತ್ರಿಕವಾಗಿ ಸಿನಾ (ಆದ್ದರಿಂದ "ಸಿನೋ-"), ಸಿನೇ, ಕ್ಯಾಥೆ, ಅಥವಾ ಸೆರೆಸ್‌ ಎಂಬ ಹೆಸರುಗಳಿಂದ ಕರೆಯಲಾಗಿದೆ.

ಚೀನಾ ಹೆಸರುಗಳು

[ಬದಲಾಯಿಸಿ]

ಪ್ರತಿ ರಾಜವಂಶದ ಆಳ್ವಿಕೆಯಲ್ಲೂ ಚೀನಾದ ಅಧಿಕೃತ ಹೆಸರು ಬದಲಾಗುತ್ತಿತ್ತು. ಸಾಮಾನ್ಯವಾಗಿ ಬಳಕೆಯಲ್ಲಿದ್ದ ಹೆಸರೆಂದರೆ ಝಾಂಗ್ಗುವೊ (ಸಾಂಪ್ರದಾಯಿಕ ಚೀನೀಲಿಪಿಯಲ್ಲಿ 中國 ಅಥವಾ ಸರಳೀಕೃತ ಚೀನೀಲಿಪಿಯಲ್ಲಿ 中国). "ಕೇಂದ್ರದ ದೇಶ" ಅಥವಾ (ಸಾಂಪ್ರದಾಯಿಕವಾಗಿ) "ಮಧ್ಯಮ ಸಾಮ್ರಾಜ್ಯ" ಎಂದು ಇದನ್ನು ಭಾಷಾಂತರಿಸಬಹುದು.

ಝಾಂಗ್ಗುವೋ ಎಂಬ ಹೆಸರು ಮೊದಲಿಗೆ ಕ್ಲಾಸಿಕ್ ಆಫ್ ಹಿಸ್ಟರಿ (೬ನೇ ಶತಮಾನ, BC)ಯಲ್ಲಿ ಪ್ರಸ್ತಾಪವಾಗಿತ್ತು, ಮತ್ತು ಪ್ರಾಚೀನ ಝೌ ಸಾಮ್ರಾಜ್ಯವನ್ನು ಉಲ್ಲೇಖಿಸಲು ಬಳಸಲಾಗಿತ್ತು, ಆ ಜನರು ತಮ್ಮನ್ನು "ನಾಗರೀಕತೆಯ ಕೇಂದ್ರ"[nb ೨] ವೆಂದು ನಂಬಿದ್ದರು, ಅಲ್ಲದೇ ನಾಲ್ಕು ಪ್ರಧಾನ ದಿಕ್ಕುಗಳ ಜನರನ್ನು ಅನುಕ್ರಮವಾಗಿ ಪೂರ್ವದ ಯಿ, ದಾಕ್ಷಿಣಾತ್ಯ ಮಾನ್, ಪಾಶ್ಚಿಮಾತ್ಯ ರಾಂಗ್ ಮತ್ತು ಉತ್ತರದ ಡೈಗಳೆಂದು ಕರೆಯಲಾಗುತ್ತಿತ್ತು. ಕೆಲವು ಉಲ್ಲೇಖಗಳು ಹೇಳುವ ಹಾಗೆ "ಝಾಂಗ್ಗುವೋ" ಎಂಬುದು ಚಕ್ರವರ್ತಿಯ ರಾಜಧಾನಿಯನ್ನು, ಆತನ ಸಾಮಂತ[nb ೩] ರ ರಾಜಧಾನಿಗಳಿಂದ ಪ್ರತ್ಯೇಕವಾಗಿ ಹೆಸರಿಸಲು ಬಳಸಲಾಗುತ್ತಿತ್ತು. "ಝಾಂಗ್ಗುವೋ " ಪದವನ್ನು ಪ್ರಾಮಾಣಿಕ ರಾಜಕೀಯವನ್ನು ಸೂಚಿಸಲು, ಹಾಗೂ "ಝಾಂಗ್ಗುವೋ " ಎಂಬುದನ್ನು ಹಿಂದಿನ ಚೀನೀ ಸಾಮ್ರಾಜ್ಯಗಳ ಏಕೈಕ ನ್ಯಾಯಬದ್ಧ ಹಕ್ಕುದಾರರೆಂದು ಭಾವಿಸಿದ್ದ ರಾಜಮನೆತನಗಳು ಬಳಸುತ್ತಿದ್ದವು; ಉದಾಹರಣೆಗೆ, ದಕ್ಷಿಣ ಸಾಂಗ್ ಸಾಮ್ರಾಜ್ಯದ ಕಾಲದಲ್ಲಿ, ಜಿನ್ ಸಾಮ್ರಾಜ್ಯ ಮತ್ತು ದಕ್ಷಿಣ ಸಾಂಗ್ ಮನೆತನಗಳೆರಡೂ ತಾವೇ "ಝಾಂಗ್ಗುವೋ "[nb ೪] ಗಳೆಂದು ಭಾವಿಸಿದ್ದರು.

ಝಾಂಗ್ಗುವೋ ಪದವನ್ನು ರಿಪಬ್ಲಿಕ್ ಆಫ್ ಚೀನಾ (ಝಾಂಘುವಾ ಮಿಂಗ್ವೊ )ದ ಸಂಕ್ಷೇಪವಾಗಿ ಸರ್ಕಾರದ ಸ್ಥಾಪನೆಯಾದ ನಂತರ ೧೯೧೨ರಲ್ಲಿ ಅಧಿಕೃತವಾಗಿ ಬಳಸಲಾಯಿತು. ೧೯೪೯ರಲ್ಲಿ ಸ್ಥಾಪನೆಯಾದ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವು, ಸಾಂಪ್ರದಾಯಿಕ ಕಲ್ಪನೆಯ "ಚೀನಾ"ದೊಳಗಿರುವ ಬಹುದೊಡ್ಡ ಪ್ರದೇಶವನ್ನು ನಿಯಂತ್ರಿಸುವುದರಿಂದ, ಪ್ರಸಕ್ತ ರಾಜಕೀಯ ಪಕ್ಷಗಳಲ್ಲಿ ಪೀಪಲ್ಸ್ ರಿಪಬ್ಲಿಕ್‌ನ್ನು ಮಾತ್ರ ಸಾಮಾನ್ಯವಾಗಿ ಝಾಂಗ್ಗುವೋ [nb ೫] ಎಂಬ ಸಂಕ್ಷಿಪ್ತ ಹೆಸರಿಂದ ಗುರುತಿಸಲಾಗುತ್ತದೆ.

ಇತಿಹಾಸ

[ಬದಲಾಯಿಸಿ]

ಪ್ರಾಚೀನ ಚೀನಾವು ಮನುಜ ನಾಗರೀಕತೆಯ ಪುರಾತನ ಕೇಂದ್ರಗಳಲ್ಲೊಂದಾಗಿತ್ತು. ಸ್ವತಂತ್ರವಾಗಿ [ಸಾಕ್ಷ್ಯಾಧಾರ ಬೇಕಾಗಿದೆ] ಬರವಣಿಗೆಯನ್ನು ಆವಿಷ್ಕರಿಸಿದ ಕೆಲವೇ ನಾಗರೀಕತೆಗಳಲ್ಲಿ ಚೀನೀ ನಾಗರೀಕತೆಯೂ ಒಂದಾಗಿದೆ, ಉಳಿದ ನಾಗರೀಕತೆಗಳೆಂದರೆ ಮೆಸಪೊಟಮಿಯಾ, ಸಿಂಧೂ ಕಣಿವೆ ನಾಗರೀಕತೆ, ಮಯನ್ ನಾಗರೀಕತೆ, ಪ್ರಾಚೀನ ಗ್ರೀಸ್‌ನ ಮಿನೊವನ್ ನಾಗರೀಕತೆ, ಮತ್ತು ಪ್ರಾಚೀನ ಈಜಿಪ್ಟ್.[ಸಾಕ್ಷ್ಯಾಧಾರ ಬೇಕಾಗಿದೆ]

ಪ್ರಾಚೀನತೆ

[ಬದಲಾಯಿಸಿ]

ಪ್ರಾಕ್ತನ ಕುರುಹುಗಳ ಪ್ರಕಾರ ಚೀನಾದಲ್ಲಿದ್ದ ಪುರಾತನ ವಾನರಗಳು ೨.೨೪ ಮಿಲಿಯನ್ ವರ್ಷಗಳಿಂದ ೨೫೦,೦೦೦ ವರ್ಷಗಳಷ್ಟು ಹಿಂದಿನವು.[][] (ಈಗಿನ ಬೀಜಿಂಗ್‌ನ ಬಳಿ ಇರುವ) ಝುಕೋಡಿಯನ್‌ನ ಗುಹೆಯೊಂದರಲ್ಲಿ ೩೦೦,೦೦೦ ರಿಂದ ೫೫೦,೦೦೦ ವರ್ಷಗಳಷ್ಟು ಹಳೆಯದಾದ ಪಳೆಯುಳಿಕೆಗಳು ಇವೆ. ಈ ಪಳೆಯುಳಿಕೆಗಳು ಬೆಂಕಿಯನ್ನು ಬಳಸಿದ ಹೋಮೋ ಎರೆಕ್ಟಸ್‌ಗಳಿಗೆ ಉದಾಹರಣೆಯೆನಿಸಿದ ಪೀಕಿಂಗ್‌ ಮಾನವನದಾಗಿದ್ದವು.

ಲಿಯುಜಿಯಾಂಗ್‌ ಪ್ರಾಂತ್ಯದ, ಗುಆಂಗ್‌ಕ್ಸಿಯಲ್ಲಿ ಪತ್ತೆಯಾದ ಸುಮಾರು ೬೭,೦೦೦ ವರ್ಷಗಳಷ್ಟು ಹಳೆಯದೆಂದು ಹೇಳಲಾದ ತಲೆಬುರುಡೆಯೊಂದು, ಚೀನಾದಲ್ಲಿ ಪೂರ್ಣ ಪ್ರಮಾಣದ ಆಧುನಿಕ ಮಾನವನ ಅಸ್ತಿತ್ವದ ಅತಿ ಹಳೆಯ ನಿದರ್ಶನವಾಗಿದೆ. ಲಿಯುಜಿಯಾಂಗ್‌ ಅವಶೇಷ[][೧೦] ಗಳ ಕಾಲಮಾನದ ಬಗ್ಗೆ ಬಹಳಷ್ಟು ವಿವಾದಗಳಿದ್ದರೂ, ಜಪಾನ್‌ನಲ್ಲಿರುವ ಓಕಿನಾವಾ ಪ್ರದೇಶದ ಮಿನಾಟೊಗಾವಾ ಎಂಬಲ್ಲಿ ಭಾಗಶಃ ಪತ್ತೆಯಾದ ೧೮,೨೫೦ ± ೬೫೦ ವರ್ಷಗಳಿಂದ (ಅಂದಾಜು ೬೫೦ ವರ್ಷಗಳು ಹೆಚ್ಚು ಕಡಿಮೆ) ೧೬,೬೦೦ ± ೩೦೦ ವರ್ಷಗಳವರೆಗೆ (ಅಂದಾಜು ೩೦೦ ವರ್ಷಗಳು ಹೆಚ್ಚುಕಡಿಮೆ) ಹಳೆಯದಾಗಿರಬಹುದಾದ ಅಸ್ಥಿಪಂಜರವೊಂದು ಪತ್ತೆಯಾದ ಕಾರಣ, ಆಧುನಿಕ ಮಾನವರು ಆ ಕಾಲಮಾನಕ್ಕಿಂತ ಮುನ್ನವೇ ಚೀನಾವನ್ನು ತಲುಪಿರಬಹುದು.

ಸಾಮ್ರಾಜ್ಯಗಳ ಆಳ್ವಿಕೆ

[ಬದಲಾಯಿಸಿ]

ಚೀನೀ ಪರಂಪರೆಯು ಕ್ಸಿಯಾವನ್ನು ಪ್ರಥಮ ಸಾಮ್ರಾಜ್ಯವನ್ನಾಗಿ ಹೆಸರಿಸಿದರೂ, ಹೆನಾನ್‌ ಪ್ರಾಂತ್ಯದ ಎರ್ಲಿಟೌ ಎಂಬಲ್ಲಿ ೧೯೫೯[೧೧] ರಲ್ಲಿ ನಡೆದ ವೈಜ್ಞಾನಿಕ ಉತ್ಖನನದಲ್ಲಿ ಕಂಚಿನ ಯುಗದ ನಿವೇಶನಗಳು ಪತ್ತೆಯಾಗುವವರೆಗೂ ಇದನ್ನು ಮಿಥ್ಯವೆಂದೇ ಪರಿಗಣಿಸಲಾಗಿತ್ತು. ಪ್ರಾಕ್ತನಶಾಸ್ತ್ರಜ್ಞರು ಈಗಾಗಲೇ ಕ್ಸಿಯಾಗಳದ್ದೆಂದು ಪ್ರಾಚೀನ ಚಾರಿತ್ರಿಕ ಉಲ್ಲೇಖಗಳಲ್ಲಿರುವ ನಗರ ಪ್ರದೇಶಗಳು, ಕಂಚಿನ ಸಾಧನಗಳು, ಮತ್ತು ಸಮಾಧಿಗಳನ್ನು ಹೊರತೆಗೆದಿದ್ದರೂ, ಆ ಕಾಲದ ಲಿಖಿತ ದಾಖಲೆಗಳಿಲ್ಲದೇ ನಿಜಕ್ಕೂ ಕ್ಸಿಯಾಗಳದ್ದೇ ಎಂದು ಸಿದ್ಧಪಡಿಸಲು ಅಸಾಧ್ಯ.

ಕ್ವಿನ್‌ ಸಾಮ್ರಾಜ್ಯದ ಯೋಧರ ಸಹಜ ಗಾತ್ರದ ಮೃಣ್ಮಯ ಪ್ರತಿಮೆಗಳಲ್ಲಿ ಕೆಲವು, ca. ಕ್ರಿ. ಪೂ. 210 .

ಪೂರ್ವ ಚೀನಾದ ಹಳದಿ ನದಿಯ ಉದ್ದಕ್ಕೂ ನೆಲೆಗೊಂಡಿದ್ದ, ಸ್ವಲ್ಪ ಮಟ್ಟಿಗೆ ಊಳಿಗಮಾನ್ಯ ಪದ್ಧತಿಯನ್ನು ಅನುಸರಿಸುತ್ತಿದ್ದ ಕ್ರಿ. ಪೂ. ೧೮ರಿಂದ ೧೨ನೇ ಶತಮಾನ ಕಾಲದ ಷಾಂಗ್‌ ಸಾಮ್ರಾಜ್ಯವು ಎರಡನೆಯದು. ನೆರೆಹೊರೆಯ ಶಕ್ತಿಶಾಲಿ ರಾಜ್ಯಗಳು ತಮ್ಮ ಕೇಂದ್ರೀಕೃತ ಆಡಳಿತವನ್ನು ನಾಶಪಡಿಸುವವರೆಗೆ, ಝೌಗಳು ಪಶ್ಚಿಮ ದಿಕ್ಕಿನಿಂದ ಇವರ ಮೇಲೆ ಆಕ್ರಮಣ ಮಾಡಿ, ಕ್ರಿ. ಪೂ. ೧೨ರಿಂದ ೫ನೇ ಶತಮಾನ ವರೆಗೂ ಇವರನ್ನು ಆಳಿದ್ದರು. ಅನೇಕ ನೆರೆಹೊರೆಯ ರಾಜ್ಯಗಳು, ವಸಂತ ಮತ್ತು ಶರತ್ಕಾಲಗಳಲ್ಲಿ ನಿರಂತರವಾಗಿ ಪರಸ್ಪರ ಯುದ್ಧಗಳನ್ನು ಮಾಡುತ್ತಿದ್ದರೂ, ಕೆಲವೊಮ್ಮೆ ಮಾತ್ರ ಝೌ ಚಕ್ರವರ್ತಿಯನ್ನು ಎದುರಿಸಿ ನಿಲ್ಲಲು ಪ್ರಯತ್ನಿಸುತ್ತಿದ್ದವು.

ಕ್ರಿ. ಪೂ. ೨೨೧ ರಲ್ಲಿ ಚಕ್ರವರ್ತಿಯ ಅಧಿಕಾರ ಸ್ಥಾಪಿಸಲ್ಪಟ್ಟು, ಚೀನೀ ಭಾಷೆಯು ಬಲವಂತವಾಗಿ ಅಧಿಕೃತ ಭಾಷೆಯೆಂದು ಹೇರಲ್ಪಟ್ಟಾಗ, ಪ್ರಥಮ ಏಕೀಕೃತ ಚೀನಿ ಆಡಳಿತವು, ಕ್ವಿನ್‌ ಸಾಮ್ರಾಜ್ಯದಿಂದ ಸ್ಥಾಪಿಸಲ್ಪಟ್ಟಿತು. ಈ ಆಡಳಿತವು ತನ್ನ ಲೀಗಲಿಸ್ಟ್‌‌ ನೀತಿಗಳಿಗೆ ವ್ಯಕ್ತವಾದ ತಕ್ಷಣದ ವ್ಯಾಪಕ ಪ್ರತಿಭಟನೆಗಳಿಂದಾಗಿ, ಹೆಚ್ಚುದಿನ ಇರಲಿಲ್ಲ.

ಮುಂದಿನ ಸಾಮ್ರಾಜ್ಯವೆಂದರೆ ಕ್ರಿ. ಪೂ. ೨೦೬ ರಿಂದ ಕ್ರಿ. ಶ. ೨೨೦ ವರೆಗೆ ಚೀನಾವನ್ನು ಆಳಿದ, ಹಾಗೂ ಇವತ್ತಿನವರೆಗೂ ತನ್ನ ಜನಾಂಗದವರು ಉಳಿಸಿಕೊಂಡು ಬಂದಿರುವ ಹ್ಯಾನ್‌ ಸಂಸ್ಕೃತಿಯನ್ನು ಸೃಷ್ಟಿಸಿದ ಹ್ಯಾನ್‌ ಸಾಮ್ರಾಜ್ಯ. ಹ್ಯಾನ್‌ ಸಾಮ್ರಾಜ್ಯವು ಕೊರಿಯಾ, ವಿಯೆಟ್ನಾಂ, ಮಂಗೋಲಿಯಾ ಮತ್ತು ಮಧ್ಯ ಏಷ್ಯಾಗಳನ್ನೊಳಗೊಂಡಂತೆ ಸೇನಾ ಕಾರ್ಯಾಚರಣೆಯನ್ನು ನಡೆಸಿ, ತನ್ನ ಅಧಿಪತ್ಯವನ್ನು ಗಣನೀಯವಾಗಿ ವಿಸ್ತರಿಸಿಕೊಂಡಿತು ಹಾಗೂ ಮಧ್ಯ ಏಷ್ಯಾದಲ್ಲಿ ರೇಷ್ಮೆಯ ಹೆದ್ದಾರಿಯನ್ನು ಸ್ಥಾಪಿಸಲು ಸಹಾ ನೆರವಾಯಿತು.

ಹ್ಯಾನ್‌ ಸಾಮ್ರಾಜ್ಯದ ಕುಸಿತದ ನಂತರ, ಮೂರು ಸಾಮ್ರಾಜ್ಯಗಳು ಎಂದು ಕರೆಯಲಾದ ವೀರಯುಗವನ್ನೂ ಒಳಗೊಂಡಂತೆ, ಮತ್ತೊಂದು ಒಕ್ಕೂಟ-ರಹಿತ ಕಾಲಾವಧಿಯು ಮುಂದುವರೆಯಿತು. ಈ ಅವಧಿಯ ಸ್ವತಂತ್ರ ಚೀನೀ ರಾಜ್ಯಗಳು, ಚೀನೀ ಬರವಣಿಗೆಯ ವ್ಯವಸ್ಥೆಯನ್ನು ಜಪಾನ್‌ನಲ್ಲಿ ಪರಿಚಯಿಸುವುದರೊಂದಿಗೆ, ಆ ದೇಶದ ಜೊತೆಗೆ ರಾಜತಾಂತ್ರಿಕ ಸಂಬಂಧವನ್ನೂ ಬೆಳೆಸಿಕೊಂಡವು. ಕ್ರಿ. ಶ. ೫೮೦ ರಲ್ಲಿ ಸೂಯಿಗಳ ಆಡಳಿತದಲ್ಲಿ ಚೀನಾ ಮತ್ತೆ ಏಕೀಕರಣಗೊಂಡಿತು. ಆದರೆ ಗೋಗುರ್ಯೋ-ಸೂಯಿ ಕದನಗಳ (೫೯೮–೬೧೪) ಸೋಲಿನ ನಂತರ ಕಂಗೆಟ್ಟಿದ್ದ ಸೂಯಿ ಸಾಮ್ರಾಜ್ಯವು ಹೆಚ್ಚು ಕಾಲ ನಡೆಯಲಿಲ್ಲ.

ಸಾಂಗ್‌ ಸಾಮ್ರಾಜ್ಯದ 10-11ನೇ ಶತಮಾನ ಕಾಲದ ಝೆಜಿಯಾಂಗ್‌ ಪ್ರಾಂತ್ಯದ ಲಾಂಗ್‌ಕ್ವುಆನ್‌ ಸುಟ್ಟ ಜೇಡಿಮಣ್ಣಿನ ಪಾತ್ರೆಗಳು.
ಟಾಂಗ್‌ ಸಾಮ್ರಾಜ್ಯ ಅವಧಿಯ 9ನೇ ಶತಮಾನದ ಆರಂಭದಲ್ಲಿ ಪೂರ್ಣಗೊಳಿಸಿದ ಲೆಷನ್‌‌ ಬೃಹತ್‌ ಬುದ್ಧ 71 m (233 ft) ಎತ್ತರದ ಪ್ರತಿಮೆ

ತರುವಾಯದ ಟಾಂಗ್‌ ಮತ್ತು ಸಾಂಗ್ ಸಾಮ್ರಾಜ್ಯಗಳ ಆಡಳಿತದಲ್ಲಿ, ಚೀನೀ ತಂತ್ರಜ್ಞಾನ ಮತ್ತು ಸಂಸ್ಕೃತಿಗಳು ಉತ್ತುಂಗ ತಲುಪಿದವು. ಟಾಂಗ್‌ ಸಾಮ್ರಾಜ್ಯವು ೮ನೇ ಶತಮಾನದ ಮಧ್ಯದವರೆಗೆ, ಅಂದರೆ ಆನ್‌ ಷಿ ದಂಗೆಯು ಅಧಿಪತ್ಯದ ಸಮೃದ್ಧಿಯನ್ನು ನಾಶಗೊಳಿಸುವವರೆಗೆ, ಅಧಿಕಾರದ ಪರಮಾವಧಿಯಲ್ಲಿತ್ತು. ಸಾಂಗ್‌ ಸಾಮ್ರಾಜ್ಯವು ವಿಶ್ವ ಇತಿಹಾಸದಲ್ಲೇ ಪ್ರಪ್ರಥಮವಾಗಿ ಮುದ್ರಿತ ಹಣವನ್ನು ಬಳಕೆಗೆ ತಂದ ಆಡಳಿತ ಹಾಗೂ ಶಾಶ್ವತ ನೌಕಾದಳವನ್ನು ಸ್ಥಾಪಿಸಿದ ಪ್ರಥಮ ಚೀನೀ ರಾಜ್ಯ ವ್ಯವಸ್ಥೆಯೂ ಹೌದು. ೧೦ ಮತ್ತು ೧೧ನೇ ಶತಮಾನಗಳ ಮಧ್ಯದ ಅವಧಿಯಲ್ಲಿ ಚೀನಾದ ಜನಸಂಖ್ಯೆ ದುಪ್ಪಟ್ಟಾಯಿತು. ಈ ಬೆಳವಣಿಗೆಗೆ ಕಾರಣ ಮಧ್ಯ ಹಾಗೂ ದಕ್ಷಿಣ ಚೀನಾಗಳಲ್ಲಿ ಹೆಚ್ಚಿದ ಭತ್ತದ ವ್ಯವಸಾಯ ಮತ್ತು ಹೆಚ್ಚುವರಿ ಆಹಾರದ ಸಮೃದ್ಧ ಉತ್ಪಾದನೆ. ಉತ್ತರದ ಸಾಂಗ್‌ ಸಾಮ್ರಾಜ್ಯವು ತನ್ನ ಗಡಿ ಪ್ರದೇಶಗಳಲ್ಲಿ ಕೆಲವು ೧೦೦ ಮಿಲಿಯನ್‌ರಷ್ಟು ಜನಸಂಖ್ಯೆಯನ್ನು ಹೊಂದಿತ್ತು. ಸಾಂಗ್‌ ಸಾಮ್ರಾಜ್ಯದ ಕಾಲವು ಕಲೆ, ತತ್ವಶಾಸ್ತ್ರ, ಮತ್ತು ಸಾಮಾಜಿಕ ಜೀವನಗಳಿಗೆ ಸಂಬಂಧಿಸಿದಂತೆ ಚೀನಾವು ಸಾಂಸ್ಕೃತಿಕವಾಗಿ ಶ್ರೀಮಂತಿಕೆಯಿಂದಿದ್ದ ಕಾಲವಾಗಿತ್ತು. ಟಾಂಗ್‌ ಸಾಮ್ರಾಜ್ಯದ ನಂತರ ವಿಶಾಲದೃಶ್ಯ ಕಲೆ ಮತ್ತು ಲಂಬೋನ್ನತಿ ಕಲೆ ಚಿತ್ರಕಲೆಗಳನ್ನು ಪರಿಪಕ್ವತೆ ಮತ್ತು ಸಂಕೀರ್ಣತೆಯ ವಿವಿಧ ಮಜಲುಗಳಿಗೆ ತಲುಪಿಸಿತು, ಮತ್ತು ಈ ಅವಧಿಯಲ್ಲಿ ಸಮಾಜದ ಗಣ್ಯರು ಒಟ್ಟಾಗಿ ಸೇರಿ ಕಲೆಗಳನ್ನು ವೀಕ್ಷಿಸಿ, ತಮ್ಮದನ್ನು ಹಂಚಿಕೊಂಡು ಮತ್ತು ಅತ್ಯಮೂಲ್ಯ ಕಲಾಕೃತಿಗಳನ್ನು ವ್ಯಾಪಾರ ಮಾಡುತ್ತಿದ್ದರು. ತತ್ವಜ್ಞಾನಿಗಳಾದ ಚೆಂಗ್‌ ಯಿ ಮತ್ತು ಚು ಹ್ಸಿ ಮುಂತಾದವರು ಕನ್‌ಫ್ಯೂಷನಿಸಂಗೆ ಹೊಸ ವ್ಯಾಖ್ಯಾನಗಳನ್ನು ನೀಡಿ, ಬೌದ್ಧ ಧರ್ಮೀಯ ಆದರ್ಶಗಳನ್ನು ಹೊಸದಾಗಿ ಅಳವಡಿಸಿ ಅದನ್ನು ಪುನರುಜ್ಜೀವನಗೊಳಿಸಿದರು ಹಾಗೂ ನವೀನ-ಕನ್‌ಫ್ಯೂಷನಿಸಂ ಸಿದ್ಧಾಂತದ ಒಳ ತಿರುಳನ್ನು ಹೊರತೆಗೆಯುವಂತಹಾ ಉತ್ಕೃಷ್ಠ ಗ್ರಂಥಗಳ ಹೊಸ ವ್ಯವಸ್ಥೆಯನ್ನು ರಚಿಸುವುದಕ್ಕೆ ಒತ್ತುಕೊಟ್ಟರು.

೧೨೭೧ರಲ್ಲಿ ಮಂಗೋಲ್‌ನ ನಾಯಕ ಹಾಗೂ ಮಂಗೋಲಿಯನ್ ಸಾಮ್ರಾಜ್ಯದ ಐದನೇ ಖಗನ್‌ ಆಗಿದ್ದ ಕುಬ್ಲೈ ಖಾನ್ ಯುವಾನ್‌ ಸಾಮ್ರಾಜ್ಯವನ್ನು ಸ್ಥಾಪಿಸಿದರೂ, ಸಾಂಗ್ ಸಾಮ್ರಾಜ್ಯದ ಕೊನೆಯ ತುಣುಕು ೧೨೭೯ರಲ್ಲಿ ಯುವಾನ್‌ ಪಾಲಾಗುವುದರೊಂದಿಗೆ ಯುವಾನ್‌ ಸಾಮ್ರಾಜ್ಯ ಪೂರ್ಣ ಸ್ಥಾಪನೆಯಾಯಿತು. ಮಂಗೋಲಿಯನ್‌ ಆಕ್ರಮಣದ ಮುನ್ನ ಚೀನೀ ಅಧಿಪತ್ಯಗಳು ಸುಮಾರು ೧೨೦ ಮಿಲಿಯನ್‌ ನಿವಾಸಿಗಳನ್ನು ಹೊಂದಿದ್ದರೆ; ೧೨೭೯ರಲ್ಲಿ ಅವರ ವಿಜಯೋತ್ಸವದ ನಂತರ, ೧೩೦೦ರಲ್ಲಿ ನಡೆದ ಜನಗಣತಿ ವರದಿಯ ಪ್ರಕಾರ ಸ್ಥೂಲ ಎಣಿಕೆಯಲ್ಲಿ ೬೦ ಮಿಲಿಯನ್‌ ಮಂದಿಗಳಿದ್ದರು.[೧೨] ಝೂ ಯುವಾನ್‌ಜ್ಯಾಂಗ್‌ ಎಂಬ ರೈತ ೧೩೬೮ರಲ್ಲಿ ಮಂಗೋಲಿಯರನ್ನು ಪರಾಭವಗೊಳಿಸಿ ಮಿಂಗ್ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಮಿಂಗ್ ಸಾಮ್ರಾಜ್ಯದ ಚಿಂತಕರಾದ ವಾಂಗ್‌ ಯಾಂಗ್‌ಮಿಂಗ್‌ ಮೊದಲಾದವರು, ನಂತರದ ಜಪಾನೀ ಆಲೋಚನಾಲಹರಿಯ ಮೇಲೆ ಪ್ರಚಂಡ ಪ್ರಭಾವ ಬೀರುವ ಮಟ್ಟಿಗೆ ಪ್ರತ್ಯೇಕತಾವಾದ ಮತ್ತು ಸ್ವಭಾವಸಹಜ ಶಿಷ್ಟತೆಗಳ ಬಗೆಗಿನ ನೂತನ ಆಲೋಚನೆಗಳೊಂದಿಗೆ ನವೀನ ಕನ್‌ಪ್ಯೂಷನಿಸಂನ್ನು ಮತ್ತಷ್ಟು ವಿಮರ್ಶಿಸಿದುದಲ್ಲದೇ ಇನ್ನೂ ವಿಸ್ತರಿಸಿದರು. ಚೊಸುನ್‌ ಕೊರಿಯಾವು ಬಹಳಷ್ಟು ನವೀನ-ಕನ್‌ಪ್ಯೂಷಿಯನ್‌ ಅಧಿಕಾರಿಶಾಹಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ಮಿಂಗ್ ಚೀನಾದ ಸಾಮಂತ ರಾಜ್ಯವೂ ಆಗಿತ್ತು. ಮಿಂಗ್ ಅಧಿಪತ್ಯದ ಆರಂಭದಲ್ಲಿ ಚೀನಾದ ರಾಜಧಾನಿಯನ್ನು ನಂಜಿಂಗ್‌ನಿಂದ ಬೀಜಿಂಗ್‌ಗೆ ಸ್ಥಳಾಂತರಿಸಲಾಗಿತ್ತು. ಮಿಂಗ್‌‌ ರಾಜರು ಕ್ವಿಂಗ್‌ ಸಾಮ್ರಾಜ್ಯವನ್ನು ಸ್ಥಾಪಿಸಿದ ಮಂಚುಗಳಿಂದ ೧೬೪೪ರಲ್ಲಿ ಪರಾಭವಗೊಂಡರು. ಮಿಂಗ್‌ ಸಾಮ್ರಾಜ್ಯ (೧೬೧೬–೧೬೪೪)[೧೩] ದ ಮೇಲಿನ ಮಂಚುಗಳ ದಿಗ್ವಿಜಯದ ಸಂದರ್ಭದಲ್ಲಿ ಅಂದಾಜು ೨೫ ಮಿಲಿಯನ್‌ ಮಂದಿ ಮಡಿದಿದ್ದರು.

೧೯೧೨ರ ವರೆಗೆ ಅಸ್ತಿತ್ವದಲ್ಲಿದ್ದ ಕ್ವಿಂಗ್‌ ರಾಜವಂಶವು, ಚೀನಾದ ಕೊನೆಯ ರಾಜವಂಶವಾಗಿದೆ. ೧೯ನೇ ಶತಮಾನದಲ್ಲಿ ಕ್ವಿಂಗ್‌ ರಾಜವಂಶವು ಯೂರೋಪ್‌ನ ಸಾಮ್ರಾಜ್ಯಶಾಹಿತ್ವ ವಿರುದ್ಧ ರಕ್ಷಣಾತ್ಮಕ ನಿಲುವು ತಾಳಿದ್ದರೂ, ತಾನು ಮಾತ್ರ ಸಾಮ್ರಾಜ್ಯವನ್ನು ಮಧ್ಯ ಏಷ್ಯಾದಲ್ಲಿ ವಿಸ್ತರಿಸುವಲ್ಲಿ ತೊಡಗಿತ್ತು. ಈ ಅವಧಿಯಲ್ಲಿ ಚೀನಾ ವಿಶ್ವದ ಇತರೆ ದೇಶಗಳ, ವಿಶಿಷ್ಟವಾಗಿ ಪಶ್ವಿಮ ದೇಶಗಳ ಪ್ರಾಮುಖ್ಯತೆಯನ್ನು ಅರಿತುಕೊಂಡಿತು. ಚೀನಾವು ವಿದೇಶ ವ್ಯಾಪಾರ ಹಾಗೂ ಧರ್ಮ ಪ್ರಚಾರಕ್ಕೆ ತನ್ನನ್ನು ತಾನು ತೆರೆದುಕೊಂಡದ್ದರಿಂದ ಬ್ರಿಟಿಷ್‌ ಭಾರತದಲ್ಲಿ ಉತ್ಪಾದನೆಯಾದ ಅಫೀಮನ್ನು ಕ್ವಿಂಗ್‌ ಚೀನಾಗೆ ಒತ್ತಾಯಪೂರ್ವಕವಾಗಿ ಕಳಿಸಲಾಯಿತು. ಬ್ರಿಟನ್‌ನೊಂದಿಗೆ ನಡೆದ ಎರಡು ಅಫೀಮು ಕದನಗಳಿಂದಾಗಿ ಚಕ್ರವರ್ತಿಯ ನಿಯಂತ್ರಣ ದುರ್ಬಲಗೊಂಡಿತು.

ರಾತ್ರಿಯಲ್ಲಿ ನಿಷೇಧಿತ ನಗರದ ಅಂಚಿನ ಗೋಪುರ ; 15ನೇ ಶತಮಾನದ ಮಿಂಗ್‌ ಸಾಮ್ರಾಜ್ಯದ ಯಾಂಗಲ್‌ ಚಕ್ರವರ್ತಿಯ ಆಡಳಿತದಿಂದ ಹಿಡಿದು 1912ರಲ್ಲಿ ಕ್ವಿಂಗ್‌ ಸಾಮ್ರಾಜ್ಯದ ಪತನದವರೆಗೂ ಈ ಅರಮನೆಯು ಅರಸು ಕುಟುಂಬಕ್ಕೆ ನಿವಾಸವಾಗಿತ್ತು.

ಇದರ ಒಂದು ಪರಿಣಾಮವೆಂದರೆ ೧೮೫೧ರಿಂದ ೧೮೬೨ವರೆಗೆ ನಡೆದ ತೈಪಿಂಗ್‌ ಸಾಮೂಹಿಕ ದಂಗೆ. ಇದು ಕ್ರೈಸ್ತಧರ್ಮದ ವಿಶಿಷ್ಟ ಅರ್ಥೈಸುವಿಕೆಯಿಂದ ಪ್ರಭಾವಿತನಾದ ಹಾಂಗ್‌ ಕ್ಸಿಯುಕ್ವಾನ್‌ನ ನೇತೃತ್ವದಲ್ಲಿ ನಡೆಯಿತು. ಹಾಂಗ್‌ ತನ್ನನ್ನು ದೇವರಮಗನೆಂದು ಹಾಗೂ ಏಸುವಿನ ಕಿರಿಯ ಸಹೋದರನೆಂದು ನಂಬಿದ್ದನು. ಕ್ವಿಂಗ್‌ ಸೇನೆಯು ಕೊನೆಗೆ ವಿಜಯಿಯಾದರೂ, ಈ ಸಾಮೂಹಿಕ ದಂಗೆಯು ಮಾನವ ಇತಿಹಾಸದಲ್ಲಿಯೇ ಅತಿ ಹೆಚ್ಚು ರಕ್ತಸಿಕ್ತವಾದದ್ದಾಗಿತ್ತು, ಕನಿಷ್ಟ ೨೦ ಮಿಲಿಯನ್‌ ಜೀವಗಳ ಬಲಿ ತೆಗೆದುಕೊಂಡಿತ್ತು (ಪ್ರಥಮ ವಿಶ್ವ ಸಮರದಲ್ಲಿನ ಒಟ್ಟು ಸಾವುನೋವುಗಳಿಗಿಂತ ಹೆಚ್ಚು), ಆದರೆ ಇನ್ನಿತರ ಅಂದಾಜಿನ ಪ್ರಕಾರ ಎರಡು ನೂರು ಮಿಲಿಯನ್‌ ಜನರು ಸಾವನ್ನಪ್ಪಿದ್ದರು. ತೈಪಿಂಗ್‌ ದಂಗೆಯ ನಂತರದಲ್ಲಿ, ಇನ್ನೂ ಅನೇಕ ಇನ್ನಿತರ ಅಪಾರ ಜೀವಹಾನಿಯುಂಟು ಮಾಡಿದ ದಂಗೆಗಳು ಯಾವುವೆಂದರೆ ಪುಂಟಿ-ಹಕ್ಕ ವಂಶಗಳ ಯಾದವೀ ಕಲಹ (೧೮೫೫–೧೮೬೭), ನಿಯೆನ್‌ ದಂಗೆ (೧೮೫೧–೧೮೬೮), ಮುಸ್ಲಿಮ್‌ ದಂಗೆ (೧೮೬೨–೧೮೭೭), ಪಾಂಥಯ್‌ ದಂಗೆ (೧೮೫೬–೧೮೭೩) ಮಿಯಾವೋ ದಂಗೆ (೧೮೫೪–೧೮೭೩)ಗಳು.[೧೪][೧೫] ಅಂದಾಜು ಪ್ರತಿ ದಂಗೆಯಿಂದ ಹಲವು ಮಿಲಿಯನ್‌ ಜೀವಹಾನಿಗಳಾಗಿದ್ದು, ಈ ದಂಗೆಗಳ ಪರಿಣಾಮವಾಗಿ ಆರ್ಥಿಕತೆ ಮತ್ತು ಗ್ರಾಮೀಣ ಪ್ರದೇಶ[೧೬][೧೭][೧೮] ಗಳ ಮೇಲಾದ ಅನಾಹುತಕಾರಿ ಪರಿಣಾಮಗಳಿಗೆ ಕಾರಣವಾಯಿತು. ಬ್ರಿಟಿಷರ ಅಫೀಮಿನ ಹರಿವು ಸಾಮ್ರಾಜ್ಯದ ಅಳಿವನ್ನು ತ್ವರಿತಗೊಳಿಸಿತು. ೧೯ನೇ ಶತಮಾನದಲ್ಲಿ ವಸಾಹತುಶಾಹಿ ಯುಗವು ಉತ್ತುಂಗದಲ್ಲಿತ್ತು ಹಾಗೂ ಚೀನೀಯರ ಬೃಹತ್‌ ವಲಸೆ ಆರಂಭವಾಯಿತು. ಇಂದು[೧೯] ಸುಮಾರು ೩೫ ಮಿಲಿಯನ್‌ ಮಂದಿ ಅನಿವಾಸಿ ಚೀನೀಯರು ಆಗ್ನೇಯ ಏಷ್ಯಾದಲ್ಲಿದ್ದಾರೆ. ೧೮೭೬-೭೯ರ ದುರ್ಭಿಕ್ಷವು ೯ ರಿಂದ ೧೩ ಮಿಲಿಯನ್‌ ಜೀವಗಳನ್ನು ಉತ್ತರ ಚೀನಾ[೨೦] ದಲ್ಲಿ ಬಲಿ ತೆಗೆದುಕೊಂಡಿತು.

ಇತ್ತ ನಿರಂತರ ಯುದ್ಧಗಳಿಂದ ಚೀನಾ ಜರ್ಜರಿತಗೊಳ್ಳುತ್ತಿದ್ದರೆ, ಅತ್ತ ಮೀಯ್‌ಜಿ ಜಪಾನ್‌ ಕ್ಷಿಪ್ರವಾಗಿ ಸೇನೆಯನ್ನು ಆಧುನೀಕರಿಸಿಕೊಂಡು ಕೊರಿಯಾ ಮತ್ತು ಮಂಚೂರಿಯಾಗಳನ್ನು ತನ್ನ ಪರಿಧಿಯೊಳಗೆ ಸೇರಿಸಿಕೊಳ್ಳುವತ್ತ ದೃಷ್ಟಿ ಹರಿಸುವುದರಲ್ಲಿ ಯಶಸ್ವಿಯಾಗಿತ್ತು. ಜಪಾನ್‌ನಿಂದ ಪ್ರಭಾವಿತಗೊಂಡ ಕೊರಿಯಾ ಕೂಡಾ ಕ್ವಿಂಗ್‌ ಚೀನಾದ ಏಕಾಧಿಪತ್ಯದಿಂದ ೧೮೯೪ರಲ್ಲಿ ಸ್ವತಂತ್ರತೆಯನ್ನು ಘೋಷಿಸಿಕೊಂಡಿತು, ಇದೇ ಕಾರಣದಿಂದ ಪ್ರಥಮ ಸಿನೋ-ಜಪಾನೀಯರ ಯುದ್ಧವು ನಡೆದು, ಪರಿಣಾಮವಾಗಿ ಕ್ವಿಂಗ್‌ ಅಧಿಪತ್ಯವು ಕೊರಿಯಾ ಮತ್ತು ತೈವಾನ್‌ಗಳ ಮೇಲಿನ ತನ್ನ ಸ್ವಾಮ್ಯವನ್ನು ಜಪಾನ್‌ಗೆ ಬಿಟ್ಟುಕೊಡಬೇಕಾಯಿತು. ಈ ಸರಣಿ ಸೋಲುಗಳ ನಂತರ, ಅಧಿಪತ್ಯದಲ್ಲಿ ಸುಧಾರಣಾ ಯೋಜನೆಯೊಂದನ್ನು ತಂದು ಆಧುನಿಕ ಮೀಯ್‌ಜಿ-ಮಾದರಿ ಸಂವಿಧಾನಿಕ ಪ್ರಭುತ್ವವನ್ನು ೧೮೯೮ರಲ್ಲಿ ಸ್ಥಾಪಿಸಲೆತ್ನಿಸಿದ ಗುವಾಂಗ್‌ಕ್ಸು ಚಕ್ರವರ್ತಿಯನ್ನು, ಸಾಮ್ರಾಜ್ಞಿ ಡೊವೆಗರ್‌ ಸಿಕ್ಸಿಯು ವಿರೋಧಿಸಿ, ಆ ಸುಧಾರಣೆಗಳನ್ನು ನಿಲ್ಲಿಸಿದ್ದಲ್ಲದೇ ಕ್ಷಿಪ್ರಕ್ರಾಂತಿಯೊಂದನ್ನು ನಡೆಸಿ ಚಕ್ರವರ್ತಿ ಗುವಾಂಗ್‌ಕ್ಸುನನ್ನು ಗೃಹಬಂಧನದಲ್ಲಿಟ್ಟಿದ್ದಳು. ಪಾಶ್ಚಿಮಾತ್ಯರ ವಿರುದ್ಧ ಬೀಜಿಂಗ್‌ನಲ್ಲಿ ನಡೆದ ದುರದೃಷ್ಟಕರ ೧೯೦೦ರ ಬಾಕ್ಸರ್‌ ದಂಗೆಯ ನಂತರ ಮತ್ತಷ್ಟು ವಿನಾಶ ಕಾದಿತ್ತು. ೨೦ನೇ ಶತಮಾನದ ಪ್ರಾರಂಭದಲ್ಲಿ ಸಾಮೂಹಿಕ ಗಲಭೆಗಳು ಆರಂಭವಾಗಿದ್ದಲ್ಲದೇ, ಸುಧಾರಣೆ ಮತ್ತು ಕ್ರಾಂತಿಗಳ ಅಗತ್ಯದ ಬಗ್ಗೆ ದೇಶಾದ್ಯಂತ ಕೂಗುಗಳು ಎದ್ದವು. ಸಿಕ್ಸಿಳ ಸಾವಿನ ಕೇವಲ ಒಂದು ದಿನ ಮುಂಚೆ ೧೪ ನವೆಂಬರ್‌ ೧೯೦೮ರಂದು ೩೮ ವರ್ಷದ ಚಕ್ರವರ್ತಿ ಗುವಾಂಗ್‌ಕ್ಸು ಗೃಹ ಬಂಧನದಲ್ಲೇ ಅನುಮಾನಾಸ್ಪದವಾಗಿ ಮಡಿದಿದ್ದನು. ಸಿಂಹಾಸನ ಖಾಲಿ ಬಿದ್ದುದರಿಂದ, ಸಿಕ್ಸಿಳ ಆಯ್ಕೆಯ ಉತ್ತರಾಧಿಕಾರಿಯಾಗಿದ್ದ, ಆಕೆಯ ಎರಡು ವರ್ಷದ ಸೋದರಳಿಯ ಪುಯಿಗೆ ಅಧಿಕಾರ ವಹಿಸಿಕೊಡಲಾಗಿದ್ದು, ನಂತರ ಕೊನೆಯ ಚೀನೀ ಚಕ್ರವರ್ತಿ ಯಾಗಿ ಆತನು ಕ್ಸುವಾನ್‌ಟಾಂಗ್‌ ಚಕ್ರವರ್ತಿಯೆನಿಸಿದ. ಚೀನಾದಲ್ಲಿ ಎರಡು ಸಾವಿರ ವರ್ಷಗಳ ಸಾಮ್ರಾಜ್ಯಶಾಹಿ ಆಡಳಿತವನ್ನು ಗುವಾಂಗ್‌ಕ್ಸುನ ಸಹಧರ್ಮಿಣಿ ಸಾಮ್ರಾಜ್ಞಿ ಡೊವೆಜರ್‌ ಲಾಂಗ್ಯುಳು, ಅಧಿಕಾರ ತ್ಯಜಿಸುವ ಶಾಸನಕ್ಕೆ ೧೯೧೨ರಲ್ಲಿ ರಾಜಪ್ರತಿನಿಧಿಯಾಗಿ ಸಹಿ ಹಾಕಿ ಕೊನೆಗೊಳಿಸಿದಳು. ಮಕ್ಕಳಿರದಿದ್ದ ಆಕೆ ೧೯೧೩ರಲ್ಲಿ ಮಡಿದಳು .

ರಿಪಬ್ಲಿಕ್ ಆಫ್ ಚೀನಾ (೧೯೧೨–೧೯೪೯)

[ಬದಲಾಯಿಸಿ]
ಸುನ್‌ ಯಾಟ್‌-ಸೆನ್‌ ಮತ್ತು ಚಿಯಾಂಗ್‌ ಕಯ್‌-ಶೆಕ್‌ ವಾಂಪೋವಾ ಸೈನಿಕ ಅಕಾಡೆಮಿಯ ಸ್ಥಾಪನೆಯಲ್ಲಿ.
ರ್ಯಾಂಡ್‌ ಮ್ಯಾಕ್‌ನಲ್ಲಿ ಅಂಡ್‌ ಕೋ. ಇಂದ 1914ರಲ್ಲಿ ಮುದ್ರಿತ ರಿಪಬ್ಲಿಕ್‌ ಆಫ್‌ ಚೀನಾದ ಭೂಪಟ.

ಕ್ವಿಂಗ್‌ ಸಾಮ್ರಾಜ್ಯದ ಪತನದ ಸೂಚನೆಯಾಗಿ ೧ನೇ ಜನವರಿ ೧೯೧೨ರಂದು ರಿಪಬ್ಲಿಕ್‌ ಆಫ್‌ ಚೀನಾವನ್ನು ಸ್ಥಾಪಿಸಲಾಯಿತು. ಕುವೋಮಿನ್‌ಟಾಂಗ್‌ ಪಕ್ಷದ (KMT ಅಥವಾ ರಾಷ್ಟ್ರೀಯವಾದಿ ಪಕ್ಷ) ಸುನ್‌ ಯಾಟ್‌-ಸೆನ್‌ರನ್ನು ನೂತನ ಗಣರಾಜ್ಯದ ಹಂಗಾಮಿ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು. ಆದರೆ ನಂತರ, ಸಂಪೂರ್ಣ ಬೀಯಾಂಗ್‌ ಸೇನೆಯ ನಿಷ್ಠೆಯನ್ನು ಕ್ವಿಂಗ್‌ ಪ್ರಭುತ್ವದಿಂದ ಕ್ರಾಂತಿಯ ಕಡೆ ಬದಲಿಕೆಗೆ ಕಾರಣಕರ್ತರಾಗಿದ್ದ ಯುವಾನ್‌ ಶಿಕಾಯ್‌, ಓರ್ವ ಮಾಜಿ ಕ್ವಿಂಗ್‌ ಸೇನಾ ಮುಖ್ಯಸ್ಥರಿಗೆ ಅಧ್ಯಕ್ಷತೆಯನ್ನು ನೀಡಲಾಯಿತು. ೧೯೧೫ರಲ್ಲಿ, ಯುವಾನ್‌ ತನ್ನನ್ನು ಚೀನಾದ ಚಕ್ರವರ್ತಿ ಎಂದು ಕರೆದುಕೊಂಡರೂ, ಆ ನಿರ್ಧಾರಕ್ಕೆ ಕೇವಲ ಸಾಮಾನ್ಯ ಜನರಷ್ಟೇ ಅಲ್ಲ, ತನ್ನವರೇ ಆದ ಬೀಯಾಂಗ್‌ ಸೇನೆ ಮತ್ತು ಅದರ ದಂಡನಾಯಕರಿಂದ ವಿರೋಧ ವ್ಯಕ್ತವಾದಾಗ ಅಧಿಕಾರ ತ್ಯಜಿಸಿ ಹಾಗೂ ದೇಶವನ್ನು ಮತ್ತೆ ಗಣತಂತ್ರರಾಜ್ಯವಾಗಿಸುವುದು ಅನಿವಾರ್ಯವಾಯಿತು.

೧೯೧೬ರಲ್ಲಿ ಯುವಾನ್‌ ಶಿಕಾಯ್‌'ನ ಸಾವಿನ ನಂತರ, ಚೀನಾವು ರಾಜಕೀಯವಾಗಿ ಒಡೆದು ಮತ್ತು ಅಂತರರಾಷ್ಟ್ರೀಯವಾಗಿ ಮನ್ನಣೆಯಿರುವ, ಆದರೆ ವಾಸ್ತವವಾಗಿ ಅಧಿಕಾರ-ರಹಿತ ರಾಷ್ಟ್ರೀಯ ಸರ್ಕಾರವು ಪ್ರಸ್ತುತ ಪೀಕಿಂಗ್‌ನಲ್ಲಿ (ಆಧುನಿಕ ಬೀಜಿಂಗ್‌) ಅಧಿಕಾರದಲ್ಲಿದೆ. ವಿವಿಧ ಪ್ರಾಂತ್ಯಗಳಲ್ಲಿನ ವೀರ ಸೇನಾಪತಿಗಳು ತಮ್ಮ ತಮ್ಮ ಸಂಸ್ಥಾನಗಳ ಮೇಲೆ ನಿಯಂತ್ರಣ ಸಾಧಿಸುತ್ತಿದ್ದರು. ೧೯೨೦ರ ಕೊನೆಭಾಗದಲ್ಲಿ ಚಿಯಾಂಗ್‌ ಕಯ್‌-ಶೆಕ್‌ರ ನೇತೃತ್ವದಲ್ಲಿ ಕುವೋಮಿಂಟಾಂಗ್‌ ಪಕ್ಷವು ತನ್ನದೇ ನಿಯಂತ್ರಣದಲ್ಲಿ ದೇಶವನ್ನು ಮತ್ತೆ ಒಗ್ಗೂಡಿಸುವುದು ಸಾಧ್ಯವಾಗಿ, ದೇಶದ ರಾಜಧಾನಿಯನ್ನು ನಂಕಿಂಗ್‌ಗೆ (ಆಧುನಿಕ ನಂಜಿಂಗ್‌) ಸ್ಥಳಾಂತರಿಸಿ, ಸುನ್‌ ಯಾಟ್‌-ಸೆನ್‌ರು ಚೀನಾವನ್ನು ಆಧುನಿಕ ಪ್ರಜಾಪ್ರಭುತ್ವದ ದೇಶವನ್ನಾಗಿಸಲು ರೂಪಿಸಿದ ರಾಜಕೀಯ ಅಭಿವೃದ್ಧಿ ಕಾರ್ಯಕ್ರಮದ ರೂಪರೇಷೆಯ ಮಧ್ಯಂತರ ಹಂತವಾದ "ರಾಜಕೀಯ ಮಾರ್ಗದರ್ಶನ"ವನ್ನು ಅಳವಡಿಸಿಕೊಳ್ಳಲು ಸಾಧ್ಯವಾಯಿತು. ಕುವೋಮಿಂಟಾಂಗ್‌ನಿಂದ ಏಕ-ಪಕ್ಷ ಆಡಳಿತವೇ ಆ ರಾಜಕೀಯ ಮಾರ್ಗದರ್ಶನದ ಅಂತರಾರ್ಥವಾಗಿತ್ತು.

೧೯೩೭-೧೯೪೫ರ ಸಿನೋ-ಜಪಾನೀಯರ‌ ಯುದ್ಧವು (ವಿಶ್ವ ಸಮರ IIರ ಭಾಗವಾಗಿ) ರಾಷ್ಟ್ರೀಯವಾದಿಗಳು ಹಾಗೂ ಕಮ್ಯೂನಿಸ್ಟರ ನಡುವೆ ಅಹಿತಕಾರಿ ಮೈತ್ರಿಯನ್ನು ಅನಿವಾರ್ಯವಾಗಿಸಿದ್ದಲ್ಲದೇ, ೨೦ ಮಿಲಿಯನ್‌ ಚೀನೀಯರ ಸಾವಿಗೆ ಕಾರಣವಾಯಿತು.[೨೧] ೧೯೪೫ರಲ್ಲಿ ಜಪಾನ್‌ನ ಶರಣಾಗತಿಯೊಂದಿಗೆ ಚೀನಾ ವಿಜಯ ಗಳಿಸಿತಾದರೂ, ಆರ್ಥಿಕವಾಗಿ ಜರ್ಜರಿತವಾಗಿತ್ತು. ರಾಷ್ಟ್ರೀಯವಾದಿ ಮತ್ತು ಕಮ್ಯೂನಿಸ್ಟರ ಪರಸ್ಪರ ಅಪನಂಬಿಕೆಗಳಿಂದಾಗಿ ಚೀನೀಯರ ಅಂತರ್ಕಲಹ ಮರುಕಳಿಸಿತು. ೧೯೪೭ರಲ್ಲಿ ಸಂವಿಧಾನಾತ್ಮಕ ಆಡಳಿತವನ್ನು ಸ್ಥಾಪಿಸಲಾಯಿತಾದರೂ, ಅಂರ್ತಕಲಹದಿಂದಾಗಿ ROC ಸಂವಿಧಾನದ ಬಹಳಷ್ಟು ಕಟ್ಟಳೆಗಳನ್ನು ಪ್ರಧಾನ ಭೂಮಿಯಲ್ಲಿ ಅನ್ವಯಿಸಲಾಗಲಿಲ್ಲ.

ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ ಮತ್ತು ರಿಪಬ್ಲಿಕ್‌ ಆಫ್‌ ಚೀನಾ (೧೯೪೯ರಿಂದ ಈಚೆಗೆ)

[ಬದಲಾಯಿಸಿ]

ಟೆಂಪ್ಲೇಟು:Chinese/China/Map

ಚೀನೀ ಅಂರ್ತಕಲಹದಲ್ಲಿ ಜಯಗಳಿಸಿದ ನಂತರ, ಮಾವೋ ಝೆಡಾಂಗ್‌ ನೇತೃತ್ವದ ಚೀನಾ ಕಮ್ಯುನಿಸ್ಟ್ ಪಾರ್ಟಿ(CCP)ಯು ಚೀನಾದ ಪ್ರಧಾನ ಭೂಮಿಯ ಬಹಳಷ್ಟು ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿತು.೧ ಅಕ್ಟೋಬರ್‌ ೧೯೪೯ರಂದು ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾವನ್ನು ROCಯ ಉತ್ತರಾಧಿಕಾರಿ ಪ್ರಭುತ್ವ ಎಂಬಂತೆ ಏಕೈಕ ಶಾಸನಬದ್ಧ ಪಕ್ಷವಾದ CCP ನೇತೃತ್ವದ "ಪ್ರಜಾಪ್ರಭುತ್ವವಾದಿ ಸರ್ವಾಧಿಕಾರ"ದ ನಿಯಂತ್ರಣದಲ್ಲಿ ಸಮಾಜವಾದಿ ಪ್ರಭುತ್ವವನ್ನಾಗಿ ಸ್ಥಾಪಿಸಲಾಯಿತು. ಚಿಯಾಂಗ್‌ ಕಯ್‌-ಶೆಕ್‌ ನೇತೃತ್ವದ ಚೀನೀ ರಾಷ್ಟ್ರೀಯವಾದಿ ಪಕ್ಷದ ಕೇಂದ್ರ ಸರ್ಕಾರವು ಹಿಮ್ಮೆಟ್ಟಿ, ವಿಶ್ವ ಸಮರ II ರಲ್ಲಿ ಆಕ್ರಮಿಸಿದ್ದ ತೈವಾನ್‌ನ ದ್ವೀಪವೊಂದಕ್ಕೆ ROC ಸರ್ಕಾರವನ್ನು ಸ್ಥಳಾಂತರಿಸಬೇಕಾಯಿತು. ೧೯೫೦ರಲ್ಲಿ ಪ್ರಮುಖ ಶಸ್ತ್ರಸನ್ನದ್ಧ ಹೋರಾಟಗಳು ಕೊನೆಗೊಂಡವಾದರೂ ಯಾವುದೇ ಶಾಂತಿ ಒಪ್ಪಂದಗಳಾಗಲಿಲ್ಲ. ೧೯೫೮–೬೧[೨೨][೨೩]ಭಾರೀ ಚೀನೀ ಬರಗಾಲದ ಸಂದರ್ಭದಲ್ಲಿ ಅಂದಾಜು ೩೬ ಮಿಲಿಯನ್‌ ಮಂದಿ ಮಡಿದಿದ್ದರು.

೧೯೭೦ರ ಕೊನೆಯಲ್ಲಿ ಆರಂಭಿಸಿ ರಿಪಬ್ಲಿಕ್‌ ಆಫ್‌ ಚೀನಾವು ಇನ್ನೂ ತನ್ನ ನಿಯಂತ್ರಣದಲ್ಲೇ ಉಳಿದಿದ್ದ ಪ್ರಾಂತ್ಯ (ತೈವಾನ್‌ ಮತ್ತು ಕ್ವೆಮಾಯ್‌, ಮತ್ಸುಗಳೂ ಸೇರಿದಂತೆ ಇನ್ನಿತರ ಪುಟ್ಟ ದ್ವೀಪಗಳು)ಗಳಲ್ಲಿ ಪೂರ್ಣ ಪ್ರಮಾಣದ, ಬಹು ಪಕ್ಷಗಳ, ಪ್ರಾತಿನಿಧಿಕ ಪ್ರಜಾಪ್ರಭುತ್ವವನ್ನು ಅಳವಡಿಸಿತು. ROCಯು ಇಂದು ಸಮಾಜದ ಎಲ್ಲಾ ಕ್ಷೇತ್ರಗಳಿಗೆ ಸೇರಿದ ಜನರ ಸಕ್ರಿಯ ರಾಜಕೀಯ ಪ್ರಾತಿನಿಧ್ಯವನ್ನು ಹೊಂದಿದೆ. ROC ರಾಜಕಾರಣದಲ್ಲಿನ ಪ್ರಮುಖ ಒಡಕಿನ ಮೂಲವೆಂದರೆ ಅಂತಿಮವಾಗಿ ಚೀನಾದ ಪ್ರಧಾನ ಭೂಮಿಯೊಂದಿಗೆ ರಾಜಕೀಯವಾಗಿ ಒಗ್ಗೂಡಿಕೆ ಅಥವಾ ವಿಧ್ಯುಕ್ತವಾದ ತೈವಾನ್‌ ಸ್ವಾತಂತ್ರ್ಯದ ಬಗೆಗಿನ ಚರ್ಚೆ.

ಚೀನೀ ಅಂರ್ತಕಲಹದ ನಂತರ ಚೀನಾದ ಪ್ರಧಾನ ಭೂಮಿಯು, ೧೯೫೦ರ ಕೊನೆಯಲ್ಲಿ ಪ್ರಗತಿಯೆಡೆಗಿನ ಭಾರೀ ಮುನ್ನಡೆಯೊಂದಿಗೆ ಆರಂಭಿಸಿ ೧೯೬೦ರ ಸಾಂಸ್ಕೃತಿಕ ಕ್ರಾಂತಿಯೊಂದಿಗೆ, ಮುಂದುವರೆದ ಸಾಲು ಸಾಲು ಉದ್ರಿಕ್ತ ಸಾಮಾಜಿಕ ಆರ್ಥಿಕ ಚಳವಳಿಗಳನ್ನು ಕಂಡು, ಶಿಕ್ಷಣ ವ್ಯವಸ್ಥೆ ಹಾಗೂ ಆರ್ಥಿಕತೆಗಳನ್ನು ಗೊಂದಲದಲ್ಲಿ ಕೆಡವಿತು. ಮಾವೋ ಝೆಡಾಂಗ್‌ ಮತ್ತು ಝೌ ಎನ್‌ಲಯ್‌ರಂತಹಾ ಮೊದಲನೇ ಪೀಳಿಗೆ ಕಮ್ಯೂನಿಸ್ಟ್‌ ಪಕ್ಷದ ಧುರೀಣರ ಸಾವಿನ ನಂತರ PRCಯು ಡೆಂಗ್‌ ಕ್ಸಿಯಾವೋಪಿಂಗ್‌ ಪ್ರಣೀತ ರಾಜಕೀಯ ಹಾಗೂ ಆರ್ಥಿಕ ಸುಧಾರಣೆಗಳನ್ನು ಕಾರ್ಯಗತಗೊಳಿಸಲು ಆರಂಭಿಸಿತು. ಇದು ಅಂತಿಮವಾಗಿ ಚೀನಾದ ಪ್ರಧಾನ ಭೂಮಿಯಲ್ಲಿ ೧೯೯೦ರಲ್ಲಿ ಆರಂಭವಾದ ಕ್ಷಿಪ್ರ ಆರ್ಥಿಕ ಬೆಳವಣಿಗೆಗೆ ಆಧಾರ ಸ್ತಂಭವೆನಿಸಿತು.

೧೯೭೮ರ ನಂತರದ ಸುಧಾರಣೆಗಳು ಸಮಾಜದ ಅನೇಕ ಕ್ಷೇತ್ರಗಳ ಮೇಲಿನ ನಿಯಂತ್ರಣವನ್ನು ಕೆಲಮಟ್ಟಿಗೆ ಸಡಿಲಗೊಳಿಸಿದವು. ಆದರೂ PRC ಸರ್ಕಾರವೂ ಈಗಲೂ ರಾಜಕೀಯದ ಮೇಲೆ ಅಪರಿಮಿತವಾದ ನಿಯಂತ್ರಣವನ್ನು ಹೊಂದಿದ್ದು, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಬೆದರಿಕೆಯಾಗಬಹುದು ಎನಿಸಿದ ಯಾವುದೇ ವಿಚಾರವನ್ನು ಮೂಲೋತ್ಪಾಟನೆ ಮಾಡಲು ಯತ್ನಿಸುತ್ತಿರುತ್ತದೆ. ಉದಾಹರಣೆಗಳಾಗಿ ಭಯೋತ್ಪಾದನೆ ವಿರುದ್ಧದ ಹೋರಾಟ, ರಾಜಕೀಯ ವಿರೋಧಿಗಳ ಮತ್ತು ಪತ್ರಕರ್ತರ ಸೆರೆ, ನಿರ್ಬಂಧಿತ ಪತ್ರಿಕೆಗಳ ನಿಯಂತ್ರಣ, ಧಾರ್ಮಿಕ ನಿಯಂತ್ರಣ , ಸ್ವಾಯತ್ತತಾವಾದಿ/ಪ್ರತ್ಯೇಕತಾವಾದಿ ಚಳುವಳಿಗಳ ಮೇಲಿನ ಕಡಿವಾಣಗಳನ್ನು ಹೆಸರಿಸಬಹುದು. ೧೯೮೯ರಲ್ಲಿ ತಿಯಾನನ್‌ಮೆನ್‌ ಚೌಕದ ಬಳಿಯಲ್ಲಿ ನಡೆದ ವಿದ್ಯಾರ್ಥಿಸಮೂಹದ ಪ್ರತಿಭಟನೆಗಳನ್ನು 15 ದಿನಗಳ ಸೇನಾಡಳಿತದ ನಂತರ ಚೀನೀ ಸೇನೆಯು ಹಿಂಸಾತ್ಮಕವಾಗಿ ಕೊನೆಗೊಳಿಸಿತು. ೧೯೯೭ರಲ್ಲಿ ಹಾಂಗ್‌ ಕಾಂಗ್‌ನ್ನು ಯುನೈಟೆಡ್‌ ಕಿಂಗ್‌ಡಂ, ಹಾಗೂ ೧೯೯೯ರಲ್ಲಿ ಮಕಾವು ಅನ್ನು ಪೋರ್ಚುಗಲ್‌ಗಳು PRCಗೆ ಹಿಂತಿರುಗಿಸಿದವು.

ಇಂದು ಚೀನಾ ಪ್ರಧಾನ ಭೂಮಿಯು ಚೀನೀ ಕಮ್ಯುನಿಸ್ಟ್‌ ಪಕ್ಷದ ನೇತೃತ್ವದಲ್ಲಿ ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾದ ಏಕಪಕ್ಷ ಪ್ರಭುತ್ವದಲ್ಲಿದ್ದರೆ, ತೈವಾನ್‌ ಹಾಗೂ ಸುತ್ತಮುತ್ತಲಿನ ದ್ವೀಪಗಳು ಪ್ರಜಾಪ್ರಭುತ್ವವಾದಿ ಬಹುಪಕ್ಷಗಳ ರಿಪಬ್ಲಿಕ್‌ ಆಫ್‌ ಚೀನಾದ ಅಧಿಪತ್ಯದಲ್ಲಿವೆ. ೧೯೪೯ರಲ್ಲಿ ಪೀಪಲ್ಸ್‌ ರಿಪಬ್ಲಿಕ್‌ನ ಉದಯವಾದ ನಂತರ, ಎರಡೂ ಪ್ರಭುತ್ವಗಳು, ಇಡೀ ಚೀನಾ ಭೂಭಾಗಕ್ಕೆ ತಾವೇ ಏಕೈಕ ಕ್ರಮಬದ್ಧ ಆಡಳಿತಗಾರರೆಂದು ಹೇಳಿಕೊಳ್ಳುತ್ತಿವೆ. ೧೯೪೯ರಲ್ಲಿ ಕುವೋಮಿಂಟಾಂಗ್‌ ತೈವಾನ್‌ಗೆ ಹಿಮ್ಮೆಟ್ಟಿದ ನಂತರ, ರಿಪಬ್ಲಿಕ್‌ ಆಫ್‌ ಚೀನಾವು ವಿಶ್ವದ ಇತರೆ ಪ್ರಭುತ್ವಗಳ ಜೊತೆ ಅಧಿಕೃತ ರಾಜತಾಂತ್ರಿಕ ಬಾಂಧವ್ಯಗಳನ್ನು ಇರಿಸಿಕೊಂಡಿದ್ದರೂ, ೧೯೭೦ರ ಹೊತ್ತಿಗೆ ಅಂತರರಾಷ್ಟ್ರೀಯ ರಾಜತಾಂತ್ರಿಕ ವರ್ತುಲಗಳಲ್ಲಿ ಬದಲಾವಣೆಯಾಗಿ ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾವು ಅಂತರರಾಷ್ಟ್ರೀಯ ರಾಜತಾಂತ್ರಿಕ ಬಾಂಧವ್ಯಗಳಲ್ಲಿ ಮೇಲುಗೈ ಸಾಧಿಸಿ ಮನ್ನಣೆ ಗಳಿಸಿತ್ತು. ೧೯೭೧ರಲ್ಲಿ 2758ನೇ ಗೊತ್ತುವಳಿಯ ಅಂಗವಾಗಿ, ಚಿಯಾಂಗ್‌ ಕಯ್‌-ಶೆಕ್‌ನ ವಿಶ್ವಸಂಸ್ಥೆಯಲ್ಲಿನ ಪ್ರತಿನಿಧಿಗಳನ್ನು ಅಂತರ್‌ ಸರಕಾರಗಳ ಸಂಘಗಳಿಂದ ಹೊರಗೆ ಹಾಕಲಾಯಿತು. ಚಿಯಾಂಗ್‌ ಕಯ್‌-ಶೆಕ್‌ನ ಪ್ರತಿನಿಧಿಗಳನ್ನು ವಾಸ್ತವಿಕವಾಗಿ ರಿಪಬ್ಲಿಕ್‌ ಆಫ್‌ ಚೀನಾವನ್ನು ಹೊರಗೆ ಹಾಕಿದುದರಿಂದ, ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾದ ಪ್ರತಿನಿಧಿಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ವಿಶ್ವಸಂಸ್ಥೆಯ ಮಹಾಸಭೆ ಮತ್ತು ಇನ್ನಿತರ ವಿಶ್ವಸಂಸ್ಥೆಯ ಸಂಸ್ಥೆ ಹಾಗೂ ಮಂಡಳಿಗಳಿಗೆ ಚೀನಾವನ್ನು ಪ್ರತಿನಿಧಿಸಲು ಆಹ್ವಾನಿಸಲಾಯಿತು. ನಂತರ ರಿಪಬ್ಲಿಕ್‌ ಆಫ್‌ ಚೀನಾವು ವಿಶ್ವಸಂಸ್ಥೆಯಲ್ಲಿ ಪಾಲುಗೊಳ್ಳಲು ನಡೆಸಿದ ಪ್ರಯತ್ನಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಟೊ ಅಧಿಕಾರ ಹೊಂದಿರುವ ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ ತಡೆಹಿಡಿಯುವುದರಿಂದ ಇಲ್ಲವೇ ವಿಶ್ವಸಂಸ್ಥೆಯ ಸಚಿವಾಲಯ ಅಥವಾ ಮಹಾಸಭೆಯ ಕಾರ್ಯಕಲಾಪ[೨೪] ಗಳ ಜವಾಬ್ದಾರಿಯುಳ್ಳ ವಿಶ್ವಸಂಸ್ಥೆಯ ಮಹಾಸಭೆಯ ಸಮಿತಿಗಳಿಂದ ತಿರಸ್ಕೃತಗೊಳಿಸುವುದರಿಂದ ನಿಷ್ಫಲಗೊಂಡಿವೆ.

ತನ್ನ ರಾಜಧಾನಿಯನ್ನು ತೈವಾನ್‌ಗೆ ಸ್ಥಳಾಂತರಿಸಿದ ನಂತರವೂ ರಿಪಬ್ಲಿಕ್‌ ಆಫ್ ಚೀನಾವು ಇಡೀ ಚೀನಾದ ಮೇಲಿನ ತನ್ನ ಅಧಿಕಾರವನ್ನು ಅಧಿಕೃತವಾಗಿ ಹಿಂತೆಗೆದುಕೊಂಡಿಲ್ಲದೇ ಇರುವುದಲ್ಲದೇ, ಪ್ರಧಾನ ಭೂಮಿ ಮತ್ತು ಮಂಗೋಲಿಯಾಗಳನ್ನೊಳಗೊಂಡ ತನ್ನ ಅಧಿಕೃತ ಭೂಪಟದಲ್ಲಿಯೂ ಬದಲಾವಣೆ ಮಾಡಿಲ್ಲ. ಪೂರ್ಣ ಪ್ರಜಾಪ್ರಭುತ್ವವನ್ನು ಅಳವಡಿಸಿದ ನಂತರ, DPPಚೆನ್‌ ಶೂಯಿ-ಬಿಯಾನ್‌ರು ಅಧ್ಯಕ್ಷೀಯ ಚುನಾವಣೆಯಲ್ಲಿ ಪಡೆದ ಗೆಲುವಿನಿಂದ, ROCಯು ತನ್ನ ಪ್ರಭುತ್ವವನ್ನು "ಚೀನಾ" ಎಂಬ ಹೆಸರಿನ ಬದಲು "ತೈವಾನ್‌" ಎಂಬ ಹೆಸರಿನಿಂದ ಗುರುತಿಸಿಕೊಳ್ಳುವ ನಿಲುವು ತಾಳಿದೆ. ಆದರೂ ROCಯು ಹೆಸರು, ಧ್ವಜ ಅಥವಾ ರಾಷ್ಟ್ರಗೀತೆಯಲ್ಲಿ ತೈವಾನ್‌ನ್ನು ಪ್ರತಿನಿಧಿಸುವ ಯಾವುದೇ ಅಧಿಕೃತ ನಡೆಗಳನ್ನು ಕೈಗೊಂಡಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ತೈವಾನ್‌ನೊಳಗಿನ ಆಂತರಿಕ ಭಿನ್ನಾಭಿಪ್ರಾಯ, ಯುನೈಟೆಡ್‌ ಸ್ಟೇಟ್ಸ್‌ನ ಒತ್ತಡ ಹಾಗೂ ಪೀಪಲ್ಸ್‌‌ ರಿಪಬ್ಲಿಕ್‌ ಆಫ್‌ ಚೀನಾದಿಂದ ದ್ವೀಪದ ಮೇಲಿನ ಆಕ್ರಮಣ ಅಥವಾ ಸೈನಿಕ ಕಾರ್ಯಾಚರಣೆಯ ಭಯ. ರಿಪಬ್ಲಿಕ್‌ ಆಫ್‌ ಚೀನಾವು DPPಯ ಆಡಳಿತ ಕಾಲದಲ್ಲಿ ಚೀನಾದ ಪ್ರಧಾನ ಭೂಭಾಗ ಅಥವಾ ಮಂಗೋಲಿಯಾದ ಮೇಲಿನ ತನ್ನ ಪ್ರಭುತ್ವದ ಬಗ್ಗೆ ಆಸಕ್ತಿ ತೋರದೇ ಇದ್ದರೂ, KMTಯ ಮಾ ಯಿಂಗ್‌-ಝಿಯೌರು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ, ಪ್ರಧಾನ ಭೂಭಾಗದ ಮೇಲಿನ ಹಕ್ಕಿನ ಮರುಸ್ಥಾಪನೆ[೨೫] ಗೆ ಮುಂದಾಗಿದೆ. ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾವು ರಿಪಬ್ಲಿಕ್‌ ಆಫ್‌ ಚೀನಾದ ಉತ್ತರಾಧಿಕಾರಿಯಾಗಿ ಪೂರ್ಣ ಚೀನಾದ ಏಕೈಕ ಶಾಸನಬದ್ಧ ಆಡಳಿತದ ಸೂತ್ರಧಾರನೆಂದು ಕರೆದುಕೊಳ್ಳುತ್ತಿದೆ. ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾದ ಅಧಿಕೃತ ಅಭಿಮತದ ಪ್ರಕಾರ ಪೂರ್ಣ ಚೀನಾವು ತೈವಾನ್‌ ದ್ವೀಪವನ್ನೊಳಗೊಂಡಿದೆ. ಕಳೆದ ೫೦ ವರ್ಷಗಳಲ್ಲಿ ರಿಪಬ್ಲಿಕ್‌ ಆಫ್‌ ಚೀನಾ ಹಾಗೂ ಪೀಪಲ್ಸ್‌‌ ರಿಪಬ್ಲಿಕ್‌ ಆಫ್‌ ಚೀನಾಗಳೆರಡೂ ರಾಜತಾಂತ್ರಿಕ ಹಾಗೂ ಆರ್ಥಿಕ ಸಾಮರ್ಥ್ಯಗಳಿಂದ ಅಂತರರಾಷ್ಟ್ರೀಯ ರಂಗದಲ್ಲಿ ಮಾನ್ಯತೆಗಾಗಿ ಪೈಪೋಟಿ ನಡೆಸಿವೆ. ಅಧಿಕ ಸಂಖ್ಯೆಯ ಅಂತರರಾಷ್ಟ್ರೀಯ, ಅಂತರ-ಸರಕಾರ ಸಂಸ್ಥೆಗಳು, ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾದ ಏಕೈಕ ಚೀನಾ ನೀತಿಯನ್ನು ಬೆಂಬಲಿಸುತ್ತಿರುವುದರಿಂದ, PRCಯು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯಂತಹಾ ಸಂಘಸಂಸ್ಥೆಗಳ ಮೇಲೆ ರಿಪಬ್ಲಿಕ್‌ ಆಫ್‌ ಚೀನಾಗೆ ಅಧಿಕೃತವಾಗಿ ಮಾನ್ಯತೆಯನ್ನು ನೀಡದಿರಲು ಒತ್ತಡ ಹೇರಲು ಯಶಸ್ವಿಯಾಗಿದೆ. ಏಕೈಕ ಚೀನಾ ನೀತಿಯಿಂದಾಗಿ, ವಿಶ್ವದಾದ್ಯಂತದ ಪ್ರಭುತ್ವಗಳ ಮೇಲೆ ರಿಪಬ್ಲಿಕ್‌ ಆಫ್‌ ಚೀನಾದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ತಿರಸ್ಕರಿಸಲು ಅಥವಾ ಕಡಿದುಕೊಳ್ಳಲು ಒತ್ತಡ ಹೇರಲಾಗುತ್ತಿದೆ. ಅದರ ಪರಿಣಾಮವಾಗಿ ಕೇವಲ 23 ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ರಿಪಬ್ಲಿಕ್‌ ಆಫ್‌ ಚೀನಾದೊಂದಿಗೆ ಅಧಿಕೃತ ರಾಜತಾಂತ್ರಿಕ ಸಂಬಂಧಗಳನ್ನು ಪ್ರಸಕ್ತವಾಗಿ ಹೊಂದಿದ್ದರೂ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಬಹುಪಾಲು ರಾಷ್ಟ್ರಗಳು ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾದೊಂದಿಗೆ ಅಧಿಕೃತ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿವೆ.

ಭೂಪ್ರದೇಶ ಹಾಗೂ ಪರಿಸರ

[ಬದಲಾಯಿಸಿ]

ಚಾರಿತ್ರಿಕ ರಾಜಕೀಯ ವಿಭಾಗಗಳು

[ಬದಲಾಯಿಸಿ]
ಚೀನಾ ಇತಿಹಾಸದುದ್ದಕ್ಕೂ ವಿವಿಧ ಸಾಮ್ರಾಜ್ಯಗಳು ಹಾಗೂ ಆಧುನಿಕ ಆಡಳಿತಗಳು ಆಕ್ರಮಿಸಿರುವ ಪ್ರಾಂತ್ಯಗಳು

ಚೀನಾದ ಮೇಲ್ಮಟ್ಟದ ರಾಜಕೀಯ ವಿಭಾಗಗಳು ಆಡಳಿತಗಳು ಬದಲಾದ ಹಾಗೆ ಮಾರ್ಪಾಡಾಗಿವೆ. ಮೇಲ್ಮಟ್ಟದ ಹಂತಗಳಿಗೆ ಪರಿಧಿಗಳು ಹಾಗೂ ಪ್ರಾಂತ್ಯಗಳೂ ಸೇರಿದ್ದವು. ಅದರ ಕೆಳಗೆ ಪ್ರಿಫೆಕ್ಷರ್‌ಗಳು, ಉಪಪ್ರಿಫೆಕ್ಷರ್‌ಗಳು, ಇಲಾಖೆಗಳು, ಕಮಾಂಡರಿಗಳು, ಜಿಲ್ಲೆಗಳು, ಮತ್ತು ಕೌಂಟಿಗಳೂ ಇದ್ದವು . ಇತ್ತೀಚಿನ ವಿಭಾಗಗಳು ಪ್ರಿಫೆಕ್ಚರ್‌ - ಹಂತದ ನಗರಗಳು, ಕೌಂಟಿ-ಹಂತದ ನಗರಗಳು, ಪಟ್ಟಣಗಳು ಮತ್ತು ಉಪಪಟ್ಟಣಗಳನ್ನೂ ಹೊಂದಿವೆ.

ಬಹಳಷ್ಟು ಚೀನೀ ಪ್ರಭುತ್ವಗಳು ಪ್ರಾಥಮಿಕ ಚೀನಾ ಎಂದು ಹೆಸರಾಗಿರುವ ಚಾರಿತ್ರಿಕ ಚೀನೀ ಹೃದಯಭಾಗಗಳಲ್ಲಿ ಅಸ್ತಿತ್ವದಲ್ಲಿದ್ದವು. ಅನೇಕ ಪ್ರಭುತ್ವಗಳು ಅಂಚಿನ ಪ್ರಾಂತ್ಯಗಳಾದ ಮಂಗೋಲಿಯಾ ಒಳಭಾಗಗಳು, ಮಂಚೂರಿಯಾ, ಕ್ಸಿನ್‌ಜಿಯಾಂಗ್‌, ಮತ್ತು ಟಿಬೆಟ್‌ಗಳವರೆಗೂ ವಿಸ್ತರಿಸಿದ್ದವು. ಮಂಚು-ಸ್ಥಾಪಿತ ಕ್ವಿಂಗ್‌ ರಾಜವಂಶ ಹಾಗೂ ಅದರ ಉತ್ತರಾಧಿಕಾರಿಗಳು, ROC ಮತ್ತು PRC ಈ ಎಲ್ಲಾ ಪ್ರಾಂತ್ಯಗಳನ್ನು ಚೀನೀ ಪ್ರಭುತ್ವಕ್ಕೆ ಒಂದುಗೂಡಿಸಿದರು.

ಭೂಗೋಳ ಮತ್ತು ಹವಾಗುಣ

[ಬದಲಾಯಿಸಿ]
ಸಂಯುಕ್ತ ಉಪಗ್ರಹ ಛಾಯಾಚಿತ್ರ

ಚೀನಾವು ಪಶ್ಚಿಮದಲ್ಲಿ ಪ್ರಸ್ಥಭೂಮಿ ಮತ್ತು ಪರ್ವತಗಳಿಂದ ಹಾಗೂ ಪೂರ್ವದಲ್ಲಿ ಇಳಿಜಾರು ಪ್ರದೇಶಗಳಿಂದ ಕೂಡಿದೆ. ಯಾಂಗ್‌ಟ್ಜಿ (ಮಧ್ಯದ), ಹುವಾಂಗ್‌ ಹೆ (ಹಳದಿ ನದಿ, ಉತ್ತರ-ಮಧ್ಯದ), ಮತ್ತು ಅಮುರ್‌ (ಈಶಾನ್ಯ)ಗಳೂ ಸೇರಿದಂತೆ ಪ್ರಮುಖ ನದಿಗಳು ಪಶ್ಚಿಮದಿಂದ ಪೂರ್ವಕ್ಕೆ, ಇನ್ನು ಕೆಲವು ದಕ್ಷಿಣದ ಕಡೆಗೆ (ಪರ್ಲ್‌ ನದಿ, ಮೆಕಾಂಗ್‌ ನದಿ, ಮತ್ತು ಬ್ರಹ್ಮಪುತ್ರ ಸೇರಿದಂತೆ) ಹರಿಯುತ್ತವೆ. ಬಹಳಷ್ಟು ಚೀನೀ ನದಿಗಳು ಪೆಸಿಫಿಕ್‌ ಸಾಗರಕ್ಕೆ ಸೇರುತ್ತವೆ.

ಪೂರ್ವದಲ್ಲಿ ಹಳದಿ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರಗಳ ತೀರಗಳುದ್ದಕ್ಕೂ ವಿಸ್ತಾರವಾದ ಹಾಗೂ ಜನನಿಬಿಡವಾಗಿರುವ ಮೆಕ್ಕಲು ಮಣ್ಣಿನ ಮೈದಾನಗಳಿವೆ. ಉತ್ತರದಲ್ಲಿ ಆಂತರಿಕ ಮಂಗೋಲಿಯನ್ ಪ್ರಸ್ಥಭೂಮಿಯ ಅಂಚುಗಳಲ್ಲಿ ಹುಲ್ಲುಗಾವಲುಗಳನ್ನು ಕಾಣಬಹುದು. ದಕ್ಷಿಣ ಚೀನಾವು ಗುಡ್ಡಗಾಡು ಹಾಗೂ ತಗ್ಗಿನಲ್ಲಿರುವ ಪರ್ವತ ಶ್ರೇಣಿಗಳಿಂದ ಆವೃತವಾಗಿದೆ. ಮಧ್ಯಪೂರ್ವದಲ್ಲಿ ಚೀನಾದ ಎರಡು ಪ್ರಮುಖ ನದಿಗಳಾದ, ಹುವಾಂಗ್‌ ಹೇ ಮತ್ತು ಯಾಂಗ್‌ಟ್ಜಿ ನದಿಗಳ ನದಿ-ಮುಖಜ ಭೂಮಿಗಳಿವೆ . ಚೀನಾದ ಬಹಳಷ್ಟು ವ್ಯವಸಾಯ ಯೋಗ್ಯ ಭೂಮಿಗಳು ಈ ನದಿಗಳ ಉದ್ದಕ್ಕೂ ಇವೆ. ಈ ನದಿಗಳೇ ಚೀನಾದ ಪ್ರಮುಖ ಪ್ರಾಚೀನ ನಾಗರೀಕತೆಯ ಕೇಂದ್ರಗಳಾಗಿದ್ದವು. ಇನ್ನಿತರ ಪ್ರಮುಖ ನದಿಗಳೆಂದರೆ ಪರ್ಲ್ ನದಿ, ಮೆಕಾಂಗ್‌, ಬ್ರಹ್ಮಪುತ್ರ ಹಾಗೂ ಅಮುರ್‌ಗಳಾಗಿವೆ. ಯುನ್ನಾನ್‌ ಪ್ರಾಂತ್ಯವನ್ನು ಮ್ಯಾನ್ಮಾರ್, ಲಾವೋಸ್, ಥೈಲ್ಯಾಂಡ್‌, ಕಾಂಬೋಡಿಯಾ, ಮತ್ತು ವಿಯೆಟ್ನಾಂ[೨೬] ಗಳೂ ಸೇರಿದಂತೆ ಪ್ರಧಾನ ಮೆಕಾಂಗ್‌ ಉಪಪ್ರದೇಶದ ಭಾಗವಾಗಿ ಪರಿಗಣಿಸಲಾಗಿದೆ.

ಚೀನಾದ ಭೂಗೋಳ, ಚೀನಾದ ಪ್ರಮುಖ ಭೌಗೋಳಿಕ ಭೂಲಕ್ಷಣಗಳು ಮತ್ತು ಪ್ರದೇಶಗಳು.

ಪಶ್ಚಿಮದಲ್ಲಿ, ಉತ್ತರಭಾಗವು ದೊಡ್ಡದಾದ ಮೆಕ್ಕಲು ಮಣ್ಣಿನ ಮೈದಾನಗಳನ್ನು, ದಕ್ಷಿಣವು ವಿಸ್ತಾರವಾದ ಸುಣ್ಣದ ಅಂಶ ಸೇರಿರುವ ಪ್ರಸ್ಥಭೂಮಿಗಳನ್ನು ಹೊಂದಿದ್ದು, ಮಧ್ಯಮ ಎತ್ತರದ ಗಿರಿಶ್ರೇಣಿಗಳಿಂದ ಸುತ್ತುವರೆದಿರುವುದಲ್ಲದೇ, ಭೂಮಿಯ ಅತ್ಯುನ್ನತ ಸ್ಥಳ ಮೌಂಟ್ ಎವರೆಸ್ಟ್‌ನ್ನು ಹೊಂದಿರುವ ಹಿಮಾಲಯ ಪರ್ವತಗಳಿವೆ. ವಾಯುವ್ಯ ಭಾಗವೂ ಸಹಾ ಎತ್ತರದ ಪ್ರಸ್ಥಭೂಮಿಗಳಿಂದ ಕೂಡಿದ್ದು, ಈಗಲೂ ವಿಸ್ತರಿಸುತ್ತಿರುವ ಹೆಚ್ಚು ಶುಷ್ಕತೆಯ ವಿಸ್ತಾರವಾದ ಮರುಭೂಮಿಗಳಾದ ಟಕ್ಲಾ-ಮಕಾನ್‌ ಮತ್ತು ಗೋಬಿ ಮರುಭೂಮಿಗಳನ್ನು ಹೊಂದಿದೆ. ಅನೇಕ ಅಧಿಪತ್ಯಗಳ ಕಾಲದಲ್ಲಿ, ಎತ್ತರದ ಪರ್ವತಗಳು ಮತ್ತು ಯುನ್ನಾನ್‌ನ ಆಳದ ಕಣಿವೆಗಳನ್ನೇ ಚೀನಾದ ನೈಋತ್ಯ ಗಡಿಯನ್ನಾಗಿ ಪರಿಗಣಿಸಲಾಗಿತ್ತು. ಇವು ಆಧುನಿಕ ಚೀನಾವನ್ನು ಬರ್ಮಾ, ಲಾವೋಸ್‌ ಮತ್ತು ವಿಯೆಟ್ನಾಂಗಳಿಂದ ಪ್ರತ್ಯೇಕಿಸುತ್ತವೆ.

ಡಿಕ್ವಿಂಗ್‌ನಲ್ಲಿನ ಹಿಮಾವೃತ ಪರ್ವತಗಳು‌, ವಾಯುವ್ಯ ಯುನ್ನಾನ್‌.

ಚೀನಾದ ಪಾಲೋಜಾಯಿಕ್‌ ರಚನೆಗಳು, ಕೇವಲ ಮೇಲ್ಭಾಗದಲ್ಲಿನ ಶಿಲಾವರ್ಗದ ವ್ಯವಸ್ಥೆಯನ್ನು ಹೊರತುಪಡಿಸಿ, ಸಮುದ್ರಕ್ಕೆ ಸಂಬಂಧಿಸಿದಾದರೆ, ಮೆಸೋಜಾಯಿಕ್‌ ಮತ್ತು ಶಿಲಾಸ್ತರ ನಿಕ್ಷೇಪಗಳು ನದೀಮುಖಜ ಮತ್ತು ಸಿಹಿನೀರು, ಅಥವಾ ಭೂಮೂಲವಾದವು. ಜ್ವಾಲಾಮುಖಿಯ ಶಂಕುವಿನಾಕೃತಿಗಳ ಗುಂಪೇ ಉತ್ತರ ಚೀನಾದ ಬೃಹತ್ ಮೈದಾನ ಪ್ರದೇಶದಲ್ಲಿ ಗೋಚರವಾಗುತ್ತವೆ. ಲಿಯಾವೋಡಾಂಗ್‌ ಮತ್ತು ಷಾನ್‌ಡಾಂಗ್‌ ದ್ವೀಪಕಲ್ಪಗಳಲ್ಲಿ ಅಗ್ನಿಶಿಲೆಗಳಿರುವ ನದೀಮುಖಜ ಭೂಮಿಗಳಿವೆ.

ಚೀನಾದ ಹವಾಗುಣ ಬಹಳಷ್ಟು ಏರಿಳಿತಗಳನ್ನು ಕಾಣುತ್ತಿರುತ್ತದೆ. ಉತ್ತರ ವಲಯವು (ಬೀಜಿಂಗ್‌ ಒಳಗೊಂಡು) ಬೇಸಿಗೆಯಲ್ಲಿ ೩೦ ಡಿಗ್ರಿ ಸೆಲ್ಷಿಯಸ್‌ಗಿಂತ ಹೆಚ್ಚಿನ ಹಗಲಿನ ಉಷ್ಣತೆಯನ್ನು ಹಾಗೂ ಚಳಿಗಾಲಗಳು ಉತ್ತರಧೃವದ ತೀವ್ರತೆಯನ್ನು ಹೊಂದಿರುತ್ತದೆ. ಮಧ್ಯದ ವಲಯವು (ಶಾಂಘಾಯ್‌ ಒಳಗೊಂಡು) ಗರಿಷ್ಠ ಉಷ್ಣತೆಯ ಬೇಸಿಗೆ ಹಾಗೂ ಶೀತಲ ಚಳಿಗಾಲಗಳ ಸಮಶೀತೋಷ್ಣ ಖಂಡಾಂತರ ಹವಾಗುಣ ಹೊಂದಿದೆ. ದಕ್ಷಿಣ ವಲಯವು (ಗುವಾಂಗ್‌ಝೌ ಒಳಗೊಂಡಂತೆ) ವಿಪರೀತ ಉಷ್ಣತೆಯ ಬೇಸಿಗೆ ಹಾಗೂ ಕಡಿಮೆ ತೀಕ್ಷ್ಣತೆಯ ಚಳಿಗಾಲವಿರುವ ಉಪ ಉಷ್ಣವಲಯಗಳ ಹವಾಗುಣವನ್ನು ಹೊಂದಿದೆ.

ದೀರ್ಘಕಾಲದ ಕ್ಷಾಮದ ಹಾವಳಿ ಮತ್ತು ಸಾಧಾರಣ ವ್ಯವಸಾಯ ಪದ್ಧತಿಗಳಿಂದಾಗಿ, ಚೀನಾ[೨೭] ದಲ್ಲಿ ವಸಂತ ಕಾಲದಲ್ಲಿ ಮರಳು ಬಿರುಗಾಳಿಗಳು ಸರ್ವೇಸಾಧಾರಣವಾಗಿವೆ . ಧೂಳಿನಿಂದ ಕೂಡಿದ ಗಾಳಿಯು ದಕ್ಷಿಣ ಚೀನಾ ಮತ್ತು ತೈವಾನ್‌ಗಳ ಮೇಲೆ ಬೀಸಿದ್ದು, ಯುನೈಟೆಡ್‌ ಸ್ಟೇಟ್ಸ್‌ನ ಪಶ್ಚಿಮ ಕರಾವಳಿಯನ್ನು ತಲುಪುತ್ತಿರುತ್ತದೆ. ನೀರು, ಮಣ್ಣಿನ ಸವಕಳಿ, ಮತ್ತು ಮಾಲಿನ್ಯ ನಿಯಂತ್ರಣಗಳು ಚೀನಾದೊಂದಿಗೆ ಇತರ ದೇಶಗಳೊಂದಿಗೆ ಸಂಬಂಧ ನಡೆಸುವಾಗ ಚರ್ಚೆಯ ವಿಷಯವಾಗಿವೆ.

ಆರ್ಥಿಕತೆ

[ಬದಲಾಯಿಸಿ]

ಸಂಸ್ಕೃತಿ

[ಬದಲಾಯಿಸಿ]
ವಾಂಗ್‌ ಯಾಂಗ್‌ಮಿಂಗ್‌, ನವೀನ-ಕನ್‌ಫ್ಯೂಷಿಯನ್‌ ಪ್ರಭಾವೀ ವ್ಯಕ್ತಿ
ಬೀಜಿಂಗ್‌ನಲ್ಲಿ ನಡೆದ ಚೀನಾದ ಗೀತನಾಟಕ (ಬೀಜಿಂಗ್‌ ಗೀತನಾಟಕ)ದ ಅಭಿನಯ, ಸಾಂಪ್ರದಾಯಿಕ ಚೀನೀ ಸಂಸ್ಕೃತಿಯ ವಿವಿಧ ಮಗ್ಗಲುಗಳಲ್ಲಿ ಇದೂ ಒಂದು

ಕನ್‌ಫ್ಯೂಷಿಯಸ್‌ ಮತವು ಚೀನಾದ ಸಾಮ್ರಾಜ್ಯಶಾಹಿ ಇತಿಹಾಸದ ಆದ್ಯಂತವೂ ಬಹುಮಟ್ಟಿಗೆ ಅಧಿಕೃತ ಸಿದ್ಧಾಂತವೆಂದು ಪರಿಗಣಿಸಲಟ್ಟಿದ್ದು, ಕನ್‌ಫ್ಯೂಷಿಯಸ್‌ ಗ್ರಂಥಗಳ ಮೇಲಿನ ಪ್ರಾವೀಣ್ಯತೆಯು ಸಾಮ್ರಾಜ್ಯಶಾಹಿ ಆಡಳಿತಕ್ಕೆ ಪ್ರವೇಶ ಪಡೆಯಲು ಪ್ರಮುಖ ಅರ್ಹತೆಯಾಗಿತ್ತು. ಕನ್‌ಫ್ಯೂಷಿಯಸ್‌ ಮತದ ವಿವಿಧ ಆವೃತ್ತಿಗಳಿಂದ ಚೀನಾದ ಸಾಂಪ್ರದಾಯಿಕ ಮೌಲ್ಯಗಳು ಜನಿಸಿದ್ದವು. ಲೀಗಲಿಸಂನಂತೆ, ಇನ್ನಿತರ ಅಸಂಖ್ಯಾತ ಅಧಿಕೃತ ವಿಚಾರ ಧಾರೆಗಳೂ ಸಹ ಪ್ರಭಾವ ಬೀರಿದ್ದವು. ಈ ಸಿದ್ಧಾಂತಗಳಲ್ಲಿಯೂ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು, ಉದಾಹರಣೆಗೆ ಸಾಂಗ್‌ ಸಾಮ್ರಾಜ್ಯದ ನವೀನ-ಕನ್‌ಪ್ಯೂಷಿಯಸ್‌ ಸಿದ್ಧಾಂತದವರು ಲೀಗಲಿಸಂ ಕನ್‌ಪ್ಯೂಷಿಯಸ್‌ ಸಿದ್ಧಾಂತದ ಮೂಲ ಕಲ್ಪನೆಯಿಂದ ಹೊರತಾದ ವಿಚಾರಧಾರೆಗಳನ್ನು ಹೊಂದಿದೆ ಎಂದೇ ನಂಬಿದ್ದರು. ಪರಿಶೋಧನೆಗಳು ಹಾಗೂ ಮೌಲ್ಯಗಳುಳ್ಳ ಸಂಸ್ಕೃತಿ ಯು ಇಂದಿಗೂ ಚೀನಾದಲ್ಲಿ ಮಹತ್ವವನ್ನು ಹೊಂದಿವೆ. ಇತ್ತೀಚಿನ ವರ್ಷಗಳಲ್ಲಿ, ಅನೇಕ ನವ ಕನ್‌ಪ್ಯೂಷಿಯಸ್‌ ಸಿದ್ಧಾಂತಿಕರು (ನವೀನ-ಕನ್‌ಪ್ಯೂಷಿಯಸ್‌ ಸಿದ್ಧಾಂತಿಕರಲ್ಲ) ಪ್ರಜಾಪ್ರಭುತ್ವದ ಆದರ್ಶಗಳು ಹಾಗೂ ನಾಗರಿಕ ಹಕ್ಕುಗಳ ಸಿದ್ಧಾಂತಗಳು ಪಾರಂಪರಿಕ ಕನ್‌ಪ್ಯೂಷಿಯಸ್‌ "ಏಷ್ಯಾದ ಮೌಲ್ಯ"ಗಳೊಂದಿಗೆ [೨೮] ಬಹಳಷ್ಟು ಸಾಮರಸ್ಯ ಹೊಂದಿವೆಯೆಂದು ಪ್ರತಿಪಾದಿಸುತ್ತಿದ್ದಾರೆ.

೧೯ನೇ ಶತಮಾನದ ಮಧ್ಯಭಾಗದಲ್ಲಿ ಪಾಶ್ಚಿಮಾತ್ಯರ ಆರ್ಥಿಕ ಮತ್ತು ಸೈನಿಕ ಬಲಗಳ ಏರಿಕೆಯಿಂದಾಗಿ, ಚೀನಾದಲ್ಲಿ ಚೀನೀಯವಲ್ಲದ ಸಾಮಾಜಿಕ ಮತ್ತು ರಾಜಕೀಯ ಸಂಘಸಂಸ್ಥೆಗಳ ವ್ಯವಸ್ಥೆಗಳ ಬೆಂಬಲಿಗರ ಸಂಖ್ಯೆ ಹೆಚ್ಚಿತು. ಈ ಭಾವೀ ಸುಧಾರಕರಲ್ಲಿ ಕೆಲವರು ಚೀನಾದ ಸಾಂಸ್ಕೃತಿಕ ಪರಂಪರೆಯನ್ನೇ ಪೂರ್ಣವಾಗಿ ಅಲ್ಲಗಳೆದರೆ, ಇನ್ನು ಕೆಲವರು ಚೀನೀ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಗಳ ಸತ್ವಗಳನ್ನು ಸಂಯೋಜನೆಯನ್ನು ಆಯ್ಕೆ ಮಾಡಿಕೊಂಡರು. ಇವೆಲ್ಲದರಿಂದ ಅರ್ಥವಾಗುವುದೇನೆಂದರೆ ೨೦ನೇ ಶತಮಾನದ ಚೀನಾದ ಇತಿಹಾಸವು ಸಾಮ್ರಾಜ್ಯಶಾಹಿಯ ಕುಸಿತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಏಕೀಕರಣಕ್ಕೆ ಸಹಾಯಕವಾಗಿ ಸಾಮಾಜಿಕ, ರಾಜಕೀಯ, ಮತ್ತು ಆರ್ಥಿಕ ಸಂಘಟನಾ ವ್ಯವಸ್ಥೆಗಳ ಪ್ರಯೋಗಗಳನ್ನು ಒಳಗೊಂಡಿತ್ತು.

ಕಲೆ, ಪಾಂಡಿತ್ಯ, ಮತ್ತು ಸಾಹಿತ್ಯ

[ಬದಲಾಯಿಸಿ]
ಮಿ ಫು ರ ಚೀನೀ ಅಲಂಕೃತ ಲಿಪಿರಚನೆ, ಸಾಂಗ್‌ ಸಾಮ್ರಾಜ್ಯ, ca. ಕ್ರಿ. ಶ.1100
ಸುನ್‌ ಟ್ಜುನ ಯುದ್ಧ ಕಲೆ, ಒಂದು ಕ್ವಿಯಾನ್‌ಲಾಂಗ್‌ ಸಾಮ್ರಾಜ್ಯದ ವಂಶಾವಳಿ ಪುಸ್ತಕದ 20ನೇ ಶತಮಾನದ ಮರುಮುದ್ರಿತ ಪ್ರತಿ.

ಚೀನೀ ಇತಿಹಾಸದಾದ್ಯಂತ ಚೀನೀ ಲಿಪಿಗಳು ಅನೇಕ ವೈವಿಧ್ಯತೆ ಮತ್ತು ಶೈಲಿಗಳನ್ನು ಹೊಂದಿದ್ದವು. ದೈವವಾಣಿಗಳಿರುವ ಎಲುಬುಗಳಿಂದ ಹಿಡಿದು ಕ್ವಿಂಗ್‌ ಶಾಸನಗಳವರೆಗೆ ಸಾವಿರಾರು ಪ್ರಾಚೀನ ಲಿಖಿತ ದಾಖಲೆಗಳು ಈಗಲೂ ಲಭ್ಯವಿದೆ. ಲಿಖಿತ ಪ್ರಾಮುಖ್ಯತೆಯು ಚೀನಾದಲ್ಲಿ ಸಾಂಸ್ಕೃತಿಕ ಪರಿಷ್ಕರಣೆಯ ಸಾಮಾನ್ಯ ಗ್ರಹಿಕೆಯನ್ನೇ ಪ್ರಭಾವಿಸಿತು. ಉದಾಹರಣೆಗೆ ಅಲಂಕೃತ ಲಿಪಿರಚನೆಯು ಚಿತ್ರಕಲೆ ಅಥವಾ ನಾಟಕ ಕಲೆಗಿಂತ ಉನ್ನತವಾದುದು ಎಂಬ ಅಭಿಮತವಿದ್ದದ್ದು. ಮಹಾಕೃತಿಗಳು ಮತ್ತು ಧಾರ್ಮಿಕ ಗ್ರಂಥಗಳ (ಪ್ರಮುಖವಾಗಿ ಕನ್‌ಫ್ಯೂಷಿಯಸ್‌ ಮತ, ಟಾವೋ ತತ್ವ, ಮತ್ತು ಬೌದ್ಧ ಧರ್ಮದವು) ಹಸ್ತಪ್ರತಿಗಳು ಕುಂಚ ಶಾಯಿಯಲ್ಲಿ ಹಸ್ತಲಿಖಿತವಾದವು. ಅಲಂಕೃತ ಲಿಪಿರಚನೆಯು ಮುಂದೆ ವ್ಯಾಪಾರೀಕೃತಗೊಂಡು, ಶ್ರೇಷ್ಠ ಕಲಾವಿದರ ಕೃತಿಗಳು ಉತ್ಕೃಷ್ಠ ಮೌಲ್ಯ ಹೊಂದಿದವು. ಚೀನೀ ಸಾಹಿತ್ಯವು ದೀರ್ಘ ಇತಿಹಾಸ ಹೊಂದಿದೆ; ಚೀನೀ ಭಾಷೆಯಲ್ಲಿನ ಪ್ರಾಚೀನ ಮಹಾಕೃತಿ, ಐ ಚಿಂಗ್‌ ಅಥವಾ "ಪರಿವರ್ತನೆಗಳ ಗ್ರಂಥ"ವು ಕ್ರಿ. ಪೂ. ೧೦೦೦ ದಷ್ಟು ಹಳೆಯದು. ರಾಜ್ಯಗಳ ಸಂಘರ್ಷದ ಅವಧಿಯಲ್ಲಿ ಉಚ್ಛ್ರಾಯ ಸ್ಥಿತಿ ತಲುಪಿದ ತತ್ವಶಾಸ್ತ್ರವು ಕನ್‌ಫ್ಯೂಷಿಯಸ್‌ನ ಅನಾಲೆಕ್ಟ್ಸ್‌ ಮತ್ತು ಲಾವೋಜಿನ ಟಾವೋ ಟೆ ಚಿಂಗ್‌ ನಂತಹ ಗಮನಾರ್ಹ ಕೃತಿಗಳನ್ನು ನೀಡಿತು. (ವಿವರಗಳಿಗಾಗಿ ನೋಡಿ: ಚೀನೀ ಮಹಾಕೃತಿಗಳು.) ಸಿಮಾ ಕ್ವಿಯಾನ್‌ನ ಮೂಲಾವಸ್ಥೆಯ ಕ್ರಿ. ಪೂ. ೧೦೯ ರಿಂದ ಕ್ರಿ. ಪೂ. ೯೧ ರವರೆಗೆ ರಚಿತವಾದ ಇತಿಹಾಸಕಾರನ ದಾಖಲೆಗಳು ಇಂದ ಮೊದಲುಗೊಂಡು, ರಾಜವಂಶೀಯ ಇತಿಹಾಸಗಳು ಆಗ್ಗಾಗ್ಗೆ ರಚಿತವಾದವು. ಟಾಂಗ್‌ ಸಾಮ್ರಾಜ್ಯದ ಅವಧಿಯಲ್ಲಿ ಕವಿತ್ವ ವಿಕಾಸಗೊಂಡಿದ್ದರೆ, ಚೀನೀ ಸಾಹಿತ್ಯದ ನಾಲ್ಕು ಶ್ರೇಷ್ಠ ಸಾಂಪ್ರದಾಯಿಕ ಕಾದಂಬರಿಗಳು ಮಿಂಗ್‌ ಹಾಗೂ ಕ್ವಿಂಗ್‌ ಸಾಮ್ರಾಜ್ಯಗಳ ಅವಧಿಯಲ್ಲಿ ರಚಿತವಾದವು. ಸಾಂಗ್‌ ಅಧಿಪತ್ಯದ ಅವಧಿಯಲ್ಲಿ ಚಲಿಸಬಲ್ಲ ಅಚ್ಚುಗಳ ಮಾದರಿಯ ಮುದ್ರಣ ಅಚ್ಚುಗಳನ್ನು ಅಭಿವೃದ್ಧಿಪಡಿಸಲಾಯಿತು. ಪ್ರಭುತ್ವದಿಂದ ಪ್ರಾಯೋಜಿತವಾಗಿ ಪಂಡಿತರುಗಳನ್ನು ಒಳಗೊಂಡ ಪರಿಷತ್ತುಗಳನ್ನು ಸ್ಥಾಪಿಸಿ, ಮುದ್ರಿತ ಹಾಗೂ ಹಸ್ತಪ್ರತಿಗಳ ರೂಪದಲ್ಲಿರುವ ಮೇರುಕೃತಿಗಳ ಬಗ್ಗೆ ವ್ಯಾಖ್ಯಾನಗಳನ್ನು ಬರೆಸಲಾಗುತ್ತಿತ್ತು. ಇಂತಹಾ ಚರ್ಚೆಗಳಲ್ಲಿ ಪ್ರಭುತ್ವವೂ ಆಗಿಂದ್ದಾಗ್ಗೆ ಭಾಗವಹಿಸುತ್ತಿತ್ತು. ಸಾಂಗ್‌ ಸಾಮ್ರಾಜ್ಯದ ಅವಧಿಯು ಅಧಿಕಾಂಶ ವೈಜ್ಞಾನಿಕ ಸಾಹಿತ್ಯ ರಚನೆಯಾದ ಅವಧಿಯೂ ಆಗಿತ್ತು. ಸು ಸಾಂಗ್‌ ರಚಿತ ಕ್ಸಿನ್‌ ಇಕ್ಸಿಯಾಂಗ್‌ ಫಾಯೋ ಮತ್ತು ಷೆನ್‌ ಕುಓ ರಚಿತ ಕನಸಿನ ಹೊಳೆಯ ಪ್ರಬಂಧಗಳು ಮುಂತಾದ ಕೃತಿಗಳ ರಚನೆಯಾಯಿತು. ಇತಿಹಾಸ ಶಾಸ್ತ್ರಕ್ಕೆ ಹಾಗೂ ಬೃಹತ್‌ ವಿಶ್ವಕೋಶಗಳಿಗೆ ಸಂಬಂಧಿಸಿದಂತೆ ವಿಪುಲ ಕೃತಿಗಳು, ಹೆಸರಿಸಬೇಕೆಂದರೆ, ಕ್ರಿ. ಶ. ೧೦೮೪ ನಲ್ಲಿ ರಚಿತವಾದ ಸಿಮಾ ಗುವಾಂಗ್‌ನ ಝಿಝಿ ಟಾಂಗ್‌ಜಿಯಾನ್‌ ಅಥವಾ ಸಾಂಗ್‌ನ ನಾಲ್ಕು ಉತ್ಕೃಷ್ಠ ಗ್ರಂಥಗಳು ೧೧ನೇ ಶತಮಾನದ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಕಲನ ಮತ್ತು ಸಂಪಾದನೆಯಾದವು. ಶತಮಾನಗಳ ಕಾಲ ಚೀನಾದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಬೆಳವಣಿಗೆಗಳನ್ನು ಸಾಮ್ರಾಜ್ಯಶಾಹಿ ಪರೀಕ್ಷೆಗಳಲ್ಲಿ ಹೆಚ್ಚಿನ ಸಾಮರ್ಥ್ಯ ಪ್ರದರ್ಶನದ ಮೂಲಕ ಮಾತ್ರವೇ ತರಲು ಸಾಧ್ಯವಿತ್ತು. ಇದು ಅರ್ಹತಾಶಾಹಿಯ ನಿರ್ಮಾಣಕ್ಕೆ ನಾಂದಿಯಾಯಿತು. ಆದರೆ ಇಲ್ಲಿ ಯಶಸ್ಸು ಪರೀಕ್ಷೆಗೆ ತಯಾರಿ ನಡೆಸಲು ಸಮರ್ಥರಾಗಿದ್ದ ಪುರುಷರಿಗೆ ಮಾತ್ರ ಸಾಧ್ಯವಿತ್ತು. ಸಾಮ್ರಾಜ್ಯಶಾಹಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಪ್ರಬಂಧಗಳನ್ನು ಬರೆದು ಕನ್‌ಫ್ಯೂಷಿಯಸ್‌ ಮೇರುಕೃತಿಗಳ ಬಗ್ಗೆ ತಮಗಿರುವ ಪ್ರೌಢಿಮೆಯನ್ನು ತೋರಿಸಬೇಕಿತ್ತು. ಉನ್ನತ ಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಜಿನ್ಷಿ ಗಳೆಂದು ಹೆಸರಾದ ಗಣ್ಯ ಪಂಡಿತ-ಅಧಿಕಾರಿಗಳ ಪದವಿ ಹೊಂದಿರುತ್ತಿದ್ದರು. ಇದು ಉನ್ನತವಾದ ಸಾಮಾಜಿಕ ಮತ್ತು ಆರ್ಥಿಕ ಸ್ಥಾನವಾಗಿತ್ತು. ಚೀನೀ ತತ್ವಶಾಸ್ತ್ರಜ್ಞರು, ಲೇಖಕರು ಮತ್ತು ಕವಿಗಳು ವಿಶೇಷ ಗೌರವವನ್ನು ಹೊಂದಿರುತ್ತಿದ್ದುದಲ್ಲದೇ, ಸಾಮ್ರಾಜ್ಯದ ಸಂಸ್ಕೃತಿಯನ್ನು ರಕ್ಷಿಸುವ ಮತ್ತು ಬೆಳೆಸುವ ಜವಾಬ್ದಾರಿಯುತ ಸ್ಥಾನಗಳನ್ನು ಹೊಂದಿರುತ್ತಿದ್ದರು. ಕೆಲ ಮೇರುಕೃತಿಗಳನ್ನು ರಚಿಸಿದ ಪಂಡಿತೋತ್ತಮರು, ತಮ್ಮ ಕೃತಿಗಳಲ್ಲಿ ಧೈರ್ಯವಾಗಿ ಸಾಮಾನ್ಯ ಜನಜೀವನದ ಬಗ್ಗೆ ನೈಜ ಚಿತ್ರಣ ನೀಡಿ, ಆಗ್ಗಾಗ್ಗೆ ಅಧಿಕಾರಸ್ಥರ ಅಸಮಾಧಾನಕ್ಕೆ ಗುರಿಯಾಗುತ್ತಿದ್ದರು. ಚೀನೀಯರು ಝೆಂಗ್‌ (ಚಲಿಸಬಲ್ಲ ಮರದ ಪಟ್ಟಿಯುಳ್ಳ ಜಿದರ್‌), ಕ್ವಿನ್‌ (ಮರದ ಪಟ್ಟಿಯಿಲ್ಲದ ಜಿದರ್‌), ಷೆಂಗ್‌ (ನಿರ್ಬಂಧವಿಲ್ಲದ ಮೌತ್‌ ಆರ್ಗನ್‌), ಮತ್ತು ಕ್ಸಿಯಾವೋ (ಲಂಬ ಕೊಳಲು)ಗಳಂತಹಾ ಅನೇಕ ಸಂಗೀತ ಸಾಧನಗಳನ್ನು ಆವಿಷ್ಕಾರಗಳನ್ನು ಮಾಡಿದ್ದರು, ಮತ್ತು ಇನ್ನಿತರ ಸಾಧನಗಳನ್ನು ಅನುಸರಿಸಿ ತಮ್ಮದೇ ಆದ ಸಾಧನಗಳನ್ನು, ಅಂದರೆ ಎರ್‌ಹೂ (ತಾರಸ್ಥಾಯಿಯ ಪಿಟೀಲು ಅಥವಾ ಬಗ್ಗಿದ ಲೂಟ್‌ ವಾದ್ಯ ) ಮತ್ತು ಪಿಪಾ (ಪೇರ್‌ಹಣ್ಣಿನ-ಆಕೃತಿಯ ಅರೆ ತೆರೆದ ಲೂಟ್‌ ವಾದ್ಯ) ಮದರಿಯ ಸಂಗೀತ ವಾದ್ಯಗಳನ್ನು ಅಭಿವೃದ್ಧಿಗೊಳಿಸಿದರು. ಈ ವಾದ್ಯಗಳು ಮುಂದೆ ಪೂರ್ವ ಏಷ್ಯಾ ಮತ್ತು ಆಗ್ನೇಯ ಏಷ್ಯಾದಾದ್ಯಂತ, ಅದರಲ್ಲೂ ವಿಶೇಷವಾಗಿ ಜಪಾನ್‌, ಕೊರಿಯಾ, ಮತ್ತು ವಿಯೆಟ್ನಾಂಗಳೆಡೆಗೆ ಪಸರಿಸಿದವು.

ಜನಸಾಂದ್ರತೆ

[ಬದಲಾಯಿಸಿ]
ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ ಮತ್ತು ರಿಪಬ್ಲಿಕ್‌ ಆಫ್‌ ಚೀನಾಗಳ ಜನಾಂಗೀಯ ಭಾಷಾವಾರು ಭೂಪಟ.

ಚೀನೀ ಇತಿಹಾಸದುದ್ದಕ್ಕೂ ನೂರಾರು ಜನಾಂಗೀಯ ಸಮುದಾಯಗಳು ಅಸ್ತಿತ್ವದಲ್ಲಿದ್ದವು. ಹ್ಯಾನ್‌ ಚೀನಾದ ಇದುವರೆಗಿನ ಒಂದು ಬೃಹತ್‌ ಜನಾಂಗೀಯ ಸಮುದಾಯವಾಗಿದೆ. ಆದಾಗ್ಯೂ ಈ ಸಮುದಾಯವು ಅಂತರ್ಯದಲ್ಲಿ ಮತ್ತು ಒಂದೇ ಮಾದರಿಯ ಗುಣ-ಲಕ್ಷಣಗಳನ್ನು ಹೊಂದಿರುವ ಇನ್ನಷ್ಟು ಸಣ್ಣ ಜನಾಂಗೀಯ ಸಮುದಾಯಗಳಾಗಿ ವಿಂಗಡಿಸಬಹುದು.

ಕಳೆದ ಮೂರು ಸಹಸ್ರಮಾನಗಳಲ್ಲಿ, ಈ ಮುಂಚೆ ಭಿನ್ನವಾಗಿದ್ದ ಅನೇಕ ಚೀನಾದ ಜನಾಂಗೀಯ ಸಮುದಾಯಗಳನ್ನು ಸಿನೊ‌ ಜನಾಂಗಕ್ಕೆ ಪರಿವರ್ತಿಸಿ ಹ್ಯಾನ್‌ ಸ್ವರೂಪಕ್ಕೆ ತರಲಾಗಿದೆ. ಈ ಕಾರಣದಿಂದ ಕಾಲಾಂತರದಲ್ಲಿ ಹ್ಯಾನ್‌ ಜನಸಂಖ್ಯೆಯನ್ನು ಹಠಾತ್ತಾಗಿ ಹೆಚ್ಚಿಸಿದೆ. ಆದಾಗ್ಯೂ, ಈ ಪರಿವರ್ತನೆಗಳು ಸಾಧಾರಣವಾಗಿ ಅಪೂರ್ಣವಾಗಿರುವುದಲ್ಲದೇ ಆಗಾಗ್ಗೆ ಸ್ಥಳೀಯ ಭಾಷೆಗಳ ಮತ್ತು ಸಂಸ್ಕೃತಿಯ ಕುರುಹುಗಳು ಚೀನಾದ ವಿವಿಧ ಭಾಗಗಳಲ್ಲಿ ಉಳಿದುಕೊಂಡಿವೆ. ಇದೇ ಕಾರಣವಾಗಿ, ಹ್ಯಾನ್‌ಗಳಾಗಿ ಗುರುತಿಸಿಕೊಳ್ಳುವ ಕೆಲವರು, ಈಗಲೂ ಹ್ಯಾನ್‌ಗಳಾಗಿ ಗುರುತಿಸಿಕೊಳ್ಳುವುದಲ್ಲದೇ ತಮ್ಮದೇ ಆದ ಪ್ರತ್ಯೇಕ ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಕಾಯ್ದುಕೊಂಡು ಬಂದಿದ್ದಾರೆ. ಅನೇಕ ಜನಾಂಗಗಳು ಹ್ಯಾನ್‌ ಸಂಸ್ಕೃತಿಯನ್ನೇ ಹಠಾತ್ತಾಗಿ ಬದಲಿಸಿವೆ, ಉದಾಹರಣೆಗೆ ಮಂಚೂರಿಯಾದ ವಸ್ತ್ರ ಶೈಲಿಯಾದ ಕ್ವಿಪಾವೋವು, ೧೭ನೇ ಶತಮಾನದ ನಂತರ ಹಿಂದಿನ ಹ್ಯಾನ್‌ ವಸ್ತ್ರಶೈಲಿಗಳಾದ ಹ್ಯಾನ್‌ಫು ಮುಂತಾದುವನ್ನು ಹಿಂದಿಕ್ಕಿ "ಚೀನಾ"ದ್ದೇ ಆದ ನವೀನ ಫ್ಯಾಷನ್‌ ಆಗಿ ಪರಿಣಮಿಸಿತು. ಆಧುನಿಕ ಪದವಾದ ಚೀನೀ ರಾಷ್ಟ್ರ (ಝೋಂಘುವಾ ಮಿನ್‌ಜು )ವನ್ನು ಚೀನೀ ರಾಷ್ಟ್ರೀಯತೆಗೆ ಜನಾಂಗೀಯ ಸಮುದಾಯಗಳನ್ನು ಮೀರಿದ ಹೊಸ ಕಲ್ಪನೆಯನ್ನು ನೀಡಿದೆ.

ಭಾಷೆಗಳು

[ಬದಲಾಯಿಸಿ]

ಚೀನಾದ ಬಹಳಷ್ಟು ಭಾಷೆಗಳು, ೨೯ ಜನಾಂಗಗಳು ಬಳಸುವ ಸಿನೊ-ಟಿಬೆಟನ್‌ ಭಾಷಾ ಕುಟುಂಬಕ್ಕೆ ಸೇರಿದವು. ಚೀನೀ ಭಾಷೆಯೊಳಗೇ ಬಹಳಷ್ಟು ಪ್ರಮುಖ ಭಾಷಾವಾರು ಪಂಗಡಗಳಿವೆ. ಅತಿ ಹೆಚ್ಚು ಸಂಭಾಷಿಸುವ ವೈವಿಧ್ಯಗಳೆಂದರೆ ಮ್ಯಾಂಡರಿನ್‌ (ಜನಸಂಖ್ಯೆಯ ೭೦%ರಷ್ಟು ಜನರು ಬಳಸುತ್ತಾರೆ), ವು, ಯೂ (ಕ್ಯಾಂಟನ್‌ ಭಾಷಿಕ), ಮಿನ್‌, ಕ್ಸಿಯಾಂಗ್‌, ಗಾನ್‌, ಮತ್ತು ಹಕ್ಕ. ಸಿನೋವಲ್ಲದ ಇನ್ನಿತರ ಜನಾಂಗೀಯ ಅಲ್ಪಸಂಖ್ಯಾತರು ಬಳಸುವ ಭಾಷೆಗಳೆಂದರೆ ಝೂವಾಂಗ್‌ (ಥಾಯ್‌), ಮಂಗೋಲಿಯನ್‌, ಟಿಬೆಟಿಯನ್‌, ಯೂಘುರ್‌ (ಟರ್ಕಿಯ), ಹ್ಮಾಂಗ್‌ ಮತ್ತು ಕೊರಿಯನ್‌.[೨೯]

ಸಾವಿರಾರು ವರ್ಷಗಳ ಕಾಲ ಸಾಂಪ್ರದಾಯಿಕ ಚೀನೀ ಭಾಷೆಯು ಲಿಖಿತ ಪ್ರಮಾಣವಾಗಿದ್ದಿತು, ಅಲ್ಲದೇ ಅನೇಕ ಲಿಪಿಯಿಲ್ಲದ,ಅಗ್ರಾಹ್ಯ ಭಾಷೆಗಳು ಮತ್ತು ಪ್ರಾಂತ್ಯ ಭಾಷೆಗಳ ನಡುವೆ ಲಿಖಿತ ಸಂವಹನ ನಡೆಸಲು ಸಾಧ್ಯವಾಗಿಸಿತ್ತು. ಚೀನೀಯರ ದೇಶಭಾಷೆ ಅಥವಾ ಬೈಹುವಾ ವು ಮಿಂಗ್‌ ಆಳ್ವಿಕೆ ಕಾಲದ ಕಾದಂಬರಿಗಳಲ್ಲಿ ಮೊದಲು ಬಳಸಿ, ಜನಪ್ರಿಯವಾಗಿಸಿದ ಮ್ಯಾಂಡರಿನ್‌ ಪ್ರಾಂತ್ಯ ಭಾಷೆ ಆಧಾರಿತ ಲಿಖಿತ ಪ್ರಮಾಣವಾಗಿದ್ದಿತು. ಅಲ್ಲದೇ ೨೦ನೇ ಶತಮಾನದ ಮೊದಲ ಭಾಗದಲ್ಲಿ (ಗಮನಾರ್ಹ ಬದಲಾವಣೆಗಳೊಂದಿಗೆ) ರಾಷ್ಟ್ರಭಾಷೆಯಾಗಿ ಅಳವಡಿಸಿಕೊಳ್ಳಲಾಯಿತು. ಸಾಂಪ್ರದಾಯಿಕ ಚೀನೀ ಭಾಷೆಯು ಈಗಲೂ ಪ್ರೌಢ ಶಾಲೆಯ ಪಠ್ಯಕ್ರಮದಲ್ಲಿರುವುದರಿಂದ, ಕೆಲ ಮಟ್ಟಿಗಾದರೂ ಹಲವು ಚೀನೀಯರಿಗೆ ಅದು ಗ್ರಾಹ್ಯವಾಗುತ್ತಿದೆ.

ಧಾರ್ಮಿಕತೆ

[ಬದಲಾಯಿಸಿ]
ಷಾಂಗ್‌ ಸಾಮ್ರಾಜ್ಯ ಕಾಲದ ಕಂಚಿನ ಲಿಪಿಯಲ್ಲಿ ಟಿಯಾನ್‌ (天), "ದೇವರು" ಎಂಬುದಕ್ಕೆ ಸಮಾನ ಅಕ್ಷರ.

ಬಹಳಷ್ಟು ಸಾಮ್ರಾಜ್ಯಗಳು ಕನಿಷ್ಟ ಷಾಂಗ್‌ ಸಾಮ್ರಾಜ್ಯ (೧೭೬೬ BC)ದ ಕಾಲದಿಂದ ಕೊನೆಯ ಸಾಮ್ರಾಜ್ಯ(೧೯೧೧ AD)ದ ಅಳಿವಿನವರೆಗಿನ ಪಾಲಿಸಿದ "ಅಧಿಕೃತ" ಸಂಪ್ರದಾಯ ಧರ್ಮಶ್ರದ್ಧೆಯ ವ್ಯವಸ್ಥೆಯಲ್ಲಿ ಸರ್ವಸಮರ್ಥ ಶಕ್ತಿ[೩೦] ಯಾಗಿ ಷಾಂಗ್‌ದಿ ("ಸರ್ವೋತ್ತಮ ದೈವ") ಅಥವಾ "ದೇವರು" ಕೇಂದ್ರಿತ ಆರಾಧನೆ ಮಾಡುತ್ತಿದ್ದರು. ಕನ್‌ಫ್ಯೂಷಿಯನ್‌ ಧರ್ಮ ಮತ್ತು ಟಾವೋ ತತ್ವ ಬೆಳವಣಿಗೆ ಹಾಗೂ ಬೌದ್ಧ ಧರ್ಮ ಮತ್ತು ಕ್ರೈಸ್ತ ಧರ್ಮಗಳ ಪರಿಚಯವಾಗುವುದಕ್ಕೆ ಮುಂಚಿತವಾಗಿ ಈ ಧರ್ಮಶ್ರದ್ಧೆಯ ವ್ಯವಸ್ಥೆಯಿತ್ತು.. ಇದರಲ್ಲಿ ದೇವರನ್ನು ಸರ್ವಶಕ್ತನೆಂಬ ಅಮೂರ್ತವಾದ ವ್ಯಕ್ತಿತ್ವದ ಶಕ್ತಿಯೆಂದು ಗಣಿಸುವ ಕಾರಣ ಇದರಲ್ಲಿ ಏಕೀಶ್ವರವಾದದ ವೈಶಿಷ್ಟ್ಯತೆಗಳು ಕಾಣಿಸುತ್ತದೆ. ಕನ್‌ಫ್ಯೂಷಿಯಸ್‌ನ ಬರವಣಿಗೆಗಳಿಂದ ತಿಳಿಯುವ ಪ್ರಕಾರ, ಆತ ಸ್ವತಃ ದೇವರನ್ನು ವಂಚಿಸುವುದಕ್ಕಾಗುವುದಿಲ್ಲ ಎಂದು ನಂಬಿಕೆ ಹೊಂದಿದ್ದ, ಅಲ್ಲದೇ ದೇವರು ಜನರ ಜೀವನದ ಮೇಲೆ ನಿಯಂತ್ರಣವನ್ನು ಹೊಂದಿದ್ದು, ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ಪರಿಗಣಿಸುತ್ತಾನೆ, ಧರ್ಮಿಷ್ಠತೆ(ಯಿ , 義)[೩೦] ಯಿಂದಿರಲು ಕೆಲ ಕಟ್ಟಳೆಗಳನ್ನು ವಿಧಿಸುತ್ತಾನೆ ಎಂಬ ನಂಬಿಕೆಗಳನ್ನು ಹೊಂದಿದ್ದ. ಆದಾಗ್ಯೂ ಈ ಧರ್ಮಶ್ರದ್ಧೆಯ ವ್ಯವಸ್ಥೆಯು ಸಂಪೂರ್ಣವಾಗಿ ಏಕೀಶ್ವರವೆಂದು ಹೇಳಲಾಗುವುದಿಲ್ಲ, ಏಕೆಂದರೆ ಆಯಾ ಪ್ರದೇಶಕ್ಕೆ ಸೀಮಿತವಾಗಿ ಇನ್ನೂ ಅನೇಕ ದೈವಗಳು ಹಾಗೂ ಇನ್ನಿತರ ಶಕ್ತಿಗಳು ಷಾಂಗ್‌ದಿ ಯೊಂದಿಗೆ ಪೂಜೆಗೊಳ್ಳುತ್ತಿದ್ದವು. ಆದರೂ ಮೋಹಿಸಂನಂತಹಾ ಇನ್ನಿತರ ಭಿನ್ನ ಧರ್ಮಗಳು, ದೈವಗಳು ಹಾಗೂ ಇನ್ನಿತರ ಪಿತೃ ಶಕ್ತಿಗಳು ಅದೃಷ್ಟಬಲ ನಂಬಿಕೆಯನ್ನು ದೂರವಿಟ್ಟು, "ವಿಶ್ವ ಪ್ರೀತಿ"(ಜಿಯಾನೈ , 兼爱)ಯನ್ನು ಬೆಳೆಸಿಕೊಳ್ಳುವುದೂ ಸೇರಿದಂತೆ ಕೇವಲ ಷಾಂಗ್‌ದಿ ಯ ಇಚ್ಛೆಯಂತೆ ನಡೆಯಲು ಸೂಚಿಸುವುದಕ್ಕೆ ಇರುವುದು ಎಂದು ತಿಳಿಸಿ ಏಕೀಶ್ವರವಾದವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದವು. ಪ್ರಾಚೀನ ಚೀನಾದಲ್ಲಿ ಷಾಂಗ್‌ದಿ ಮತ್ತು ದೇವರುಗಳ ಆರಾಧನೆಯ ಅಂಗವಾಗಿ ಗುಡಿಗಳ ನಿರ್ಮಾಣ ಮತ್ತು ಪೂಜೆಗಳು ಸೇರಿದ್ದವು. ನಿರ್ಮಾಣವಾದ ಗುಡಿಗಳಲ್ಲಿ ಅತಿ ಮಹತ್ವವಾದದ್ದು ಬೀಜಿಂಗ್‌ನಲ್ಲಿರುವ ದೇವರ ಗುಡಿ. ಚೀನೀ ಸಾಮ್ರಾಜ್ಯದ ಪ್ರತಿಯೊಬ್ಬ ರಾಜನೂ ವಾರ್ಷಿಕವಾಗಿ ದೇವರಿಗೆ ಪಶುಬಲಿ ಕಾರ್ಯಗಳನ್ನು ನಡೆಸಿ ಸಾಮಾನ್ಯವಾಗಿ ಒಂದು ಗೂಳಿಯನ್ನು ಬಲಿಕೊಟ್ಟು ನೆರವೇರಿಸುತ್ತಿದ್ದನು. ಟಾವೋ ತತ್ವ ಮತ್ತು ಬೌದ್ಧ ಧರ್ಮಗಳ ಉದಯದೊಂದಿಗೆ ಜನಪ್ರಿಯತೆ ನಿಧಾನವಾಗಿ ಕಡಿಮೆಯಾದರೂ, ಆಧುನಿಕಯುಗದ ಮುನ್ನಿನ ಅವಧಿಯುದ್ದಕ್ಕೂ ಉಳಿದ ಧರ್ಮಗಳಲ್ಲಿ ಇದರ ಬಗೆಗಿನ ಕಲ್ಪನೆಗಳು ಮುಂದುವರೆದವು, ಅಲ್ಲದೇ ಚೀನೀಯ ಕ್ರೈಸ್ತಧರ್ಮದ ಪದಬಳಕೆಯೂ ಸೇರಿದಂತೆ ನಂತರದ ಧರ್ಮಗಳಲ್ಲಿ ಸಹಾ ಅಳವಡಿಸಿಕೊಳ್ಳಲಾಗಿದೆ.

ಟಾವೋಯಿಸಂವು ಚೀನಾದ ಸ್ಥಳೀಯ ಧರ್ಮವಾಗಿದ್ದು, ಲಾವೋ ಝಿನ ಟಾವೋ ಟೆ ಚಿಂಗ್‌ (ಟಾವೋ ಮತ್ತು ಅದರ ಮೌಲ್ಯಗಳ ಗ್ರಂಥ ) ಅಥವಾ ಝಾಂಗ್‌ ಡಾವೋಲಿಂಗ್‌ನ ಪ್ರಾಥಮಿಕ ಬರವಣಿಗೆಗಳೆಲ್ಲದರ ಸಂಯೋಜನೆಯನ್ನು ಇದರ ಆರಂಭದ ಬಗೆಗಿನ ಸಾಂಪ್ರದಾಯಿಕ ಜಾಡುಗಳೆಂದು ಪರಿಗಣಿಸಬಹುದು. ಟಾವೋಯಿಸಂನ ಸಿದ್ಧಾಂತವು "ಮಾರ್ಗ"ದ ಮೇಲೆ ಕೇಂದ್ರಿತವಾಗಿದೆ; ವಿಶ್ವದ ನಿಜ ಸ್ವರೂಪವನ್ನು ಗುರುತಿಸುವಿಕೆ ಎಂಬುದಕ್ಕೆ ಇದನ್ನು ಹೋಲಿಕೆಯಾಗಿ ಪರಿಗಣಿಸಬಹುದು. ಟಾವೋಯಿಸಂನ ಅಸಂಘಟಿತ ರೂಪಗಳನ್ನು ಚೀನಾದ ಜನಪದ ಧರ್ಮಗಳನ್ನಾಗಿಯೂ ಪರಿಗಣಿಸಲಾಗುತ್ತದೆ. ಹೆಚ್ಚು ಜಾತ್ಯಾತೀತ ನಿಲುವು ಹೊಂದಿರುವ ಟಾವೋಯಿಸಂನ ಕಲ್ಪನೆಗಳೆಂದರೆ ಫೆಂಗ್‌ ಶೂಯಿ, ಸುನ್‌ ಟ್ಸುನ ಯುದ್ಧಕಲೆ , ಮತ್ತು ಸೂಜಿ ಚಿಕಿತ್ಸೆ.

ಚೀನೀ ಟಾಂಗ್‌ ಸಾಮ್ರಾಜ್ಯ (618–907) ಕಾಲದ ಬುದ್ಧನು ಧ್ಯಾನಕ್ಕೆ ಕುಳಿತಿರುವ ಮೂರ್ತಿ.

ಚೀನಾದಲ್ಲಿ ಬೌದ್ಧ ಧರ್ಮವು ಮೊದಲು ಭಾರತದಿಂದ ಮತ್ತು ಮಧ್ಯ ಏಷ್ಯಾದಿಂದ ಹ್ಯಾನ್‌ ಪ್ರಭುತ್ವದ ಕಾಲದಲ್ಲಿ ಪರಿಚಯಗೊಂಡು, ನಂತರ ಎಲ್ಲಾ ಹಂತಗಳ ಜನರಲ್ಲಿ ಜನಪ್ರಿಯಗೊಂಡ ಇದನ್ನು ಕೆಲ ನಿರ್ದಿಷ್ಟ ಪ್ರಭುತ್ವಗಳ ಚಕ್ರವರ್ತಿಗಳು ಇವನ್ನು ಪ್ರಾಯೋಜಿಸಿದರು, ಇದರೊಂದಿಗೆ ವಿಶೇಷವಾಗಿ ಜನಸಾಮಾನ್ಯರೂ ಇದನ್ನು ಅಂಗೀಕರಿಸಿದರು. ಮಹಾಯಾನ (ಡಾಚೆಂಗ್‌ , 大乘) ಎಂಬುದು ಚೀನಾದಲ್ಲಿ ಚಾಲ್ತಿಯಲ್ಲಿರುವ ಬೌದ್ಧ ಧರ್ಮದ ಪ್ರಬಲ ರೂಪವಾಗಿತ್ತು. ಇದನ್ನು ಬಹುಮಟ್ಟಿಗೆ ಸಿನೊಗೆ ಮಾರ್ಪಡಿಸಿ ಕೊರಿಯಾ,ಜಪಾನ್‌ ಮತ್ತು ವಿಯೆಟ್ನಾಂಗಳಲ್ಲಿ ಪ್ರಚುರಪಡಿಸಲಾಯಿತು. ಚೀನಾದಲ್ಲಿ ಪವಿತ್ರ ಭೂಮಿ (ಅಮಿಡಿಸಮ್‌) ಮತ್ತು ಝೆನ್‌ ಸೇರಿದಂತೆ ಮಹಾಯಾನದ ಕೆಲ ಉಪವರ್ಗಗಳು ಜನಪ್ರಿಯವಾಗಿವೆ. ಚೀನಾದಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಬೌದ್ಧ ಧರ್ಮೀಯರನ್ನು ಹೊಂದಿದ್ದು, ಬೌದ್ಧ ಧರ್ಮವು ಇಲ್ಲಿನ ಅತಿ ದೊಡ್ಡ ಸಂಘಟಿತ ಧರ್ಮಶ್ರದ್ಧೆಯಾಗಿದೆ. ಆದಾಗ್ಯೂ ಅನೇಕ ಚೀನೀಯರು ತಮ್ಮನ್ನು ಟಾವೋಯಿಸಂ ಮತ್ತು ಬೌದ್ಧ, ಈ ಎರಡೂ ಧರ್ಮಗಳ ಹಿಂಬಾಲಕರೆಂದು ಗುರುತಿಸಿಕೊಳ್ಳುತ್ತಾರೆ.

ಎಲ್ಲಾ ಚೀನೀಯ ಧರ್ಮಗಳಲ್ಲಿ ಪಿತೃ ಪೂಜೆ ಯು ಒಂದು ಪ್ರಮುಖ ಧಾರ್ಮಿಕ ಕಾರ್ಯವಾಗಿತ್ತು. ಸಾಂಪ್ರದಾಯಿಕ ಚೀನೀ ಸಂಸ್ಕೃತಿ, ಟಾವೋಯಿಸಂ,ಕನ್‌ಫ್ಯೂಷನಿಸಂ ಮತ್ತು ಚೀನೀ ಬೌದ್ಧ ಧರ್ಮಗಳು ಈ ಎಲ್ಲವೂ ವಂಶದ ಧಾರ್ಮಿಕಶ್ರದ್ಧೆ ಅಥವಾ ವ್ಯಕ್ತಿಗೆ ತನ್ನ ಪೋಷಕರು ಹಾಗೂ ಪಿತೃಗಳ ಮೇಲಿನ ಪ್ರೀತಿ ಗೌರವಗಳನ್ನು, ಬಹು ಪ್ರಾಮುಖ್ಯತೆಯ ಮೌಲ್ಯಗಳೆಂದು ಗೌರವಿಸಲಾಗುತ್ತಿತ್ತು. ಚೀನೀಯರು ಸಾಮಾನ್ಯವಾಗಿ ತಮ್ಮ ಪೂರ್ವಿಕರಿಗೆ ಆಹಾರವನ್ನು ಅರ್ಪಿಸಿ, ಧೂಪ ಮತ್ತು ಮೇಣದಬತ್ತಿಗಳನ್ನು ಉರಿಸುತ್ತಿದ್ದರಲ್ಲದೇ , ಜಾಸ್‌ ಕಾಗದವನ್ನು ನಿವೇದಿಸುತ್ತಿದ್ದರು. ಈ ಚಟುವಟಿಕೆಗಳನ್ನೆಲ್ಲಾ ಸಾಮಾನ್ಯವಾಗಿ ಪೂರ್ವಿಕರ ಗೋರಿ ಅಥವಾ ಸಮಾಧಿಗಳು, ಪಿತೃಗಳ ಮಂದಿರ, ಅಥವಾ ಕೌಟುಂಬಿಕ ಗುಡಿಗಳಲ್ಲಿ ನಡೆಸಲಾಗುತ್ತಿತ್ತು.

ಚೀನಾದಲ್ಲಿ ಕ್ರೈಸ್ತ ಧರ್ಮವು ಪೂರ್ವದ ಅಸ್ಸಿರಿಯನ್‌ ಚರ್ಚ್‌ನ ಸ್ಥಾಪನೆಯಿಂದ ಆರಂಭವಾಗಿ ಕನಿಷ್ಟ ೭ನೇ ಶತಮಾನ ADಯಿಂದ ಬೆಳೆಯುತ್ತಿದೆ. ಕ್ರೈಸ್ತಧರ್ಮವು ೧೬ನೇ ಶತಮಾನದ ನಂತರ ಜೆಸ್ಯೂಟ್‌ ಮತ್ತು ತದನಂತರ ಪ್ರೊಟೆಸ್ಟೆಂಟ್‌ ಧರ್ಮಪ್ರಚಾರಕರ ಮುಖಾಂತರ ಗಮನಾರ್ಹ ರೀತಿಯಲ್ಲಿ ಚೀನಾವನ್ನು ಆವರಿಸಿತು. ತೈಪಿಂಗ್‌ ದಂಗೆಯು ಕೆಲ ಹಂತದವರೆಗೆ ಕ್ರೈಸ್ತ ಪ್ರಚಾರಗಳಿಂದ ಪ್ರಭಾವಿತವಾಗಿತ್ತು, ಮತ್ತು ಬಾಕ್ಸರ್‌ ದಂಗೆಯು ಒಂದು ವಿಧದಲ್ಲಿ ಚೀನಾದಲ್ಲಿನ ಕ್ರೈಸ್ತಧರ್ಮ ಪ್ರಚಾರದ ವಿರುದ್ಧ ನಡೆದಿತ್ತು.

ವಿಶ್ವದ ಪ್ರಾಚೀನ ಮಸೀದಿಗಳಲ್ಲಿ ಒಂದಾದ ಹುಆಯ್‌ಷೆಂಗ್ ಮಸೀದಿ, ಮುಹಮ್ಮದ್‌ನ ಸೋದರಮಾವ ಸೈಯೆದ್‌ ಇಬ್ನ್‌ ಅಬಿ ವಕ್ಕಾಸ್‌ನಿಂದ ನಿರ್ಮಿತವಾಗಿತ್ತು

ಚೀನಾದಲ್ಲಿ ಇಸ್ಲಾಂ ಧರ್ಮವು ಮುಹಮ್ಮದ್‌ರ ಸಾವಿನ ಹದಿನೆಂಟು ವರ್ಷಗಳ ನಂತರ ೬೫೧ರಲ್ಲಿ ಬಂದ ಧರ್ಮ ಪ್ರಚಾರ ನಿಯೋಗದಿಂದ ಹರಡಿತು. ಸಾಂಗ್‌ ಅಧಿಪತ್ಯ[೩೧][೩೨] ದ ಅವಧಿಯಲ್ಲಿ ಚೀನಾ ಪ್ರವೇಶಿಸಿದ ಮುಸ್ಲಿಮರು ವ್ಯಾಪಾರಕ್ಕೆಂದು ಬಂದರೂ, ಆಯಾತ/ನಿರ್ಯಾತಗಳಲ್ಲಿ ಹತೋಟಿ ಪಡೆಯುವಷ್ಟು ಪ್ರಬಲರಾದರು. ಝೆಂಗ್‌ ಹೇ,ಲಾನ್‌ ಯು ಮತ್ತು ಯುವಾನ್‌ ಸಾಮ್ರಾಜ್ಯದ ರಾಜಧಾನಿ ಖಾನ್‌ಬಾಲಿಕ್‌ ಕಟ್ಟಲು ಸಹಾಯಕರಾಗಿದ್ದವರಲ್ಲಿ ಒಬ್ಬನಾಗಿದ್ದ ಯೆಹೇಡೀರ್‌ಡಿಂಗ್‌ನೂ ಸೇರಿದಂತೆ ಆಡಳಿತ ವಲಯದಲ್ಲಿ ಪ್ರಭಾವವನ್ನು ಬೆಳೆಸಿಕೊಂಡರು. ಇಸ್ಲಾಂ ವ್ಯಾಸಂಗ[೩೩] ಕ್ಕೆ ನಂಜಿಂಗ್‌ ಪ್ರಮುಖ ಕೇಂದ್ರವಾಗಿ ಪರಿಣಮಿಸಿತು. ದಂಗನ್‌ ದೊಂಬಿ ಮತ್ತು ಪಾಂಥಯ್‌ ದಂಗೆ[೩೪][೩೫][೩೬] ಗಳಲ್ಲಿ ಕ್ವಿಂಗ್‌ ಅಧಿಪತ್ಯವು ಮುಸ್ಲಿಮರ ವಿರುದ್ಧ ಯುದ್ಧ ಘೋಷಿಸಿ, ನರಮೇಧ ನಡೆಸಿತು.

ಚೀನಾದಲ್ಲಿ ಜುಡಾಯಿಸಂ ೭ನೇ ಅಥವಾ ೮ನೇ ಶತಮಾನ CEyಷ್ಟು ಹಳೆಯದು. ೨೦ನೇ ಶತಮಾನದ ಮೊದಲಾರ್ಧದಲ್ಲಿ, ಅನೇಕ ಜ್ಯೂಗಳು ಶಾಂಘಾಯ್‌ ಮತ್ತು ಹಾಂಗ್‌ ಕಾಂಗ್‌ಗಳಿಗೆ ಆಯಾ ನಗರಗಳ ಆರ್ಥಿಕ ವಿಸ್ತರಣಾ ಅವಧಿಯಲ್ಲಿ, ಮಾರಣಹೋಮದಿಂದ ರಕ್ಷಣೆ ಬಯಸಿ ವಲಸೆ ಬಂದರು. ಶಾಂಘಾಯ್‌ ನಗರವು, ವೀಸಾ ಇಲ್ಲದೇ ಇದ್ದರೂ ಪ್ರವೇಶ ನೀಡುವ ವಿಶ್ವದ ಏಕೈಕ ಬಂದರಾಗಿದ್ದ ಕಾರಣ, ಜ್ಯೂ ನಿರಾಶ್ರಿತರ ಸಂಖ್ಯೆಯ ಪ್ರಮಾಣದಿಂದ ಗಮನ ಸೆಳೆಯುತ್ತದೆ.

ಚೀನಾದ ಹೊಸವರ್ಷ

[ಬದಲಾಯಿಸಿ]

ಪ್ರತಿವರ್ಷ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ, ಜನವರಿ ೨೩ ರಂದು 'ಚಾಂದ್ರಮಾನ ರೀತ್ಯ' ಚೀನ ಹೊಸವರ್ಷವನ್ನು ೧ ವಾರ ಕಾಲ ವಿಜೃಂಭಣೆಯಿಂದ ಆಚರಿಸುತ್ತದೆ. ಆ ಸಮಯದಲ್ಲಿ ಚೀನಾದ ನಗರವಾಸಿಗಳೆಲ್ಲಾ ತಮ್ಮ ತಮ್ಮ ಗ್ರಾಮಗಳಿಗೆ ಹೋಗಿ ಕುಟುಂಬದ ಸದಸ್ಯರೊಡನೆ ಬೆರೆತು ಉಲ್ಲಾಸದಿಂದ ಅಲ್ಲಿ ಜರುಗುವ ಬೇಸಿಗೆಯ ಬೃಹದ್ ಉತ್ಸವಗಳಲ್ಲಿ ಭಾಗವಹಿಸಿ,ಸಂತೋಷ ಮತ್ತು ಹುರುಪಿನಿಂದ ತಮ್ಮ ಕಾರ್ಯಕ್ಷೇತ್ರಗಳಿಗೆ ವಾಪಸ್ಸಾಗುತ್ತಾರೆ. ಒಟ್ಟು ೪೦ ದಿನಗಳ ಈ ವಲಸೆಯ ಪ್ರಕ್ರಿಯೆಯಲ್ಲಿ ಲಕ್ಷಾಂತರ ಕಾರ್ಮಿಕರು,ವಿದ್ಯಾರ್ಥಿಗಳು ಸೇರಿದಂತೆ ಸುಮಾರು ೩೧.೬ ಕೋಟಿ ಜನರು ಭಾಗವಹಿಸುತ್ತಾರೆ. ಇದು 'ವಿಶ್ವದ ಅತಿದೊಡ್ಡ ಮಾನವ ವಲಸೆ'ಯೆಂದು ಪ್ರರಿಗಣಿಸಲ್ಪಟ್ಟಿದೆ. ಅತಿ ಸುಲಭ ಸಾರಿಗೆ ವ್ಯವಸ್ಥೆಗೆ ಅಡಚಣೆ ಬಂದರೂ ಜನ ಬೇಸರಿಸದೆ ತಮ್ಮ ಸಾಂಪ್ರದಾಯಿಕ ಹಬ್ಬಗಳಿಗೆ ಮಾನ್ಯತೆ ಕೊಟ್ಟು ಈ ಹಬ್ಬದ ಆಚರಣೆಯನ್ನು ಇಂದಿಗೂ ಕಾಯ್ದುಕೊಂಡು ಬಂದಿದ್ದಾರೆ.

ಕ್ರೀಡೆಗಳು ಮತ್ತು ವಿಹಾರ

[ಬದಲಾಯಿಸಿ]
ಡ್ರಾಗನ್‌ ದೋಣಿ ಸ್ಪರ್ಧೆ, ಒಂದು ಜನಪ್ರಿಯ ಸಾಂಪ್ರದಾಯಿಕ ಚೀನಾದ ಕ್ರೀಡೆ.
ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾದ ಕ್ರೀಡೆಗಳಿಗಾಗಿ ನೋಡಿ: ಚೀನಾದಲ್ಲಿ ಕ್ರೀಡೆಗಳು, ಹಾಂಗ್‌ಕಾಂಗ್‌ನಲ್ಲಿ ಕ್ರೀಡೆಗಳು, ಮತ್ತು ಮಕಾವುನಲ್ಲಿ ಕ್ರೀಡೆಗಳು.
ರಿಪಬ್ಲಿಕ್‌ ಆಫ್‌ ಚೀನಾದ ಕ್ರೀಡೆಗಳಿಗಾಗಿ ನೋಡಿ: ತೈವಾನ್‌ನ ಕ್ರೀಡೆಗಳು.

ಅನೇಕ ಇತಿಹಾಸಕಾರರು ಅಭಿಪ್ರಾಯ ಪಡುವ ಪ್ರಕಾರ, ಸುಮಾರು ಕ್ರಿ. ಶ. ೧೦೦೦ .[೩೭] ರ ಕಾಲದಲ್ಲಿ ಈ ಕ್ರೀಡೆಯ ಒಂದು ಮಾದರಿ ಕಾಣಿಸಿಕೊಂಡಿತ್ತು, ಇದರಿಂದ ಸಾಂಘಿಕ ಫುಟ್‌ಬಾಲ್‌ ವು ಚೀನಾದಲ್ಲೇ ಉಗಮವಾಗಿತ್ತು. ಇನ್ನಿತರ ಜನಪ್ರಿಯ ಕ್ರೀಡೆಗಳೆಂದರೆ ಮಾರ್ಷಲ್‌ ಆರ್ಟ್ಸ್, ಟೇಬಲ್‌ ಟೆನಿಸ್‌, ಬ್ಯಾಡ್ಮಿಂಟನ್‌, ಹಾಗೂ ಇತ್ತೀಚೆಗೆ ಗಾಲ್ಫ್‌.ಬ್ಯಾಸ್ಕೆಟ್‌ಬಾಲ್‌ ಈಗ ನಗರಪ್ರದೇಶಗಳ ಯುವಜನರಲ್ಲಿ ಜನಪ್ರಿಯಗೊಳ್ಳುತ್ತಿದೆ.

ಕೆಲವು ಸಾಂಪ್ರದಾಯಿಕ ಕ್ರೀಡೆಗಳೂ ಇವೆ. ಡುವಾನ್‌ ವು ಹಬ್ಬದ ಸಮಯದಲ್ಲಿ ಚೀನೀಯರ ಡ್ರಾಗನ್‌ ದೋಣಿ ಸ್ಪರ್ಧೆ ನಡೆಯುತ್ತದೆ. ಆಂತರಿಕ ಮಂಗೋಲಿಯಾದಲ್ಲಿ, ಮಂಗೋಲಿಯನ್‌-ಮಾದರಿಯ ಕುಸ್ತಿ ಮತ್ತು ಕುದುರೆ ಓಟದ ಸ್ಪರ್ಧೆಗಳು ಜನಪ್ರಿಯವಾದುವು. ಟಿಬೆಟ್‌ನಲ್ಲಿ ಬಿಲ್ಲುಗಾರಿಕೆ ಮತ್ತು ಕುದುರೆ ಸವಾರಿ ಕ್ರೀಡೆ ಗಳು ಸಾಂಪ್ರದಾಯಿಕ ಉತ್ಸವ[೩೮] ಗಳ ಭಾಗವಾಗಿ ನಡೆಯುತ್ತವೆ.
ದೇಹದಾರ್ಢ್ಯಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಉದ್ಯಾನವನಗಳಲ್ಲಿ ವೃದ್ಧರು ಟಾಯ್‌ ಚಿ ಚುವಾನ್‌ ಮತ್ತು ಕ್ವಿಗಾಂಗ್‌ ಮುಂತಾದುವುಗಳ ಅಭ್ಯಾಸಗಳನ್ನು ನಡೆಸುವುದು ಸಾಮಾನ್ಯ.
ಅಂತರರಾಷ್ಟ್ರೀಯ ಚದುರಂಗ, ಗೋ (ವೇಕ್ವಿ), ಮತ್ತು ಕ್ಸಿಯಾಂಗ್‌ಕ್ವಿ (ಚೀನೀಯ ಚದುರಂಗ)ಯಂತಹಾ ಫಲಕದ ಆಟಗಳು ಸಹಾ ಸಾಮಾನ್ಯವಾಗಿರುವುದಲ್ಲದೇ ಸಂಪ್ರದಾಯಬದ್ಧ ಸ್ಪರ್ಧೆಗಳನ್ನು ಸಹಾ ಏರ್ಪಡಿಸಲಾಗುತ್ತದೆ.
ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ ದ ರಾಜಧಾನಿ, ಬೀಜಿಂಗ್‌, ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾ ವಿದ್ಯಮಾನವಾದ 2008ರ ಒಲಿಂಪಿಕ್‌ ಕ್ರೀಡೆಗಳನ್ನು ಆಯೋಜಿಸಿತ್ತು.

ವಿಜ್ಞಾನ ಮತ್ತು ತಂತ್ರಜ್ಞಾನ

[ಬದಲಾಯಿಸಿ]
ಪ್ರಾಚೀನ ಚೀನಾದ ಹಸ್ತ ಚಾಲಿತ ಅಡ್ಡಬಿಲ್ಲಿನ ಉಳಿಕೆಗಳು, ಕ್ರಿ. ಪೂ. 2ನೇ ಶತಮಾನ .

ಪ್ರಾಚೀನ ಚೀನಾ ದ ತಾಂತ್ರಿಕ ಸಾಧನೆಗಳೆಂದರೆ ಕಾಗದ (ಪೇಪಿರಸ್‌ ಅಲ್ಲ) ಮತ್ತು ಕಾಗದ ತಯಾರಿಕೆ, ಮರದ ಅಚ್ಚಿನ ಮುದ್ರಣ ಮತ್ತು ಚಲಿಸಬಲ್ಲ ಅಚ್ಚು ಮುದ್ರಣ, ಪ್ರಾಚೀನ ಸೂಜಿಗಲ್ಲು ಮತ್ತು ಸೂಜಿ ದಿಕ್ಸೂಚಿ, ಗನ್‌ ಪೌಡರ್‌, ಶೌಚ ಕಾಗದ, ಪ್ರಾಚೀನ ಭೂಕಂಪನ ಶೋಧಕಗಳು, ಬೆಂಕಿ ಪೊಟ್ಟಣ, ಪ್ರಾಣಿ ದೊಡ್ಡಿಗಳು, ಡಬಲ್‌ ಆಕ್ಷನ್‌ ಪಿಸ್ಟನ್‌ ಪಂಪ್‌, ಬ್ಲಾಸ್ಟ್‌ ಫರ್ನೇಸ್‌ ಮತ್ತು ಕಬ್ಬಿಣದ ಎರಕ, ಕಬ್ಬಿಣ ನೇಗಿಲು, ಬಹು-ಕೊಳವೆಯ ನೇಗಿಲ ಸಾಲು, ತೂಗು ಸೇತುವೆ , ಇಂಧನವಾಗಿ ನೈಸರ್ಗಿಕ ಅನಿಲ, ದಕ್ಷಿಣ ಮುಖೀಯ ಸಾರೋಟು/ರಥ ಕ್ಕಾಗಿ ವ್ಯತ್ಯಾಸಕ ಗೇರು, ಹೈಡ್ರಾಲಿಕ್‌ ಶಕ್ತಿಚಾಲಿತ ಖಗೋಳ ವಲಯ ಗೋಳ, ಹೈಡ್ರಾಲಿಕ್‌-ಶಕ್ತಿ ಚಾಲಿತ ಹಗುರ ಸುತ್ತಿಗೆ, ಯಾಂತ್ರಿಕ ಸರಪಣಿ ಚಾಲನೆ , ಯಾಂತ್ರಿಕ ಬೆಲ್ಟ್‌ ಡ್ರೈವ್‌, ಉಬ್ಬು ಛಾಯಾ ಭೂಪಟ‌, ಪ್ರೊಪೆಲ್ಲರ್‌, ಅಡ್ಡಬಿಲ್ಲು , ಫಿರಂಗಿ, ರಾಕೆಟ್‌, ಬಹು ಹಂತದ ರಾಕೆಟ್‌ ಇತ್ಯಾದಿ. ಚೀನೀ ಖಗೋಳಶಾಸ್ತ್ರಜ್ಞರು ಮಹಾನವ್ಯ(ಸೂಪರ್‌ನೋವಾ)ವನ್ನು ದಾಖಲಿಸಿದವರಲ್ಲಿ ಮೊದಲಿಗರು. ಖಗೋಳಶಾಸ್ತ್ರಜ್ಞ ಶೆನ್‌ ಕುವೋನ (೧೦೩೧–೧೦೯೫) ಏಕಾಂಗಿ ಸಾಧನೆಯೇ ಪ್ರಭಾವ ಬೀರುವಂತಹದ್ದು, ಸೂರ್ಯ ಮತ್ತು ಚಂದ್ರರಿರುವುದು ವರ್ತುಲಾಕಾರದಲ್ಲಿ ಎಂಬ ಸಿದ್ಧಾಂತ ಮಂಡಿಸಿ , ತನ್ನ ಉತ್ತಮಪಡಿಸಿದ ದೂರದರ್ಶಕ ನಳಿಕೆಯ ಸಹಾಯದಿಂದ ಧೃವ ನಕ್ಷತ್ರದ ಸ್ಥಾನವನ್ನು ಸರಿಪಡಿಸಿದುದಲ್ಲದೇ , ವಾಸ್ತವವಾದ ಉತ್ತರದಿಕ್ಕು ಎಂಬ ಕಲ್ಪನೆಯನ್ನು ಕಂಡುಹಿಡಿದು, ಗ್ರಹಗಳ ಚಲನೆಗಳ ಬಗ್ಗೆ ಹಿಮ್ಮುಖ ಚಲನೆಯಂತಹಾ ಗ್ರಂಥ ಬರೆದು, ಹಾಗೂ ಕಕ್ಷೆಗಳಲ್ಲಿ ನಡೆಯುವ ಗ್ರಹಗಳ ಪಥವನ್ನು ತಿರುಗುತ್ತಿರುವ ವಿಲ್ಲೋ ಎಲೆಯ ಆಕೃತಿಯಲ್ಲಿರುವ ಬಿಂದುಗಳೊಂದಿಗೆ ಹೋಲಿಕೆ ಮಾಡಿದ್ದನು. ಪುರಾವೆಗಳೊಂದಿಗೆ ಭೂರೂಪಶಾಸ್ತ್ರದಲ್ಲಿ ಭೂರಚನೆಯಾಗುವುದನ್ನು ಮತ್ತು ಭೂಹವಾಗುಣ ಇತಿಹಾಸಶಾಸ್ತ್ರದಲ್ಲಿ ಹವಾಗುಣ ಬದಲಾವಣೆಯನ್ನು ಕುರಿತು ತನ್ನದೇ ಆದ ಭೂರಚನಾ ಶಾಸ್ತ್ರದ ಸಿದ್ಧಾಂತಗಳನ್ನು ಮಂಡಿಸಿದನು. ಇನ್ನಿತರ ಪ್ರಮುಖ ಖಗೋಳಶಾಸ್ತ್ರಜ್ಞರೆಂದರೆ ಗಾನ್‌ ಡೇ, ಷಿ ಷೆನ್‌, ಝ್ಯಾಂಗ್‌ ಹೆಂಗ್‌, ಯಿ ಕ್ಸಿಂಗ್‌, ಝ್ಯಾಂಗ್‌ ಸಿಕ್ಸಂ, ಸು ಸಾಂಗ್‌, ಗುವೋ ಶೌಜಿಂಗ್‌, ಮತ್ತು ಕ್ಸು ಗುವಾಂಗ್‌ಕ್ವಿ. ಚೀನೀಯ ಗಣಿತಶಾಸ್ತ್ರವು ಗ್ರೀಕ್‌ ಗಣಿತಶಾಸ್ತ್ರದಿಂದ ಪ್ರತ್ಯೇಕವಾಗಿ ವಿಕಸನಗೊಂಡಿರುವುದರಿಂದ ಗಣಿತಶಾಸ್ತ್ರದ ಇತಿಹಾಸದಲ್ಲಿ ಬಹಳ ಆಸಕ್ತಿದಾಯಕವಾಗಿದೆ. ಸಾಂಗ್‌ ಯಿಂಗ್‌ಕ್ಸಿಂಗ್‌ (೧೫೮೭–೧೬೬೬) ರಚಿತ ಟಿಯಾಗಾಂಗ್‌ ಕಯ್‌ವು ವಿಶ್ವಕೋಶದಂತೆ ಚೀನೀಯರು ತಮ್ಮ ತಾಂತ್ರಿಕ ಸಾಧನೆಗಳೆಲ್ಲವನ್ನೂ ದಾಖಲಿಸುವಲ್ಲಿ ತುಂಬ ಉತ್ಸುಕತೆ ಹೊಂದಿದ್ದರು. ೧೭ನೇ ಶತಮಾನದ ವೇಳೆಗೆ ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ಯೂರೋಪ್‌ಗಿಂತ ಹಿಂದುಳಿದಿತ್ತು. ಈ ಹಿನ್ನಡೆಗೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳನ್ನು ಕೊಡಲಾಗುತ್ತಿದೆಯಾದರೂ, ಇತ್ತೀಚಿನ ಇತಿಹಾಸಶಾಸ್ತ್ರಜ್ಞರು ಮೇಲ್ಮಟ್ಟದ ಆರ್ಥಿಕ ಅಸಮತೋಲನದಂತಹಾ ಆರ್ಥಿಕ ಕಾರಣ ಗಳೆಡೆ ಗಮನ ಹರಿಸುತ್ತಿದ್ದಾರೆ. PRCಯ ವ್ಯಾವಹಾರಿಕ ಸುಧಾರಣೆಗಳೊಂದಿಗೆ ಚೀನಾವು ಜಾಗತಿಕ ಆರ್ಥಿಕತೆಗೆ ಇನ್ನೂ ಉತ್ತಮ ರೀತಿಯಲ್ಲಿ ಸಂಪರ್ಕ ಹೊಂದಿದ್ದು ವಿಜ್ಞಾನ ಹಾಗೂ ತಂತ್ರಜ್ಞಾನದ ಕಡೆ ಹೆಚ್ಚಿನ ಗಮನ ಕೊಡುತ್ತಿದೆ.

ಹಾಂಗ್ಕಾಂಗ್ ಝುಹೈ ಮಕಾವು ಸೇತುವೆ

[ಬದಲಾಯಿಸಿ]
ಹಾಂಗ್ಕಾಂಗ್-ಝುಹೈ-ಮಕಾವು ಸೇತುವೆಯ ಪಶ್ಚಿಮ ವಿಭಾಗ
  • ಹಾಂಗ್ಕಾಂಗ್-ಝುಹೈ-ಮಕಾವು ಸೇತುವೆ ಚೀನಾದಲ್ಲಿ ಜಗತ್ತಿನ ಅತಿ ಉದ್ದದ ಸೇತುವೆ.
  • ಚೀನಾದಲ್ಲಿ ನಿರ್ಮಾಣವಾದ ಜಗತ್ತಿನ ಅತಿ ಉದ್ದದ ಸಮುದ್ರ ಮೇಲ್ಸೇತುವೆ ಸೇತುವೆ ದಿ.೨೩-೧೦-೨೦೧೮ರಂದು ಬಳಕೆಗೆ ಮುಕ್ತವಾಯಿತು. ಆ ಸೇತುವೆಯ ಉದ್ದ (ನೀರಿನಡಿ ಸುರಂಗ ಸೇರಿ) 55 ಕಿ.ಮೀ. ಕೋಟಿ. ಆ ಸೇತುವೆ ನಿರ್ಮಾಣ ವೆಚ್ಚರೂ.1.5 ಲಕ್ಷಕೋಟಿ ರೂ. ಅದಕ್ಕೆ ತೆಗೆದುಕೊಳ್ಳುವ ಸಮಯ (ಈ ಮೊದಲು 3 ಗಂಟೆ ಸಮಯ ಬೇಕಿತ್ತು) ಈಗ 30 ನಿಮಿಷ. ಅದು ಮೂರು ಭೂ ಪ್ರದೇಶಗಳನ್ನು ಸಂಪರ್ಕಿಸುವುದು. ಕೃತಕವಾಗಿ ನಿರ್ಮಿಸಿರುವ ಅದರ ಎರಡು ಭೂಭಾಗಗಳ ವಿಸ್ತೀರ್ಣ 10 ಲಕ್ಷ ಚದರ ಅಡಿ. ಅದು ಹಾಂಕಾಂಗ್– ಮಕಾವ್–ಚೀನಾದ ಜುಹೈಗಳನ್ನು ಸಂಪರ್ಕಿಸುತ್ತದೆ.
  • ಈ ನದಿಯು ಪರ್ಲ್ ನದಿಯ ನೀರಿನ ಮೇಲೆ ನಿರ್ಮಾಣಗೊಂಡಿದೆ. ಆ ಸೇತುವೆಯುದ್ದಕ್ಕೂ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆಯಾಗಿದೆ. ಸೇತುವೆ ನಿಗಾಕ್ಕೆ, ಭಯೋತ್ಪಾದನಾ ತಡೆಗೆ ಪೊಲೀಸ್ ಪಡೆಯಿಂದ ಸದಾ ನೆಡೆಯುವುದು. ಅದು 2009ರಲ್ಲಿ ಆರಂಭವಾಗಿತ್ತು ಯೋಜನೆಯಂತೆ 2016ರಲ್ಲಿ ಮುಗಿಯಬೇಕಿತ್ತು.

ನಿರ್ಮಾಣ

[ಬದಲಾಯಿಸಿ]
  • ನಿರ್ಮಾಣದ ಅವಧಿಯಲ್ಲಿ 18 ಕಾರ್ಮಿಕರ ಸಾವು ಸಂಭವಿಸಿತು. ಸೇತುವೆಯ ನಿರ್ಮಾಣಕ್ಕೆ 4 ಲಕ್ಷ ಟನ್ ಉಕ್ಕನ್ನು ಬಳಸಲಾಗಿದೆ. (60 ಐಫೆಲ್ ಟವರ್ ಪ್ರಮಾಣ). ಈ ಸೇತುವೆಗೆ ಭೂಕಂಪ ಮತ್ತು ಚಂಡಮಾರುತಗಳ ಹೊಡೆತ ತಾಳಿಕೊಳ್ಳುವ ಸಾಮರ್ಥ್ಯ ಇದೆ. ಈ ಸೇತುವೆಯನ್ನು 2030 ರ ಹೊತ್ತಿಗೆ ನಿತ್ಯವೂ 29 ಸಾವಿರ ವಾಹನಗಳು ಹಾಗೂ 1.26 ಲಕ್ಷ ಜನರು ಬಳಕೆ ಮಾಡಬಹುದೆಂದು ಅಂದಾಜು ಮಾಡಲಾಗಿದೆ. ಹಾಂಕಾಂಗ್‌, ಮಕಾವ್ ಜತೆ ಚೀನಾದ 9 ನಗರಗಳನ್ನು ಸಂಪರ್ಕಿಸುವ ಮೂಲಕ ‘ಗ್ರೇಟರ್ ಬೇ ಏರಿಯಾ’ ನಿರ್ಮಾಣ ಚೀನಾದ ಉದ್ದೇಶ.[೩೯]

ವಿವರಗಳಿಗಾಗಿ ನೋಡಿ

[ಬದಲಾಯಿಸಿ]
  • ಚೀನಾದ ಆಡಳಿತಾತ್ಮಕ ವಿಭಾಗಗಳು
  • ಚೀನಾದಲ್ಲಿ ಕೃಷಿ|ಚೀನಾದಲ್ಲಿ ವ್ಯವಸಾಯ
  • ಚೀನಾದ ವಾಸ್ತು ಶಿಲ್ಪ|ಚೀನಾದ ವಾಸ್ತುಶಿಲ್ಪಶಾಸ್ತ್ರ/ವಾಸ್ತು ಶೈಲಿ
  • ಚೀನಾದ ಖಗೋಳಶಾಸ್ತ್ರಜ್ಞ|ಚೀನಾದ ಖಗೋಳವಿಜ್ಞಾನ
  • ಚೀನಾದ ಪಂಚಾಂಗ
  • ಚೀನಾದ ಪಾಕಪದ್ಧತಿ
  • ಚೀನಾದ ಡ್ರಾಗನ್‌
  • ಚೀನಾದ ಆರ್ಥಿಕತೆ
  • ಚೀನಾದ ಭೂಗೋಳ|ಚೀನಾದ ಭೌಗೋಳಿಕತೆ
  • ಚೀನಾದ ಭಾಷೆಗಳು
  • ಚೀನಾದ ಗಣಿತಶಾಸ್ತ್ರ
  • ಚೀನಾದ ವೈದ್ಯಕೀಯ

  • ಚೀನಾದ ಹೆಸರು
  • ಚೀನಾದ ರಾಷ್ಟ್ರೀಯತೆ
  • ಚೀನಾದ ಹೊಸ ವರ್ಷ
  • ಚೀನಾದ ಜನರು
  • ಚೀನೀ ಮಾನಕಶಾಸ್ತ್ರದ ಘಟಕಗಳು
  • ಚೀನಾದ ಸಂಸ್ಕೃತಿ
  • ಫೆಂಗ್‌ಹುವಾಂಗ್‌
  • ನಿಷೇಧಿತ ನಗರ
  • ಚೀನಾದ ಅಂಚೆ ವ್ಯವಸ್ಥೆಯ ಇತಿಹಾಸ
  • ಚೀನಾದ ಆಸ್ಪತ್ರೆಗಳು

  • ಚೀನಾದ ಶೋಧನೆಗಳ ಪಟ್ಟಿ
  • ಚೀನಾದ ಆವಿಷ್ಕಾರಗಳ ಪಟ್ಟಿ
  • ಚೀನಾದ ನಗರಗಳ ಪಟ್ಟಿ
  • ಚೀನಾದ ಅಭಿನಂದನಾರ್ಹರ ಪಟ್ಟಿ
  • ಸಾಮ್ರಾಜ್ಯಶಾಹಿ ಚೀನಾದ ಅಧೀನ ರಾಜ್ಯಗಳ ಪಟ್ಟಿ
  • ಹೆಚ್ಚಿನ ಆರ್ದ್ರತೆ ಹೊಂದಿರುವ ತೀವ್ರವಾದ ಚಂಡಮಾರುತಗಳ ರಾಷ್ಟ್ರವಾರು ಪಟ್ಟಿ#ಚೀನಾ|ಚೀನಾದ ಹೆಚ್ಚಿನ ಆರ್ದ್ರತೆ ಹೊಂದಿರುವ ತೀವ್ರವಾದ ಚಂಡಮಾರುತಗಳ ಪಟ್ಟಿ
  • ಚೀನಾದ ಸೇನಾ ಇತಿಹಾಸ
  • ದೇಶಾಂತರದಲ್ಲಿರುವ ಚೀನೀಯರು|ದೇಶಾಂತರ ಹೋದ ಚೀನೀಯರು
  • ಬೇಸಿಗೆ ಅರಮನೆ

ಟಿಪ್ಪಣಿಗಳು

[ಬದಲಾಯಿಸಿ]
  1. ಈಡನ್‌, ರಿಚರ್ಡ್‌. ಡಿಕೇಡ್ಸ್‌ ಆಫ್‌ ದಿ ನ್ಯೂ ವರ್ಲ್ಡ್ (೧೫೫೫) 'ತನ್ನನ್ನು ವಿಶ್ವದ ಶ್ರೇಷ್ಠ ರಾಜ ಎಂದುಕೊಳ್ಳುತ್ತಿದ್ದ ಅರಸನಿದ್ದ ಶ್ರೇಷ್ಠ ಚೀನಾ.'
  2. 《尚書•梓材》:「皇天既付中國民越厥疆土于先王」 ಸರಳ ಭಾಷಾಂತರದಲ್ಲಿ " ದೇವರು ನಮ್ಮ ಪೂರ್ವಿಕರಿಗೆ ಝಾಂಗ್ಗುವೋ ಜನರನ್ನು ಹಾಗೂ ದೇವರು ಕರುಣಿಸಿದ್ದನು" ಎಂಬ ಅರ್ಥ ಬರುತ್ತದೆ.
  3. 《毛亨·傳》:「中國,京師也」 ಸರಳ ಭಾಷಾಂತರದಲ್ಲಿ "ರಾಜಧಾನಿ ಝಾಂಗ್ಗುವೋ" ಎಂಬ ಅರ್ಥ ಬರುತ್ತದೆ.
  4. ನೋಡಿ ಕ್ವುವಾನ್‌ಸಾಂಗ್‌ವೆನ್‌ (೮,೩೪೫ ಅಧ್ಯಾಯಗಳು), ೨೦೦೫. ದಾಕ್ಷಿಣಾತ್ಯ ಸಾಂಗ್‌ ಅವಧಿಯಲ್ಲಿ ರಚಿಸಿದ ಐತಿಹಾಸಿಕ ಗ್ರಂಥಗಳು ಜಿನ್‌ ಸಂತತಿಯನ್ನು ಅನಾಗರಿಕರು ಎಂದಿದ್ದರೆ, ಇತ್ತ ಜಿನ್‌ ಗ್ರಂಥಗಳು ಸಾಂಗ್‌ರನ್ನು "ಮನ್‌ಜಿ" ಎಂದು ಕರೆದಿವೆ. ಆಯಾ ಅವಧಿಯ ನಂತರ ರಚಿತವಾದ ಸಾಂಗ್‌ಷಿಯಂತಹಾ ಅಧಿಕೃತ ಐತಿಹಾಸಿಕ ಗ್ರಂಥಗಳು, ಈ ವಿಚಾರದಲ್ಲಿ ಹೆಚ್ಚು ತಟಸ್ಥವಾಗಿವೆ.
  5. ರಿಪಬ್ಲಿಕ್‌ ಆಫ್‌ ಚೀನಾದ ಅಧಿಕೃತ ಹೆಸರು ಸಾಂಪ್ರದಾಯಿಕ ಚೀನೀ ಭಾಷೆಯಲ್ಲಿ ಹೀಗಿದ್ದರೆ "中華民國" , "中华民国" ಎಂದು ಸರಳೀಕೃತ ಚೀನೀ ಭಾಷೆಯಲ್ಲಿದೆ. PRCಯ ಅಧಿಕೃತ ಹೆಸರು ಸರಳೀಕೃತ ಚೀನೀ ಭಾಷೆಯಲ್ಲಿ "中华人民共和国" ಆದರೆ , "中華人民共和國" ಎಂದು ಸಾಂಪ್ರದಾಯಿಕ ಚೀನೀ ಭಾಷೆಯಲ್ಲಿದೆ . ಈ ಎರಡೂ ಅಧಿಕೃತ ಹೆಸರುಗಳ ಮೊದಲ ಹಾಗೂ ಕೊನೆಯ ಅಕ್ಷರ ಝಾಂಗ್ಗುವೋ ಆಗಿದೆ. ಈ ಎರಡೂ ಸಂದರ್ಭಗಳಲ್ಲಿ "ಝಾಂಗ್ಗುವೋ" ಯಥಾವತ್ತಾಗಿ ಬಳಸಿಲ್ಲವಾದರೂ, "ಝಾಂಘುವಾ" ಎಂಬ ಸಮಾಂತರ ಪದವನ್ನು ಬಳಸಲಾಗಿದೆಯಾದರೂ PRCಯ ಅಧಿಕೃತ ಸಂಕ್ಷೇಪವು "中国" ಆಗಿದೆ.


ಆಕರಗಳು

[ಬದಲಾಯಿಸಿ]
  1. ೧.೦ ೧.೧ "ಚೀನಾ", ಆನ್‌ಲೈನ್‌ ವ್ಯುತ್ಪತ್ತಿ ನಿಘಂಟು
  2. ವುಡ್‌, ಫ್ರಾನ್ಸಿಸ್‌, ಡಿಡ್‌ ಮಾರ್ಕೋ ಪೋಲೋ ಗೋ ಟೊ ಚೀನಾ (೧೯೯೫), ಪು. ೬೧.
  3. ೩.೦ ೩.೧ "ಚೀನಾ", ದ ಅಮೆರಿಕನ್‌ ಹೆರಿಟೇಜ್‌ ಡಿಕ್ಷನರಿ ಆಫ್‌ ದಿ ಇಂಗ್ಲಿಷ್‌ ಲಾಂಗ್ವೇಜ್‌ , ಬಾಸ್ಟನ್‌ ಮತ್ತು ನ್ಯೂ ಯಾರ್ಕ್, ಹಫ್‌ಟನ್‌-ಮಿಫ್‌ಲಿನ್‌, ೨೦೦೦.
  4. ೪.೦ ೪.೧ ಲಿಯು, ಲಿಡಿಯಾ ಹೇ, ದ ಕ್ಲಾಷ್‌ ಆಫ್‌ ಎಂಪೈರ್‌ಸ್‌ , ಪು. ೭೭.
  5. ಮಹಾಭಾರತ ೬/೯/೬೫-೬೬
  6. ದಂಡ, ಅಜಿತ್‌ ಕೆ., ಏಷ್ಯಾ, ಲ್ಯಾಂಡ್‌ ಅಂಡ್‌ ಪೀಪಲ್‌ , ಸಂಪುಟ. ೧, ಭಾಗ ೧, (ಕೋಲ್ಕತಾ, ಭಾರತ), ೨೦೦೩, ಪು. ೧೯೮
  7. ಆರ್ಕಿಯಾಲಾಜಿಕಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಮೆರಿಕಾ ದಿಂದ ಪ್ರಕಾಶಿತ "ಚೀನಾದಲ್ಲಿನ ಪ್ರಾಚೀನ ಹೋಮೋ ಎರೆಕ್ಟಸ್‌ ಸಾಧನಗಳು "
  8. ಚೀನಾದಲ್ಲಿನ ಹಾಮಿನಿಡ್‌ ಪಳೆಯುಳಿಕೆಗಳ ಪಟ್ಟಿ ಚೀನೀಯPreಇತಿಹಾಸ .org
  9. "The Liujiang skeleton". Archived from the original on 2009-09-12. Retrieved 2009-08-19.
  10. ತಲೆಬುರುಡೆಯ ವಿವರ ಮನುಜ-ಮೂಲ ಪತ್ತೆಗೆ ಸಂಕೀರ್ಣಗೊಳಿಸೀತು ಚರ್ಚೆ. (ಚೀನಾ ಮೂಲಗಳು). ತಲೆಬುರುಡೆಯ ವಿವರ ಮನುಜ-ಮೂಲ ಪತ್ತೆಗೆ ಸಂಕೀರ್ಣಗೊಳಿಸೀತು ಚರ್ಚೆ
  11. ನ್ಯಾಷನಲ್‌ ಗ್ಯಾಲರಿ ಆಫ್‌ ಆರ್ಟ್ ನಿಂದ "ಕಂಚಿನ ಯುಗದ ಚೀನಾ"
  12. ಪಿಂಗ್‌-ಟಿ ಹೋ, ಈಟ್ಯೂಡ್ಸ್‌ ಸಾಂಗ್‌ ನ "ಆನ್‌ ಎಸ್ಟಿಮೇಟ್‌ ಆಫ್‌ ದ ಟೋಟಲ್‌ ಪಾಪ್ಯುಲೇಶನ್‌ ಆಫ್‌ ಸುಂಗ್‌-ಚಿನ್‌ ಚೀನಾ"ದಲ್ಲಿ, ಸರಣಿ ೧, ಸಂಖ್ಯೆ ೧, (೧೯೭೦) ಪು. ೩೩-೫೩.
  13. "Twentieth Century Atlas - Historical Body Count".
  14. ಜೆಂಕ್ಸ್‌ , R.D. ಇನ್‌‌ಸರ್ಜೆನ್ಸಿ ಅಂಡ್‌ ಸೋಷಿಯಲ್‌ ಡಿಸ್‌ಆರ್ಡರ್‌ ಇನ್‌ ಗುಯಿಝೌ: ದ ಮಿಯಾವೋ ‘ರೆಬೆಲಿಯನ್‌’, ೧೮೫೪–೧೮೭೩. ಹೊನಲುಲು: ಯೂನಿವರ್ಸಿಟಿ ಆಫ್‌ ಹವಾಯಿ ಪ್ರೆಸ್‌. ೧೯೯೪.
  15. Cf. ವಿಲಿಯಂ ಜೆ. ಪೀಟರ್‌ಸನ್‌, ದ ಕೇಂಬ್ರಿಡ್ಜ್‌ ಹಿಸ್ಟರಿ ಆಫ್‌ ಚೀನಾ ಸಂಪುಟ ೯ (ಕೇಂಬ್ರಿಡ್ಜ್‌ ಯೂನಿವರ್ಸಿಟಿ ಪ್ರೆಸ್‌ , ೨೦೦೨)
  16. ಡಮಸನ್‌ ಹಾರ್ಪರ್‌, ಸ್ಟೀವ್‌ ಫಾಲನ್‌, ಕಟ್ಜಾ ಗ್ಯಾಸ್ಕೆಲ್‌, ಜ್ಯೂಲಿ ಗ್ರಂಡ್‌‌ವಿಗ್‌ , ಕ್ಯಾರೊಲಿನ್‌ ಹೆಲ್ಲರ್‌, ಥಾಮಸ್‌ ಹುಹ್‌ಟಿ, ಬ್ರಾಡ್ಲಿ ಮೆನ್ಯೂ, ಕ್ರಿಸ್ಟೋಫರ್‌ ಪಿಟ್ಸ್‌. ಲೋನ್ಲಿ ಪ್ಲಾನೆಟ್‌ ಚೀನಾ. ೯. ೨೦೦೫ISBN ೧-೭೪೦೫೯-೬೮೭-೦
  17. ಗರ್ನೆಟ್‌, ಜಾಕ್ವಿಸ್‌. ಎ ಹಿಸ್ಟರಿ ಆಫ್‌ ಚೀನೀಸ್‌ ಸಿವಿಲೈಜೇಷನ್‌. ೨. ನ್ಯೂ ಯಾರ್ಕ್ : ಕೇಂಬ್ರಿಡ್ಜ್‌ ಯೂನಿವರ್ಸಿಟಿ ಪ್ರೆಸ್‌, ೧೯೯೬.
  18. ಪೆರ್ರಿ, ಎಲಿಜಬೆತ್‌. ರೆಬೆಲ್ಸ್‌ ಅಂಡ್‌ ರೆವೆಲ್ಯೂಷನರೀಸ್‌ ಇನ್‌ ನಾರ್ದರ್ನ್‌ ಚೀನಾ, ೧೮೪೫–೧೯೪೫ (ಸ್ಟಾನ್‌ಫೋರ್ಡ್‌, CA: ಸ್ಟಾನ್‌ಫೋರ್ಡ್‌ UP, ೧೯೮೦).
  19. ದ ವರ್ಲ್ಡ್ಸ್‌ ಸಕ್ಸೆಸ್‌ಫುಲ್‌ ಡಯಾಸ್ಪೊರಾಸ್‌. ಮ್ಯಾನೇಜ್‌ಮೆಂಟ್‌ ಟುಡೆ. ಏಪ್ರಿಲ್‌ ೩, ೨೦೦೭.
  20. ಡೈಮೆನ್‌ಷನ್ಸ್‌ ಆಫ್‌ ನೀಡ್‌ - ಪೀಪಲ್‌ ಅಂಡ್‌ ಪಾಪ್ಯುಲೇಶನ್ಸ್‌ ಅಟ್‌ ರಿಸ್ಕ್‌ . ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಮಿತಿ (FAO).
  21. "ನ್ಯೂಕ್ಲಿಯರ್‌ ಪವರ್‌ : ದ ಎಂಡ್‌ ಆಫ್‌ ದ ವಾರ್‌ ಎಗೇನ್ಸ್ಟ್ ಜಪಾನ್‌". BBC - ಇತಿಹಾಸ.
  22. "ಎ ಹಂಗರ್‌ ಫಾರ್‌ ದ ಟ್ರುತ್‌ : ಚೀನಾ ಪ್ರಧಾನ ಭೂಮಿಯಲ್ಲಿ ನಿಷೇಧಿಸಲಾಗಿರುವ ಪುಸ್ತಕ, ಭೀಕರ ಬರಗಾಲದ ಬಗ್ಗೆ ಒಂದು ಗಮನಾರ್ಹ ಕೃತಿ." Archived 2009-04-27 ವೇಬ್ಯಾಕ್ ಮೆಷಿನ್ ನಲ್ಲಿ.. Chinalections.org. ಜುಲೈ 7, ೨೦೦೮.
  23. ಎ ಟೂಂಬ್‌ಸ್ಟೋನ್‌ ಆನ್‌ ಚೀನಾಸ್‌ ಹಿಸ್ಟರಿ . ಆನೆ ಆಪಲ್‌ಬಾಂ. ಟೆಲಿಗ್ರಾಫ್‌. ಆಗಸ್ಟ್‌ ೧೭, ೨೦೦೮.
  24. CBC News (2007-09-19). "Taiwan's 15th bid for UN membership rejected". Retrieved 2008-08-09.
  25. "Ma refers to China as ROC territory in magazine interview". Taipei Times. 2008-10-08.
  26. ಗ್ರೇಟರ್‌ ಮೆಕಾಂಗ್‌ ಸಬ್‌ರೀಜನ್‌ ಅಟ್ಲಾಸ್‌ ಆಫ್‌ ದ ಎನ್‌ವಿರಾನ್‌ಮೆಂಟ್‌ Archived 2011-05-01 ವೇಬ್ಯಾಕ್ ಮೆಷಿನ್ ನಲ್ಲಿ.ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ Archived 2011-01-20 ವೇಬ್ಯಾಕ್ ಮೆಷಿನ್ ನಲ್ಲಿ. ನಿಂದ ಪ್ರಕಾಶಿತ
  27. "ಬೀಜಿಂಗ್‌ ಹಿಟ್‌ ಬೈ ಎಯ್ತ್‌ ಸ್ಯಾಂಡ್‌ಸ್ಟಾರ್ಮ್". BBC ನ್ಯೂಸ್‌. ಭೇಟಿ ನೀಡಿದ ದಿನಾಂಕ ೧೭ ಏಪ್ರಿಲ್‌ ೨೦೦೬.
  28. ಬೇರಿ, ಥಿಯೋಡೋರ್‌ ಡೇ. ""Constructive Engagement with Asian Values"". Archived from the original on 2005-03-11.. ಕೊಲಂಬಿಯಾ ಯೂನಿವರ್ಸಿಟಿ.
  29. ಭಾಷೆಗಳು Archived 2013-07-25 ವೇಬ್ಯಾಕ್ ಮೆಷಿನ್ ನಲ್ಲಿ.. ೨೦೦೫. GOV.cn. URLಗೆ ಭೇಟಿ ನೀಡಿದ್ದು ೩ ಮೇ ೨೦೦೬.
  30. ೩೦.೦ ೩೦.೧ ಹೋಮರ್‌ ಎಚ್‌.ಡಬ್ಸ್‌, "ಥೀಯಿಸಂ ಅಂಡ್‌ ನ್ಯಾಚುರಲಿಸಂ ಇನ್‌ ಆನ್‌ಷಿಯೆಂಟ್‌ ಚೀನಾ ಫಿಲಾಸಫಿ" ಫಿಲಾಸಫಿ ಆಫ್ ಈಸ್ಟ್‌ ಅಂಡ್‌ ವೆಸ್ಟ್‌ , ಸಂಪುಟ. ೯, ಸಂಖ್ಯೆ. ೩/೪, ೧೯೫೯
  31. BBC ಇಸ್ಲಾಂ ಇನ್‌ ಚೀನಾ (೬೫೦-ಪ್ರಕೃತ) http://www.bbc.co.uk/religion/religions/islam/history/china_1.shtml
  32. "Islamic culture in China". Archived from the original on 2011-10-11. Retrieved 2009-08-19.
  33. "Looking East: The challenges and opportunities of Chinese Islam". Archived from the original on 2008-03-12. Retrieved 2009-08-19.
  34. ಲೆವೀನ್‌, ಮಾರ್ಕ್‌. ಜಿನೋಸೈಡ್‌ ಇನ್‌ ದ ಏಜ್‌ ಆಫ್‌ ನೇಷನ್‌-ಸ್ಟೇಟ್‌ . I.B.ಟಾರಿಸ್‌, ೨೦೦೫. ISBN ೧-೮೪೫೧೧-೦೫೭-೯, ಪುಟ ೨೮೮
  35. ಗಿಯೆರ್ಷ್‌, ಚಾರ್ಲ್ಸ್ ಪ್ಯಾಟರ್‌ಸನ್‌. ಏಷ್ಯನ್‌ ಬಾರ್ಡರ್‌ ಲ್ಯಾಂಡ್ಸ್‌ : ದ ಟ್ರಾನ್ಸ್‌ಫರ್ಮೇಷನ್‌ ಆಫ್‌ ಕ್ವಿಂಗ್‌ ಚೀನಾಸ್‌ ಯುನ್ನಾನ್‌ ಫ್ರಾಂಟಿಯರ್‌. ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್‌, ೨೦೦೬. ISBN ೧-೮೪೫೧೧-೦೫೭-೯, ಪುಟ ೨೧೯
  36. ಡಿಲ್ಲನ್‌, ಮೈಕೆಲ್‌. ಚೀನಾಸ್‌ ಮುಸ್ಲಿಮ್‌ ಹುಯಿ ಕಮ್ಯುನಿಟಿ Archived 2008-03-12 ವೇಬ್ಯಾಕ್ ಮೆಷಿನ್ ನಲ್ಲಿ.. ಕರ್ಜನ್‌, ೧೯೯೯. ISBN ೦-೭೦೦೭-೧೦೨೬-೪, ಪುಟ xix
  37. ಆರಿಜಿನ್ಸ್‌ ಆಫ್‌ ದ ಗ್ರೇಟ್‌ ಗೇಮ್‌. ೨೦೦೦. Athleticscholarships.net. ಭೇಟಿ ನೀಡಿದ್ದು ೨೩ ಏಪ್ರಿಲ್‌ ೨೦೦೬.
  38. ಕ್ವಿನ್‌ಫಾ, ಯೆ. ಸ್ಪೋರ್ಟ್ಸ್ ಹಿಸ್ಟರಿ ಆಫ್‌ ಚೀನಾ. About.com. ಪಡೆದಿದ್ದು ೨೧ ಏಪ್ರಿಲ್‌ ೨೦೦೬.
  39. ಚೀನಾ: ಅತಿ ಉದ್ದದ ಸೇತುವೆ ಬಳಕೆಗೆ ಮುಕ್ತ;: 23 ಅಕ್ಟೋಬರ್ 2018,


ಹೊರಗಿನ ಕೊಂಡಿಗಳು

[ಬದಲಾಯಿಸಿ]
  • China.org.cn ಚೀನಾದ ವಾರ್ತೆ, ಹವಾಮಾನ, ವ್ಯವಹಾರ, ಪ್ರವಾಸ, ಭಾಷಾ ತರಗತಿಗಳು, ಸಾರ್ವಜನಿಕ ದಾಖಲೆಗಳು
  • China entry at The World Factbook
  • ಚೀನಾ UCB ಸರ್ಕಾರದಿಂದ ಪ್ರಕಾಶಿತ ಪುಸ್ತಕಗಳನ್ನು ಹೊಂದಿದ ಗ್ರಂಥಾಲಯ ಗಳಿಂದ
  • ಚೀನಾ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
  • Wikimedia Atlas of China

35°00′N 105°00′E / 35.000°N 105.000°E / 35.000; 105.000

"https://kn.wikipedia.org/w/index.php?title=ಚೀನಾ&oldid=1088536" ಇಂದ ಪಡೆಯಲ್ಪಟ್ಟಿದೆ