ಚಿತ್ರಕಲೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪ್ರಸಿದ್ಧ ಚಿತ್ರಕಲೆ ಮೊನ ಲೀಸ

ಚಿತ್ರಕಲೆ ಬಣ್ಣಗಳನ್ನು ಉಪಯೋಗಿಸಿ ಕಲಾತ್ಮಕ ಚಿತ್ರಗಳನ್ನು ರಚಿಸುವುದು. ಈ ರಚನೆಗಳನ್ನೂ ಕೂಡ ಚಿತ್ರಕಲೆಗಳೆಂದು ಕರೆಯಲಾಗುತ್ತಿತ್ತು. ಆದರೆ ಇಪ್ಪತ್ತನೆಯ ಶತಮಾನದಾದ್ಯಂತ ಚಿತ್ರಕಲೆ ಎಂಬ ಪದಕ್ಕೆ ದೃಶ್ಯಕಲೆ ಎಂಬ ಅರ್ಥವನ್ನೂ ಆರೋಪಿಸಲ್ಪಟ್ಟಿದೆ. ಉದಾಹರಣೆಗೆ ’ಚಿತ್ರಕಲೆ’ ಎಂಬುದು ವರ್ಣಗಳನ್ನು ಬಳಸಿ, ಕಾಗದ ಅಥವ ಕ್ಯಾನ್ವಾಸಿನ ಮೇಲೆ ಮಾನವಜೀವಿ ಮೂರ್ತ ಅಥವ ಅಮೂರ್ತ ದೃಶ್ಯವನ್ನು ’ಅರ್ಥವತ್ತಾಗಿ ಮೂಡಿಸುವುದೇ ಆಗಿದೆ. ಈ ಹಿಂದಿನ ವಾಕ್ಯದಲ್ಲಿ ಸಹಜವೆನಿಸುವ ಅನೇಕ ಐತಿಹಾಸಿಕ ಅರ್ಥಗಳಿವೆ. ಉದಾಹರಣೆಗೆ ಮಾನವನನ್ನು ಹೊರತುಪಡಿಸಿದವರು ಸೃಷ್ಟಿಸುವುದನ್ನು ನಿಸರ್ಗಸೃಷ್ಟಿ ಎನ್ನುತ್ತೇವೆ. ಅಂದರೆ ಮಾನವನನ್ನು ಹೊರತುಪಡಿಸಿದವರು ಚಿತ್ರರಚಿಸಲಾರರು, ಮಾನವರಾದ ಕಲಾವಿಮರ್ಶಕರ ಪ್ರಕಾರ. ಎರಡನೆಯದಾಗಿ, ಮೊದಲೆಲ್ಲ, ಅಂದರೆ ಸುಮಾರು ಹದಿನೈದನೇ ಶತಮಾನದ ಯುರೋಪಿನ ರೆನಾಯಸಾನ್ಸ್ ಕಾಲಕ್ಕೆ ತೈಲವರ್ಣದ ಚಿತ್ರಕಲೆ ಹುಟ್ಟಿಕೊಂಡಾಗ, ಅವುಗಳು ದೈವೀಕ ಭಕ್ತಿಗೆ ’ಪೂರಕವಾಗಿ’ ಮಾತ್ರ ಬಳಕೆಗೊಳ್ಳುತ್ತಿತ್ತು. ತನ್ನದಲ್ಲದ ಉದ್ದೇಶವನ್ನು ಪೂರೈಸಿದ ಅಂತಹ ಚಿತ್ರಕಲೆಯನ್ನು ಇಂದು ’ಪೂರಕಚಿತ್ರ’ ಅಥವ ’ಇಲ್ಲಸ್ಟ್ರೇಷನ್’ ಎಂದು ಕರೆಯಲಾಗುತ್ತದೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು