ಬಲಿ
ನರಬಲಿ: ಎಲ್ಲರಿಗೂ ಮೈ ಜುಮ್ಮೆನಿಸುವ ಈ ಹೇಯ ಕೃತ್ಯ ಇಂದಿಗೂ ಗುಪ್ತವಾಗಿ ಭಾರತದ ಕೆಲವು ರಾಜ್ಯಗಳಲ್ಲಿ ಇಂದಿಗೂ ನಡೆದಿವೆ. ನರಬಲಿಯಂತಹ ಹೇಯಕೃತ್ಯವನ್ನು ಬ್ರಿಟೀಷ್ ಸರಕಾರ ೧೭೯೯ರಲ್ಲಿ ಕಾನೂನು ಮೂಲಕ ನಿರ್ಬಂಧಿಸಿತು. ಇಂದಿಗೆ ಸುಮಾರು ೨೦೨ ವರುಷಗಳ ಹಿಂದೆ ನರಬಲಿಯಂತಹ ಪ್ರಕರಣಗಳು ನಡೆದಿವೆಯಾದರು ಅವುಗಳು ಬಾಯ್ದೆರೆಯ ಕಥೆಗಾಳಾಗಿ ಕೆಲವು ಕಡೆ ಸಾಂಕೇತಿಕ ನೆಲೆಯಲ್ಲಿ ಸಾಕ್ಷ್ಯರೂಪವಾದ ಗೋರಿಗಳು, ಶಿಲ್ಪಗಳು ನೋವುಂಡವರ ಅಥವಾ ಬಲಿಪಶುಗಳಾದ ಅಮಾಯಕರ ಪಳೆಯುಳಿಕೆಗಳನ್ನು ಇಂದಿಗೂ ಕಾಣಬಹುದು. ಇಂದಿಗೂ ಕೆಲವು ಪ್ರಾದೇಶಿಕ ಭಾಗಗಳಲ್ಲಿ ನರಬಲಿ ಇಲ್ಲದಿದ್ದರೂ ಸಾಂಕೇತಿಕವಾಗಿ ನಡೆಯುವ ವಿಧಿ-ವಿಧಾನಗಳ ಮೂಲಕ ನರಬಲಿಯ ಆಚರಣೆ ನಡೆಯುತ್ತಿವೆ.
ನರಬಲಿ ಆಚರಣೆ ನೆನಪಿಸುವ ಸೀಗೆ ಮಾರಿ ಹಬ್ಬ: ಕರ್ನಾಟಕ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿರುವ ಕೊಳ್ಳೆಗಾಲದಿಂದ ಸುಮಾರು ೮ ಕಿ.ಮಿ. ದೂರದಲ್ಲಿರುವ (ಚಾಮರಾಜನಗರ ಜಿಲ್ಲೆ) ಪಾಳ್ಯ ಎಂಬಲ್ಲಿ ಸೀಗೆ ಮಾರಿ ನಡೆಯುತ್ತದೆ. ಈ ಹಬ್ಬದಲ್ಲಿ ಸೀಗನಾಯ್ಕ ಎಂಬ ವ್ಯಕ್ತಿ ಬಲಿಯಾಗಿ ಮತ್ತೆ ಜೀವದಾನ ಪಡೆಯುವುದು ಒಂದು ವಿಶೇಷ. ವೈಜ್ಞಾನಿಕ ಆಧಾರಗಳನ್ನು ಕೊಡಬಹುದಾದರೂ ಜನರ ಬಲವಾದ ನಂಬಿಕೆಯ ಎದಿರು ಈ ವೈಜ್ಞಾನಿಕ ವಿವರಣೆಗಳು ಕೆಲವೊಮ್ಮೆ ಸೋಲುತ್ತವೆ. ಐದು ವರ್ಷಗಳಿಗೊಮ್ಮೆ ಒಂದು ತಿಂಗಳ ಕಾಲ ನಡೆಯುವ ಈ ಹಬ್ಬದಲ್ಲಿ ಬಲಿಗೆಂದೇ ನಿಯೋಜಿತನಾಗಿರುವ ವ್ಯಕ್ತಿ ಸುಮಾರು ೮ ಘಂಟೆಗಳ ಕಾಲ ಶವದಂತೆ ಬಿದ್ದಿರುತ್ತಾನೆ, (ಈ ನರಬಲಿ ನೆನಪಿಸುವ ಜಾತ್ರೆ ಮುಂಬರುವ ೨೦೧೩ ಮೇ ತಿಂಗಳಲ್ಲಿ ನಡೆಯಬಹುದು, ಸಂಶೋಧಕರು ಅಥವಾ ಜಿಜ್ಞಾಸುಗಳು ನೋಡಬಹುದು) ನೆರೆದ ಜನಸ್ತೋಮ ಈ ಶವವನ್ನು ಎಸೆದಾಡುತ್ತಾರೆ. ಅಂತಿಮವಾಗಿ ದೇವರ ತೀರ್ಥ ಪ್ರೋಕ್ಷಣೆಯ ಬಳಿಕ ಮರು ಜೀವ ಪಡೆಯುವುದು ಈ ಜಾತ್ರೆಯ ವಿಶೇಷತೆ. ಈ ಹಬ್ಬ ಎಂದಿನಿಂದ ಆರಂಭವಾಯಿತೆನ್ನುವುದು ಯಾರೂ ತಿಳಿದಿಲ್ಲ, ತಮಿಳುನಾಡು ಕಡೆಯಿಂದ ವಲಸೆ ಬಂದ ಅರಸರ ಕುಟುಂಬಗಳೊಂದಿಗೆ ಮಾರಮ್ಮ ಸೋದರಿಯರು ಆಗಮಿಸಿದರು, ಅರಸರು ಎಂದರೆ ಯಾರು ಈ ಬಗ್ಗೆ ಇಲ್ಲಿ ಜಿಜ್ಞಾಸೆ ಇಲ್ಲಿ ಅನಗತ್ಯ, ಅರಸರು ತಂದಿದ್ದ ಬುಟ್ಟಿಗಳಲ್ಲಿ ಕಲ್ಲಿನ ರೂಪದಲ್ಲಿ ಈ ಮಾರಿಯರು ಇದ್ದರು, ಒಂದು ದಿನ ಈ ಕಲ್ಲನ್ನು ಓರ್ವ ಅಜ್ಜಿ ಸೀಗೆ ಮೆಳೆಗೆ ಬಿಸಾಡಿದಳು. ಕಾಲಾನಂತರ ಒಂದು ದಿನ ಊರ ಗೌಡರ ಸೊಸೆಯ ಮೇಲೆ ಮಾರಿ ಆವಾಹನೆಗೊಂಡಳು. ( ಇಲ್ಲಿ ಗಮನಿಸತಕ್ಕದ್ದು: ಬಲಿ ಯಾವಾಗಲು ಊರಿಗೆ ಸಂಬಂಧ ಪಡದೇ ಇರುವ ಅಥವಾ ಅನ್ಯರುಗಳನ್ನು ಉದಾ:- ಸೊಸೆಯಂದಿರು, "ಕೆರೆಗೆ ಹಾರ "'ಭಾಗೀರಥಿ' ಆಶಯ) ಅಥವಾ ಊರಿನಿಂದ ದೂರ ಉಳಿದಿರುವ ನಿಮ್ನ ವರ್ಗದವರುಗಳನ್ನು ಬಲಿಯಾಗಿಸುವುದು ಪ್ರಮುಖ ಆಶಯ) ಈ ಮಾರಿಗೆಂದು ಪ್ರತ್ಯೇಕ ಗುಡಿ ಕಟ್ಟಲಾಗಿದೆ, ೧೬ ಕೋಮಿನವರು ಒಂದುಗೂಡಿ ಈ ಹಬ್ಬ ನಡೆಸುತ್ತಾರೆ. ಸೀಗೆ ಮಾರಮ್ಮನ ಅಣತಿಯಂತೆ ಪರಿವಾರ ನಾಯಕ ಜನವರ್ಗ (ಜಾತಿ)ದ ೬೦ ಕುಟುಂಬಗಳು ಇಲ್ಲಿ ವಾಸವಾಗಿವೆ, ಇವರುಗಳಲ್ಲಿನ 5 ಮನೆತನದಲ್ಲಬ್ಬರು ಬಲಿ ಪಾತ್ರದಾರಿಗಳಾಗುತ್ತಾರೆ. ಡೋಲು ಬಾರಿಸಲು ತೋಟಗೇರಿಯ ಹರಿಜನರು ತಮಿಳು ನಾಡಿನಿಮದ ಬಂದು ಇಲ್ಲಿಯೇ ವಾಸಿಗಳಾಗಿದ್ದಾರೆ. ೨೦೦೩ರಲ್ಲಿ ಬಲಿ ಅಗಲು ಒಪ್ಪಿದ ವ್ಯಕ್ತಿ ಸೀಗನಾಯಕ. ಇವರು ಆಯ್ಕೆಯಾದ ಗಳಿಗೆಯಿಂದ ಅನ್ನಾಹಾರಗಳನ್ನು ತ್ಯಜಿಸಿ ಸಿದ್ಧರಾಗುತ್ತಾರೆ, ಸೋಮವಾರದ ದಿನ ಮಧ್ಯರಾತ್ರಿ ಬರುತ್ತಿದ್ದಂತೆ ತಮ್ಮಡಿ(ಪೂಜಾರಿ) ಒಂದು ದಿಕ್ಕಿನಿಂದ ಮತ್ತು ಬಲಿ ಪಾತ್ರಧಾರಿ ಮತ್ತೊಂದು ದಿಕ್ಕಿನಿಂದ ಆಗಮಿಸಿ ನಿರ್ದಿಷ್ಟ ಸ್ಥಳದಲ್ಲಿ ಭೇಟಿಯಾಗುತ್ತಾರೆ. ತಮ್ಮಡಿಯ (ಪೂಜಾರಿ) ಸ್ಪರ್ಷದಿಂದ ಅರೆ ಜೀವವಾಗಿ ಸೀಗನಾಯಕ ಕೆಳಗೆ ಬೀಳುವನು, ಹೀಗೆ ಬಿದ್ದಂತ ವ್ಯಕ್ತಿಯನ್ನು ಜನ ಹೊತ್ತೊಯ್ದು ಬಲಿ ಮನೆಯಲ್ಲಿ ಇರಿಸುತ್ತಾರೆ, ಸೀಗೆ ಮಾರಿ ಆವಾಹನೆಗೊಂಡ ತಮ್ಮಡಿ (ಪೂಜಾರಿ) ಸೀಗೆಮಾರಿಗೆ ಬಲಿಯಾಗಿ ಬಿದ್ದಿರುವ ಬಲಿಯ ಎದೆ ಮೇಲೆ ಮೇಲೆ ಕಾಲಿಡುವನು, ಅಲ್ಲಿಗೆ ಆತ ನಿರ್ಜೀವನಾಗುವುನು. ಸುಮಾರು ಬೆಳಗಿನ ಜಾವ ಈ ಬಲಿಪಶು ವ್ಯಕ್ತಿಯನ್ನು ಜನರ ಗುಂಪು ಎಸೆದಾಡಿಕೊಂಡು ಮಾರಿಗುಡಿ ಸಮೀಪ ತರುವರು. ಅಲ್ಲಿ ಹುಲ್ಲಿನ ಹಾಸಿಗೆಯ ಮೇಲೆ ಮಲಗಿಸಿದಾಗ ಭಕ್ತರಿಂದ ನಾಣ್ಯಗಳ ಸುರಿಮಳೆಯಾಗುತ್ತದೆ, ಎಲ್ಲರಿಗೂ ಬಲಿದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಮಾರನೆಯ ದಿನ ಮಂಗಳವಾರ ಬೆಳಗ್ಗೆ 9-00 ಘಂಟೆಗೆ ಪುನರಪಿ ಶವವನ್ನು ಎಸೆದಾಡುವರು, ಪಕ್ಕದ ಹಳ್ಳಿಯಲ್ಲಿ ನೆಲೆಸಿರುವ ಒಳಗೆರೆ ಹುಚ್ಚಮ್ಮ, ಗುಂಡೇಗಾಲ ಹುಚ್ಚಮ್ಮ ಮತ್ತು ಜಾತ್ರೆ ನಡೆಸಿಕೊಳ್ಳುವ ಸೀಗೆ ಮಾರಿ ಈ ಮೂರೂ ದೇವತೆಗಳ ತೀರ್ಥ ಪ್ರೋಕ್ಷಣೆಯ ಬಳಿಕ ಶವದಂತಿರುವಾತ ಎಚ್ಚರ ಸ್ಥಿತಿಗೆ ಬರುವನು. ಅರಸು ಮನೆತನದವರು ಆತನ ಕಣ್ಣಿಗೆ ಕಪ್ಪು ಹಚ್ಚಿದ ಬಳಿಕ ಎಂದಿನಂತೆ ಪೂರ್ಣ ಜೀವದೊಂದಿಗೆ ಓಡಾಡುವನು. (ನೋಡಿ: ಎಸ್.ಸಿದ್ದೇಗೌಡ ಪ್ರಜಾವಾಣಿ 7-ಮೇ 2003, ಪುಟ-1: ಸಂಪುಟ 4, ಸಂಚಿಕೆ 126)