ಶ್ರೀರಂಗ (ಚಿತ್ರಸಾಹಿತಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀರಂಗ
ಶ್ರೀರಂಗ (ಭಂಗಿರಂಗ)
ಮರಣ೦೯ ಮೇ ೨೦೨೧
ಬೆಂಗಳೂರು
ರಾಷ್ಟ್ರೀಯತೆಭಾರತೀಯ
ಉದ್ಯೋಗಕನ್ನಡ ಚಿತ್ರಸಾಹಿತಿ
ಇದಕ್ಕೆ ಖ್ಯಾತರುಚಲನಚಿತ್ರ ಗೀತಸಾಹಿತ್ಯ, ಚಿತ್ರಕತೆ, ಸಂಭಾಷಣೆ

ಶ್ರೀರಂಗ ಅವರು ಕನ್ನಡ ಚಲನಚಿತ್ರರಂಗದ ಹಿರಿಯ ಚಿತ್ರ ಸಾಹಿತಿ. ದಶಕಗಳ ಕಾಲ ಕನ್ನಡ ಚಲನಚಿತ್ರಗಳಿಗೆ ಸಾಹಿತ್ಯವನ್ನು ಬರೆದಿದ್ದವರು. ಸುಮಾರು ೧೦೦೦ಕ್ಕೂ ಹೆಚ್ಚು ಚಿತ್ರಗೀತೆಗಳಿಗೆ ಸಾಹಿತ್ಯ ರಚಿಸಿದ್ದಾರೆ. ಕೆಲವು ಸಿನೆಮಾಗಳಿಗೆ ಚಿತಕತೆ, ಸಂಭಾ‌ಷಣೆಗಳನ್ನು ಕೂಡ ರಚಿಸಿದ್ದಾರೆ.

ಚಿತ್ರಸಾಹಿತ್ಯ ರಚನೆ[ಬದಲಾಯಿಸಿ]

೧೯೭೪-೭೫ರ ಸಮಯದಲ್ಲಿ ಚಿತ್ರರಂಗವನ್ನು ಪ್ರವೇಶಿಸಿದರು. ಅವರು 'ಭಂಗೀರಂಗ' ಎಂಬ ಕಾವ್ಯನಾಮ ಹೊಂದಿದ್ದರು. [೧]‘ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು', 'ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ', 'ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ', 'ಸುಮ್‌ಸುಮ್ನೇ ಓಡಬೇಡ ಸುಂದರಿ' ಸೇರಿದಂತೆ ಇನ್ನೂ ಹಲವು ಜನಪ್ರಿಯ ಭಿನ್ನ ರೀತಿಯ ಹಾಡುಗಳನ್ನು ಶ್ರೀರಂಗ ರಚಿಸಿದ್ದರು.[೨]

ಅವರು ಸಾಹಿತ್ಯ ರಚಿಸಿದ ಕೆಲ ಸಿನೆಮಾಗಳೆಂದರೆ, ನಂಜುಂಡಿ ಕಲ್ಯಾಣ, ಅಪ್ಪು, ಜನುಮದ ಜೋಡಿ, ವೀರ ಕನ್ನಡಿಗ, ಆಕಾಶ್, ಅಪ್ಪಾಜಿ, ಇನ್ಸ್ಪೆಕ್ಟರ್ ವಿಕ್ರಮ್, ಗಂಡುಗಲಿ ಕುಮಾರರಾಮ, ಆಸೆಗೊಬ್ಬ ಮೀಸೆಗೊಬ್ಬ ಮುಂತಾದವು.[೩]

ಅವರು ಸಂಭಾಷೆಣೆ ಬರೆದಿರುವ ಕೆಲ ಸಿನೆಮಾಗಳೆಂದರೆ, ಅಂಜದ ಗಂಡು, ಕಿಂದರಿಜೋಗಿ, ಮುತ್ತೈದೆ ಭಾಗ್ಯ, ಅದೃಷ್ಟರೇಖೆ, ಪುಕ್ಸಟ್ಟೆಗಂಡ ಹೊಟ್ಟೆತುಂಬಾ ಉಂಡ, ಶುಕ್ರದೆಸೆ, ಭೂಲೋಕದಲ್ಲಿ ಯಮರಾಜ ಇತ್ಯಾದಿ.

'ಭೂಲೋಕದಲ್ಲಿ ಯಮರಾಜ' ಚಿತ್ರಕ್ಕೆ ಕತೆ, ಚಿತ್ರಕತೆಯನ್ನು ರಚಿಸಿದ್ದರು.

ನಿಧನ[ಬದಲಾಯಿಸಿ]

ಮೇ ೦೯, ೨೦೨೧ರಂದು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೮೬ ವರ್ಷ ವಯಸ್ಸಾಗಿತ್ತು. ಕೆಲವರ್ಷಗಳಿಂದ ವಯೋಸಹಜ ಖಾಯಿಲೆಯಿಂದ ಅನಾರೋಗ್ಯಪೀಡಿತರಾಗಿ ಚಿತ್ರರಂಗದ ಕೆಲಸಗಳಿಂದ ದೂರವುಳಿದಿದ್ದರು.[೪]

ಉಲ್ಲೇಖ[ಬದಲಾಯಿಸಿ]