ಭಾವನೆ
ಭಾವನೆ ಯು ಚಿತ್ತಸ್ಥಿತಿ, ಮನೋಧರ್ಮ, ವ್ಯಕ್ತಿತ್ವ ಮತ್ತು ಸ್ವಭಾವ ಹಾಗೂ ಪ್ರೇರಣೆಯೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಇಂಗ್ಲಿಷ್ ಪದ 'ಇಮೋಷನ್'ಅನ್ನು ಫ್ರೆಂಚ್ ಪದ ಇಮೌವಾಯರ್ ನಿಂದ ಪಡೆಯಲಾಗಿದೆ. ಇದು ಲ್ಯಾಟಿನ್ ಪದ ಇಮೋವೀರ್ ಅನ್ನು ಆಧರಿಸಿದೆ, ಇದರಲ್ಲಿ e- (ex -ನ ರೂಪಾಂತರ) ಅಂದರೆ 'ಹೊರಗೆ' ಮತ್ತು ಮೋವೂರ್ ಅಂದರೆ 'ಚಲನೆ' ಎಂದರ್ಥ.[೧] ಸಂಬಂಧಿತ ಪದ "ಮೋಟಿವೇಶನ್"ಅನ್ನೂ ಸಹ ಮೋವೀರ್ ನಿಂದ ಪಡೆಯಲಾಗಿದೆ.
ಭಾವನೆಗಳ ಪೂರ್ಣವಾಗಿ ರೂಪುಗೊಂಡ ಯಾವುದೇ ಜೀವಿವರ್ಗೀಕರಣ ಶಾಸ್ತ್ರವು ಅಸ್ತಿತ್ವದಲ್ಲಿಲ್ಲದಿದ್ದರೂ, ಅಸಂಖ್ಯಾತ ಜೀವಿವರ್ಗೀಕರಣ ಶಾಸ್ತ್ರಗಳನ್ನು ಪ್ರಸ್ತಾಪಿಸಲಾಗಿದೆ. ಕೆಲವು ವರ್ಗೀಕರಣಗಳು ಹೀಗಿವೆ:
- 'ಗ್ರಹಿಕೆ' ಮತ್ತು 'ಗ್ರಹಿಕೆಯಿಲ್ಲದ' ಭಾವನೆಗಳು
- ಸಹಜ ಪ್ರೇರಣೆಯ ಭಾವನೆಗಳು (ಅಮಿಗ್ಡಲದಿಂದ ಬರುವ) ಮತ್ತು ಗ್ರಹಿಕೆಯ ಭಾವನೆಗಳು (ಪ್ರಿಫ್ರಂಟಲ್ ಕಾರ್ಟೆಕ್ಸ್(ಮಿದುಳಿನ ಮುನ್‌ಹಾಲೆಯ ಮುಂಭಾಗ)ದಿಂದ ಬರುವ).
- ಪ್ರಾಥಮಿಕ ಮತ್ತು ಸಂಕೀರ್ಣ ಭಾವನೆಗಳು: ಪ್ರಾಥಮಿಕ ಭಾವನೆಗಳು ಹೆಚ್ಚು ಸಂಕೀರ್ಣ ಭಾವನೆಗಳಿಗೆ ಕಾರಣವಾಗುತ್ತವೆ.
- ಅವಧಿಯ ಆಧಾರದ ವರ್ಗೀಕರಣ: ಕೆಲವು ಭಾವನೆಗಳು ಕೆಲವು ಸೆಕೆಂಡುಗಳ ಕಾಲ ಇರುತ್ತವೆ (ಉದಾಹರಣೆಗಾಗಿ, ಆಶ್ಚರ್ಯ), ಮತ್ತೆ ಕೆಲವು ವರ್ಷಾನುಗಟ್ಟಲೆ ಇರುತ್ತವೆ (ಉದಾಹರಣೆಗಾಗಿ, ಪ್ರೀತಿ).
ಭಾವನೆ ಮತ್ತು ಭಾವನೆಯಿಂದಾಗುವ ಪರಿಣಾಮಗಳ, ಪ್ರಧಾನವಾಗಿ ವರ್ತನೆ ಮತ್ತು ಭಾವನಾತ್ಮಕ ಅಭಿವ್ಯಕ್ತಿಗಳ, ಮಧ್ಯೆ ಸಂಬಂಧಿತ ಭಿನ್ನತೆ ಇದೆ. ಜನರು ಹೆಚ್ಚಾಗಿ ಅವರ ಭಾವನಾತ್ಮಕ ಸ್ಥಿತಿಯ ನೇರ ಪರಿಣಾಮವಾಗಿ ಕೆಲವು ರೀತಿಗಳಲ್ಲಿ ವರ್ತಿಸುತ್ತಾರೆ, ಅಳುವುದು, ಜಗಳವಾಡುವುದು ಅಥವಾ ತೊರೆದುಬಿಡುವುದು. ಅನುಗುಣವಾದ ವರ್ತನೆಯಿಲ್ಲದ ಭಾವನೆಯನ್ನು ಹೊಂದಿದ್ದರೆ, ಭಾವನೆಗೆ ವರ್ತನೆಯ ಅಗತ್ಯವಿಲ್ಲ ಎಂದು ನಾವು ಪರಿಗಣಿಸಬಹುದು. ಯೋಚನೆಯೊಂದನ್ನು ಪಡೆದು ಅದು ಭಾವನಾತ್ಮಕ ಪ್ರತಿಕ್ರಿಯೆಯಾಗಿ ಹೊರಹೊಮ್ಮುವ ಮೊದಲು ಒಂದು "ಅದ್ಭುತವಾದ ಕಾಲು ಸೆಕೆಂಡು" ಇರುತ್ತದೆ ಎಂದು ನರವೈಜ್ಞಾನಿಕ ಸಂಶೋಧನೆಯು ಸೂಚಿಸುತ್ತದೆ. ಆ ಗಳಿಗೆಯಲ್ಲಿ ಭಾವನೆಯನ್ನು ಪ್ರಕಟಗೊಳಿಸುವ ಮೊದಲು ಅದನ್ನು ಪಡೆಯಬಹುದು.[೨]
ಭಾವನಾತ್ಮಕ ಅನುಭವವು ಹೆಚ್ಚಾಗಿ ದೈಹಿಕ ಬದಲಾವಣೆಯಿಂದ ಉಂಟಾಗುತ್ತದೆ ಎಂದು ಜೇಮ್ಸ್-ಲ್ಯಾಂಗ್ ಸಿದ್ಧಾಂತವು ಸೂಚಿಸುತ್ತದೆ. ಭಾವನೆಗಳ ಕ್ರಿಯಾತ್ಮಕ ವಾದಿ ಗಳು (ಉದಾಹರಣೆಗಾಗಿ, ನಿಕೊ ಫ್ರಿಜ್ಡ ಮತ್ತು ಫ್ರೈಟಾಸ್-ಮ್ಯಾಗಲ್ಹೇಸ್), ಭಾವನೆಗಳು ವಸ್ತುವನ್ನು ಸುರಕ್ಷಿತವಾಗಿಡುವಂತಹ ನಿರ್ದಿಷ್ಟ ಕಾರ್ಯಕ್ಕಾಗಿ ಹೊರಹೊಮ್ಮುತ್ತವೆ ಎಂದು ಹೇಳುತ್ತಾರೆ.
ವರ್ಗೀಕರಣ
[ಬದಲಾಯಿಸಿ]ಪ್ರಾಥಮಿಕ ಮತ್ತು ಸಂಕೀರ್ಣ ಭಾವನೆಗಳ ವರ್ಗೀಕರಣಗಳಿವೆ. ಅದರಲ್ಲಿ ಕೆಲವು ಪ್ರಾಥಮಿಕ ಭಾವನೆಗಳು ಯಾವುದೋ ರೀತಿಯಲ್ಲಿ ಸಂಕೀರ್ಣ ಭಾವನೆಗಳಾಗಿ ಮಾರ್ಪಾಡಾಗಬಹುದು (ಉದಾಹರಣೆಗಾಗಿ, ಪಾಲ್ ಎಕ್ಮ್ಯಾನ್). ಒಂದು ಮಾದರಿಯಲ್ಲಿ, ಸಂಕೀರ್ಣ ಭಾವನೆಗಳು ಪ್ರಾಥಮಿಕ ಭಾವನೆಗಳೊಂದಿಗಿನ ಸಾಂಸ್ಕೃತಿಕ ಸ್ಥಿತಿ ಅಥವಾ ಮಾನಸಿಕ ಸಂಬಂಧದಿಂದ ಉಂಟಾಗಬಹುದು. ಪರ್ಯಾಯವಾಗಿ, ಪ್ರಾಥಮಿಕ ಬಣ್ಣ ಸಂಯೋಜನೆ ರೀತಿಯನ್ನು ಹೋಲುವಂತೆ, ಪ್ರಾಥಮಿಕ ಭಾವನೆಗಳು ಮಾನವನ ಸಂಪೂರ್ಣ ಭಾವನಾತ್ಮಕ ಅನುಭವಕ್ಕೆ ಕಾರಣವಾಗಬಹುದು. ಉದಾಹರಣೆಗಾಗಿ, ವ್ಯಕ್ತಿಗಳ ನಡುವಿನ ಕೋಪ ಮತ್ತು ಜಿಗುಪ್ಸೆಯು ತಿರಸ್ಕಾರವನ್ನು ಉಂಟುಮಾಡಬಹುದು.[ಸೂಕ್ತ ಉಲ್ಲೇಖನ ಬೇಕು]
ರಾಬರ್ಟ್ ಪ್ಲಟ್ಚಿಕ್ ಭಾವನೆಗಳ ಸಂಬಂಧವನ್ನು ವಿವರಿಸುವ ತ್ರಿವಿಮಿತೀಯ "ಸರ್ಕಂಪ್ಲೆಕ್ಸ್ ಮಾದರಿ"ಯನ್ನು ಪ್ರಸ್ತಾಪಿಸಿದ್ದಾನೆ. ಈ ಮಾದರಿಯು ಬಣ್ಣದ ಚಕ್ರವನ್ನು ಹೋಲುತ್ತದೆ. ಲಂಬವಾಗಿರುವ ಪರಿಮಾಣವು ತೀವ್ರತೆಯನ್ನು ಮತ್ತು ವೃತ್ತವು ಭಾವನೆಗಳ ನಡುವೆ ಇರುವ ಹೋಲುವಿಕೆಗಳ ಪ್ರಮಾಣವನ್ನು ಸೂಚಿಸುತ್ತದೆ. ಅವನು ನಾಲ್ಕು ಜತೆ ವಿರೋಧಗಳಾಗಿ ಜೋಡಿಸಿದ ಎಂಟು ಪ್ರಾಥಮಿಕ ಭಾವನೆಯ ಪರಿಮಾಣಗಳನ್ನು ಸೂಚಿಸಿದನು. ಭಾವನೆಗಳ ಬಗೆಗಿನ ಭಾವನೆಗಳಾದ ಆನಂತರದ-ಭಾವನೆಗಳ ಅಸ್ತಿತ್ವದ ಬಗ್ಗೆಯೂ ಕೆಲವರು ವಾದಿಸಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]
ಭಾವನೆಗಳನ್ನು ವಿಂಗಡಿಸುವ ಮತ್ತೊಂದು ಪ್ರಮುಖ ಅಂಶವು ಅವು ಕಾಣಿಸಿಕೊಳ್ಳುವ ಸಮಯವನ್ನು ಸಂಬಂಧಿಸಿರುತ್ತದೆ. ಕೆಲವು ಭಾವನೆಗಳು ಕೆಲವು ಸೆಕೆಂಡುಗಳ ಕಾಲ ಮಾತ್ರ ಇರುತ್ತವೆ (ಉದಾಹರಣೆಗಾಗಿ, ಆಶ್ಚರ್ಯ). ಮತ್ತೆ ಕೆಲವು ವರ್ಷಾನುಗಟ್ಟಲೆ ಇರುತ್ತವೆ (ಉದಾಹರಣೆಗಾಗಿ, ಪ್ರೀತಿ). ವರ್ಷಾನುಗಟ್ಟಲೆ ಇರುವ ಭಾವನೆಗಳನ್ನು, ಯೋಗ್ಯವಾದ ಭಾವನೆಗಿಂತ ಕೆಲವು ವಸ್ತುವನ್ನು ಹೊಂದುವ ದೀರ್ಘ ಕಾಲದ ಒಲವು ಎನ್ನಬಹುದು. ಭಾವನೆಯ ಘಟನೆಗಳ ಮತ್ತು ಭಾವನಾತ್ಮಕ ಸ್ವಭಾವಗಳ ಮಧ್ಯೆ ಭೇದವನ್ನು ಮಾಡಲಾಗಿದೆ. ಸ್ವಭಾವಗಳು ವ್ಯಕ್ತಿಯ ವಿಶೇಷ ಲಕ್ಷಣಗಳಿಗೂ ಹೋಲಿಕೆಯನ್ನು ಹೊಂದಿರುತ್ತವೆ. ಕೆಲವರು ಭಿನ್ನ ಅಂಶಗಳ ಬಗ್ಗೆ ಕೆಲವು ಭಾವನೆಗಳನ್ನು ಅನುಭವಿಸಲು ಪ್ರೇರೇಪಿಸಲ್ಪಡುತ್ತಾರೆ. ಉದಾಹರಣೆಗಾಗಿ, ಸಿಡುಕಿನ ವ್ಯಕ್ತಿಯು ಸಾಮಾನ್ಯವಾಗಿ ಇತರರಿಗಿಂತ ಅತಿ ಸುಲಭವಾಗಿ ಅಥವಾ ಶೀಘ್ರವಾಗಿ ಸಿಟ್ಟುಗೊಳ್ಳುತ್ತಾನೆ. ಅಂತಿಮವಾಗಿ, ಕೆಲವು ತಾತ್ವಿಕ ಸಿದ್ಧಾಂತಿಗಳು (ಉದಾಹರಣೆಗಾಗಿ, ಕ್ಲಾಸ್ ಸ್ಕೆರೆರ್, 2005) ಭಾವನೆಗಳನ್ನು 'ಭಾವಾತ್ಮಕ ಸ್ಥಿತಿಗಳ' ಹೆಚ್ಚು ಸಾಮಾನ್ಯ ವರ್ಗದಲ್ಲಿ ಇರಿಸುತ್ತಾರೆ. ಅದರಲ್ಲಿ ಭಾವಾತ್ಮಕ ಸ್ಥಿತಿಗಳು ಸಂತೋಷ ಮತ್ತು ನೋವು, ಪ್ರೇರಕ ಸ್ಥಿತಿಗಳು (ಉದಾಹರಣೆಗಾಗಿ, ಹಸಿವು ಅಥವಾ ಕುತೂಹಲ), ಚಿತ್ತಸ್ಥಿತಿ, ಸ್ವಭಾವ ಮತ್ತು ವಿಶೇಷ ಲಕ್ಷಣಗಳಂತಹ ಭಾವನೆ-ಸಂಬಂಧಿತ ವಿಷಯವನ್ನು ಒಳಗೊಂಡಿರುತ್ತವೆ.[ಸೂಕ್ತ ಉಲ್ಲೇಖನ ಬೇಕು]
ದ್ವೇಷದೊಂದಿಗಿನ ನರವ್ಯೂಹದ ಪರಸ್ಪರ ಸಂಬಂಧವನ್ನು fMRI ಕ್ರಿಯೆಯಿಂದ ಕಂಡುಹಿಡಿಯಲಾಗಿದೆ. ಈ ಪ್ರಯೋಗದಲ್ಲಿ, ಜನರ ಮಿದುಳನ್ನು ಅವರು ದ್ವೇಷಿಸಿದವರ ಚಿತ್ರವನ್ನು ನೋಡುವಾಗ ಸ್ಕ್ಯಾನ್ ಮಾಡಲಾಗಿದೆ. ಇದರ ಫಲಿತಾಂಶಗಳು ಹಣೆಯ ಸುತ್ತು, ಬಲ ಪುಟಮೆನ್, ಪ್ರಿಮೋಟರ್ ಹೊರಪದರದ ಇಬ್ಬದಿ, ಫ್ರಂಟಲ್ ಪೋಲ್ ಮತ್ತು ಮಾನವ ಮಿದುಳಿನ ಇನ್ಸುಲದ ಎರಡೂ ಬದಿಗಳಲ್ಲಿ ಕ್ರಿಯೆಗಳು ಹೆಚ್ಚಿದುದನ್ನು ತೋರಿಸಿವೆ. ಜನರು ದ್ವೇಷವನ್ನು ವ್ಯಕ್ತಪಡಿಸುವಾಗ ಅವರ ಮಿದುಳಿನಲ್ಲಿ ಒಂದು ಭಿನ್ನ ರೀತಿಯ ಕ್ರಿಯೆ ನಡೆಯುತ್ತದೆ ಎಂದು ಸಂಶೋಧಕರು ನಿರ್ಣಯಿಸಿದ್ದಾರೆ. ಟೆಂಪ್ಲೇಟು:Emotion
ಸಿದ್ಧಾಂತಗಳು
[ಬದಲಾಯಿಸಿ]ಭಾವನೆಗಳ ಬಗೆಗಿನ ಸಿದ್ಧಾಂತಗಳು ಪುರಾತನ ಗ್ರೀಕ್ ಸ್ಟೋಯಿಕ್ಗಳಷ್ಟು ಅಲ್ಲದೆ ಪ್ಲೇಟೋ ಮತ್ತು ಅರಿಸ್ಟಾಟಲ್ನಷ್ಟು ಹಿಂದಕ್ಕೆ ಹರಡಿಕೊಂಡಿವೆ. ರೇನೆ ಡೆಸ್ಕಾರ್ಟಸ್[೩], ಬಾರುಚ್ ಸ್ಪಿನೋಜ[೪] ಮತ್ತು ಡೇವಿಡ್ ಹ್ಯೂಮ್ ಮೊದಲಾದ ತತ್ವಜ್ಞಾನಿಗಳ ಕೆಲಸಗಳಲ್ಲಿಯೂ ಅತ್ಯುತ್ತಮವಾದ ಸಿದ್ಧಾಂತಗಳನ್ನು ಕಾಣಬಹುದು. ಭಾವನೆಗಳ ನಂತರದ ಸಿದ್ಧಾಂತಗಳು ಪ್ರಯೋಗವಾದಿ ಸಂಶೋಧನೆಯ ಅಭಿವೃದ್ಧಿಯಿಂದ ಪ್ರೇರಿಸಲ್ಪಟ್ಟಿದೆ. ಅನೇಕ ಸಿದ್ಧಾಂತಗಳು ಪರಸ್ಪರ ಪ್ರತ್ಯೇಕವಾಗಿಲ್ಲ ಮತ್ತು ಹೆಚ್ಚಿನ ಸಂಶೋಧಕರು ಅವರ ಕೆಲಸದಲ್ಲಿ ಬಹು ದೃಷ್ಟಿಕೋನಗಳನ್ನು ಸೇರಿಸಿದ್ದಾರೆ.
ದೈಹಿಕ ಸಿದ್ಧಾಂತಗಳು
[ಬದಲಾಯಿಸಿ]ಭಾವನೆಯ ದೈಹಿಕ ಸಿದ್ಧಾಂತಗಳು, ಭಾವನೆಗಳಿಗೆ ವಿವೇಚನ ಶಕ್ತಿಗಳಿಗಿಂತ ಶಾರೀರಿಕ ಪ್ರತಿಕ್ರಿಯೆಗಳ ಅವಶ್ಯಕತೆ ಇರುತ್ತದೆ ಎಂದು ಹೇಳುತ್ತವೆ. ಅಂತಹ ಸಿದ್ಧಾಂತಗಳ ಮೊದಲ ಆಧುನಿಕ ಆವೃತ್ತಿಯು ವಿಲಿಯಂ ಜೇಮ್ಸ್‌ನಿಂದ 1880ರಲ್ಲಿ ಹೊರಬಂದಿತು. ಈ ಸಿದ್ಧಾಂತವು 20ನೇ ಶತಮಾನದಲ್ಲಿ ಸಮ್ಮತಿಯನ್ನು ಕಳೆದುಕೊಂಡಿತು. ಆದರೆ ಜಾನ್ ಕ್ಯಾಸಿಯೊಪ್ಪೊ, ಆಂಟೋನಿಯೊ ಡ್ಯಾಮಸಿಯೊ, ಜಾಸೆಫ್ E. ಲಿಡೌಕ್ಸ್ ಮತ್ತು ರಾಬರ್ಟ್ ಜ್ಯಜಾಂಕ್ ಮೊದಲಾದ ನರವ್ಯೂಹದ ಸಾಕ್ಷ್ಯಾಧಾರವನ್ನು ಸಮರ್ಥನೆಯಾಗಿ ನೀಡಿದ ತಾತ್ವಿಕ ಸಿದ್ಧಾಂತಗಳಿಂದಾಗಿ ಇದು ಜನಪ್ರಿಯತೆಯನ್ನು ಇತ್ತೀಚೆಗೆ ಪುನಃಪಡೆದುಕೊಂಡಿತು.
ಜೇಮ್ಸ್-ಲ್ಯಾಂಗ್ ಸಿದ್ಧಾಂತ
[ಬದಲಾಯಿಸಿ]ವಿಲಿಯಂ ಜೇಮ್ಸ್ 'ವಾಟ್ ಈಸ್ ಆನ್ ಎಮೋಷನ್?' ಲೇಖನದಲ್ಲಿ, (ಮೈಂಡ್ , 9, 1884: 188-205) ಭಾವನಾತ್ಮಕ ಅನುಭವವು ಹೆಚ್ಚಾಗಿ ದೈಹಿಕ ಬದಲಾವಣೆಗಳಿಂದ ಉಂಟಾಗುತ್ತದೆ ಎಂದು ವಾದಿಸಿದ್ದಾನೆ. ಡ್ಯಾನಿಶ್ ಮನಶ್ಶಾಸ್ತ್ರಜ್ಞ ಕಾರ್ಲ್ ಲ್ಯಾಂಗ್ ಸಹ ಅದೇ ಸಮಯದಲ್ಲಿ ಅಂತಹುದೇ ಸಿದ್ಧಾಂತವೊಂದನ್ನು ಪ್ರಸ್ತಾಪಿಸಿದನು. ಆದ್ದರಿಂದ ಇದನ್ನು ಜೇಮ್ಸ್-ಲ್ಯಾಂಗ್ ಸಿದ್ಧಾಂತ ಎಂದು ಕರೆಯಲಾಗುತ್ತದೆ. ಈ ಸಿದ್ಧಾಂತ ಮತ್ತು ಇದರಿಂದ ಪಡೆದ ವಿಷಯಗಳು, ಬದಲಾದ ಸ್ಥಿತಿಯು ದೈಹಿಕ ಸ್ಥಿತಿಯ ಪರಿವರ್ತನೆಗೆ ಕಾರಣವಾಗುತ್ತದೆ ಎಂದು ಹೇಳುತ್ತವೆ. ಜೇಮ್ಸ್ ಹೇಳುವಂತೆ - "ದೈಹಿಕ ಬದಲಾವಣೆಗಳು ಇರುವಂತೆಯೇ ಮಾಡುವ ಗ್ರಹಿಕೆಯು ಭಾವನೆಯಾಗಿದೆ" ಜೇಮ್ಸ್ ಹೀಗೆಂದೂ ನಿರೂಪಿಸುತ್ತಾನೆ - "ನಾವು ಅತ್ತಾಗ ಬೇಸರ ಪಡುತ್ತೇವೆ, ಪೆಟ್ಟು ಬಿದ್ದಾಗ ಸಿಟ್ಟುಗೊಳ್ಳುತ್ತೇವೆ, ದಿಗಿಲುಗೊಂಡಾಗ ಭಯ ಪಡುತ್ತೇವೆ. ಬೇಸರ, ಸಿಟ್ಟು ಅಥವಾ ಭಯಗೊಂಡಾಗ ಅಳುವುದಿಲ್ಲ, ಹೊಡೆಯುವುದಿಲ್ಲ ಅಥವಾ ದಿಗಿಲುಗೊಳ್ಳುವುದಿಲ್ಲ".[೫]
ಈ ಸಿದ್ಧಾಂತವು ದೈಹಿಕ ಸ್ಥಿತಿಯನ್ನು ಸ್ವಾಧೀನಪಡಿಸಿಕೊಂಡು ಅಪೇಕ್ಷಿತ ಭಾವನೆಯನ್ನು ಉಂಟುಮಾಡಿದ ಪ್ರಯೋಗಗಳಿಂದ ಬೆಂಬಲ ಪಡೆಯಿತು.[೬] ಅಂತಹ ಪ್ರಯೋಗಗಳು ಔಷಧೀಯ ಪರಿಣಾಮಗಳನ್ನೂ ಹೊಂದಿವೆ (ಉದಾಹರಣೆಗಾಗಿ ನಗಿಸುವ ಚಿಕಿತ್ಸೆ, ನೃತ್ಯ ಮಾಡಿಸುವ ಚಿಕಿತ್ಸೆ). ಜೇಮ್ಸ್-ಲ್ಯಾಂಗ್ ಸಿದ್ಧಾಂತವನ್ನು ಹೆಚ್ಚಾಗಿ ತಪ್ಪು ತಿಳಿಯಲಾಗುತ್ತದೆ ಏಕೆಂದರೆ ಇದು ಅಂತರ್ಬೋಧೆಯಿಂದ ಗ್ರಹಿಸಲಾಗದಂತೆ ಕಂಡುಬರುತ್ತದೆ. ಭಾವನೆಗಳು ಭಾವನಾ-ವಿಶಿಷ್ಟ ಕ್ರಿಯೆಗಳಿಗೆ ಕಾರಣವಾಗುತ್ತವೆ ಎಂದು ಹೆಚ್ಚಿನವರು ನಂಬುತ್ತಾರೆ: ಅಂದರೆ "ನಾನು ದುಃಖಿತನಾಗಿರುವುದರಿಂದ ಅಳುತ್ತಿದ್ದೇನೆ" ಅಥವಾ "ನಾನು ಭೀತಿಗೊಳಗಾದ್ದರಿಂದ ಓಡಿ ಹೋದೆ". ನಾವು ಪರಿಸ್ಥಿತಿಗೆ ಮೊದಲು ಪ್ರತಿಕ್ರಿಯೆ ತೋರುತ್ತೇವೆ (ಭಾವನೆಗಿಂತ ಮೊದಲು ಓಡಿಹೋಗುವುದು ಮತ್ತು ಅಳುವುದು ನಡೆಯುತ್ತದೆ), ನಂತರ ನಮ್ಮ ಕ್ರಿಯೆಗಳನ್ನು ಭಾವನಾತ್ಮಕ ಪ್ರತಿಕ್ರಿಯೆಯಾಗಿ ಪ್ರಕಟಿಸುತ್ತೇವೆ ಎಂದು ಜೇಮ್ಸ್-ಲ್ಯಾಂಗ್ ಸಿದ್ಧಾಂತವು ವಿರುದ್ಧವಾಗಿ ಸಮರ್ಥಿಸುತ್ತದೆ. ಈ ರೀತಿಯಲ್ಲಿ ಭಾವನೆಗಳು ನಮ್ಮ ಸ್ವಂತ ಕ್ರಿಯೆಗಳನ್ನು ನಮಗೆ ವಿವರಿಸಲು ಮತ್ತು ಆಯೋಜಿಸಲು ಸಹಾಯ ಮಾಡುತ್ತದೆ.
ಜೇಮ್ಸ್-ಲ್ಯಾಂಗ್ ಸಿದ್ಧಾಂತವು ಎಲ್ಲವನ್ನೂ ಹೊಂದಿದೆ, ಆದರೆ ಈಗ ಹೆಚ್ಚಿನ ಪಂಡಿತರಿಂದ ಪರಿತ್ಯಕ್ತವಾಗಿದೆ.[೭]
ಟಿಮ್ ಡ್ಯಾಲ್ಗೀಶ್ (2004)[೮] ಹೀಗೆಂದು ಹೇಳಿದ್ದಾನೆ:
“ |
|
” |
ಜೇಮ್ಸ್-ಲ್ಯಾಂಗ್ ಸಿದ್ಧಾಂತದೊಂದಿಗಿನ ಸಮಸ್ಯೆಯು ಅದರ ಕಾರ್ಯಸಾಧನೆಯಾಗಿದೆ (ದೈಹಿಕ ಸ್ಥಿತಿಗಳು ಭಾವನೆಗಳನ್ನು ಉಂಟುಮಾಡುತ್ತವೆ ಮತ್ತು ಪ್ರಿಯೋರಿಯಾಗಿ ಇರುತ್ತವೆ), ಅದರ ಭಾವನಾತ್ಮಕ ಅನುಭವದ ಮೇಲಿನ ದೈಹಿಕ ಪ್ರಭಾವಗಳಲ್ಲ (ಇದು ಇಂದು ಜೈವಿಕ ಪುನರಾಧಾನ ಅಧ್ಯಯನಗಳಲ್ಲಿ ಮತ್ತು ಮೂರ್ತೀಕರಣ ಸಿದ್ದಾಂತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ).
ನರ-ಜೀವವಿಜ್ಞಾನದ ಸಿದ್ಧಾಂತಗಳು
[ಬದಲಾಯಿಸಿ]ಲಿಂಬಿಕ್ ವ್ಯವಸ್ಥೆಯ ನರಗಳ ರಚನೆಯ ಮೂಲಕ ಮಾಡಿದ ಸಂಶೋಧನೆಗಳ ಆಧಾರದಲ್ಲಿ, ಮಾನವನ ಭಾವನೆಯ ನರ-ಜೀವವಿಜ್ಞಾನದ ವಿವರಣೆಯು ಹೀಗಿದೆ - ಭಾವನೆ ಎಂದರೆ ಸಸ್ತನಿಗಳ ಮಿದುಳಿನ ಲಿಂಬಿಕ್ ವ್ಯವಸ್ಥೆಯಲ್ಲಿ ಹುಟ್ಟಿಕೊಳ್ಳುವ ಹಿತಕರವಾದ ಅಥವಾ ಅಹಿತಕರವಾದ ಮಿದುಳಿನ ಸ್ಥಿತಿಯಾಗಿದೆ. ಸರೀಸೃಪಗಳ ಪ್ರತಿಕ್ರಿಯೆಗಳಿಂದ ಭಿನ್ನವಾಗಿದ್ದರೆ, ಭಾವನೆಗಳು ಸಾಮಾನ್ಯ ಕಶೇರುಕ-ಪ್ರೇರಕ ಮಾದರಿಗಳ ಸಸ್ತನಿಯ-ಅಂಶಗಳಾಗಿರುತ್ತವೆ. ಅವುಗಳಲ್ಲಿ ನರ-ರಾಸಾಯನಿಕಗಳು (ಉದಾಹರಣೆಗಾಗಿ, ಡೊಪಮೈನ್, ನೊರಡ್ರೆನಲೈನ್ ಮತ್ತು ಸೆರಟೋನಿನ್) ಮಿದುಳಿನ ಕ್ರಿಯೆಯನ್ನು ಹೆಚ್ಚು ಮಾಡುತ್ತವೆ ಅಥವಾ ಕಡಿಮೆ ಮಾಡುತ್ತವೆ, ಇದು ದೇಹದ ಚಲನೆ, ಹಾವಭಾವ ಮತ್ತು ಭಂಗಿಯಲ್ಲಿ ಗೋಚರವಾಗುತ್ತದೆ.
ಉದಾಹರಣೆಗಾಗಿ, ಪ್ರೀತಿಯ ಭಾವನೆಯು ಮಗುವಿನ ಆರೈಕೆ ಮಾಡಲು, ಆಹಾರ ನೀಡಲು ಮತ್ತು ನೋಡಿಕೊಳ್ಳಲು ಸಹಾಯ ಮಾಡುವ ಸಸ್ತನಿಗಳ ಮಿದುಳಿನ ಪೇಲಿಯೊಸರ್ಕಿಟ್‌ಗಳಿಂದ (ನಿರ್ದಿಷ್ಟವಾಗಿ ಸಿಂಗ್ಯುಲೇಟ್ ಗೈರಸ್) ಹುಟ್ಟಿಕೊಳ್ಳುತ್ತದೆ. ಪೇಲಿಯೊಸರ್ಕಿಟ್‌ಗಳು, ಮಾತನಾಡಲು ಕಾರ್ಟಿಕಲ್ ಸರ್ಕಿಟ್‌ಗಳು ಬರುವುದಕ್ಕಿಂತ ದಶಲಕ್ಷದಷ್ಟು ವರ್ಷಗಳ ಮೊದಲು ರೂಪುಗೊಂಡ ದೈಹಿಕ ಅಭಿವ್ಯಕ್ತಿಯ ನರವ್ಯೂಹದ ಆಧಾರವಾಗಿವೆ. ಅವು ಮುಮ್ಮೆದುಳು, ಮಿದುಳು-ಕಾಂಡ ಮತ್ತು ಬೆನ್ನು ಹುರಿಯಲ್ಲಿ ನರ ಜೀವಕೋಶಗಳ ಸರಿಯಾಗಿ ರೂಪುಗೊಳ್ಳದ ಪ್ರತಿಕ್ರಿಯಾ ಸರಣಿ ಅಥವಾ ಜಾಲಗಳನ್ನು ಒಳಗೊಂಡಿರುತ್ತವೆ. ಅವು ಚಲನ ಕ್ರಿಯೆಯನ್ನು ನಿಯಂತ್ರಿಸಲು ಆರಂಭಿಕ ಸಸ್ತನಿಗಳ ಮೂಲರೂಪಗಳಿಗಿಂತಲೂ, ದವಡೆಗಳಿಲ್ಲದ ಮೀನುಗಳಷ್ಟು, ಹಿಂದೆ ವಿಕಾಸವಾಗಿವೆ.
ಸಸ್ತನಿಗಳ ಮಿದುಳಿಗಿಂತ ಮೊದಲು ಪ್ರಾಣಿಗಳ ಜೀವನವು ಸ್ವಯಂಚಾಲಿತ, ಅಧಃಪ್ರಜ್ಞೆ ಮತ್ತು ಭವಿಷ್ಯ ಹೇಳಲು ಸಾದ್ಯವಾಗುವಂತಿತ್ತು. ಸರೀಸೃಪಗಳ ಚಲನ ಕೇಂದ್ರಗಳು ದೃಶ್ಯ, ಶಬ್ಧ, ಸ್ಪರ್ಶ, ರಾಸಾಯನಿಕ, ಗುರುತ್ವಾಕರ್ಷಣೆ ಮತ್ತು ಚಲನೆಯ ಗ್ರಹಿಕೆ ಪ್ರಚೋದನೆಗಳಿಗೆ ಪೂರ್ವಸಂಯೋಜಿತ ದೇಹದ ಚಲನೆಗಳೊಂದಿಗೆ ಮತ್ತು ಯೋಜಿತ ನಿಲುವಿನೊಂದಿಗೆ ಪ್ರತಿಕ್ರಿಯಿಸುತ್ತವೆ. ಸುಮಾರು 180 ದಶಲಕ್ಷ ವರ್ಷಗಳ ಹಿಂದೆ ರಾತ್ರಿ-ಸಂಚರಿಸುವ ಸಸ್ತನಿಗಳು ಬಂದ ನಂತರ, ದೃಶ್ಯದ ಬದಲಿಗೆ ವಾಸನೆಯು ಪ್ರಮುಖ ಸಂವೇದನೆಯಾಯಿತು ಹಾಗೂ ಘ್ರಾಣ ಸಂಬಂಧಿ ಗ್ರಹಿಕೆಯಿಂದ ಒಂದು ಭಿನ್ನ ರೀತಿಯ ಪ್ರತಿಕ್ರಿಯೆಯು ಬೆಳವಣಿಗೆ ಹೊಂದಿತು. ಅದು ಸಸ್ತನಿಗಳ ಭಾವನೆ ಮತ್ತು ಭಾವನಾತ್ಮಕ ಸ್ಮರಣೆಯಾಗಿ ಅಭಿವೃದ್ಧಿ ಹೊಂದುವಂತೆ ಮಾಡಿತು. ಜುರ‌್ಯಾಸಿಕ್ ಅವಧಿಯಲ್ಲಿ, ಸಸ್ತನಿಗಳ ಮಿದುಳು ಆಘ್ರಾಣ ಶಕ್ತಿಯನ್ನು ರಾತ್ರಿಯಲ್ಲಿ ಸರೀಸೃಪಗಳು ನಿದ್ರಿಸಿದ ನಂತರ ಹೆಚ್ಚು ತೊಡಗಿಸಿಕೊಂಡವು - ಸಸ್ತನಿಗಳ ಮಿದುಳಿನಲ್ಲಿ ಘ್ರಾಣ ಸಂಬಂಧಿ ಹಾಲೆಗಳು ಸರೀಸೃಪಗಳಿಗಿಂತ ದೊಡ್ಡದಾಗಿರುವುದಕ್ಕೆ ಒಂದು ವಿವರಣೆ. ಈ ವಾಸನೆಯ ಪ್ರತಿಕ್ರಿಯಾ ಸರಣಿಯು ಕ್ರಮೇಣ ನಂತರ ನಮ್ಮ ಲಿಂಬಿಕ್ ಮಿದುಳು ರಚನೆಯಾದುದಕ್ಕೆ ನರವ್ಯೂಹದ ರೂಪುರೇಖೆಗಳಾದವು. ಘ್ರಾಣ ಮತ್ತು ರುಚಿ ಸಸ್ತನಿಗಳ ದೊಡ್ಡ ಶಕ್ತಿ.
ಭಾವನೆಗಳು ನಮ್ಮ ಗಮನವನ್ನು ನಿರ್ದೇಶಿಸುವ, ವರ್ತನೆಯನ್ನು ಪ್ರೇರೇಪಿಸುವ ಮತ್ತು ನಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನು ನಮಗೆ ತಿಳಿಸುವ ಮಿದುಳಿನ ಭಾಗಗಳ ಕ್ರಿಯೆಗಳಿಗೆ ಸಂಬಂಧವನ್ನು ಹೊಂದಿರುತ್ತವೆ ಎಂದು ತಿಳಿಯಲಾಗಿದೆ. ಬ್ರೋಕ (1878), ಪ್ಯಾಪೆಜ್ (1937), ಮತ್ತು ಮ್ಯಾಕ್‌ಲೀನ್ (1952) ಮೊದಲಾದವರ ಮೊದಲ ಶೋಧಕ ಕೆಲಸಗಳು, ಭಾವನೆಯು ಹೈಪೊಥಲಾಮಸ್(ಕೆಳಮಿದುಳುಕುಳಿ), ಸಿಂಗ್ಯುಲೇಟ್ ಕಾರ್ಟೆಕ್ಸ್, ಹಿಪ್ಪೊಕ್ಯಾಂಪಿ ಮತ್ತು ಇತರ ರಚನೆಗಳನ್ನು ಒಳಗೊಂಡಿರುವ ಲಿಂಬಿಕ್ ವ್ಯವಸ್ಥೆ ಎಂದು ಕರೆಯುವ ಮಿದುಳಿನ ಕೇಂದ್ರಭಾಗದಲ್ಲಿರುವ ರಚನೆಗಳ ಸಮೂಹಕ್ಕೆ ಸಂಬಂಧಿಸಿರುತ್ತದೆ ಎಂದು ಸೂಚಿಸಿವೆ. ಈ ಲಿಂಬಿಕ್ ರಚನೆಗಳಲ್ಲಿ ಕೆಲವು ಇತರೆಗಳಂತೆ ಭಾವನೆಗೆ ನೇರವಾದ ಸಂಬಂಧವನ್ನು ಹೊಂದಿಲ್ಲ ಹಾಗೂ ಕೆಲವು ಲಿಂಬಿಕ್-ಅಲ್ಲದ ರಚನೆಗಳು ಹೆಚ್ಚು ಭಾವನಾತ್ಮಕ ಸಂಬಂಧವನ್ನು ಹೊಂದಿವೆ ಎಂಬುದನ್ನು ಇತ್ತೀಚಿನ ಸಂಶೋಧನೆಗಳು ತೋರಿಸಿವೆ.
ಪ್ರಿಫ್ರಂಟಲ್ ಕಾರ್ಟೆಕ್ಸ್
[ಬದಲಾಯಿಸಿ]ಎಡ ಪ್ರಿಫ್ರಂಟಲ್ ಕಾರ್ಟೆಕ್ಸ್ ಧನಾತ್ಮತ ಸೂಚನೆಯನ್ನು ಉಂಟುಮಾಡುವ ಪ್ರಚೋದಕಗಳಿಂದ ಕ್ರಿಯಾತ್ಮಕಗೊಳ್ಳುತ್ತದೆ ಎಂಬುದಕ್ಕೆ ವ್ಯಾಪಕವಾದ ಆಧಾರವಿದೆ.[೯] ಆಕರ್ಷಕ ಪ್ರಚೋದಕವು ಮಿದುಳಿನ ಭಾಗವನ್ನು ಆರಿಸಿಕೊಂಡು ಕ್ರಿಯಾತ್ಮಕಗೊಳಿಸಿದರೆ, ತಾರ್ಕಿಕವಾಗಿ ವಿರುದ್ಧ ಕ್ರಿಯೆಯು ಉಂಟಾಗುತ್ತದೆ. ಅಂದರೆ ಮಿದುಳಿನ ಭಾಗದ ಆಯ್ದ ಕ್ರಿಯಾತ್ಮಕತೆಯು ಪ್ರಚೋದಕತೆಯು ಹೆಚ್ಚು ಧನಾತ್ಮಕವಾಗಿರುವಂತೆ ಮಾಡುತ್ತದೆ. ಇದನ್ನು ಮಧ್ಯಮ ಪ್ರಮಾಣದಲ್ಲಿ ಆಕರ್ಷಕವಾಗಿ ಗೋಚರಿಸುವ ಪ್ರಚೋದಕಗಳಿಗಾಗಿ[೧೦] ಸಾಧಿಸಲಾಯಿತು ಹಾಗೂ ನಿಷೇಧಾತ್ಮಕ ಪ್ರಚೋದಕಗಳಿಗಾಗಿ ನಕಲು ಮಾಡಲಾಯಿತು ಮತ್ತು ಬೆಳೆಸಲಾಯಿತು.[೧೧]
ಪ್ರಿಫ್ರಂಟಲ್ ಕಾರ್ಟೆಕ್ಸ್‌ನಲ್ಲಿನ ಭಾವನೆಯ ಎರಡು ನರವಿಜ್ಞಾನದ ಮಾದರಿಗಳು ವಿರುದ್ಧವಾದ ಫಲಿತಾಂಶಗಳನ್ನು ನೀಡಿದವು. ವ್ಯಾಲೆನ್ಸ್ ಮಾದರಿಯು, ನಿಷೇಧಾತ್ಮಕ ಭಾವನೆಯಾದ ಕೋಪವು ಬಲ ಪ್ರಿಫ್ರಂಟಲ್ ಕಾರ್ಟೆಕ್ಸ್ಅನ್ನು ಸಕ್ರಿಯಗೊಳಿಸುತ್ತದೆ ಎಂದು ನಿರೂಪಿಸಿತು. ಡೈರೆಕ್ಷನ್ ಮಾದರಿಯು, ಭಾವನೆಯ ಒಂದು ಮಾರ್ಗ ಕೋಪವು ಎಡ ಪ್ರಿಫ್ರಂಟಲ್ ಕಾರ್ಟೆಕ್ಸ್ಅನ್ನು ಕ್ರಿಯಾತ್ಮಕಗೊಳಿಸುತ್ತದೆ ಎಂದು ಹೇಳಿತು. ಎರಡನೆಯ ಮಾದರಿಯನ್ನು ಬೆಂಬಲಿಸಲಾಯಿತು.[೧೨]
ಪ್ರಿಫ್ರಂಟಲ್ ಕಾರ್ಟೆಕ್ಸ್‌ನಲ್ಲಿನ ಮಾರ್ಗಕ್ಕೆ ತೀರ ವಿರುದ್ಧವಾಗಿರುವುದನ್ನು ದೂರಕ್ಕೆ ಚಲಿಸುವಂತೆ (ಡೈರೆಕ್ಷನ್ ಮಾದರಿ), ಶಕ್ತಿ ಮತ್ತು ವಿರೋಧದೊಂದಿಗೆ ಸ್ಥಿರವಾಗಿರುವಂತೆ (ಮೂಮೆಂಟ್ ಮಾದರಿ) ಅಥವಾ ಜಡವಾಗಿ ಸೋಲುವುದರೊಂದಿಗೆ ಸ್ಥಿರವಾಗಿರುವಂತೆ (ಆಕ್ಷನ್ ಟೆಂಡೆನ್ಸಿ ಮಾದರಿ) ವಿವರಿಸಲಾಗಿದೆಯೇ ಎಂಬ ಪ್ರಶ್ನೆ ಇನ್ನೂ ಇದೆ. ಆಕ್ಷನ್ ಟೆಂಡೆನ್ಸಿ ಮಾದರಿಗೆ (ಜಡತ್ವವು ಬಲ ಪ್ರಿಫ್ರಂಟಲ್ ಕ್ರಿಯೆಗೆ ಸಂಬಂಧಿಸಿರುವ) ನಾಚಿಕೆಯ ಬಗೆಗಿನ ಸಂಶೋಧನೆ[೧೩] ಹಾಗೂ ವರ್ತನೆಯ ನಿಗ್ರಹದ ಬಗೆಗಿನ ಸಂಶೋಧನೆಗಳು ಬೆಂಬಲವನ್ನು ನೀಡಿವೆ.[೧೪] ಎಲ್ಲಾ ನಾಲ್ಕು ಮಾದರಿಗಳಿಂದ ರಚನೆಯಾದ ಪೈಪೋಟಿಯ ಊಹನೆಗಳನ್ನು ಪರಿಶೀಲಿಸಿ ಸಂಶೋಧನೆಯೂ ಸಹ ಆಕ್ಷನ್ ಟೆಂಡೆನ್ಸಿ ಮಾದರಿಯನ್ನು ಬೆಂಬಲಿಸಿತು.[೧೫][೧೬]
ಸಂತುಲನ ಭಾವನೆ
[ಬದಲಾಯಿಸಿ]ಬಡ್ ಕ್ರೈಗ್ Archived 2015-04-02 ವೇಬ್ಯಾಕ್ ಮೆಷಿನ್ ನಲ್ಲಿ. 2003ರಲ್ಲಿ ವಿವರಿಸಿದ ಮತ್ತೊಂದು ನರವಿಜ್ಞಾನದ ಮಾರ್ಗವು ಭಾವನೆಗಳನ್ನು ಎರಡು ವರ್ಗಗಳಾಗಿ ವಿಂಗಡಿಸುತ್ತದೆ. "ಸಾಂಪ್ರದಾಯಿಕ ಭಾವನೆಗಳು" ಕಾಮಾಸಕ್ತಿ, ಸಿಟ್ಟು ಮತ್ತು ಭಯವನ್ನು ಒಳಗೊಳ್ಳುತ್ತವೆ ಹಾಗೂ ಅವು ನಮ್ಮ ಪ್ರೇರೇಪಿಸುವ ನೈಸರ್ಗಿಕ ಪ್ರಚೋದಕ ಗಳಿಂದ ಹೊರಹೊಮ್ಮುವ ಭಾವನೆಗಳಾಗಿವೆ (ಉದಾಹರಣೆಗಳೆಂದರೆ ಅನುಕ್ರಮವಾಗಿ ಸಂಭೋಗಿಸುವ/ಹೊಡೆದಾಡುವುದು/ಬಿಟ್ಟು ಓಡಿಹೋಗುವುದು). "ಸಂತುಲನ ಭಾವನೆಗಳು" ನಮ್ಮ ವರ್ತನೆಯನ್ನು ಬದಲಾಯಿಸುವ ಆಂತರಿಕ ದೇಹದ ಸ್ಥಿತಿ ಗಳಿಂದ ಹೊರಹೊಮ್ಮುವ ಭಾವನೆಗಳಾಗಿವೆ. ಬಾಯಾರಿಕೆ, ಹಸಿವು, ಬಿಸಿ ಅಥವಾ ತಣ್ಣಗಿನ ಅನುಭವ, ನಿದ್ರೆ ಬರದಿರುವ ಭಾವನೆ, ಸಾಲ್ಟ್ ಹಂಗರ್ (ಉಪ್ಪಿನ ಹಸಿವು) ಅಥವಾ ಏರ್ ಹಂಗರ್ (ಗಾಳಿಯ ಹಸಿವು) ಮೊದಲಾದವುಗಳು ಸಂತುಲನ ಭಾವನೆಗಳಿಗೆ ಉದಾಹರಣೆಗಳಾಗಿವೆ; ಪ್ರತಿಯೊಂದು - "ಇಲ್ಲಿ ಪರಿಸ್ಥಿತಿಯು ಸರಿಯಾಗಿಲ್ಲ. ಕುಡಿಯಿರಿ/ತಿನ್ನಿ/ನೆರಳಿಗೆ ಹೋಗಿ/ಬೆಚ್ಚಗಿನ ವಸ್ತುವನ್ನು ಹಾಕಿಕೊಳ್ಳಿ/ನಿದ್ರಿಸಿ/ಉಪ್ಪನ್ನು ಸೇವಿಸಿ/ಉಸಿರಾಡಿ" ಹೀಗೆ ಹೇಳುವ ದೈಹಿಕ-ವ್ಯವಸ್ಥೆಯ ಸಂಕೇತವಾಗಿವೆ. ಈ ವ್ಯವಸ್ಥೆಗಳಲ್ಲಿ ಯಾವುದಾದರೊಂದು ನಿಯಂತ್ರಣ ಕಳೆದುಕೊಂಡು ನಿಷ್ಕ್ರಿಯವಾದರೆ ನಾವು ಸಂತುಲನ ಭಾವನೆಯನ್ನು ಅನುಭವಿಸಲು ಆರಂಭಿಸುತ್ತೇವೆ ಹಾಗೂ ಆ ವ್ಯವಸ್ಥೆಯನ್ನು ಪುನಃನಿಯಂತ್ರಣಕ್ಕೆ ತರಲು ಏನು ಅವಶ್ಯಕತೆ ಇರುತ್ತದೆ ಎಂಬುದನ್ನು ತಿಳಿಯುವಂತೆ ಭಾವನೆಯು ನಮ್ಮನ್ನು ಪ್ರೇರೇಪಿಸುತ್ತದೆ. ನೋವು ಒಂದು ಸಂತುಲನ ಭಾವನೆ, ಇದು ಹೀಗೆ ಹೇಳುತ್ತದೆ - "ಇಲ್ಲಿಯ ಅಂಶಗಳು ಸರಿಯಾಗಿಲ್ಲ. ಹಿಂತೆಗೆದುಕೊಂಡು ರಕ್ಷಿಸಿ."[೧೭][೧೮]
ಗ್ರಹಿಕೆ ಸಿದ್ಧಾಂತಗಳು
[ಬದಲಾಯಿಸಿ]ಗ್ರಹಿಕೆಯ ಚಟುವಟಿಕೆಯು ಟೀಕೆ, ಯೋಗ್ಯತೆ ನಿರ್ಣಯ ಅಥವಾ ಚಿಂತನೆಗಳ ರೂಪದಲ್ಲಿ ಭಾವನೆ ಉಂಟಾಗಲು ಅವಶ್ಯಕವಾಗಿರುತ್ತದೆ ಎಂದು ವಾದಿಸುವ ಕೆಲವು ಸಿದ್ಧಾಂತಗಳಿವೆ. ರಿಚಾರ್ಡ್ ಲಜಾರಸ್ ವಾದಿಸಿದಂತೆ, ಇದು ಭಾವನೆಗಳು ಕೆಲವುದರ ಬಗ್ಗೆಯಾಗಿರುತ್ತದೆ ಅಥವಾ ಉದ್ಧೇಶವನ್ನು ಹೊಂದಿರುತ್ತದೆ ಎಂಬುದನ್ನು ತಿಳಿಯಲು ಅಗತ್ಯವಾಗಿದೆ. ಅಂತಹ ಗ್ರಹಿಕೆಯ ಚಟುವಟಿಕೆಯು ಪ್ರಜ್ಞೆಯುಳ್ಳದ್ದಾಗಿರಬಹುದು ಅಥವಾ ಪ್ರಜ್ಞೆಯಿಲ್ಲದ್ದಾಗಿರಬಹುದು ಹಾಗೂ ಭಾವನಾತ್ಮಕ ಕ್ರಿಯೆಯ ರೂಪವನ್ನು ಪಡೆಯಬಹುದು ಅಥವಾ ಪಡೆಯದಿರಬಹುದು.
ಲಜಾರಸ್‌ನ ಪರಿಣಾಮಕಾರಿ ಸಿದ್ಧಾಂತವೊಂದು ಇಲ್ಲಿದೆ: ಭಾವನೆಯು ಒಂದು ಶಾಂತಿಭಂಗದಂತೆ, ಅದು ಈ ಕ್ರಮದಲ್ಲಿ ಕಂಡುಬರುತ್ತದೆ: 1.) ಗ್ರಹಿಕೆ ಅಂದಾಜಿಸುವಿಕೆ - ವ್ಯಕ್ತಿಗಳು ಭಾವನೆಯನ್ನು ಪ್ರಚೋದಿಸುವ ಅಂಶಗಳನ್ನು ಗ್ರಹಿಕೆಯ ಮೂಲಕ ನಿರ್ಣಯಿಸುತ್ತಾರೆ. 2.) ಮಾನಸಿಕ ಬದಲಾವಣೆಗಳು — ಗ್ರಹಿಕೆ ಪ್ರತಿಕ್ರಿಯೆಯು ಹೃದಯ ಬಡಿತವನ್ನು ಅಥವಾ ಪಿಟ್ಯುಟರಿ ಅಡ್ರೀನಲ್ ಗ್ರಂಥಿಗಳ ಪ್ರತಿವರ್ತನೆಯನ್ನು ಹೆಚ್ಚಿಸುವಂತಹ ಜೈವಿಕ ಬದಲಾವಣೆಗಳನ್ನು ಆರಂಭಿಸುತ್ತದೆ. 3.) ಕ್ರಿಯೆ - ವ್ಯಕ್ತಿಗಳು ಭಾವನೆಯನ್ನು ಅನುಭವಿಸಿ, ಹೇಗೆ ಪ್ರತಿಕ್ರಿಯಿಸಬೇಕೆಂಬುದನ್ನು ಆರಿಸುತ್ತಾರೆ. ಉದಾಹರಣೆಗಾಗಿ: ಜೆನ್ನಿಯು ಹಾವೊಂದನ್ನು ನೋಡುತ್ತಾಳೆ. 1.) ಜೆನ್ನಿಯು ಹಾವನ್ನು ಅಸ್ತಿತ್ವವನ್ನು ಗ್ರಹಿಕೆಯ ಮೂಲಕ ಗೊತ್ತುಮಾಡಿಕೊಳ್ಳುತ್ತಾಳೆ, ಅದು ಭಯವನ್ನು ಪ್ರಚೋದಿಸುತ್ತದೆ. 2.) ಅವಳ ಹೃದಯ ವೇಗವಾಗಿ ಬಡಿದುಕೊಳ್ಳಲು ಆರಂಭಿಸುತ್ತದೆ. ಅಡ್ರೆನಲಿನ್ ಅವಳ ರಕ್ತ ಪ್ರವಾಹಕ್ಕೆ ಸ್ರವಿಸಲ್ಪಡುತ್ತದೆ. 3.) ಜೆನ್ನಿಯು ಕಿರಿಚಿಕೊಂಡು ಓಡಿಹೋಗುತ್ತಾಳೆ. ಭಾವನೆಗಳ ಗುಣಮಟ್ಟ ಮತ್ತು ತೀವ್ರತೆಯು ಗ್ರಹಿಕೆಯ ಕ್ರಿಯೆಗಳ ಮೂಲಕ ನಿಯಂತ್ರಿಸಲ್ಪಡುತ್ತದೆ ಎಂದು ಲಜಾರಸ್ ಒತ್ತಿ ಹೇಳಿದ್ದಾನೆ. ಈ ಕ್ರಿಯೆಗಳು ವ್ಯಕ್ತಿಯ ಮತ್ತು ಪರಿಸರದ ನಡುವಿನ ಸಂಬಂಧವನ್ನು ಪರಿವರ್ತಿಸುವ ಮೂಲಕ ಭಾವನಾತ್ಮಕ ಪ್ರತಿಕ್ರಿಯೆಯಾಗುವ ನಕಲು ಮಾಡುವ ಕಾರ್ಯವಿಧಾನಕ್ಕೆ ಆಧಾರಭೂತವಾಗಿವೆ.
ಗ್ರಹಿಕೆಯ ಚಟುವಟಿಕೆಯು ಟೀಕೆ, ಯೋಗ್ಯತೆ ನಿರ್ಣಯ ಅಥವಾ ಚಿಂತನೆಗಳ ರೂಪದಲ್ಲಿ ಭಾವನೆ ಉಂಟಾಗಲು ಅವಶ್ಯಕವಾಗಿರುತ್ತದೆ ಎಂದು ವಾದಿಸುವ ಭಾವನೆಗಳ ಬಗೆಗಿನ ಕೆಲವು ಸಿದ್ಧಾಂತಗಳಿವೆ. ಈ ತತ್ವಶಾಸ್ತ್ರದ ಒಬ್ಬ ಪ್ರಮುಖ ಪ್ರತಿಪಾದಕ ರಾಬರ್ಟ್ C. ಸೋಲೊಮನ್ (ಉದಾಹರಣೆಗಾಗಿ, ದ ಪ್ಯಾಶನ್ಸ್, ಎಮೋಷನ್ಸ್ ಆಂಡ್ ದ ಮೀನಿಂಗ್ ಆಫ್ ಲೇಫ್ , 1993). ಅಂದಾಜಿಸುವಿಕೆಯು ಕ್ರಿಯೆಯ ಪ್ರವೃತ್ತಿಗಳಿಗೆ ಕಾರಣವಾಗುವ ನಿಕೊ ಫ್ರಿಜ್ಡಾ ಪ್ರಸ್ತಾಪಿಸಿದ ಸಿದ್ಧಾಂತವು ಮತ್ತೊಂದು ಉದಾಹರಣೆಯಾಗಿದೆ. ಭಾವನೆಗಳನ್ನು (ಸ್ವಯಂಅನ್ವೇಷಣೆ, ಅನುಭವ ಮತ್ತು ಸ್ವಾಭಾವಿಕವಾದ ಪ್ರತಿಕ್ರಿಯೆಯ ಮೇಲೆ ಪ್ರಭಾವ ಬೀರುವ) ಹೆಚ್ಚಾಗಿ ಮಾಹಿತಿಯನ್ನು ವ್ಯಕ್ತಪಡಿಸಲು ಮತ್ತು ವರ್ತನೆಯನ್ನು ಪ್ರಭಾವ ಬೀರಲು ಕಿರುದಾರಿಯಾಗಿ ಬಳಸಲಾಗುತ್ತದೆ ಎಂಬುದನ್ನೂ ಸೂಚಿಸಲಾಗಿದೆ.[೧೯]
ಪ್ರತ್ಯಕ್ಷಾನುಭವಾತ್ಮಕ ಸಿದ್ಧಾಂತ
[ಬದಲಾಯಿಸಿ]ಭಾವನೆಗಳ ದೈಹಿಕ ಮತ್ತು ಗ್ರಹಿಕೆಯ ಸಿದ್ಧಾಂತಗಳ ಇತ್ತೀಚಿನ ಮಿಶ್ರಣವೇ ಪ್ರತ್ಯಕ್ಷಾನುಭವಾತ್ಮಕ ಸಿದ್ಧಾಂತವಾಗಿದೆ. ಈ ಸಿದ್ಧಾಂತವು ಜೇಮ್ಸ್‌ನ ಸಿದ್ಧಾಂತದ ಹೊಸರೂಪವಾಗಿದ್ದು, ದೈಹಿಕ ಪ್ರತಿಕ್ರಿಯೆಗಳು ಭಾವನೆಗಳಿಗೆ ಕೇಂದ್ರವಾಗಿವೆ ಆದರೂ ಇದು ಭಾವನೆಗಳ ಅರ್ಥವನ್ನು ಅಥವಾ ಗ್ರಹಿಕೆ ಸಿದ್ಧಾಂತಗಳಿಂದ ಅಂಗೀಕಾರವಾದಂತೆ ಭಾವನೆಗಳು ಕೆಲವುದರ ಬಗ್ಗೆಯಾಗಿರುತ್ತದೆ ಎಂಬ ಅಭಿಪ್ರಾಯವನ್ನು ಒತ್ತಿ ಹೇಳುತ್ತದೆ ಎಂದು ವಾದಿಸುತ್ತದೆ. ಈ ಸಿದ್ಧಾಂತದ ಹೊಸ ರೀತಿಯ ಸಮರ್ಥನೆಯೆಂದರೆ ಭಾವನೆಗಳ ಆಧಾರಿತ ಗ್ರಹಿಕೆಯು ಅಂತಹ ಅರ್ಥಕ್ಕೆ ಅನಾವಶ್ಯಕವಾಗಿರುತ್ತದೆ. ದೈಹಿಕ ಬದಲಾವಣೆಗಳು ಕೆಲವು ಪರಿಸ್ಥಿತಿಗಳಿಂದ ಪ್ರೇರೇಪಿಸಲ್ಪಡುವುದರಿಂದ ಭಾವನೆಯ ಅರ್ಥಪೂರ್ಣ ಅಂಶವನ್ನು ತಮ್ಮಷ್ಟಕ್ಕೆ ಗ್ರಹಿಸುತ್ತವೆ . ಈ ಸಂಬಂಧದಲ್ಲಿ, ಭಾವನೆಗಳು ವಸ್ತು ಮತ್ತು ಪ್ರಪಂಚದ ನಡುವಿನ ಸಂಬಂಧದ ಬಗ್ಗೆ ಅನೇಕ ವಿಧಗಳಲ್ಲಿ ಮಾಹಿತಿಯನ್ನು ಒದಗಿಸುವ ದೃಷ್ಟಿ ಅಥವಾ ಸ್ಪರ್ಶದಂತಹ ಸಹಜ ಶಕ್ತಿಗಳಿಗೆ ಹೋಲಿಕೆಯನ್ನು ಹೊಂದಿರುತ್ತವೆ. ಈ ಅಭಿಪ್ರಾಯದ ಅತ್ಯುತ್ತಮ ಸಮರ್ಥನೆಯೊಂದು ತತ್ವಜ್ಞಾನಿ ಜೆಸ್ಸೆ ಪ್ರಿಂಜ್‌ನ ಪುಸ್ತಕ ಗಟ್ ರಿಯಾಕ್ಷನ್ಸ್ ನಲ್ಲಿ ಮತ್ತು ಜೇಮ್ಸ್ ಲೈರ್ಡ್‌ನ ಪುಸ್ತಕ ಫೀಲಿಂಗ್ಸ್ ನಲ್ಲಿ ಕಂಡುಬಂದಿದೆ.
ಭಾವಸೂಚಕ ಘಟನೆಗಳ ಸಿದ್ಧಾಂತ
[ಬದಲಾಯಿಸಿ]ಇದು ಹೊವಾರ್ಡ್ M. ವೈಸ್ ಮತ್ತು ರಸ್ಸೆಲ್ ಕ್ರೊಪ್ಯಾಂಜನೊ (1996) ಅಭಿವೃದ್ಧಿಗೊಳಿಸಿದ ಸಂವಹನ-ಆಧಾರಿತ ಸಿದ್ಧಾಂತವಾಗಿದೆ. ಭಾವನಾತ್ಮಕ ಅನುಭವದ (ವಿಶೇಷವಾಗಿ ಕೆಲಸದ ಸಂದರ್ಭಗಳಲ್ಲಿ) ಕಾರಣಗಳು, ರಚನೆಗಳು ಮತ್ತು ಪರಿಣಾಮಗಳನ್ನು ಗಮನಿಸುತ್ತದೆ. ಭಾವನೆಗಳು ಘಟನೆಗಳಿಂದ ಪ್ರಭಾವಿತವಾಗುತ್ತವೆ ಮತ್ತು ಉಂಟಾಗುತ್ತವೆ, ಇದು ನಂತರ ನಡವಳಿಕೆ ಮತ್ತು ವರ್ತನೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಈ ಸಿದ್ಧಾಂತ ಸೂಚಿಸುತ್ತದೆ. ಈ ತಾತ್ವಿಕ ವ್ಯವಸ್ಥೆಯು, ಮಾನವನು ಭಾವನಾ ಸರಣಿಗಳನ್ನು -"ಸ್ವಲ್ಪ ಕಾಲದವರೆಗೆ ಇರುವ ಮತ್ತು ನಡವಳಿಕೆಯ ಆಧಾರದಲ್ಲಿ ಉಂಟಾಗುವ ಭಾವನಾ ಸ್ಥಿತಿಗಳ ಒಂದು ಸರಣಿ"- ಅನುಭವಿಸುವ ಕಾಲ ದ ಬಗ್ಗೆಯೂ ಸ್ಪಷ್ಟ ಪಡಿಸುತ್ತದೆ. ಈ ಸಿದ್ಧಾಂತವನ್ನು ಅಭಿವ್ಯಕ್ತಿಶೀಲ ಪಾರದರ್ಶಕತೆಯಿಂದ ಭಾವನೆಯ ಬಗ್ಗೆ ಉತ್ತಮ ರೀತಿಯಲ್ಲಿ ತಿಳಿಯುವುದಕ್ಕಾಗಿ ಹಲವಾರು ಸಂಶೋಧಕರು ಬಳಸಿಕೊಂಡಿದ್ದಾರೆ. ಇದನ್ನು ಹೊವಾರ್ಡ್ M. ವೈಸ್ ಮತ್ತು ಡೇನಿಯಲ್ J. ಬೀಲ್ 2005ರಲ್ಲಿ ರಿಸರ್ಚ್ ಆನ್ ಎಮೋಷನ್ ಇನ್ ಆರ್ಗನೈಸೇಶನ್ಸ್ ನಲ್ಲಿ ಪ್ರಕಟಗೊಂಡ ಅವರ ಲೇಖನ ರಿಫ್ಲೆಕ್ಷನ್ಸ್ ಆನ್ ಎಫೆಕ್ಟಿವ್ ಈವೆಂಟ್ಸ್ ಥಿಯರಿ ಯಲ್ಲಿ ಇನ್ನಷ್ಟು ಪುನಃಪರಿಶೀಲಿಸಿದ್ದಾರೆ.
ಕ್ಯಾನನ್-ಬ್ಯಾರ್ಡ್ ಸಿದ್ಧಾಂತ
[ಬದಲಾಯಿಸಿ]ಕ್ಯಾನನ್-ಬ್ಯಾರ್ಡ್ ಸಿದ್ಧಾಂತದಲ್ಲಿ, ವಾಲ್ಟರ್ ಬ್ರ್ಯಾಡ್‌ಫೋರ್ಡ್ ಕ್ಯಾನನ್ ಭಾವನೆಗಳ ಮಾನಸಿಕ ಅಂಶಗಳಿಗೆ ಸಂಬಂಧಿಸಿದ ಜೇಮ್ಸ್-ಲ್ಯಾಂಗ್ ಸಿದ್ಧಾಂತದ ಪ್ರಾಧಾನ್ಯತೆಯ ವಿರುದ್ಧ ಬಾಡಿಲಿ ಚೇಂಜಸ್ ಇನ್ ಪೈನ್, ಹಂಗರ್, ಫಿಯರ್ ಆಂಡ್ ರೇಜ್ ನ ಎರಡನೆ ಆವೃತ್ತಿಯಲ್ಲಿ ವಾದಿಸಿದ್ದಾನೆ. ಭಾವನಾತ್ಮಕ ವರ್ತನೆಯು ಭಾವನೆಗಿಂತ ಮೊದಲು ಬರುತ್ತದೆ ಅಥವಾ ಅದನ್ನು ನಿರೂಪಿಸುತ್ತದೆ ಎಂದು ಜೇಮ್ಸ್ ಅಭಿಪ್ರಾಯ ಪಟ್ಟರೆ, ಕ್ಯಾನನ್ ಮತ್ತು ಬ್ಯಾರ್ಡ್ ಭಾವನೆಯು ಮೊದಲು ಹುಟ್ಟಿಕೊಂಡು ನಂತರ ಅದು ವಿಶಿಷ್ಟ ವರ್ತನೆಯನ್ನು ಪ್ರೇರೇಪಿಸುತ್ತದೆ ಎಂದು ವಾದಿಸುತ್ತಾರೆ.
ಎರಡು-ಅಂಶಗಳ ಸಿದ್ಧಾಂತ
[ಬದಲಾಯಿಸಿ]ಮತ್ತೊಂದು ಗ್ರಹಿಕೆ ಸಿದ್ಧಾಂತವೆಂದರೆ ಸಿಂಗರ್-ಸ್ಕ್ಯಾಚ್ಟರ್ ಸಿದ್ಧಾಂತ. ಇದು ಅಡ್ರೆನಲಿನ್‌ನ ಒಳಸೇರುವಿಕೆಯೊಂದಿಗೆ, ಒಂದೇ ರೀತಿಯ ಮಾನಸಿಕ ಸ್ಥಿತಿಯಲ್ಲಿಟ್ಟರೂ ವ್ಯಕ್ತಿಗಳು ವಿಭಿನ್ನ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಹೊಂದುತ್ತಾರೆ ಎಂಬುದನ್ನು ತೋರಿಸುವ ಪ್ರಯೋಗಗಳನ್ನು ಆಧರಿಸಿದೆ. ಮತ್ತೊಬ್ಬ ವ್ಯಕ್ತಿಯು ಆ ಸ್ಥಿತಿಯಲ್ಲಿ ಆ ಭಾವನೆಯನ್ನು ವ್ಯಕ್ತಪಡಿಸುತ್ತಾನೆಯೇ ಎಂಬುದನ್ನು ಆಧರಿಸಿ, ವ್ಯಕ್ತಿಗಳು ಕೋಪ ಅಥವಾ ಖುಷಿಯನ್ನು ಪ್ರಕಟಗೊಳಿಸುವುದನ್ನು ಗಮನಿಸಲಾಯಿತು. ಸ್ಥಿತಿಯ ಅಂದಾಜಿಸುವಿಕೆ (ಗ್ರಹಿಕೆ) ಮತ್ತು ಭಾಗವಹಿಸಿದವರ ಅಡ್ರೆನಲಿನ್ ಅಥವಾ ಪ್ಲೇಸೆಬೊದ ಗ್ರಹಣದ ಸಂಯೋಗವು ಒಟ್ಟಿಗೆ ಪ್ರತಿಕ್ರಿಯೆಯನ್ನು ಕಂಡುಹಿಡಿದವು. ಈ ಪ್ರಯೋಗವು ಜೆಸ್ಸೆ ಪ್ರಿಂಜ್‌ನ (2004) ಗಟ್ ರಿಯಾಕ್ಷನ್ಸ್ ನಲ್ಲಿ ಟೀಕಿಸಲ್ಪಟ್ಟಿದೆ.
ಅಂಶಗಳ ಪ್ರಕ್ರಿಯೆ ಮಾದರಿ
[ಬದಲಾಯಿಸಿ]ಗ್ರಹಿಕೆ ಸಿದ್ಧಾಂತದ ಇತ್ತೀಚಿನ ಆವೃತ್ತಿಯು ಭಾವನೆಗಳನ್ನು ಹೆಚ್ಚು ವ್ಯಾಪಕವಾಗಿ ಅನೇಕ ವಿವಿಧ ದೈಹಿಕ ಮತ್ತು ಗ್ರಹಿಕೆ ಅಂಶಗಳ ಸಮನ್ವಯವಾಗಿ ಪರಿಗಣಿಸಿದೆ. ಭಾವನೆಗಳನ್ನು ಒಟ್ಟು ಕ್ರಿಯೆಯಿಂದ ಗುರುತಿಸಲಾಗುತ್ತದೆ. ಆ ಮೂಲಕ ಕಡಿಮೆ-ಮಟ್ಟದ ಗ್ರಹಿಕೆ ಅಂದಾಜಿಸುವಿಕೆಯು, ನಿರ್ದಿಷ್ಟವಾಗಿ ಪ್ರಸಕ್ತಕತೆಯ ಸಂಸ್ಕರಣೆಯು, ದೈಹಿಕ ಪ್ರತಿಕ್ರಿಯೆ, ವರ್ತನೆ, ಭಾವನೆ ಮತ್ತು ಕ್ರಿಯೆಗಳನ್ನು ಪ್ರೇರೇಪಿಸುತ್ತದೆ.
ಶಿಸ್ತಿನ ಕ್ರಮಗಳು
[ಬದಲಾಯಿಸಿ]ಅನೇಕ ರೀತಿಯ ವಿವಿಧ ಶಿಸ್ತುಗಳು ಭಾವನೆಗಳ ಮೇಲೆ ಪರಿಣಾಮ ಬೀರುತ್ತವೆ. ಮಾನವ ವಿಜ್ಞಾನವು ಮಾನಸಿಕ ಕ್ರಿಯೆ, ಕಾಯಿಲೆ ಮತ್ತು ನರವ್ಯೂಹದ ಕಾರ್ಯವಿಧಾನಗಳಲ್ಲಿ ಭಾವನೆಗಳ ಪಾತ್ರದ ಬಗ್ಗೆ ತಿಳಿಸುತ್ತದೆ. ಮನೋವೈದ್ಯ ಶಾಸ್ತ್ರದಲ್ಲಿ, ಭಾವನೆಗಳನ್ನು ಶಿಸ್ತಿನ ಅಧ್ಯಯನದ ಮತ್ತು ಮಾನವರಲ್ಲಿ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆಯ ಭಾಗವಾಗಿ ಪರಿಶೀಲಿಸಲಾಗುತ್ತದೆ. ಮನಶ್ಶಾಸ್ತ್ರವು ವೈಜ್ಞಾನಿಕ ದೃಷ್ಟಿಕೋನದಿಂದ ಭಾವನೆಗಳನ್ನು ಮಾನಸಿಕ ಕ್ರಿಯೆ ಮತ್ತು ವರ್ತನೆಯಾಗಿ ಪರಿಗಣಿಸುವ ಮೂಲಕ ಪರಿಶೀಲಿಸುತ್ತದೆ ಹಾಗೂ ಅದು ಮಾನಸಿಕ ಮತ್ತು ನರವ್ಯೂಹದ ಕ್ರಿಯೆಗಳನ್ನು ಪರಿಶೋಧಿಸುತ್ತದೆ. ಸಾಮಾಜಿಕ ನರವಿಜ್ಞಾನ ಮತ್ತು ಭಾವನಾತ್ಮಕ ನರವಿಜ್ಞಾನದಂತಹ ನರವಿಜ್ಞಾನ ಉಪವಿಭಾಗಗಳಲ್ಲಿ, ವಿಜ್ಞಾನಿಗಳು ನರವಿಜ್ಞಾನವನ್ನು ವ್ಯಕ್ತಿತ್ವ, ಭಾವನೆ ಮತ್ತು ಚಿತ್ತಸ್ಥಿತಿಯ ಮಾನಸಿಕ ಅಧ್ಯಯನದೊಂದಿಗೆ ಒಂದುಗೂಡಿಸಿ ಭಾವನೆಯ ನರವ್ಯೂಹದ ಕಾರ್ಯವಿಧಾನಗಳ ಬಗ್ಗೆ ಅಧ್ಯಯನ ಮಾಡುತ್ತಾರೆ. ಭಾಷಾಧ್ಯಯನದಲ್ಲಿ ಭಾವನೆಯ ವ್ಯಕ್ತಪಡಿಸುವಿಕೆಯು ಧ್ವನಿಗಳ ಅರ್ಥವನ್ನು ಬದಲಾಯಿಸಬಹುದು. ಶಿಕ್ಷಣದಲ್ಲಿ, ಭಾವನೆಗಳ ಪಾತ್ರವನ್ನು ಕಲಿಯಲು ಸಂಬಂಧಿಸಿದಂತೆ ಪರಾಮರ್ಶಿಸಲಾಗುತ್ತದೆ.
ಸಾಮಾಜಿಕ ವಿಜ್ಞಾನವು ಭಾವನೆಯನ್ನು ಮಾನವ ಸಂಸ್ಕೃತಿ ಮತ್ತು ಸಾಮಾಜಿಕ ಪರಸ್ಪರ ಕ್ರಿಯೆಯಲ್ಲಿ ಪಾತ್ರವಹಿಸುವ ಅಂಶವಾಗಿ ಪರಿಶೀಲಿಸುತ್ತದೆ. ಸಮಾಜ ಶಾಸ್ತ್ರದಲ್ಲಿ, ಭಾವನೆಗಳನ್ನು ಮಾನವ ಸಮಾಜ, ಸಾಮಾಜಿಕ ವ್ಯವಸ್ಥೆ ಮತ್ತು ಪರಸ್ಪರ ಕ್ರಿಯೆ ಹಾಗೂ ಸಂಸ್ಕೃತಿಯಲ್ಲಿ ವಹಿಸುವ ಪಾತ್ರಕ್ಕಾಗಿ ಪರೀಕ್ಷಿಸಲ್ಪಡುತ್ತದೆ. ಮಾನವ ಶಾಸ್ತ್ರದಲ್ಲಿ, ಪಂಡಿತರು ಪರಿಸ್ಥಿತಿಯ ವಿಶ್ಲೇಷಣೆಗಾಗಿ ಮತ್ತು ಮಾನವ ಚಟುವಟಿಕೆಗಳ ಮಿಶ್ರ-ಸಂಸ್ಕೃತಿಯ ಹೋಲಿಕೆಗಳನ್ನು ಮಾಡಲು ಜನಾಂಗ ವಿವರಣೆಯನ್ನು ಬಳಸುತ್ತಾರೆ; ಕೆಲವು ಮಾನವ ಶಾಸ್ತ್ರ ಅಧ್ಯಯನಗಳು ಮಾನವ ಚಟುವಟಿಕೆಗಳಲ್ಲಿ ಭಾವನೆಗಳ ಪಾತ್ರವನ್ನು ಪರಿಶೀಲಿಸುತ್ತವೆ. ಸಂವಹನ ವಿಜ್ಞಾನದಲ್ಲಿ, ಸಾಂಸ್ಥಿಕ ಪಂಡಿತರು ಸಂಸ್ಥೆಗಳಲ್ಲಿನ ಭಾವನೆಗಳ ಪಾತ್ರವನ್ನು ನಿರ್ವಾಹಕರ, ಉದ್ಯೋಗಿಗಗಳ ಮತ್ತು ಗ್ರಾಹಕರ ದೃಷ್ಟಿಕೋನದಿಂದ ಪರೀಕ್ಷಿಸುತ್ತಾರೆ. ಸಂಸ್ಥೆಗಳಲ್ಲಿ ಭಾವನೆಗಳ ಮೇಲೆ ಕೇಂದ್ರೀಕರಿಸಲು ಆರ್ಲೀ ರಸ್ಸೆಲ್ ಹಾಚ್ಸ್‌ಚಿಲ್ಡ್‌ನ ಭಾವನಾತ್ಮಕ ಕಾರ್ಮಿಕರ ವಿಷಯವು ಕಾರಣವಾಗಿದೆ. ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾನಿಲಯವು ಈಮೊನೆಟ್ಅನ್ನು[೨೦] ನಡೆಸುತ್ತದೆ. ಇದು ಸಾಂಸ್ಥಿಕ ವ್ಯವಸ್ಥೆಗಳಲ್ಲಿ ಭಾವನೆಯ ಅಧ್ಯಯನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಪಾಂಡಿತ್ಯಪೂರ್ಣ ಚರ್ಚೆಯನ್ನು ನಡೆಸುವ ಶೈಕ್ಷಣಿಕ ಸ್ವರೂಪಗಳ ಜಾಲವನ್ನು ಸೂಚಿಸುವ ಈಮೇಲ್ ಹಂಚಿಕೆಯ ಒಂದು ಪಟ್ಟಿ. ಈ ಪಟ್ಟಿಯು 1997ರ ಜನವರಿಯಲ್ಲಿ ಸ್ಥಾಪಿತವಾಯಿತು ಹಾಗೂ ಪ್ರಪಂಚದಾದ್ಯಂತದ ಸುಮಾರು 700 ಸದಸ್ಯರನ್ನು ಹೊಂದಿದೆ.
ಸರಕು ಮತ್ತು ಸೇವೆಗಳ ಉತ್ಪಾದನೆ, ಹಂಚಿಕೆ ಮತ್ತು ಬಳಕೆಯ ಬಗ್ಗೆ ಅಧ್ಯಯನ ಮಾಡುವ ಸಾಮಾಜಿಕ ವಿಜ್ಞಾನವಾದ ಅರ್ಥಶಾಸ್ತ್ರದಲ್ಲಿ, ಖರೀದಿಸುವ ನಿರ್ಧಾರ ಮಾಡುವಲ್ಲಿ ಮತ್ತು ಅಪಾಯ ಗ್ರಹಿಕೆಯಲ್ಲಿ ಭಾವನೆಗಳ ಪಾತ್ರವನ್ನು ನಿರ್ಣಯಿಸಲು ಸೂಕ್ಷ್ಮಅರ್ಥಶಾಸ್ತ್ರದ ಕೆಲವು ಉಪ-ಕ್ಷೇತ್ರಗಳಲ್ಲಿ ಭಾವನೆಗಳನ್ನು ವಿಶ್ಲೇಷಿಸಲಾಗುತ್ತದೆ. ಅಪರಾಧದ ಬಗ್ಗೆ ಅಧ್ಯಯನ ಮಾಡುವ ಅಪರಾಧ ಶಾಸ್ತ್ರದಲ್ಲಿ, ಪಂಡಿತರು ಹೆಚ್ಚಾಗಿ ಭಾವನಾತ್ಮಕ ವಿಜ್ಞಾನ, ಸಮಾಜ ಶಾಸ್ತ್ರ ಮತ್ತು ಮನಶ್ಶಾಸ್ತ್ರವನ್ನು ಬಳಸಿಕೊಳ್ಳುತ್ತಾರೆ; ಭಾವನೆಗಳನ್ನು ಕಟ್ಟುಪಾಡಿಲ್ಲದಿರುವ ಸಿದ್ಧಾಂತ ಮತ್ತು "ಒರಟಾಗಿರುವಿಕೆಯ" ಅಧ್ಯಯನ, ಆಕ್ರಮಣಶೀಲ ವರ್ತನೆ ಮತ್ತು ಗೂಂಡಾಗಿರಿಯಂತಹ ಅಪರಾಧ ಶಾಸ್ತ್ರದ ಸಮಸ್ಯೆಗಳಲ್ಲಿ ಪರಿಶೀಲಿಸಲಾಗುತ್ತದೆ. ನಾಗರಿಕ ವಿಧೇಯತೆ, ರಾಜಕಾರಣ, ಆರ್ಥಿಕ ವ್ಯವಸ್ಥೆ ಮತ್ತು ಸಮಾಜವನ್ನು ಬಲಪಡಿಸುವ ಕಾನೂನಿನಲ್ಲಿ, ಜನರ ಭಾವನೆಗಳ ಸಾಕ್ಷ್ಯವನ್ನು ಹೆಚ್ಚಾಗಿ ವೈಯಕ್ತಿಕ ಅಪರಾಧ ಕಾನೂನು ಆಪಾದನೆಗಳಲ್ಲಿ ಪರಿಹಾರಕ್ಕಾಗಿ ಮತ್ತು ಅಪರಾಧ ಕಾನೂನು ಆರೋಪದಲ್ಲಿ ಆಪಾದಿತ ಕಾನೂನು-ಉಲ್ಲಂಘಿತರ ವಿರುದ್ಧ (ವಿಚಾರಣೆಯ ಸಂದರ್ಭದಲ್ಲಿ, ಶಿಕ್ಷೆಯನ್ನು ವಿಧಿಸುವಾಗ ಮತ್ತು ಪೆರೋಲ್ ಅವಧಿಯಲ್ಲಿ ಆಪಾದಿತನ ಮನಸ್ಸಿನ ಸ್ಥಿತಿಯ ಆಧಾರದಲ್ಲಿ) ಹೆಚ್ಚಿಸಲಾಗುತ್ತದೆ. ರಾಜಕೀಯ ಶಾಸ್ತ್ರದಲ್ಲಿ, ಭಾವನೆಗಳನ್ನು ಚುನಾವಣೆಯ ನಿರ್ಧಾರ-ಮಾಡುವ ವಿಶ್ಲೇಷಣೆಯಂತಹ ಅನೇಕ ಉಪ-ಕ್ಷೇತ್ರಗಳಲ್ಲಿ ಪರೀಕ್ಷಿಸಲಾಗುತ್ತದೆ.
ತತ್ವಶಾಸ್ತ್ರದಲ್ಲಿ, ಭಾವನೆಗಳನ್ನು ನೈತಿಕತೆ, ಕಲೆಯ ತತ್ವಶಾಸ್ತ (ಉದಾಹರಣೆಗಾಗಿ, ಸಂವೇದನದ-ಭಾವನಾತ್ಮಕ ಮೌಲ್ಯಗಳು ಹಾಗೂ ರುಚಿ ಮತ್ತು ಭಾವುಕತೆಯ ಅಂಶಗಳು), ಮತ್ತು ಸಂಗೀತದ ತತ್ವಶಾಸ್ತ್ರದಂತಹ (ಸಂಗೀತ ಮತ್ತು ಭಾವನೆಯನ್ನೂ ಗಮನಿಸಿ) ಉಪ-ಕ್ಷೇತ್ರಗಳಲ್ಲಿ ಅಧ್ಯಯನ ಮಾಡಲಾಗುತ್ತದೆ. ಚರಿತ್ರೆಯಲ್ಲಿ, ಪಂಡಿತರು ಹಿಂದಿನ ಚಟುವಟಿಕೆಗಳನ್ನು ಅರ್ಥೈಸಿಕೊಳ್ಳಲು ಮತ್ತು ವಿಶ್ಲೇಷಿಸಲು ದಾಖಲೆಗಳನ್ನು ಮತ್ತು ಇತರ ಮೂಲಗಳನ್ನು ಪರಿಶೀಲಿಸುತ್ತಾರೆ. ಐತಿಹಾಸಿಕ ದಾಖಲೆಗಳ ಲೇಖಕರ ಭಾವನಾತ್ಮಕ ಸ್ಥಿತಿಯ ಊಹನೆಯು ಅರ್ಥೈಸುವಿಕೆಯ ಒಂದು ಸಾಧನವಾಗಿದೆ. ಸಾಹಿತ್ಯ ಮತ್ತು ಚಲನಚಿತ್ರ-ತಯಾರಿಕೆಯಲ್ಲಿ, ಭಾವನೆಗಳ ವ್ಯಕ್ತಪಡಿಸುವಿಕೆಯು ನಾಟಕ, ಭಾವಾವೇಶ ನಾಟಕ ಮತ್ತು ರೋಮಾಂಚಕಾರಿಯಂಹ ಪ್ರಕಾರಗಳಲ್ಲಿ ಅತೀ ಮುಖ್ಯ ಅಂಶವಾಗಿದೆ. ಸಂವಹನ ಅಧ್ಯಯನದಲ್ಲಿ, ಪಂಡಿತರು ಭಾವನೆಯು ಚಿಂತನೆ ಮತ್ತು ಮಾಹಿತಿಗಳ ಪ್ರಸಾರದಲ್ಲಿ ವಹಿಸುವ ಪಾತ್ರದ ಬಗ್ಗೆ ಅಧ್ಯಯನ ಮಾಡುತ್ತಾರೆ. ಭಾವನೆಯನ್ನು ಪ್ರಾಣಿಗಳ ವರ್ತನೆಯ ವೈಜ್ಞಾನಿಕ ಅಧ್ಯಯನವನ್ನು ಕೇಂದ್ರೀಕರಿಸುವ ಪ್ರಾಣಿಶಾಸ್ತ್ರದ ಒಂದು ವಿಭಾಗ ಈತಾಲಜಿಯಲ್ಲಿ ಮಾನವರಲ್ಲದ ಪ್ರಾಣಿಗಳಲ್ಲಿಯೂ ಅಧ್ಯಯನ ಮಾಡಲಾಗುತ್ತದೆ. ಈತಾಲಜಿಯು ಪರಿಸರ ವಿಜ್ಞಾನ ಮತ್ತು ವಿಕಸನಕ್ಕೆ ಪ್ರಬಲವಾದ ಸಂಬಂಧ ಹೊಂದಿರುವುದರೊಂದಿಗೆ ಪ್ರಯೋಗಾಲಯ ಮತ್ತು ಕ್ಷೇತ್ರ ವಿಜ್ಞಾನಗಳೆರಡರ ಸಂಯೋಗವಾಗಿದೆ. ಈತನಾಲಜಿಸ್ಟ್‌ಗಳು ಹೆಚ್ಚಾಗಿ ಹಲವಾರು ಸಂಬಂಧವಿಲ್ಲದ ಪ್ರಾಣಿಗಳಲ್ಲಿ ಒಂದು ಪ್ರಕಾರದ ವರ್ತನೆಯನ್ನು (ಉದಾಹರಣೆಗಾಗಿ, ಆಕ್ರಮಣಶೀಲತೆ) ಅಧ್ಯಯನ ಮಾಡುತ್ತಾರೆ.
ವಿಕಾಸಾತ್ಮಕ ಜೀವಶಾಸ್ತ್ರ
[ಬದಲಾಯಿಸಿ]ವಿಕಾಸವಾದದಿಂದ ಭಾವನೆಗಳ ದೃಷ್ಟಿಕೋನಗಳು ಮೊದಲು 19ನೇ ಶತಮಾನದ ಉತ್ತರಾರ್ಧದಲ್ಲಿ ಚಾರ್ಲ್ಸ ಡಾರ್ವಿನ್ನ ಪುಸ್ತಕ ದ ಎಕ್ಸ್‌ಪ್ರೆಶನ್ ಆಫ್ ಎಮೋಶನ್ಸ್ ಇನ್ ಮ್ಯಾನ್ ಆಂಡ್ ಆನಿಮಲ್ಸ್ ಒಂದಿಗೆ ಆರಂಭವಾಯಿತು.[೨೧] ಭಾವನೆಗಳು ನೈಸರ್ಗಿಕ ಆಯ್ಕೆಯಿಂದ ಹುಟ್ಟಿಕೊಂಡಿವೆ, ಆದ್ದರಿಂದ ಅವು ಮಿಶ್ರ-ಸಾಂಸ್ಕೃತಿಕವಾಗಿ ಜಾಗತಿಕ ಪ್ರತಿರೂಪಗಳನ್ನು ಹೊಂದಿವೆ ಎಂಬುದು ಡಾರ್ವಿನ್‌ನ ಮೂಲ ಪ್ರಮೇಯವಾಗಿದೆ. ಪ್ರಾಣಿಗಳು ನಮ್ಮಂತೆಯೇ ಭಾವನೆಗಳನ್ನು ಅನುಭವಿಸುತ್ತವೆ (ಪ್ರಾಣಿಗಳಲ್ಲಿ ಭಾವನೆಯನ್ನು ಗಮನಿಸಿ). ಮಾನವನಲ್ಲಿನ ಸಾರ್ವತ್ರಿಕತ್ವದ ಆಧಾರವನ್ನು ಪಾಲ್ ಏಕ್‌ಮ್ಯಾನ್ನ ಮುಖಭಾವದ ಮೂಲ ಸಂಶೋಧನೆಯು ಒದಗಿಸಿದೆ. ಈ ಕ್ಷೇತ್ರದ ಮತ್ತೊಂದು ಸಂಶೋಧನೆಯು ಪ್ರಾಣಿಗಳ ಮತ್ತು ಮಾನವರ ಆಂಗಿಕ ಭಾಷೆಯನ್ನೂ ಒಳಗೊಂಡಂತೆ ಭಾವನೆಗಳ ದೈಹಿಕ ಪ್ರಕಟಿಸುವಿಕೆಯನ್ನು ಕೇಂದ್ರೀಕರಿಸಿದೆ (ಭಾವನೆ ಪ್ರಕಟಣೆಯನ್ನು ಗಮನಿಸಿ). ನರವ್ಯೂಹದ-ರೂಪಿಸುವಿಕೆಯ ಪ್ರಬಲತೆ ಹೆಚ್ಚಾಗುವಿಕೆಯೂ, ಮಿದುಳಿನ ವಿಕಾಸಾತ್ಮಕ ಪುರಾತನ ಭಾಗಗಳ ಪರಿಶೀಲನೆಗೆ ಅವಕಾಶ ಕಲ್ಪಿಸಿತು. ಈ ದೃಷ್ಟಿಕೋನಗಳಿಂದ ಪ್ರಮುಖ ನರವ್ಯೂಹದ ಸುಧಾರಣೆಗಳು 1990ರಲ್ಲಿ, ಉದಾಹರಣೆಗಾಗಿ, ಜಾಸೆಫ್ E. ಲಿಡೌಕ್ಸ್ ಮತ್ತು ಆಂಟೋನಿಯೊ ಡ್ಯಾಮಾಸಿಯೊರಿಂದ ಮಾಡಲ್ಪಟ್ಟಿತು.
ಅಮೆರಿಕಾದ ವಿಕಾಸನದ ಜೀವಶಾಸ್ತ್ರಜ್ಞ ರಾಬರ್ಟ್ ಟ್ರೈವರ್ಸ್, ನಡತೆಯ ಭಾವನೆಗಳು ಪರಸ್ಪರ ಪರಹಿತ ಚಿಂತನೆ ನೀತಿಯನ್ನು ಆಧರಿಸಿವೆ ಎಂದು ವಾದಿಸುತ್ತಾನೆ. ಗುಂಪು ಆಯ್ಕೆಯ ಕಲ್ಪನೆಯು ನಿರ್ದಿಷ್ಟ ಪ್ರಸಕ್ತಕತೆಯಾಗಿದೆ. ಭಿನ್ನ ಭಾವನೆಗಳು ಬೇರೆ ಬೇರೆ ಪರಸ್ಪರ-ಪರಿಣಾಮಗಳನ್ನು ಹೊಂದಿರುತ್ತವೆ ಎಂದು ಈ ಸಿದ್ಧಾಂತವು ಸೂಚಿಸುತ್ತದೆ. ಅನುಕಂಪವು ವ್ಯಕ್ತಿಯನ್ನು ನಿರ್ದಿಷ್ಟವಾಗಿ ನೆರವಿನ ಅಗತ್ಯದಲ್ಲಿರುವವನಿಗೆ ಮೊದಲು ಸಹಾಯವನ್ನು ಒದಗಿಸುವಂತೆ ಪ್ರೇರೇಪಿಸುತ್ತದೆ. ಕೋಪವು ಪ್ರತಿಯಾಗಿ ನೀಡದೆ ನೆರವನ್ನು ಸ್ವೀಕರಿಸುವ ವಂಚಕರಿಂದ ರಕ್ಷಿಸುತ್ತದೆ. ಇದು ಕೃತಘನನ್ನು ಶಿಕ್ಷಿಸಲು ಅಥವಾ ಸಂಬಂಧವನ್ನು ಕೆಡಿಸಿಕೊಳ್ಳಲು ಬಯಸುವಂತೆ ಮಾಡುತ್ತದೆ. ಕೃತಜ್ಞತೆಯು ಫಲಾನುಭವಿಯನ್ನು ಹಿಂದೆ ಸಹಾಯ ಮಾಡಿದವರನ್ನು ನೆನಪಿಸಿಕೊಳ್ಳುವಂತೆ ಪ್ರಚೋದಿಸುತ್ತದೆ. ಅಂತಿಮವಾಗಿ, ಅಪರಾಧಿ ಮನೋಭಾವನೆಯು ಪತ್ತೆ ಹಚ್ಚಲ್ಪಡುವ ಅಪಾಯದಲ್ಲಿರುವ ವಂಚಕರನ್ನು ಪ್ರೇರೇಪಿಸುತ್ತದೆ. ಇದು ಅವರನ್ನು, ಅಪರಾಧವನ್ನು ಸರಿಪಡಿಸುವ ಮೂಲಕ ಸಂಬಂಧವನ್ನು ಮತ್ತೆ ಪೂರ್ವಸ್ಥಿತಿಗೆ ತರಲು ಬಯಸುವಂತೆ ಮಾಡುತ್ತದೆ. ತಪ್ಪಿತಸ್ಥ ಭಾವನೆಯು, ಭವಿಷ್ಯದಲ್ಲಿ ಉತ್ತಮ ರೀತಿಯಲ್ಲಿ ವರ್ತಿಸುತ್ತಾರೆಂದು ಮಾತು ಕೊಡಲು ಅಥವಾ ಪ್ರಕಟಪಡಿಸಲು ನಿಗ್ರಹಿಸಲ್ಪಟ್ಟ ವಂಚಕರನ್ನು ಪ್ರೇರೇಪಿಸುತ್ತದೆ.
ಸಮಾಜಶಾಸ್ತ್ರ
[ಬದಲಾಯಿಸಿ]ನಾವು ನಮ್ಮ ಭಾವನೆಗಳನ್ನು ರೂಢಿಯ ಪರಿಸ್ಥಿತಿಯೊಂದಿಗೆ ಸರಿಹೊಂದುವಂತೆ, ಅನೇಕ ವಿವಿಧ ಅಂಶಗಳಿಂದ ಹುಟ್ಟಿಕೊಳ್ಳುವ ನಮ್ಮ ಮೇಲಿನ ಅನೇಕ ಬೇಡಿಕೆಗಳನ್ನು ಆಧರಿಸಿ, ನಿಯಂತ್ರಿಸಲು ಪ್ರಯತ್ನಿಸುತ್ತೇವೆ. ಇದನ್ನು ಸಮಾಜಶಾಸ್ತ್ರದಿಂದ ಸೂಕ್ಷ್ಮ ಮಟ್ಟದಲ್ಲಿ-ಪ್ರತಿದಿನದ ಸಮಾಜಿಕ ಸಂವಹನಗಳು ಮತ್ತು ಪರಿಸ್ಥಿತಿಗಳು ರೂಪುಗೊಳ್ಳುವ ಸಮಾಜ ಪಾತ್ರ ಮತ್ತು 'ಭಾವನಾತ್ಮಕ ನಿಯಮ'ಗಳಿಂದ ಹಾಗೂ ಬೃಹತ್ ಮಟ್ಟದಲ್ಲಿ-ಸಾಮಾಜಿಕ ಸಂಸ್ಥೆಗಳು, ಸಂಭಾಷಣೆ, ಆಲೋಚನಾ ಸರಣಿಗಳು ಇತ್ಯಾದಿಗಳಿಂದ ಅಧ್ಯಯನ ಮಾಡಲಾಗುತ್ತದೆ. ಉದಾಹರಣೆಗಾಗಿ, ಆಧುನಿಕ ವಿವಾಹವು ಒಂದು ದೃಷ್ಟಿಕೋನದಲ್ಲಿ, ಪ್ರೀತಿಯ ಭಾವನೆಯನ್ನು ಆಧರಿಸಿರುತ್ತದೆ ಹಾಗೂ ಮತ್ತೊಂದು ದೃಷ್ಟಿಕೋನದಲ್ಲಿ, ಗಾಢ ಭಾವನೆಯು ಅದನ್ನು ನಿರ್ವಹಿಸುತ್ತದೆ ಮತ್ತು ಅದರಿಂದ ನಿಯಂತ್ರಿಸಲ್ಪಡುತ್ತದೆ. ಭಾವನೆಗಳ ಸಮಾಜಶಾಸ್ತ್ರವು ಜನರಲ್ಲಿನ ಸಾಮಾನ್ಯ ವರ್ತನೆ ಬದಲಾವಣೆಯನ್ನೂ ಕೇಂದ್ರೀಕರಿಸುತ್ತದೆ. ಭಾವನಾತ್ಮಕ ಆಕರ್ಷಣೆಗಳು ಸಾಮಾನ್ಯವಾಗಿ ಜಾಹೀರಾತು, ಆರೋಗ್ಯ ಕಾರ್ಯಾಚರಣೆ ಮತ್ತು ರಾಜಕೀಯ ಸಂದೇಶಗಳಲ್ಲಿ ಕಂಡುಬರುತ್ತವೆ. ಇತ್ತೀಚಿನ ಉದಾಹರಣೆಗಳೆಂದರೆ - ಧೂಮಪಾನ ಮಾಡಬಾರದ ಆರೋಗ್ಯ ಕಾರ್ಯಾಚರಣೆಗಳು ಮತ್ತು ಭಯೋತ್ಪಾದನೆಯ ಭಯದ ಬಗ್ಗೆ ಒತ್ತಿಹೇಳುವ ರಾಜಕೀಯ ಕಾರ್ಯಾಚರಣೆಗಳ ಜಾಹೀರಾತು.
ಮಾನಸಿಕ ಚಿಕಿತ್ಸೆ
[ಬದಲಾಯಿಸಿ]ನಿರ್ದಿಷ್ಟ ಶಾಲೆಯ, ಭಾವನೆಯ ಗ್ರಹಿಕೆಯ ಅಂಶ, ದೈಹಿಕ ಶಕ್ತಿ ಪ್ರಕಟಿಸುವಿಕೆ ಅಥವಾ ಭಾವನೆಯ ಸಾಂಕೇತಿಕ ಚಲನೆ ಮತ್ತು ಮುಖಭಾವದ ಅಂಶಗಳ ಮೇಲಿನ ಸಾಮಾನ್ಯ ಪ್ರಬಲತೆಯನ್ನು ಆಧರಿಸಿ,[೨೨] ಮಾನಸಿಕ ಚಿಕಿತ್ಸೆಗಳ ಬೇರೆ ಬೇರೆ ಶಾಲೆಗಳು ಮಾನವನ ಭಾವನೆಗಳನ್ನು ಭಿನ್ನವಾಗಿ ಪಡೆಯುತ್ತವೆ. ಉದಾಹರಣೆಗಾಗಿ, ಪುನರ್ಮೌಲ್ಯಮಾಪನ ಸಮಾಲೋಚನೆ ನಡೆಸುವ ಶಾಲೆಗಳು, ವೇದನೆಯ ಭಾವನೆಗಳು ಅವುಗಳನ್ನು "ಹೊರಗೆ ವ್ಯಕ್ತಪಡಿಸುವುದರಿಂದ" -ಅಂದರೆ ಅಳುವುದು, ನಗುವುದು, ಕಳವಳಗೊಳ್ಳುವುದು, ನಡುಗುವುದು, ಕಂಪಿಸುವುದು- ಕಡಿಮೆಯಾಗುತ್ತವೆ ಎಂದು ಸೂಚಿಸುತ್ತವೆ;[೨೩] ಇತರ ಹೆಚ್ಚು ಗ್ರಹಿಕೆಯನ್ನು ಆಧರಿಸಿದ ಶಾಲೆಗಳು ಅವುಗಳ ವಿವೇಚನಾಶೀಲ ಭಾವೋತ್ತೇಜಕ ವರ್ತನೆಯ ಚಿಕಿತ್ಸೆಯಂತಹ ಗ್ರಹಿಕೆ ಅಂಶಗಳ ಮೂಲಕ ಅದನ್ನು ಸಾಧಿಸುತ್ತವೆ. ಇತರೆಗಳು ಭಾವನೆಗಳನ್ನು ಸಾಂಕೇತಿಕ ಚಲನೆ ಮತ್ತು ಮುಖಭಾವದ ಮೂಲಕ ತಲುಪುತ್ತವೆ (ಆಧುನಿಕ ಗೆಸ್ಟಾಲ್ಟ್ ಚಿಕಿತ್ಸೆಯಲ್ಲಿರುವಂತೆ).[೨೪]
ಕಂಪ್ಯೂಟರ್ ವಿಜ್ಞಾನ
[ಬದಲಾಯಿಸಿ]2000ರಲ್ಲಿ, ಕಂಪ್ಯೂಟರ್ ವಿಜ್ಞಾನ, ಎಂಜಿನಿಯರಿಂಗ್, ಮನಶ್ಶಾಸ್ತ್ರ ಮತ್ತು ನರವಿಜ್ಞಾನದ ಸಂಶೋಧನೆಯು ಮಾನವನ ಭಾವನೆಯ ವ್ಯಕ್ತಪಡಿಸುವಿಕೆಯನ್ನು ಮತ್ತು ಮಾದರಿ ಭಾವನೆಗಳನ್ನು ಕಂಡುಹಿಡಿಯುವ ಸಾಧನಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿವೆ.[೨೫] ಕಂಪ್ಯೂಟರ್ ವಿಜ್ಞಾನದಲ್ಲಿ, ಭಾವನಾತ್ಮತೆಯ ಗಣನೆ ಮಾಡುವಿಕೆಯು ಮಾನವನ ಭಾವನೆಗಳನ್ನು ಪತ್ತೆ ಹಚ್ಚುವ, ಅರ್ಥ ವಿವರಿಸುವ ಮತ್ತು ಸಂಸ್ಕರಿಸುವ ವ್ಯವಸ್ಥೆಗಳ ಮತ್ತು ಸಾಧನಗಳ ವಿನ್ಯಾಸಕ್ಕೆ ಸಂಬಂಧಿಸಿದ ಕೃತಕ ಬುದ್ಧಿಶಕ್ತಿಯ ಅಧ್ಯಯನ ಮತ್ತು ಅಭಿವೃದ್ಧಿಯ ಒಂದು ವಿಭಾಗವಾಗಿದೆ. ಇದು ಕಂಪ್ಯೂಟರ್ ವಿಜ್ಞಾನ, ಮನಶ್ಶಾಸ್ತ್ರ ಮತ್ತು ಗ್ರಹಿಕೆ ವಿಜ್ಞಾನಗಳನ್ನು ವ್ಯಾಪಿಸಿಕೊಂಡಿರುವ ಅಂತರ ಶಾಸ್ತ್ರೀಯ ಕ್ಷೇತ್ರವಾಗಿದೆ.[೨೬] ಈ ಕ್ಷೇತ್ರದ ಮೂಲವು ಭಾವನೆಯ ಆರಂಭಿಕ ತಾತ್ವಿಕ ಪರಿಶೀಲನೆಗಳಷ್ಟು ಹಿಂದಿನದಾಗಿದೆ.[೨೭] ಕಂಪ್ಯೂಟರ್ ವಿಜ್ಞಾನದ ಹೆಚ್ಚು ಆಧುನಿಕ ವಿಭಾಗವು ರೊಸಲಿಂಡ್ ಪಿಕಾರ್ಡ್‌ನ ಭಾವನಾತ್ಮಕತೆಯ ಗಣನೆ ಮಾಡುವಿಕೆಯ ಬಗೆಗಿನ 1995ರ ಲೇಖನ[೨೮] ದಿಂದ ಹುಟ್ಟಿಕೊಂಡಿದೆ.[೨೯][೩೦] ಭಾವನಾತ್ಮಕ ಮಾಹಿತಿಯ ಕಂಡುಹಿಡಿಯುವಿಕೆಯು ಜಡ ಸಂವೇದಕಗಳಿಂದ ಆರಂಭಗೊಳ್ಳುತ್ತದೆ. ಇವು ಬಳಕೆದಾರರ ದೈಹಿಕ ಸ್ಥಿತಿ ಅಥವಾ ವರ್ತನೆಯ ಬಗ್ಗೆ ಮಾಹಿತಿಯನ್ನು ಇನ್‌ಪುಟ್ಅನ್ನು ಪ್ರಕಟಿಸದೆ ಸೆರೆಹಿಡಿಯುತ್ತವೆ. ಹೀಗೆ ಪಡೆಯಲಾದ ಮಾಹಿತಿಯು ಮಾನವರು ಇತರರ ಭಾವನೆಗಳನ್ನು ಅರಿಯಲು ಬಳಸುವ ಪ್ರಚೋದನೆಗಳನ್ನು ಹೋಲುತ್ತದೆ. ಭಾವನಾತ್ಮಕತೆಯ ಗಣನೆ ಮಾಡುವಿಕೆಯಲ್ಲಿರುವ ಮತ್ತೊಂದು ಕ್ಷೇತ್ರವೆಂದರೆ ಆಂತರಿಕ ಭಾವನಾತ್ಮಕ ಸಾಮರ್ಥ್ಯಗಳನ್ನು ಅಥವಾ ಮನವೊಪ್ಪಿಸುವಂತೆ ಅನುಕರಿಸುವ ಶಕ್ತಿಯನ್ನು ಹೊಂದಿರುವ ಭಾವನೆಗಳನ್ನು ಪ್ರಕಟಿಸಲು ಸೂಚಿಸಿದ ಗಣನೆ ಮಾಡುವ ಸಾಧನಗಳ ವಿನ್ಯಾಸ. ಭಾವನಾತ್ಮಕ ಮಾತಿನ ಪ್ರಕ್ರಿಯೆಯು ಬಳಕೆದಾರರ ಭಾವನಾತ್ಮಕ ಸ್ಥಿತಿಯನ್ನು ಮಾತಿನ ಮಾದರಿಗಳನ್ನು ವಿಶ್ಲೇಷಿಸುವ ಮೂಲಕ ಕಂಡುಹಿಡಿಯುತ್ತದೆ. ಮುಖಭಾವ ಅಥವಾ ದೈಹಿಕ ಭಾವಸೂಚಕಗಳ ಕಂಡುಹಿಡಿಯುವಿಕೆ ಮತ್ತು ಪ್ರಕ್ರಿಯೆಯನ್ನು ಶೋಧಕ ಮತ್ತು ಸಂವೇದಕಗಳಿಂದ ಮಾಡಲಾಗುತ್ತದೆ.
ಪ್ರಸಿದ್ಧ ತಾತ್ವಿಕ ಸಿದ್ಧಾಂತಿಗಳು
[ಬದಲಾಯಿಸಿ]ಹತ್ತೊಂಭತ್ತನೇ ಶತಮಾನದ ಉತ್ತರಾರ್ಧದಲ್ಲಿದ್ದ ಹೆಚ್ಚು ಪ್ರಭಾವಶಾಲಿ ತಾತ್ವಿಕ ಸಿದ್ಧಾಂತಿಗಳೆಂದರೆ ವಿಲಿಯಂ ಜೇಮ್ಸ್ (1842–1910) ಮತ್ತು ಕಾರ್ಲ್ ಲ್ಯಾಂಗ್ (1834–1900). ಅಮೆರಿಕಾದ ಮನಶ್ಶಾಸ್ತ್ರಜ್ಞ ಮತ್ತು ತತ್ವಜ್ಞಾನಿಯಾದ ಜೇಮ್ಸ್ ಶೈಕ್ಷಣಿಕ ಮನಶ್ಶಾಸ್ತ್ರ, ಧಾರ್ಮಿಕ ಅನುಭವದ/ಆಧ್ಯಾತ್ಮ ಜ್ಞಾನದ ಮನಶ್ಶಾಸ್ತ್ರ ಮತ್ತು ವ್ಯಾವಹಾರಿಕ ಮನಶ್ಶಾಸ್ತ್ರದ ಬಗ್ಗೆ ಬರೆದಿದ್ದಾನೆ. ಲ್ಯಾಂಗ್ ಒಬ್ಬ ಡ್ಯಾನಿಶ್ ವೈದ್ಯ ಮತ್ತು ಮನಶ್ಶಾಸ್ತ್ರಜ್ಞ. ಸ್ವಸಂತ್ರವಾಗಿ ಕೆಲಸ ಮಾಡುತ್ತಾ ಅವರು, ಭಾವನೆಗಳ ಮೂಲ ಮತ್ತು ಗುಣಲಕ್ಷಣಗಳ ಬಗೆಗಿನ ಒಂದು ಆಧಾರ ಕಲ್ಪನೆ ಜೇಮ್ಸ್-ಲ್ಯಾಂಗ್ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದರು. ಈ ಸಿದ್ಧಾಂತವು ಮಾನವನಲ್ಲಿ ಸುತ್ತಮುತ್ತಲಿನಿಂದ ಆಗುವ ಅನುಭವಗಳಿಗೆ ಪ್ರತಿಕ್ರಿಯೆಯಾಗಿ ಸ್ವನಿಯಂತ್ರಿತ ನರವ್ಯೂಹವು ಸ್ನಾಯುವಿನ ಉದ್ವೇಗ, ಹೃದಯ ಬಡಿತದ ಏರಿಕೆ, ಬೆವರಿಕೆ ಮತ್ತು ಬಾಯಿ ಒಣಗುವಿಕೆಯಂತಹ ಮಾನಸಿಕ ಕ್ರಿಯೆಗಳನ್ನು ಉಂಟುಮಾಡುತ್ತದೆ ಎಂದು ಹೇಳುತ್ತದೆ. ಭಾವನೆಗಳು ಅವುಗಳ ಕಾರಣದಿಂದಲ್ಲದೆ ಈ ಮಾನಸಿಕ ಬದಲಾವಣೆಗಳಿಂದಾಗಿ ಪ್ರಕಟಿಸಲ್ಪಡುತ್ತವೆ.
ಇಪ್ಪತ್ತನೇ ಶತಮಾನದ ಭಾವನೆಯ ಬಗೆಗಿನ ಹೆಚ್ಚು ಪ್ರಭಾವಶಾಲಿ ತಾತ್ವಿಕ ಸಿದ್ಧಾಂತಿಗಳಲ್ಲಿ ಕೆಲವರು ಕಳೆದ ದಶಕದಲ್ಲಿ ತೀರಿಕೊಂಡರು. ಅವರೆಂದರೆ - ಭಾವನೆಗಳ ಅಂದಾಜಿಸುವಿಕೆ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದ ಅಮೆರಿಕಾದ ಮನಶ್ಶಾಸ್ತ್ರಜ್ಞ ಮ್ಯಾಗ್ದಾ B. ಆರ್ನಾಲ್ಡ್ (1903–2002); ವಿಶೇಷವಾಗಿ ಗ್ರಹಿಕೆಗೆ ಸಂಬಂಧಿಸಿದಂತೆ ಭಾವನೆ ಮತ್ತು ಒತ್ತಡದಲ್ಲಿ ಪರಿಣಿತನಾದ ಅಮೆರಿಕಾದ ಮನಶ್ಶಾಸ್ತ್ರಜ್ಞ ರಿಚಾರ್ಡ್ ಲಜಾರಸ್ (1922–2002); ಭಾವನೆಗಳನ್ನು ನಿರ್ಣಯ-ಮಾಡುವಲ್ಲಿ ಮತ್ತು ಕೃತಕ ಬುದ್ಧಿಶಕ್ತಿಯಲ್ಲಿ ಸೇರಿಸಿದ ಹರ್ಬರ್ಟ್ ಸೈಮನ್ (1916–2001); ಭಾವನೆಯ ಮಾನಸಿಕ-ವಿಕಾಸಾತ್ಮಕ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದ ಅಮೆರಿಕಾದ ಮನಶ್ಶಾಸ್ತ್ರಜ್ಞ ರಾಬರ್ಟ್ ಪ್ಲಟ್ಚಿಕ್ (1928–2006); ಸಾಮಾಜಿಕ ಸುಲಭಗೊಳಿಸುವಿಕೆಯಂತಹ ಸಮಾಜ ಮತ್ತು ಗ್ರಹಿಕೆ ಪ್ರಕ್ರಿಯೆಗಳಲ್ಲಿ ಪರಿಣಿತನಾದ ಪೋಲಿಷ್-ಅಮೆರಿಕನ್ ಸಾಮಾಜಿಕ ಮನಶ್ಶಾಸ್ತ್ರಜ್ಞ ರಾಬರ್ಟ್ ಜ್ಯಜಾಂಕ್ (1923–2008). ಹೆಚ್ಚುವರಿಯಾಗಿ, ಅಮೆರಿಕಾದ ತತ್ವಶಾಸ್ತ್ರಜ್ಞ ರಾಬರ್ಟ್ C. ಸೋಲೊಮನ್ (1942–2007), ವಾಟ್ ಈಸ್ ಆನ್ ಎಮೋಷನ್?: ಕ್ಲಾಸಿಕ್ ಆಂಡ್ ಕಂಟೆಂಪರರಿ ರೀಡಿಂಗ್ಸ್ (ಆಕ್ಸ್‌ಫರ್ಡ್, 2003)ನಂತಹ ಪುಸ್ತಕಗಳೊಂದಿಗೆ ಭಾವನೆಗಳ ತತ್ವಶಾಸ್ತ್ರದ ಬಗೆಗಿನ ಸಿದ್ಧಾಂತಗಳಿಗೆ ಕೊಡುಗೆಯನ್ನು ನೀಡಿದ್ದಾನೆ.
ಮನಶ್ಶಾಸ್ತ್ರಜ್ಞರು, ನರತಜ್ಞರು ಮತ್ತು ತತ್ವಶಾಸ್ತ್ರಜ್ಞರನ್ನು ಒಳಗೊಂಡ ಈಗಲೂ ಸಕ್ರಿಯವಾಗಿರುವ ಪ್ರಭಾವಶಾಲಿ ತಾತ್ವಿಕ ಸಿದ್ಧಾಂತಿಗಳೆಂದರೆ:
- ಲಿಸಾ ಫೆಲ್ಡ್ಮ್ಯಾನ್ ಬ್ಯಾರೆಟ್ - ಭಾವನಾತ್ಮಕ ವಿಜ್ಞಾನ ಮತ್ತು ಮಾನವ ಭಾವನೆಯಲ್ಲಿ ಪರಿಣಿತನಾಗಿರುವ ಸಾಮಾಜಿಕ ತತ್ವಜ್ಞಾನಿ ಮತ್ತು ಮನಶ್ಶಾಸ್ತ್ರಜ್ಞ.
- ಜಾನ್ ಕ್ಯಾಸಿಯೊಪ್ಪೊ - ಚಿಕಾಗೊ ವಿಶ್ವವಿದ್ಯಾನಿಲಯದವನಾದ ಈತನು ಗ್ಯಾರಿ ಬರ್ನ್ಸ್ಟನ್ನೊಂದಿಗೆ ಸಾಮಾಜಿಕ ನರವಿಜ್ಞಾನದ ಸ್ಥಾಪಕನಾಗಿದ್ದಾನೆ.
- ಆಂಟೋನಿಯೊ ಡ್ಯಮಾಸಿಯೊ (1944- ) - USನಲ್ಲಿ ಕೆಲಸ ಮಾಡುತ್ತಿರುವ ಪೋರ್ಚುಗೀಸ್ ವರ್ತನೆಯ ನರತಜ್ಞ ಮತ್ತು ನರವಿಜ್ಞಾನಿ.
- ರಿಚಾರ್ಡ್ ಡೇವಿಡ್ಸನ್ (1951- ) - ಅಮೆರಿಕಾದ ಮನಶ್ಶಾಸ್ತ್ರಜ್ಞ ಮತ್ತು ನರವಿಜ್ಞಾನಿ; ಭಾವನಾತ್ಮಕ ನರವಿಜ್ಞಾನದ ಮೂಲಶೋಧಕ.
- ಪಾಲ್ ಏಕ್ಮ್ಯಾನ್ (1934- ) - ಭಾವನೆಗಳ ಅಧ್ಯಯನದಲ್ಲಿ ಮತ್ತು ಮುಖಭಾವದೊಂದಿಗಿನ ಅವುಗಳ ಸಂಬಂಧದಲ್ಲಿ ಪರಿಣಿತನಾಗಿರುವ ಮನಶ್ಶಾಸ್ತ್ರಜ್ಞ
- ಬಾರ್ಬರ ಫ್ರೆಡ್ರಿಕ್ಸನ್ - ಭಾವನೆಗಳಲ್ಲಿ ಮತ್ತು ಧನಾತ್ಮಕ ಮನಶ್ಶಾಸ್ತ್ರದಲ್ಲಿ ತಜ್ಞನಾಗಿರುವ ಸಾಮಾಜಿಕ ಮನಶ್ಶಾಸ್ತ್ರ.
- ನಿಕೊ ಫ್ರಿಜ್ಡಾ (1927- ) - ಮಾನವನ ಭಾವನೆಗಳಲ್ಲಿ ವಿಶೇಷವಾಗಿ ಮುಖಭಾವದಲ್ಲಿ ಪರಿಣಿತನಾಗಿರುವ ಡಚ್ ಮನಶ್ಶಾಸ್ತ್ರಜ್ಞ
- ಪೀಟರ್ ಗೋಲ್ಡೀ - ನೀತಿಶಾಸ್ತ್ರ, ಸೌಂದರ್ಯಶಾಸ್ತ್ರ, ಭಾವನೆ, ಚಿತ್ತಸ್ಥಿತಿ ಮತ್ತು ಗುಣದಲ್ಲಿ ಪರಿಣಿತನಾಗಿರುವ ಬ್ರಿಟಿಷ್ ತತ್ವಶಾಸ್ತ್ರಜ್ಞ
- ಆರ್ಲೀ ರಸ್ಸೆಲ್ ಹಾಚ್ಸ್‌ಚಿಲ್ಡ್ (1940- ) - ಸಾಮಾಜಿಕ ಜೀವನದಲ್ಲಿ ಭಾವನೆಗಳ ಪ್ರಕಟಣೆ ಮತ್ತು ಸಮಾಜದೊಳಗೆ ಆಧುನಿಕ ಬಂಡವಾಳಶಾಹಿಯಿಂದ ಕಳೆದುಕೊಳ್ಳುವ ಹೆಚ್ಚಿನ ಶೈಲಿಗಳ ಮಧ್ಯೆ ಸಂಪರ್ಕ ಕಲ್ಪಿಸುವಲ್ಲಿ ಪ್ರಮುಖ ಕೊಡುಗೆಯನ್ನು ನೀಡಿದ ಅಮೆರಿಕಾದ ಸಮಾಜಶಾಸ್ತ್ರಜ್ಞ.
- ಜೋಸೆಫ್ E. ಲಿಡೌಕ್ಸ್ (1949- ) - ನೆನಪು ಮತ್ತು ಭಾವನೆಯ, ವಿಶೇಷವಾಗಿ ಭಯದ, ಜೀವವಿಜ್ಞಾನದ ಆಧಾರವನ್ನು ಅಧ್ಯಯನ ಮಾಡುವ ಅಮೆರಿಕಾದ ನರವಿಜ್ಞಾನಿ.
- ಜ್ಯಾಕ್ ಪ್ಯಾಂಕ್ಸೆಪ್ 1943- ) - ಎಸ್ಟೋನಿಯನ್-ಜನ್ಯ ಅಮೆರಿಕಾದ ಮನಶ್ಶಾಸ್ತ್ರಜ್ಞ, ಮಾನಸಿಕ-ಜೀವಶಾಸ್ತ್ರಜ್ಞ ಮತ್ತು ನರವಿಜ್ಞಾನಿ; ಭಾವನಾತ್ಮಕ ನರವಿಜ್ಞಾನದ ಮೂಲಶೋಧಕ.
- ಜೆಸ್ಸೆ ಪ್ರಿಂಜ್ - ಭಾವನೆ, ನೈತಿಕ ಮನಶ್ಶಾಸ್ತ್ರ, ಸೌಂದರ್ಯಶಾಸ್ತ್ರ ಮತ್ತು ಪ್ರಜ್ಞೆಯಲ್ಲಿ ಪರಿಣಿತನಾಗಿರುವ ಅಮೆರಿಕಾದ ತತ್ವಜ್ಞಾನಿ
- ಕ್ಲಾಸ್ ಸ್ಕೆರೆರ್ (1943- ) - ಸ್ವಿಸ್ ಮನಶ್ಶಾಸ್ತ್ರಜ್ಞ ಮತ್ತು ಜಿನೇವಾದಲ್ಲಿರುವ ಸ್ವಿಸ್ ಸೆಂಟರ್ ಫಾರ್ ಅಫೆಕ್ಟಿವ್ ಸೈನ್ಸಸ್ನ ನಿರ್ದೇಶಕ; ಈತನು ಭಾವನೆಯ ಮನಶ್ಶಾಸ್ತ್ರದಲ್ಲಿ ಪರಿಣಿತನಾಗಿದ್ದಾನೆ.
- ರೊನಾಲ್ಡ್ ಡಿ ಸೌಸ (1940- ) - ಭಾವನೆಗಳ ತತ್ವಶಾಸ್ತ್ರ, ಮನಸ್ಸಿನ ತತ್ವಶಾಸ್ತ್ರ ಮತ್ತು ಜೀವಶಾಸ್ತ್ರದ ತತ್ವಶಾಸ್ತ್ರದಲ್ಲಿ ತಜ್ಞನಾಗಿರುವ ಇಂಗ್ಲಿಷ್-ಕೆನಡಿಯನ್ ತತ್ವಜ್ಞಾನಿ.
ಇವನ್ನೂ ಗಮನಿಸಿ
[ಬದಲಾಯಿಸಿ]
|
ಆಕರಗಳು
[ಬದಲಾಯಿಸಿ]ಟಿಪ್ಪಣಿಗಳು
[ಬದಲಾಯಿಸಿ]- ↑ ಭಾವನೆಯ ಭಾವನಾತ್ಮಕ ಸಾಮರ್ಥ್ಯತೆಯ ಚರ್ಚೆ
- ↑ "ಎಮೋಷನಲ್ ಆಲ್ಕೆಮಿ: ಹೌ ದ ಮೈಂಡ್ ಕ್ಯಾನ್ ಹೀಲ್ ದ ಹಾರ್ಟ್ ಬೈ ಟ್ಯಾರ-ಬೆನ್ನೆಟ್ ಗೋಲ್‌ಮ್ಯಾನ್"
- ↑ ಪೀಠಿಕೆಗಾಗಿ ಫಿಲಿಪ್ ಫಿಶರ್‌ನ (1999) ವಂಡರ್, ದ ರೈನ್‌ಬೊ ಆಂಡ್ ದ ಆಸ್ಥೆಟಿಕ್ಸ್ ಆಫ್ ರೇರ್ ಎಕ್ಸ್‌ಪೀರಿಯನ್ಸಸ್ ಅನ್ನು ಗಮನಿಸಿ
- ↑ ಉದಾಹರಣೆಗಾಗಿ ಆಂಟೋನಿಯೊ ಡ್ಯಾಮ್ಯಾಸಿಯೊನ (2005) ಲುಕಿಂಗ್ ಫಾರ್ ಸ್ಪಿನೋಜ ವನ್ನು ಗಮನಿಸಿ.
- ↑ ಜೇಮ್ಸ್, ವಿಲಿಯಂ, 1884. “ವಾಟ್ ಈಸ್ ಆನ್ ಎಮೋಷನ್?” ಮೈಂಡ್ , 9: 188–205.
- ↑ ಲೈರ್ಡ್, ಜೇಮ್ಸ್, ಫೀಲಿಂಗ್ಸ್: ದ ಪರ್ಸೆಪ್ಶನ್ ಆಫ್ ಸೆಲ್ಫ್ , ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್
- ↑ jstor.com, ಕಾರ್ನೆಲಿಯಸ್ L. ಗೊಲಿಟ್ಲಿ, ದ ಜೇಮ್ಸ್-ಲ್ಯಾಂಗ್ ಥಿಯರಿ: ಎ ಲಾಜಿಕಲ್ ಪೋಸ್ಟ್-ಮಾರ್ಟೆಮ್.
- ↑ ಡ್ಯಾಲ್ಗೀಶ್, T. (2004). ದ ಎಮೋಷನಲ್ ಬ್ರೈನ್. ನೇಚರ್: ಪರ್ಸ್ಪೆಕ್ಟಿವ್ಸ್, 5, 582-89.
- ↑ ಕ್ರಿಂಗೆಲ್‌ಬ್ಯಾಚ್, M. L., ಒಡೊಹರ್ಟಿ, J. O., ರೋಲ್ಸ್, E. T., & ಆಂಡ್ರಿವ್ಸ್, C. (2003). ದ್ರವ ಆಹಾರ ಪ್ರೇರಕಕ್ಕೆ ಮಾನವನ ಆರ್ಬಿಟೊಫ್ರಂಟಲ್ ಕಾರ್ಟೆಕ್ಸ್‌ನ ಚುರುಕುಗೊಳಿಸುವಿಕೆಯು ಅದರ ಮಾನಸಿಕ ಭಾವನೆಯ ಹಿತಕರವಾಗಿರುವಿಕೆಗೆ ಸಂಬಂಧಿಸಿದೆ. ಸೆರೆಬ್ರಲ್ ಕಾರ್ಟೆಕ್ಸ್, 13, 1064-1071.
- ↑ ಡ್ರೇಕ್, R. A. (1987). ಇಫೆಕ್ಟ್ಸ್ ಆಫ್ ಗೇಜ್ ಮ್ಯಾನಿಪುಲೇಶನ್ ಆನ್ ಆಸ್ಥೆಟಿಕ್ ಜಡ್ಜ್‌ಮೆಂಟ್ಸ್: ಹೆಮಿಸ್ಪಿಯರ್ ಪ್ರೈಮಿಂಗ್ ಆಫ್ ಎಫೆಕ್ಟ್. ಆಕ್ಟಾ ಸೈಕಾಲಜಿಕ, 65, 91-99.
- ↑ ಮರ್ಕೆಲ್‌ಬ್ಯಾಚ್, H., & ವ್ಯಾನ್ ಓಪೆನ್, P. (1989). ಇಫೆಕ್ಟ್ಸ್ ಆಫ್ ಗೇಜ್ ಮ್ಯಾನಿಪುಲೇಶನ್ ಆನ್ ಸಬ್ಜೆಕ್ಟಿವ್ ಇವ್ಯಾಲ್ಯುವೇಶನ್ ಆಫ್ ನ್ಯೂಟ್ರಲ್ ಆಂಡ್ ಫೋಬಿಯ-ರಿಲವೆಂಟ್ ಸ್ಟಿಮ್ಯುಲಿ: ಡ್ರೇಕ್‌ನ (1987) 'ಇಫೆಕ್ಟ್ಸ್ ಆಫ್ ಗೇಜ್ ಮ್ಯಾನಿಪುಲೇಶನ್ ಆನ್ ಆಸ್ಥೆಟಿಕ್ ಜಡ್ಜ್‌ಮೆಂಟ್ಸ್: ಹೆಮಿಸ್ಪಿಯರ್ ಪ್ರೈಮಿಂಗ್ ಆಫ್ ಎಫೆಕ್ಟ್'ನ ಮೇಲಿನ ಒಂದು ವಿಮರ್ಶೆ ಆಕ್ಟಾ ಸೈಕೊಲಾಜಿಕ, 70, 147-151.
- ↑ ಹಾರ್ಮನ್-ಜೋನ್ಸ್, E., ವಾಘ್ನ್-ಸ್ಕಾಟ್, K., ಮೋಹ್ರ್, S., ಸಿಗೆಲ್‌ಮ್ಯಾನ್, J., & ಹಾರ್ಮನ್-ಜೋನ್ಸ್, C. (2004). ಉದ್ರೇಕಿತ ಅನುಕಂಪ ಮತ್ತು ಕೋಪದ ಎಡ ಮತ್ತು ಬಲ ಫ್ರಂಟಲ್ ಕಾರ್ಟಿಕಲ್ ಕ್ರಿಯೆಯ ಮೇಲಿನ ಪರಿಣಾಮ. ಭಾವನೆ, 4, 95-101.
- ↑ ಸ್ಕ್ಮಿಡ್ತ್, L. A. (1999). ಫ್ರಂಟಲ್ ಬ್ರೈನ್ ಎಲೆಕ್ಟ್ರಿಕಲ್ ಆಕ್ಟಿವಿಟಿ ಇನ್ ಶೈನೆಸ್ ಆಂಡ್ ಸೋಶಿಯಾಬಿಲಿಟಿ. ಸೈಕಾಲಜಿ ಸೈನ್ಸ್, 10, 316-320.
- ↑ ಗ್ಯಾರವನ್, H., ರೋಸ್, T. J., & ಸ್ಟೈನ್, E. A. (1999). ರೈಟ್ ಹೆಮಿಸ್ಫೆರಿಕ್ ಡಾಮಿನೆನ್ಸ್ ಆಫ್ ಇನ್ಹಿಬಿಟರಿ ಕಂಟ್ರೋಲ್: ಆನ್ ಈವೆಂಟ್ ರಿಲೇಟೆಡ್ ಖಂಕ್ಷನಲ್ MRI ಸ್ಟಡಿ. ಪ್ರೊಸೀಂಡಿಂಗ್ಸ್ ಆಫ್ ದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, 96, 8301-8306.
- ↑ ಡ್ರೇಕ, R. A., & ಮೈಯರ್ಸ್, L. R. (2006). ವಿಶ್ವಲ್ ಅಟೆನ್ಶನ್, ಎಮೋಷನ್ ಆಂಡ್ ಆಕ್ಷನ್ ಟೆಂಡೆನ್ಸಿ: ಫೀಲಿಂಗ್ ಆಕ್ಟಿವ್ ಆರ್ ಪ್ಯಾಸಿವ್. ಗ್ರಹಿಕೆ ಮತ್ತು ಭಾವನೆ, 20, 608-622.
- ↑ ವೇಕರ್, J., ಚ್ಯಾವನನ್, M.-L., ಲ್ಯೂ, A., & ಸ್ಟೆಮ್ಲರ್, G. (2008). ಈಸ್ ರನ್ನಿಂಗ್ ಎವೇ ರೈಟ್? ದ ಬಿಹೇವಿಯರ್ ಆಕ್ಟಿವೇಶನ್-ಬಿಹೇವಿಯರಲ್ ಇನ್ಹಿಬಿಶನ್ ಮಾಡೆಲ್ ಆಫ್ ಆಂಟೀರಿಯರ್ ಅಸಿಮ್ಮೆಟ್ರಿ. ಭಾವನೆ, 8, 232-249.
- ↑ Craig, A. D. (Bud) (2008). "Interoception and emotion: A neuroanatomical perspective". In Lewis, M.; Haviland-Jones, J. M.; Feldman Barrett, L. (eds.). Handbook of Emotion (3 ed.). New York: The Guildford Press. pp. 272–288. ISBN 978-1-59385-650-2.
{{cite book}}
:|access-date=
requires|url=
(help); External link in
(help); Unknown parameter|last=
|chapterurl=
ignored (help) - ↑ Craig, A. D. (Bud) (2003). "Interoception: The sense of the physiological condition of the body" (PDF). Current Opinion in Neurobiology. 13: 500–505. doi:10.1016/S0959-4388(03)00090-4. PMID 12965300.
{{cite journal}}
: External link in
(help)|last=
- ↑ ವರ್ತನೆ ಬದಲಾವಣೆಯಡಿಯಲ್ಲಿ ಹ್ಯುಯರಿಸ್ಟಿಕ್-ಸಿಸ್ಟೆಮ್ಯಾಟಿಕ್ ಮಾದರಿ ಅಥವಾ HSM, (ಚೈಕನ್, ಲಿಬರ್ಮ್ಯಾನ್ & ಈಗ್ಲಿ, 1989)ಅನ್ನು ಗಮನಿಸಿ. "ಭಾವನೆ"ಯ ನಿರ್ಣಾಯಕ ನಮೂದಿಗಾಗಿ ಕೆನ್ನೆತ್ R. ಹ್ಯಾಮಂಡ್‌ನ "ಬಿಯಾಂಡ್ ರೇಶನಾಲಿಟಿ: ದ ಸರ್ಚ್ ಫಾರ್ ವಿಸ್ಡಮ್ ಇನ್ ಎ ಟ್ರಬಲ್ಡ್ ಟೈಮ್" ಮತ್ತು ನ್ಯಾಸಿಮ್ ನಿಕೋಲಸ್ ಟ್ಯಾಲೆಬ್‌ನ "ಫೂಲ್ಡ್ ಬೈ ರ‌್ಯಾಂಡಮ್ನೆಸ್: ದ ಹಿಡಲ್ ರೋಲ್ ಆಫ್ ಚ್ಯಾನ್ಸ್ ಇನ್ ಲೈಫ್ ಆಂಡ್ ಇನ್ ಮಾರ್ಕೆಟ್ಸ್"ಅನ್ನು ಗಮನಿಸಿ.
- ↑ EmoNet
- ↑ ಡಾರ್ವಿನ್, ಚಾರ್ಲ್ಸ್ (1872). ದ ಎಕ್ಸ್‌ಪ್ರೆಶನ್ಸ್ ಆಫ್ ಎಮೋಷನ್ಸ್ ಇನ್ ಮ್ಯಾನ್ ಆಂಡ್ ಆನಿಮಲ್ಸ್ . ಟಿಪ್ಪಣಿ: ಈ ಪುಸ್ತಕವು ಮೂಲತಃ 1872ರಲ್ಲಿ ಪ್ರಕಟಗೊಂಡಿತು. ಆದರೆ ಆ ನಂತರ ಅನೇಕ ಪ್ರಕಟಕರಿಂದ ಹಲವು ಬಾರಿ ಮರುಮುದ್ರಣಗೊಂಡಿತು.
- ↑ ಫ್ರೈಟಸ್-ಮ್ಯಾಗಲ್ಹೇಸ್, A., & ಕ್ಯಾಸ್ಟ್ರೊ, E. (2009). ಫೇಶಿಯಲ್ ಎಕ್ಸ್‌ಪ್ರೆಶನ್: ದ ಇಫೆಕ್ಟ್ ಆಫ್ ಸ್ಮೈಲ್ ಇನ್ ದ ಟ್ರೀಟ್ಮೆಂಟ್ ಆಫ್ ಡಿಪ್ರೆಶನ್. ಎಂಪಿರಿಕಲ್ ಸ್ಟಡಿ ವಿದ್ ಪೋರ್ಚುಗೀಸ್ ಸಬ್ಜೆಕ್ಟ್ಸ್. A. ಫ್ರೈಟಸ್-ಮ್ಯಾಗಲ್ಹೇಸ್ (Ed.), ಎಮೋಷನಲ್ ಎಕ್ಸ್‌ಪ್ರೆಶನ್: ದ ಬ್ರೈನ್ ಆಂಡ್ ದ ಫೇಸ್ (ಪುಟ 127-140). ಪೋರ್ಟೊ: ಯೂನಿವರ್ಸಿಟಿ ಫರ್ನ್ಯಾಂಡೊ ಪೆಸ್ಸೋವ ಪ್ರೆಸ್. ISBN 978-989-643-034-4
- ↑ "ಕೌನ್ಸಲಿಂಗ್ ರಿಕವರಿ ಪ್ರೊಸೆಸಸ್ - RC ವೆಬ್‌ಸೈಟ್". Archived from the original on 2006-12-11. Retrieved 2010-06-04.
- ↑ "ಆನ್ ಎಮೋಷನ್ - ಮ್ಯಾಂಚೆಸ್ಟರ್ ಗೆಸ್ಟಾಲ್ಟ್ ಸೆಂಟರ್ ವೆಬ್‌ಸೈಟ್‌ನ ಒಂದು ಲೇಖನ". Archived from the original on 2012-05-12. Retrieved 2021-08-10.
- ↑ ಫೆಲ್ಲಸ್, ಆರ್ಮನಿ & ಲಿಡೌಕ್ಸ್, 2002
- ↑ Tao, Jianhua (2005). LNCS volume = 3784. Springer. pp. 981–995. doi:10.1007/11573548.
{{cite conference}}
: Missing pipe in:|title=
(help); Unknown parameter|booktitle=
ignored (help); Unknown parameter|coauthors=
ignored (|author=
suggested) (help) - ↑ James, William (1884). "What is Emotion". Mind. 9: 188–205. ಟಾವೊ ಮತ್ತು ಟ್ಯಾನ್ ಉಲ್ಲೇಖಿಸಿದ್ದು.
- ↑ "ಎಫೆಕ್ಟಿವ್ ಕಂಪ್ಯೂಟಿಂಗ್" MIT ಟೆಕ್ನಿಕಲ್ ರಿಪೋರ್ಟ್#321 (ಅಬ್‌ಸ್ಟ್ರ್ಯಾಕ್ಟ್), 1995
- ↑ Kleine-Cosack, Christian (2006). "Recognition and Simulation of Emotions" (PDF). Archived from the original (PDF) on ಮೇ 28, 2008. Retrieved May 13, 2008.
The introduction of emotion to computer science was done by Pickard (sic) who created the field of affective computing.
{{cite web}}
: Unknown parameter|dateformat=
ignored (help); Unknown parameter|month=
ignored (help); line feed character in|quote=
at position 74 (help) - ↑ Diamond, David (2003). "The Love Machine; Building computers that care". Wired. Retrieved May 13, 2008.
Rosalind Picard, a genial MIT professor, is the field's godmother; her 1997 book, Affective Computing, triggered an explosion of interest in the emotional side of computers and their users.
{{cite web}}
: Unknown parameter|dateformat=
ignored (help); Unknown parameter|month=
ignored (help)
ಹೆಚ್ಚಿನ ಮಾಹಿತಿಗಾಗಿ
[ಬದಲಾಯಿಸಿ]- ಕಾರ್ನೆಲಿಯಸ್, R. (1996). ದ ಸೈನ್ಸ್ ಆಫ್ ಎಮೋಷನ್ . ನ್ಯೂಜೆರ್ಸಿ: ಪ್ರೆಂಟಿಸ್ ಹಾಲ್.
- ಫ್ರೈಟಸ್-ಮ್ಯಾಗಲ್ಹೇಸ್, A. (ಆವೃತ್ತಿ). ( 2009). ಎಮೋಷನಲ್ ಎಕ್ಸ್‌ಪ್ರೆಶನ್: ದ ಬ್ರೈನ್ ಆಂಡ್ ದ ಫೇಸ್. ಪೋರ್ಟೊ: ಯೂನಿವರ್ಸಿಟಿ ಫರ್ನ್ಯಾಂಡೊ ಪೆಸ್ಸೋವ ಪ್ರೆಸ್. ISBN 978-989-643-034-4.
- ಫ್ರೈಟಸ್-ಮ್ಯಾಗಲ್ಹೇಸ್, A. (2007).ದ ಸೈಕಾಲಜಿ ಆಫ್ ಎಮೋಷನ್ಸ್: ದ ಅಲ್ಯೂರ್ ಆಫ್ ಹ್ಯೂಮನ್ ಫೇಸ್ . ಒಪೋರ್ಟೊ: ಯೂನಿವರ್ಸಿಟಿ ಫರ್ನ್ಯಾಂಡೊ ಪೆಸ್ಸೋವ ಪ್ರೆಸ್.
- ಏಕ್ಮ್ಯಾನ್, P. (1999). "ಪ್ರಾಥಮಿಕ ಭಾವನೆಗಳು Archived 2007-08-08 ವೇಬ್ಯಾಕ್ ಮೆಷಿನ್ ನಲ್ಲಿ.". T. ಡ್ಯಾಲ್ಗೀಶ್ ಮತ್ತು M. ಪವರ್ (ಸಂಪಾದಕರು). ಹ್ಯಾಂಡ್‌ಬುಕ್ ಆಫ್ ಕಾಗ್ನಿಶನ್ ಆಂಡ್ ಎಮೋಷನ್ . ಜಾನ್ ವಿಲೆ & ಸನ್ಸ್ ಲಿಮಿಟೆಡ್, ಸಸ್ಸೆಕ್ಸ್, UK:.
- ಫ್ರಿಜ್ಡಾ, N. H. (1986). ದ ಎಮೋಷನ್ಸ್ . ಮೈಸನ್ ಡೆಸ್ ಸೈನ್ಸಸ್ ಡಿ ಐಹೋಮ್ಮೆ ಮತ್ತು ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್. [೧]
- ಹಾಚ್ಸ್‌ಚಿಲ್ಡ್, A. R. (1983). ದ ಮೇನೇಜ್ಡ್ ಹಾರ್ಟ್: ಕಮರ್ಷಿಯಲೈಸೇಶನ್ ಆಫ್ ಹ್ಯೂಮನ್ ಫೀಲಿಂಗ್ಸ್. ಬರ್ಕೆಲಿ: ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಪ್ರೆಸ್, 1979.
- ಲಿಡಾಕ್ಸ್, J. E. (1986). ದ ನ್ಯೂರೊಬಯಾಲಜಿ ಆಪ್ ಎಮೋಷನ್. ವಿಭಾಗ 15. J E. ಲಿಡಾಕ್ಸ್ & W. ಹರ್ಸ್ಟ್ (ಸಂಪಾದಕರು) ಮೈಂಡ್ ಆಂಡ್ ಬ್ರೈನ್: ಡೈಲಾಗ್ಸ್ ಇನ್ ಕಾಗ್ನಿಟಿವ್ ನ್ಯೂರೊಸೈನ್ಸ್ . ನ್ಯೂಯಾರ್ಕ್: ಕೇಂಬ್ರಿಡ್ಜ್.
- ಪ್ಲಟ್ಚಿಕ್, R. (1980). ಎ ಜನರಲ್ ಸೈಕೊಎವಲ್ಯೂಷನರಿ ಥಿಯರಿ ಆಫ್ ಎಮೋಷನ್. R. ಪ್ಲಟ್ಚಿಕ್ & H. ಕೆಲ್ಲರ್‌ಮ್ಯಾನ್ (ಸಂಪಾದಕರು), ಎಮೋಷನ್: ಥಿಯರಿ, ರಿಸರ್ಚ್ ಆಂಡ್ ಎಕ್ಸ್‌ಪೀರಿಯನ್ಸ್: ಸಂಪುಟ 1. ಥಿಯರೀಸ್ ಆಫ್ ಎಮೋಷನ್ (ಪುಟ 3–33). ನ್ಯೂಯಾರ್ಕ್: ಅಕಾಡೆಮಿಕ್.
- ಸ್ಕೆರೆರ್, K. (2005).ವಾಟ್ ಆರ್ ಎಮೋಷನ್ಸ್ ಆಂಡ್ ಹೌ ಕ್ಯಾನ್ ಬಿ ಮಿಜರ್ಡ್? ಸೋಷಲ್ ಸೈನ್ಸ್ ಇನ್ಫರ್ಮೇಶನ್ ಸಂಪುಟ 44, ಸಂ. 4: 695-729.
- ಸೋಲೊಮನ್, R. (1993). ದ ಪೇಶನ್ಸ್: ಎಮೋಷನ್ಸ್ ಆಂಡ್ ದ ಮೀನಿಂಗ್ ಆಫ್ ಲೈಫ್ . ಇಂಡಿಯಾನಪೊಲಿಸ್: ಹ್ಯಾಕೆಟ್ ಪಬ್ಲಿಷಿಂಗ್.
- ವಿಕಿಬುಕ್ ಗ್ರಹಿಕೆ ಮನಶ್ಶಾಸ್ತ್ರ ಮತ್ತು ಗ್ರಹಿಕೆ ನರವಿಜ್ಞಾನ
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಫೇಶಿಯಲ್ ಎಮೋಷನ್ ಎಕ್ಸ್‌ಪ್ರೆಶನ್ ಲ್ಯಾಬ್
- CNX.ORG: ದ ಸೈಕಾಲಜಿ ಆಫ್ ಎಮೋಷನ್ಸ್, ಫೀಲಿಂಗ್ಸ್ ಆಂಡ್ ಥಾಟ್ಸ್ (ಆನ್ಲೈನ್ ಬುಕ್) Archived 2009-07-25 at the Portuguese Web Archive
- ಕ್ವೀನ್ ಮೇರಿ ಸೆಂಟರ್ ಫಾರ್ ದ ಹಿಸ್ಟರಿ ಆಫ್ ದ ಎಮೋಷನ್ಸ್
- ಹ್ಯುಮೇನ್ ಎಮೋಷನ್-Research.net: ದ ಹ್ಯುಮೇನ್ ಪೋರ್ಟಲ್: ಭಾವನೆಗಳು ಮತ್ತು ಮಾನವ-ಯಂತ್ರಗಳ ಪರಸ್ಪರ ಕ್ರಿಯೆಯ ಸಂಶೋಧನೆ Archived 2018-12-21 ವೇಬ್ಯಾಕ್ ಮೆಷಿನ್ ನಲ್ಲಿ.
- PhilosophyofMind.net: ಭಾವನೆಗಳ ತತ್ವಶಾಸ್ತ್ರ ಪೋರ್ಟಲ್
- ಸ್ವಿಸ್ ಸೆಂಟರ್ ಫಾರ್ ಎಫೆಕ್ಟಿವ್ ಸೈನ್ಸಸ್
- ದ ಇಂಟರ್ನೆಟ್ ಎನ್ಸೈಕ್ಲೋಪೀಡಿಯ ಆಫ್ ಫಿಲಾಸಫಿ: ಥಿಯರೀಸ್ ಆಫ್ ಎಮೋಷನ್
- ದ ಸ್ಟ್ಯಾನ್ಫರ್ಡ್ ಎನ್ಸೈಕ್ಲೋಪೀಡಿಯ ಆಫ್ ಫಿಲಾಸಫಿ: ಎಮೋಷನ್
- ಯೂನಿವರ್ಸಿಟಿ ಆಫ್ ಅರಿಜೋನ: ಸಾಲ್ಕ್ ಇನ್ಸ್ಟಿಟ್ಯೂಟ್: ಎಮೋಷನ್ ಹೋಮ್ ಪೇಜ್ Archived 2012-05-13 ವೇಬ್ಯಾಕ್ ಮೆಷಿನ್ ನಲ್ಲಿ.
- ಕಲೆ ಮತ್ತು ಭಾವನೆ
- Pages using the JsonConfig extension
- Pages using duplicate arguments in template calls
- CS1 errors: unsupported parameter
- CS1 errors: external links
- CS1 errors: access-date without URL
- CS1 errors: missing pipe
- CS1 errors: invisible characters
- Pages using ISBN magic links
- Articles with hatnote templates targeting a nonexistent page
- Articles with unsourced statements from March 2009
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Webarchive template other archives
- ಭಾವನೆ
- ಲಿಂಬಿಕ್ ವ್ಯವಸ್ಥೆ
- ಕಲ್ಪನೆಗಳು