ವಿಷಯಕ್ಕೆ ಹೋಗು

ಅನುಭೂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನುಭೂತಿ ಬೇರೆ ವ್ಯಕ್ತಿಯು ಏನನ್ನು ಅನುಭವಿಸುತ್ತಿದ್ದಾನೆಯೊ ಅದನ್ನು ಬೇರೆ ವ್ಯಕ್ತಿಯ ಮಾನದಂಡ ಸಮೂಹದೊಳಗಿನಿಂದ ತಿಳಿದುಕೊಳ್ಳುವ ಅಥವಾ ಅನಿಸುವ ಸಾಮರ್ಥ್ಯ, ಅಂದರೆ ತಮ್ಮನ್ನು ಮತ್ತೊಬ್ಬರ ಸ್ಥಾನದಲ್ಲಿ ಇರಿಸಿಕೊಳ್ಳುವ ಸಾಮರ್ಥ್ಯ.[] ಅನುಭೂತಿಗೆ ಅನೇಕ ವ್ಯಾಖ್ಯಾನಗಳಿವೆ ಮತ್ತು ಭಾವನಾತ್ಮಕ ಸ್ಥಿತಿಗಳ ವಿಶಾಲ ವ್ಯಾಪ್ತಿಯನ್ನು ಒಳಗೊಳ್ಳುತ್ತದೆ. ಅರಿವಿನ ಅನುಭೂತಿ, ಭಾವನಾತ್ಮಕ ಅನುಭೂತಿ, ದೈಹಿಕ ಅನುಭೂತಿ ಇತ್ಯಾದಿ ಅನುಭೂತಿಯ ಪ್ರಕಾರಗಳು.

ಅನುಭೂತಿಯೆಂದರೆ ಬೇರೆಯವರಿಗಾಗಿ ಕಾಳಜಿ ವಹಿಸುವುದು ಮತ್ತು ಅವರಿಗೆ ಸಹಾಯಮಾಡುವ ಬಯಕೆ ಇರುವುದು; ಮತ್ತೊಬ್ಬ ವ್ಯಕ್ತಿಯ ಭಾವನೆಗಳಿಗೆ ಹೊಂದಿಕೆಯಾಗುವ ಭಾವನೆಗಳನ್ನು ಅನುಭವಿಸುವುದು; ಮತ್ತೊಬ್ಬ ವ್ಯಕ್ತಿಯು ಏನು ಯೋಚಿಸುತ್ತಿದ್ದಾನೆ ಅಥವಾ ಅವನಿಗೆ ಏನು ಅನಿಸುತ್ತಿದೆ ಎಂದು ಗ್ರಹಿಸುವುದು; ಮತ್ತು ತನ್ನ ಹಾಗೂ ಬೇರೆಯವನ ನಡುವಿನ ವ್ಯತ್ಯಾಸಗಳನ್ನು ಕಡಿಮೆ ಮಾಡುವುದು.

ಅನುಭೂತಿ ಇರುವುದು ಅನೇಕ ಅಂಶಗಳು ತೀರ್ಮಾನ ಮಾಡುವಿಕೆ ಮತ್ತು ಅರಿವಿನ ಚಿಂತನಾ ಪ್ರಕ್ರಿಯೆಯಲ್ಲಿ ತೊಡಗಿರುತ್ತವೆ ಎಂಬ ತಿಳುವಳಿಕೆಯ ಇರುವಿಕೆಯನ್ನೂ ಒಳಗೊಳ್ಳಬಹುದು. ಹಿಂದಿನ ಅನುಭವಗಳು ಇಂದಿನ ತೀರ್ಮಾನ ಮಾಡುವಿಕೆ ಮೇಲೆ ಪ್ರಭಾವ ಹೊಂದಿರುತ್ತವೆ. ಇದನ್ನು ತಿಳಿಯುವುದು ಒಬ್ಬ ವ್ಯಕ್ತಿಗೆ ಬೇರೆ ವ್ಯಕ್ತಿಯ ಬಗ್ಗೆ ಅನುಭೂತಿ ಹೊಂದಲು ಅನುಮತಿಸುತ್ತದೆ. ಅನೇಕರು ಸ್ಪಷ್ಟ ಪ್ರತಿಕ್ರಿಯೆಯಿಂದ ಪ್ರತಿಕ್ರಿಯಿಸುವಂತಹ ಸಮಸ್ಯೆಗೆ ಬೇರೆ ವ್ಯಕ್ತಿಯು ಕೆಲವೊಮ್ಮೆ ತರ್ಕಬದ್ಧವಲ್ಲದ ನಿರ್ಧಾರಗಳನ್ನು ಮಾಡಬಹುದು. ಒಡೆದ ಮನಗಳು, ಬಾಲ್ಯದ ಆಘಾತಗಳು, ಪಾಲನೆ ಇಲ್ಲದಿರುವುದು ಮತ್ತು ಇತರ ಅನೇಕ ಅಂಶಗಳು ಒಬ್ಬ ವ್ಯಕ್ತಿಯು ಭವಿಷ್ಯದಲ್ಲಿ ನಿರ್ಧಾರಗಳನ್ನು ಮಾಡಲು ಬಳಸುವ ಮಿದುಳಿನ ಸಂಪರ್ಕಗಳ ಮೇಲೆ ಪ್ರಭಾವ ಬೀರಬಹುದು.

ಅನುಭೂತಿಯು ಬೇರೆಯವರ ಭಾವನಾತ್ಮಕ ಸ್ಥಿತಿಗಳನ್ನು ತಿಳಿದುಕೊಳ್ಳುವುದನ್ನು ಒಳಗೊಳ್ಳುವುದರಿಂದ, ಅದನ್ನು ನಿರೂಪಿಸುವ ರೀತಿ ಭಾವನೆಗಳನ್ನು ನಿರೂಪಿಸುವ ರೀತಿಯಿಂದ ಹುಟ್ಟಿಕೊಂಡಿದೆ. ಉದಾಹರಣೆಗೆ, ಭಾವನೆಗಳನ್ನು ದೈಹಿಕ ಅನಿಸಿಕೆಗಳಿಂದ ಕೇಂದ್ರೀಯವಾಗಿ ನಿರೂಪಿಸಲಾಗುತ್ತದೆಂದು ತೆಗೆದುಕೊಂಡರೆ, ಬೇರೆಯವರ ದೈಹಿಕ ಅನಿಸಿಕೆಗಳನ್ನು ಗ್ರಹಿಸುವುದು ಅನುಭೂತಿಗೆ ಕೇಂದ್ರೀಯವಾಗಿದೆ. ಮತ್ತೊಂದೆಡೆ, ಭಾವನೆಗಳನ್ನು ನಂಬಿಕೆಗಳು ಮತ್ತು ಬಯಕೆಗಳ ಸಂಯೋಜನೆಯಿಂದ ಕೇಂದ್ರೀಯವಾಗಿ ನಿರೂಪಿಸಲಾದರೆ, ಈ ನಂಬಿಕೆಗಳು ಮತ್ತು ಬಯಕೆಗಳನ್ನು ಗ್ರಹಿಸುವುದು ಅನುಭೂತಿಗೆ ಹೆಚ್ಚು ಅವಶ್ಯವಾಗಿರುವುದು. ತನ್ನನ್ನು ಮತ್ತೊಬ್ಬ ವ್ಯಕ್ತಿಯಾಗಿ ಕಲ್ಪಿಸಿಕೊಳ್ಳುವ ಸಾಮರ್ಥ್ಯ ಒಂದು ಸಂಕೀರ್ಣ ಕಲ್ಪನಾತ್ಮಕ ಪ್ರಕ್ರಿಯೆಯಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Bellet, Paul S.; Michael J. Maloney (1991). "The importance of empathy as an interviewing skill in medicine". JAMA. 226 (13): 1831–1832. doi:10.1001/jama.1991.03470130111039.
"https://kn.wikipedia.org/w/index.php?title=ಅನುಭೂತಿ&oldid=846419" ಇಂದ ಪಡೆಯಲ್ಪಟ್ಟಿದೆ